ಬೆಂಗಳೂರು:- ಬೆಂಗಳೂರು ನಗರ ಡಿಸಿ ಕೆ.ಎ.ದಯಾನಂದ್ ಹೆಸರಲ್ಲಿ ಹೆಸರನ್ನೇ ಬಳಸಿ ಕಿಡಿಗೇಡಿಗಳು ಹಣಕ್ಕೆ ಬೇಡಿಕೆ ಇಟ್ಟ ಘಟನೆ ಜರುಗಿದೆ. ಅಪರಿಚಿತ ವ್ಯಕ್ತಿಗಳಿಂದ ಡಿಸಿ ಫೊಟೋ ಬಳಸಿ ವಾಟ್ಸ್ ಪ್ ನಂಬರ್ ಕ್ರಿಯೆಟ್ ಮಾಡಲಾಗಿದೆ. ಬಳಿಕ ಆ ನಂಬರ್ ನಿಂದ ಜಿಲ್ಲಾಡಳಿತದ ಕೆಲವು ಅಧಿಕಾರಿಗಳಿಗೆ ಹಣ ನೀಡುವಂತೆ ಮೆಸೇಜ್ ಮಾಡಲಾಗಿದೆ. ತುರ್ತು ಕಾರ್ಯಕ್ಕೆ ಹಣ ಬೇಕಿದೆ ತಕ್ಷಣ ಕಳುಹಿಸಿ ಎಂದು ಮೆಸೇಜ್ ಹಾಕಿದ್ದಾರೆ. ಮೆಸೇಜ್ ಬಗ್ಗೆ ಅನುಮಾನಗೊಂಡ ಕೆಲವು ಅಧಿಕಾರಿಗಳಿಂದ ಡಿಸಿಗೆ ಮಾಹಿತಿ ನೀಡಲಾಗಿದೆ. ಈ ಬಗ್ಗೆ ಸೆಂಟ್ರಲ್ ಸೈಬರ್ ಕ್ರೈಂ ಠಾಣೆಯಲ್ಲಿ ಡಿಸಿ ಕೆ.ಎ.ದಯಾನಂದ್ ಕೇಸ್ ದಾಖಲಿಸಿದ್ದಾರೆ. FIR ದಾಖಲಿಸಿಕೊಂಡು ಆರೋಪಿಗಳಿಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.
Author: AIN Author
ತುಮಕೂರು:- ಆರೋಗ್ಯ ಇಲಾಖೆ ಕುಟುಂಬ ಕಲ್ಯಾಣ ಇಲಾಖೆಯು ಮಧುಗಿರಿಯಲ್ಲಿ ಮೃತ ವ್ಯಕ್ತಿಯ ಹೆಸರಿಗೆ ಅಂಗವಿಕಲ ಹಾಗೂ ವಯಸ್ಸಿನ ಧೃಡೀಕರಣ ಪತ್ರ ನೀಡಿದ ಆರೋಪಿ ವೈದ್ಯರನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ. ಫಿಜಿಷಿಯನ್ ಡಾ.ಬಿ.ಪುರುಷೋತ್ತಮ ಅಮಾನತ್ತುಗೊಂಡ ವೈದ್ಯರು. ಈ ಇಬ್ಬರೂ ವೈದ್ಯರು ಹಣ ಪಡೆದು ಸುಳ್ಳು ಪ್ರಮಾಣಪತ್ರ ನೀಡಿದ್ದ ಬಗ್ಗೆ 2022 ಡಿ.27ರಂದು ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮುಖ್ಯ ಜಾಗೃತಾಧಿಕಾರಿಗಳ ತನಿಖಾ ವರದಿಯಲ್ಲಿ ಆರೋಪ ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ಶಿಸ್ತು ಕ್ರಮ ಬಾಕಿ ಇರಿಸಿ ಇಬ್ಬರೂ ವೈದ್ಯರನ್ನು ಸೇವೆಯಿಂದ ಅಮಾನತುಗೊಳಿಸಿ ಅಮಾನತುಗೊಳಿಸಲಾಗಿದೆ. ಅಮಾನತುಗೊಂಡಿರುವ ಡಾ.ಮಹೇಶ್‌ಸಿಂಗ್ ಅವರನ್ನು ಹಾವೇರಿ ಸವಣೂರು ಸಾರ್ವಜನಿಕ ಆಸ್ಪತ್ರೆಗೆ ಮತ್ತು ಡಾ.ಬಿ. ಪುರುಷೋತ್ತಮ ಅವರ ಲೀನ್ ಅನ್ನು ಕೆಜಿಎಫ್ ಸಾರ್ವಜನಿಕ ಆಸ್ಪತ್ರೆಗೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ.
