ಮೂಲವ್ಯಾಧಿಯ ರೋಗಿಗಳು ದಿನವೂ ಈರುಳ್ಳಿಯನ್ನು ಅಥವಾ ಮೂಲಂಗಿಯನ್ನು ಹಸಿಯಾಗಿ ತಿನ್ನುವುದರಿಂದ ಲಾಭವಾಗುತ್ತದೆ. ಬೇರುಸಹಿತ ಗರಿಕೆ ಹುಲ್ಲನ್ನು ಸಣ್ಣದಾಗಿ ಕತ್ತರಿಸಿ, ಕುಟ್ಟಿ ಹಿಂದಿನ ರಾತ್ರಿ ತಣ್ಣೀರಿನಲ್ಲಿ ನೆನೆ ಹಾಕಿ, ಬೆಳಿಗ್ಗೆ ಅದನ್ನು ಕಿವುಚಿ ಶೋಧಿಸಿ ಕುಡಿಯುವುದರಿಂದ ಮೂಲವ್ಯಾಧಿ ಗುಣವಾಗುತ್ತದೆ. ಅಮೃತಬಳ್ಳಿಯ ಸತ್ವಕ್ಕೆ ಸಮಾಂಶ ಕಲ್ಲುಸಕ್ಕರ ಪುಡಿ ಮಾಡಿ ಸೇರಿಸಿ; 48 ದಿನಗಳು ಸೇವಿಸುವುದರಿಂದ ಮೂಲವ್ಯಾಧಿ ಪರಿಹಾರವಾಗುತ್ತದೆ. ಬಸಳೆಸೊಪ್ಪನ್ನು ಪಲ್ಯ ಮಾಡಿ ಪ್ರತಿದಿನವೂ ಸೇವಿಸುವುದರಿಂದದ ಮೂಲವ್ಯಾಧಿಯು ಗುಣವಾಗುತ್ತದೆ. ಮೇಕೆ ಹಾಲನ್ನು ನಿತ್ಯವೂ ಸೇವಿಸಿದರೆ ಮಲಬದ್ಧತೆ, ಮೂಲವ್ಯಾಧಿ ಗುಣವಾಗುತ್ತದೆ. ಕರಿಬೇವಿನ ಎಲೆ ಎಲೆಗಳನ್ನು ಜೇನುತುಪ್ಪದೊಂದಿಗೆ ತಿನ್ನುವುದರಿಂದಲೂ ಮೂಲವ್ಯಾಧಿಯನ್ನು ದೂರಗೊಳಿಸಬಹುದು. ದಿನವೂ ಮಲಗುವ ಮುನ್ನ ಏಲಕ್ಕಿಪುಡಿಯೊಂದಿಗೆ ಬಾಳೆಹಣ್ಣನ್ನು ಸೇವಿಸುವುದರಿಂದ ಮೂಲವ್ಯಾಧಿ ದೂರವಾಗುವುದು. ಮೂಲವ್ಯಾಧಿಯಿಂದ ರಕ್ತಸ್ರಾವಕ್ಕೆ ಹೊನೆಗೊನೆ ಸೊಪ್ಪಿನ ರಸಕ್ಕೆ ಸಮಪ್ರಮಾಣದಲ್ಲಿ ಕ್ಯಾರೆಟ್ ರಸವನ್ನು ಸೇರಿಸಿ ಸೈಂಧವ ಲವಣವನ್ನು ಅತಿ ಕನಿಷ್ಠ ಪ್ರಮಾಣದಲ್ಲಿ ಸೇರಿಸಿ, ಬಳಸಿದರೆ ಮೂಲವ್ಯಾಧಿಯಲ್ಲಿ ಉಂಟಾಗುವ ರಕ್ತಸ್ರಾವ ನಿಲ್ಲುವುದು. ಮೊಸರಿಗೆ ಅನ್ನ ಬೆಲ್ಲ ಸೇರಿಸಿ ಊಟ ಮಾಡಿದರೆ, ಮೂಲವ್ಯಾಧಿ ಗುಣವಾಗುತ್ತದೆ.
