ಬೆಂಗಳೂರು:- ಭಾರತದ ಸಂವಿಧಾನ ನಿರ್ಮಾತೃ ಡಾ ಬಾಬಾಸಾಹೆಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದ ಅಂಗವಾಗಿ ವಿಧಾನ ಸೌಧದ ಬಳಿ ಇರುವ ಅಂಬೇಡ್ಕರ್ ಪುತ್ಥಳಿಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ. ಪರಿಷತ್ ಸದಸ್ಯ T.A. ಶರವಣ ಅವರು ಪುಷ್ಪ ನಮನ ಸಲ್ಲಿಸಿ ಗೌರವಿಸಿದರು. ಇದೆ ವೇಳೆ ಜೆಡಿಎಸ್ ಮುಖಂಡರು ಹಾಗೂ ಇತರ ಗಣ್ಯರು ಭಾಗಿಯಾಗಿದ್ದರು. ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಅವರು ಅಂಬೇಡ್ಕರ್ ಕುರಿತಾಗಿ ಅವರ ಸಾಧನೆ ಹಾಗೂ ನಡೆದು ಬಂದ ಹಾದಿ ಬಗ್ಗೆ ಮಾತನಾಡಿದ್ರು. ಇನ್ನೂ ಡಾ. ಬಿ.ಆರ್ ಅಂಬೇಡ್ಕರ್ ಅವರು ನಿಧನ ಹೊಂದಿದ ದಿನವನ್ನು ಪ್ರತಿವರ್ಷ ಮಹಾಪರಿನಿರ್ವಾಣ ದಿವಸವೆಂದು ಆಚರಿಸಲಾಗುತ್ತದೆ. ಭಾರತ ಸಂವಿಧಾನವನ್ನು ರಚಿಸಿದ ಅಂಬೇಡ್ಕರ್ ಅವರು ಒಬ್ಬ ಖ್ಯಾತ ನ್ಯಾಯವಾದಿ, ಆರ್ಥಿಕ ತಜ್ಞ, ರಾಜಕೀಯ ಮತ್ತು ಸಮಾಜ ಸುಧಾರಕರಾಗಿ ಕೂಡ ಗುರುತಿಸಿಕೊಂಡಿದ್ದರು, ದೇಶದಲ್ಲಿ ದಲಿತ ಬೌದ್ಧ ಚಳವಳಿಗಳು, ಮಹಿಳೆಯರು, ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟ ನಡೆಸಿದ ಧೀಮಂತ ನಾಯಕ ಎಂದೇ ಹೇಳಲಾಗಿದೆ.
Author: AIN Author
ಕಲಬುರ್ಗಿ:- ಹಾಡುಹಗಲೇ ವ್ಯಕ್ತಿಯೊಬ್ಬನ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆಗೈದ ಘಟನೆ ಕಲಬುರಗಿಯಲ್ಲಿ ನಡೆದಿದೆ. ವಕೀಲ ವೃತ್ತಿ ಮಾಡುತ್ತಿದ್ದ ಈರಣ್ಣ ಗೌಡ ಕೊಲೆಗೀಡಾದ ದುರ್ದೈವಿ. ಸಾಯಿನಗರದ ಮನೆ ಬಳಿ ಘಟನೆ ನಡೆದಿದ್ದು ಆಸ್ತಿ ವಿವಾದಕ್ಕೆ ಕೊಲೆ ಆಗಿರಬಹುದು ಅಂತ ಶಂಕಿಸಲಾಗಿದೆ. ವಿವಿ ಠಾಣೆ ಪೋಲೀಸರು ಪರಿಶೀಲನೆ ನಡೆಸಿದ್ದು ತನಿಖೆ ಕೈಗೆತ್ತಿಕೊಂಡಿದ್ದಾರೆ..
