Author: AIN Author

ಬೆಂಗಳೂರು:- ಬಿಜೆಪಿ ನಾಯಕರು ಬರಗಾಲದ ಬಗ್ಗೆ ಸುಮ್ಮನೆ ಮಾತನಾಡುವ ಬದಲು ಕೇಂದ್ರದಿಂದ ಪರಿಹಾರ ತರಲಿ. ಜತೆಗೆ ನರೇಗಾ ಯೋಜನೆಯಡಿ ಮಾನವ ದಿನಗಳನ್ನು 150ಕ್ಕೆ ಹೆಚ್ಚಳ ಮಾಡಿಸಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರಗಾಲದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ನಾಯಕರು ರಾಜ್ಯ ಬಿಟ್ಟು ತೆಲಂಗಾಣಕ್ಕೆ ಹೋಗಿದ್ದಾರೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದರು. ಬರಗಾಲ ಬಂದಿದೆ. ವಿಪಕ್ಷ ನಾಯಕರು ಕೂಡ ಬರ ಅಧ್ಯಯನಕ್ಕಾಗಿ ಓಡಾಡಿದ್ದಾರೆ. ಅವರು ಕೇಂದ್ರದಿಂದ ಪರಿಹಾರ ಕೊಡಿಸಲಿ. ನರೇಗಾದಡಿ 100 ಕೆಲಸದ ದಿನಗಳನ್ನು 150 ದಿನಗಳಿಗೆ ವಿಸ್ತರಿಸಬಹುದು. ಇದನ್ನು ಕೇಂದ್ರದಿಂದ ಘೋಷಣೆ ಮಾಡಿಸುತ್ತಿಲ್ಲ ಯಾಕೆ? ಕೇಂದ್ರ ಸರ್ಕಾರದಿಂದ ಪರಿಹಾರ ಹಣ ಕೊಡಿಸುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದರು. ನಮ್ಮ ಸರ್ಕಾರದಲ್ಲಿ ಕಂದಾಯ ಹಾಗೂ ಕೃಷಿ ಸಚಿವರು ಎಲ್ಲರಿಗಿಂತ ಮುಂಚಿತವಾಗಿ ರಾಜ್ಯದ ಬರ ಪರಿಸ್ಥಿತಿ ಅಧ್ಯಯನ ಮಾಡಿ ಕೇಂದ್ರಕ್ಕೆ ವರದಿ ಸಲ್ಲಿಸಿದ್ದಾರೆ. ರಾಜ್ಯದಲ್ಲಿ 200ಕ್ಕೂ ಹೆಚ್ಚು ತಾಲೂಕುಗಳು ಬರಕ್ಕೆ ತುತ್ತಾಗಿದ್ದು, ಪರಿಹಾರ ಬೇಕು ಎಂದಿದ್ದಾರೆ. ಈವರೆಗೂ…

