ಬೆಂಗಳೂರು:- ಹಿಂದು ʼಅಶ್ಲೀಲʼ ಪದ ಹೇಳಿಕೆ ನೀಡಿದ ಸಚಿವ ಸತೀಶ್ ಜಾರಕಿಹೊಳಿಗೆ ಕೋರ್ಟ್ ನೋಟಿಸ್ ನೀಡಿದೆ. ವಕೀಲ ದಿಲೀಪ್ ಕುಮಾರ್ ಎಂಬುವವರು ದೂರು ನೀಡಿದ್ದರಿಂದ ಬೆಂಗಳೂರಿನ ಸೆಷನ್ಸ್ ಕೋರ್ಟ್‌ನಿಂದ ವಿಚಾರಣಗೆ ಹಾಜರಾಗುವಂತೆ ಸತೀಶ್ ಜಾರಕಿಹೊಳಿಗೆ ನೋಟಿಸ್ ನೀಡಲಾಗಿದೆ. 2022ರ ನವೆಂಬರ್ 7ರಂದು ಕಾರ್ಯಕ್ರಮವೊಂದರಲ್ಲಿ ಹಿಂದು ಪದಕ್ಕೆ ಆಶ್ಲೀಲ ಅರ್ಥವಿದೆ ಎಂದು ವಿವಾದಿತ ಹೇಳಿಕೆ ನೀಡಿದ್ದರು. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರ್ಟ್‌ಗೆ ವಕೀಲ ದೂರು ನೀಡಿದ್ದಾರೆ. ಹಿಂದು ಧರ್ಮದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಸಚಿವ ಜಾರಕಿಹೊಳಿ ವಿರುದ್ಧ ಹಿಂದು ಸಂಘಟನೆಗಳು, ಬಿಜೆಪಿ ನಾಯಕರು ವ್ಯಾಪಕ ಆಕ್ರೋಶ ಹೊರಹಾಕಿದ್ದರು. ನಂತರ ಸಚಿವರು ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದರು. ಹಲವು ತಿಂಗಳ ಬಳಿಕ ಪ್ರಕರಣದಲ್ಲಿ ಸಚಿವರ ವಿರುದ್ಧ ದೂರು ದಾಖಲಾಗಿದೆ.
Author: AIN Author
#AINlivenews #ainlivenews #KannadaNews #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines ಬೆಂಗಳೂರು #nammabengaluru #bengaluru #karnataka #bangalore #kannada #bescom #bda #bbmp #breakingnews # namma Metro #bmtc #KSRTC #crimenews #bignews #karnatakatody #instagram #kannadamemes #photography #bengalurulive #siddaramaiah #DKShivakumar #DK Shivkumaŗ #Hd Kumarswamy #bengalurudiaries #bengaluruadda #bengalurunews ಜಿಲ್ಲೆ #karnataka #kannada #india #bangalore #sandalwood #mysore #kerala #bengaluru #yash #karnatakatourism #photography #kannadaactress #mumbai #instagram #dboss #kicchasudeep #mandya #udupi #banglore #love #darshan #tamilnadu #mangalore #official #delhi #kannadamovies #hubli #kannadamusically #sandalwoodactress #mysuru #hubballi #hubli ರಾಷ್ಟ್ರೀಯ #india #instagram #love #photography #instagood #mumbai #kerala #bhfyp #follow #nature #indian #travel #likeforlikes #delhi #like #fashion #photooftheday…
ಬೆಂಗಳೂರು:- ಬೆಂಗಳೂರಿನ ಜೆಜೆ ನಗರದ ನಾಲ್ಕನೆ ಕ್ರಾಸ್‌ನಲ್ಲಿ ಪತ್ನಿ ತನ್ನನ್ನು ದೂರ ಮಾಡಿದ್ದರಿಂದ ಡಿಪ್ರೆಷನ್‌ಗೆ ಒಳಗಾದ ವ್ಯಕ್ತಿಯೊಬ್ಬ ಆಕೆಯ ಸಂಬಂಧಿ ಮಹಿಳೆಯನ್ನು ಕೊಲೆ ಮಾಡಿದ್ದಾನೆ. ಪರ್ವಿನ್ ತಾಜ್ ಹಲ್ಲೆಗೀಡಾಗಿ ಮೃತಪಟ್ಟ ಮಹಿಳೆ. ಮಹಮ್ಮದ್ ಜುನೈದ್ ಎಂಬಾತನಿಂದ ಕೊಲೆ ನಡೆದಿದೆ. ಆರೋಪಿ ಮತ್ತು ಮೃತ ಮಹಿಳೆ ಸಂಬಂಧಿಗಳಾಗಿದ್ದಾರೆ. ಜುನೈದ್ ಹಾಗೂ ಆತನ ಪತ್ನಿ ಜಗಳವಾಡಿಕೊಂಡಿದ್ದರು. ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿ ಇಬ್ಬರಿಗೂ ಬುದ್ಧಿವಾದ ಹೇಳಿ ಕಳಿಸಲಾಗಿತ್ತು. ಇದಾದ ಮೇಲೆ ಜುನೈದ್ ಪತ್ನಿಯಿಂದ ದೂರಾಗಿದ್ದ. ಪತ್ನಿಯಿಂದ ದೂರವಾಗಿ ಡಿಪ್ರೆಶನ್‌ಗೆ ಒಳಗಾಗಿದ್ದ. ಪತ್ನಿ ದೂರವಾದುದರಿಂದ ಮಾನಸಿಕವಾಗಿ ನೊಂದಿದ್ದ. ಈ ವೇಳೆ ಆತ ಪರ್ವಿನ್ ತಾಜ್‌ಗೆ ಹತ್ತಿರವಾಗಿದ್ದ. ಪರ್ವಿನ್ ತಾಜ್ ಆರೋಪಿಯ ಪತ್ನಿಯ ಸಂಬಂಧಿಯಾಗಿದ್ದಳು. ಆದರೆ ಇತ್ತೀಚೆಗೆ ಪರ್ವಿನ್ ಸಹ ಜುನೈದ್‌ನನ್ನು ದೂರವಿಟ್ಟಿದ್ದಳು. ಈ ವಿಚಾರಕ್ಕೆ ಕೋಪಗೊಂಡಿದ್ದ ಆರೋಪಿ ಜುನೈದ್, ಚಾಕು ಸಹಿತ ನೇರವಾಗಿ ಪರ್ವಿನ್ ಮನೆಗೆ ಹೋಗಿದ್ದ. ಪರ್ವಿನ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಪರ್ವಿನ್ ಮೃತ ದೇಹವನ್ನು…
ನೆಲಮಂಗಲ:- ಬೆಂಗಳೂರು ಉತ್ತರ ತಾಲೂಕಿ ಗುಣಿ ಅಗ್ರಹಾರ ಗ್ರಾಮದಲ್ಲಿ ಮನೆಯ ಬಳಿ ಹುಲ್ಲು ಮೇಯಲು ಬಂದ ಹಸುಗಳ ಮೇಲೆ ಕ್ರೈಸ್ತ ವೃದ್ಧೆಯೊಬ್ಬರು ಆಯಸಿಡ್ ಎರಚಿ ಪೈಶಾಚಿಕ ಕೃತ್ಯವೆಸಗಿರುವ ಘಟನೆ ಜರುಗಿದೆ ಆಯಸಿಡ್ ಎರಚಿದ ಹಿನ್ನೆಲೆಯಲ್ಲಿ 10ಕ್ಕೂ ಹೆಚ್ಚು ಹಸುಗಳು ಗಾಯಗೊಂಡಿದ್ದು, ನೋವು ತಾಳಲಾರದೇ ರೋದಿಸುತ್ತಿವೆ. ಗುಣಿ ಅಗ್ರಹಾರ ಗ್ರಾಮದ ನಿವಾಸಿ ಗ್ರೀಸ್ ಜೋಸೆಫ್ ಎಂಬ ಕ್ರೈಸ್ತ ವೃದ್ಧ ಮಹಿಳೆ ವಿರುದ್ಧ ಅಮಾನವೀಯ ಕೃತ್ಯ ಎಸಗಿದ ಆರೋಪ ಕೇಳಿಬಂದಿದೆ. ಆಯಸಿಡ್ ದಾಳಿಯಿಂದ ಗ್ರಾಮದ ಕೃಷ್ಣ, ನಾಗರಾಜು, ಹನುಮಂತ ರಾಜು ಮತ್ತು ಶ್ರೀರಾಮ್ ಎಂಬುವರ ಹಸುಗಳು ಗಾಯಗೊಂಡಿವೆ. ಹೊಟ್ಟೆ ಮತ್ತು ಬೆನ್ನಿನ ಭಾಗದಲ್ಲಿ ತೀವ್ರವಾಗಿ ಗಾಯಗಳಾಗಿರುವುದರಿಂದ ನೋವು ತಾಳಲಾರದೇ ಮೂಕ ಪ್ರಾಣಿಗಳು ರೋದಿಸುತ್ತಿವೆ. ಮನೆ ಬಳಿ ಹುಲ್ಲು ಮೇಯಲು ಬಂದ ಹಸುಗಳ ಮೇಲೆ ಟೈಲ್ಸ್ ಕ್ಲೀನ್ ಮಾಡುವ ಆಯಸಿಡ್ ಅನ್ನು ವೃದ್ಧೆ ಎರಚಿದ್ದಾಳೆ