Author: AIN Author
ಕೋಪನ್ ಹ್ಯಾಗನ್: ಸಾರ್ವಜನಿಕ ಸ್ಥಳಗಳಲ್ಲಿ ಕುರಾನ್ (Quran) ಪ್ರತಿಗಳನ್ನು ಸುಡುವುದನ್ನು ತಡೆಯುವ ಮಸೂದೆಗೆ ಡೆನ್ಮಾರ್ಕ್ (Denmark) ಸಂಸತ್ ಗುರುವಾರ ಅನುಮೋದನೆ ನೀಡಿದೆ. ಇಸ್ಲಾಂ ಧರ್ಮದ ಪವಿತ್ರ ಗ್ರಂಥವನ್ನು ಅಪವಿತ್ರಗೊಳಿಸಿದ ಮೇಲೆ ಮುಸ್ಲಿಂ ರಾಷ್ಟ್ರಗಳಲ್ಲಿ ಪ್ರತಿಭಟನೆಗಳು ಹೆಚ್ಚಾಗುತ್ತಿದ್ದು, ಡ್ಯಾನಿಶ್ ಭದ್ರತಾ ವ್ಯವಸ್ಥೆಯಲ್ಲಿ ಆತಂಕ ಎದುರಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕುರಾನ್ ಪ್ರತಿಗಳನ್ನು ಸುಡುವುದನ್ನು ಕಾನೂನುಬಾಹಿರಗೊಳಿಸುವ ಮಸೂದೆಯನ್ನು ಡೆನ್ಮಾರ್ಕ್ ಸಂಸತ್ತು ಗುರುವಾರ ಅಂಗೀಕರಿಸಿತು. ಡೆನ್ಮಾರ್ಕ್ ಮತ್ತು ಸ್ವೀಡನ್ ಈ ವರ್ಷ ಸಾರ್ವಜನಿಕ ಪ್ರತಿಭಟನೆಗಳ ಪರಿಣಾಮ ಎದುರಿಸಿದವು. ಅಲ್ಲಿ ಇಸ್ಲಾಂ ವಿರೋಧಿ ಕಾರ್ಯಕರ್ತರು ಕುರಾನ್‌ನ ಪ್ರತಿಗಳನ್ನು ಸುಟ್ಟುಹಾಕಿದರು. ಇದರಿಂದ ಮುಸ್ಲಿಮರೊಂದಿಗೆ ಉದ್ವಿಗ್ನತೆ ಉಂಟಾಯಿತು. ಇಂತಹ ನಡವಳಿಕೆಗಳಿಗೆ ಕಡಿವಾಣ ಬೀಳಬೇಕು ಎಂದು ಪ್ರಬಲವಾಗಿ ಒತ್ತಾಯಿಸಲಾಯಿತು. ಕುರಾನ್ ಪ್ರತಿಗಳನ್ನು ಸುಡುವುದು, ಧರ್ಮವನ್ನು ಟೀಕಿಸುವುದು ಸರಿಯಲ್ಲ. ಇಂತಹ ನಡವಳಿಕೆಗಳು ಈ ನೆಲದ ಉದಾರವಾದಿ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುತ್ತದೆ ಎಂದು ಸ್ವೀಡನ್ ಮತ್ತು ಡೆನ್ಮಾರ್ಕ್‌ನ ದೇಶೀಯ ವಿಮರ್ಶಕರು ವಾದಿಸಿದ್ದಾರೆ. ಈ ಹೊಸ ನಿಯಮಗಳು ವಾಕ್ ಸ್ವಾತಂತ್ರ್ಯದ ಮೇಲೆ ಸ್ವಲ್ಪಮಟ್ಟಿಗೆ ಪರಿಣಾಮ ಬೀರುತ್ತದೆ. ಇತರ ರೀತಿಯಲ್ಲಿ ಧರ್ಮವನ್ನು…