ಕಲಬುರಗಿ:- ಇಲ್ಲಿನ ಬಿಜೆಪಿ ಮುಖಂಡ ಮಣಿಕಂಠ ರಾಠೋಡನನ್ನ ಪೋಲೀಸರು ವಶಕ್ಕೆ ಪಡೆದಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲಿಗರು ಮಾರಣಾಂತಿಕ ಹಲ್ಲೆ ಮಾಡಿ ನನ್ನ ಕೊಲೆಗೆ ಯತ್ನಿಸಿದ್ದಾರೆ ಅಂತ ರಕ್ತಸಿಕ್ತ ಗಾಯ ಸಮೇತ ಮಣಿಕಂಠ ರಾಠೋಡ್ ಶಹಬಾದ್ ಠಾಣೆಯಲ್ಲಿ ದೂರು ದಾಖಲಿಸಿದ್ರು. ತನಿಖೆ ನಡೆಸಿದ ಪೋಲೀಸ್ರು ಅಪಘಾತ ಪ್ರಕರಣವನ್ನ ಹಲ್ಲೆ ಅಂತ ಬಿಂಬಿಸಿ ಮಣಿಕಂಠ ದೂರು ನೀಡಿದ್ರು ಅಂತ ನಿನ್ನೆ ಸ್ಪಷ್ಟಪಡಿಸಿದ್ರು. ಆದ್ರೆ ಪೋಲೀಸ್ ತನಿಖೆ ವಿರುದ್ಧ ಇವತ್ತು ಮಣಿಕಂಠ ಸುದ್ದಿ ಗೋಷ್ಠಿ ಕರೆದಿದ್ರು..ಆದ್ರೆ ಸುದ್ದಿಗೋಷ್ಠಿಗೂ ಮುನ್ನವೇ ಚೌಕ್ ಠಾಣೆ ಪೋಲೀಸ್ರು ಮನೆಗೆ ತೆರಳಿ ಮಣಿಕಂಠನನ್ನ ವಶಕ್ಕೆ ಪಡೆದ್ರು..
ಬೆಂಗಳೂರು:- ಬೆಸ್ಕಾಂ ನಿರ್ಲಕ್ಷ್ಯಕ್ಕೆ ತಾಯಿ ಮಗು ಸಾವು ಕೇಸ್ ಗೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ತನಿಖಾ ತಂಡವು ತಾಯಿ ಮತ್ತು 9 ತಿಂಗಳ ಕಂದಮನ ಸಾವಿಗೆ ಬೆಸ್ಕಾಂ ಅಧಿಕಾರಿಗಳೇ ನೇರ ಹೊಣೆ ಎಂದು ಹೇಳಿದೆ. ವಿದ್ಯುತ್ ಪರಿವೀಕ್ಷಣಾಲಯದ ತನಿಖೆಯಲ್ಲಿ ಬೆಚ್ಚಿ ಬೀಳಿಸುವ ಸತ್ಯ ಬಯಲಾಗಿದೆ. ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮಹಿಳೆ ಸೌಂದರ್ಯ ಹಾಗೂ 9 ತಿಂಗಳ ಮಗು ಬಲಿಯಾಗಿದೆ. ನವೆಂಬರ್ 19 ರ ಬೆಳಗ್ಗೆ ಕಾಡುಗೋಡಿ ಬಳಿಯ ಹೋ ಫಾರ್ಂ ಬಳಿ ವಿದ್ಯುತ್ ಅವಘಡ ಸಂಭವಿಸಿತ್ತು. ಪುಟ್ ಪಾತ್ ಮೇಲೆ ತಾಯಿ ಮತ್ತು 9 ತಿಂಗಳ ಮಗು ಧಗಧಗನೇ ಹೊತ್ತಿ ಉರಿದಿತ್ತು. ಬೆಸ್ಕಾಂ ಬೇಜವಾಬ್ದಾರಿ ತನಕ್ಕೆ ಅಮಾಯಕರು ಬಲಿಯಾದ್ರು. ಬೆಸ್ಕಾಂ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ರೆ ಎರಡು ಸಾವಾಗುತ್ತಿರಲಿಲ್ಲ. ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿತನದಿಂದಲೇ ಈ ಸಾವು ಸಂಭವಿಸಿದೆ. ಈ ಬಗ್ಗೆ ವರದಿ ನೀಡಿದ ವಿದ್ಯುತ್ ಪರಿವೀಕ್ಷಣಾಲಯ, ಬೆಸ್ಕಾಂ ಸ್ವಲ್ಪ ಎಚ್ಚೆತ್ತುಕೊಂಡಿದ್ರೆ ಅಮಾಯಕರ ಸಾವಗುತ್ತಿರಲಿಲ್ಲ ಎಂದು ವಿದ್ಯುತ್ ಪರಿವೀಕ್ಷಣಾಲಯ ವರದಿ ನೀಡಿದೆ. ವಿದ್ಯುತ್ ಪರಿವೀಕ್ಷಣಾಲಯದ ವರದಿಯಲ್ಲಿ…
