ಚಿತ್ರದುರ್ಗ: ಪೋಕ್ಸೋ (POCSO) ಕೇಸಲ್ಲಿ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಮುರುಘಾಶ್ರೀ (Muruga Shree) ತಮ್ಮ ಮಠದ (Muth) ಅಧಿಕಾರವನ್ನು ಮರಳಿ ಪಡೆದಿದ್ದಾರೆ. ಪೋಕ್ಸೋ ಕೇಸಲ್ಲಿ 2022, ಸೆಪ್ಟೆಂಬರ್ 1ರಂದು ಮುರುಘಾಶ್ರೀ ಬಂಧನವಾಗಿತ್ತು. ಸತತ 14 ತಿಂಗಳು ಸೆರೆಮನೆ ವಾಸ ಅನುಭವಿಸಿದ್ದರು. ಈ ವೇಳೆ ರಾಜ್ಯ ಸರ್ಕಾರ ಮುರುಘಾಮಠದ ಆಡಳಿತ ನಿರ್ವಹಿಸಲು ನಿವೃತ್ತ ಐಎಎಸ್ ಅಧಿಕಾರಿ ವಸ್ತ್ರದ್ ಅವರನ್ನು ಆಡಳಿತಾಧಿಕಾರಿಯಾಗಿ ನೇಮಿಸಿತ್ತು. ಈ ನೇಮಕವನ್ನು ಪ್ರಶ್ನಿಸಿ ಮಠದ ಪರ ವಕೀಲರು ಹೈಕೋರ್ಟ್ ಮೊರೆಹೋಗಿದ್ದ ಹಿನ್ನೆಲೆ ಆಡಳಿತಾಧಿಕಾರಿ ನೇಮಕವನ್ನು ಹೈಕೋರ್ಟ್ ರದ್ದುಪಡಿಸಿತ್ತು. ಆಗ ಮಠದ ಪೀಠಾಧಿಪತಿಯಾಗಿದ್ದ ಮುರುಘಾಶ್ರೀ ಜೈಲಲ್ಲಿದ್ದ ಕಾರಣ, ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಿಗೆ ತಾತ್ಕಾಲಿಕವಾಗಿ ಮಠದ ಆಡಳಿತದ ಅಧಿಕಾರ ನೀಡಿತ್ತು. https://ainlivenews.com/revanth-reddy-sworn-in-as-the-2nd-chief-minister-of-telangana/ ಹೀಗಾಗಿ ಈವರೆಗೆ ಚಿತ್ರದುರ್ಗ (Chitradurga) ಪಿಡಿಜೆ ಅವರು ಮಠದ ಆಡಳಿತಾಧಿಕಾರಿ ಆಗಿದ್ದರು. ಆದರೆ ನವೆಂಬರ್ 16ರಂದು ಮುರುಘಾಶ್ರೀ ಜಾಮೀನಿನ ಮೇಲೆ ಬಿಡುಗಡೆಯಾದ ಬೆನ್ನಲ್ಲೇ ಮಠದ ಅಧಿಕಾರಕ್ಕಾಗಿ ಹೈಕೋರ್ಟ್ ಮೊರೆ ಹೋಗಿದ್ದು, ಈ ಬಗ್ಗೆ ವಿಚಾರಣೆ ನಡೆಸಿದ…
Author: AIN Author
