Author: AIN Author

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಹಳ್ಳಹಿಡಿಯುತ್ತಿದ್ಯಾ ಎಂಬ ಅನುಮಾನ ಶುರುವಾಗಿದೆ. ಬೆಂಗಳೂರು, ಹಾಸನ, ರಾಯಚೂರು, ಮಂಡ್ಯ, ಕೋಲಾರ ಜಿಲ್ಲೆಯಲ್ಲಿ ಕೆಲವು ಮಹಿಳೆಯರಿಗೆ (Women) ಮೊದಲ ತಿಂಗಳ ಹಣ ಮಾತ್ರ ಬಂದಿದ್ದರೆ, ಕೆಲವರಿಗೆ ಮೂರು ತಿಂಗಳ ಹಣ ಬಂದಿದೆ. ಆದರೆ ಕಡು ಬಡವರು, ಬೀದಿ ಬದಿ ವ್ಯಾಪಾರಿಗಳಿಗೆ ಒಂದು ತಿಂಗಳ ಹಣವೂ ಬಂದಿಲ್ಲ ಅಧಿಕಾರಿಗಳನ್ನು ಪ್ರಶ್ನಿಸಿದರೆ ಆಧಾರ್ ಕಾರ್ಡ್ ನಂಬರ್, ಫೋನ್ ನಂಬರ್ ಸರಿಯಲ್ಲ ಎನ್ನುತ್ತಾರೆ. ಎಲ್ಲವನ್ನು ಸರಿಪಡಿಸಿದರೂ ಸಹ ಹಣ ಬಂದಿಲ್ಲ ಎಂದು ಸರ್ಕಾರದ ವಿರುದ್ದ ಮಹಿಳೆಯರು ಕಿಡಿಕಾರಿದ್ದಾರೆ.ಬ್ಯಾಂಕ್ ಹಾಗೂ ಕಂಪ್ಯೂಟರ್ ಸೆಂಟರ್‌ಗಳಲ್ಲಿ ಗ್ಯಾರೆಂಟಿ ಯೋಜನೆ ಹಣದ ಬಗ್ಗೆ ವಿಚಾರಿಸಿ ನಿರಾಶರಾಗಿದ್ದೇವೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ

Read More

ಬೆಂಗಳೂರು : ದುನಿಯಾ ದಿನೇ ದಿನೇ ಸಿಕ್ಕಾಪಟ್ಟೆ ಕಾಸ್ಟ್ಲಿ ಆಗಿದೆ. ಜನ ಸಾಮಾನ್ಯರುಂತೂ ಬದುಕೋಕೆ ಆಗ್ತಿಲ್ಲ. ಏಪ್ರಿಲ್ ಮೇ, ತಿಂಗಳು ಬಂದ್ರೆ ಕರೆಂಟ್ ಬಿಲ್ ಏರಿಕೆ ಆಗೇ ಬಿಡುತ್ತೆ. ಆದ್ರೀಗ ಕರೆಂಟ್ ಬಿಲ್ ನಂತೆ ಆಟೋ ಪ್ರಯಾಣ ದರವೂ ವರ್ಷಕ್ಕೊಮ್ಮೆ ಏರಿಸುವಂತೆ ಆಟೋ ಚಾಲಕರು ಮಾಲೀಕರು ಸರ್ಕಾರದ ಕದ ತಟ್ಟಿದ್ದಾರೆ. ಹಾಗಾದ್ರೆ ನಗರದಲ್ಲಿ ಇನ್ಮೇಲೆ ಆಟೋ ಪ್ರಯಾಣ ದುಬಾರಿಯಾಗುತ್ತಾ ಬನ್ನಿ ತೋರಿಸ್ತೀವಿ ಬೆಂಗಳೂರು ಜನರಿಗೆ ಒಂದಲ್ಲ ಒಂದು ಶಾಕ್ ಕಾಡ್ತಾನೆ ಇದೆ. ಶ್ರೀ ಸಾಮಾನ್ಯರು ಮಧ್ಯಮ ವರ್ಗದ ಜನರಿಗಂತೂ ಈ ದುನಿಯಾದಲ್ಲಿ ಜೀವನ ಮಾಡೋಕೆ ಆಗ್ತಿಲ್ಲ. ಎಲ್ಲಾವೂ ತುಂಬನೇ ಕಾಸ್ಟ್ಲಿ . ಸರ್ಕಾರಿ ಇಲಾಖೆಗಳು ಅಂತೂ ನಷ್ಟದ ನೆಪವೊಡ್ಡಿ ಕರೆಂಟ್ ದರ ನಂದಿನಿ ಹಾಲು ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯನ್ನ ಏರಿಕೆ ಮಾಡ್ತಾನೆ ಬಂದಿದೆ.ಆದ್ರೆ ಈಗ ಸರ್ಕಾರಿ ಇಲಾಖೆಗಳಂತೆ ನಮಗೂ ಪ್ರತಿ ವರ್ಷ ಆಟೋ ಪ್ರಯಾಣದ ಏರಿಸಿ ಅಂತ ಆಟೋ ಚಾಲಕರು ಪಟ್ಟು ಹಿಡಿದಿದ್ದಾರೆ. ಹೌದು.. ಒಂದು ಕಡೆ ಪೆಟ್ರೋಲ್ ರೇಟ್…

