ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಈ ವಾರ ಮಹಾಯುದ್ಧವೇ ನಡೆದಿದೆ. ವಿನಯ್ (Vinay Gowda) ಮತ್ತು ಕಾರ್ತಿಕ್ (Karthik Mahesh) ಜಗಳ ಮೀತಿ ಮೀರಿದೆ. ಇದೀಗ ಕಾರ್ತಿಕ್ ತನಗೆ ಚಪ್ಪಲಿಯಲ್ಲಿ ಹೊಡೆದಿದ್ದಾರೆ, ನಾನು ಈ ಮನೆಯಲ್ಲಿ ಇರಬೇಕಾ? ಎಂದು ವಿನಯ್ ಗುಡುಗಿದ್ದಾರೆ. ಕಾರ್ತಿಕ್ ಯಾವ ತಪ್ಪು ಮಾಡಿಲ್ಲ, ಚಪ್ಪಲಿ ಏಟು ಬಿದ್ದಿಲ್ಲ ಎಂದು ಮೈಕಲ್ ಎದುರಾಳಿ ಪರ ವಹಿಸಿದ್ದಾರೆ. ಮೈಕಲ್ ನಡೆ ಇದೀಗ ವಿನಯ್ ಕೆಂಗಣ್ಣಿಗೆ ಗುರಿಯಾಗಿದೆ. ಈ ವಾರ ಬಿಗ್ ಬಾಸ್ ಗಂಧರ್ವರು ಮತ್ತು ರಾಕ್ಷಸರು ಎಂದು ಎರಡು ತಂಡಗಳಾಗಿ ಮಾಡಿದ್ದು, ಕಾರ್ತಿಕ್ ಮತ್ತು ವಿನಯ್ ಬೇರೆ ಬೇರೆ ತಂಡದಲ್ಲಿ ಇದ್ದರು. ರಾಕ್ಷಸ ತಂಡದ ವಿನಯ್, ಗಂಧರ್ವ ತಂಡದ ಕಾರ್ತಿಕ್‌ಗೆ ಟಾಸ್ಕ್ ಕೊಡುವಾಗ ಜಟಾಪಟಿ ಶುರುವಾಗಿದೆ. ವಿನಯ್ & ಟೀಮ್ ಈ ಟಾಸ್ಕ್ನ ಪರ್ಸನಲ್ ದ್ವೇಷಕ್ಕೆ ಬಳಸಿಕೊಂಡು ಕಾರ್ತಿಕ್‌ಗೆ ಟಾರ್ಗೆಟ್ ಮಾಡಿದ್ದಾರೆ. ಮುಖಕ್ಕೆ ನೊರೆ ಹಾಕಿದ್ದು, ಚಪಾತಿ ಹಿಟ್ಟಿನಲ್ಲಿ ಮುಖಕ್ಕೆ ಹೊಡೆದಿರೋದು ಹೀಗೆ ನಾನಾ ರೀತಿಯಲ್ಲಿ…
Author: AIN Author
ಕನ್ನಡ ಸಿನಿಮಾ ರಂಗದ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟಿದ್ದ ಲೀಲಾವತಿ (Leelavati) ಅವರು, ಆನಂತರ ದಕ್ಷಿಣದ ಅಷ್ಟೂ ಭಾಷೆಗಳಲ್ಲೂ ನಟಿಸಿದವರು. ತಮಿಳು, ತೆಲುಗು, ಕನ್ನಡ, ಮಲೆಯಾಳಂ ಸೇರಿದಂತೆ 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. 1949ರಲ್ಲಿ ತೆರೆ ಕಂಡ ಶಂಕರ್ ಸಿಂಗ್ ಅವರ ನಾಗಕನ್ನಿಕ ಇವರ ಮೊದಲ ಚಿತ್ರ. ಇದಕ್ಕೂ ಮೊದಲು ಲೀಲಾವತಿ ಅವರು ಸುಬ್ಬಯ್ಯ ನಾಯ್ಡು ಅವರ ಸಂಸ್ಥೆಯಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಕಯಾದುವಿನ ಸಖಿ, ಭಕ್ತ ಪ್ರಹ್ಲಾದ ಸೇರಿದಂತೆ ಸಾಕಷ್ಟು ನಾಟಕಗಳಲ್ಲಿ ಇವರು ಅಭಿನಯಿಸಿದ್ದಾರೆ. ಸಿನಿಮಾ ರಂಗಕ್ಕೆ ಬಂದ ನಂತರ, ಭಕ್ತ ಕುಂಬಾರ ಮನೆ ಮೆಚ್ಚಿದ ಸೊಸೆ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಿಕ್ಕಚಿಕ್ಕ ಪಾತ್ರಗಳನ್ನೇ ಮಾಡುತ್ತಾ ಬಂದಿದ್ದ ಲೀಲಾವತಿ ಅವರು, ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾ ಮಾಂಗಲ್ಯ ಯೋಗ. ನಂತರ ಡಾ.