ನವದೆಹಲಿ: 2018 ರಲ್ಲಿಅಮಿತ್ ಶಾ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಇದೇ ವೇಳೆ, ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಗಾಂಧಿ ಸಲ್ಲಿಸಿದ ಮನವಿ ಸಂಬಂಧ ಜಾರ್ಖಂಡ್ ಸರ್ಕಾರ ಮತ್ತು ದೂರುದಾರರ ಪ್ರತಿಕ್ರಿಯೆಯನ್ನು ಕೇಳಿತು. ಇಂದಿನ ವಿಚಾರಣೆಯ ಸಂದರ್ಭದಲ್ಲಿ, ರಾಹುಲ್ ಪರವಾಗಿ ಹಾಜರಾದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು, ಪ್ರಕರಣದಲ್ಲಿ ಮೂರನೇ ವ್ಯಕ್ತಿಯಿಂದ ದೂರು ದಾಖಲಿಸಲಾಗಿದೆ. ಮಾನನಷ್ಟ ಅಪರಾಧದ ವಿಷಯದಲ್ಲಿ ಈ ರೀತಿ ಮೂರನೇ ವ್ಯಕ್ತಿ ದೂರು ದಾಖಲಿಸುವುದನ್ನು ಅನುಮತಿಸಲಾಗದು ಎಂದು ಗಂಭೀರವಾಗಿ ವಾದ ಮಂಡಿಸಿದರು. https://ainlivenews.com/what-is-the-swamitva-yojana-how-to-get-your-land-ownership-card-heres-the-full-information/ “ನೀವು ಬಾಧಿತ ವ್ಯಕ್ತಿಯಲ್ಲದಿದ್ದರೆ, ನೀವು ಹೇಗೆ ಪ್ರಾಕ್ಸಿ ದೂರು ಸಲ್ಲಿಸಬಹುದು?” ಎಂದು ಸಿಂಘ್ವಿ ಪ್ರಶ್ನಿಸಿದರು. ಅಂತಿಮವಾಗಿ ನ್ಯಾಯಾಲಯವು, “ಜಾರ್ಖಂಡ್ ಸರ್ಕಾರ ಮತ್ತು ದೂರುದಾರರಿಗೆ ನೋಟಿಸ್ ನೀಡಿ. ಮುಂದಿನ ಆದೇಶದವರೆಗೆ ವಿಚಾರಣೆಯಲ್ಲಿನ ಎಲ್ಲಾ ಪ್ರಕ್ರಿಯೆಗಳು ತಡೆಹಿಡಿಯಲ್ಪಡುತ್ತವೆ” ಎಂದು ಆದೇಶಿಸಿತು.
Author: AIN Author
ಬೆಂಗಳೂರು: ಎರಡು ಬೈಕ್ ಗಳ ನಡುವೆ ಆಕಸ್ಮಿಕ ಡಿಕ್ಕಿಯಾಗಿ ಕೂದಲೆಳೆಯಲ್ಲಿ ಬೈಕ್ ಸವಾರ ಪಾರಾಗಿರುವ ಘಟನೆ ಬೆಂಗಳೂರಿನ ನಗರದ ಈಜಿಪುರ ರಸ್ತೆಯಲ್ಲಿ ನಡೆದಿದೆ. ಓರ್ವ ಬೈಕ್ ಸವಾರ ಎಡಭಾಗದಿಂದ ವೇಗವಾಗಿ ಬಲಭಾಗಕ್ಕೆ ಬಂದಿದ್ದಾನೆ, ಇದೇ ವೇಳೆ ಮತ್ತೊಂದು ಬೈಕ್ ಸವಾರ ಬಲಭಾಗದಲ್ಲಿ ಹೋಗುತ್ತಿದ್ದನು. ಈ ವೇಳೆ ಎರಡು ಬೈಕ್ಗಳ ನಡುವೆ ಅಪಘಾತ ಸಂಭವಿಸಿದೆ. ಓರ್ವ ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, ಮತ್ತೋರ್ವ ಬಿದ್ದು ಮೂರು ಪಲ್ಟಿ ಹೊಡೆದಿದ್ದಾನೆ. ಬೈಕ್ ಸುಮಾರು ಐದಾರು ಮೀಟರ್ ದೂರ ಎಳೆದೊಯ್ದಿದೆ. https://ainlivenews.com/what-is-the-swamitva-yojana-how-to-get-your-land-ownership-card-heres-the-full-information/ ಇದೇ ವೇಳೆ ಕಾರು ಬೈಕ್ ಹಿಂದೆಯೇ ಇತ್ತು. ಈ ವೇಳೆ ಸಮಯ ಪ್ರಜ್ಞೆ ಮೆರೆದು ಚಾಲಕ ಕಾರು ನಿಲ್ಲಿಸಿದ್ದಾನೆ. ಹೆಲ್ಮೆಟ್ ಹಾಕಿದ್ದರಿಂದ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ದೃಶ್ಯ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬೆಂಗಳೂರು: ಗೃಹ ಇಲಾಖೆಯಿಂದ ಬ್ಯಾಂಕ್ ಮತ್ತು ATM ಗಳಿಗೆ ಹೊಸ ರೂಲ್ಸ್ ಕೊಟ್ಡಿದ್ದೇವೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಈಗಾಗಲೇ ಗೃಹ ಇಲಾಖೆಯಿಂದ ಬ್ಯಾಂಕ್ ಮತ್ತು ATM ಗಳಿಗೆ ಯಾವ ರೀತಿ ಭದ್ರತೆ ಇರಬೇಕು ಅಂತ ರೂಲ್ಸ್ ಕೊಟ್ಡಿದ್ದೇವೆ. ಎಲ್ಲಾ ATM, ಬ್ಯಾಂಕ್ ಗಳಿಗೆ ಸೂಚನೆ ಹೋಗುತ್ತದೆ. ATMಗೆ ಹಣ ಹಾಕೋಕೆ ಬ್ಯಾಂಕ್ ನವರು ಕಾಂಟ್ರಾಕ್ಟ್ ಅವರಿಗೆ ಕೊಟ್ಟಿರುತ್ತಾರೆ. ATMಗೆ ಹಣ ತುಂಬುವಾಗ ಕಡ್ಡಾಯವಾಗಿ ಆರ್ಮ್ ಕಾರ್ಡ್ ಇರಬೇಕು ಅಂತ ನಿಯಮ ಈಗಾಗಲೇ ಇದೆ. https://ainlivenews.com/what-is-the-swamitva-yojana-how-to-get-your-land-ownership-card-heres-the-full-information/ ಬೀದರ್ ಘಟನೆ ಆದಾಗ ಆರ್ಮ್ ಗಾರ್ಡ್ ಇರಲಿಲ್ಲ. ಹೀಗಾಗಿ ಘಟನೆ ಆಗಿದೆ. ಮಂಗಳೂರು ಬ್ಯಾಂಕ್ ದರೋಡೆಯಾದಾಗಲು ಕೂಡಾ ಗಾರ್ಡ್ ಇರಲಿಲ್ಲ ಅಂತ ಮಾಹಿತಿ ಇದೆ. ಹೀಗಾಗಿ ಇಲಾಖೆ ಕೊಟ್ಟ ರೂಲ್ಸ್‌ಗಳು ಲ್ಯಾಪ್ಸ್ ಆಗಬಾರದು. ಇಂತಹ ಅವಕಾಶಗಳಿಗೆ ಅಕ್ರಮ ಮಾಡೋರು ಕಾಯ್ತಾ ಇರುತ್ತಾರೆ. ಹೀಗಾಗಿ ಬ್ಯಾಂಕ್‌ನವರು ನಮ್ಮ ಜೊತೆ ಸಹಕಾರ ಕೊಡಬೇಕು ಅಂತ ತಿಳಿಸಿದರು.
ಬೆಂಗಳೂರು: ವ್ಯಕ್ತಿಯೊಬ್ಬ ನಮ್ಮ ಮೆಟ್ರೋ ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬೆಂಗಳೂರಿನ ಜಾಲಹಳ್ಳಿ ಮೆಟ್ರೋ ಸ್ಟೇಷನ್ ಬಳಿ ಈ ಘಟನೆ ನಡೆದಿದೆ. ಬಿಹಾರ ಮೂಲದ ಅನಿಲ್ ಕುಮಾರ್ ಪಾಂಡೆ(49) ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಎಂದು ಗುರುತಿಸಲಾಗಿದೆ. ಮೆಟ್ರೋ ಬರುತ್ತಿದ್ದಂತೆ ಫ್ಲಾಟ್ಫಾರಂಗೆ ಜಿಗಿದ ವ್ಯಕ್ತಿ ಎರಡು ಹಳಿಗಳ ಮಧ್ಯೆ ಮಲಗಿದ್ದಾನೆ. https://ainlivenews.com/good-news-for-it-job-seekers-tcs-is-considering-hiring-40000-freshers/ ಕೂಡಲೇ, ಲೋಕೋ ಪೈಲಟ್ ಮೆಟ್ರೋ ನಿಲ್ಲಿಸಿದ್ದರಿಂದ ವ್ಯಕ್ತಿ ಬಚಾವ್ ಆಗಿದ್ದಾನೆ. ಬಿಎಂಆರ್ಸಿಎಲ್ ಮೆಟ್ರೋ ಸಂಚಾರ ಸ್ಥಗಿತಗೊಳಿಸಿದ್ದರಿಂದ ಪ್ರಯಾಣಿಕರು ಪರದಾಡುತ್ತಿದ್ದಾರೆ. ವ್ಯಕ್ತಿ ಆತ್ಮಹತ್ಯೆ ಹೈಡ್ರಾಮಾದಿಂದ ಮೆಟ್ರೋ ಸಂಚಾರ ಬಂದ್ ಮಾಡಲಾಗಿದೆ.
ಪ್ರಜಾ ಟಿವಿ ಮುಖ್ಯಸ್ಥರಾದ ಮುತ್ತುರಾಜ್ ಅವ್ರಿಗೆ ನಾಡಪ್ರಭು ಕೆಂಪೇಗೌಡ ಸ್ಮಾರಕ ಪ್ರಶಸ್ತಿಯ ಗರಿ ಲಭಿಸಿದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ತುಮಕೂರಿನಲ್ಲಿ ನಡೆದ 39 ನೇ ರಾಜ್ಯ ಮಟ್ಟದ ಕಾರ್ಯನಿರತ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿಯನ್ನ ನೀಡಿ ಗೌರವಿಸಲಾಗಿದೆ.. ಪ್ರಜಾ ಟಿವಿ ಸಂಸ್ಥೆಯ ಸಂಪಾದಕರಾದ ಮುತ್ತುರಾಜ್ ಜಿ.ಎಸ್ ಅವ್ರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಯನ್ನ ಪ್ರದಾನ ಮಾಡಲಾಗಿದ್ದು, ತುಮಕೂರಿನ ಎಸ್ ಎಸ್ ಐಟಿಯ ಕ್ಯಾಂಪಸ್ ನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಜೆಡಿಎಲ್ ಪಿ ನಾಯಕ ಸಿಬಿ ಸುರೇಶ್ ಬಾಬು, ಸಿಎಂ ಮಾಧ್ಯಮ ಸಲಹೆಗಾರ ಕೆವಿ ಪ್ರಭಾಕರ್,ತುಮಕೂರಿನ ಜಿಲ್ಲಾಧಿಕಾರಿ ಶುಭ ಕಲ್ಯಾಣ್,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿದ್ದರು.. ಎರಡು ದಿನಗಳ ಕಾಲ ನಡೆದ ಈ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದು, ಸಿದ್ದಗಂಗಾ ಮಠದ ಶ್ರಿ ಸಿದ್ದಲಿಂಗಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ರು. ಗ್ರಹ ಸಚಿವ ಪರಮೇಶ್ವರ, ಕೇಂದ್ರ ಸಚಿವ ವಿ. ಸೋಮಣ್ಣ…
ರಾಜ್ಯದಲ್ಲಿ ಅತಿದೊಡ್ಡ ಕುಖ್ಯಾತಿ ಪಡೆದಿರುವ ಪರಪ್ಪನ ಅಗ್ರಹಾರ ಕಾರಾಗೃಹ ವಿಭಜನೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ತೋರಿದ್ದು, ಕೆಲವೇ ದಿನಗಳಲ್ಲಿ ಜೈಲು ಮೂರು ಭಾಗವಾಗಿ ಹೋಳಾಗಲಿದೆ. ಈ ಮೂಲಕ ಆಡಳಿತದಲ್ಲಿ ಪಾರದರ್ಶಕತೆ ತರುವ ಜೊತೆಗೆ ಅಕ್ರಮ ಚಟುವಟಿಕೆಗೆ ಶಾಶ್ವತ ಕಡಿವಾಣ ಹಾಕಲು ಮುಂದಾಗಿದೆ. ಇತ್ತೀಚಿನ ವರ್ಷಗಳಲ್ಲಿ ವಿವಿಧ ಕಾರಣಗಳಿಗಾಗಿ ಪರಪ್ಪನ ಅಗ್ರಹಾರ ಜೈಲು ಅಕ್ರಮ ಚಟುವಟಿಕೆಯ ತಾಣವಾಗಿದೆ. ಜೈಲಿಗೆ ಅಂಟಿರುವ ಕಪ್ಪುಚುಕ್ಕೆ ತೊಡೆದುಹಾಕಲು ಆಡಳಿತಾತ್ಮಕವಾಗಿ ಜೈಲನ್ನ ಮೂರು ಭಾಗವಾಗಿ ವಿಭಜಿಸಬೇಕೆಂದು ಕಾರಾಗೃಹ ಹಾಗೂ ಸುಧಾರಣೆ ಸೇವೆ ಇಲಾಖೆಯು ಸಲ್ಲಿಸಲಾಗಿದ್ದ ಪ್ರಸ್ತಾವನೆಗೆ ಸರ್ಕಾರ ಅಸ್ತು ಎಂದಿದ್ದು, ಶೀಘ್ರದಲ್ಲಿ ಜೈಲು ಮೂರು ಹೋಳಾಗಿ ವಿಭಜನೆಯಾಗಲಿದೆ. https://ainlivenews.com/good-news-for-it-job-seekers-tcs-is-considering-hiring-40000-freshers/ ರಾಜ್ಯದಲ್ಲಿ 9 ಕೇಂದ್ರ ಕಾರಾಗೃಹ, 21 ಜಿಲ್ಲಾ, 23 ತಾಲೂಕು ಹಾಗೂ ಒಂದು ಬಯಲು ಬಂಧೀಖಾನೆ ಸೇರಿದಂತೆ ಒಟ್ಟು 54 ಕಾರಾಗೃಹಗಳಿವೆ. ರಾಜ್ಯದಲ್ಲಿ ಸಜಾಬಂಧಿ ಹಾಗೂ ವಿಚಾರಣಾಧೀನ ಬಂಧಿ ಸೇರಿ ಒಟ್ಟು 14,645 ಕೈದಿಗಳಿದ್ದಾರೆ. ಈ ಪೈಕಿ ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ 4,994 ಕೈದಿಗಳಿದ್ದಾರೆ. ದಿನೇ ದಿನೆ…