ಲಕ್ನೋ: ಬಿಎಸ್‍ಪಿ (BSP) ನಾಯಕಿ ಮಾಯಾವತಿಯವರು (mayawati) ತಮ್ಮ ಸೋದರಳಿಯ ಆಕಾಶ್ ಆನಂದ್ (Akash Anand) ಅವರನ್ನು ಉತ್ತರಾಧಿಕಾರಿಯಾಗಿ ಘೋಷಣೆ ಮಾಡಿದ್ದಾರೆ. ಪಕ್ಷದ ಪದಾಧಿಕಾರಿಗಳ ಪ್ರಮುಖ ಸಭೆಯ ನಂತರ ಈ ಮಹತ್ವದ ಬೆಳವಣಿಗೆ ನಡೆದಿದೆ. ಮಾಯಾವತಿಯವರು ತಮ್ಮ ರಾಜಕೀಯ ಉತ್ತರಾಧಿಕಾರಿಯನ್ನು ಘೋಷಣೆ ಮಾಡಿದರು. ಸದ್ಯಕ್ಕೆ ಉತ್ತರ ಪ್ರದೇಶದ (Uttarapradesh) ಮಾಜಿ ಮುಖ್ಯಮಂತ್ರಿ ಮಾಯಾವತಿಯವರೇ ಪಕ್ಷದ ಮುಖ್ಯಸ್ಥರಾಗಿ ಮುಂದುವರಿಯಲಿದ್ದು, https://ainlivenews.com/notice-to-shah-rukh-khan-ajay-akshay-kumar-do-you-know-why/ ಇವರ ನಂತರ ಸೋದರಳಿಯ ಆಕಾಶ್ ಆನಂದ್ ಪಕ್ಷದ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ. ಬಿಎಸ್‍ಪಿಯ ರಾಷ್ಟ್ರೀಯ ಸಂಯೋಜಕರಾಗಿರುವ ಆಕಾಶ್ ಇತ್ತೀಚೆಗೆ ನಡೆದ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‍ಪಿಯ ಉಸ್ತುವಾರಿಯಾಗಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಮಧ್ಯಪ್ರದೇಶ, ಛತ್ತೀಸ್‍ಗಢ ಮತ್ತು ತೆಲಂಗಾಣದಲ್ಲಿ (Telangana) ಬಿಎಸ್‍ಪಿ ಪ್ರಚಾರಕ್ಕಾಗಿ ಕೆಲಸ ಮಾಡಿದ್ದಾರೆ.
ಬೆಂಗಳೂರು:- ಬಿಜೆಪಿ ಅವಧಿಯ ವಿವಿಧ ಕಾಮಗಾರಿಗಳಲ್ಲಿ ಅಕ್ರಮ ನಡೆದಿದೆ’ ಎಂಬ ಆರೋಪಗಳ ಕುರಿತಂತೆ ತನಿಖೆ ನಡೆಸಲು ವಿಶೇಷ ತನಿಖಾ ಸಮಿತಿ ನೇಮಕ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ. ‘ಹೊಸ ಸರ್ಕಾರವು ಈ ಹಿಂದಿನ ಸರ್ಕಾರದ ನಿಲುವಿಗಿಂತಲೂ ಭಿನ್ನವಾದ ನಿಲುವು ಕೈಗೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ರಾಜ್ಯ ಸರ್ಕಾರ ತನ್ನ ಕ್ರಮದ ಕುರಿತು ಸಮರ್ಥನೆ ನೀಡಬೇಕಿದೆ. ಅದಕ್ಕಾಗಿ ತನಿಖಾ ಸಮಿತಿ ಮತ್ತು ಏಕವ್ಯಕ್ತಿ ತನಿಖಾ ಆಯೋಗ ರಚನೆ ಮಾಡಿರುವ ಸರ್ಕಾರದ ಆದೇಶ, ಅದಕ್ಕೆ ಸಂಬಂಧಿಸಿದ ಮುಂದಿನ ಎಲ್ಲಾ ಪ್ರಕ್ರಿಯೆಗಳಿಗೆ ತಡೆ ನೀಡಲಾಗಿದೆ’ ಎಂದು ಆದೇಶದಲ್ಲಿ ವಿವರಿಸಲಾಗಿದೆ.