ಬಿಗ್ ಬಾಸ್ ಮನೆಯಲ್ಲಿ ಕಳ್ಳಾಟ ಆಡಿದವರಿಗೆ ಕಿಚ್ಚ ಸುದೀಪ್ ಶಾಕ್ ಕೊಟ್ಟಿದ್ದಾರೆ. ಅಲ್ಲದೇ ಕ್ಯಾಪ್ಟನ್ ಕೋಣೆಗೆ ಬೀಗವೂ ಬಿದ್ದಿದೆ. ವರ್ತೂರು ಸಂತೋಷ್ ಆಟವನ್ನು ನ್ಯಾಯವಾಗಿ ಗೆಲ್ಲಲಿಲ್ಲ. ವರ್ತೂರು ಸಂತೋಷ್ ಹಾಗೂ ಮೈಕಲ್ಗೆ ವಿನಯ್ ಸಹಾಯ ಮಾಡಿದರು. ಕುರ್ಚಿಯ ಮೇಲೆ ಕೂತ ವರ್ತೂರ್ ಸಂತೋಷ್ ಗೆ ಹೊರಗಡೆಯಿಂದ ಸಮಯ ಎಣಿಸಿ ವಿನಯ್ ಗೌಡ, ವರ್ತೂರು ಸಂತೋಷ್ ಹಾಗೂ ಮೈಕಲ್ ಇಬ್ಬರಿಗೂ ಸಿಗ್ನಲ್ ಕೊಟ್ಟಿದ್ರು. ಇಬ್ಬರು ಸೇರಿ ಮೋಸದ ಆಟ ಆಡಿದ್ದಕ್ಕೆ ಸಿಟ್ಟಾದ ಸುದೀಪ್ ವರ್ತೂರ್ ಅವರನ್ನು ಪ್ರಶ್ನೆ ಮಾಡಿದ್ರು. ನೀವು ನ್ಯಾಯವಾಗಿ ಟಾಸ್ಕ್ ಗೆದ್ದರ ವರ್ತೂರು ಎಂದು ಸುದೀಪ್ ಪ್ರಶ್ನೆ ಮಾಡಿದ್ರು, ವರ್ತೂರು ಸಂತೋಷ್ ಸೈಲೆಂಟ್ ಆದ್ರು. ಇದಕ್ಕೆ ಉತ್ತರಿಸಿದ ನಮ್ರತಾ ಗೌಡ, ವಿನಯ್ ಹೊರಗಿನಿಂದ ಕೌಂಟ್ ಮಾಡಿ ವರ್ತೂರು ಸಂತೋಷ್ಗೆ ಸಿಗ್ನಲ್ ಕೊಟ್ರು ಎಂಬ ಸತ್ಯವನ್ನು ನಮ್ರತಾ ಬಾಯ್ಬಿಟ್ಟಿದ್ದಾರೆ. ಈ ವಾರ ವರ್ತೂರು ಸಂತೋಷ್ ಗೆ ಇಮ್ಯುನಿಟಿ ಇರೋದಿಲ್ಲ ಎಂದಿರುವ ಸುದೀಪ್, ಬಿಗ್ ಬಾಸ್ ಮನೆಯ ಕ್ಯಾಪ್ಟನ್ ರೂಮ್ಗೆ ಬೀಗ ಹಾಕಿಸಿದ್ದಾರೆ.…
ಹುಬ್ಬಳ್ಳಿ: ನಗರದ ಇಂದಿರಾ ಗಾಜಿನ ಮನೆ ಆವರಣದಲ್ಲಿರುವ ಎಂ.ವಿ. ಮಿಣಜಗಿ ಆರ್ಟ್ ಗ್ಯಾಲರಿ ಪುನಃ ಆರಂಭಿಸಬೇಕು ಎಂದು ಒತ್ತಾಯಿಸಿ ಕುಂಚಬ್ರಹ್ಮ ಡಾ. ಎಂ.ವಿ. ಮಿಣಜಗಿ ಆರ್ಟ್ ಗ್ಯಾಲರಿ ಸಮಿತಿ ಸದಸ್ಯರು ನಗರದಲ್ಲಿ ವಿಧಾನಪರಿಷತ್ ಸದಸ್ಯ ಜಗದೀಶ ಶೆಟ್ಟರ್ ಅವರಿಗೆ ಮನವಿ ಸಲ್ಲಿಸಿದರು. ‘ಅನೇಕ ವರ್ಷಗಳಿಂದ ನಗರದ ಇಂದಿರಾ ಗಾಂಧಿ ಗಾಜಿನ ಮನೆಯಲ್ಲಿ ಮಿಣಜಗಿ ಆರ್ಟ್ ಗ್ಯಾಲರಿ ಕಾರ್ಯನಿರ್ವಹಿಸುತ್ತಿತ್ತು. ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿಯಿಂದಾಗಿ ಗ್ಯಾಲರಿಯನ್ನು ಬಂದ್ ಮಾಡಲಾಗಿದೆ. ಕಲಾವಿದರಿಗೆ ಚಿತ್ರಕಲೆ ಪ್ರದರ್ಶಿಸಲು ನಗರದಲ್ಲಿ ಗ್ಯಾಲರಿಯಿಲ್ಲದೆ ಪರದಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಂದ್ ಮಾಡಲಾಗಿರುವ ಗ್ಯಾಲರಿಯನ್ನು ತೆರೆದು ಕಲಾವಿದರಿಗೆ ಮುಕ್ತಗೊಳಿಸಬೇಕು. ಇಲ್ಲದಿದ್ದರೆ ಈಗಿರುವ ವಿದ್ಯಾನಗರದ ಪೊಲೀಸ್ ಠಾಣೆ, ಮೊದಲು ಚಿಕ್ಕವೀರಯ್ಯ ಆರ್ಟ್ ಗ್ಯಾಲರಿಯಾಗಿತ್ತು. ಅದನ್ನಾದರೂ ಪುನಃ ಆರ್ಟ್ ಗ್ಯಾಲರಿಯನ್ನಾಗಿ ಮಾರ್ಪಡಿಸಿ ಕಲಾವಿದರಿಗೆ ನೀಡಬೇಕು’ ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ. ಸಮಿತಿಯ ಅಧ್ಯಕ್ಷ ಆರ್.ಬಿ. ಗರಗ, ಬಿ.ಆರ್. ಮಲ್ಲಾಪುರ, ಪ್ರೊ.ಐ.ಜಿ. ಸನದಿ, ಗೋವಿಂದ ಮಣ್ಣೂರು, ಶಿವರುದ್ರಪ್ಪ ಬಡಿಗೇರ ಜಗದೀಶ ಗದಗಿನ ಸೇರಿ ಕಲಾವಿದರು ಇದ್ದರು.
ಹುಬ್ಬಳ್ಳಿ: ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸುತ್ತಿದ್ದ ಗೋದಾಮಿನ ಮೇಲೆ ದಾಳಿ ಮಾಡಿದ, ಹುಬ್ಬಳ್ಳಿ -ಧಾರವಾಡ ಮಹಾನಗರ ಪೊಲೀಸ್ ಕಮಿಷನರೇಟ್ ನ ಸಿಸಿಬಿ ವಿಭಾಗದ ಪೊಲೀಸರು, ಅಂದಾಜು 4.42 ಲಕ್ಷ ರೂ ಮೌಲ್ಯದ ಪಡಿತರ ಅಕ್ಕಿ ವಶಪಡಿಸಿಕೊಂಡು, ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಇಲ್ಲಿನ ಅಮರಗೋಳದ ಎಪಿಎಂಸಿ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟು, ಕಾಳಸಂತೆಯಲ್ಲಿ ಮಾರಾಟಕ್ಕೆ ಯತ್ನಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ, ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, ಗೋದಾನದಲ್ಲಿ ಸಂಗ್ರಹಿಸಿಟ್ಟಿದ್ದ ಅಂದಾಜು 4.42 ಲಕ್ಷ ರೂ ಮೌಲ್ಯದ ಸುಮಾರು 130 ಕ್ವಿಂಟಲ್ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂದೀಪ ಜರತಾರಘರ ಎಂಬಾತನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ನವನಗರ- ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಬಿ ಪೊಲೀಸರ ಕಾರ್ಯವನ್ನು ಹುಬ್ಬಳ್ಳಿ- ಧಾರವಾಡ ಮಹಾನಗರ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಶ್ಲಾಘಿಸಿದ್ದಾರೆ.
