ಬೆಳಗಾವಿ: ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಹಿನ್ನೆಲೆ ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ಎಂಇಎಸ್ ಮತ್ತು ಶಿವಸೇನೆ ಠಾಕ್ರೆ ಬಣದಿಂದ ಹೈಡ್ರಾಮಾ ನಡೆದಿದೆ. ಕೊಲ್ಲಾಪುರ ಜಿಲ್ಲೆಯ ಶಿನ್ನೋಳ್ಳಿ ಗಡಿಯಲ್ಲಿ ರಸ್ತೆ ಬಂದ್ ಮಾಡಿ ಪುಂಡಾಟ ಮೆರೆದಿದ್ದಾರೆ. ಮಹಾರಾಷ್ಟ್ರ ಸರ್ಕಾರದ ವಿರುದ್ಧ ಶಿವಸೇನೆ ಕಾರ್ಯಕರ್ತರಿಂದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. https://ainlivenews.com/congress-president-has-called-an-important-meeting-on-december-6/#google_vignette ಅದಲ್ಲದೆ ಇತ್ತ ಕರ್ನಾಟಕ ಸರ್ಕಾರದ ವಿರುದ್ಧ ಎಂಇಎಸ ಪುಂಡರು ನಾಡವಿರೋಧಿ ಘೋಷಣೆ ಕೂಗಿದ್ದಾರೆ. ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ಬೀಗಿ ಖಾಗಿ ಭದ್ರತೆ ಒದಗಿಸಲಾಗಿದ್ದು, ಕರ್ನಾಟಕ ಗಡಿ ಪ್ರವೇಶಿಸದಂತೆ ಪೊಲೀಸರು ತಡೆ ಹಿಡಿದಿದ್ದಾರೆ.
Author: AIN Author
ಬೆಳಗಾವಿ: ವಿಧಾನಮಂಡಲ ಚಳಿಗಾಲದ ಅಧಿವೇಶನಕ್ಕಾಗಿ ಬೆಳಗಾವಿಗೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿಮಾನ ನಿಲ್ದಾಣದ ಹೊರಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಅಧಿವೇಶನದಲ್ಲಿ ಬಿಜೆಪಿ ಒಂದು ಸಮರ್ಥ ವಿರೋಧ ಪಕ್ಷವಾಗಿ ಕೆಲಸ ಮಾಡುವ ಜೊತೆಗೆ ಜನ ಅದರಲ್ಲೂ ವಿಶೇಷವಾಗಿ ಬಡಜನ ಎದುರಿಸುತ್ತಿರುವ ಸಮಸ್ಯೆಗಳನ್ನು ಪ್ರಸ್ತಾಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉತ್ತರ ಪಡೆಯುವುದಾಗಿ ಹೇಳಿದರು. https://ainlivenews.com/congress-president-has-called-an-important-meeting-on-december-6/#google_vignette ಪಂಚ ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶಗಳ ಬಗ್ಗೆ ಮಾತಾಡಿದ ಅವರು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪೊಳ್ಳು ಗ್ಯಾರಂಟಿಗಳನ್ನು ನೀಡಿ ಗೆದ್ದ ಹಾಗೆಯೇ ಅದರ ನೇತೃತ್ವ ಇಂಡಿಯ ಮೈತ್ರಿಕೂಟ ದೇಶದ ಬೇರೆ ಭಾಗಗಳಲ್ಲೂ ಗ್ಯಾರಂಟಿಗಳ ಮಂತ್ರ ಪಠಿಸಿತು. ಆದರೆ, ಜನ ಅವಟ ಟೊಳ್ಳು ಗ್ಯಾರಂಟಿಗಳನ್ನು ನಂಬಲು ತಯಾರಿಲ್ಲ, ಅವರಿಗೆ ಬೇಕಿರುವುದು ದೇಶದ ರಕ್ಷಣೆ ಮತ್ತು ಅಭಿವೃದ್ಧಿಯ ಗ್ಯಾರಂಟಿ ಮತ್ತು ಅದನ್ನು ಕೇವಲ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತ್ರ ನೀಡಬಲ್ಲರು ಎಂದು ವಿಜಯೇಂದ್ರ ಹೇಳಿದರು.
