ನವದೆಹಲಿ: ನಾನು ‘ಮೋದಿ ಜೀ’ ಅಲ್ಲ, ನಾನು ಮೋದಿ (Narendra Modi) ಅಷ್ಟೇ. ಹೀಗಾಗಿ ಮೋದಿ ಜೀ (Modi ji) ಎಂದು ಕರೆಯುವ ಮೂಲಕ ಸಾರ್ವಜನಿಕರಿಂದ ನನ್ನನ್ನು ದೂರ ಮಾಡಬೇಡಿ ಎಂದು ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿಕೊಂಡಿದ್ದಾರೆ. ಬಿಜೆಪಿ (BJP) ಸಂಸದೀಯ ಪಕ್ಷದ ಸಭೆಯಲ್ಲಿ ಈ ಕುರಿತು ಪ್ರಸ್ತಾಪ ಮಾಡಿದ ಪ್ರಧಾನಿಯವರು ದಯವಿಟ್ಟು ಮೋದಿ ಜೀ ಎಂದು ಕರೆಯಬೇಡಿ ಅಂತ ಸಂಸದರನ್ನು ಕೇಳಿಕೊಂಡರು. ಇದರಿಂದ ದೇಶದ ಜನ ಹಾಗೂ ನನ್ನ ನಡುವೆ ಅಂತರ ಇರುವಂತೆ ನನಗೆ ಕಾಡುತ್ತದೆ. ಹೀಗಾಗಿ ನನ್ನನ್ನು ಮೋದಿ ಎಂದಷ್ಟೇ ಕರೆಯಿರಿ ಅಂದ್ರು. https://ainlivenews.com/the-most-wanted-terrorist-is-poisoned-in-pakistan-jail/ ಪ್ರಧಾನಿ ಮೋದಿ ಅವರು ಪಕ್ಷದ ಸಾಮಾನ್ಯ ಕಾರ್ಯಕರ್ತ ಮತ್ತು ಜನಸಾಮಾನ್ಯರಂತೆ ಇರಲು ಬಯಸುತ್ತಾರೆ. ಹೀಗಾಗಿ ತಮ್ಮ ಕುಟುಂಬದ ಭಾಗವೆಂದು ಪರಿಗಣಿಸುವಂತೆ ಹೇಳುತ್ತಾರೆ. ಇತರೆ ಸಂಸದರಂತೆ ಮೋದಿಯೂ ಕೂಡ ಒಬ್ಬ ಸಂಸದರು ಎಂಬಂತೆ ಭಾವಿಸಬೇಕು ಎಂದು ಅವರು ನಂಬುತ್ತಾರೆ ಎಂದು ಸಭೆಯಲ್ಲಿದ್ದ ಸಂಸದರೊಬ್ಬರು ಮಾಧ್ಯಮಕ್ಕೆ ತಿಳಿಸಿದರು.
Author: AIN Author
ಲವ್ ಸ್ಟೋರಿ ಕಥೆ ಹೇಳಿ ಗೆದ್ದಿರುವ ನಿರ್ದೇಶಕ ನವೀನ್ ರೆಡ್ಡಿ ಹೊಸ ಕನಸು ‘ಮೂರನೇ ಕೃಷ್ಣಪ್ಪ’..ಅಕಿರ ಹಾಗೂ ರಿಲ್ಯಾಕ್ಸ್ ಸತ್ಯ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿರುವ ಅವರೀಗ ವಿಭಿನ್ನ ಶೀರ್ಷಿಕೆಯೊಂದಿಗೆ ಆನೇಕಲ್ ಭಾಗದ ಕಥೆ ಹೇಳೋದಿಕ್ಕೆ ನಿಮ್ಮ ಮುಂದೆ ಬರ್ತಿದ್ದಾರೆ. ಸದ್ದಿಲ್ಲದೇ ಮೂರನೇ ಕೃಷ್ಣಪ್ಪ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಮೂರನೇ ಕೃಷ್ಣಪ್ಪ ಬಳಗವೀಗ ಪ್ರಮೋಷನ್ ಪಡಸಾಲೆಗಿಳಿದಿದೆ. ಅದರ ಮೊದಲ ಭಾಗವಾಗಿ ಕಳೆದ ವಾರವಷ್ಟೇ ಟೈಟಲ್ ಟೀಸರ್ ರಿಲೀಸ್ ಮಾಡಿ ಥ್ರಿಲ್ ಹೆಚ್ಚಿಸಿತ್ತು. ಇದೀಗ ಮೂರನೇ ಕೃಷ್ಣಪ್ಪ ಸಿನಿಮಾದ ಮೆಲೋಡಿ ಮಸ್ತಿಯೊಂದು ಅನಾವರಣಗೊಂಡಿದೆ. ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ಬಗೆಹರಿಯದ ಒಗಟುಗಳು ಎಂಬ ಸಾಹಿತ್ಯದ ಹಾಡು ಬಿಡುಗಡೆಯಾಗಿದೆ. ಸುಪ್ರಿತ್ ಶರ್ಮಾ ಎಸ್ ಈ ಹಾಡಿಗೆ ಸಾಹಿತ್ಯ ನೀಡುವುದರ ಜೊತೆಗೆ ಸಂಗೀತ ಕೂಡ ಒದಗಿಸಿದ್ದಾರೆ. ನಿಹಾಲ್ ಟೌರೊ ಬಗೆಹರಿಯದ ಒಗಟುಗಳು ಗೀತೆಗೆ ಧ್ವನಿಯಾಗಿದ್ದಾರೆ. ರೆಡ್ ಡ್ರಾಗ್ಯನ್ ಫಿಲ್ಮಂಸ್ ಪ್ರೊಡಕ್ಷನ್ ಹೌಸ್ ಎರಡನೇ…
ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ನಂದಿ ಚಲನಚಿತ್ರ ಪ್ರಶಸ್ತಿ ಪ್ರಾರಂಭವಾಗಿದೆ. ಈ ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನ ಒರಿಯನ್ ಮಾಲ್‌ನಲ್ಲಿ ನಿನ್ನೆ ಜರುಗಿದೆ. ಕನ್ನಡದ್ದೇ ಆದ ಸ್ವಂತ ಪ್ರಶಸ್ತಿ ನೀಡುವ ವೇದಿಕೆ, ಆ ಮೂಲಕ ನಮ್ಮ ಪ್ರತಿಭೆಗಳನ್ನು ನಾವೇ ಗುರುತಿಸಿ ಬೆನ್ನು ತಟ್ಟುವ ಪ್ರಯತ್ನ ಮಾಡಬೇಕಿದೆ. ಇದನ್ನೆಲ್ಲಾ ಮನಗಂಡು, ಚರ್ಚಿಸಿ ಮಂಡಳಿ ನಂದಿ ಪ್ರಶಸ್ತಿ ನೀಡಿದೆ. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ನಟ ರವಿಚಂದ್ರನ್, ರಿಷಬ್ ಶೆಟ್ಟಿ, ಧ್ರುವ ಸರ್ಜಾ ಇನ್ನೂ ಹಲವು ತಾರೆಯರು ಭಾಗಿಯಾಗಿದ್ದಾರೆ. ಜೊತೆಗೆ ಹಿರಿಯ ನಟ ಶ್ರೀನಾಥ್, ನಟಿ ಪ್ರೇಮ, ವಿನೋದ್ ರಾಜ್, ಅನುಪ್ರಭಾಕರ್, ಉಮಾಶ್ರೀ ಇನ್ನೂ ಹಲವು ನಟ-ನಟಿಯರು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇದು ಮೊದಲ ನಂದಿ ಫಿಲಂ ಅವಾರ್ಡ್ ಆಗಿದ್ದು ಅದ್ಧೂರಿಯಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ನಟ ರವಿಚಂದ್ರನ್ ಮಾತನಾಡಿ, ‘ನಂದಿ ಪ್ರಶಸ್ತಿ ನೀಡುತ್ತಿರುವುದು ಬಹಳ ಖುಷಿಯಾಗಿದೆ. ಪ್ರಶಸ್ತಿ ಬಹಳ ಭಾರವಾಗಿದೆ ಅದು ನನಗೆ ಖುಷಿ ಕೊಟ್ಟಿತು, ನನ್ನಂಥಹಾ ಶಿವ ಭಕ್ತನಿಂದ…