ರಾಜ್ ಕುಮಾರ್ ಅವರೊಂದಿಗೆ ಮೊದಲ ಬಾರಿಗೆ ರಣಧೀರ ಕಂಠೀರವ ಸಿನಿಮಾದಲ್ಲಿ ನಟಿಸಿದರು. https://ainlivenews.com/good-news-for-tourists-going-to-nandibetta-hill-is-very-easy-from-now-on/ ಡಾ.ರಾಜ್ ಕುಮಾರ್ ಮತ್ತು ಲೀಲಾವತಿ ಅವರ ಜೋಡಿ ಆ ಕಾಲದಲ್ಲಿ ಫೇಮಸ್. ಡಾ.ರಾಜ್…
ಹುಬ್ಬಳ್ಳಿ: ಪತ್ನಿಗೆ ಚಾಕುವಿನಿಂದ ಇರಿದು ಕೊಲೆಗೈದು ಪತಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಹಳೇಹುಬ್ಬಳ್ಳಿಯ ಇಸ್ಲಾಂಪುರದಲ್ಲಿ ನಡೆದಿದೆ. ಸಾಹಿಕ್ತಾ ಬೇಪಾರಿ (25) ಕೊಲೆಯಾದ ಮಹಿಳೆ, ಪತಿ ಮಲ್ಲಿಕ್ ಬೇಪಾರಿ(28) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ‘ಹಳೇಹುಬ್ಬಳ್ಳಿ ನಿವಾಸಿಯಾಗಿದ್ದ ಸಾಹಿಕ್ತಾ ಅವರನ್ನು ಐದಾರು ವರ್ಷಗಳ ಹಿಂದೆ ಬೈಲಹೊಂಗಲ ವ್ಯಕ್ತಿಯೊಬ್ಬರ ಜೊತೆ ಮದುವೆ ಮಾಡಿಕೊಡಲಾಗಿತ್ತು. ಕೆಲ ತಿಂಗಳ ಹಿಂದೆ ಪತಿ ಮೃತಪಟ್ಟಿದ್ದರು. ಇಬ್ಬರು ಮಕ್ಕಳ ಜೊತೆ ಅವರು ತವರಿಗೆ ಬಂದು ವಾಸಿಸುತ್ತಿದ್ದರು. ಕುಟುಂಬದವರು ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಮಲ್ಲಿಕ್ ಬೇಪಾರಿ ಜೊತೆ ಎರಡನೇ ಮದುವೆ ಮಾಡಿಸಿದ್ದರು. ಪತಿ ಸರಿಯಾಗಿ ಕೆಲಸಕ್ಕೆ ಹೋಗುತ್ತಿಲ್ಲ ಎಂದು ಇಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು. ಶುಕ್ರವಾರ ಬೆಳಿಗ್ಗೆ ಅದೇ ವಿಷಯಕ್ಕೆ ಮತ್ತೆ ಜಗಳವಾಗಿದ್ದು, ಮಲ್ಲಿಕ್ ಕೋಪದಿಂದ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ನಂತರ ಅವರು ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.