ಹೈದರಾಬಾದ್: ತೆಲಂಗಾಣದ ಮೇದಕ್ ಜಿಲ್ಲೆಯ ತೂಪ್ರಾನ್‌ನ ರಾವೆಲ್ಲಿ ಗ್ರಾಮದಲ್ಲಿ ತರಬೇತಿ ವಿಮಾನವೊಂದು (Trainer Aircraft) ಪತನಗೊಂಡ ಪರಿಣಾಮ ಭಾರತೀಯ ವಾಯುಪಡೆಯ (IAF) ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದ್ದಾರೆ. ಹೈದರಾಬಾದ್‌ನಲ್ಲಿರುವ ಏರ್ ಫೋರ್ಸ್ ಅಕಾಡೆಮಿಯಿಂದ (AFA) ವಾಡಿಕೆಯ ತರಬೇತಿಗಾಗಿ Pilatus PC 7 Mk-II ವಿಮಾನ ಟೇಕಾಫ್ ಆಗಿತ್ತು. ಈ ವೇಳೆ ಅಪಘಾತ ಸಂಭವಿಸಿ ವಿಮಾನದಲ್ಲಿದ್ದ ತರಬೇತುದಾರ ಮತ್ತು ತರಬೇತಿ ನಿರತ ಪೈಲಟ್ ಇಬ್ಬರೂ ಸಾವನ್ನಪ್ಪಿದ್ದಾರೆ. ಸದ್ಯ ಅಪಘಾತಕ್ಕೆ ನಿಖರ ಕಾರಣ ಪತ್ತೆಹಚ್ಚಲು ತನಿಖೆಗೆ ಆದೇಶಿಸಲಾಗಿದೆ. ಪಿಲಾಟಸ್ PC 7 Mk-II ವಿಮಾನವು ಒಂದೇ ಎಂಜಿನ್ ಒಳಗೊಂಡ ತರಬೇತಿ ವಿಮಾನವಾಗಿದೆ. IAF ಪೈಲಟ್‌ಗಳ ತರಬೇತಿಗಾಗಿ ಇದನ್ನು ಬಳಸಲಾಗುತ್ತದೆ. ಸ್ವಿಟ್ಜರ್‌ಲೆಂಡಿನ ಪಿಲಾಟಸ್ ಸಂಸ್ಥೆಯು ಇದನ್ನು ವಿನ್ಯಾಸಗೊಳಿಸಿ, ತಯಾರಿಸಲಿದೆ. ಈ ವಿಮಾನವನ್ನು ಏರೋಬ್ಯಾಟಿಕ್ಸ್, ಯುದ್ಧತಂತ್ರ ಮತ್ತು ರಾತ್ರಿ ಹಾರಾಟ ಸೇರಿದಂತೆ ಎಲ್ಲಾ ಮೂಲಭೂತ ತರಬೇತಿ ಕಾರ್ಯಗಳಿಗೆ ಬಳಸಲಾಗುತ್ತದೆ. ಸರಿಸುಮಾರು 1,330 ಕೆ.ಜಿ ತೂಕ ಹೊಂದಿರುತ್ತದೆ ಎಂದು ಅಂದಾಜಿಸಲಾಗಿದೆ.