Read More

ಬೆಂಗಳೂರು: ಮೆಟ್ರೋ ರೈಲು, ಕ್ಯಾಬ್, ಬಸ್ ಗಳು ಸೇರಿದಂತೆ ವಿವಿಧ ಮಾದರಿಯ ಸಂಚಾರ ವ್ಯವಸ್ಥೆಗಳಿಗೆ ದೇಶಾದ್ಯಂತ ಒಬ್ಬ ಪ್ರಯಾಣಿಕರಿಗೆ ಒಂದು ಸ್ಮಾರ್ಟ್ ಕಾರ್ಡ್ ಸೌಲಭ್ಯ ಕೇಂದ್ರದಿಂದ ಶೀಘ್ರವೇ ಜಾರಿಯಾಗಲಿದೆ. ನಿಲ್ದಾಣಗಳಲ್ಲಿ ಇ-ವಾಹನ ಚಾರ್ಜಿಂಗ್‌ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಹೇಳಿದರು. ಇತ್ತೀಚೆಗೆ ಬೆಂಗಳೂರು ಟೆಕ್ ಸಮ್ಮಿಟ್ʼನ ಎರಡನೇ ದಿನ ಭವಿಷ್ಯದ ಸಂಚಾರಕ್ಕಾಗಿ ಸಮನ್ವಯದ, ಸ್ವಾಯತ್ತ, ಹಂಚಿಕೆಯ ಮತ್ತು ಎಲೆಕ್ಟ್ರಿಕ್ ವ್ಯವಸ್ಥೆʼ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದ್ದು, ಇನ್ನು 6 ತಿಂಗಳಲ್ಲಿ ವಿವಿಧ ಮಹಾನಗರಗಳಲ್ಲಿ ಜಾರಿಗೊಳ್ಳಲಿದೆ ಎಂದರು. ಪರಿಸರಸ್ನೇಹಿ ಸಂಚಾರ ವ್ಯವಸ್ಥೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಬೆಂಗಳೂರಿನ ಮೆಟ್ರೋ ರೈಲು ನಿಲ್ದಾಣಗಳಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.