Read More

ಬೆಳಗಾವಿ:- ರಾಜಕಾರಣದಲ್ಲಿ ಒಬ್ಬರು ನಾಯಕರ ಪರ, ವಿರೋಧ ಇರ್ತಾರೆ ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರಾಜಕಾರಣದಲ್ಲಿ ಒಬ್ಬರು ನಾಯಕರ ಪರ, ವಿರೋಧ ಇರುತ್ತಾರೆ. ಒಬ್ಬರು ಆಯ್ಕೆಯಾದಾಗ ಹೀಗೆ ಹೇಳುತ್ತಾರೆ. ಹಾಗೇ ಕಾಂಗ್ರೆಸ್‌ನಲ್ಲೂ ಡಿಕೆಶಿ ಸಿದ್ದರಾಮಯ್ಯ, ಪರಮೇಶ್ವರ ಸಿದ್ದರಾಮಯ್ಯ ಪರ ವಿರೋಧ ಇದೆ. ಇವೆಲ್ಲವೂ ರಾಜಕಾರಣದಲ್ಲಿ ಕಾಮನ್ ಎಂದರು. ಸಭಾತ್ಯಾಗ ವಿಚಾರದಲ್ಲಿ ಹೊಂದಾಣಿಕೆ ಇಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯತ್ನಾಳ ಅವರು ನನ್ನ ಹತ್ತಿರ ಬಂದು ಹೇಳಿದರು. ಪ್ರತಿದಿನ ಧರಣಿ ಮಾಡಿದರೆ ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಚರ್ಚೆ ಆಗಲ್ಲ. ನೀವು ಸದನದ ಬಾವಿಗೆ ಇಳಿದರೆ ಚರ್ಚೆ ಆಗಲ್ಲ. ಇಲ್ಲಿಗೆ ಬಂದು ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಆಗಬೇಕು. ಉತ್ತರ ಕರ್ನಾಟಕದ ಬಗ್ಗೆ ನಾನು ಮಾತಾಡಬೇಕು. ಹೀಗಾಗಿ ಧರಣಿ ಬೇಡ ಎಂದು ಯತ್ನಾಳ ಹೇಳಿದರು. ನಾನು ಅದಕ್ಕೆ ಮುಂದಿರುವವರನ್ನು ಕರೆದು ಚರ್ಚೆ ಮಾಡಿದೆ. ಇದರಿಂದ ಹಿಂದಿರೋರು ಮುಂದಿರೋರರ ಮಧ್ಯೆ ಕಮ್ಯೂನಿಕೇಷನ್ಸ್ ಗ್ಯಾಪ್ ಆಗಿದೆ ಅಷ್ಟೇ ಎಂದು…

Read More

ನಟಿ ಲೀಲಾವತಿಯವರ 86 ವರ್ಷಗಳ ಬದುಕಿನ ಪಯಣ ಸದಾ ನೆನಪಿನಂಗಳದಲ್ಲಿ ಹಚ್ಚಹಸಿರಾಗಿ ಉಳಿಯುವಂಥದ್ದು. ಸಿನಿಮಾರಂಗ ಕಂಡ ಶ್ರೇಷ್ಠ ಪ್ರತಿಭೆ ಇನ್ನೂ ನೆನಪು ಮಾತ್ರ. ಮೂರು ತಲೆಮಾರುಗಳಿಗೆ ಚಿರಪರಿಚಿತ ನಾಯಕಿ ಲೀಲಾವತಿ. ನಾಯಕಿಗೆ ಹೇಳಿಸಿದಂತೇ ಇದ್ದ ಸುಂದರ ಮುಖ, ಅರಳು ಕಣ್ಣುಗಳು, ತಿದ್ದಿತೀಡಿದಂಥ ಹುಬ್ಬು, ಮೂಗು, ಮೈಮಾಟ ಜತೆಗೆ ಪ್ರಬುದ್ಧ ಅಭಿನಯದೊಂದಿಗೆ ಚಿತ್ರರಂಗದ ಪ್ರವೇಶ. ನಾಯಕಿಯಾಗಿ ಛಾಪು ಮೂಡಿಸಿದ ಲೀಲಾವತಿ ಪೋಷಕ ನಟಿಯಾಗಿಯೂ ಎಲ್ಲರ ಪ್ರೀತಿಗಳಿಸಿಕೊಂಡವರು. ಭಾವಪೂರ್ಣ ಅಭಿನಯಕ್ಕೆ ಹೆಸರಾದ ಲೀಲಾವತಿಯವರು ಅಭಿನಯ ಕ್ಷೇತ್ರಕ್ಕೆ ಬರಲೇಬೇಕೆಂಬ ಹಂಬಲದಿಂದೇನೂ ಬಂದವರಲ್ಲ. ಅವರ ಜೀವನ ತುಂಬ ದುಸ್ತರವಾಗಿತ್ತು. ಚಿಕ್ಕಂದಿನಲ್ಲಿ ತುಂಬ ಬಡತನವನ್ನು ಕಂಡವರು. ಯಾರೋ, ‘ಸಿನಿಮಾದಲ್ಲಿ ತುಂಬ ದುಡ್ಡು ಸಿಗುತ್ತದೆ’ ಎಂದಾಗ, ಅದನ್ನು ಕೇಳಿದ ಲೀಲಾವತಿಯವರು ‘ಹೌದಾ’ ಎಂದು ಕಣ್ಣರಳಿಸಿದ್ದರಂತೆ. ಹಾಗಂತ ಸ್ವತಃ ಲೀಲಾವತಿಯವರೇ ಹೇಳಿಕೊಂಡಿದ್ದಾರೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯವರಾದ ಲೀಲಾವತಿ ಬಡತನದ ಕಾರಣದಿಂದಲೇ ಸಿನಿಮಾ ಕ್ಷೇತ್ರಕ್ಕೆ ಬಂದವರು. ರಂಗಭೂಮಿ ಹಾಗೂ ಚಲನಚಿತ್ರರಂಗದಲ್ಲಿ ಅಭಿನಯಿಸಬೇಕೆಂಬ ಅದಮ್ಯ ಹಂಬಲದಿಂದ ಅವರು ಹದಿಹರೆಯದಲ್ಲೇ ಮೈಸೂರಿಗೆ ಬಂದರು.…

Read More

ಬೆಂಗಳೂರು:- ಹಿರಿಯ ನಟಿ ಲೀಲಾವತಿ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ X ಮಾಡಿರುವ ಅವರು, ಕನ್ನಡ ಚಿತ್ರರಂಗದ ಹೆಸರಾಂತ ನಟಿ ಲೀಲಾವತಿ ಅವರ ನಿಧನದ ಸುದ್ದಿ ಕೇಳಿ ದುಃಖವಾಯಿತು. ಸಿನಿಮಾದ ನೈಜ ಪ್ರತೀಕವಾದ ಅವರು ಹಲವಾರು ಚಲನಚಿತ್ರಗಳಲ್ಲಿ ತಮ್ಮ ಬಹುಮುಖ ನಟನೆಯೊಂದಿಗೆ ಬೆಳ್ಳಿ ಪರದೆಯನ್ನು ಅಲಂಕರಿಸಿದವರು. ಅವರ ವೈವಿಧ್ಯಮಯ ಪಾತ್ರಗಳು ಮತ್ತು ಅದ್ಭುತ ಪ್ರತಿಭೆಯನ್ನು ಸದಾ ಸ್ಮರಿಸಲಾಗುತ್ತದೆ ಮತ್ತು ಪ್ರಶಂಸಿಸಲಾಗುತ್ತದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ” ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ. ಇನ್ನೂ ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟಿ ಡಾ.ಲೀಲಾವತಿ ವಿಧಿವಶರಾಗಿದ್ದಾರೆ. ಇವರ ನಿಧನ ಇಡೀ ಸ್ಯಾಂಡಲ್​ವುಡ್​ಗೆ ಆಘಾತ ಉಂಟು ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ, ಅನೇಕ ರಾಜಕೀಯ ಗಣ್ಯರು, ಸಿನಿಮಾ ತಾರೆಯರು ಸೋಷಿಯಲ್​ ಮೀಡಿಯಾದ ಮೂಲಕ ಲೀಲಾವತಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ

Read More

ಸಧ್ಯದ ಪರಿಸ್ಥಿತಿಯಲ್ಲಿ ಹೆಚ್ಚು ಮಂದಿಗೆ ನಿದ್ದೆ ಬರದೇ ಮಾತ್ರೆಗಳ ಮೊರೆ ಹೋಗುತ್ತಾರೆ. ಇಂತಹ ಅಭ್ಯಾಸ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಇದೀಗ ನಾವು ಈಗ ಹೇಳುತ್ತಿರುವ ಸಲಹೆಯು ನಿಮಗೆ ಉತ್ತಮ ನಿದ್ರೆಯನ್ನು ನೀಡುವುದಲ್ಲದೆ ನಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಸಹ ಒದಗಿಸುತ್ತದೆ. ಇದು ನಮ್ಮನ್ನು ಆರೋಗ್ಯವಾಗಿರಿಸುತ್ತದೆ. 200 ಗ್ರಾಂ ಒಣಗಿದ ಖರ್ಜೂರವನ್ನು ತೆಗೆದುಕೊಂಡು ಅವುಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. 100 ಗ್ರಾಂ ಬಾದಾಮಿಯನ್ನು ತೆಗೆದುಕೊಂಡು ಅವುಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಒಂದು ಮಿಕ್ಸಿ ಜಾರ್ ನಲ್ಲಿ, ಕತ್ತರಿಸಿದ ಖರ್ಜೂರ, ಕತ್ತರಿಸಿದ ಬಾದಾಮಿ, 50 ಗ್ರಾಂ ಕುಂಬಳಕಾಯಿ ಬೀಜಗಳು, 25 ಗ್ರಾಂ ಗಸಗಸೆ ಬೀಜಗಳನ್ನು ಸೇರಿಸಿ ಮೃದುವಾದ ಪುಡಿ ಮಾಡಿ. ಈ ಪುಡಿಯನ್ನು ಸುಮಾರು ಇಪ್ಪತ್ತು ದಿನಗಳವರೆಗೆ ಸಂಗ್ರಹಿಸಬಹುದು. ನೀವು ಪ್ರತಿದಿನ ರಾತ್ರಿ ಮಲಗುವ ಮೊದಲು ಒಂದು ಲೋಟ ಬೆಚ್ಚಗಿನ ಹಾಲಿನಲ್ಲಿ ಒಂದು ಚಮಚ ಪುಡಿಯನ್ನು ತೆಗೆದುಕೊಂಡರೆ, ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಮತ್ತು ಉತ್ತಮ ರಾತ್ರಿ ನಿದ್ರೆ ಸಿಗುತ್ತದೆ. ಬಾದಾಮಿಯಲ್ಲಿರುವ ಮೆಲಟೋನಿನ್ ನಿದ್ರೆಗೆ ಸಹಾಯ…

Read More

ಸ್ಯಾಂಡಲ್ ವುಡ್ ನ ಖ್ಯಾತ ಹಿರಿಯ ನಟಿ ಲೀಲಾವತಿ ಅವರು, ಶುಕ್ರವಾರ ನಿಧನ ಹೊಂದಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಅಪಾರ ಅಭಿಮಾನಿಗಳನ್ನು ಹೊಂದಿರುವ ಲೀಲಾವತಿ ಅವರ ಅಂತಿಮ ದರ್ಶನಕ್ಕೆ ಕುಟುಂಬ ಹಾಗೂ ತಾಲ್ಲೂಕು ಆಡಳಿತ ವ್ಯವಸ್ಥೆ ಮಾಡಿದೆ. ನೆಲಮಂಗಲ ತಹಶೀಲ್ದಾರ್, ಜಿಲ್ಲಾ ಎಸ್​ಪಿ, ಐಜಿಪಿ ರವಿಕಾಂತೇಗೌಡ, ಜಿಲ್ಲಾಧಿಕಾರಿಗಳು ನೆಲಮಂಗಲಕ್ಕೆ ಧಾವಿಸಿದ್ದು, ಹಿರಿಯ ನಟಿಯ ಅಂತಿಮ ದರ್ಶನಕ್ಕೆ ಸಕಲ ವ್ಯವಸ್ಥೆಯ ಜವಾಬ್ದಾರಿ ಹೊತ್ತಿದ್ದಾರೆ. ಅಭಿಮಾನಿಗಳು ನೂಕು-ನುಗ್ಗಲು ಮಾಡಿಕೊಳ್ಳದೆ ಶಾಂತ ರೀತಿಯಲ್ಲಿ ಹಿರಿಯ ನಟಿಯ ಅಂತಿಮ ದರ್ಶನ ಮಾಡಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ ನೆಲಮಂಗಲದ ಜೂನಿಯರ್ ಕಾಲೇಜಿನ ಅಂಬೇಡ್ಕರ್ ಮೈದಾನದಲ್ಲಿ ವ್ಯವಸ್ಥೆ ಮಾಡಿದ್ದು, ಇಂದು ಮಧ್ಯಾಹ್ನದ ವರೆಗೆ ಲೀಲಾವತಿಯವರ ಅಂತಿಮ ದರ್ಶನ ಮಾಡಬಹುದುದಾಗಿದೆ. ಆ ಬಳಿಕ ಅಂತಿಮ ಸಂಸ್ಕಾರವನ್ನು ಸೋಲದೇವನಹಳ್ಳಿಯ ತೋಟದಲ್ಲಿ ಮಾಡಲಾಗುತ್ತದೆ. ಇನ್ನೂ ಹಿರಿಯ ನಟಿ ಲೀಲಾವತಿಯವರು ನಿನ್ನೆ ಸಂಜೆ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