ಕಸಬಾ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಹುಬ್ಬಳ್ಳಿ: ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚೆಳಿಗಾಲ ಅಧಿವೇಶನದಲ್ಲಿ ಭಾಗಿಯಾಗಿ ಬರಗಾಲದ ಕುರಿತು ಮಾತನಾಡಿದ ಕುಂದಗೋಳ ಕ್ಷೇತ್ರದ ಶಾಸಕ ಎಮ್.ಆರ್.ಪಾಟೀಲ್ ರೈತರ ಸಮಸ್ಯೆಗಳನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಕಂಡು ಕಾಣದಂತ ಬರಗಾಲ ಈ ವರ್ಷ ಬಂದಿದೆ. ರೈತರು ತಮ್ಮ ಜಾನುವಾರುಗಳನ್ನ ಸಾಕುವುದು ಕಷ್ಟಕರವಾಗಿದೆ. ಇಂತಹ ಸಮಯದಲ್ಲಿ ಸರ್ಕಾರ ಮೇವು ಬ್ಯಾಂಕ್‌ಗಳನ್ನ ಓಪನ್ ಮಾಡಬೇಕಾಗಿತ್ರು. ಇಲ್ಲಿಯವರೆಗೂ ಸರ್ಕಾರ ಮೇವು ಬ್ಯಾಂಕ್ ಓಪನ್ ಮಾಡಿಲ್ಲ. ಇದರಿಂದಾಗಿ ರೈತ ಸಮುದಾಯ ಸಂಕಷ್ಟದಲ್ಲಿ ಸಿಲುಕೊಂಡಿದ್ದಾನೆ. ತಕ್ಷಣ ಮೇವು ಬ್ಯಾಂಕ್‌ಗಳನ್ನ ಓಪನ್ ಮಾಡಿ, ಉಚಿತವಾಗಿ ಮೇವು ಗಳನ್ನ ನೀಡಬೇಕು. ಅಲ್ಲದೇ ಕುಂದಗೋಳ ಮತ ಕ್ಷೇತ್ರದಲ್ಲಿ ಎರಡೂ ತಿಂಗಳ ಅವಧಿಯಲ್ಲಿ ನಾಲ್ಕು ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಮ್ಮ ಕ್ಷೇತ್ರ ಒಣ ಬೇಸಾಯದಿಂದ ಕೂಡಿದೆ. ಮಳೆ ಆಧಾರಿತ ವ್ಯವಸಾಯ ಮಾಡಬೇಕಿದೆ. ಕೆಲವು ಕಡೆ ಬೋರ್‌ವೇಲ್‌ಗಳಿದ್ದರು ಅದಕ್ಕೆ ಸರಿಯಾದ ವಿದ್ಯುತ್ ಕೊಡಲು ಸರ್ಕಾರದಿಂದ ಆಗುತ್ತಿಲ್ಲ. ಇಂತಹ ಸಮಯದಲ್ಲಿ ರಾತ್ರಿ ವೇಳೆ ತ್ರೀಪೇಸ್ ವಿದ್ಯುತ್ ನೀಡಲಾಗುತ್ತಿದೆ. ಇದರಿಂದಾಗಿ ರೈತರಿಗೆ ಹಾವು ಕಡಿದು ಸಾವನ್ನಪ್ಪುವ ಘಟನೆಗಳು ಹೆಚ್ಚುತ್ತಿವೆ.…
ಬಳ್ಳಾರಿ : ಮೈನಿಂಗ್ ಕಂಪನಿ ಅಭಿವೃದ್ಧಿಗಾಗಿ ಜಮೀನು ನೀಡಲಿಲ್ಲವೆಂದು ಬಿತ್ತನೆ ಮಾಡಿದ ಹೊಲದಲ್ಲಿ ರಾತ್ರೋರಾತ್ರಿ ಖಾಸಗಿ ಕಂಪನಿ ಸಿಬ್ಬಂದಿಗಳು ಜೆಸಿಬಿ ತಂದು ಬೆಳೆ ನಾಶ ಮಾಡಿ ಅಟ್ಟಹಾಸ ಮೇರೆದಿರುವಂತಹ ಘಟನೆ ಸಂಡೂರು ತಾಲೂಕಿನ ರಣಜಿತ್ ಪುರ ಗ್ರಾಮದಲ್ಲಿ ನಡೆದಿದೆ. ಸಾವಿರಾರು ರೂ. ಖರ್ಚು ಮಾಡಿ ಬಿತ್ತನೆ ಮಾಡಿದ ಬೆಳೆ ನಾಶ ಕಂಡು ಅನ್ನದಾತರು ಕಣ್ಣಿರು ಹಾಕಿದ್ದಾರೆ. ಕಾಡಪ್ಪ ಮತ್ತು ಪರಮೇಶ್ವರಪ್ಪ ಸೇರಿದಂತೆ ಇತರೆ ರೈತರ ಬೆಳೆನಾಶ ಮಾಡಲಾಗಿದೆ.ಕಷ್ಟಪಟ್ಟು ಬಿತ್ತಿದ ಈರುಳ್ಳಿ, ಮೆಕ್ಕೆ ಜೋಳ ಸೇರಿದಂತೆ ಕೃಷಿ ಪರಿಕಗಳ ನಾಶ ಮಾಡಿದ್ದಾರೆಂದು ಆರೋಪ ಮಾಡಲಾಗಿದೆ. ಸಂಡೂರಿನ ಖಾಸಗಿ ಕಂಪನಿಯವರು (ಆರ್‌ಐಪಿಎಲ್) ತಮ್ಮ ಮೈನಿಂಗ್ ಕಂಪನಿ ಅಭಿವೃದ್ಧಿಗಾಗಿ ಜಮೀನು ತೆಗೆದುಕೊಳ್ಳಲು ಪಯತ್ನ ನಡೆಸಿದ್ದಾರೆ. ಭೂಮಿ ನೀಡುವುದಿಲ್ಲ ಎಂದು ಹೇಳಿದ್ದರು ಕೆಐಡಿಬಿ ಮೂಲಕ ಖಾಸಗಿ ಕಂಪನಿ ಒತ್ತಡ ಹಾಕುತ್ತಿದೆ. ಆದರೆ ರೈತರು ಮಾತ್ರ ಭೂಮಿ ನೀಡುತ್ತಿಲ್ಲ. ಈ ಬಗ್ಗೆ ಧಾರವಾಡ ಹೈಕೋರ್ಟ್ನಲ್ಲಿ ವ್ಯಾಜ್ಯ ನಡೆಯುತ್ತಿದೆ. ಈ ಮಧ್ಯೆ ರಾತ್ರೋರಾತ್ರಿ ಕಂಪನಿಯವರು ಜಮೀನಿನಲ್ಲಿ ಬೆಳೆದ ಈರುಳ್ಳಿ, ಮೆಕ್ಕೆ ಜೋಳ ಸೇರಿದಂತೆ…
ಬೆಂಗಳೂರು: ಕನ್ನಡ ಚಿತ್ರರಂಗದ ಶ್ರೇಷ್ಟ ನಟಿಯರಲ್ಲಿ ಒಬ್ಬರು, ಬಹುಭಾಷಾ ಕಲಾವಿದರಾದ ಲೀಲಾವತಿ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ಕಂಬನಿ ಮಿಡಿದಿದ್ದಾರೆ. ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು; ಕನ್ನಡ ಚಿತ್ರರಂಗದ ಶ್ರೇಷ್ಠ ನಟಿಯರಲ್ಲಿ ಒಬ್ಬರು, ಬಹುಭಾಷಾ ಕಲಾವಿದರಾದ ಲೀಲಾವತಿ ಅವರ ನಿಧನದ ವಾರ್ತೆ ಕೇಳಿ ಬಹಳ ನೋವುಂಟಾಯಿತು. ನಾಯಕಿಯಾಗಿ ಮಾತ್ರವಲ್ಲದೆ, ಪೋಷಕ ಪಾತ್ರಗಳಿಗೂ ಜೀವ ತುಂಬಿ ಬೆಳ್ಳಿತೆರೆಯ ಮೇಲೆ ಅವುಗಳ ಹೆಜ್ಜೆಗುರುತುಗಳು ಮೂಡುವಂತೆ ಮಾಡಿದವರು ಅವರು. ಅಮ್ಮ, ಅಕ್ಕ, ಅತ್ತೆ ಸೇರಿ ಅನೇಕ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ನಟಿಸುತ್ತಿದ್ದರು ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಭಕ್ತ ಕುಂಬಾರ, ವೀರ ಕೇಸರಿ, ಭಾಗ್ಯದೇವತೆ, ಸೋತು ಗೆದ್ದವಳು, https://ainlivenews.com/good-news-for-tourists-going-to-nandibetta-hill-is-very-easy-from-now-on/ ನಂದಾದೀಪ, ವಿಧಿ ವಿಲಾಸ, ಸಂತ ತುಕಾರಾಂ, ರಣಧೀರ ಕಂಠೀರವ ಸೇರಿ ಅವರು ನಟಿಸಿದ್ದ ಅನೇಕ ಚಿತ್ರಗಳು ಕನ್ನಡಿಗರ ಮನೆ ಮನಗಳನ್ನು ತುಂಬಿರುತ್ತವೆ ಎಂದಿರುವ ಅವರು; ಲೀಲಾವತಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ…
