ಬೆಳಗಾವಿ : ರಾಜ್ಯದಲ್ಲಿ ನಡೆಯುತ್ತಿವೆ ಎನ್ನಲಾದ ಕಾನೂನು ಬಾಹಿರ ಭ್ರೂಣ ಪರೀಕ್ಷೆ ಮತ್ತು ಭ್ರೂಣ ಹತ್ಯೆ ಪ್ರಕರಣಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ವಿಶೇಷವಾದ ನೀತಿಯೊಂದನ್ನು ಜಾರಿ ಮಾಡಲು ಸರ್ಕಾರದಿಂದ ಚಿಂತನೆ ನಡೆದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಹೇಳಿದರು. ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ಭಾರತಿ ಶೆಟ್ಟಿ, ಶರವಣ ಟಿ.ಎ., ಬಿ.ಎಂ.ಫಾರೂಖ್, ಸಿ.ಎನ್.ಮಂಜೇಗೌಡ ಅವರು ವಿಧಾನ ಪರಿಷತನಲ್ಲಿ ಗಮನ ಸೆಳೆಯುವ ಸೂಚನೆಯಡಿ ಕೇಳಿದ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಕಾನೂನು ಬಾಹಿರ ಭ್ರೂಣ ಪರೀಕ್ಷೆ ಮತ್ತು ಭ್ರೂಣ ಹತ್ಯೆ ಪ್ರಕರಣಗಳನ್ನು ಹೇಗೆ ಬೇಧಿಸಬಹುದು ಎಂಬುದರ ಬಗ್ಗೆ ಆರೋಗ್ಯ ಇಲಾಖೆಯು ಎಚ್ಚೆತ್ತುಕೊಂಡು ಗಂಭೀರ ಚಿಂತನೆ ನಡೆಸಿದೆ. https://ainlivenews.com/know-how-to-take-care-of-gums-and-teeth-in-winter-here-are-the-tips/ ಈ ಬಗ್ಗೆ ಅಂಕಿಸಂಖ್ಯೆಗಳನ್ನು ಸಂಗ್ರಹಿಸಿ, ಗುಪ್ತಚರವಾಗಿ ಮಾಹಿತಿ ಪಡೆದು ಇಲಾಖೆಯ ಕಾರ್ಯಾಚರಣೆಯನ್ನು ಬಲಗೊಳಿಸಲಾ ಗುವುದು ಎಂದು ಅವರು ತಿಳಿಸಿದರು. ಜಿಲ್ಲೆಯಲ್ಲಿ ಪಿಸಿಪಿಎನ್‌ಡಿಸಿ ಸೆಲ್‌ಗಳು ಕಾಲಕಾಲಕ್ಕೆ ಸಭೆ ನಡೆಸಿ ಜಿಲ್ಲಾ ಹಂತದಲ್ಲಿ ಕಾನೂನು ಬಾಹಿರ ಭ್ರೂಣ ಪರೀಕ್ಷೆ ಮತ್ತು ಭ್ರೂಣ ಹತ್ಯೆ ಪ್ರಕರಣ ತಡೆಗೆ ಕಾರ್ಯಪ್ರವೃತ್ತವಾಗಿವೆ.…
Author: AIN Author
ರಕ್ಷಿತ್ ಶೆಟ್ಟಿ ನಟಿಸಿ, ನಿರ್ಮಿಸಿದ್ದ ‘ಕಿರಿಕ್ ಪಾರ್ಟಿ’ ತೆರೆಕಂಡು ಬರೋಬ್ಬರಿ ಏಳು ವರ್ಷಗಳಾಗಿವೆ. ಅದರ ಯಶಸ್ಸಿನ ಬಳಿಕ ಇಡೀ ತಂಡ ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದ್ದು ಗೊತ್ತೇ ಇದೆ. ಇದೀಗ ಅವರೆಲ್ಲರೂ ಮತ್ತಷ್ಟು ಖ್ಯಾತರಾಗಿದ್ದಾರೆ. ಉನ್ನತ ಮಟ್ಟದಲ್ಲಿದ್ದಾರೆ… ಆದರೆ, ಆ ರೀತಿಯ ಯೂತ್ ಕಾಮಿಡಿ ಸ್ಟೋರಿ ಮತ್ತೊಂದು ಬರಲಿಲ್ಲವಲ್ಲ ಎಂಬ ಕೊರಗನ್ನು ನೀಗಿಸಲು ಮತ್ತದೇ ಬರಹಗಾರರ ತಂಡ ಸಜ್ಜಾಗಿದೆ. ಅವರೀಗ ‘ಬ್ಯಾಚುಲರ್ ಪಾರ್ಟಿ’ ಕೊಡಲು ಸಜ್ಜಾಗಿದ್ದಾರೆ ಎಂಬುದು ವಿಶೇಷ. ಹೌದು. ‘ಕಿರಿಕ್ ಪಾರ್ಟಿ’ಯ ಬರಹಗಾರ ಅಭಿಜಿತ್ ಮಹೇಶ್, ಈಗಾಗಲೇ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಸೇರಿದಂತೆ ಅನೇಕರ ಸಿನಿಮಾಗಳಲ್ಲಿ ಬರಹಗಾರರಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ನಿರ್ದೇಶಕರಾಗಿ ಬಡ್ತಿ ಪಡೆದಿದ್ದು, ‘ಬ್ಯಾಚುಲರ್ ಪಾರ್ಟಿ’ಗೆ ಆಕ್ಷನ್ ಕಟ್ ಹೇಳಿದ್ದಾರೆ. ಕಚಗುಳಿಯಿಡುವ ಸಂಭಾಷಣೆಗೆ ಖ್ಯಾತರಾಗಿರುವ ಅಭಿ, ತಮ್ಮ ಮೊದಲ ಸಿನಿಮಾದಲ್ಲಿ ಯಾವ ರೀತಿ ಮೋಡಿ ಮಾಡಲಿದ್ದಾರೆ ಎಂಬುದಕ್ಕೆ ಸಿನಿಮಾ ಬಿಡುಗಡೆಯವರೆಗೂ ಕಾಯಬೇಕು. ಅದಕ್ಕೂ ಮುನ್ನ ‘ಬ್ಯಾಚುಲರ್ ಪಾರ್ಟಿ’ಯ ಮೊದಲ ಝಲಕ್ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ದಿಗಂತ್, ಲೂಸ್…
ಬೆಂಗಳೂರು: ಪ್ರತಾಪ್ ಸಿಂಹ (Prathap Simha) ಬಹಳ ಬುದ್ಧಿವಂತ. ಅರ‍್ಯಾಕೆ ಇಂಥವರಿಗೆ ಪಾಸ್ ಕೊಟ್ಟರೋ? ಅವರ ಹೆಸರು ಹೇಳಲು ಇಲ್ಲಿ ನನಗೆ ಇಷ್ಟವಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಪ್ರತಾಪ್ ಸಿಂಹ ವಿರುದ್ಧ ಕಿಡಿಕಾರಿದ್ದಾರೆ. ಕಲಾಪ ನಡೆಯುತ್ತಿದ್ದ ಹೊತ್ತಿನಲ್ಲೇ ಪಾರ್ಲಿಮೆಂಟ್ (Parliament) ಒಳಗೆ ಕಲರ್ ಸ್ಮೋಕ್ ಸಿಡಿಸಿದ ಯುವಕರಿಗೆ ಪ್ರತಾಪ್ ಸಿಂಹ ಕಚೇರಿಯಿಂದಲೇ ಪಾಸ್ ವಿತರಣೆಯಾಗಿದೆ ಎಂದು ಆರೋಪಿಸಲಾಗಿದೆ. ಈ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಮಾಧ್ಯಮದವರೊಂದಿಗೆ ಮಾತನಾಡಿ, ಎಲ್ಲರೂ ಫೋನ್ ಮಾಡುತ್ತಿದ್ದಾರೆ. ಏನು? ಯಾಕೆ? ಅಂತ ಕೇಳುತ್ತಿದ್ದಾರೆ. ನಾನು ಟಿವಿಯಲ್ಲಿ ನೋಡಿದೆ. ಮೇಲಿಂದಲೇ ಅವರು ಹಾರಿದ್ದಾರೆ. ಸಂಸದರೆಲ್ಲ ಇಲಿಗಳಂತೆ ಬಚ್ಚಿಕೊಳ್ಳುತ್ತಿದ್ದಾರೆ. ನಮ್ಮ ಪ್ರತಿಪಕ್ಷದವರೇ ಇದರ ಹೊಣೆ ತೆಗೆದುಕೊಳ್ಳಬೇಕು. ಅವರು ಏನು ಬುದ್ಧಿವಾದ ಹೇಳುತ್ತಾರೋ ಹೇಳಲಿ ಎಂದು ಹರಿಹಾಯ್ದರು ಮೈಸೂರು ಮೂಲದ ಮನೋರಂಜನ್ ಹಾಗೂ ಸಾಗರ್ ಶರ್ಮಾ ಎಂಬ ಇಬ್ಬರು ಯುವಕರು ಕಲಾಪದ ವೇಳೆ ನುಗ್ಗಿರುವುದು ಎಂದು ತಿಳಿದು ಬಂದಿದೆ. ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.…
ಬೆಳಗಾವಿ: ಬಿಡಿಎ, ಬಿಬಿಎಂಪಿ ಆಸ್ತಿಯನ್ನು ಯಾರೇ ಒತ್ತುವರಿ ಮಾಡಿದ್ದರೂ ಮುಲಾಜಿಲ್ಲದೆ ತೆರವಿಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು. ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ, ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಅವರ ಪ್ರಶ್ನೆಗೆ ಅವರು ಉತ್ತರಿಸಿದರು. ಬಿಡಿಎ ಅಧೀನದಲ್ಲಿ ಇರುವ ಉದ್ಯಾನಗಳ ಸಂಖ್ಯೆ ಮತ್ತು ಉದ್ಯಾನಗಳ ಒತ್ತುವರಿಯ ಬಗ್ಗೆ ಕೇಳಿದ ಪ್ರಶ್ನೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿ ಕೆ ಶಿವಕುಮಾರ್ ಅವರು ಮಾಹಿತಿ ನೀಡಿದರು. https://ainlivenews.com/know-how-to-take-care-of-gums-and-teeth-in-winter-here-are-the-tips/ ನಮ್ಮ ಸರ್ಕಾರ ಅಧಿಕಾರವಹಿಸಿಕೊಂಡ ತಕ್ಷಣ ಬೆಂಗಳೂರಿನ ಆಸ್ತಿಗಳನ್ನು ಹೊಸ ತಂತ್ರಜ್ಞಾನದ ಮೂಲಕ ಮ್ಯಾಪಿಂಗ್ ಕೆಲಸ ಮಾಡುತ್ತಿದೆ. ಒಂದಷ್ಟು ಆಸ್ತಿ ವ್ಯಾಜ್ಯಗಳು ನ್ಯಾಯಾಲಯದಲ್ಲಿವೆ. ಸರ್ಕಾರಿ ಆಸ್ತಿಗಳನ್ನು ಉಳಿಸಿ ಸಾರ್ವಜನಿಕರ ಉಪಯೋಗಕ್ಕೆ ಬಳಕೆ ಮಾಡಲಾಗುವುದು ಎಂದರು. ಒತ್ತುವರಿಯ ಬಗ್ಗೆ ನಿಮ್ಮ ಬಳಿ ನಿರ್ದಿಷ್ಟ ದಾಖಲೆಗಳು ಇದ್ದರೆ ಈಗಲೇ ಕೊಡಿ, ಕೂಡಲೇ ಕ್ರಮ ತೆಗೆದುಕೊಳ್ಳುತ್ತೇವೆ. ಯಾರನ್ನೂ ರಕ್ಷಣೆ ಮಾಡುವ ಸಂದರ್ಭ ಬರುವುದಿಲ್ಲ ಎಂದರು.