ಕರ್ನಾಟಕದ ಮಟ್ಟಿಗೆ ನಮಗೆ ನಾಲ್ಕಾರು ವಿಧದ ಹಸಿ ಮೆಣಸೂ, ಬ್ಯಾಡಗಿ, ದೇವನೂರು ಮೊದಲಾದ ಒಣಮೆಣಸೇ ಸಾಕು. ಆದರೆ ಇವೆರಡರಲ್ಲಿ (ಅಂದರೆ ಹಸಿ ಅಥವಾ ಒಣ) ಯಾವುದು ಹೆಚ್ಚು ಆರೋಗ್ಯಕರ? ಹಸಿರು ಮೆಣಸಿನ ಆರೋಗ್ಯಲಾಭಗಳು ಸಲಾಡ್,ಚಾಟ್ ಇತ್ಯಾದಿಗಳಲ್ಲಿ ಹಸಿರು ಮೆಣಸಿನ ಬಳಕೆ ಖಾದ್ಯದ ತಾಜಾತನವನ್ನು ಹೆಚ್ಚಿಸುತ್ತದೆ. ಹಸಿರು ಮೆಣಸು ನಾರನ್ನು ಒಳಗೊಂಡಿರುವುದರಿಂದ ಅದರ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಮತ್ತು ಕರುಳು ಆರೋಗ್ಯಯುತವಾಗಿರುತ್ತದೆ. ತೂಕ ಇಳಿಕೆ: ಹಸಿರು ಮೆಣಸಿನಲ್ಲಿ ಕ್ಯಾಲರಿಗಳಿಲ್ಲ,ಹೀಗಾಗಿ ತೂಕ ಇಳಿಕೆಯಲ್ಲಿ ಅದು ತುಂಬ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಇದರ ಸೇವನೆಯು ಶರೀರದ ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ತೂಕ ಇಳಿಕೆಗೆ ನೆರವಾಗುತ್ತದೆ. ವಿಟಾಮಿನ್ ಎ ಅನ್ನು ಸಮೃದ್ಧವಾಗಿ ಹೊಂದಿರುವ ಹಸಿರು ಮೆಣಸು ಕಣ್ಣುಗಳು ಮತ್ತು ಚರ್ಮದ ಆರೋಗ್ಯಕ್ಕೂ ಲಾಭದಾಯಕವಾಗಿದೆ. ಆರೋಗ್ಯಕರ ಹೃದಯ ತಾಜಾ ಹಸಿರು ಮೆಣಸಿನಲ್ಲಿರುವ ಬೀಟಾ ಕ್ಯಾರೊಟಿನ್ ಹೃದಯನಾಳೀಯ ವ್ಯವಸ್ಥೆಯು ಸುಗಮವಾಗಿ ಕಾರ್ಯ…
ತಿರುವನಂತಪುರಂ: ಕೇರಳದ (Kerala) ವೈದ್ಯೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದು, ವರದಕ್ಷಿಣೆಗೆಬೇಡಿಕೆ ಇಟ್ಟದ್ದೇ ಇದಕ್ಕೆ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಮೃತಳನ್ನು ಶಹನಾ (26) ಎಂದು ಗುರುತಿಸಲಾಗಿದೆ. ಇದೀಗ ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ (Veena George) ಅವರು ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸೂಚಿಸಿದ್ದಾರೆ. ತಿರುವನಂತಪುರಂ ಮೆಡಿಕಲ್ ಕಾಲೇಜಿನ ಸರ್ಜರಿ ವಿಭಾಗದ ಪಿಜಿ ವಿದ್ಯಾರ್ಥಿನಿ ಶಹಾನಾ (Shahana) ಸಂಸ್ಥೆಯ ಬಳಿಯ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸ್ನೇಹಿತ ಮದುವೆಯ ಪ್ರಸ್ತಾಪದಿಂದ ಹಿಂದೆ ಸರಿದ ನಂತರ ಶಹನಾ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಆಕೆಯ ಸಂಬಂಧಿಕರು ಆರೋಪಿಸಿದ್ದಾರೆ. ಗೆಳೆಯನ ಕುಟುಂಬವು ಚಿನ್ನ, ಜಮೀನು ಹಾಗೂ ಬಿಎಂಡಬ್ಲ್ಯು ಕಾರಿನ ರೂಪದಲ್ಲಿ ವರದಕ್ಷಿಣೆ ನೀಡುವಂತೆ ಬೇಡಿಕೆ ಇಟ್ಟಿತ್ತು. ಆದರೆ ಈ ಬೇಡಿಕೆಗಳನ್ನು ಈಡೇರಿಸಲು ಶಹಾನಾ ಕುಟುಂಬಕ್ಕೆ ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ವೈದ್ಯಕೀಯ ಪಿಜಿ ವೈದ್ಯರ ಸಂಘದ ಪ್ರತಿನಿಧಿಯೂ ಆಗಿದ್ದ ವೈದ್ಯ ಈಕೆಯ ಜೊತೆಗಿನ ಸಂಬಂಧವನ್ನು ಕೊನೆಗೊಳಿಸಿದ್ದಾನೆ. ಸದ್ಯ…
ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 550 ರೂಪಾಯಿ ಇಳಿಕೆಯಾಗಿದ್ದು 57,150 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 600 ರೂಪಾಯಿ ಕುಸಿತವಾಗಿದ್ದು ಪ್ರಸ್ತುತ 62,350 ರೂಪಾಯಿ ಆಗಿದೆ. 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 450 ರೂಪಾಯಿ ಇಳಿಕೆಯಾಗಿ 46,760 ರೂಪಾಯಿ ಆಗಿದೆ. ಒಂದು ಕೆಜಿ ಬೆಳ್ಳಿ ಬೆಲೆಯು ಇಂದು ಇಳಿಕೆಯಾಗಿದ್ದು, 76,000 ರೂಪಾಯಿ ಆಗಿದೆ. 10 ಗ್ರಾಂ ಲೆಕ್ಕಾಚಾರದಲ್ಲಿ ಬೆಂಗಳೂರು 22 ಕ್ಯಾರೆಟ್ ಚಿನ್ನ: 57,150 ರೂಪಾಯಿ (-550 ರೂಪಾಯಿ) 24 ಕ್ಯಾರೆಟ್ ಚಿನ್ನ: 62,350 ರೂಪಾಯಿ (-600 ರೂಪಾಯಿ) ಮುಂಬೈ 22 ಕ್ಯಾರೆಟ್ ಚಿನ್ನ: 57,150 ರೂಪಾಯಿ (-550 ರೂಪಾಯಿ) 24 ಕ್ಯಾರೆಟ್ ಚಿನ್ನ: 62,350 ರೂಪಾಯಿ (-600 ರೂಪಾಯಿ) ದೆಹಲಿ 22 ಕ್ಯಾರೆಟ್ ಚಿನ್ನ: 57,300 ರೂಪಾಯಿ (-550 ರೂಪಾಯಿ) 24 ಕ್ಯಾರೆಟ್ ಚಿನ್ನ: 62,500 ರೂಪಾಯಿ (-600 ರೂಪಾಯಿ) ಕೇರಳ 22…
ಬೆಂಗಳೂರಿನ ಒರಿಯನ್ ಮಾಲ್‌ನಲ್ಲಿ ನಂದಿ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿದೆ. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ನಟ ರವಿಚಂದ್ರನ್, ರಿಷಬ್ ಶೆಟ್ಟಿ, ಧ್ರುವ ಸರ್ಜಾ ಇನ್ನೂ ಹಲವು ತಾರೆಯರು ಭಾಗಿಯಾಗಿದ್ದಾರೆ. ಜೊತೆಗೆ ಹಿರಿಯ ನಟ ಶ್ರೀನಾಥ್, ನಟಿ ಪ್ರೇಮ, ವಿನೋದ್ ರಾಜ್, ಅನುಪ್ರಭಾಕರ್, ಉಮಾಶ್ರೀ ಇನ್ನೂ ಹಲವು ನಟ-ನಟಿಯರು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇದು ಮೊದಲ ನಂದಿ ಫಿಲಂ ಅವಾರ್ಡ್ ಆಗಿದ್ದು ಅದ್ಧೂರಿಯಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ನಟ ರವಿಚಂದ್ರನ್ ಮಾತನಾಡಿ, ‘ನಂದಿ ಪ್ರಶಸ್ತಿ ನೀಡುತ್ತಿರುವುದು ಬಹಳ ಖುಷಿಯಾಗಿದೆ. ಪ್ರಶಸ್ತಿ ಬಹಳ ಭಾರವಾಗಿದೆ ಅದು ನನಗೆ ಖುಷಿ ಕೊಟ್ಟಿತು, ನನ್ನಂಥಹಾ ಶಿವ ಭಕ್ತನಿಂದ ನಂದಿ ಪ್ರಶಸ್ತಿ ಕೊಡಿಸುತ್ತಿದ್ದೀರ. ಎಲ್ಲರ ಮನೆಗಳಿಗೂ ನಂದಿ ಸೇರುತ್ತದೆ ಎಂಬುದು ನನಗೆ ಖುಷಿ’ ಎಂದರು. ನಟ ಶ್ರೀನಾಥ್ ಅವರಿಗೆ ಜೀವನಮಾನ ಸಾಧನೆಗೆ ಲೈಫ್ ಟೈಮ್ ಅಚೀವ್ಮೆಂಟ್ ಅವಾರ್ಡ್ ನೀಡಲಾಯ್ತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಕಟ ಪೂರ್ವ ಅಧ್ಯಕ್ಷರಾದ ಭಾ.ಮಾ.ಹರೀಶ್, ನಿರ್ಮಾಪಕ ನಿತ್ಯಾನಂದ…
ಕಾಗವಾಡ:- ಪೋಲಿಸ್ ಠಾಣೆಯ ವತಿಯಿಂದ ಪಿಎಸ್‌ಐ ಎಂ.ಬಿ. ಬಿರಾದರ ಇವರ ನೇತೃತ್ವದಲ್ಲಿ ಪಟ್ಟಣದಲ್ಲಿ ಹೆಲ್ಮೆಟ್ ಧರಿಸುವಂತೆ ವಾಹನ ಸವಾರರಿಗೆ ಜಾಗೃತಿ ಮೂಡಿಸಲು ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಯಿತು. ಠಾಣಾ ಆರಕ್ಷಕ ಉಪನಿರೀಕ್ಷಕರಾದ ಎಂ.ಬಿ. ಬಿರಾದರ ಇವರ ನೇತೃತ್ವದಲ್ಲಿ ಎಲ್ಲ ಪೊಲೀಸ್ ಸಿಬ್ಬಂದಿಯವರು ಠಾಣೆಯಿಂದ ಹೊರಟು, ಚೆನ್ನಮ್ಮಾ ಸರ್ಕಲ್, ಬಸ್ ನಿಲ್ದಾಣ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪೊಲೀಸ್ ವಾಹನದೊಂದಿಗೆ ಸಿಬ್ಬಂದಿಯವರು ಬೈಕ್ ಮೇಲೆ ಹೆಲ್ಮೆಟ್ ಧರಿಸುವ ಮೂಲಕ ರ‍್ಯಾಲಿ ನಡೆಸಿದರು. ಜನದಟ್ಟಣೆ ಇರುವ ಜಾಗದಲ್ಲಿ ಬೈಕ್ ನಿಲ್ಲಿಸಿ, ಮಾತನಾಡಿದ ಪಿಎಸ್‌ಐ ಎಂ.ಬಿ. ಬಿರಾದರ ಅವರು ಇತ್ತೀಚಿನ ದಿನಗಳಲ್ಲಿ ವಾಹನಗಳ ಸಂಖ್ಯೆ ಹಾಗೂ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಕಬ್ಬಿನ ಹಂಗಾಮು ಪ್ರಾರಂಭವಾಗಿದ್ದರಿAದ ರಸ್ತೆ ಮೇಲೆ ವಾಹನ ದಟ್ಟಣೆ ಹೆಚ್ಚುತ್ತಿದೆ. ಇದರಿಂದ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ವಾಹನ ಸವಾರರು ವಾಹನ ಚಾಲನೆ ಮಾಡುವಾಗ ತಮ್ಮ ಸುರಕ್ಷತೆ ದೃಷ್ಟಿಯಿಂದ ಇಲಾಖೆ ನೀತಿ ನಿಯಮಗಳನ್ನು ಪಾಲಿಸುವ ಮೂಲಕ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ, ಸುರಕ್ಷಿತ ಪ್ರಯಾಣ ಮಾಡಬೇಕು.…