ಬಿಗ್ ಬಾಸ್ ಮನೆ (Bigg Boss Kannada 10) ಇದೀಗ ಅಲ್ಲೋಲ ಕಲ್ಲೋಲ ಆಗಿದೆ. ಕಾರ್ತಿಕ್ ಮತ್ತು ವಿನಯ್ ಜಟಾಪಟಿಗೆ ಸ್ಪರ್ಧಿಗಳು ಸುಸ್ತಾಗಿದ್ದಾರೆ. ಕಾರ್ತಿಕ್ ಕಡೆಯಿಂದ ಚಪ್ಪಲಿ ಏಟು ಬಿದ್ದಿದೆ ಅಂತ ವಿನಯ್ ಪರ ನಮ್ರತಾ ಗುಡುಗಿದ್ದಾರೆ. ಈ ವೇಳೆ, ಎದುರಾಳಿ ತಂಡದ ಸಂಗೀತಾ ಮೇಲೆ ನಮ್ರತಾ (Namratha Gowda) ತಿರುಗಿಬಿದ್ದಿದ್ದಾರೆ. ಅವಳು ಯಾವ ಸೀಮೆ ರಾಣಿ ಎಂದು ನಮ್ರತಾ ಕಿಡಿಕಾರಿದ್ದಾರೆ. ವಿನಯ್ ರಾಕ್ಷಸನಾದ್ಮೇಲೆ ಇಬ್ಬರ ನಡುವಿನ ಜಗಳ ಬೇರೆಯದ್ದೇ ಹಂತ ತಲುಪಿದೆ. ಕಾರ್ತಿಕ್ ಮುಖಕ್ಕೆ ಚಪಾತಿ ಹಿಟ್ಟಿನಿಂದ ವಿನಯ್ ಜೋರಾಗಿ ಬೀಸಿದರು. ಇದು ದೈಹಿಕ ದೌರ್ಜನ್ಯ ಅಂತ ಕಾರ್ತಿಕ್ ಹೇಳುತ್ತಿದ್ದರೂ, ವಿನಯ್ ನಿಲ್ಲಿಸಲಿಲ್ಲ. ಸಿಟ್ಟಿನಿಂದ ಕಾರ್ತಿಕ್ ಚಪ್ಪಲಿಯನ್ನ ನೆಲಕ್ಕೆ ಜೋರಾಗಿ ಬೀಸಿದರು. ಆಗ ಚಪ್ಪಲಿ ಬೌನ್ಸ್ ಆಗಿ ವಿನಯ್‌ಗೆ ತಾಕಿತು. ಪರಿಣಾಮ, ವಿನಯ್ ದೊಡ್ಡ ರಂಪ ಮಾಡಿದರು. https://ainlivenews.com/good-news-for-tourists-going-to-nandibetta-hill-is-very-easy-from-now-on/ ನನಗೆ ಚಪ್ಪಲಿಯಲ್ಲಿ ಹೊಡಿತೀಯಾ? ಇವನ ಹತ್ತಿರ ಚಪ್ಪಲಿಯಲ್ಲಿ ಹೊಡೆಸಿಕೊಂಡು ನಾನಿಲ್ಲಿ ಇರಬೇಕಾ? ನಾನಿಲ್ಲಿ ಇರೋಲ್ಲ. ಆಚೆ ಹೋಗ್ಬೇಕು ಎಂದು ವಿನಯ್…
ಸೂರತ್: ಇಂಡಿಯಾ ಕ್ಯಾಪಿಟಲ್ಸ್ ಹಾಗೂ ಗುಜರಾತ್ ಜೈಂಟ್ಸ್ ನಡುವಿನ ಎಲಿಮಿನೇಟರ್ ಪಂದ್ಯದ ವೇಳೆ ಭಾರತದ ಮಾಜಿ ಆಟಗಾರ ಗೌತಮ್ ಗಂಭೀರ್ (Gautam Gambhir) ಹಾಗೂ ವೇಗದ ಬೌಲರ್ ಶ್ರೀಶಾಂತ್ (Sreesanth) ನಡುವಿನ ಗಲಾಟೆ ವಿಚಾರವಾಗಿ ಶ್ರೀಶಾಂತ್‍ಗೆ ನೋಟಿಸ್‍ನ ಬಿಸಿ ತಟ್ಟಿದೆ. ಗೌತಮ್ ಗಂಭೀರ್ ಫಿಕ್ಸರ್ ಎಂದು ಕರೆದಿದ್ದಾರೆ ಎಂದು ಶ್ರೀಶಾಂತ್ ಆರೋಪಿಸಿದ್ದರು. ಈಗ ಅವರಿಗೆ ಲೆಜೆಂಡ್ಸ್ ಲೀಗ್ ಕ್ರಿಕೆಟ್ (Legends League Cricket) ಕಮಿಷನರ್ ಲೀಗಲ್ ನೋಟಿಸ್ ನೀಡಿದ್ದಾರೆ. ಟಿ20 ಟೂರ್ನಿಯಲ್ಲಿ ಆಡುವ ವೇಳೆ ಒಪ್ಪಂದ ಉಲ್ಲಂಘಿಸಿದ್ದಕ್ಕಾಗಿ ಶ್ರೀಶಾಂತ್ ತಪ್ಪಿತಸ್ಥರು ಎಂದು ನೋಟಿಸ್‍ನಲ್ಲಿ ಹೇಳಲಾಗಿದೆ. https://ainlivenews.com/sunny-deol-drunken-bollywood-actor-reveals-rumors/ ಆಟಗಾರನನ್ನು ಟೀಕಿಸುವ ವೀಡಿಯೊಗಳನ್ನು ತೆಗೆದುಹಾಕಿದರೆ ಮಾತ್ರ ಅವರೊಂದಿಗೆ ಮಾತುಕತೆ ಮಾಡಲಾಗುವುದು ಎಂದು ಹೇಳಲಾಗಿದೆ. ಇಬ್ಬರ ಗಲಾಟೆ ವಿಚಾರವಾಗಿ ಅಂಪೈರ್‌ಗಳು ತಮ್ಮ ವರದಿಯನ್ನು ಕಳಿಸಿದ್ದು, ಶ್ರೀಶಾಂತ್ ಅವರನ್ನು ಫಿಕ್ಸರ್ ಎಂದು ಕರೆದ ಬಗ್ಗೆ ಅದರಲ್ಲಿ ಮಾಹಿತಿ ಇಲ್ಲ. ಶ್ರೀಶಾಂತ್ ಅವರು ಒಂದೆರಡು ವೀಡಿಯೋಗಳನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಗಂಭೀರ್ ಅವರ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಈ ಇಬ್ಬರ…
ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ (Leelavathi) ನಿಧನಕ್ಕೆ ಸಿಎಂ ಸಿದ್ದರಾಮಯ್ಯ (Cm Siddaramaiah) ಅವರು ಸಂತಾಪ ಸೂಚಿಸಿದ್ದಾರೆ. ಇಂದು ಲೋ ಬಿ ಪಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಿಸಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಲೀಲಾವತಿ ವಿಧಿವಶರಾಗಿದ್ದಾರೆ. ಲೀಲಾವತಿ ಅವರ ನಿಧನಕ್ಕೆ ಸಿಎಂ ಸಂತಾಪ ವ್ಯಕ್ತಪಡಿಸಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ಅಗಲಿಕೆಯ ಸುದ್ದಿ ನೋವುಂಟು ಮಾಡಿದೆ. ಕಳೆದ ವಾರವಷ್ಟೇ ಅವರು ಅನಾರೋಗ್ಯಕ್ಕೀಡಾದ ವಿಚಾರ ತಿಳಿದು ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಪುತ್ರ ವಿನೋದ್ ರಾಜ್ ಕುಮಾರ್ ಅವರೊಂದಿಗೆ ಮಾತನಾಡಿದ್ದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸಿಎಂ ಸಿದ್ದರಾಮಯ್ಯ ಬರೆದುಕೊಂಡಿದ್ದಾರೆ. https://twitter.com/CMofKarnataka/status/1733106836243615864?ref_src=twsrc%5Etfw%7Ctwcamp%5Etweetembed%7Ctwterm%5E1733106307954282835%7Ctwgr%5E5c2226957c8c1f7e6ec34c475a034b536e95dd04%7Ctwcon%5Es1_&ref_url=https%3A%2F%2Fpublictv.in%2Fcm-siddaramaiad-reacts-about-actress-leelavathi-death%2F