ತುಮಕೂರು :-ಯಶ್ವಂತಗುರೂಜಿ ಅವರ ಭವಿಷ್ಯ ಮತ್ತೆ ನಿಜವಾಗಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ 65 ಸೀಟು ಗೆಲ್ಲೋದಾಗಿ ಗುರೂಜಿಗಳು ಭವಿಷ್ಯ ನುಡಿದಿದ್ದರು. ಅಲ್ಲದೇ ರೇವಂತ್ ರೆಡ್ಡಿ ತೆಲಂಗಾಣದ ಸಿಎಂ ಆಗೋದಾಗಿಯೂ ಭವಿಷ್ಯ ನುಡಿದಿದ್ದರು. ಇದೀಗ ಮತ್ತೊಮ್ಮೆ ಯಶ್ವಂತ ಗುರೂಜಿಯ ಕಾಲಜ್ಙಾನ ಭವಿಷ್ಯ ನಿಜವಾಗಿದೆ. ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ನೊಣವಿನಕೆರೆ ಮೂಲದ ಯಶ್ವಂತ ಗುರೂಜಿ ಅವರು, ಈ ಹಿಂದೆ ಕರ್ನಾಟಕದಲ್ಲಿ ಕಾಂಗ್ರೆಸ್ 135 ಸೀಟು ಗೆದ್ದು ಅಧಿಕಾರ ಹಿಡಿಯೋದಾಗಿ ಭವಿಷ್ಯ ನುಡಿದಿದ್ದರು.. ಅದರಂತೆ ತೆಲಂಗಣದ ರಾಜಕಾರಣ ವಿಚಾರದಲ್ಲೂ ಭವಿಷ್ಯ ನುಡಿದಿದ್ದರು. ಇದೀಗ ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಕಾಲಜ್ಙಾನ ಭವಿಷ್ಯದಂತೆ ರೇವಂತ್ ರೆಡ್ಡಿ ಇಂದು ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
ಬೆಳಗಾವಿ: “ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಪ್ರಕರಣ ತಲೆ ತಗ್ಗಿಸುವ ವಿಚಾರ. ಎಲ್ಲರೂ ಜಂಟಿಯಾಗಿ ಕೆಲಸ ಮಾಡುವ ಮೂಲಕ ದೊಡ್ಡ ಮಟ್ಟದ ಹೋರಾಟ ಮಾಡಿದರೆ ಭ್ರೂಣ ಹತ್ಯೆ ತಡೆಯಲು ಸಾಧ್ಯವಾಗುತ್ತದೆ” ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ಬೆಳಗಾವಿಯಲ್ಲಿಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, “ನಮಗೆ ಬಂದಿರುವ ಎಲ್ಲ ಮಾಹಿತಿಯನ್ನು ನಾವು ಸಿಒಡಿಗೆ ಕೊಡುತ್ತಿದ್ದೇವೆ. ಅವರು ತನಿಖೆ ಮಾಡುತ್ತಿದ್ದಾರೆ. ಅಲ್ಲದೇ ಸಾರ್ವಜನಿಕರು ಕೊಟ್ಟಿರುವ ಮಾಹಿತಿಯನ್ನೂ ಕಳುಹಿಸಿಕೊಟ್ಟಿದ್ದೇವೆ. ಸಾರ್ವಜನಿಕರೂ ಸಹ ನಮಗೆ ಹೆಚ್ಚಿನ ಸಹಕಾರ ಕೊಡಬೇಕು” ಎಂದು ಮನವಿ ಮಾಡಿದರು. ಉತ್ತರ ಕರ್ನಾಟಕದ ಬಗ್ಗೆ ಸದನದಲ್ಲಿ ಚರ್ಚೆ ಆಗುತ್ತಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, “ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಪ್ರತ್ಯೇಕವಾಗಿ ಚರ್ಚಿಸಲು ಸಭಾಧ್ಯಕ್ಷರು ದಿನಾಂಕ ನಿಗದಿಪಡಿಸಿದ್ದಾರೆ. ಆ ಚರ್ಚೆಯಲ್ಲಿ ಹೆಚ್ಚು ಶಾಸಕರು ಭಾಗಿಯಾಗಿ ಈ ಭಾಗದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ನಡೆಸಿದ್ದು ಖಂಡಿತವಾಗಿಯೂ ಅರ್ಥಪೂರ್ಣವಾಗುತ್ತದೆ” ಎಂದು ದಿನೇಶ್…
ಬೆಳಗಾವಿ: “ಮಸ್ಲಿಮರು ಸೇರಿ ಎಲ್ಲಾ ಸಮುದಾಯದವರಿಗೂ ಅನುದಾನ ನೀಡುತ್ತೇನೆ ಎಂದು ಹೇಳಿಕೆ ನೀಡಿದ್ದೆ, ಅದನ್ನು ನೀವು(ಮಾಧ್ಯಮದವರು) ಬರೆದರಾ?” ಎಂದು ಸಿಎಂ ಸಿದ್ದರಾಮಯ್ಯ ಅವರು ಗರಂ ಆದ ಪ್ರಸಂಗ ನಡೆಯಿತು. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಸಮುದಾಯಕ್ಕೆ 10 ಸಾವಿರ ಕೋಟಿ ಅನುದಾನ ನೀಡುತ್ತೇನೆ ಎಂಬ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ ಅವರು, “ನಾನು ಮುಸ್ಲಿಂರು ಸೇರಿದಂತೆ ಎಲ್ಲ ಸಮುದಾಯಗಳಿಗೆ ಅನುದಾನ ನೀಡುತ್ತೇನೆ ಎಂದಿದ್ದೆ. ಆದರೆ ಮಾಧ್ಯಮಗಳು ನನ್ನ ಹೇಳಿಕೆಯನ್ನು ಸರಿಯಾಗಿ ಬರೆದಿಲ್ಲ, ಹೀಗಾಗಿ ನನ್ನ ಹೇಳಿಕೆ ಈಗ ಚರ್ಚೆಗೆ ಗ್ರಾಸವಾಗಿದೆ” ಎಂದರು. ಬಿಜೆಪಿಯವರು ನಾಲ್ಕು ವರ್ಷ ಅಧಿಕಾರದಲ್ಲಿ ಇದ್ದಾಗ ಬೆಂಗಳೂರಿನ ಗುಂಡಿ ಮುಚ್ಚಲಾಗಲಿಲ್ಲ, ಹೈಕೋರ್ಟ್ ಇವರಿಗೆ ಛೀಮಾರಿ ಹಾಕಿತ್ತು. ಬ್ರಾಂಡ್ ಬೆಂಗಳೂರು ಬಗ್ಗೆ ಮಾತನಾಡುವುದಕ್ಕೆ ಅವರಿಗೆ ಯಾವ ನೈತಿಕತೆ ಇದೆ?” ಎಂದು ಬಿಜೆಪಿ ನಾಯಕರ ಹೇಳಿಕೆಗೆ ಸಿಎಂ ತಿರುಗೇಟು ನೀಡಿದರು. ಸಚಿವರು ಸದನಕ್ಕೆ ಗೈರಾಗಿ ತೆಲಂಗಾಣಕ್ಕೆ ಹೋಗಿದ್ದಾರೆ ಎಂದು ಆರೋಪದ ಬಗ್ಗೆ ಪ್ರತಿಕ್ರಿಯಿಸಿ, “ಎಲ್ಲರೂ ತೆಲಂಗಾಣಕ್ಕೆ…
ಬೆಳಗಾವಿ:- ಹುಬ್ಬಳ್ಳಿ ಮುಸ್ಲಿಂ ಸಮಾವೇಶದಲ್ಲಿ ತೆರಳಿದ್ದ ಸಿಎಂ ಮೇಲೆ ಬಿಜೆಪಿ ಶಾಸಕ ಯತ್ನಾಳ ಅವರು ಬೇರೆ ಉಗ್ರ ಸಂಘಟನೆಗಳೊಂದಿಗೆ ಲಿಂಕ್ ಮಾಡುವುದು ಸರಿಯಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಸಚಿವರುಗಳಿಗೆ ಸಾಕಷ್ಟು ಜನ ಮನವಿ ಕೊಡಲು ಬರುತ್ತಾರೆ. ಅವರು ಯಾರು ಅಂಥಾ ನಮಗೆ ಗೊತ್ತಾಗಬೇಕು. ಸಿಎಂ ಹುಬ್ಬಳ್ಳಿ ಮುಸ್ಲಿಂ ಸಮುದಾಯದ ಸಭೆಗೆ ಹೋದಾಗ ಅಲ್ಲಿಯ ವ್ಯಕ್ತಿಯ ಪಕ್ಕದಲ್ಲಿ ನಿಂತ ಮಾತ್ರಕ್ಕೆ ಸಿಎಂಗೂ ಉಗ್ರ ಸಂಘಟನೆ ಜೊತೆ ಲಿಂಕ್ ಮಾಡುವುದು ಸರಿಯಲ್ಲ. ಸಂಬಂಧಿಸಿದ ಇಲಾಖೆಯ ಅದನ್ನು ನೋಡಿಕೊಳ್ಳುತ್ತದೆ ಎಂದರು.