ಬೆಂಗಳೂರು:- ಅಕ್ರಮವಾಗಿ ಜೂಜು ದಂಧೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಸಿಗುತ್ತಿದ್ದಂತೆ ಹಲಸೂರು ರಸ್ತೆಯಲ್ಲಿರುವ ವೈಎಂಐಎ ಕ್ಲಬ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು ಜೂಜು ಆಡುತ್ತಿದ್ದವರನ್ನ ವಶಕ್ಕೆ ಪಡೆದಿದ್ದಾರೆ. ಭಾರತೀನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ರಮವಾಗಿ ಅಂದರ್ ಬಾಹರ್ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ನಗರದ ಕ್ಲಬ್ವೊಂದರ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಅನೇಕರನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ ಎನ್ನಲಾಗಿದೆ.
ಟಾಲಿವುಡ್ ನಟಿ ಸಮಂತಾ (Samantha) ಅವರು ಅನಾರೋಗ್ಯದ ಸಮಸ್ಯೆಯಿಂದ ಬ್ರೇಕ್ ತೆಗೆದುಕೊಂಡಿದ್ದರು. ಇದೀಗ ಕಿರುತೆರೆಗೆ ಗ್ರ್ಯಾಂಡ್ ಆಗಿ ಸ್ಟೈಲೀಶ್ ಲುಕ್‌ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಮಾಡ್ರರ್ನ್ ಲುಕ್‌ನಲ್ಲಿ ಸಮಂತಾ ಮಿಂಚಿದ್ದಾರೆ. ಕಿರುತೆರೆಯ ರ‍್ಯಾಪ್ ರಿಯಾಲಿಟಿ ಶೋನಲ್ಲಿ ಸಮಂತಾ ಭಾಗವಹಿಸಿದ್ದಾರೆ. ಗಾಯಕ ಹನಿ ಸಿಂಗ್ ಜೊತೆ ಸಮಂತಾ ಜಡ್ಜ್ ಆಗಿ ಸಮಂತಾ ಸಾಥ್ ನೀಡಿದ್ದಾರೆ. ಕಾರ್ಯಕ್ರಮದ ಕೆಲ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಸಮಂತಾ ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ. ಸ್ಟೈಲೀಶ್ ಲುಕ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿರೋದು ಅಭಿಮಾನಿಗಳ ಗಮನ ಸೆಳೆದಿದೆ. ಸಮಂತಾ ನಯಾ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ನಾಗಚೈತನ್ಯ (Nagachaitanya) ಜೊತೆಗಿನ ಡಿವೋರ್ಸ್ ನಂತರ ಮತ್ತಷ್ಟು ವೃತ್ತಿರಂಗದಲ್ಲಿ ಗೆದ್ದು ತೋರಿಸಿದ್ದರು. ‘ಪುಷ್ಪ’ (Pushpa) ಸಿನಿಮಾದಲ್ಲಿ ಸಮಂತಾ ಸೊಂಟ ಬಳುಕಿಸಿ ಮನೆಮಾತಾದರು. ಮತ್ತೆ ಸಮಂತಾ ಎಂಟ್ರಿಗೆ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಸಮಂತಾ (Samantha) ಕೈಯಲ್ಲಿ ಟಾಲಿವುಡ್ ಸಿನಿಮಾ, ಬಾಲಿವುಡ್ ಚಿತ್ರಗಳು ಕೈಯಲ್ಲಿವೆ. ಮತ್ತೆ ಅದ್ಯಾವಾಗ ಕಮ್‌ಬ್ಯಾಕ್ ಬಗ್ಗೆ ನಟಿ ಗುಡ್ ನ್ಯೂಸ್ ಕೊಡುತ್ತಾರೆ ಅಂತ ಕಾಯುತ್ತಿದ್ದಾರೆ.