ದೆಹಲಿ:ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಗೆ ಭಾರೀ ಹಿನ್ನಡೆಯಾಗಿದ್ದು ಅಂದಾಜು ಮೀರಿ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಪಕ್ಷ ಸೋತಿದ್ದು ಪಕ್ಷದ ಹಿರಿಯ ನಾಯಕರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ಪಕ್ಷದ ಹೀನಾಯ ಸೋಲಿನ ಬೆನ್ನಲ್ಲಿಯೇ ಸೋಲಿನ ಪರಾಮರ್ಶೆ ಆರಂಭವಾಗಿದೆ. ಸ್ವತಃ ಕಾಂಗ್ರೆಸ್‌ನಲ್ಲಿಯೇ ಪಕ್ಷದ ಕೆಲವೊಂದು ನಿರ್ಧಾರಗಳ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ ದೇಶದಲ್ಲಿ ಸನಾತನ ಧರ್ಮವನ್ನು ಸ್ವತಃ ಕಾಂಗ್ರೆಸ್ ವಿರೋಧಿಸಲು ನಿಂತಿದ್ದೇ ಈ ಸೋಲಿಗೆ ಕಾರಣ ಎಂದು ಕಾಂಗ್ರೆಸ್ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ಹೇಳಿದ್ದಾರೆ ಖಾಸಗಿ ವಾಹಿನಿಯೊಂದಿಗೆ ಮಾತನಾಡುವ ವೇಳೆ,ಈ ಮಾತುಗಳನ್ನ ಹೇಳಿದ್ದಾರೆ. ಮಹಾತ್ಮಾ ಗಾಂಧಿ ತೋರಿಸಿಕೊಟ್ಟಿದ್ದ ದಾರಿಯಲ್ಲಿ ನಡೆಯಬೇಕಿದ್ದ ಕಾಂಗ್ರೆಸ್ ಪಕ್ಷ, ಮಾರ್ಕ್ಸ್ ದಾರಿಯಲ್ಲಿ ಸಾಗಿದಾಗ ಇಂಥ ಫಲಿತಾಂಶಗಳು ಸಿಗುತ್ತವೆ ಎಂಧು ಆಚಾರ್ಯ ಪ್ರಮೋದ್ ಕಿಡಿ ಕಾರಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ ನನ್ನನ್ನು ಸ್ಟಾರ್ ಕ್ಯಾಂಪೇನರ್ ಲಿಸ್ಟ್‌ನಲ್ಲಿ ಇರಿಸಿದ್ದಾಗ ಇಲ್ಲಿ ಸರ್ಕಾರ ರಚನೆ ಮಾಡಿದ್ದೆವು. ಆದರೆ, ಈ ಬಾರಿ ನಾನು ಈ ಪಟ್ಟಿಯಲ್ಲೇ ಇದ್ದಿರಲಿಲ್ಲ. ಇದರಿಂದಾಗಿ ಮೂರೂ ರಾಜ್ಯಗಳಲ್ಲಿ ಸೋಲು ಕಂಡಿದೆ. ಒಬ್ಬ…
ರಾಯಪುರ: ಛತ್ತೀಸಗಢದಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸುವುದು ನಿಚ್ಚಳವಾಗಿದೆ. ಈ ಹೊತ್ತಿನಲ್ಲಿ ಬಿಜೆಪಿ ಅಭ್ಯರ್ಥಿಯೊಬ್ಬರ ಗೆಲುವಿನ ಹಿಂದಿನ ಕುತೂಹಲಕಾರಿ ವಿಷಯವೊಂದನ್ನು ಉಲ್ಲೇಖಿಸಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹಾಕಿರುವ ಪೋಸ್ಟ್ ವೈರಲ್ ಆಗಿದೆ. ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಬಿ.ಎಲ್.ಸಂತೋಷ್, ಈತ ಈಶ್ವರ್ ಸಾಹು. ಛತ್ತೀಸಗಢ ರಾಜ್ಯದ ಬಿಜೆಪಿ ಅಭ್ಯರ್ಥಿ. 