ಹಾಗಲಕಾಯಿ ಕಹಿಯಾಗಿರುವುದರಿಂದ ಅದನ್ನು ಕೆಲವರು ಆದಷ್ಟು ದೂರವಿಡುತ್ತಾರೆ. ಆದರೆ ಈ ಕಹಿಯನ್ನು ಹೋಗಲಾಡಿಸಲು ಕೆಲವೊಂದು ಸಾಮಾಗ್ರಿಗಳನ್ನು ಸೇರಿಸಿಕೊಂಡು ಇದನ್ನು ರುಚಿ ರೆಸಿಪಿಯನ್ನ ತಯಾರಿಸಬಹುದಾಗಿದೆ. ವಾರಕ್ಕೆ ಒಮ್ಮಯಾದ್ರೂ ಹಾಗಲಕಾಯಿ ಪಲ್ಯವನ್ನು ತಿನ್ನುವುದು ಒಳ್ಳೆಯದಾಗಿದೆ. ಕಹಿಯಾದ ಹಾಗಲಕಾಯಿಯನ್ನು ಬಳಸಿಕೊಂಡು ಒಂದು ರುಚಿಯಾದ ರೆಸಿಪಿಯನ್ನು ತಯಾರಿಸಿ ಸೇವಿಸಬಹುದಾಗಿದೆ. ಬೇಕಾಗುವ ಸಾಮಗ್ರಿಗಳು: * ಹಾಗಲಕಾಯಿ – 1 ಕಪ್ * ಈರುಳ್ಳಿ – ಅರ್ಧ ಕಪ್ * ಹಸಿಮೆಣಸು – 4 ರಿಂದ 5 * ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ – 1 ಚಮಚ * ಹುಣಸೆ ಹಣ್ಣಿನ ಹುಳಿ ನೀರು – 1 ಚಮಚ * ಅರಿಶಿಣ – ಅರ್ಧ ಚಮಚ * ಕೆಂಪು ಮೆಣಸಿನ ಹುಡಿ -2 ಚಮಚ * ಗರಮಂ ಮಸಾಲಾ – 1 ಚಮಚ * ಅಡುಗೆ ಎಣ್ಣೆ – ಅರ್ಧ ಕಪ್ ಮಾಡುವ ವಿಧಾನ: * ಹಾಗಲಕಾಯಿ ಸಿಪ್ಪೆಯನ್ನು ತೆಗೆದು ಕತ್ತರಿಸಿಕೊಂಡು ಉಪ್ಪು ಹಾಕಿ ಸ್ವಲ್ಪ ಸಮಯ ನೆನೆಸಿಟ್ಟಿರಬೇಕು.…
ಹೀಗೆ… ಗ್ರಾಮದ ನಡು ರಸ್ತೆಯಲ್ಲಿ ರಕ್ತದದೋಕುಳಿ ಹಾಡಿ ಯುವಕನೊರ್ವನನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಯಲ್ಲಂಪಲ್ಲಿ ಗ್ರಾಮದಲ್ಲಿ. ಗ್ರಾಮದ ಗಜೇಂದ್ರ ಎನ್ನುವ ಯುವಕನನ್ನು ಹತ್ಯೆ ಮಾಡಲಾಗಿದೆ. ಮುಚ್ಚು ಮರೆಯಿಲ್ಲದೆ… ಜನಸಂದಣಿ ಜನನಿಬೀಡ ಪ್ರದೇಶದಲ್ಲಿ ತಲೆ ಮುಖ ಕತ್ತುಗೆ ಮಾರಕಾಯುಧದಿಂದ ಕೊಚ್ಚಿ ಕೊಚ್ಚಿ ಕೊಲೆ ಮಾಡಲಾಗಿದೆ. ಅಸಲಿಗೆ ಕ್ಯಾಂಟರ್ ಚಾಲನವಾಗಿ ಚಿಕ್ಕಬಳ್ಳಾಪುರದಲ್ಲಿ ಕೆಲಸ ಮಾಡ್ತಿದ್ದ ಗಜೇಂದ್ರ, ನಿನ್ನೆ ಸ್ವಗ್ರಾಮಕ್ಕೆ ಆಗಮಿಸಿದ್ದ, ತಡ ರಾತ್ರಿ ಮನೆಗೆ ಬರೊ ರಸ್ತೆಯಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿದೆ, ಇದನ್ನು ಕಂಡ ಯಲ್ಲಂಪಲ್ಲಿ ಗ್ರಾಮ ಬೆಚ್ಚಿ ಬಿದ್ದಿದೆ. ಅಸಲಿಗೆ ಗಜೇಂದ್ರನ ತಂದೆ ಸತ್ಯನಾರಾಯಣಶೆಟ್ಟಿ ಮೃತಪಟ್ಟಿದ್ದಾರೆ. ಇರೊ ತಾಯಿ ವರಲಕ್ಷ್ಮಿಯನ್ನು ಸಾಕುವ ಜವಾಬ್ದಾರಿ ಗಜೇಂದ್ರನ ಮೇಲೆ ಇತ್ತು. ತಾಯಿಯನ್ನು ನೋಡಲು ನಿನ್ನೆ ಊರಿಗೆ ಬಂದಿದ್ದಾನೆ. ಸ್ನೇಹಿತರ ಜೊತೆ ಹೊರಗಡೆ ಹೋಗಿದ್ದ ಗಜೇಂದ್ರ ರಾತ್ರಿ ಮನೆಗೆ ಬರಬೇಕಿತ್ತು, ರಾತ್ರಿ 11.30ರ ಸಮಯದಲ್ಲಿ ತನ್ನ ಅಕ್ಕ ಶಶಿಕಲಾ ಗಂಡ ಈಶ್ವರಪ್ಪಗೆ ಕರೆ ಮಾಡಿ, ಗ್ರಾಮದ ಶ್ರೀನಾಥ್ ಎನ್ನುವವರು ಬೆದರಿಕೆ ಹಾಕಿರುವ…
ತೆಲುಗಿನ ಬಿಗ್ ಬಾಸ್ ಸೀಸನ್ 7ರ (Bigg Boss Telugu 7) ಆಟ ದಿನದಿಂದ ದಿನಕ್ಕೆ ರಂಗೇರುತ್ತಿದೆ. ನಟ ಕಮ್ ನಿರೂಪಕ ನಾಗಾರ್ಜುನ ನಿರೂಪಣೆಯಲ್ಲಿ ಬಿಗ್ ಬಾಸ್ ಶೋ ಮೂಡಿ ಬರುತ್ತಿದೆ. ಇದೀಗ ತೆಲುಗಿನ ಸಿನಿಮಾದಲ್ಲಿ ಕನ್ನಡದ ನಟಿಯನ್ನ ಪರಿಚಯಿಸೋದರ ಜೊತೆಗೆ ಕನ್ನಡದ ಕಂಪನ್ನ ಕೂಡ ಪಸರಿಸಿದ್ದಾರೆ. ಶೋಭಾ ಶೆಟ್ಟಿ (Shobha Shetty) ಮತ್ತು ಪ್ರಿಯಾಂಕಾ (Priyanka) ಜೊತೆ ಆಶಿಕಾ ರಂಗನಾಥ್ (Asika Ranganath) ಕನ್ನಡದಲ್ಲೇ ಮಾತನಾಡುವ ಮೂಲಕ ಗಮನ ಸೆಳೆದಿದ್ದಾರೆ. ನಂದಮೂರಿ ಕಲ್ಯಾಣ್ ರಾಮ್ ಅಭಿನಯದ ‘ಅಮಿಗೋಸ್’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ಕನ್ನಡತಿ ಆಶಿಕಾ ರಂಗನಾಥ್ ಅವರು ಈಗ ನಾಗಾರ್ಜುನ ಅಭಿನಯದ ‘ನಾ ಸಾಮಿರಂಗ’ ಚಿತ್ರಕ್ಕೂ ಆಯ್ಕೆಯಾಗಿದ್ದಾರೆ. ತಮ್ಮ ಹೊಸ ಸಿನಿಮಾದ ನಾಯಕಿಯನ್ನು ಪರಿಚಯ ಮಾಡುವುದಕ್ಕಾಗಿ ಬಿಗ್ ಬಾಸ್ ಶೋಗೆ ಆಶಿಕಾರನ್ನು ನಾಗಾರ್ಜುನ ಆಹ್ವಾನಿಸಿದ್ದರು. ಬಿಗ್ ಬಾಸ್ ವೇದಿಕೆ ಮೇಲೆ ಆಶಿಕಾ ರಂಗನಾಥ್ ಅವರನ್ನು ಕಂಡ ಸ್ಪರ್ಧಿಗಳು ಖುಷಿಯಾದರು. https://ainlivenews.com/revanth-reddy-sworn-in-as-the-2nd-chief-minister-of-telangana/ ನಾಗಾರ್ಜುನ (Nagarjuna) ಅವರು, ನಮ್ಮ…
ಹೊಸ ಜೀವನಕ್ಕೆ ಕಾಲಿಟ್ಟ ಪೂಜಾ ಗಾಂಧಿ (Pooja Gandhi) ದಂಪತಿ ಕವಿಶೈಲಕ್ಕೆ (Kavi Shaila)ಭೇಟಿ ನೀಡಿದ್ದಾರೆ. ಕುಪ್ಪಳ್ಳಿಯ ಕವಿ ಶೈಲಕ್ಕೆ ಪತಿಯೊಂದಿಗೆ ಆಗಮಿಸಿದ್ದ ಪೂಜಾ ಗಾಂಧಿ ಕೆಲ ಸಮಯವನ್ನು ಅಲ್ಲೆ ಕಳೆದಿದ್ದಾರೆ. ಕುವೆಂಪು ಅವರ ಪರಿಕಲ್ಪನೆಯ ಮಂತ್ರ ಮಾಂಗಲ್ಯ ಮಾಡಿಕೊಂಡಿದ್ದರ ಬೆನ್ನಲ್ಲೇ ದಂಪತಿ ಭೇಟಿ ನೀಡಿದ್ದು ವಿಶೇಷ. ಇತ್ತೀಚೆಗಷ್ಟೇ ಬೆಂಗಳೂರಿನ ಯಲಹಂಕದಲ್ಲಿ ನಟಿ ಪೂಜಾ ಗಾಂಧಿ ಮತ್ತು ಉದ್ಯಮಿ ವಿಜಯ್ ಘೋರ್ಪಡೆ (Vijay Ghorpade) ಬದುಕಿಗೆ ಕಾಲಿಟ್ಟಿದ್ದರು. ವಿಜಯ್ ಬೆಂಗಳೂರಿನ ಲಾಜೆಸ್ಟಿಕ್ ಕಂಪನಿಯ ಮಾಲೀಕರಾಗಿದ್ದು, ಪೂಜಾ ಅವರ ಕನ್ನಡ ಪ್ರೇಮವೇ ಇಬ್ಬರೂ ಮದುವೆ ಆಗುವಂತೆ ಮಾಡಿತ್ತು. ಪೂಜಾ- ವಿಜಯ್ ಮದುವೆಗೆ ಕುಟುಂಬಸ್ಥರು, ಆಪ್ತರು ಸ್ಯಾಂಡಲ್ವುಡ್‌ನ ಆತ್ಮೀಯ ಸ್ನೇಹಿತರು ಹಾಗೂ ಮುಂಗಾರು ಮಳೆ ನಿರ್ದೇಶಕ ಯೋಗರಾಜ್ ಭಟ್, ಸುಧಾರಾಣಿ, ಶುಭಾ ಪೂಂಜಾ, ಸುಮನಾ ಕಿತ್ತೂರು ಸೇರಿದಂತೆ ಅನೇಕರು ಭಾಗಿಯಾಗಿದ್ದರು.
ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿಯಲು ಸೌರವ್ ಗಂಗೂಲಿ ಅವರೇ ಕಾರಣ ಎನ್ನುವಂತಹ ಹಲವು ವರದಿಗಳು ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದವು. ಆದರೆ ಈ ವಿಚಾರದ ಕುರಿತಂತೆ ಸೌರವ್ ಗಂಗೂಲಿ ಮೌನ ಮುರಿದಿದ್ದು, ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿಯುವುದರ ಹಿಂದೆ ತಮ್ಮ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ನಾನು ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಲಿಲ್ಲ. ನಾನು ಈ ವಿಚಾರವನ್ನು ಹಲವಾರು ಬಾರಿ ಹೇಳಿದ್ದೇನೆ. ವಿರಾಟ್ ಕೊಹ್ಲಿ ಟಿ20 ತಂಡವನ್ನು ಮುನ್ನಡೆಸಲು ಆಸಕ್ತರಾಗಿರಲಿಲ್ಲ. ಇದು ಅವರದ್ದೇ ತೀರ್ಮಾನವಾಗಿತ್ತು. ನಾನು ಆಗ, ನೀವು ಒಂದು ವೇಳೆ ಟಿ20 ನಾಯಕತ್ವ ವಹಿಸಲು ಆಸಕ್ತಿ ಇಲ್ಲ ಎಂದಾದರೇ, ಸೀಮಿತ ಓವರ್‌ಗಳ ನಾಯಕತ್ವದಿಂದ ಕೆಳಗಿಳಿಯುವುದೇ ಒಳಿತು ಎಂದು ಹೇಳಿದ್ದೆ. ವೈಟ್ ಬಾಲ್ ಕ್ರಿಕೆಟ್‌ಗೆ ಹಾಗೂ ರೆಡ್ ಬಾಲ್ ಕ್ರಿಕೆಟ್‌ಗೆ ಬೇರೆ ಬೇರೆ ನಾಯಕರಿರಲಿ ಎನ್ನುವ ಉದ್ದೇಶದಿಂದ ನಾನು ಹಾಗೆ ಹೇಳಿದ್ದೆ” ಎಂದು ಸೌರವ್ ಗಂಗೂಲಿ ಹೇಳಿದ್ದಾರೆ. https://ainlivenews.com/revanth-reddy-sworn-in-as-the-2nd-chief-minister-of-telangana/ “ನಾನು ರೋಹಿತ್ ಶರ್ಮಾ ನಾಯಕತ್ವ ವಹಿಸಿಕೊಳ್ಳಲು ಸ್ವಲ್ಪ ಒತ್ತಡ ಹೇರಿದೆ. ಯಾಕೆಂದರೆ ರೋಹಿತ್…
ಬಿಗ್ ಬಾಸ್ ಮನೆಯಿಂದ ಡ್ರೋನ್ ಪ್ರತಾಪ್ (Drone Pratap) ಮತ್ತು ಸಂಗೀತಾ ಶೃಂಗೇರಿ (Sangeetha Sringeri) ಹೊರ ಬಂದಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಟಾಸ್ಕ್ ನಲ್ಲಿ ಇಬ್ಬರಿಗೂ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎನ್ನುವ ಮಾಹಿತಿ ಇದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ಟೆಲಿಕಾಸ್ಟ್ ಆಗುತ್ತಿದ್ದು, ಅಲ್ಲಿಯೂ ಇಬ್ಬರೂ ಕಾಣಿಸಿಕೊಳ್ಳುತ್ತಿಲ್ಲ. ಕಳೆದ ಎರಡು ದಿನಗಳಿಂದ ಗಂಧರ್ವರು ಮತ್ತು ರಾಕ್ಷಸರು ಎಂದು ಎರಡು ಗುಂಪುಗಳಾನ್ನಾಗಿ ಮಾಡಿ, ಹಲವು ಟಾಸ್ಕ್ ಗಳನ್ನು ನೀಡಲಾಗಿದೆ. ಈ ಟಾಸ್ಕ್ ನಲ್ಲಿ ಡ್ರೋನ್ ಮತ್ತು ಸಂಗೀತಾ ಗಾಯ ಮಾಡಿಕೊಂಡಿದ್ದಾರೆ ಎನ್ನುವುದು ಲೇಟೆಸ್ಟ್ ಅಪ್ ಡೇಟ್. ಈ ವಿಷಯದ ಕುರಿತಂತೆ ವಾಹಿನಿಯಾಗಲಿ ಅಥವಾ ಸಂಬಂಧಿಸಿದವರಾಗಲಿ ಯಾವುದೇ ಮಾಹಿತಿ ನೀಡಿಲ್ಲ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ನ್ಯೂಸ್ ಭರ್ಜರಿ ಸೇಲ್ ಆಗುತ್ತಿದೆ. https://ainlivenews.com/revanth-reddy-sworn-in-as-the-2nd-chief-minister-of-telangana/ ರಾಕ್ಷಸರು ಮತ್ತು ಗಂಧರ್ವರ ಗುಂಪುಗಳ ನಡುವೆ ಭಾರೀ ಕದನವೇ ನಡೆಯುತ್ತಿದೆ. ಹಲವರು ಟಾರ್ಗೆಟ್ ಮಾಡಿಕೊಂಡು ಆಡುತ್ತಿದ್ದಾರೆ. ಅದರಲ್ಲೂ ಸಂಗೀತಾ ಮತ್ತು ವಿನಯ್…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಿಮಗೆ ಮುಸ್ಲಿಮರ ಮೇಲೆ ಅಷ್ಟೊಂದು ಕಾಳಜಿ, ಪ್ರೀತಿ ಇದ್ದಿದ್ದೇ ಆದರೆ ನೀವು ನಿಮ್ಮ ಆಸ್ತಿಯನ್ನು ಮಾರಿ ಅವರಿಗೆ ಹಣ ಕೊಡಿ ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ. ಅಲ್ಪಸಂಖ್ಯಾತರಿಗೆ ಸರ್ಕಾರ 10 ಸಾವಿರ ಕೋಟಿ ಘೋಷಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಬಗ್ಗೆ ಬಹಳಷ್ಟು ಗೌರವ ಇದೆ. ಸಿಎಂ ಆದವರು ಎಲ್ಲಾ ಧರ್ಮದವರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು. ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರ ಬಗ್ಗೆ ವಿಶೇಷ ಒಲವು ಹೊಂದಿದ್ದಾರೆ. ನಮಗೆ ಸಂಘರ್ಷದ ಅವಶ್ಯಕತೆ ಇಲ್ಲ. ಆದರೆ ಇಲ್ಲಿ ಸಿದ್ದರಾಮಯ್ಯ ಅವರು ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತಿದ್ದಾರೆ ಎಂದು ಕಿಡಿಕಾರಿದ್ರು. ಸಿದ್ದರಾಮಯ್ಯ ಅವರು ನಾನು ಕುಂಕುಮ ಹಚ್ಚಲ್ಲ, ಕೇಸರಿ ಪೇಟಾ ಹಾಕಲ್ಲ ಅಂತ ಹೇಳುತ್ತಾರೆ. https://ainlivenews.com/revanth-reddy-sworn-in-as-the-2nd-chief-minister-of-telangana/ ನಿಮ್ಮ ಹೆಸರಲ್ಲಿ ಸಿದ್ದರಾಮ ಎಂದು ಭಗವಂತನ ಹೆಸರಿಟ್ಟಿದ್ದಾರೆ. ಅಷ್ಟೊಂದು ಕಾಳಜಿ ಪ್ರೀತಿ ಇದ್ರೆ ನಿಮ್ಮ ಮನೆಯಿಂದ ಕೊಡಿ. ನೀವೇನ್ ದೇಶದ ಪ್ರಧಾನ ಮಂತ್ರಿನಾ..?, ಸಿದ್ದರಾಮಯ್ಯ ಇದು ನಿಮ್ಮ ಆಸ್ತಿನಾ..?, ಇಲ್ಲೇನ್ ಪಾಕಿಸ್ತಾನ ಆಡಳಿತ…
