ಚಾಮರಾಜನಗರ:; ಜಿಲ್ಲೆಯ ಕೊಳ್ಳೇಗಾಲದಲ್ಲಿ ಅಕ್ರಮ ಒಣ ಗಾಂಜಾ ಸಾಗಾಣೆ ಮಾಡುತ್ತಿದ್ದ ಓರ್ವ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಬಳಿ ಆರೋಪಿಯನ್ನು ಬಂಧಿಸಲಾಗಿದೆ. ಬೈಕ್ ನಲ್ಲಿ ಅಕ್ರಮವಾಗಿ ಒಣಗಾಂಜಾ ಸಾಗಾಣೆ ಮಾಡುತ್ತಿದ್ದ ವ್ಯಕ್ತಿಯನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಒಣ ಗಾಂಜಾವನ್ನು ಜಪ್ತಿ ಮಾಡಿದ್ದಾರೆ. ಪಟ್ಟಣದ ಆಶ್ರಯ ಬಡಾವಣೆ ವಾಹೀದ್ ಪಾಷ ಅಲಿಯಾಸ್ ಸುಲ್ತಾನ್ (27) ಬಂಧಿತ ಆರೋಪಿ. ಆರೋಪಿಯಿಂದ ಸುಮಾರು 5 ಕೆ.ಜಿ. 480 ಗ್ರಾಂ ತೂಕದ 4 ಲಕ್ಷ ಬೆಲೆ ಬಾಳುವ ಒಣ ಗಾಂಜಾವನ್ನು ಹಾಗೂ ಒಂದು ಬೈಕ್ ಜಪ್ತಿಮಾಡಿದ್ದಾರೆ. ಈತ ತನ್ನ ಬೈಕ್‌ನಲ್ಲಿ ಅಕ್ರಮವಾಗಿ ಒಣ ಗಾಂಜಾವನ್ನು ಮಾರಾಟ ಮಾಡಲು ಮಳವಳ್ಳಿ ಕಡೆಯಿಂದ ಕೊಳ್ಳೇಗಾಲಕ್ಕೆ ತೆಗೆದುಕೊಂಡು ಬರುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆಯ ಎಸ್‌ಐ ಗಣೇಶ್ ಮತ್ತು ತನಿಖಾ ಪಿಎಸ್‌ಐ ಚಲುವರಾಜು ಹಾಗೂ ಸಿಬ್ಬಂದಿ ತಂಡದೊಂದಿಗೆ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಸೇತುವೆ ಬಳಿ ದಾಳಿ ನಡೆಸಿ ಆರೋಪಿಯನ್ನು ಮಾಲ್ ಸಮೇತ…
Author: AIN Author
ಚಾಮರಾಜನಗರ:- ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಿಗಿದ ಆರೋಪಿಯನ್ನು ಮಹಿಳಾ ಠಾಣೆಯ ಪೊಲೀಸರು ಬಂಧಿಸಿ ವಶಕ್ಕೆ ಪಡೆದುಕೊಂಡಿರುವ ಘಟನೆ ಗುರುವಾರ ನಡೆದಿದೆ. ನಗರದ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಬಡಾವಣೆಯೊಂದರಲ್ಲಿ ಈ ದುರ್ಘಟನೆ ನಡೆದಿದೆ. ಅಪ್ರಾಪ್ತೆಯ ತಾಯಿ ಪಕ್ಕದ ಮನೆಗೆ ಹೋಗಿದ್ದ ವೇಳೆ ಆರೋಪಿಯು ಬಾಲಕಿಯನ್ನು ಮನೆ ಸಮೀಪದ ಗಲ್ಲಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದು, ಇದನ್ನು ಕಂಡ ಬಾಲಕಿಯ ತಾಯಿ ಕಿರುಚಿಕೊಂಡಿದ್ದು ತಕ್ಷಣವೇ ಆರೋಪಿಯು ಅಪ್ರಾಪ್ತೆಯನ್ನು ಸ್ಥಳದಿಂದ ಓಡಿದ್ದಾನೆ. ಈ ವೇಳೆ ಅಕ್ಕಪಕ್ಕದಲ್ಲಿದ್ದ ಸ್ಥಳೀಯರು ಆತನನ್ನು ಹಿಡಿದುಕೊಂಡು ಹಿಗ್ಗಾಮುಗ್ಗಾ ಥಳಿಸಿ, ಬಳಿಕ ಪಟ್ಟಣ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ. ನಂತರ ಅವರು ಮಹಿಳಾ ಠಾಣೆಗೆ ಕಳುಹಿಸಿದ್ದಾರೆ. ಈ ವೇಳೆ ಮಹಿಳಾ ಠಾಣೆಯ ಪೊಲೀಸರು, ಸಾರ್ವಜನಿಕರ ಥಳಿತದಿಂದ ಗಾಯಗೊಂಡಿದ್ದ ಆರೋಪಿಯನ್ನು ಸಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದು, ಇವನ ವಿರುದ್ಧ ಪೋಕ್ಸೋ ಅಡಿ ಪ್ರಕರಣ ದಾಖಲು ಮಾಡಿಕೊಂಡು, ವಿಚಾರಣೆ ನಡೆಸುತ್ತಿದ್ದಾರೆ. ಅಪ್ರಾಪ್ತೆ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಯ ಮೇಲೆ ಹಿಗ್ಗಾಮುಗ್ಗಾ ಥಳಿಸಿದ್ದು, ಈ…
ನೆಲಮಂಗಲ:- ಎಟಿಎಂನ ಹಣ ಕಳ್ಳತನ ಮಾಡಲು ಬಂದಿದ್ದ ಇಬ್ಬರು ಖದೀಮರು ಸಿಬ್ಬಂದಿಯ ಅಲರ್ಟ್ ಕರೆಯಿಂದ ಓಡಿ ಹೋಗಿದ್ದು ಎಂಟಿಎಂನಲ್ಲಿದ್ದ 7 ಲಕ್ಷ ಹಣ ಬೆಂಕಿಗಾಹುತಿಯಾಗಿದೆ. ಬೆಂಗಳೂರು ಹೊರವಲಯದ ನೆಲಮಂಗಲ ಸಮೀಪದ ಅರಿಶಿನಕುಂಟೆಯ ರಾಷ್ಟ್ರೀಯ ಹೆದ್ದಾರಿ ಸಮೀಪದ ಆಕ್ಸಿಸ್ ಬ್ಯಾಂಕ್ ಎಂಟಿಎಂನ ಹಣವನ್ನು ಇಬ್ಬರು ಖದೀಮರು ಕಳ್ಳತನ ಮಾಡಲು ಮುಂದಾಗಿದ್ದು ಗ್ಯಾಸ್ ಕಟರ್ ಬಳಸಿ ಎಂಟಿಮ್ ಮಿಷನ್ ಕಟ್ ಗೆ ಯತ್ನಿಸಿದ್ದಾರೆ. ಅರ್ಧದಷ್ಟು ಕಟ್ ಮಾಡಿದಾಗ ಬ್ಯಾಂಕ್ ಸಿಬ್ಬಂದಿಗೆ ಮಾಹಿತಿ ಹೋದಾಗ ಬ್ಯಾಂಕ್ ಸಿಬ್ಬಂದಿಗಳು ಬ್ಯಾಂಕ್ ಕಟ್ಟಡ ಮಾಲೀಕರಿಗೆ ಕರೆ ಮಾಡಿ ಪರಿಶೀಲಿಸಲು ಹೇಳಿದ್ದಾರೆ, ತಕ್ಷಣ ಮಾಲೀಕರು ಲೈಟ್ ಹಾಕುತ್ತಿದ್ದಂತೆ ಖದೀಮರು ಎಸ್ಕೇಪ್ ಆಗಿದ್ದು ತಕ್ಷಣ ಟೌನ್ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಖದೀಮರ ಕಳ್ಳತನ ಯೋಜನೆ ಬ್ಯಾಂಕ್ ಸಿಬ್ಬಂದಿಯ ಕರೆ ವಿಫಲಗೊಳಿಸಿದೆ. ಎಂಟಿಎಮ್ ನಲ್ಲಿ 30 ಲಕ್ಷ ನಗದನ್ನು ಹಾಕಲಾಗಿತ್ತು, ಗ್ಯಾಸ್ ಕಟರ್ ಬಳಸಿ ಕಟ್ ಮಾಡಿದ್ದ ಹಿನ್ನಲೆ 7 ಲಕ್ಷದಷ್ಟು ನಗದು ಹಣ ಬೆಂಕಿಗಾಹುತಿಯಾಗಿದ್ದು ಉಳಿದ ಹಣವನ್ನು ಬ್ಯಾಂಕ್ ಅಧಿಕಾರಿಗಳು ವಶಕ್ಕೆ…
ಬೆಂಗಳೂರು:- ಇಂದಿನಿಂದ ಎರಡು ದಿನ ರಾಜ್ಯದ ಹಲವೆಡೆ ವ್ಯಾಪಕ ಮಳೆ ಆಗಲಿದೆ ಎಂದು ಭಾರತೀಯ ಹವಮಾನ ಇಲಾಖೆ ಮಾಹಿತಿ ನೀಡಿದೆ. ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಕೋಲಾರ, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಚದುರಿದಂತೆ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ, ಕೊಡಗು, ಚಿಕ್ಕಮಗಳೂರು, ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳಲ್ಲಿ ಚದುರಿದಂತೆ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಿದೆ. ಉತ್ತರ ಕರ್ನಾಟಕ ಮತ್ತು ಕರಾವಳಿ ಭಾಗದಲ್ಲಿ ಒಣಹವೆ ಇರಲಿದೆ ಎಂದು ಹೇಳಿದೆ. ಡಿಸೆಂಬರ್ 13ರ ಬಳಿಕ ರಾಜ್ಯದಲ್ಲಿ ಮಳೆ ಸಂಪೂರ್ಣವಾಗಿ ಕಡಿಮೆಯಾಗಲಿದ್ದು ಶುಷ್ಕ ವಾತಾವರಣ ಇರಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ರಾಜ್ಯದಲ್ಲಿ ಈಗಾಗಲೇ ಚಳಿಗಾಲ ಶುರುವಾಗಿದ್ದು, ಮುಂದಿನ ದಿನಗಳಲ್ಲಿ ಚಳಿಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ವಾರಾಂತ್ಯದಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು ಮಳೆ ಸಾಧ್ಯತೆ ಕಡಿಮೆ ಇರಲಿದೆ. ಅಲ್ಲಲ್ಲಿ ಚದುರಿದಂತೆ ಹಗುರ ಮಳೆಯಾದರೂ ನಗರದ ಬಹುತೇಕ…
ಹೊಟ್ಟೆಯನ್ನು ಕರಗಿಸಲು ಅನೇಕ ಮಾರ್ಗಗಳಿವೆ. ವಿಶೇಷವಾಗಿ ನೀವು ಹಗಲು ರಾತ್ರಿ ಮಲಗುವ ಮೊದಲು ಇಂದು ಉಲ್ಲೇಖಿಸಲಿರುವ ಶಕ್ತಿಯುತ ಕೊಬ್ಬು ಕತ್ತರಿಸುವ ಪಾನೀಯವನ್ನು ತೆಗೆದುಕೊಂಡರೆ, ನಿಮ್ಮ ಹೊಟ್ಟೆ ಒಂದು ತಿಂಗಳೊಳಗೆ ಕಣ್ಮರೆಯಾಗುತ್ತದೆ. ಆ ಕೊಬ್ಬು ಕರಿಗಿಸಬಹುದು