ಭೋಪಾಲ್ : ಮಧ್ಯಪ್ರದೇಶದ (Madhya Pradesh) ನೂತನ ಮುಖ್ಯಮಂತ್ರಿಯಾಗಿ ಡಾ.ಮೋಹನ್ ಯಾದವ್ (Mohan Yadav) ಅಧಿಕಾರ ಸ್ವೀಕರಿಸಿದ್ದಾರೆ. ಮುಖ್ಯಮಂತ್ರಿಯವರೊಂದಿಗೆ ಅವರ ಸಂಪುಟದ ಇಬ್ಬರು ಉಪಮುಖ್ಯಮಂತ್ರಿಗಳಾಗಿ ರಾಜೇಂದ್ರ ಶುಕ್ಲಾ ಮತ್ತು ಜಗದೀಶ್ ದಿಯೋರಾ ಕೂಡ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಮಂಗುಭಾಯಿ ಸಿ. ಪಟೇಲ್ ಪ್ರಮಾಣವಚನ ಬೋಧಿಸಿದರು. ಹದಿನೆಂಟು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ಅವರನ್ನು ಕೈ ಬಿಟ್ಟು ಬಿಜೆಪಿ ಹೈಕಮಾಂಡ್ (BJP High Command) ಮುಖ್ಯಮಂತ್ರಿ ಹುದ್ದೆಗೆ ಡಾ.ಮೋಹನ್ ಯಾದವ್ ಹೆಸರನ್ನು ಪರಿಗಣಿಸುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಮೂರು ಬಾರಿ ಶಾಸಕರಾಗಿರುವ ಡಾ.ಮೋಹನ್ ಯಾದವ್ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ ಅಲ್ಲದೇ ಸಂಘದ ಜೊತೆಗೆ ಗುರಿತಿಸಿಕೊಂಡಿದ್ದಾರೆ. ಅಲ್ಲದೇ ರಾಜ್ಯದ ಜನಸಂಖ್ಯೆಯ 48% ಕ್ಕಿಂತ ಹೆಚ್ಚು ಹೊಂದಿರುವ ಇತರ ಹಿಂದುಳಿದ ವರ್ಗಗಳ (ಒಬಿಸಿ) ಸಮುದಾಯ ಪ್ರತಿನಿಧಿಸುತ್ತಿದ್ದಾರೆ. https://ainlivenews.com/know-how-to-take-care-of-gums-and-teeth-in-winter-here-are-the-tips/ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi), ಗೃಹ ಸಚಿವ ಅಮಿತ್ ಶಾ (Amit…
ಚಿಕ್ಕಬಳ್ಳಾಪುರ : ಜಿಲ್ಲೆಯ ಚೇಳೂರು ತಾಲ್ಲೂಕಿನ ಚಾಕವೇಲು ಗ್ರಾಮದ ಮುಖ್ಯರಸ್ತೆ ವೃತ್ತದಲ್ಲಿ ಕೆಟ್ಟು ನಿಂತಿರುವ ಹೈಮಾಸ್ಕ್ ಲೈಟ್ ರಿಪೇರಿ ಮಾಡಲು ಹೋಗಿದ್ದ ಕಾರ್ಮಿಕ 240 ವೋಲ್ಟ್ ವಿದ್ಯುತ್ ತಂತಿ ಮೇಲೆ ಪ್ರಜ್ಞೆ ತಪ್ಪಿ ಬಿದ್ದು ಗಾಯಗೊಂಡ ಘಟನೆ ನಡೆದಿದೆ. ಚಾಕವೇಲು ಗ್ರಾಮ ಪಂಚಾಯತಿ ವತಿಯಿಂದ ವಿದ್ಯುತ್ ಬಲ್ಫ್ ಗಳು ರಿಪೇರಿ ಮಾಡಲು ಗುತ್ತಿಗೆದಾರರಾದ ಶಮೀರ್ ಗೆ ಗುತ್ತಿಗೆ ನೀಡಿದ್ದು, ಗುತ್ತಿಗೆ ದಾರರು ಹೈಮಾಸ್ಕ್ ಲೇಟ್ ರಿಪೇರಿ ಮಾಡಿದ ನಂತರ ವಿದ್ಯುತ್ ಸಂಪರ್ಕವನ್ನು ಮಾಡಲು ಚಾಕವೇಲು ಗ್ರಾಮದ ಉಮಾಶಂಕರ್ ನನ್ನು ಬಳಸಿಕೊಂಡು ವಿದ್ಯುತ್ ಕಂಬವನ್ನು ಹತ್ತಿ ತಂತಿ ಸಂಪರ್ಕ ನೀಡಲು ಸೂಚಿಸಿದ್ದು,ಉಮಾಶಂಕರ್ ತಂತಿ ಸಂಪರ್ಕ ಕೊಡಲು ಹೋಗಿ ಗ್ರಾಮದಲ್ಲಿ ಹಾದುಹೋಗಿರುವ 240 ವೋಲ್ಟ್ ತಂತಿಯನ್ನು ಮುಟ್ಟಿ ಪ್ರಜ್ಞೆ ತಪ್ಪಿ ತಂತಿ ಮೇಲೆ ನೇತಾಡುತ್ತಿರುವುದನ್ನು ಗ್ರಾಮಸ್ಥರು ನೋಡಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ತಕ್ಷಣ ಚಾಕವೇಲು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ನಂತರ ಬಾಗೇಪಲ್ಲಿ ಆಸ್ಪತ್ರೆಗೆ ಕರೆದೋಯ್ಯಲಾಗಿ ಆಸ್ಪತ್ರೆಯಲ್ಲಿ, https://ainlivenews.com/know-how-to-take-care-of-gums-and-teeth-in-winter-here-are-the-tips/ ಚಿಕಿತ್ಸೆ ಪಡೆದು ಪ್ರಾಣಕ್ಕೆ…
ಬೆಂಗಳೂರು: ಟಿಕೆಟ್ ಪಡೆಯದೆ ಪ್ರಯಾಣ ಮಾಡ್ತಿದ್ದವರಿಗೆ BMTC ಶಾಕ್ ನೀಡಿದೆ. ಮಹಿಳೆಯರಿಗೆ ಮೀಸಲಾದ ಸೀಟ್ ನಲ್ಲಿ ಕೂತು ಪ್ರಯಾಣಿಸುವವರಿಗೂ ದಂಡ ವಿಧಿಸಿದ ಬಿಎಂಟಿಸಿ ನವೆಂಬರ್ ನಲ್ಲಿ ಟಿಕೆಟ್ ರಹಿತ ಪ್ರಯಾಣಿಕರಿಗೆ ವಿಧಿಸಿದ ದಂಡದಿಂದ BMTC ಬೊಕ್ಕಸಕ್ಕೆ ಬಿತ್ತು 6,68,610 ರೂ ಮಹಿಳಾ ಪ್ರಯಾಣಿಕರಲ್ಲಿ ಮೀಸಲಿರಿಸಿದ್ದ ಸೀಟ್ ನಲ್ಲಿ ಪ್ರಯಾಣಿಸಿದ್ದ 438 ಪುರುಷರಿಗೂ ದಂಡ* 16,421ಟ್ರಿಪ್ ಗಳಲ್ಲಿ ತಪಾಸಣೆ ಮಾಡಿದ್ದ ಚೆಕ್ಕಿಂಗ್ ಇನ್ಸ್ಪೆಕ್ಟರ್ ಗಳು ಈ ವೇಳೆ 3,329ಮಂದಿ ಟಿಕೆಟ್ ರಹಿತ ಪ್ರಯಾಣ ಪತ್ತೆ ಇದೇ ವೇಳೆ ಬೇಜವಾಬ್ದಾರಿ 1,062 ನಿರ್ವಾಹಕರ ವಿರುದ್ಧವೂ ನಿಗಮ ದಂಡಾಸ್ತ್ರ ಪ್ರಯೋಗ ಮಹಿಳಾ ಸೀಟ್ ನಲ್ಲಿ ಕುಳಿತ ಪ್ರಯಾಣಿಕರಿಂದ 43800ರೂ ದಂಡ ವಸೂಲಿ ಮೋಟಾರು ವಾಹನ ಕಾಯ್ದೆ 1988ರ ಕಾಲಂ 177&94 ರ ಅನ್ವಯದಂತೆ ದಂಡ ನವೆಂಬರ್ ತಿಂಗಳಲ್ಲಿ ಬಿಎಂಟಿಸಿ ಬೊಕ್ಕಸಕ್ಕೆ ಬಿತ್ತು 7,12,410 ರೂ