ಯೂಸ್ ಲೆಸ್ ಫೆಲೋ’ ಸಿನಿಮಾ ಮೂಲಕ ಡೈರೆಕ್ಷರ್ ಕ್ಯಾಪ್ ತೊಟ್ಟಿರುವ ಮನು ತಮ್ಮ ಚೊಚ್ಚಲ ಪ್ರಯತ್ನದ ಮೊದಲ ಝಲಕ್ ನ್ನು ಅನಾವರಣ ಮಾಡಿದ್ದಾರೆ. ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಯಿತು. ಈ ವೇಳೆ ಇಡೀ ಚಿತ್ರತಂಡ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ನಟ ಕಂ ನಿರ್ದೇಶಕ ಮನು ಯು.ಬಿ ಮಾತನಾಡಿ, ಮೊದಲು ಹೀರೋ ಆದಾಗ ಬಂದು ಕುಳಿತು ಮಾತನಾಡಿಕೊಂಡು ಹೋಗುತ್ತಿದ್ದೆ. ಇವತ್ತು ನಿರ್ದೇಶಕನ ಜವಾಬ್ದಾರಿ ತೆಗೆದುಕೊಂಡು ಇಲ್ಲಿ ಕುಳಿತು ಮಾತನಾಡುತ್ತಿರುವುದು ತುಂಬ ಹೆಮ್ಮೆ ಅನಿಸುತ್ತಿದೆ. ಇಡೀ ತಂಡ ನನಗೆ ಬೆಂಬಲದಿಂದ ಈ ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ. ನಾಳೆ ಚಿತ್ರೀಕರಣ ಬಗ್ಗೆ ಹಿಂದಿನ ದಿನವೇ ಚರ್ಚೆ ನಡೆಸುತ್ತಿದ್ದೆವು. ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ನಿಮ್ಮ ಸಹಕಾರ ನಮಗೆ ಬೇಕು. ಹಿಂದಿನ ತಪ್ಪುಗಳನ್ನು ತಿದ್ದುಕೊಂಡು ಯೂಸ್ ಲೆಸ್ ಫೆಲೋ ಸಿನಿಮಾ ಮಾಡಿದ್ದೇನೆ ಎಂದರು. ನಟ ವಿಜಯ್ ಸೂರ್ಯ ಮಾತನಾಡಿ, ಮನು ಇಂಡಸ್ಟ್ರೀಗೆ ಬರುವ ಮೊದಲೇ ಪರಿಚಯ. ಮನು ಎರಡು ಸಿನಿಮಾ ನೋಡಿದ್ದೇನೆ.…
ಬೆಂಗಳೂರು: ಗೂಳಹಟ್ಟಿ ಶೇಖರ್ ಆಡಿಯೋ ವಿಚಾರವನ್ನು ಮುಂದಿಟ್ಟುಕೊಂಡು RSS ವಿರುದ್ದ ಟ್ವೀಟ್ ಮೂಲಕ ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. ಶೂಧ್ರರು, ದಲಿತರಿಗೆ ಆರ್ ಎಸ್ ಎಸ್ ಗರ್ಭಗುಡಿಗೆ ಪ್ರವೇಶ ಇಲ್ಲ. ಅವರೇನಿದ್ದರೂ ಹೊರಬಾಗಿಲಲ್ಲಿ ನಿಂತು ‘ಜೀ..ಜೀ..ಹುಜೂರ್’ ಎಂದಷ್ಟೇ ಹೇಳಬೇಕು. https://ainlivenews.com/the-most-wanted-terrorist-is-poisoned-in-pakistan-jail/ ಇದಕ್ಕೆ ಬಿಜೆಪಿಯ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಬಿ.ಎಲ್ ಸಂತೋಷ್ ಅವರಿಗೆ ಕಳುಹಿಸಿರುವ ವಾಟ್ಸಾಪ್ ವಾಯ್ಸ್ ರೆಕಾರ್ಡ್ ಸಾಕ್ಷಿ. ಬಿಜೆಪಿ ಮತ್ತು ಆರ್.ಎಸ್.ಎಸ್ ಪರಿವಾರ ಬಹಿರಂಗವಾಗಿ ಮುಸ್ಲಿಂಮರ ವಿರುದ್ಧ ಮಾತ್ರ ಹರಿಹಾಯ್ದರೂ ಅಂತರಂಗದಲ್ಲಿ ಅದು ಶೂದ್ರರು ಮತ್ತು ದಲಿತರ ವಿರುದ್ಧವಾಗಿದೆ ಎಂದು ಟೀಕಿಸಿದ್ದಾರೆ.