ಭಾರತದ ಅತಿ ದೊಡ್ಡ ವಾಣಿಜ್ಯ ವಾಹನಗಳ ತಯಾರಿಕಾ ಸಂಸ್ಥೆಯಾಗಿರುವ ಟಾಟಾ ಮೋಟರ್ಸ್, ಹೊಚ್ಚ ಹೊಸದಾದ ಇಂಟ್ರಾ ವಿ ೭೦ ಇಂಟ್ರಾ ವಿ ೨೦ ಗೋಲ್ಡ್ ಏಸ್ HT+ ವಾಣಿಜ್ಯ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಮೂಲಕ ಮೊದಲ ಮತ್ತು ಕಟ್ಟ ಕಡೆಯ ಮೈಲಿನ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡುವ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ. ಈ ಹೊಸ ವಾಹನಗಳು ಹೆಚ್ಚಿನ ಪೇಲೋಡ್ ಗಳನ್ನು ದೂರದವರೆಗೆ ಕೊಂಡೊಯ್ಯಲು ಸಹಕಾರಿಯಾಗಿವೆ. ಇದರೊಂದಿಗೆ ಅತ್ಯುತ್ತಮ ಆರ್ಥಿಕ ಲಾಭವನ್ನು ತಂದು ಕೊಡುತ್ತವೆ. ಅತ್ಯುತ್ಕೃಷ್ಟವಾದ ದರ್ಜೆಯ ವೈಶಿಷ್ಟ್ಯತೆಗಳನ್ನು ಹೊಂದಿರುವ ಈ ವಾಹನಗಳು ವಿವಿಧ ಬಗೆಯ ಸರಕು ಸಾಗಣೆಗೆ ಬಳಸಬಹುದಾಗಿದೆ.ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.ಈ ವಾಹನಗಳ ಬಿಡುಗಡೆ ಬಗ್ಗೆ ಮಾತನಾಡಿದ ಟಾಟಾ ಮೋಟರ್ಸ್ ನ ಕಾರ್ಯಕಾರಿ ನಿರ್ದೇಶಕ ಗಿರೀಶ್ ವಾಘ್ ಅವರು, “ವಿವಿಧ ರೀತಿಯ ಅಪ್ಲಿಕೇಶನ್ ಗಳಿಗೆ ಗರಿಷ್ಠ ಮಟ್ಟದ ಪರಿಹಾರಗಳನ್ನು ನೀಡುವುದರ ಜೊತೆಗೆ ನಮ್ಮ ಸಣ್ಣ ವಾಣಿಜ್ಯ ವಾಹನಗಳು ಮತ್ತು ಪಿಕಪ್ ಗಳು ನಮ್ಮ ಗ್ರಾಹಕರ ಜೀವನೋಪಾಯಗಳು ಮತ್ತು…
ನೆಲಮಂಗಲ:-ಧಗಧಗನೆ ಕ್ಯಾಂಟರ್ ಹೊತ್ತಿ ಉರಿದಿರುವ ಘಟನೆ ನೆಲಮಂಗಲ ತಾಲೂಕಿನ ಇಮಚೇನಹಳ್ಳಿ ಬಳಿ ಜರುಗಿದೆ. ವಿದ್ಯುತ್ ತಂತಿ ತಗುಲಿ ಬೆಂಕಿ ಅವಘಡ ಸಂಭವಿಸಿದ್ದು, ಭಾರೀ ಅನಾಹುತ ತಪ್ಪಿದೆ. ರಾಗಿ ಹುಲ್ಲು ತುಂಬಿಕೊಂಡು ಹೋಗುತ್ತಿದ್ದ ಲಾರಿಗೆ ಬೆಂಕಿ ಬಿದ್ದಿತ್ತು ಎನ್ನಲಾಗಿದೆ. ನೆಲಮಂಗಲ ತಾಲೂಕಿನ ಇಮಚೇನಹಳ್ಳಿ ಬಳಿ ಘಟನೆ ಜರುಗಿದೆ. ಕ್ಯಾಂಟರ್ ವಾಹನ ಹಾಗೂ ರಾಗಿ ಹುಲ್ಲು ಸಂಪೂರ್ಣವಾಗಿ ಭಸ್ಮವಾಗಿದ್ದು, ಪ್ರಾಣಪಾಯದಿಂದ ಚಾಲಕ ಹಾಗೂ ಕ್ಲಿನರ್ ಪಾರಾಗಿದ್ದಾರೆ. ಡಾಬಸ್ ಪೇಟೆ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಘಟನೆ ಜರುಗಿದೆ.