ಉಡುಪಿ: ಹೆಸರಾಂತ ಸಮಾಜ ಸೇವಕ, ಕಾಪು ರಂಗತರಂಗ ನಾಟಕ ಸಂಸ್ಥೆಯ ಸ್ಥಾಪಕ ಲೀಲಾಧರ ಶೆಟ್ಟಿ (68) ಹಾಗೂ ಅವರ ಪತ್ನಿ ವಸುಂಧರಾ ಶೆಟ್ಟಿ(58) ಜೊತೆಯಾಗಿ ನೇಣಿಗೆ ಶರಣಾಗಿರುವ ಆಘಾತಕಾರಿ ಘಟನೆ ನಿನ್ನೆ ರಾತ್ರಿ ನಡೆದಿದೆ. ಲೀಲಾಧರ ಶೆಟ್ಟಿ ಮತ್ತು ವಸುಂಧರಾ ಶೆಟ್ಟಿ ದಂಪತಿ ಮಂಗಳವಾರ ಮಧ್ಯರಾತ್ರಿ 11.20 ರಿಂದ 12.30 ರ ನಡುವಿನ ಅವಧಿಯಲ್ಲಿ ತಮ್ಮ ಮನೆಯ ಪಕ್ಕಾಸಿಗೆ ಒಂದೇ ಸೀರೆಯನ್ನು ಬಿಗಿದು, ಅದರ ಎರಡೂ ತುದಿಗೆ ನೇಣು ಹಾಕಿಕೊಂಡು ಸಾವಿಗೆ ಶರಣಾಗಿರುವುದಾಗಿ ತಿಳಿದು ಬಂದಿದೆ. ಸರಳ ಸಜ್ಜನ ವ್ಯಕ್ತಿಯಾಗಿದ್ದ ಲೀಲಾಧರ ಶೆಟ್ಟಿ ಅವರು ಒಂದು ಬಾರಿ ಕಾಪು ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಅತ್ಯುತ್ತಮ ನಾಟಕ ತಂಡ ಹೊಂದಿದ್ದರು. ಕಾಪು ರಂಗತರಂಗ ತಂಡದ ಯಜಮಾನ ಆಗಿ ಭಾರೀ ಜನಪ್ರಿಯತೆ ಪಡೆದಿದ್ದರು. ಅಶಕ್ತರ ನೆರವಿಗೆ ಧಾವಿಸುವ ಅವರು ಯಾವಾಗಲೂ ಸಮಾಜದ ಪರವಾಗಿ ಕಾಳಜಿ ಹೊಂದಿದ್ದರು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರ ಆತ್ಯಂತ ಆಪ್ತರಾಗಿದ್ದ ಅವರು ಕಾಪು ಬಂಟರ ಸಂಘದ ಮಾಜಿ…
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ರಾಜ್ಯ ಸರ್ಕಾರದ ನಿರ್ದೇಶನದಂತೆ, ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯನ್ನು ಮತ್ತೊಮ್ಮೆ ಮುಂದೂಡಿದೆ. ಡಿಸೆಂಬರ್ 31ರಂದು ನಿಗದಿಯಾಗಿದ್ದ ಪರೀಕ್ಷೆಯ ದಿನಾಂಕವನ್ನು ಬದಲಾಯಿಸಿ, 2024ರ ಜನವರಿ 13ಕ್ಕೆ ಮುಂದೂಡಿದೆ. ಜತೆಗೆ ಕೆಲವು ಪರೀಕ್ಷೆ ಕೇಂದ್ರಗಳನ್ನೂ ಬದಲಾವಣೆ ಮಾಡಲಾಗಿದೆ. ಈ ವಿಷಯವನ್ನು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಹೇಳಿಕೆಯಲ್ಲಿ ತಿಳಿಸಿದ್ದಾರೆ ಇದಲ್ಲದೆ, ಕಲ್ಬುರ್ಗಿ ಮತ್ತು ವಿಜಯಪುರ ಜಿಲ್ಲೆಗಳನ್ನು ತಮ್ಮ ಪರೀಕ್ಷಾ ಕೇಂದ್ರಗಳಾಗಿ ಆಯ್ಕೆ ಮಾಡಿಕೊಂಡಿದ್ದ ಅಭ್ಯರ್ಥಿಗಳು ಕ್ರಮವಾಗಿ ಬೆಂಗಳೂರು ಮತ್ತು ತುಮಕೂರು ಜಿಲ್ಲೆಗಳ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಬೇಕಾಗುತ್ತದೆ. ಧಾರವಾಡ ಜಿಲ್ಲಾ ಪರೀಕ್ಷಾ ಕೇಂದ್ರಗಳಿಗೆ ಹೆಚ್ಚುವರಿಯಾಗಿ ಹಾವೇರಿ ಮತ್ತು ಮೈಸೂರು ಜಿಲ್ಲಾ ಕೇಂದ್ರಗಳಿಗೆ ಮಂಡ್ಯ ಪರೀಕ್ಷಾ ಕೇಂದ್ರಗಳನ್ನು ಸೇರಿಸಲಾಗಿದೆ. ಇವು ಬಿಟ್ಟು ಉಳಿದ ಜಿಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಯಾವ ಬದಲಾವಣೆಯೂ ಇರುವುದಿಲ್ಲ ಎಂದು ಅವರು ವಿವರಿಸಿದ್ದಾರೆ. ಪರೀಕ್ಷೆ ಕೇಂದ್ರ ಬದಲು ಕೆಸೆಟ್-2023ಕ್ಕೆ ಆನ್‌ಲೈನ್‌ನಲ್ಲಿ ರಿಜಿಸ್ಟ್ರೇಷನ್ ಪಡೆಯುವ ವೇಳೆ ಕಲಬುರಗಿ ಆಯ್ಕೆ ಮಾಡಿಕೊಂಡಿದ್ದವರು ಬೆಂಗಳೂರಿನಲ್ಲಿ ಪರೀಕ್ಷೆ ಬರೆಯಬೇಕು. ವಿಜಯಪುರದ…
ಮೈಸೂರು/ನವದೆಹಲಿ: ಕಲಾಪ ನಡೆಯುತ್ತಿದ್ದ ಹೊತ್ತಿನಲ್ಲೇ ಪಾರ್ಲಿಮೆಂಟ್ ಒಳಗೆ ಕಲರ್ ಸ್ಮೋಕ್ ಸಿಡಿಸಿದ ಯುವಕರಿಗೆ ಪ್ರತಾಪ್ ಸಿಂಹ ಕಚೇರಿಯಿಂದಲೇ ಪಾಸ್ ವಿತರಣೆಯಾಗಿದೆ ಎಂಬ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ. ಕಲಾಪ ವೀಕ್ಷಿಸುತ್ತೇವೆ ಎಂದು ಹೇಳಿ ಯುವಕರು ಪಾಸ್ ಪಡೆದುಕೊಂಡು ಹೋಗಿದ್ದರು ಎಂದು ಅವರು ತಿಳಿಸಿದ್ದಾರೆ. ಮೈಸೂರು (Mysuru) ಮೂಲದ ಮನೋರಂಜನ್ ಹಾಗೂ ಸಾಗರ್ ಶರ್ಮಾ ಎಂಬ ಯುವಕರು ಕಲಾಪದ ವೇಳೆ ನುಗ್ಗಿರುವುದು ಎಂದು ತಿಳಿದು ಬಂದಿದೆ. ಇಬ್ಬರನ್ನು ಪೊಲೀಸರು (Police) ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಲೋಕಸಭಾ ವೀಕ್ಷಕರ ಗ್ಯಾಲರಿಯಿಂದ ಇಬ್ಬರು ವ್ಯಕ್ತಿಗಳು ಮೇಲಿನಿಂದ ಜಿಗಿದಿದ್ದಾರೆ. ಕೂಡಲೇ ಭದ್ರತಾ ಸಿಬ್ಬಂದಿ ಇಬ್ಬರನ್ನು ಹಿಡಿದಿದ್ದಾರೆ. ಸಂಸತ್ ಮೇಲೆ ದಾಳಿ ನಡೆದು 22 ವರ್ಷವಾದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಹುತಾತ್ಮ ಭದ್ರತಾ ಸಿಬ್ಬಂದಿಗೆ ಗೌರವ ಸಲ್ಲಿಸಲಾಗಿತ್ತು. https://ainlivenews.com/massive-security-failure-unidentified-man-breaks-into-new-parliament-house/ ಈಗ ಬಂದಿರುವ ಮಾಹಿತಿ ಪ್ರಕಾರ ಒಟ್ಟು ಎರಡು ಘಟನೆ ನಡೆದಿದೆ. ಇಬ್ಬರು ವ್ಯಕ್ತಿಗಳು ಲೋಕಸಭೆ ಗ್ಯಾಲರಿಯಿಂದ ಜಿಗಿದು ಕಲರ್ ಬಾಂಬ್ ಸಿಡಿಸಿದರೆ, ಇಬ್ಬರು…