ಹಲವು ದಶಕಗಳ ಕಾಲ ತಮ್ಮ ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಲೀಲಾವತಿ ಅವರು ಗುಣಮುಖರಾಗಿ ಇನ್ನಷ್ಟು ಕಾಲ ನಮ್ಮ ನಡುವೆ ಇರುತ್ತಾರೆಂಬ ನನ್ನ ನಂಬಿಕೆ ಹುಸಿಯಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬ ವರ್ಗಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ಸಿಗಲಿ ಎಂದು…
ನವದೆಹಲಿ: ಸಂಸತ್’ನಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದಿರುವ ಆರೋಪಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್‌ನ (TMC) ಸಂಸದೆ ಮಹುವಾ ಮೊಯಿತ್ರಾ ಅವರನ್ನು ಸದನದಿಂದ ಉಚ್ಚಾಟಿಸಲಾಗಿದೆ. ನೀತಿ ಸಮಿತಿಯ ವರದಿಯನ್ನು ಇಂದು ಲೋಕಸಭೆಯಲ್ಲಿ ಮಂಡಿಸಲಾಯಿತು. ವರದಿಯನ್ನು ಆಧರಿಸಿ ಲೋಕಸಭೆಯಿಂದ ಮಹುವಾ ಮೊಯಿತ್ರಾ (Mahua Moitra) ಅವರು ಉಚ್ಚಾಟನೆಗೊಂಡಿದ್ದಾರೆ. ಮೊಯಿತ್ರಾ ಅವರು ಸಂಸತ್ತಿನಲ್ಲಿ ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸುವ ಪ್ರಶ್ನೆಗಳನ್ನು ಕೇಳುವ ಸಲುವಾಗಿ ಉದ್ಯಮಿ ದರ್ಶನ್ ಹಿರಾನಂದನಿ ಅವರಿಂದ 2 ಕೋಟಿ ರೂ. ನಗದು ಮತ್ತು ಐಷಾರಾಮಿ ಉಡುಗೊರೆ ವಸ್ತುಗಳು ಸೇರಿದಂತೆ ಲಂಚ ಪಡೆದ ಆರೋಪ ಹೊತ್ತಿದ್ದರು. https://ainlivenews.com/sunny-deol-drunken-bollywood-actor-reveals-rumors/ ಮಹುವಾ ಅವರನ್ನು ಲೋಕಸಭೆಯಿಂದ ಉಚ್ಚಾಟಿಸುವಂತೆ ಶಿಫಾರಸು ಮಾಡಿರುವ ವರದಿಯನ್ನು ಬಿಜೆಪಿ ಸಂಸದ ವಿನೋದ್ ಕುಮಾರ್ ಸೋನಕರ್ ನೇತೃತ್ವದ ನೀತಿ ಸಮಿತಿಯು ನ.9 ರಂದು ಅಂಗೀಕರಿಸಿತ್ತು. ಮಹುವಾ ಅವರನ್ನು ಉಚ್ಚಾಟನೆ ಮಾಡಬೇಕಾದರೆ ಈ ಬಗ್ಗೆ ಸರ್ಕಾರ ನಿಲುವಳಿ ಮಂಡಿಸಿ, ಸದನದ ಅಂಗೀಕಾರ ಪಡೆಯಬೇಕಿತ್ತು. ಪ್ರಕರಣ ಸಂಬಂಧ ಶುಕ್ರವಾರ ಬಿರುಸಿನ ಚರ್ಚೆ ಮತ್ತು ಧ್ವನಿ ಮತದ ನಂತರ ಸ್ಪೀಕರ್ ಓಂ…