Author: AIN Author

ಚಂಡೀಗಢ: ಪ್ರೀತಿಗೆ ಗಡಿಯಿಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ತಾಯ್ನಾಡು ತೊರೆದು ಪ್ರೇಮಿಯನ್ನು ಸೇರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈಚೆಗೆ ಪಾಕಿಸ್ತಾನದಿಂದ ಭಾರತಕ್ಕೆ ಪ್ರೇಮಿಯನ್ನು ಅರಸಿ ಬಂದು ಸೀಮಾ ಹೈದರ್‌ ಸುದ್ದಿಯಾಗಿದ್ದರು. ಭಾರತದಿಂದ ಅಂಜು ಎಂಬಾಕೆ ಪಾಕಿಸ್ತಾನಕ್ಕೆ ಹೋಗಿ ಪ್ರಿಯಕರನ ಸೇರಿದಳು. ಅದೇ ಮಾದರಿಯಲ್ಲಿ ಮತ್ತೊಂದು ಸುದ್ದಿ ಈಗ ಸದ್ದು ಮಾಡುತ್ತಿದೆ. ಪಾಕಿಸ್ತಾನದ ಮಹಿಳೆಯೊಬ್ಬರು (Pakistan Women) ಭಾರತಕ್ಕೆ ಬಂದು ಪ್ರಿಯಕರನ ಸೇರಿದ್ದಾರೆ. ಕರಾಚಿ ನಿವಾಸಿ ಜವೇರಿಯಾ ಖಾನುಮ್ ಅಮೃತಸರ ಜಿಲ್ಲೆಯ ಅಟ್ಟಾರಿಯಿಂದ ಭಾರತಕ್ಕೆ ಬಂದಿದ್ದಾರೆ. ಆಕೆ ನಿಶ್ಚಿತ ವರ ಸಮೀರ್ ಖಾನ್‌ನನ್ನು ಸೇರಿದ್ದಾಳೆ. ವಾಘಾ-ಅಟ್ಟಾರಿ ಅಂತಾರಾಷ್ಟ್ರೀಯ ಗಡಿಯಿಂದ ಭಾರತಕ್ಕೆ ಬಂದಿದ್ದು, ಕೋಲ್ಕತ್ತಾ ನಿವಾಸಿ ಸಮೀರ್‌ನನ್ನು ಮುಂದಿನ ವರ್ಷದ ಜನವರಿಯಲ್ಲಿ ಮದುವೆಯಾಗಲಿದ್ದಾರೆ. https://ainlivenews.com/allotment-of-charge-of-additional-portfolios-to-four-union-ministers-including-karandlaje/ ಖಾನುಮ್‌ಗೆ 45 ದಿನಗಳ ವೀಸಾವನ್ನು ನೀಡಲಾಗಿದೆ. ಕೋವಿಡ್ ಸಾಂಕ್ರಾಮಿಕವು ಭಾರತಕ್ಕೆ ಬರುವ ಆಕೆಯ ಯೋಜನೆಗೆ ಐದು ವರ್ಷಗಳ ಕಾಲ ಅಡ್ಡಗಾಲಾಗಿತ್ತು. ಮುಂದಿನ ವರ್ಷ ಜನವರಿಯಲ್ಲಿ ನಾವು ಮದುವೆಯಾಗುತ್ತೇವೆ ಎಂದು ಮಾಧ್ಯಮಗಳಿಗೆ ಜೋಡಿ ಪ್ರತಿಕ್ರಿಯಿಸಿದೆ. ನನಗೆ 45 ದಿನಗಳ ವೀಸಾ ನೀಡಲಾಗಿದೆ.…