Read More

ರಾಗಿಯಿಂದ ಮಾಡಿದ ಎಲ್ಲಾ ಆಹಾರಗಳು ದೇಹಕ್ಕೆ ಎಷ್ಟು ಒಳ್ಳೆಯದು ಎಂಬುದು ನಿಮಗೆ ತಿಳಿದಿರಬಹುದು. ಆದರೆ ಮಕ್ಕಳಿಗೂ ಇಷ್ಟವಾಗುವಂತೆ ಮತ್ತು ಬಾಯಿಗೂ ರುಚಿಕೊಡಲು, ರಾಗಿಯ ಜೊತೆ ಇನ್ನೊಂದಿಷ್ಟು ಪದಾರ್ಥಗಳನ್ನು ಸೇರಿಸಿಕೊಳ್ಳುವ ಮೂಲಕ ರಾಗಿ ರೊಟ್ಟಿ ಅಥವಾ ಫಿಂಗರ್ ಮಿಲ್ಲೆಟ್ ರೊಟ್ಟಿ ಮಾಡುವ ಸರಳ ವಿಧಾನ ಇಲ್ಲಿದೆ. ರಾಗಿಯಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ ಮತ್ತು ಫೈಬರ್ ಅಧಿಕವಾಗಿದೆ ಈ ರಾಗಿ ರೊಟ್ಟಿಯನ್ನು ತಯಾರಿಸುವುದು ಸುಲಭ. . ರಾಗಿ ರೊಟ್ಟಿ ಮಾಡಲು ಬೇಕಾಗುವ ಸಾಮಾಗ್ರಿಗಳು ರಾಗಿ ಹಿಟ್ಟು – 1 ಕಪ್ ಸೌತೆಕಾಯಿ – 1/2 ಕಪ್ ಕ್ಯಾರೆಟ್ – 1/2 ಕಪ್ ತೆಂಗಿನಕಾಯಿ – 1/4 ಕಪ್ ಶುಂಠಿ – 1 ಇಂಚು ಹೆಚ್ಚಿದ ಮೆಣಸಿನ ಕಾಯಿ – 1 ಸಣ್ಣಗೆ ಹೆಚ್ಚಿದ ಜೀರಿಗೆ – 1/2 ಚಮಚ ಸಬ್ಬಸಿಗೆ ಸೊಪ್ಪು ಸಣ್ಣಗೆ ಹೆಚ್ಚಿದ ಈರುಳ್ಳಿ – 1 ಉಪ್ಪು ರುಚಿಗೆ ತಕ್ಕಷ್ಟು ನೀರು – 1/2 ಕಪ್ ಈ ಎಲ್ಲಾ ಸಾಮಾಗ್ರಿಗಳನ್ನು ಒಂದು ಬೌಲ್​​​ನಲ್ಲಿ…