Read More

ಬೆಂಗಳೂರು: ಶಾಲಾ ಮಕ್ಕಳಿಗೆ ಸಿಹಿಸುದ್ದಿಯನ್ನು ನೀಡಲು ಮುಂದಾಗಿದ್ದು, ಮುಂದಿನ ವರ್ಷದಿಂದಲೇ ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ ಮಾಡಲಾಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ರವಿಕುಮಾರ್ ಪ್ರಶ್ನೆಗೆ ಅವರು ಉತ್ತರಿಸಿದರು. ಶಾಲಾ ಮಕ್ಕಳಿಗೆ ಯಾಕೆ ಸೈಕಲ್ ಕೊಡ್ತಿಲ್ಲ? ಬಿಜೆಪಿ‌ ಸರ್ಕಾರ ಸೈಕಲ್ ನಿಲ್ಲಿಸಿತ್ತು ಒಪ್ಪುತ್ತೇನೆ? ಅದಕ್ಕೆ ಜನ ನಮ್ಮನ್ನ ಇಲ್ಲಿಗೆ ಕೂರಿಸಿದ್ದಾರೆ. ಆದರೇ, ಈ ಸರ್ಕಾರಕ್ಕೆ ಸೈಕಲ್ ಕೊಡಲು ಹಣದ ಕೊರತೆ ಇದೆಯಾ? ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಸಚಿವ ಮಧು ಬಂಗಾರಪ್ಪ, 2023-24ನೇ ಸಾಲಿನಲ್ಲಿ 55,43,828 ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ನೀಡಲಾಗಿದೆ. 45,45,749 ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶೂ, ಸಾಕ್ಸ್ ವಿತರಿಸಲಾಗಿದೆ. ವಿದ್ಯಾರ್ಥಿಗಳಿಗೆ ಸೈಕಲ್ ಹಿಂದಿನ ಸರ್ಕಾರ ಕೊಡೋದು ನಿಲ್ಲಿಸಿದೆ. ನಾನು ಈಗಾಗಲೇ ಸಿಎಂ ಜೊತೆಗೆ ಮಾತಾಡಿದ್ದೇನೆ. ಮುಂದಿನ ವರ್ಷದಿಂದಲೇ 8ನೇ ತರಗತಿ ಮಕ್ಕಳಿಗೆ ಸೈಕಲ್ ಕೊಡುವ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ಕೊಟ್ಟರು.

Read More

ಬೆಂಗಳೂರು: ಮಹಿಳೆಯನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ ಪ್ರಕರಣವು ಇತ್ತೀಚೆಗೆ ಬೆಳಗಾವಿಯ ವೆಂಟಮೂರಿ ಗ್ರಾಮದಲ್ಲಿ ನಡೆದಿತ್ತು. ಸಂತ್ರಸ್ತೆಯ ಗುರುತು ಪತ್ತೆಯಾಗುವಂತೆ ವರದಿ ಮಾಡಿದ ಮಾಧ್ಯಮಗಳ ಕ್ರಮಕ್ಕೆ ರಾಜ್ಯ ಹೈಕೋರ್ಟ್​ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ಸಂತ್ರಸ್ತೆಯ ವಿಡಿಯೋ ಅಥವಾ ಫೋಟೋ ಪ್ರಸಾರ ಮಾಡದಂತೆ ಮಂಗಳವಾರ ಆದೇಶಿಸಿದೆ. ಮಹಿಳೆಯೊಬ್ಬರನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಿದ ಬಗ್ಗೆ ಮಾಧ್ಯಮಗಳ ವರದಿಗಳನ್ನು ಗಮನಿಸಿದ ಹೈಕೋರ್ಟ್, ಈ ಸಂಬಂಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ ಮತ್ತು ಘಟನೆಗೆ ಸಂಬಂಧಿಸಿದ ಯಾವುದೇ ವೀಡಿಯೊಗಳನ್ನು ಪ್ರಸಾರ ಮಾಡದಂತೆ ಎಲ್ಲಾ ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಆದೇಶಿಸಿದೆ. ಘಟನೆಯ ಸ್ಥಿತಿಗತಿ ವರದಿಯನ್ನು ಡಿಸೆಂಬರ್ 14 ರಂದು ಸಲ್ಲಿಸುವಂತೆ ಅಡ್ವೊಕೇಟ್ ಜನರಲ್ ಅವರಿಗೆ ಹೈಕೋರ್ಟ್ ಸೂಚಿಸಿದೆ. ಗೃಹ ಸಚಿವರು ಸಂತ್ರಸ್ತೆಯನ್ನು ಭೇಟಿಯಾದ ಸಂದರ್ಭದಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾದ ಫೋಟೋದಲ್ಲಿ ಸಂತ್ರಸ್ತೆಯ ಗುರುತು ಸಿಗುವಂತೆ ಇದೆ. ಇದು ಮಾಧ್ಯಮದವರ ಅತ್ಯಂತ ಬೇಜವಾಬ್ದಾರಿ ಮತ್ತು ಸಂವೇದನಾರಹಿತವರ್ತನೆ ಹೈಕೋರ್ಟ್ ಕಿಡಿ ಕಾರಿದೆ. ವಿದ್ಯುನ್ಮಾನ ಮಾಧ್ಯಮದಲ್ಲಿ ಈಗಾಗಲೇ ಅಂತಹ ಸಂದರ್ಶನವನ್ನು ಪ್ರದರ್ಶಿಸಿದರೆ ಅಥವಾ…