Read More

ಹಾಸನ‌ : ಮೇಕೆ ಮೇಯಿಸಲು‌ ತೆರಳಿದ್ದ‌ 65 ವರ್ಷದ ವಯಸ್ಸಾದ ಅಜ್ಜಿಯನ್ನು ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚನ್ನರಾಯಪಟ್ಟಣ ಪೊಲೀಸರು 53 ಗ್ರಾಮ್‌ ಚಿನ್ನ ಹಾಗೂ ಎರಡು ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ‌ ಮೊಹಮದ್‌ ಸುಜೀತಾ‌ ಮಾಹಿತಿ ನೀಡಿದರು. ನಗರದ ನಗರ ಪೋಲೀಸ್ ಠಾಣೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಎರಡು ಪ್ರತ್ಯೇಕ ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಅವರು, ಚನ್ನರಾಯಪಟ್ಟಣ ತಾಲೂಕಿನ ಅಡಗೂರು ಗ್ರಾಮದ‌ ಮೃತ ಸುಶೀಲಮ್ಮ ಎಂಬುವವರು ನ.21 ರಂದು ನಾಯಿಗುಂಡಿ ಹಳ್ಳದ ಸಮೀಪ ಶವವಾಗಿ ಪತ್ತೆಯಾಗಿದ್ದರು. ಇವರ ಮಗ ಚನ್ನರಾಯಪಟ್ಟ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಪೋಲಿಸರು ಇಬ್ಬರು ಆರೋಪಿಗಳಾದ ಅಡುಗೂರು ಗ್ರಾಮದವರಾದ ಕಾರ್ತಿಕ್ ಹಾಗೂ ಸಾಗರ್ ಎಂಬುವವರನ್ನು ಬಂಧಿಸಿದ್ದಾರೆ. ಬಂದಿತ ಅರೋಪಿಗಳಿಂದ ಒಟ್ಟು 53 ಗ್ರಾಮ್ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಸುಶೀಲಮ್ಮ ಜೀವನಾಂಶಕ್ಕಾಗಿ ಮೇಕೆಗಳನ್ನು ಸಾಕಿಕೊಂಡಿದ್ದು, ಪ್ರತಿನಿತ್ಯ ಅವುಗಳನ್ನು ಮೇಯಿಸಲು ಕೆರೆಕೋಡಿ ನಾಯಿಗುಂಡಿ ಹಳ್ಳದ ಕಡೆ ಹೋಗುತ್ತಿದ್ದರು. ನ.…

Read More

ಬೆಳ್ಳುಳ್ಳಿ ಅಡುಗೆಮನೆಯಲ್ಲಿ ಮಾತ್ರವಲ್ಲದೆ ಮಲಗುವ ಕೋಣೆಯಲ್ಲಿಯೂ ಬಳಸಿಕೊಳ್ಳಿ. ನೀವು ಪ್ರತಿ ದಿನ ರಾತ್ರಿ ಮಲಗುವ ಮುನ್ನ ನಿಮ್ಮ ದಿಂಬಿನ ಕೆಳಗಡೆ ಬೆಳ್ಳುಳ್ಳಿ ಎಸಳುಗಳನ್ನು ಇಟ್ಟುಕೊಂಡು ಮಲಗಿ. ಇದರಿಂದಾಗಿ ಆರೋಗ್ಯ ಪ್ರಯೋಜನಗಳು ಇಲ್ಲಿವೆ. ಹಿಂದಿನ ಕಾಲದಲ್ಲಿ ಬೆಳ್ಳುಳ್ಳಿಯ ಎರಡು ಮೂರು ಎಸಳುಗಳನ್ನು ದಿಂಬಿನ ಕೆಳಗಡೆ ಇಟ್ಟು ಮಲಗುತ್ತಿದ್ದರು. ಇದರಿಂದಾಗಿ ನೀವು ಮಲಗಿದಂತಹ ಸಮಯದಲ್ಲಿ ಕ್ರಿಮಿ ಕೀಟಗಳು ನಿಮ್ಮ ಹತ್ತಿರ ಬರದಿರಲಿ ಎಂದು, ಅಂದರೆ ಬೆಳ್ಳುಳ್ಳಿಯ ವಾಸನೆಯಿಂದ ಕ್ರಿಮಿ ಕೀಟಗಳನ್ನು ತಡೆಯುವ ಶಕ್ತಿಯಿದೆ ಎಂದು ಹಿರಿಯರು ಹೇಳುತ್ತಿದ್ದರು. ಇದರ ಜೊತೆಗೆ ಬೆಳ್ಳುಳ್ಳಿಗೆ ಕೆಟ್ಟ ಶಕ್ತಿಯನ್ನು ತಡೆಯುವ ಶಕ್ತಿ ಇದೆ. ಇದರಿಂದಾಗಿ ಕೆಟ್ಟ ಶಕ್ತಿ ನಿಮ್ಮ ಹತ್ತಿರ ಸುಳಿಯದಂತೆ ನೋಡಿಕೊಳ್ಳುತ್ತದೆ ಎಂದು ನಂಬಿಕೆ ಇದೆ. ಇಂದಿನ ಬದಲಾದ ಜೀವನಶೈಲಿಯಿಂದಾಗಿ ಜನರು ಹಿಂದಿನ ನಂಬಿಕೆಗಳನ್ನು ಮೂಡನಂಬಿಕೆ ಎಂದು ಹೇಳುವುದು ಕಾಣಬಹುದು. ಆದರೆ ಹಿರಿಯರು ಪಾಲಿಸಿಕೊಂಡು ಬಂದ ಪ್ರತಿಯೊಂದು ನಂಬಿಕೆಯಲ್ಲಿಯೂ ಅದರದೇ ಆದ ವೈಜ್ಞಾನಿಕ ಕಾರಣಗಳಿವೆ. ನಿಮ್ಮ ದಿಂಬಿನ ಕೆಳಗೆ ಬೆಳ್ಳುಳ್ಳಿಯನ್ನು ಇಟ್ಟುಕೊಂಡು ನೀವು ಅದ್ಬುತ ಪ್ರಯೋಜನವನ್ನು ಪಡೆಯಬಹುದಾಗಿದೆ.…

Read More

ಸೂರ್ಯೋದಯ: 06.31 AM, ಸೂರ್ಯಾಸ್ತ : 05.54 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಕಾರ್ತೀಕ ಮಾಸ, ಕೃಷ್ಣ ಪಕ್ಷ, ದಕ್ಷಿಣಾಯಣ, ಶರತ್ ಋತು, ತಿಥಿ: ಇವತ್ತು ದ್ವಾದಶಿ 07:13 AM ತನಕ ನಂತರ ತ್ರಯೋದಶಿ ನಕ್ಷತ್ರ: ಇವತ್ತು ಸ್ವಾತಿ 11:50 AM ತನಕ ನಂತರ ವಿಶಾಖ ಯೋಗ: ಇವತ್ತು ಅತಿಗಂಡ10:35 PM ತನಕ ನಂತರ ಸುಕರ್ಮಾ ಕರಣ: ಇವತ್ತು ತೈತಲೆ 07:13 AM ತನಕ ನಂತರ ಗರಜ 07:17 PM ತನಕ ನಂತರ ವಣಿಜ ರಾಹು ಕಾಲ: 04:30 ನಿಂದ 06:00 ವರೆಗೂ ಯಮಗಂಡ: 12:00 ನಿಂದ 01:30 ವರೆಗೂ ಗುಳಿಕ ಕಾಲ: 03:00 ನಿಂದ 4:30 ವರೆಗೂ ಅಮೃತಕಾಲ: 02.37 AM to 04.18 AM ಅಭಿಜಿತ್ ಮುಹುರ್ತ: ಬೆಳಗ್ಗೆ.11:46 ನಿಂದ ಮ.12:30 ವರೆಗೂ ಮೇಷ ರಾಶಿ: ಪಿ ಜಿ ನಿಧಾನಗತಿಯ ಆರ್ಥಿಕ ಚೇತರಿಕೆ,ಖಾನಾವಳಿ ನಡೆಸುವವರಿಗೆ ಆರ್ಥಿಕ ಚೇತರಿಕೆ,ಈ ರಾಶಿಯವರಿಗೆ ಈ ಬಾರಿ ಬಂಪರ್ ಕೊಡುಗೆ,ಗುತ್ತಿಗೆ…