Read More

ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿಯಿಂದಾಗಿ, ತಲೆಹೊಟ್ಟು ಮತ್ತು ಕೂದಲು ಉದುರುವಿಕೆ ಸಮಸ್ಯೆಯಂತಹ ಅನೇಕ ರೀತಿಯ ಸಮಸ್ಯೆಗಳಿವೆ. ಈ ಸಮಸ್ಯೆಗಳು ಬಂದಾಗ ನಮ್ಮಲ್ಲಿ ಅನೇಕರು ಭಯಭೀತರಾಗುತ್ತಾರೆ ಮತ್ತು ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಉತ್ಪನ್ನಗಳನ್ನು ಬಳಸಿಕೊಂಡು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ಆದಾಗ್ಯೂ ಫಲಿತಾಂಶವು ಹೆಚ್ಚು ಗೋಚರಿಸುವುದಿಲ್ಲ. ಇದಲ್ಲದೆ ನಮ್ಮ ಅಡುಗೆಮನೆಯಲ್ಲಿ ಮೆಂತ್ಯ ಬೀಜಗಳನ್ನು ಬಳಸುವ ಮೂಲಕ ಕೂದಲಿನ ಸಮಸ್ಯೆಗಳನ್ನು ಬಹಳ ಸುಲಭವಾಗಿ ಕಡಿಮೆ ಮಾಡಬಹುದು. ನೀವು ಈ ರೀತಿಯ ಮೆಂತ್ಯ ಬೀಜಗಳನ್ನು ಬಳಸಿದರೆ ನೀವು ಬಹಳ ಕಡಿಮೆ ವೆಚ್ಚದಲ್ಲಿ ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ಕೂದಲಿನ ಎಲ್ಲಾ ರೀತಿಯ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಲು ಮೆಂತ್ಯ ಬೀಜಗಳು ತುಂಬಾ ಸಹಾಯಕವಾಗಿವೆ. ಮೆಂತ್ಯ ಬೀಜಗಳಲ್ಲಿರುವ ಪೋಷಕಾಂಶಗಳು ತಲೆಹೊಟ್ಟು, ಒಣ ಕೂದಲು, ತುದಿಗಳು ಹರಿದುಹೋಗುವುದು ಮುಂತಾದ ಅನೇಕ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಮೆಂತ್ಯ ಬೀಜಗಳಲ್ಲಿನ ಪ್ರೋಟೀನ್ ಸಮೃದ್ಧತೆಯು ಕೂದಲು ಉದುರುವ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ ಮತ್ತು ಕೂದಲು ದಪ್ಪವಾಗಿ ಬೆಳೆಯುವಂತೆ ಮಾಡುತ್ತದೆ. ಮೂರು ಚಮಚ ಮೆಂತ್ಯ ಬೀಜಗಳಿಗೆ ಮೂರು…