ಪಾನೀಯವನ್ನು ಹೇಗೆ ತಯಾರಿಸುವುದು ಎಂದು ಕಂಡುಹಿಡಿಯೋಣ. ಮೊದಲು ಒಲೆಯನ್ನು ಆನ್ ಮಾಡಿ ಮತ್ತು ಬಾಣಲೆಯಲ್ಲಿ ಪ್ಯಾನ್ ಹಾಕಿ ಮತ್ತು ಅದರಲ್ಲಿ ನಾಲ್ಕು ಚಮಚ ಧನಿಯಾಸ್ ಸೇರಿಸಿ ಹುರಿಯಿರಿ. ನಂತರ ಅದೇ ಬಾಣಲೆಯಲ್ಲಿ ಎರಡು ಚಮಚ ಬೇವು, ಹತ್ತು ಲವಂಗ ಮತ್ತು ಎರಡು ಇಂಚು ದಾಲ್ಚಿನ್ನಿ ಸೇರಿಸಿ ಹುರಿಯಿರಿ. ಅದರ ನಂತರ, ಮಿಕ್ಸರ್ ಜಾರ್ನಲ್ಲಿ ಹುರಿದ ಎಲ್ಲಾ ಪದಾರ್ಥಗಳನ್ನು ಮೃದುವಾಗಿ ಪುಡಿ ಮಾಡಬೇಕು. ಈಗ ಈ ಪುಡಿಯನ್ನು ಪೆಟ್ಟಿಗೆಯಲ್ಲಿ ಸಂಗ್ರಹಿಸಿ, ನಂತರ ಒಲೆಯನ್ನು ಆನ್ ಮಾಡಿ ಮತ್ತು ಅದನ್ನು ಒಂದು ಬಟ್ಟಲಿನಲ್ಲಿ ಹಾಕಿ ಮತ್ತು ಒಂದು ಕಪ್ ನೀರನ್ನು ಸುರಿಯಿರಿ. ತಯಾರಿಸಿದ ಪುಡಿಯನ್ನು ಅರ್ಧ ಚಮಚ ಸೇರಿಸಿ ಮತ್ತು ಎಂಟರಿಂದ ಹತ್ತು ನಿಮಿಷಗಳ ಕಾಲ ಕುದಿಸಿ. ನಂತರ…
ಕಲಬುರಗಿ:- ಇಲ್ಲಿ ನಿನ್ನೆ ಹಾಡುಹಗಲೇ ನಡೆದ ಲಾಯರ್ ಕೊಲೆ ಪ್ರಕರಣಕ್ಕೆ ಸಂಭಂಧಿಸಿದಂತೆ ಆರು ಜನರ ವಿರುದ್ಧ ವಿವಿ ಠಾಣೆಯಲ್ಲಿ FIR ದಾಖಲಾಗಿದೆ. ಮೃತ ವಕೀಲ ಈರಣ್ಣ ಪತ್ನಿ ನಾಗರತ್ನ ನೀಡಿದ ಹೇಳಿಕೆಯಂತೆ ನೀಲಕಂಠ ಪೋಲೀಸ್ ಪಾಟೀಲ್ ಸೇರಿದಂತೆ ಆರು ಜನರ ವಿರುದ್ಧ ಕೇಸ್ ದಾಖಲಾಗಿದೆ. ಆರೋಪಿಗಳ ಬಂಧನಕ್ಕೆ ಎರಡು ತಂಡಗಳನ್ನ ರಚಿಸಲಾಗಿದ್ದು ಪಾತಕಿಗಳನ್ನ ಬಲೆಗೆ ಕೆಡವಲು ಪೋಲೀಸ್ರು ತನಿಖೆ ಚುರುಕುಗೊಳಿಸಿದ್ದಾರೆ.
ಗದಗ:- ಇಲ್ಲಿನ ಶಿಂಗಟಾಲೂರು ಗ್ರಾಮದ ಬಳಿಯ ಕಪ್ಪತ್ತಗುಡ್ಡದಲ್ಲಿ ಚಿರತೆ ಪ್ರತ್ಯಕ್ಷವಾದ ಘಟನೆ ಜರುಗಿದೆ. ಶಿಂಗಟಾಲೂರಿನ ಹನುಮಪ್ಪನ ಗುಡ್ಡದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಬುಲೆರೋ ವಾಹನದಲ್ಲಿ ಸಾಗುತ್ತಿದ್ದವರಿಗೆ ಚಿರತೆ ಪ್ರತ್ಯಕ್ಷವಾಗಿದೆ. ಸವಾರರು ತಮ್ಮ ಮೊಬೈಲ್‌ನಲ್ಲಿ ಚಿರತೆ ವಿಡಿಯೋ ಸೆರೆ ಹಿಡಿದಿದ್ದಾರೆ. ಹಲವು ಬಾರಿ ಕಪ್ಪತ್ತಗುಡ್ಡದಲ್ಲಿ ಚಿರತೆ ಪ್ರತ್ಯಕ್ಷವಾಗಿತ್ತು ಎನ್ನಲಾಗಿದೆ.