ಚಿಕ್ಕಮಗಳೂರು :- ಬಿಜೆಪಿ ಪಕ್ಷದ ಮುಖಂಡರು ಈ ಬಾರಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ನಿಲ್ಲುವಂತೆ ಮಾಜಿ ಸಚಿವ ಸಿ.ಟಿ.ರವಿ ಅವರನ್ನು ಆಗ್ರಹಿಸಿದ್ದಾರೆ. ಸೋಮವಾರ ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಈ ಒತ್ತಾಯ ಕೇಳಿಬಂತು. ಮುಖಂಡರು ಸಿ.ಟಿ.ರವಿ ಸಮ್ಮುಖದಲ್ಲೇ ಅವರನ್ನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಡ ಹೇರಿದರು. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಜಿಲ್ಲೆಯ 5 ಕ್ಷೇತ್ರಗಳಲ್ಲಿ ಸೋತಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲೂ ಇದೇ ಫಲಿತಾಂಶ ಬಂದರೆ ಪಕ್ಷಕ್ಕೆ ತುಂಬಾ ಹಾನಿಯಾಗಲಿದೆ. ಅಂಥ ಪರಿಸ್ಥಿತಿ ಬರಬಾರದು, ಪಕ್ಷ ಇನ್ನಷ್ಟು ಸಂಘಟನಾತ್ಮಕವಾಗಿ ಬೆಳೆಯಬೇಕಾದರೆ ತಾವೇ ಸ್ಪರ್ಧೆ ಮಾಡಬೇಕು ಎಂದು ಆಗ್ರಹಿಸಿದರು. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸಿ.ಟಿ.ರವಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡುವಂತೆ ಕೋರಿ ಪಕ್ಷದ ವರಿಷ್ಠರಿಗೆ ಆಗ್ರಹಿಸಲು ಜಿಲ್ಲೆಯಿಂದ ನಿಯೋಗ ತೆಗೆದುಕೊಂಡು ಹೋಗಲಾಗುವುದು ಎಂದ ಮುಖಂಡರು, ಕ್ಷೇತ್ರದ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರು ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧೆ ಮಾಡಲಿ, ನೀವು ಇಲ್ಲೇ ಸ್ಪರ್ಧೆ ಮಾಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ…
ಬೆಂಗಳೂರು:- ರಾಜ್ಯದ ಸರಕಾರಿ ಶಾಲೆಗಳ ಪೈಕಿ ಇನ್ನೂ 69 ಶಾಲೆಗಳಲ್ಲಿ ಶೌಚಾಲಯ ಹಾಗೂ ನೀರಿನ ವ್ಯವಸ್ಥೆ ಇಲ್ಲ ಎಂಬುವುದು ಸಮೀಕ್ಷೆಯಲ್ಲಿ ಬಯಲಾಗಿದೆ. ಶೌಚಾಲಯ ಮತ್ತು ಕುಡಿಯುವ ನೀರು ಲಭ್ಯತೆ ಕೊರತೆ ಎದುರಿಸುತ್ತಿದ್ದ ರಾಜ್ಯದ 551 ಶಾಲೆಗಳಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಅವುಗಳಲ್ಲಿ 482 ಶಾಲೆಗಳ ಸ್ಥಿತಿ ತೃಪ್ತಿಕರವಾಗಿದೆ ಮತ್ತು 69 ಶಾಲೆಗಳ ಸ್ಥಿತಿ ತೃಪ್ತಿಕರವಾಗಿಲ್ಲ ಎಂಬುದು ಸಮೀಕ್ಷೆಯಿಂದ ಕಂಡು ಬಂದಿದೆ ಎಂದು ಶಾಲಾ ಶಿಕ್ಷಣ ಇಲಾಖೆಯೇ ಹೈಕೋರ್ಟ್‌ಗೆ ಸೋಮವಾರ ತಿಳಿಸಿದೆ. ಶಾಲೆಯಿಂದ ಹೊರಗುಳಿದ ಮಕ್ಕಳ ಕುರಿತಂತೆ ಮಾಧ್ಯಮಗಳ ವರದಿ ಆಧರಿಸಿ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾಯಮೂರ್ತಿ ಪಿ. ಬಿ. ವರಲೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಆಗ ಸರ್ಕಾರಿ ವಕೀಲರು, ನ್ಯಾಯಾಲಯದ ನಿರ್ದೇಶನದಂತೆ ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ಪ್ರತಿನಿಧಿಗಳ ಸಮಕ್ಷಮದಲ್ಲಿ ಶಾಲೆಗಳ ಸಮೀಕ್ಷೆ ನಡೆಸಲಾಗಿದ್ದು, ಅದರ ವರದಿಯನ್ನು ಶಿಕ್ಷಣ ಇಲಾಖೆ ಆಯುಕ್ತೆ ಬಿ. ಬಿ. ಕಾವೇರಿ…