ಬೆಂಗಳೂರು: ಬಿಜೆಪಿ ಮಾಜಿ ಶಾಸಕ ಗೂಳಹಟ್ಟಿ ಶೇಖರ್ ಕೇಸರಿ ಸಂಘಟನಾ ಚತುರನಿಗೆ ಕಳಿಸಿರೋ ಆಡಿಯೋ ರಾಜ್ಯದಲ್ಲಿ ಭಾರೀ ಸುದ್ದು ಮಾಡ್ತಿದೆ. ನಾಗಪುರದ RSS ಕಛೇರಿಯ ವಸ್ತು ಸಂಗ್ರಹಾಲಯಕ್ಕೆ ದಲಿತ ಎಂಬ ಕಾರಣಕ್ಕೆ ನನ್ನನ್ನು ತಡೆದ್ರು ಎಂದು ಬಾಂಬ್ ಸಿಡಿಸಿದ್ದಾರೆ. ಈ ವಿಚಾರ ಕಾಂಗ್ರೆಸ್ ಗೆ ಹಿಂದುತ್ವದ ವಿರುದ್ಧದ ಪ್ರಬಲ ಅಸ್ತ್ರವಾಗಿದ್ದು ಬಿಜೆಪಿ ನಾಯಕರಿಗೆ ನುಂಗಲಾರದ ತುತ್ತಾಗಿದೆ.. RSS ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪ್ರಪಂಚದಲ್ಲೇ ಅತೀ ದೊಡ್ಡ ಸ್ವಯಂ ಸೇವಾ ಸಂಘಟನೆ ಅಂತ ಬಿಜೆಪಿಯವರು ಹೇಳಿಕೊಳ್ತಾರೆ. ಹಿಂದುತ್ವದ ಅಜೆಂಡಾದಡಿಯಲ್ಲಿ ಕೆಲಸ ಮಾಡ್ತಿರುವ ಸಂಘಟನೆ, ಆಗಾಗ ಈ RSS ಮೇಲೆ ಸಾಕಷ್ಟು ವಿವಾದಗಳು ಹುಟ್ಕೊಳ್ತಾನೆ ಇರ್ತಾವೆ. ಜಾತಿ, ಧರ್ಮ, ಅಸಮಾನತೆ ಅನ್ನೋ ಹೇಳಿಕೆಗಳು ಕೇಳಿ ಬರ್ತಿರ್ತಾವೆ ಇದಕ್ಕೆ ಮತ್ತೊಂದು ನಿದರ್ಶನ ಬೆಳಕಿಗೆ ಬಂದಿದೆ ಈಆರೋಪ ಮಾಡಿರೋದು ಬೇರ್ಯಾರು ಅಲ್ಲ ಬಿಜೆಪಿಯ ಮಾಜಿ ಶಾಸಕ ಗೂಳಿ ಹಟ್ಟಿ ಶೇಖರ್.. ಸಂಘ ಪರಿವಾರದಲ್ಲಿ ಅಸ್ಪೃಶ್ಯತೆ ಆಚರಣೆ ಇದೆಯೇ ಇಲ್ಲವೇ ಎಂದು ಪ್ರಶ್ನಿಸಿ, https://ainlivenews.com/the-most-wanted-terrorist-is-poisoned-in-pakistan-jail/ ಈ ಬಗ್ಗೆ…
ಕಾರವಾರ: ಅರಬ್ಬಿ ಸಮುದ್ರದಲ್ಲಿ (Arabian Sea) ಹವಾಮಾನ ವೈಪರಿತ್ಯದಿಂದ 27 ಜನರಿದ್ದ ಗೋವಾ (Goa) ಮೂಲದ ಮೀನುಗಾರಿಕಾ ಬೋಟ್ ನಾಪತ್ತೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಬೆಲೇಕೇರಿಯಲ್ಲಿ (Bilikere) ನಡೆದಿದೆ. ಗೋವಾ ಮೂಲದ Ind- ga -01MM2233 ನೋಂದಣಿಯ ಕ್ರಿಸ್ಟೋರಿ ಹೆಸರಿನ ಬೋಟ್ ಇದಾಗಿದ್ದು , https://ainlivenews.com/the-most-wanted-terrorist-is-poisoned-in-pakistan-jail/ ಹವಾಮಾನ ವೈಪರೀತ್ಯದಿಂದ ಎಂಜಿನ್‌ನಲ್ಲಿ ಸಮಸ್ಯೆಯಾಗಿ ಗಾಳಿ ರಭಸಕ್ಕೆ ಬೇರೆಡೆ ತೇಲಿ ಹೋಗಿದೆ. ಕೋಸ್ಟ್ ಗಾರ್ಡ್ (Coast Guard) ಸಿಬ್ಬಂದಿ ಬೋಟ್ ಹುಡುಕುವ ಕಾರ್ಯಾಚರಣೆ ಆರಂಭಿಸಿದ್ದಾರೆ. ನೆಟ್ವರ್ಕ್ ಸಂಪರ್ಕ ಕಳೆದುಕೊಂಡಿರುವುದರಿಂದ 27 ಜನ ಮೀನುಗಾರರ ರಕ್ಷಣಾ ಕಾರ್ಯಕ್ಕೆ ತೊಡಕಾಗಿದೆ.