Read More

ಬೆಂಗಳೂರು:  ನಗರದ ಖಾಸಗಿ ಶಾಲೆಯಲ್ಲೊಂದು ಅಮಾನವೀಯ ಘಟನೆ ನಡೆದಿದೆ. ಹೋಂ ವರ್ಕ್ ಮಾಡಿಲ್ಲವೆಂದು ವಿದ್ಯಾರ್ಥಿಗೆ ಥಳಿಸಿದ ಆರೋಪ ಕೇಳಿಬಂದಿದೆ. ಈ ಘಟನೆ ಮೂರು ದಿನಗಳ ಹಿಂದೆ ನಗರದ ಖಾಸಗಿ ಶಾಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಏಳನೇ ತರಗತಿ ವಿದ್ಯಾರ್ಥಿ ಮಹಮ್ಮದ್ ಫರ್ದೀನ್‍ಗೆ ಹೋಂ ವರ್ಕ್ ಮಾಡಿಲ್ಲವೆಂದು ಶಾಲಾ ಶಿಕ್ಷಕಿ ಕೈಗೆ ರಾಡ್‍ನಲ್ಲಿ ರಕ್ತ ಬರುವಂತೆ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. https://ainlivenews.com/allotment-of-charge-of-additional-portfolios-to-four-union-ministers-including-karandlaje/ ಇತ್ತ ವಿದ್ಯಾರ್ಥಿ ಕೈಗೆ ಗಂಭೀರ ಗಾಯಗಳಾಗಿದ್ದು, ಹುಳಿಮಾವು ಸಾಯಿ ರಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಫರ್ದಿನ್ ಕೈಗೆ ಆರು ಹೊಲಿಗೆ ಹಾಕಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿದ್ಯಾರ್ಥಿ, ಅಸೈನ್ಮೆಂಟ್ ಮಾಡಿಲ್ಲ ಎಂಬ ಕಾರಣಕ್ಕೆ ಶಿಕ್ಷಕಿ ಮೇಲೆ ಹಲ್ಲೆ ಮಾಡಿದ್ದಾಗಿ ಆರೋಪಿಸಿದ್ದಾನೆ. ಶಾಲಾ ಆಡಳಿತ ಮಂಡಳಿಯಿಂದ ಪ್ರಕರಣ ಮುಚ್ಚಿ ಹಾಕಲು ಯತ್ನ ಮಾಡುವ ಆರೋಪವೂ ಕೇಳಿಬಂದಿದೆ.