ಬೆಳಗಾವಿ: ಹುಬ್ಬಳ್ಳಿಯಲ್ಲಿ ನಡೆದ ಮೌಲ್ವಿಗಳ ಸಮಾವೇಶದಲ್ಲಿ ಮುಸ್ಲಿಮರಿಗೆ (Muslims) 10 ಸಾವಿರ ಕೋಟಿ ರೂ. ಅನುದಾನ ಕೊಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿಕೆ ವಿಚಾರ ಇಂದು ಪರಿಷತ್‌ನಲ್ಲಿ ಸದ್ದು ಮಾಡಿತು. ಬಿಜೆಪಿ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪ ಮಾಡಿದರು. ಸಿಎಂ ಸಿದ್ದರಾಮಯ್ಯನವರು ಹುಬ್ಬಳ್ಳಿಯಲ್ಲಿ ಮುಸ್ಲಿಂ ಸಮಾವೇಶದಲ್ಲಿ ಮಾತನಾಡುತ್ತಾರೆ. ದೇಶದ ಸಂಪತ್ತನ್ನು ನಿಮಗೆ ಹಂಚುತ್ತೇನೆ ಹಾಗೂ 10 ಕೋಟಿ ರೂ. ನಿಮಗೆ ನೀಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಯಾವುದೇ ಸಮುದಾಯಕ್ಕೆ ಹಣ ಮೀಸಲಿಟ್ಟರೇ ಯಾರದ್ದೇ ವಿರೋಧವಿಲ್ಲ. ಆದರೆ ಸಿಎಂ ಅವರು ಅಲ್ಪ ಸಂಖ್ಯಾತ ಸಮುದಾಯಕ್ಕೆ 10,000 ಕೋಟಿ ರೂ. ನೀಡುತ್ತೇನೆ ಎಂದಿದ್ದಾರೆ ಇದು ಸರಿಯಲ್ಲ ಎಂದರು. https://ainlivenews.com/revanth-reddy-sworn-in-as-the-2nd-chief-minister-of-telangana/ ಸರ್ಕಾರ ಪರಿಶಿಷ್ಠ ಜಾತಿ- ಪಂಗಡಗಳಿಗೆ ಮೀಸಲಿಟ್ಟ 11,500 ಕೋಟಿ ರೂ. ಅನುದಾನವನ್ನು ಗ್ಯಾರಂಟಿಗಳಿಗೆ ಬಳಸಿ, ಸಮಾಜದ ಕಟ್ಟ ಕಡೆಯ ಬಡ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ. ಸರ್ವರನ್ನೊಳಗೊಂಡ ಸಮಾಜ ನಿರ್ಮಾಣ ಮಾಡುವ ಭರವಸೆ…
ಬೆಳಗಾವಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ (Assembly Election) ಕಾಂಗ್ರೆಸ್ (Congress) ಪಕ್ಷಕ್ಕೆ ಅಭೂತಪೂರ್ವ ಜಯ ಸಿಕ್ಕಾಗ ನಮಗೆ ಗಾಬರಿ ಆಗಿತ್ತು. ಆದರೆ ಕಳೆದ ಇಪ್ಪತ್ತು ದಿನಗಳಲ್ಲಿಯೇ ಬದಲಾವಣೆ ಆಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಹೇಳಿದ್ದಾರೆ. ಬೆಳಗಾವಿ ಖಾಸಗಿ ಹೋಟೆಲ್‌ನಲ್ಲಿ ನಡೆಯುತ್ತಿರುವ ಪ್ರಶಿಕ್ಷಣ ವರ್ಗ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಶಿಕ್ಷಣ ವರ್ಗ ಯಶಸ್ವಿಯಾಗಿ ನಡೆಯುತ್ತಿದೆ. https://ainlivenews.com/revanth-reddy-sworn-in-as-the-2nd-chief-minister-of-telangana/ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ (BJP) ಸರ್ಕಾರ ಜನಪರ ಆಡಳಿತ ನೀಡುತ್ತಿದೆ. ಮತ್ತೊಂದೆಡೆ ನಾವು ನಿರೀಕ್ಷೆ ಮಾಡದ ರೀತಿಯಲ್ಲಿ ಕರ್ನಾಟಕದಲ್ಲಿ ನಮಗೆ ಹಿನ್ನಡೆ ಆಗಿದೆ. ಪಕ್ಷದ ಕಾರ್ಯಕರ್ತರಲ್ಲೂ ನಿರುತ್ಸಾಹ, ಆಕ್ರೋಶ ಇತ್ತು. ಮುಂದಿನ ಲೋಕಸಭಾ ಚುನಾವಣೆ ಯಶಸ್ವಿಯಾಗಿ ನಡೆಸಬೇಕಿದೆ. ಜಿ.ಪಂ, ತಾ.ಪಂ ಚುನಾವಣೆ ಬರುತ್ತದೆ. ಅದನ್ನು ಯಶಸ್ವಿಯಾಗಿ ಮಾಡಬೇಕು ಎಂದರು.