Read More

ರಾಯಚೂರು: ನೇಣು ಬಿಗಿದ ಸ್ಥಿತಿಯಲ್ಲಿ ಯುವತಿ ಶವ ಪತ್ತೆಯಾಗಿರುವ ಘಟನೆ ರಾಯಚೂರು ನಗರದ ಸಂತೋಷಿ ಸರೋವರ ಲಾಡ್ಜ್ ನಲ್ಲಿ ನಡೆದಿದೆ. ಲಾಡ್ಜ್ ನಲ್ಲಿ ಕೆಲಸ ಮಾಡ್ತಿದ್ದ ಸೋನಿ (23) ಮೃತ ಮಹಿಳೆಯಾಗಿದ್ದು, ಉತ್ತರಪ್ರದೇಶದ ನಗಲಬಾರಿ ಜಿಲ್ಲಾ ಅತ್ರಾಸ್ ಮೂಲದ ಮಹಿಳೆಯಾಗಿದ್ದಾಳೆ. ಲಾಡ್ಜ್ ನ ರೂಮ್ ನಂಬರ್ 113 ರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ಥಳಕ್ಕೆ ರಾಯಚೂರು ಎಸ್.ಪಿ ನಿಖಿಲ್ ಭೇಟಿ, ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತ ಸೋನಿ ಪತಿ ಅವಿನಾಶ್ ನನ್ನು ವಿಚಾರಣೆ ನಡೆಸಿ ತನಿಖೆ ಕೈಗೊಂಡಿದ್ದಾರೆ.

Read More

ಬೆಂಗಳೂರಿನಲ್ಲಿ ಗುಂಡಿ ಮುಚ್ಚದ ಪಾಲಿಕೆ ವಿರುದ್ಧ ಭುಗಿಲೆದ್ದು ಆಕ್ರೋಶಗೊಂಡಿದ್ದಾರೆ ಹಾಗೆ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಗುಂಡಿ ವಿರುದ್ಧ ವಿಭಿನ್ನ ಪ್ರತಿಭಟನೆ ನಡೆಸಿದ್ದು  ಮಹಾಗುಂಡಿಗೆ ಮಹಾಪೂಜೆ ಮಾಡಿದ ಬೆಂಗಳೂರು ಜನ ಬಲಿ ಪಡೆಯದೇ ಅನುಕಂಪ ತೋರಿದ ಗುಂಡಿಗೆ ಪೂಜೆ ಸಲ್ಲಿಸಿ ಕೃತಜ್ಞತೆ ಮೆರೆದಿದ್ದು ನಗರದ ಹಲಸೂರು ಬಳಿ ಏಕಾಏಕಿ ವೈಟ್ ಟಾಪಿಂಗ್ ರಸ್ತೆ ಕುಸಿದು ಅವಾಂತರವಾಗಿತ್ತು. ನಾಗರೀಕರನ್ನು ಬಲಿ ತೆಗೆದುಕೊಳ್ಳದೆ ಅನುಕಂಪವನ್ನು ತೋರಿರುವ ಮಹಾ ಗುಂಡಿಗೆ ಮಹಾಪೂಜೆ ಮಾಡಿ ಬ್ರ್ಯಾಂಡ್ ಬೆಂಗಳೂರಿಗೆ ಧಿಕ್ಕಾರ ಕೂಗಿ ಆಕ್ರೋಶ ಕೂಗಿದರು.

Read More

ಬೆಂಗಳೂರು: ಕೇರಳದಲ್ಲಿ (Kerala) ಭಾರೀ ಸದ್ದು ಮಾಡಿ, ಈ ಹಿಂದೆ ನಗರಕ್ಕೂ ಕಾಲಿಟ್ಟಿದ್ದ ವೈಫ್ ಸ್ವಾಪ್ (Wife Swaping) ಎಂಬ ಕೆಟ್ಟ ಸಂಸ್ಕೃತಿ ಬೆಂಗಳೂರಲ್ಲಿ (Bengaluru) ಮತ್ತೆ ಹುಟ್ಟಿಕೊಂಡಿದೆ. ಈಗ ಮತ್ತೆ ವೈಫ್ ಸ್ವಾಪ್ ಕುರಿತಾದ ಆರೋಪವೊಂದು ಕೇಳಿ ಬಂದಿದೆ. ಬಸವನಗುಡಿಯ ಪೂರ್ಣಚಂದ್ರ ಎಂಬಾತ ವೈಫ್ ಸ್ವಾಪ್ ಮಾಡಲು ತನ್ನ ಪತ್ನಿಯನ್ನು (Wife ) ಒತ್ತಾಯಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಪತ್ನಿ ಒಪ್ಪದಿದ್ದಕ್ಕೆ ಆತ ಆಕೆಯ ಮೇಲೆ ಹಲ್ಲೆ ನಡೆಸಿ ಕಿರುಕುಳ ನೀಡಿದ್ದಾನೆ ಎಂದು ಮಹಿಳೆ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಈ ಸಂಬಂಧ ಪತಿ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಏನಿದು ವೈಫ್ ಸ್ವಾಪ್? ತನ್ನ ಹೆಂಡತಿಯನ್ನು ಸ್ನೇಹಿತರ ಜೊತೆಯೂ ಹೆಂಡತಿಯಂತೆ ಇರುವಂತೆ ಮಾಡುವುದು ಅಥವಾ ಸ್ನೇಹಿತರ ಹೆಂಡತಿಗೆ ಇವನು ಗಂಡನಂತೆ ಇರುವುದೇ ವೈಫ್ ಸ್ವಾಪ್ ಸಂಸ್ಕøತಿ. ಈ ಪದ್ಧತಿ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸಾಮಾನ್ಯವಾಗಿದ್ದು, ಕೆಲವು ವರ್ಷಗಳ ಹಿಂದೆ ಕೇರಳದಲ್ಲಿ ದೊಡ್ಡ ಸದ್ದು ಮಾಡಿತ್ತು. ಅಲ್ಲದೇ…

Read More

ಬೆಂಗಳೂರು: ಹೊಸ ವರ್ಷದ (New Year) ಹೊಸ್ತಿಲಲ್ಲಿ ಮದ್ಯಪ್ರಿಯರಿಗೆ ಶಾಕ್ ಎದುರಾಗಿದೆ. ನ್ಯೂ ಇಯರ್ ಜೋಶ್ ನಲ್ಲಿದ್ದವರಿಗೆ ಖುದ್ದು ಮದ್ಯದ ಕಂಪನಿಗಳೇ (Liquor Company) ರಿವರ್ಸ್ ಕಿಕ್ ಕೊಡಲು ರೆಡಿಯಾಗಿದೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ (Congress Government Guarantee) ಗುಂಗಲ್ಲಿದ್ದ ಜನರಿಗೆ ಬೆಲೆ ಏರಿಕೆ ಶಾಕ್ ಬ್ಯಾಕ್ ಟು ಬ್ಯಾಕ್ ಎದುರಾಗುತ್ತಿದೆ. ದಿನನಿತ್ಯ ಬಳಕೆ ವಸ್ತುಗಳು ಈಗಾಗಲೇ ಗಗನಕ್ಕೇರಿವೆ. ಒಂದು ಕಡೆ ಸರ್ಕಾರ ಜನರ ಮೂಗಿಗೆ ತುಪ್ಪ ಸವರಿದಂತೆ, ಈ ಕಡೆ ಉಚಿತ ಭಾಗ್ಯ ಕೊಟ್ಟು ಮತ್ತೊಂದು ಕಡೆ ದರ ಏರಿಸಿ ಹೊರೆಯನ್ನು ಜನರ ಮೇಲೆಯೇ ಹಾಕುತ್ತಿದೆ ಸರ್ಕಾರದ ಖಜಾನೆಗೆ ಬೂಸ್ಟರ್ ಡೋಸ್ ಕೊಟ್ಟಿದ್ದ ಮದ್ಯಪ್ರಿಯರಿಗೆ ಇದೀಗ ಮತ್ತೊಮ್ಮೆ ರೇಟ್ ಹೈಕ್ ಬಿಸಿ ತಟ್ಟಲಿದೆ. ಆರಂಭದಲ್ಲೇ ಸರ್ಕಾರ ಆರ್ಥಿಕ ಮೂಲವಾದ ಅಬಕಾರಿ ಸುಂಕದ (Excise Duty) ದರವನ್ನು 20% ಹೆಚ್ಚಳ ಮಾಡಿತ್ತು. ಈಗ ಹೊಸ ವರ್ಷದ ಪಾರ್ಟಿ ಮೂಡ್‌ನಲ್ಲಿದ್ದವರಿಗೆ ಮತ್ತೆ ಮದ್ಯದ ಕಂಪನಿಗಳು ಶಾಕ್ ನೀಡುವ ಮೂಲಕ ಕಿಕ್ ಇಳಿಸಿವೆ. ಎಷ್ಟು ದುಬಾರಿ?…