Read More

ಕಾರ್ಯನಿರ್ವಹಣೆಯ ಸಂದರ್ಭದಲ್ಲಿ ಪೈಲಟ್‌ಗಳಿಗೆ ದಿಕ್ಕು ತಪ್ಪಿಸುವುದನ್ನು ತಡೆಯಲು ಫೈಟರ್‌ಜೆಟ್‌ಗಳಿಗೆ ಶೀಘ್ರದಲ್ಲೇ ಡಿಜಿಟಲ್‌ ನಕ್ಷೆ (India Made Digital Maps) ಗಳನ್ನು ಅಳವಡಿಸಲು ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (HAL) ಸಜ್ಜಾಗಿರುವುದಾಗಿ ಹೆಚ್‌ಎಎಲ್‌ನ ಉನ್ನತ ಅಧಿಕಾರಿ ತಿಳಿಸಿದ್ದಾರೆ. ಡಿಜಿಟಲ್‌ ನಕ್ಷೆ (Digital Maps) ಹೊಂದುವುದರಿಂದ ಪೈಲಟ್‌ಗಳು ಅಚಾನಕ್ಕಾಗಿ ಗಡಿ ದಾಟುವುದಿಲ್ಲ. ಗ್ರೂಪ್‌ ಕ್ಯಾಪ್ಟನ್‌ ಅಭಿನಂದನ್‌ ಅವರ ರೀತಿ ಮತ್ತೊಂದು ಘಟನೆ ಸಂಭವಿಸಬಾರದು. ಅದಕ್ಕಾಗಿ ಈ ಡಿಜಿಟಲ್‌ ನಕ್ಷೆಯನ್ನು ಸಿದ್ಧಪಡಿಸಲಾಗಿದೆ. ಇನ್ಮುಂದೆ ಅವರು ತಮ್ಮ ಕೈಯಲ್ಲಿ ಮ್ಯಾಪ್‌ ಹಿಡಿದಿಟ್ಟುಕೊಳ್ಳುವ ಅಗತ್ಯವಿರುವುದಿಲ್ಲ ಎಂದು ಹೆಚ್‌ಎಎಲ್‌ನ ಎಂಜಿನಿಯರಿಂಗ್‌ ಮತ್ತು ಆರ್‌&ಡಿ ವಿಭಾಗದ ನಿರ್ದೇಶಕ ಡಿ.ಕೆ ಸುನೀಲ್‌ ಹೇಳಿದ್ದಾರೆ. ಡಿಜಿಟಲ್‌ ನಕ್ಷೆಯಿಂದ ಏನು ಅನುಕೂಲ? ಡಿಜಿಟಲ್‌ ನಕ್ಷೆಯಿಂದ ವಿಮಾನ ಹಾರಾಟ ಸಂದರ್ಭದಲ್ಲಿ ಪೈಲಟ್‌ಗಳು ಕಾಕ್‌ಪಿಟ್ ಡಿಸ್‌ಪ್ಲೇನಲ್ಲಿ (Cockpit Display) ನಕ್ಷೆಯನ್ನು ಪರಿಶೀಲಿಸಬಹುದು. 2ಡಿ ಮತ್ತು 3ಡಿ ರೂಪದಲ್ಲಿ ನಕ್ಷೆ ಲಭ್ಯವಿರಲಿದ್ದು, ಪೈಲಟ್‌ಗಳು ಗುಡ್ಡಗಾಡು ಪ್ರದೇಶದಲ್ಲಿದ್ದರೆ ಮೊದಲೇ ಎಚ್ಚರಿಸುತ್ತದೆ. ಹಾಗಾಗಿ ಎತ್ತರದ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಉಂಟಾಗುವ ಅಪಘಾತಗಳನ್ನು ತಡೆಯಲು ನೆರವಾಗುತ್ತದೆ.…

Read More

ದುಬೈ: ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ (Women’s Premier League) ಕರ್ನಾಟಕದ (Karnataka) ಯುವ ಆಟಗಾರ್ತಿ ವೃಂದಾ ದಿನೇಶ್‌ (Vrinda Dinesh) ಅವರು 1.3 ಕೋಟಿ ರೂ.ಗೆ ಯುಪಿ ವಾರಿಯರ್ಸ್‌ (UP Warriorz) ತಂಡಕ್ಕೆ ಸೋಲ್ಡ್‌ ಆಗಿದ್ದಾರೆ. ದೇಶೀಯ ಪಂದ್ಯಗಳಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿರುವ 22 ವರ್ಷ ವೃಂದಾ ಇನ್ನೂ ಟೀಂ ಇಂಡಿಯಾವನ್ನು (Team India) ಪ್ರತಿನಿಧಿಸಿಲ್ಲ. ಹೀಗಿದ್ದರೂ ದೇಶೀಯ ಪಂದ್ಯಗಳಲ್ಲಿ ನೀಡಿದ ಅಮೋಘ ಪ್ರದರ್ಶನವನ್ನು ಗಮನಿಸಿ ಯುಪಿ ತಂಡ ವೃಂದಾ ಅವರನ್ನು ಖರೀದಿಸಿದೆ. ಈ ಮೂಲಕ ಟೀಂ ಇಂಡಿಯಾ ಪ್ರತಿನಿಧಿಸದೇ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಎರಡನೇ ಆಟಗಾರ್ತಿಯಾಗಿ ವೃಂದಾ ದಿನೇಶ್‌ ಹೊರಹೊಮ್ಮಿದ್ದಾರೆ. ಹರಾಜಿನಲ್ಲಿ ಇವರ ಮೂಲ ಬೆಲೆ 10 ಲಕ್ಷ ರೂ. ಇತ್ತು. ಆದರೆ ಘಟಾನುಘಟಿ ಆಟಗಾರರ್ತಿಯರನ್ನು ಹಿಂದಿಕ್ಕಿ ಭಾರೀ ಮೊತ್ತಕ್ಕೆ ವೃಂದಾ ಈಗ ಮಾರಾಟವಾಗಿದ್ದಾರೆ. https://ainlivenews.com/allotment-of-charge-of-additional-portfolios-to-four-union-ministers-including-karandlaje/ ಬಲಗೈ ಬ್ಯಾಟ್ಸ್‌ಮನ್‌ ಆಗಿರುವ ಅವರು 2021ರಲ್ಲಿ ಬರೋಡಾ 83 ಎಸೆತಗಳಲ್ಲಿ 69 ರನ್‌ ಹೊಡೆದಿದ್ದರು. ಛತ್ತೀಸ್‌ಗಢದ ವಿರುದ್ಧ ಪಂದ್ಯದಲ್ಲಿ 67 ರನ್‌ ಹೊಡೆದಿದ್ದರು. ಮಹಿಳಾ…

Read More

ಬೆಂಗಳೂರು: ಆತ ಸೋಷಿಯಲ್ ಮೀಡಿಯಾದಲ್ಲಿ ಒಂದ್ ರೀತಿ ಸ್ಟಾರ್ ಆಗ್ಬಿಟ್ಟಿದ್ದ. ಮೈಮೇಲೆ ಕೆಜಿಗಟ್ಟಲೆ ಚಿನ್ನ ಹಾಕೊಂಡು ವಿಡಿಯೋಗಳ ಮೇಲೆ ವಿಡಿಯೋ ಮಾಡಿಸ್ತಿದ್ದ. ಆದ್ರೆ ರೌಡಿ ಆಕ್ಟಿವಿಟಿಯಲ್ಲೂ ಭಾಗಿಯಾಗ್ತಿದ್ದ ಅಸಾಮಿ ಲ್ಯಾಂಡ್ ಲಿಟಿಗೇಷನ್ ಗೆ ಕೈಹಾಕಿ ಈಗ ಜೈಲು ಪಾಲಾಗಿದ್ದಾನೆ. ಈತನನ್ನ ನೋಡ್ತಿದ್ರೆ ಮಿನಿ ಜ್ಯೂವಲಿರಿ ಶಾಪ್ ಅಂದ್ರೆ ತಪ್ಪೇನಿಲ್ಲ. ಮೈಮೇಲೆ ಕೆಜಿಗಟ್ಟಲೇ ಚಿನ್ನ ಹಾಕೊಂಡು ಸುತ್ತಾ ಹುಡುಗರನ್ನ ಇಟ್ಕೊಂಡು ಈತ ಕೊಡ್ತಿದ್ದ ಬಿಲ್ಡಪ್ಗೆ ಕಮ್ಮಿ ಇರ್ಲಿಲ್ಲ. ಆದ್ರೆ ಈ ಅಸಾಮಿ ಯಲಹಂಕ ಸುತ್ತಮುತ್ತ ರೌಡಿ ಚಟುವಟಿಕೆಯಲ್ಲೂ ಭಾಗಿಯಾಗ್ತಿದ್ದ. ಈತನ ಮೇಲೆ ಮೊದಲೇ ಒಂದು ಕಣ್ಣಿಟ್ಟಿದ್ದ ಖಾಕಿ ಪಡೆ ಪ್ರಕರಣವೊಂದರಲ್ಲಿ ಈಗ ಜೈಲಿಗಟ್ಟಿದೆ.  ಯೆಸ್. ದಾಸ ಅಲಿಯಾಸ್ ದಾಸ ಕಿಂಗ್ ಮೇಕರ್ ಎಂದೇ ಕುಖ್ಯಾತನಾಗಿರೋ ಈತನೆ ಈಗ ಜೈಲು ಪಾಲಾಗಿರೋ ಅಸಾಮಿ. ಅಷ್ಟಕ್ಕೂ ಆಗಿದ್ದೇನು ಅಂದ್ರೆ ಯಲಹಂಕ ಠಾಣಾ ವ್ಯಾಪ್ತಿಯಲ್ಲಿ ರಾಮಮೂರ್ತಿ ಮತ್ತು ರಾಮದೇವಿ ಅನ್ನೋರು ನಡುವೆ ಜಮೀನು ವಿವಾದ ಇತ್ತು. ಈ ವಿಚಾರವನ್ನ ರಾಮಮೂರ್ತಿ ಅನಧಿಕೃತ ಪ್ರಾಪರ್ಟಿ ಡೀಲರ್ ಆಗಿದ್ದ ದಾಸನಿಗೆ…