ಉತ್ತರ ಪ್ರದೇಶ :-ತಾಯಿ ಬುದ್ದಿ ಮಾತು ಹೇಳಿದ್ದಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರಪ್ರದೇಶದ ಮಥುರಾದಲ್ಲಿ ನಡೆದಿದೆ. ಆತ್ಯಹತ್ಯೆಗೆ ಶರಣಾದ 13 ವರ್ಷ ವಯಸ್ಸಿನ ಬಾಲಕಿಯನ್ನು ಖುಷಿ ಶರ್ಮಾ ಎಂದು ಗುರುತಿಸಲಾಗಿದ್ದು, ಆಕೆಗೆ ಶಾಲೆಗೆ ಹೋಗಲು ಇಷ್ಟವಿರಲಿಲ್ಲ. ಇದರಿಂದ ಕುಪಿತಗೊಂಡ ಆಕೆಯು ತಾಯಿ ಮಗಳು ಶಾಲೆಗೆ ಹೋಗುವಂತೆ ಒತ್ತಾಯಿಸಿ, ಗದರಿಸಿದ್ದಾರೆ. ತದನಂತರ ಕಪಾಳಮೋಕ್ಷ ಕೂಡ ಮಾಡಿದ್ದಾರೆ. ಇದರಿಂದ ತೀವ್ರ ಮನನೊಂದ ಶರ್ಮಾ ಅವರ ಪುತ್ರಿ ಖುಷಿ, ಶಾಲೆಗೆ ಹೋಗುವ ಬದಲು ಅಲ್ವಾರ್-ಮಥುರಾ ರೈಲ್ವೇ ಟ್ರ್ಯಾಕ್ ಬಳಿ ಹೋಗಿ ರೈಲಿನ ಮುಂದೆ ಜಿಗಿದಿದ್ದಾಳೆ. ಘಟನೆಯನ್ನು ಕಂಡ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆಕೆಯ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಖುಷಿ ತನ್ನ ತಾಯಿ ಬೈದು, ಗದರಿದ್ದಕ್ಕೆ ಮನನೊಂದು ಆತ್ಯಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಂಬಲಾಗಿದೆ.
ಹುಬ್ಬಳ್ಳಿ: ಇಲ್ಲಿನ ಕಿಮ್ಸ್‌ಗೆ ಪ್ರಭಾರಿ ನಿರ್ದೇಶಕರಾಗಿ ಡಾ. ಎಸ್. ಎಫ್. ಕಮ್ಮಾರ ಅವರು ನೇಮಕವಾಗಿದ್ದು ಅಧಿಕಾರ ಸ್ವೀಕರಿಸಿದರು. ಡಿ. 6ರಂದೇ ನಿರ್ದೇಶಕರ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಎಲುಬು ಮತ್ತು ಕೀಲು ವಿಭಾಗದ ಪ್ರಾಧ್ಯಾಪಕ ಹಾಗೂ ಪಿಎಂಆರ್ ಮುಖ್ಯಸ್ಥ ಡಾ. ಕಮ್ಮಾರ ಅವರನ್ನು ಸರ್ಕಾರ ನೇಮಕ ಮಾಡಿದೆ. ಕಾಯಂ ನಿರ್ದೇಶಕರ ಹುದ್ದೆ ಭರ್ತಿ ಮಾಡುವವರೆಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಈ ಹುದ್ದೆಯಲ್ಲಿ ಅವರು ಮುಂದುವರಿಯಲಿದ್ದಾರೆ. ನಿಗರ್ಮಿತ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಅವರ ಸೇವೆಯು ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ಮುಂದುವರಿಯಲಿದೆ. ಎಂಎಸ್ ನೇಮಕ: ಇಲ್ಲಿನ ಕಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ವೈದ್ಯಕೀಯ ಅಧೀಕ್ಷಕರಾಗಿ ಮಕ್ಕಳ ಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಎಸ್. ರಾಜಾಶಂಕರ ಅವರು ನೇಮಕವಾಗಿದ್ದು, ಅವರೂ ಕೂಡ ಗುರುವಾರ ಆದೇಶ ಪ್ರತಿ ಸ್ವೀಕರಿಸಿ ಹುದ್ದೆ ಅಲಂಕರಿಸಿದರು. ಈ ವೇಳೆ ನೇಮಕವಾದ ಇಬ್ಬರಿಗೂ ಹಾಗೂ ನಿರ್ಗಮಿತ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಅವರಿಗೂ ವೈದ್ಯಕೀಯ ಸಿಬ್ಬಂದಿ ಹೂಗುಚ್ಛ…
ರೋಮ್: ಚೀನಾಗೆ ಇಟಲಿ ಬಿಗ್ ಶಾಕ್ ನೀಡಿದೆ. ಚೀನಾದ (China) ಮಹತ್ವಾಕಾಂಕ್ಷೆಯ ಬೆಲ್ಟ್ ಅಂಡ್ ರೋಡ್ ಇನಿಷಿಯೇಟಿವ್ (BRI) ಯೋಜನೆಯಿಂದ ಹೊರಬರುವುದಾಗಿ ಇಟಲಿ (Italy) ಅಧಿಕೃತವಾಗಿ ತಿಳಿಸಿದೆ. ಈಗ ಇಟಲಿ ಅಧಿಕೃತವಾಗಿ ಈ ಯೋಜನೆಯಿಂದ ಹೊರಬರುವುದಾಗಿ ಚೀನಾಗೆ ತಿಳಿಸಿದೆ ಎಂದು ಸರ್ಕಾರಿ ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ. 2019ರಲ್ಲಿ ನಡೆದ ಒಪ್ಪಂದವು ಮಾರ್ಚ್ 2024 ರಲ್ಲಿ ಮುಕ್ತಾಯಗೊಳ್ಳುತ್ತದೆ. ರೋಮ್ ಕನಿಷ್ಠ ಮೂರು ತಿಂಗಳ ಮೊದಲೇ ಲಿಖಿತವಾಗಿ ತಿಳಿಸದೇ ಇದ್ದರೆ ಅದು ಸ್ವಯಂಚಾಲಿತವಾಗಿ ನವೀಕರಿಸಲ್ಪಡುತ್ತದೆ. ಈಗ ಈ ಒಪ್ಪಂದವನ್ನು ನವೀಕರಿಸುವುದಿಲ್ಲಎಂದು ಇಟಲಿ ಚೀನಾಗೆ ಇತ್ತೀಚಿಗೆ ಪತ್ರದ ಮೂಲಕ ತಿಳಿಸಿದೆ ಎಂದು ವರದಿಯಾಗಿದೆ. ಚೀನಾದ ಈ ಯೋಜನೆಗೆ 2019ರಲ್ಲಿ ಇಟಲಿ ಸಹಿ ಹಾಕಿತ್ತು. ಬಿಆರ್‌ಐ ಸೇರಿದ ಏಕೈಕ ಪಾಶ್ಚಿಮಾತ್ಯ ದೇಶ ಇಟಲಿಯಾಗಿತ್ತು. ಲಾಭಕ್ಕಿಂತ ನಷ್ಟವೇ ಹೆಚ್ಚಾಗಬಹುದು ಎಂಬ ಕಾರಣಕ್ಕೆ ಇಟಲಿ ಈ ಯೋಜನೆಯಿಂದ ಹಿಂದಕ್ಕೆ ಸರಿಯಲಿದೆ ಎಂಬ ವಿಚಾರ ಕೆಲ ತಿಂಗಳಿಂದ ಸುದ್ದಿಯಾಗುತ್ತಿತ್ತು. ನಾವು ಇನ್ನು ಮುಂದೆ ಬಿಆರ್‌ಐ ಭಾಗವಾಗಿರದಿದ್ದರೂ ಸಹ ಚೀನಾದೊಂದಿಗೆ ಅತ್ಯುತ್ತಮ…