ಥಿಯೇಟರ್ ನಲ್ಲಿ ಧೂಳ್ ಎಬ್ಬಿಸಿದ್ದ ಘೋಸ್ಟ್ ಸಿನಿಮಾ ಜೀ5 ಒಟಿಟಿಯಲ್ಲಿಯೂ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ನವೆಂಬರ್ 17ರಂದು ಬಿಡುಗಡೆಯಾಗಿದ್ದ ಶಿವಣ್ಣ ಚಿತ್ರ ಕೆಲವೇ ದಿನಗಳಲ್ಲಿ 200 ಮಿಲಿಯನ್ಸ್ ಸ್ಟ್ರೀಮಿಂಗ್ ಕಂಡಿದೆ. ಘೋಸ್ಟ್ ಸಿನಿಮಾದ ಈ ಸಕ್ಸಸ್ನ್ ಸೆಲಬ್ರೇಟ್ ಮಾಡೋದಕ್ಕೆ ಶ್ರೀ ಮುತ್ತು ನಿವಾಸದಲ್ಲೇ ಮಾಧ್ಯಮಮಿತ್ರರನ್ನ ಆಹ್ವಾನಿಸಿದ್ದ ಶಿವಣ್ಣ, ಕೈಯಲ್ಲಿರುವ ಸಾಲು ಸಾಲು ಸಿನಿಮಾಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಘೋಸ್ಟ್ ಪಾರ್ಟ್-2, ಭೈರತಿ ರಣಗಲ್ ಸಿನಿಮಾಗಳ ಬಗ್ಗೆ ಅಪ್ಡೇುಟ್ ನೀಡಿದ ಹ್ಯಾಟ್ರಿಕ್ ಹೀರೋ, ತನ್ನ ಮುಂದಿನ ಸಿನಿಮಾದಲ್ಲಿ ನ್ಯಾಚುರಲ್ ಸ್ಟಾರ್ ನಾನಿ ಇರುವುದನ್ನ ಖಚಿತಪಡಿಸಿದರು. ಶಿವಣ್ಣನ ‘ಭಜರಂಗಿ 2’, ‘ವೇದ’ ಹಾಗೂ ‘ಘೋಸ್ಟ್’ ಈ ಮೂರು ಸಿನಿಮಾಗಳು 100 ಮಿಲಿಯನ್ ನಿಮಿಷಗಳಷ್ಟು ಸ್ಟ್ರೀಮಿಂಗ್ ಆಗಿದೆ. ಈ ಬಗ್ಗೆ ಸ್ವತ: ಶಿವಣ್ಣ ಖುಷಿ ವ್ಯಕ್ತಪಡಿಸಿದ್ದಾರೆ. “ಜೀ 5ನಲ್ಲಿ ಇದು ಮೂರನೇ ಕನೆಕ್ಷನ್. ಭಜರಂಗಿ 2, ವೇದ ಮತ್ತು ಘೋಸ್ಟ್. ಮೂರು ಸಿನಿಮಾ ತುಂಬಾ ಚೆನ್ನಾಗಿ ಸ್ಟ್ರೀಮಿಂಗ್ ಆಗಿರೋದ್ರಿಂದ ನಮಗೆ ಜೀ ಕನೆಕ್ಷನ್ ಜಾಸ್ತಿ ಇದೆ…
ವಿಜಯಪುರ : ಜಿಲ್ಲೆಯ ತಾಳಿಕೋಟೆ ಪಟ್ಟಣದ ಮದರಕಲ್ ಮೆಗಾಮಾರ್ಟ್ ಎದುರು ವ್ಯಕ್ತಿ ಶವ ಪತ್ತೆಯಾಗಿದ ಘಟನೆ ಬೆಳಕಿಗೆ ಬಂದಿದೆ. ಕೊಡಗಾನೂರು ಗ್ರಾಮದ ಚಿದಾನಂದ ಶಂಕ್ರಪ್ಪ ಬಡಿಗೇರ (31) ಮೃತ ಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ತಲೆಗೆ ಪೆಟ್ಟುಬಿದ್ದು ರಕ್ತಸ್ರಾವವಾಗಿ ವ್ಯಕ್ತಿ ಸಾವನ್ನಪ್ಪಿರುವ ವ್ಯಕ್ತಿಯ ಶವ ಪತ್ತೆಯಾಗಿದೆ. ತಾಳಿಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಬೆಳಕಿಗೆ ಬಂದಿದೆ.
ಮೀರ್ಪುರ್: ಕಿವೀಸ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ 2ನೇ ಪಂದ್ಯದಲ್ಲಿ ಬಾಂಗ್ಲಾದೇಶ ಕ್ರಿಕೆಟಿಗ ಮುಶ್ಫಿಕರ್ ರಹೀಮ್ (Mushfiqur Rahim) ಎಡವಟ್ಟಿನಿಂದ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡಿರುವುದು ಸುದ್ದಿಯಾಗಿದೆ. ಬಾಂಗ್ಲಾದೇಶ (Bangladesh) ಹಾಗೂ ನ್ಯೂಜಿಲೆಂಡ್ (New Zealand) ನಡುವೆ ನಡೆಯುತ್ತಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ (Test Series) ಬಾಂಗ್ಲಾದೇಶ ತಂಡವು 1-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಆದ್ರೆ 2ನೇ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ ತಂಡ ಮೊದಲ ದಿನವೇ 66.2 ಓವರ್‌ಗಳಲ್ಲಿ 172 ರನ್‌ಗಳಿಗೆ ಆಲೌಟ್ ಆಯಿತು. ಈ ಪಂದ್ಯದಲ್ಲಿ 83 ಎಸೆತಗಳಲ್ಲಿ 35 ರನ್ ಗಳಿಸಿದ್ದ ಬಾಂಗ್ಲಾದೇಶ ಕ್ರಿಕೆಟಿಗ ಮುಶ್ಫಿಕರ್ ರಹೀಮ್ ಅಪರೂಪದ ಔಟ್‌ಗೆ ತುತ್ತಾಗಿದ್ದಾರೆ. ಇದು ಕ್ರಿಕೆಟ್ ಅಭಿಮಾನಿಗಳಲ್ಲೂ ಕುತೂಹಲ ಮೂಡಿಸಿದ್ದು, ಸೋಶಿಯಲ್ ಮೀಡಿಯಾಗಳಲ್ಲೂ ಸದ್ದು ಮಾಡುತ್ತಿದೆ. https://ainlivenews.com/the-most-wanted-terrorist-is-poisoned-in-pakistan-jail/ ಕಿವೀಸ್ ಬೌಲರ್ ಕೈಲ್ ಜೇಮಿಸನ್ (Kyle Jamieson) 41ನೇ ಓವರ್‌ನ 4ನೇ ಎಸೆತ ಬೌಲಿಂಗ್ ಮಾಡಿದಾಗ ಮುಶ್ಫಿಕರ್ ಅದನ್ನು ಬ್ಯಾಟ್‌ನಿಂದ ರಕ್ಷಣೆ ಮಾಡಿದರು. ತಕ್ಷಣವೇ ಸ್ಟಂಪ್ಸ್‌ನತ್ತ ಹೋಗುತ್ತಿದ್ದ ವೇಳೆ…