Read More

ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಈ ವಾರವಿಡೀ  ಮನೆ ಪ್ರಕ್ಷುಬ್ದವಾಗಿಯೇ ಇತ್ತು. ರಕ್ಕಸರು-ಗಂಧರ್ವರ ನಡುವಿನ ಜಿದ್ದಾಜಿದ್ದಿ ವೈಯಕ್ತಿಕ ಮಟ್ಟಕ್ಕೆ ಇಳಿದು, ದೈಹಿಕವಾಗಿ ಗಾಯಗೊಳ್ಳುವ ಅತಿರೇಕಕ್ಕೂ ಹೋಯಿತು. ಪರಿಣಾಮವಾಗಿ ಸಂಗೀತಾ (Sangeeta Sringeri) ಮತ್ತು ಪ್ರತಾಪ್ (Drone Pratap) ಇಬ್ಬರೂ ಆಸ್ಪತ್ರೆ ಸೇರಿಕೊಳ್ಳುವಂತಾಗಿತ್ತು. ಅದೆಲ್ಲದ ಪರಿಣಾಮವಾಗಿ ಈ ವಾರದ ‘ಕಿಚ್ಚನ ಪಂಚಾಯ್ತಿ’ಯಲ್ಲಿ ಸುಂಟರಗಾಳಿಯೇ ಏಳುವ ಸಂಭವವಿದೆ. ಇದರ ಸೂಚನೆ JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಸಿಕ್ಕಿದೆ. ಗಂಧರ್ವರು ರಕ್ಕಸರಾಗದ್ದಕ್ಕೆ, ರಕ್ಕಸರು ಕಟುಕರಾಗಿ ಬದಲಾಗಿದ್ದಕ್ಕೆ, ವಿನಂತಿಗಳು ಅಪ್ಪಣೆಗಳಾಗಿ ಬದಲಾಗಿದ್ದಕ್ಕೆ ಕಿಚ್ಚ ಸುದೀಪ್‌, ‘ಪಂಚಾಯ್ತಿ’ಯಲ್ಲಿ ಚರ್ಚೆ ನಡೆಸಿದ್ದಾರೆ. ಎರಡು ದಿನಗಳ ಹಿಂದೆಯೇ ಟಾಸ್ಕ್‌ನಲ್ಲಿ ಗಾಯಗೊಂಡು ತುರ್ತಾಗಿ ಪ್ರತಾಪ್-ಸಂಗೀತಾ ಆಸ್ಪತ್ರೆಗೆ ಸೇರಿದ್ದರು. ಅವರ ಬಗ್ಗೆ ಮನೆಯವರಿಗೆ ಸುಳಿವೇ ಇರಲಿಲ್ಲ. ಆದರೆ ಇಂದು ಕಿಚ್ಚನ ಪಂಚಾಯ್ತಿಗೆ ಎಲ್ಲರೂ ರೆಡಿಯಾಗಿ ಕೂತಿದ್ದಾಗ ಬಿಗ್‌ಬಾಸ್ ಮನೆಯ ಬಾಗಿಲು ತೆರೆದುಕೊಂಡಿದೆ. ತೆರೆದ ಬಾಗಿಲಿನಿಂದ ಪ್ರತಾಪ್ ಮತ್ತು ಸಂಗೀತಾ ಇಬ್ಬರೂ ಒಳಗೆ ಬಂದಿದ್ದಾರೆ. https://ainlivenews.com/allotment-of-charge-of-additional-portfolios-to-four-union-ministers-including-karandlaje/  ಆದರೆ ಅವರನ್ನು ನೋಡಿ ಮನೆಯವರೆಲ್ಲರೂ ಶಾಕ್…