7 ಬಾರಿ ಗೆದ್ದಿದ್ದ ಕಾಂಗ್ರೆಸ್ ಶಾಸಕ ರವೀಂದ್ರ ಚೌಬೆ ಅವರನ್ನು ಸಾಹು ಸೋಲಿಸಿದ್ದಾರೆ. ಈ ವ್ಯಕ್ತಿಯ ಮಗ ಗುಂಪು ಹಿಂಸಾಚಾರದಲ್ಲಿ ಹತ್ಯೆಗೀಡಾಗಿದ್ದರು. ಆ ಗಲಭೆಕೋರರಿಗೆ ಕಾಂಗ್ರೆಸ್ ಬೆಂಬಲ ನೀಡಿತ್ತು. ಇಂದು ಸಾಹು ಪ್ರಜಾಪ್ರಭುತ್ವ ಯುದ್ಧದಲ್ಲಿ ಅನ್ಯಾಯದ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ. ಅವರಿಗೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ. ತಮ್ಮ ಮಗನಿಗಾದ ಅನ್ಯಾಯಕ್ಕಾಗಿ ಕಾಂಗ್ರೆಸ್ ವಿರುದ್ಧ ಸೇಡು ತೀರಿಸಿಕೊಳ್ಳುವ ಛತ್ತೀಸ್‌ಗಢದ ಸಾಜಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಈಶ್ವರ್ ಸಾಹು ಅವರ ಆಸೆ ಕೊನೆಗೂ ನೆರವೇರಿದೆ. ಸತತ ಏಳು ಭಾರಿ ಗೆದ್ದು ಶಾಸಕರಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ರವೀಂದ್ರ ಚೌಬೆಯನ್ನು ಬಿಜೆಪಿ ಅಭ್ಯರ್ಥಿ ಸಾಹು…
ಬಿಗ್ ಬಾಸ್ ಮನೆಯ (Bigg Boss Kannada 10) ಲವ್ ಬರ್ಡ್ಸ್ ನಮ್ರತಾ-ಸ್ನೇಹಿತ್ ಜೋಡಿ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ನಮ್ರತಾ (Namratha Gowda) ಮೇಲೆ ಫೀಲಿಂಗ್ಸ್ ಇದೆ. ನಮ್ರತಾ ಜೊತೆ ಫ್ರೆಂಡ್‌ಶಿಪ್‌ಗಿಂತ ತುಸು ಜಾಸ್ತಿ ಅಟ್ಯಾಚ್ ಆಗಿದ್ದೀನಿ ಎಂದು ಸ್ನೇಹಿತ್ (Snehith Gowda) ಇದೀಗ ವಿನಯ್ ಬಳಿ ಅಳಲು ತೋಡಿಕೊಂಡಿದ್ದಾರೆ. ಬಿಗ್ ಮನೆಯಲ್ಲಿ 55 ದಿನಗಳಿಂದ ಆಗ್ತಿರೋದು ಒಂದೇ ವಿಚಾರ. ನಮ್ರತಾ ಬೀಳಲ್ಲ, ಸ್ನೇಹಿತ್ ಬಿಡಲ್ಲ. ಸ್ನೇಹಿತ್ ಲವ್ವಿ-ಡವ್ವಿ ಆಟದಲ್ಲಿ ನಾನಿಲ್ಲ ಎಂದು ನಮ್ರತಾ ಹೇಳುತ್ತಲೇ ಬಂದಿದ್ದಾರೆ. ಆದರೆ ಸ್ನೇಹಿತ್‌ಗೆ ಅರ್ಥವಾಗುವ ಲಕ್ಷಣ ಕಾಣ್ತಿಲ್ಲ. ಬಿಗ್ ಬಾಸ್ ಮನೆಗೆ ಸ್ನೇಹಿತ್ ಕಾಲಿಟ್ಟಾಗ ಮೊದಲು ಇದ್ದ ಹುಮ್ಮಸ್ಸು ಇದೀಗ ಇಲ್ಲ. ನಮ್ರತಾ ಹಿಂದೆ ಓಡಾಡೋದು ಬಿಟ್ಟು ಸ್ನೇಹಿತ್ ಆಟ ಸೊನ್ನೆಯಾಗಿ ನಿಂತಿದ್ದಾರೆ. ಕಳೆದ ವಾರ ಬಾಟಮ್ 2ರಲ್ಲಿ ಸ್ನೇಹಿತ್ ಸೇವ್ ಆಗಿದ್ದರು. ಸದ್ಯ ವಾರದ ಕ್ಯಾಪ್ಟನ್ ಆಗಿ ಸ್ನೇಹಿತ್ ಆಯ್ಕೆಯಾಗಿ ಆಟ ಆಡುತ್ತಿದ್ದಾರೆ. ಇದೆಲ್ಲದರ ನಡುವೆ ನಮ್ರತಾ ಮೇಲಿನ…
ಹುಬ್ಬಳ್ಳಿ: ಕಾರು ಮತ್ತು ಟಿಪ್ಪರ ನಡುವೆ ಅಪಘಾತವಾದ ಪರಿಣಾಮ, ಕಾರು ಪಲ್ಟಿಯಾದ ಘಟನೆ ಹುಬ್ಬಳ್ಳಿ ತಾಲ್ಲೂಕಿನ ವರೂರ ಬಳಿ ಈಗಷ್ಟೇ ನಡೆದಿದೆ. ಹೌದು, ಹುಬ್ಬಳ್ಳಿಯತ್ತ ಬರುತ್ತಿದ್ದ ಕಾರು ಮತ್ತು ಟಿಪ್ಪರ್ ನಡುವೆ ಅಪಘಾತವಾಗಿದೆ. ಡಿಕ್ಕಿ ರಭಸಕ್ಕೆ ಕಾರು ಪಲ್ಟಿಯಾಗಿ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ರೀತಿಯ ಪ್ರಾಣಹಾನಿಯಾಗಿಲ್ಲ. ಸ್ಥಳಕ್ಕೆ ಗ್ರಾಮೀಣ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ.