ಬೆಂಗಳೂರು:- ತೆಲಂಗಾಣ ಸಿಎಂ ಆಗಿ ರೇವಂತ್ ರೆಡ್ಡಿ ಪ್ರಮಾಣ ವಚನ ಸ್ವೀಕಾರ ಹಿನ್ನೆಲೆ ಡಿಸಿಎಂ ಶಿವಕುಮಾರ್ ನೇತೃತ್ವದಲ್ಲಿ ಬೆಂಗಳೂರಿನಿಂದ ಕಾಂಗ್ರೆಸ್ ಶಾಸಕರು ತೆರಳಿದ್ದಾರೆ. ಶಾಸಕರಾದ ರಂಗನಾಥ್, ಶರತ್ ಬಚ್ಚೇಗೌಡ, ಶ್ರೀನಿವಾಸ್, ಶಿವಣ್ಣ , ಇಕ್ಬಾಲ್ ಹುಸೇನ್ ತೆಲಂಗಾಣಕ್ಕೆ ಪ್ರಯಾಣ ಬೆಳೆಸಿದ್ದು, ವಿಶೇಷ ವಿಮಾನದ ಮೂಲಕ ತೆರಳಿದ ರಾಜ್ಯ ಕಾಂಗ್ರೆಸ್ ಶಾಸಕರು ತೆಲಂಗಾಣಕ್ಕೆ ತೆರಳಿದ್ದಾರೆ.
ಬೆಂಗಳೂರು:- ಪ್ರೀತಿ ನಿರಾಕರಿಸಿದ್ದಕ್ಕೆ ಯುವಕನೋರ್ವ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಮೃತಪಟ್ಟಿರುವ ಘಟನೆ ಕೆಂಗೇರಿಯ ಕೊಡಿಗೆ ಪಾಳ್ಯದಲ್ಲಿ ಜರುಗಿದೆ. ನಿನ್ನೆ ಮದ್ಯಾಹ್ನ ಸುಮಾರಿಗೆ ಈ ಘಟನೆ ನಡೆದಿದೆ. ಆನೇಕಲ್ ತಾಲೂಕಿನ ಜಿಗಣಿಯ ಕಲ್ಲುಬಾಳು ಗ್ರಾಮದ ಯುವಕ ರಾಕೇಶ್ ಮೃತ ದುರ್ದೈವಿ. ಮೃತ ಯುವಕ ಐದಾರು ವರ್ಷದಿಂದ ಯುವತಿ ಜೊತೆ ಪ್ರೀತಿ ಮಾಡುತ್ತಿದ್ದ. ಆದರೆ ಯುವತಿ ಇತ್ತೀಚೆಗೆ ಬೇರೆ ಯುವಕನ ಜೊತೆಗೆ ಮದುವೆಗೆ ಸಿದ್ದವಾಗಿದ್ದಳು. ಇದರಿಂದಾಗಿ ಯುವತಿ ರಾಕೇಶನನ್ನು ಅವಾಯ್ಡ್ ಮಾಡಿದ್ದಳು. ನಿನ್ನೆ ರಾಕೇಶ್ ಯುವತಿ ಮನೆಯ ಬಳಿ ಹೋಗಿ ಪ್ರಶ್ನೆ ಮಾಡಿದ್ದ. ಈ ಸಂದರ್ಭದಲ್ಲಿ ರಾಕೇಶ್ ಹಾಗೂ ಯುವತಿ ಜೊತೆ ಗಲಾಟೆ ಆಗಿತ್ತು. ಇದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಲಾಗಿದೆ. ಪೆಟ್ರೋಲ್ ಸುರಿದುಕೊಂಡು ರಾಕೇಶ್ ಬೆಂಕಿ ಹಚ್ಚಿಕೊಂಡಿದ್ದ. ಕೂಡಲೇ ರಾಕೇಶ್ ನನ್ನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ರಾಕೇಶ್ ದೇಹದ ಬಹುತೇಕ ಬಾಗ ಸುಟ್ಟು ಹೋಗಿತ್ತು. ತೀವ್ರ ನೋವಿನಿಂದ ಬಳಲುತ್ತಿದ್ದ ರಾಕೇಶ್ ನಿನ್ನೆ ರಾತ್ರಿ ಮೃತಪಟ್ಟಿದ್ದಾನೆ. ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.