Read More

ಉತ್ಪತ್ತಿ ಏಕಾದಶಿ ಸೂರ್ಯೋದಯ: 06.30 AM, ಸೂರ್ಯಾಸ್ತ : 05.53 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಕಾರ್ತೀಕ ಮಾಸ, ಕೃಷ್ಣ ಪಕ್ಷ, ದಕ್ಷಿಣಾಯಣ ಶರತ್ ಋತು, ತಿಥಿ: ಇವತ್ತು ಏಕಾದಶಿ 06:31 AM ತನಕ ನಂತರ ದ್ವಾದಶಿ ನಕ್ಷತ್ರ: ಇವತ್ತು ಚಿತ್ತ 10:43 AM ತನಕ ನಂತರ ಸ್ವಾತಿ ಯೋಗ: ಇವತ್ತು ಸೌಭಾಗ್ಯ 12:05 AM ತನಕ ನಂತರ ಶೋಭಾನ 11:37 PM ತನಕ ನಂತರ ಅತಿಗಂಡ ಕರಣ: ಇವತ್ತು ಬಾಲವ 06:31 AM ತನಕ ನಂತರ ಕೌಲವ 06:57 PM ತನಕ ನಂತರ ತೈತಲೆ ಯಮಗಂಡ: 09:00 ನಿಂದ 10:30 ವರೆಗೂ ಗುಳಿಕ ಕಾಲ: 01:30 ನಿಂದ 03:00 ವರೆಗೂ ಅಮೃತಕಾಲ: 07:00 ರಿಂದ 07:30 ವರೆಗೆ ಅಭಿಜಿತ್ ಮುಹುರ್ತ:ಇಲ್ಲ ಬೆಳಗ್ಗೆ.11:46 ನಿಂದ ಮ.12:30 ವರೆಗೂ ಮೇಷ ರಾಶಿ ಬಹುದಿನದ ಕಾನೂನು ಹೋರಾಟ ಜಯಕಾಣುವಿರಿ,ಪತ್ರಿಕೋದ್ಯಮಿಗಳು ಹೊಸ ಕೆಲಸ ವಹಿಸುಕೊಳ್ಳುವಿರಿ,ಇನ್ನು ಸ್ವಲ್ಪ ಶ್ರಮವಹಿಸಿದರೆ ಖಂಡಿತ ಸರಕಾರಿ ಉದ್ಯೋಗ…

Read More

ನವದೆಹಲಿ: ಅಕ್ರಮ ಆಸ್ತಿಗಳಿಕೆ ಆರೋಪ ಎದುರಿಸುತ್ತಿರುವ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ತಮ್ಮ ವಿರುದ್ಧ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಿರಾಕರಿಸಿದೆ. ಅರ್ಜಿ ವಿಚಾರಣೆ ನಡೆಸಿದ ನ್ಯಾ.ಸಂಜೀವ್ ಖನ್ನಾ ನೇತೃತ್ವದ ದ್ವಿ ಸದಸ್ಯ ಪೀಠ ಹೈಕೋರ್ಟ್ ಆದೇಶದಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಹೇಳಿದೆ. ಜಾರಿ ನಿರ್ದೇಶನಾಲಯ (ಇಡಿ) ನೀಡಿದ್ದ ದಾಖಲೆಗಳ ಆಧಾರದ ಮೇಲೆ 2022 ರಲ್ಲಿ ಜಮೀರ್ ಅಹ್ಮದ್ ಖಾನ್ ನಿವಾಸದ ಮೇಲೆ ಎಸಿಬಿ (ACB) ದಾಳಿ ಮಾಡಿತ್ತು. ಬಳಿಕ ಜಮೀರ್ ಅಹ್ಮದ್ ಖಾನ್ ಆದಾಯದಲ್ಲಿ 2000% ಪಟ್ಟು ಏರಿಕೆಯಾಗಿದೆ ಎಂದು ಆರೋಪಿಸಲಾಗಿತ್ತು. ಆದಾಯ ಏರಿಕೆ ಬಗ್ಗೆ ಸದ್ಯ ಲೋಕಾಯುಕ್ತ ತನಿಖೆ ನಡೆಸುತ್ತಿದೆ. https://ainlivenews.com/sunny-deol-drunken-bollywood-actor-reveals-rumors/ ಲೋಕಾಯುಕ್ತ (Lokayukta) ನಡೆಸುತ್ತಿರುವ ತನಿಖೆಗೆ ಕೋರಿ ಮೊದಲು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ ಅದನ್ನು ವಜಾ ಮಾಡಿತ್ತು. ಬಳಿಕ ಸುಪ್ರೀಂಕೋರ್ಟ್‍ಗೆ (Supreme Court) ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ…

Read More