Read More

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ದಿನೇ ದಿನೇ ಬೆಳೆದಂತೆ ನೀರಿನ ದಾಹದ ಬೇಡಿಕೆ ಸಹ  ಹೆಚ್ಚಳವಾಗುತ್ತಿದೆ.ಭವಿಷ್ಯದಲ್ಲಿ ಬೆಂಗಳೂರಿನಲ್ಲಿ ಕುಡಿಯೋದಕ್ಕೆ ನೀರೇ ಸಿಗಲ್ಲ ಅನ್ನೋ ಸರ್ವೇಗಳು ಜನರ ನೆಮ್ಮದಿ ಹಾಳು ಮಾಡಿದೆ..ಹೀಗಾಗಿ ಭವಿಷ್ಯದಲ್ಲಿ ನೀರಿನ ಸಮಸ್ಯೆ ನೀಗಿಸಲು ಬೆಂಗಳೂರು ಜಲಮಂಡಳಿ ಕಾವೇರಿ ಐದನೇ ಹಂತ ಯೋಜನೆಗೆ ಕೈ ಹಾಕಿದೆ..ಈಗಾಗಲೇ ಯೋಜನೆ ಆರಂಭವಾಗಿದ್ದು,ಮುಂದಿನ  ವರ್ಷ  ಏಫ್ರಿಲ್ ನಲ್ಲಿ  ಬೆಂಗಳೂರಿಗೆ 10 ಟಿಎಂಸಿ ನೀರು ಹರಿದು ಬರಲಿದೆ. ಬೆಂಗಳೂರು ದಿನೇ ದಿನೇ ವೇಗವಾಗಿ ಬೆಳೆಯುತ್ತಿದೆ.ನಗರ ವಿಸ್ತಾರವಾಗುತ್ತಿದ್ದಂತೆ ಜನರ ನೀರಿನ ದಾಹ ತಣ್ಣಿಸಲು ಜಲಮಂಡಳಿಗೆ ಸವಾಲು ಆಗಿದೆ. ಇದೀಗ ಕಾವೇರಿ ಒಂದು, ಎರಡು, ಮೂರು ಹಾಗೂ ನಾಲ್ಕನೇ ಹಂತಗಳ ಮೂಲಕ ಕಾವೇರಿ ನೀರು ನಗರಕ್ಕೆ ಪೂರೈಕೆ ಯಾಗುತ್ತಿದೆ.ಸದ್ಯ ಪ್ರತಿದಿನ 135 ಕೋಟಿ ಲೀಟರ್‌ ನೀರು ಪೂರೈಕೆ ಆಗುತ್ತಿದೆ. ಹೀಗಿದ್ದೂ ನಗರ ನಿತ್ಯ 75 ಕೋಟಿ ಲೀಟರ್‌ನಷ್ಟು ಕೊರತೆ ಅನುಭವಿಸುತ್ತಿದೆ. ಐದನೇ ಹಂತದ ಯೋಜನೆ ಅನುಷ್ಠಾನಕ್ಕೆ ಬಂದರೆ ನೀರಿನ ಕೊರತೆ ಸಂಪೂರ್ಣವಾಗಿ ನೀಗಲಿದೆ  ಅನ್ನೋದು ಜಲಮಂಡಳಿ ಲೆಕ್ಕಚಾರವಾಗಿದ್ದು,ಮಂಡಳಿ ಐದನೇ…

Read More