ಚಿತ್ರದುರ್ಗ:- ತಾಳಿ ಕಟ್ಟುವ ಶುಭ ವೇಳೆ ಮದುವೆ ಬೇಡ ಎಂದ ವಧು ಎದ್ದು ಹೊರಟ ಘಟನೆ ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲೂಕಿನ ಚಿಕ್ಕಬ್ಯಾಲದಕೆರೆಯಲ್ಲಿ ಜರುಗಿದೆ. ಕಂಕಣ ಭಾಗ್ಯವನ್ನು ಬಲಗೈಯ್ಯಲ್ಲಿ ವಧು ಧೂಡಿದ್ದಾಳೆ. ತಾಳಿ ಕಟ್ಟಲು ಬಂದ್ರೆ ತಾಳಿಯನ್ನೇ ದೂಡಿದ್ದಾಳೆ. ಮದುವೆ ಮನೆಯಲ್ಲೇ ತಾಳಿ ಕಟ್ಟಿಸಿಕೊಳ್ಳೋಕೆ ನಿರಾಕರಣೆ ಮಾಡಿದ್ದಾಳೆ. ಪೋಷಕರು ಎಷ್ಟೇ ಹೇಳಿದ್ರೂ ವಧು ತಾಳಿ ಕಟ್ಟಿಸಿಕೊಳ್ಳಲಿಲ್ಲ. ನಾನಿನ್ನೂ ಓದಬೇಕು ಎಂದು ಕಾರಣ ನೀಡಿದ್ದಾಳೆ. ವಧು ಒಪ್ಪದ ಹಿನ್ನೆಲೆ ಮದುವೆ ಮುರಿದು ಬಿದ್ದಿದೆ. ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲೂಕಿನ ಚಿಕ್ಕಬ್ಯಾಲದಕೆರೆಯಲ್ಲಿ ಘಟನೆ ಜರುಗಿದೆ. ಆರತಕ್ಷತೆಯ ವೇಳೆ ಚೆನ್ನಾಗಿಯೇ ವಧು-ವರ ಇದ್ದರು. ಆದರೆ ಮದುವೆ ದಿನ ತಾಳಿ ಕಟ್ಟಿಸಿಕೊಳ್ಳೋಕೆ ವಧು ಯಮುನಾ ಜಿ.ಎಂ. ನಿರಾಕರಿಸಿದ್ದಾರೆ. ಚಿಕ್ಕಬ್ಯಾಲದಕೆರೆಯ ಸಂತೋಷ ಸಿ.ಎಲ್, ಹಾಗೂ ಚಳ್ಳಕೆರೆ ತಾಲೂಕಿನ ತಿಪ್ಪರಡ್ಟಿಹಳ್ಳಿಯ ಯಮುನಾ ಜಿ.ಎಂ ಮದುವೆ ಚಿಕ್ಕಬ್ಯಾಲದಕೆರೆಯ ಭೈರವೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿತ್ತು. 6ನೇ ತಾರೀಕು ನಡೆದಿದ್ದ ಆರತಕ್ಷತೆ, 7 ನೇ ತಾರೀಕು ನಡೆಯಬೇಕಿದ್ದ ವಿವಾಹ. ವಧು ತಾಳಿ ಕಟ್ಟಿಸಿಕೊಳ್ಳಲು ನಿರಾಕರಣೆ…
ಬೆಂಗಳೂರು:- ಡಿಸೆಂಬರ್ 9 ರಿಂದ 13ರ ತನಕ ಬೆಂಗಳೂರಿನ ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆ ನಡೆಯಲಿದೆ. ಬಸವನಗುಡಿ ಶ್ರೀ ದೊಡ್ಡಬಸವಣ್ಣ ಮತ್ತು ದೊಡ್ಡ ಗಣಪತಿ ದೇವಸ್ಥಾನದಲ್ಲಿ ಸಂಪ್ರದಾಯದಂತೆ ಕಡೆಲೆಕಾಯಿ ಪರಿಷೆ ಜಾತ್ರೆಯು ನಡೆಯಲಿದ್ದು, ಸುಗಮ ಸಂಚಾರಕ್ಕಾಗಿ ಸಂಚಾರ ವ್ಯವಸ್ಥೆಯಲ್ಲಿ ಕೆಲವೊಂದು ಬದಲಾವಣೆಗಳನ್ನು ಸಂಚಾರ ಪೊಲೀಸರು ಘೋಷಿಸಿದ್ದಾರೆ. ಈ ಜಾತ್ರೆಗೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಸೇರಿದಂತೆ ವಿವಿಧ ಜಿಲ್ಲೆಗಳ ಲಕ್ಷಾಂತರ ಭಕ್ತಾಧಿಗಳು ಆಗಮಿಸಲಿದ್ದು, ಈ ಭಾಗದಲ್ಲಿ ಸಂಚಾರ ದಟ್ಟಣೆ ಏರ್ಪಡುವುದು ಸಹಜ. ಈ ನಿಟ್ಟಿನಲ್ಲಿ ಬೆಂಗಳೂರು ನಗರದ ಬಸವನಗುಡಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಹನಗಳ ಸುಗಮ ಸಂಚಾರಕ್ಕಾಗಿ ಕೆಲವು ಕ್ರಮಗಳನ್ನು ಕೈಗೊಂಡಿದೆ. ಸಾರ್ವಜನಿಕರು, ಗಣ್ಯರು, ಭಕ್ತಾಧಿಗಳು, ವ್ಯಾಪಾರಿಗಳ ಹಿತದೃಷ್ಟಿಯಿಂದ ಮತ್ತು ಪಾದಚಾರಿಗಳ ಸುರಕ್ಷಿತ ಓಡಾಟ, ವಾಹನಗಳ ಸುಗಮ ಸಂಚಾರ ಮತ್ತು ವಾಹನಗಳ ನಿಲುಗಡೆಗೆ ಅನುಕೂಲ ಕಲ್ಪಿಸಿಕೊಡಲು ಬುಲ್‌ಟೆಂಪಲ್ ರಸ್ತೆಯಲ್ಲಿ ಸಂಚಾರ ಮಾರ್ಗಗಳನ್ನು ಬದಲಾವಣೆ ಮಾಡಲಾಗಿದೆ. ಬುಲ್ ಟೆಂಪಲ್ ಸಂಚಾರ ಮಾರ್ಗಗಳಲ್ಲಿ ಬದಲಾವಣೆ, 1. ಲಾಲ್‌ಬಾಗ್ ವೆಸ್ಟ್‌ಗೇಟ್ ಕಡೆಯಿಂದ ವಾಣಿವಿಲಾಸ್ ರಸ್ತೆಯ ಮುಖಾಂತರ…
ಚಾಮರಾಜನಗರ:; ಜಿಲ್ಲೆಯ ಕೊಳ್ಳೇಗಾಲದಲ್ಲಿ ಅಕ್ರಮ ಒಣ ಗಾಂಜಾ ಸಾಗಾಣೆ ಮಾಡುತ್ತಿದ್ದ ಓರ್ವ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಬಳಿ ಆರೋಪಿಯನ್ನು ಬಂಧಿಸಲಾಗಿದೆ. ಬೈಕ್ ನಲ್ಲಿ ಅಕ್ರಮವಾಗಿ ಒಣಗಾಂಜಾ ಸಾಗಾಣೆ ಮಾಡುತ್ತಿದ್ದ ವ್ಯಕ್ತಿಯನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಒಣ ಗಾಂಜಾವನ್ನು ಜಪ್ತಿ ಮಾಡಿದ್ದಾರೆ. ಪಟ್ಟಣದ ಆಶ್ರಯ ಬಡಾವಣೆ ವಾಹೀದ್ ಪಾಷ ಅಲಿಯಾಸ್ ಸುಲ್ತಾನ್ (27) ಬಂಧಿತ ಆರೋಪಿ. ಆರೋಪಿಯಿಂದ ಸುಮಾರು 5 ಕೆ.ಜಿ. 480 ಗ್ರಾಂ ತೂಕದ 4 ಲಕ್ಷ ಬೆಲೆ ಬಾಳುವ ಒಣ ಗಾಂಜಾವನ್ನು ಹಾಗೂ ಒಂದು ಬೈಕ್ ಜಪ್ತಿಮಾಡಿದ್ದಾರೆ. ಈತ ತನ್ನ ಬೈಕ್‌ನಲ್ಲಿ ಅಕ್ರಮವಾಗಿ ಒಣ ಗಾಂಜಾವನ್ನು ಮಾರಾಟ ಮಾಡಲು ಮಳವಳ್ಳಿ ಕಡೆಯಿಂದ ಕೊಳ್ಳೇಗಾಲಕ್ಕೆ ತೆಗೆದುಕೊಂಡು ಬರುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆಯ ಎಸ್‌ಐ ಗಣೇಶ್ ಮತ್ತು ತನಿಖಾ ಪಿಎಸ್‌ಐ ಚಲುವರಾಜು ಹಾಗೂ ಸಿಬ್ಬಂದಿ ತಂಡದೊಂದಿಗೆ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಸೇತುವೆ ಬಳಿ ದಾಳಿ ನಡೆಸಿ ಆರೋಪಿಯನ್ನು ಮಾಲ್ ಸಮೇತ…
ಚಾಮರಾಜನಗರ:- ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಿಗಿದ ಆರೋಪಿಯನ್ನು ಮಹಿಳಾ ಠಾಣೆಯ ಪೊಲೀಸರು ಬಂಧಿಸಿ ವಶಕ್ಕೆ ಪಡೆದುಕೊಂಡಿರುವ ಘಟನೆ ಗುರುವಾರ ನಡೆದಿದೆ. ನಗರದ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಬಡಾವಣೆಯೊಂದರಲ್ಲಿ ಈ ದುರ್ಘಟನೆ ನಡೆದಿದೆ. ಅಪ್ರಾಪ್ತೆಯ ತಾಯಿ ಪಕ್ಕದ ಮನೆಗೆ ಹೋಗಿದ್ದ ವೇಳೆ ಆರೋಪಿಯು ಬಾಲಕಿಯನ್ನು ಮನೆ ಸಮೀಪದ ಗಲ್ಲಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದು, ಇದನ್ನು ಕಂಡ ಬಾಲಕಿಯ ತಾಯಿ ಕಿರುಚಿಕೊಂಡಿದ್ದು ತಕ್ಷಣವೇ ಆರೋಪಿಯು ಅಪ್ರಾಪ್ತೆಯನ್ನು ಸ್ಥಳದಿಂದ ಓಡಿದ್ದಾನೆ. ಈ ವೇಳೆ ಅಕ್ಕಪಕ್ಕದಲ್ಲಿದ್ದ ಸ್ಥಳೀಯರು ಆತನನ್ನು ಹಿಡಿದುಕೊಂಡು ಹಿಗ್ಗಾಮುಗ್ಗಾ ಥಳಿಸಿ, ಬಳಿಕ ಪಟ್ಟಣ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ. ನಂತರ ಅವರು ಮಹಿಳಾ ಠಾಣೆಗೆ ಕಳುಹಿಸಿದ್ದಾರೆ. ಈ ವೇಳೆ ಮಹಿಳಾ ಠಾಣೆಯ ಪೊಲೀಸರು, ಸಾರ್ವಜನಿಕರ ಥಳಿತದಿಂದ ಗಾಯಗೊಂಡಿದ್ದ ಆರೋಪಿಯನ್ನು ಸಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದು, ಇವನ ವಿರುದ್ಧ ಪೋಕ್ಸೋ ಅಡಿ ಪ್ರಕರಣ ದಾಖಲು ಮಾಡಿಕೊಂಡು, ವಿಚಾರಣೆ ನಡೆಸುತ್ತಿದ್ದಾರೆ. ಅಪ್ರಾಪ್ತೆ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಯ ಮೇಲೆ ಹಿಗ್ಗಾಮುಗ್ಗಾ ಥಳಿಸಿದ್ದು, ಈ…
ನೆಲಮಂಗಲ:- ಎಟಿಎಂನ ಹಣ ಕಳ್ಳತನ ಮಾಡಲು ಬಂದಿದ್ದ ಇಬ್ಬರು ಖದೀಮರು ಸಿಬ್ಬಂದಿಯ ಅಲರ್ಟ್ ಕರೆಯಿಂದ ಓಡಿ ಹೋಗಿದ್ದು ಎಂಟಿಎಂನಲ್ಲಿದ್ದ 7 ಲಕ್ಷ ಹಣ ಬೆಂಕಿಗಾಹುತಿಯಾಗಿದೆ. ಬೆಂಗಳೂರು ಹೊರವಲಯದ ನೆಲಮಂಗಲ ಸಮೀಪದ ಅರಿಶಿನಕುಂಟೆಯ ರಾಷ್ಟ್ರೀಯ ಹೆದ್ದಾರಿ ಸಮೀಪದ ಆಕ್ಸಿಸ್ ಬ್ಯಾಂಕ್ ಎಂಟಿಎಂನ ಹಣವನ್ನು ಇಬ್ಬರು ಖದೀಮರು ಕಳ್ಳತನ ಮಾಡಲು ಮುಂದಾಗಿದ್ದು ಗ್ಯಾಸ್ ಕಟರ್ ಬಳಸಿ ಎಂಟಿಮ್ ಮಿಷನ್ ಕಟ್ ಗೆ ಯತ್ನಿಸಿದ್ದಾರೆ. ಅರ್ಧದಷ್ಟು ಕಟ್ ಮಾಡಿದಾಗ ಬ್ಯಾಂಕ್ ಸಿಬ್ಬಂದಿಗೆ ಮಾಹಿತಿ ಹೋದಾಗ ಬ್ಯಾಂಕ್ ಸಿಬ್ಬಂದಿಗಳು ಬ್ಯಾಂಕ್ ಕಟ್ಟಡ ಮಾಲೀಕರಿಗೆ ಕರೆ ಮಾಡಿ ಪರಿಶೀಲಿಸಲು ಹೇಳಿದ್ದಾರೆ, ತಕ್ಷಣ ಮಾಲೀಕರು ಲೈಟ್ ಹಾಕುತ್ತಿದ್ದಂತೆ ಖದೀಮರು ಎಸ್ಕೇಪ್ ಆಗಿದ್ದು ತಕ್ಷಣ ಟೌನ್ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಖದೀಮರ ಕಳ್ಳತನ ಯೋಜನೆ ಬ್ಯಾಂಕ್ ಸಿಬ್ಬಂದಿಯ ಕರೆ ವಿಫಲಗೊಳಿಸಿದೆ. ಎಂಟಿಎಮ್ ನಲ್ಲಿ 30 ಲಕ್ಷ ನಗದನ್ನು ಹಾಕಲಾಗಿತ್ತು, ಗ್ಯಾಸ್ ಕಟರ್ ಬಳಸಿ ಕಟ್ ಮಾಡಿದ್ದ ಹಿನ್ನಲೆ 7 ಲಕ್ಷದಷ್ಟು ನಗದು ಹಣ ಬೆಂಕಿಗಾಹುತಿಯಾಗಿದ್ದು ಉಳಿದ ಹಣವನ್ನು ಬ್ಯಾಂಕ್ ಅಧಿಕಾರಿಗಳು ವಶಕ್ಕೆ…
ಬೆಂಗಳೂರು:- ಇಂದಿನಿಂದ ಎರಡು ದಿನ ರಾಜ್ಯದ ಹಲವೆಡೆ ವ್ಯಾಪಕ ಮಳೆ ಆಗಲಿದೆ ಎಂದು ಭಾರತೀಯ ಹವಮಾನ ಇಲಾಖೆ ಮಾಹಿತಿ ನೀಡಿದೆ. ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಕೋಲಾರ, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಚದುರಿದಂತೆ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ, ಕೊಡಗು, ಚಿಕ್ಕಮಗಳೂರು, ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳಲ್ಲಿ ಚದುರಿದಂತೆ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಿದೆ. ಉತ್ತರ ಕರ್ನಾಟಕ ಮತ್ತು ಕರಾವಳಿ ಭಾಗದಲ್ಲಿ ಒಣಹವೆ ಇರಲಿದೆ ಎಂದು ಹೇಳಿದೆ. ಡಿಸೆಂಬರ್ 13ರ ಬಳಿಕ ರಾಜ್ಯದಲ್ಲಿ ಮಳೆ ಸಂಪೂರ್ಣವಾಗಿ ಕಡಿಮೆಯಾಗಲಿದ್ದು ಶುಷ್ಕ ವಾತಾವರಣ ಇರಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ರಾಜ್ಯದಲ್ಲಿ ಈಗಾಗಲೇ ಚಳಿಗಾಲ ಶುರುವಾಗಿದ್ದು, ಮುಂದಿನ ದಿನಗಳಲ್ಲಿ ಚಳಿಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ವಾರಾಂತ್ಯದಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು ಮಳೆ ಸಾಧ್ಯತೆ ಕಡಿಮೆ ಇರಲಿದೆ. ಅಲ್ಲಲ್ಲಿ ಚದುರಿದಂತೆ ಹಗುರ ಮಳೆಯಾದರೂ ನಗರದ ಬಹುತೇಕ…