ಧಾರವಾಡ: ಡಿ.3 ಕಳೆದ ದಿನ ತಡ ರಾತ್ರಿ ಧಾರವಾಡದ ಕೊಪ್ಪದ ಕೇರಿ ಶಿವಾಲಯ ಬಳಿ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಯ ವಿಡಿಯೋ ವೈರಲ್ ಆಗಿದೆ. ನಿನ್ನೆ ರಾತ್ರಿ ನಡುರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ವ್ಯಕ್ತಿಯ ಬರ್ಬರ ಹತ್ಯೆ ಮಾಡಲಾಗಿದೆ. ಓರ್ವ ವ್ಯಕ್ತಿ ಮಚ್ಚಿನಿಂದ ವ್ಯಕ್ತಿಯ ಮೇಲೆ ದಾಳಿ ಮಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದು, ಸಹೋದರನಿಂದಲೇ ಹತ್ತೆಯಾಗಿರುವ ಶಂಕೆಯಾಗಿದೆ. ಈಗಾಗಲೇ ಹತ್ಯೆಯ ವಿಡಿಯೋ ಇಟ್ಟುಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ. ನಡುರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ವ್ಯಕ್ತಿಯ ಬರ್ಬರ ಹತ್ಯೆ ಮಾಡಿದ್ದಾರೆ. ನಿಂಗಪ್ಪ ಹಡಪದ (60) ಹತ್ಯೆಗೀಡಾದ ವ್ಯಕ್ತಿಯಾಗಿದ್ದು, ಆಸ್ತಿ ವಿಚಾರಕ್ಕೆ ಕೊಲೆ ನಡೆದಿರುವ ಶಂಕೆಯಾಗಿದೆ. ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ದಾಖಲು ಮಾಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಉಪನಗರ ಠಾಣೆ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಕನ್ನಡದ ಸೂಪರ್ ಸ್ಟಾರ್ ಯಶ್ (Yash) ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗೆದ್ದು ಬೀಗಿದ್ದು ಆಗಿದೆ. ಇನ್ನೂ ಏನೇ ಇದ್ರೂ ಮುಂದಿನ ಚಿತ್ರದ ಬಗ್ಗೆ ಅನೌನ್ಸ್ ಮಾಡೊದೊಂದೇ ಬಾಕಿ. ಹೀಗಿರುವಾಗ ಅಭಿಮಾನಿಗಳ ನಿರೀಕ್ಷೆಯಂತೆ ಯಶ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಯಶ್ ಕಡೆಯಿಂದ ಮುಂದಿನ ಸಿನಿಮಾಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಕೆಜಿಎಫ್, ಕೆಜಿಎಫ್ 2 (KGF 2) ಸಕ್ಸಸ್ ಬಳಿಕ ಯಶ್ ಸೈಲೆಂಟ್ ಆಗಿ ಮುಂದಿನ ಸಿನಿಮಾಗೆ ಭರ್ಜರಿ ತಯಾರಿ ಮಾಡಿಕೊಳ್ತಾ ಇದ್ದರು. ಈಗ ಬಿಗ್ ಅಪ್‌ಡೇಟ್ ಸಿಕ್ಕಿದೆ. ‘ಲೋಡಿಂಗ್’ ಎಂಬ ಬರಹದ ಫೋಟೋವನ್ನ ಇನ್ಸ್ಟಾಗ್ರಾಂ ಮುಖಪುಟ ಬದಲಿಸಿದ್ದಾರೆ ಯಶ್. ಸಂಡೆ ಸಂಜೆ ಯಶ್ ಸಖತ್ ನ್ಯೂಸ್ ಕೊಟ್ಟಿದ್ದಾರೆ. ರಾಕಿಭಾಯ್ ಆಗಿ ಘರ್ಜಿಸಿದ ಮೇಲೆ ಯಶ್ 19 (Yash 19) ಯಾವಾಗ ಎಂದು ಎಲ್ಲರೂ ಕೇಳುತ್ತಿದ್ದರು. ಲೋಡಿಂಗ್ ಎಂಬ ಬರಹದ ಮೂಲಕ ಮುಂದಿನ ಚಿತ್ರದ ಬಗ್ಗೆ ಸುಳಿವು ನೀಡಿದ್ದಾರೆ. ಈ ಮೂಲಕ ‘ಯಶ್ 19’ ಸಿನಿಮಾಗೆ ಕೌಂಟ್ ಡೌನ್ ಶುರುವಾಗಿದೆ. ನಟ ಯಶ್…
ಬೆಂಗಳೂರು: ಮಾಜಿ ಸಚಿವ ಸಿಪಿ ಯೋಗೇಶ್ವರ್ ಅವರ ಭಾವ ಮಹದೇವಯ್ಯ ಕಾಣೆಯಾಗಿದ್ದು, ಎರಡ್ಮೂರು ದಿನ ಕಳೆದರೂ ಸಹ ಅವರ ಪತ್ತೆಯೇ ಇಲ್ಲ.ಆದರೆ ಇದೀಗ ಅವರ ಕಾರು ಚಾಮರಾಜನಗರ ಜಿಲ್ಲೆಯ ರಾಮಾಪುರ ಗ್ರಾಮ ಬಳಿ ಪತ್ತೆಯಾಗಿದೆ. ಹೌದು, ಎರಡ್ಮೂರು ದಿನದಿಂದ ಕಾಣದ ಕಾರು ಇದೀಗ ಪತ್ತೆಯಾಗಿದ್ದು,ಕಾರಿನ ಟೈ ಲ್ಯಾಂಪ್ ಬಳಿ ರಕ್ತದ ಕಲೆ ಇದ್ದು, ಸ್ಥಳಕ್ಕೆ ರಾಮನಗರ ಪೊಲೀಸ್ ತನಿಖಾ ತಂಡ ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಯ ವಿವರ: ಮೂರು ದಿನಗಳ ಹಿಂದೆ ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮದ ತೋಟದಿಂದ ನಾಪತ್ತೆಯಾಗಿರುವ,ಮೆಗಾಸಿಟಿ ಯೋಜನೆಯ ನಿರ್ದೇಶಕ ಮಹಾದೇವಯ್ಯ (62) ಅವರಿಗೆ ಸಂಬಂಧಿಸಿ ಹಲವು ಅನುಮಾನಾಸ್ಪದ ಸುದ್ದಿಗಳು ಹರಿದಾಡುತ್ತಿವೆ. ಸಿ.ಪಿ. ಯೋಗೇಶ್ವರ್ ಅವರ ಬಾವನ ನಾಪತ್ತೆ ಪ್ರಕರಣವನ್ನು ರಾಮನಗರ ಎಸ್‌ಪಿ ಕಾರ್ತಿಕ್ ರೆಡ್ಡಿ ಅವರು ಗಂಭೀರವಾಗಿ ತೆಗೆದುಕೊಂಡು ತನಿಖೆಗಾಗಿ ನಾಲ್ಕು ವಿಶೇಷ ತಂಡವನ್ನು ರಚಿಸಿದ್ದರು. ಮಹದೇವಯ್ಯ ಪುತ್ರ ಪ್ರಶಾಂತ್ ದೂರಿನ ಅನ್ವಯ ಪ್ರಕರಣ ದಾಖಲು ಮಾಡಿಕೊಳ್ಳಲಾಗಿತ್ತು. ಅವರ ಮೊಬೈಲ್ ಲೊಕೇಶನ್ ಸಿಕ್ಕರೆ ಪತ್ತೆ ಮಾಡಬಹುದು ಎಂಬ ನಿರೀಕ್ಷೆಯಲ್ಲಿ…