Read More

ಬೆಂಗಳೂರು: ಹವಾಮಾನ ಇಲಾಖೆ ವರದಿ ಪ್ರಕಾರ, ರಾಜ್ಯದ ಬಹುತೇಕ ಕಡೆ ಗರಿಷ್ಠ ತಾಪಮಾನ ಮತ್ತು ಕನಿಷ್ಠ ತಾಪಮಾನ ಇಳಿಕೆ ಆಗಿದೆ. ಹೀಗಾಗಿ ಚಳಿಗಾಲ ಆರಂಭವಾದ ಅನುಭವವಾಗುತ್ತಿದೆ. ಬೆಳಗಾವಿ ವಿಮಾನ ನಿಲ್ದಾಣ, ವಿಜಯಪುರ, ಧಾರವಾಡ, ಹಾವೇರಿ, ಗದಗ, ಕಲಬುರಗಿ, ಕೊಪ್ಪಳ ರಾಯಚೂರು ಭಾಗದಲ್ಲಿ 17 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕಡಿಮೆ ತಾಪಮಾನ ದಾಖಲಾಗಿದೆ. ವಿಜಯಪುರದಲ್ಲಿ 12, ಚಿಕ್ಕಮಗಳೂರಿನಲ್ಲಿ 15 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಈ ಮೂಲಕ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಒಳನಾಡು ಭಾಗದಲ್ಲಿ ಚಳಿ ಆವರಿಸುತ್ತಿದೆ. ದಿನೇ ದಿನೇ ವಾತಾವರಣದಲ್ಲಿನ ತಂಪು ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ಸದ್ಯಕ್ಕೆ ಮಳೆಯ ಯಾವ ಮುನ್ಸೂಚನೆ ಇಲ್ಲ. ಬದಲಾಗಿ ಇಲ್ಲಿ ಸಹ ತಾಪಮಾನ ತೀವ್ರಗತಿಯಲ್ಲಿ ಇಳಿಕೆ ಕಂಡು ಬಂದಿದೆ. ನಗರದಲ್ಲಿ 16 ಡಿಗ್ರಿ ಸೆಲ್ಸಿಯಸ್ ವರೆಗೆ ಕನಿಷ್ಠ ತಾಪಮಾನ ಇಳಿಕೆ ಆಗಿದೆ. ಈ ಮೂಲಕ ಬೆಂಗಳೂರು ಮತ್ತೆ ಚಳಿ ವಾತಾವರಣಕ್ಕೆ ಈ ವರ್ಷ ತಡವಾಗಿ ಮರಳಿದೆ ಎನ್ನಬಹುದು.

Read More