ಶಿಡ್ಲಘಟ್ಟ: ತಾಲ್ಲೂಕಿನ ವೈ ಹುಣಸೇನಹಳ್ಳಿ ಗ್ರಾ ಪಂ ಅಧ್ಯಕ್ಷ ಸ್ಥಾನ ತೆರವಾಗಿದ್ದ ಹಿನ್ನೆಲೆಯಲ್ಲಿ, ಅಧ್ಯಕ್ಷ ಸ್ಥಾನಕ್ಕೆ ಮರು ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮುರುಳಿ ಆಯ್ಕೆ ಆಗಿದ್ದಾರೆ. ಪೋಲಿಸ್ ಬಿಗಿ ಬಂದೋಬಸ್ತ್ ನಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲದೊಂದಿಗೆ ಚುನಾವಣೆ ಗೆದ್ದಿದ್ದ ವಾರ ಹುಣಸೇನಹಳ್ಳಿ ಗ್ರಾ ಪಂ ಸದಸ್ಯ ರಾಜಪ್ಪ ಕಾಂಗ್ರೆಸ್ ಬೆಂಬಲಿತರಿಗೆ ತಮ್ಮ ಬೆಂಬಲ ಸೂಚಿಸುವ ಮೂಲಕ ಗೆಲುವಿನ ರುವಾರಿಯಾದರು. ಒಟ್ಟು 17 ಸದಸ್ಯರ ಪೈಕಿ ಜೆಡಿಎಸ್ ನ 9 ಸದಸ್ಯರಲ್ಲಿ ಒಬ್ಬರು ಕಾಂಗ್ರೆಸ್ ಸೇರುವ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ಜೆಡಿಎಸ್ ಕಾರ್ಯಕರ್ತರಿಂದ ಗ್ರಾಮ ಪಂ ಆವರಣದಲ್ಲಿ ಕೆಲ ಕಾಲ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಯಿತು. ರಾಜಪ್ಪ ಮತದಾರರ ನಂಬಿಕೆಗೆ ವಿರುದ್ದವಾಗಿ ನಡೆದುಕೊಂಡಿದ್ದಾರೆ ಎಂದು ಜೆಡಿಎಸ್ ಮುಖಂಡರು ತಮ್ಮ ಆಕ್ರೋಶ ಹೊರಹಾಕಿದರು. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾ ಪಂ ಸದಸ್ಯ ರಾಜಪ್ಪ ಪಂಚಾಯ್ತಿಯನ್ನು ಅಬಿವೃದ್ದಿ ಮಾಡುವವರಿಗೆ ನನ್ನ ಸ್ವ ಇಚ್ಛೆಯಿಂದ ಬೆಂಬಲ ಕೊಟ್ಟಿದ್ದೇನೆ ಅಷ್ಟೇ…
ನಮ್ಮಲ್ಲಿ ಅನೇಕರಿಗೆ ಊಟದ ನಂತರ ಅಥವಾ ಊಟದ ಮೊದಲು ಚಹಾ ಅಥವಾ ಕಾಫಿ ಕುಡಿದು ಅಭ್ಯಾಸವಿರುತ್ತದೆ. ಇನ್ನೂ ಕೆಲವರಿಗೆ ಊಟ, ತಿಂಡಿ ಬಿಟ್ಟು ಬರೀ ಚಹಾ ಮತ್ತು ಕಾಫಿ ಕುಡಿದು ದಿನ ಕಳೆಯಿರಿ ಅಂತ ಹೇಳಿದರೂ ಅದಕ್ಕೆ ಅವರು ಸಿದ್ದರಿರುತ್ತಾರೆ. ಕೆಲವರಿಗೆ ಊಟದ ನಂತರ ಚಹಾ ಅಥವಾ ಕಾಫಿ ಕುಡಿಯುವ ಅಭ್ಯಾಸ ಬಲವಾಗಿದ್ದರೆ, ಇನ್ನೂ ಕೆಲವರಿಗೆ ಊಟದ ಮುಂಚೆ ಕಾಫಿ ಮತ್ತು ಚಹಾ ಕುಡಿಯುವ ಅಭ್ಯಾಸವಿರುತ್ತದೆ. https://ainlivenews.com/cheque-bounce-case-arrest-warrant-issued-against-famous-bangladesh-player-shakib/ ಚಹಾ ಅಥವಾ ಕಾಫಿ ಕುಡಿಯುವಾಗ ಪ್ರೋಟೀನ್ ಭರಿತ ಆಹಾರ ಪದಾರ್ಥಗಳು, ಸಿಟ್ರಸ್ ಹಣ್ಣುಗಳು ಅಥವಾ ಹೆಚ್ಚು ಡೈರಿ ಉತ್ಪನ್ನಗಳನ್ನು ಸೇವಿಸಬಾರದು ಏಕೆಂದರೆ ಇವುಗಳ ಮಿಶ್ರಣವು ಆರೋಗ್ಯಕ್ಕೆ ಅಪಾಯಕಾರಿ ಎನ್ನಲಾಗುತ್ತಿದೆ. ಚಹಾದೊಂದಿಗೆ ಅಂತಹ ಯಾವುದನ್ನಾದರೂ ತಿನ್ನುವುದರಿಂದ ದೇಹದಲ್ಲಿ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಗ್ಯಾಸ್ಟ್ರಿಕ್, ಮಲಬದ್ಧತೆ, ಅಜೀರ್ಣ ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು. ಸಾಮಾನ್ಯವಾಗಿ ಅತಿಥಿಗಳಿಗೆ ಚಹಾದ ಜೊತೆಗೆ ತಿಂಡಿಗಳನ್ನು ನೀಡಲಾಗುತ್ತದೆ. ಈ ತಿಂಡಿಗಳನ್ನು ಸಾಮಾನ್ಯವಾಗಿ ಕಡಲೆ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಚಹಾದೊಂದಿಗೆ ಪಕೋಡಾ ಅಥವಾ…
ಚೆಕ್ ಬೌನ್ಸ್ ಪ್ರಕರಣದಲ್ಲಿ ಬಾಂಗ್ಲಾದೇಶದ ಆಲ್‌ರೌಂಡರ್ ಮತ್ತು ರಾಜಕಾರಣಿ ಶಕೀಬ್ ಅಲ್ ಹಸನ್ ವಿರುದ್ಧ ಢಾಕಾದ ನ್ಯಾಯಾಲಯವು ಬಂಧನ ವಾರಂಟ್ ಹೊರಡಿಸಲಾಗಿದೆ. ಹೌದು ಡಿಸೆಂಬರ್ 15ರಂದು ಚೆಕ್ ವಂಚನೆ ಪ್ರಕರಣದಲ್ಲಿ ಶಾಕಿಬ್ ಹೆಸರು ಕೇಳಿ ಬಂದಿತ್ತು. ಇದಾದ ಬಳಿಕ ಡಿ.18ರಂದು ಪ್ರಾಥಮಿಕ ವಿಚಾರಣೆ ನಡೆದ ನಂತರ ಜನವರಿ 19ರಂದು ವಿಚಾರಣಗೆ ಹಾಜರಾಗುವಂತೆ ನ್ಯಾಯಾಲಯ ಆದೇಶಿಸಿತ್ತು. ಈ ಪ್ರಕರಣದಲ್ಲಿ ಶಕೀಬ್ ಅಲ್ಲದೆ ಅವರ ಒಡೆತನದ ಕಂಪನಿ ಅಲ್ ಹಸನ್ ಆಗ್ರೋ ಫಾರ್ಮ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಘಾಜಿ ಶಹಗೀರ್ ಹುಸೇನ್ ಮತ್ತು ನಿರ್ದೇಶಕರಾದ ಇಮ್ದಾದುಲ್ ಹಕ್ ಮತ್ತು ಮಲೈಕರ್ ಬೇಗಂ ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. https://ainlivenews.com/good-news-for-it-job-seekers-tcs-is-considering-hiring-40000-freshers/ ಐಎಫ್‌ಐಸಿ ಬ್ಯಾಂಕ್‌ನ ಅಧಿಕಾರಿ ಶಾಹಿಬುರ್ ರೆಹಮಾನ್ ಅವರು ಬ್ಯಾಂಕ್ ಪರವಾಗಿ ಪ್ರಕರಣ ದಾಖಲಿಸಿದ್ದರು. ಅದರ ಪ್ರಕಾರ, ಶಕೀಬ್ ಅಲ್ ಹಸನ್ ಮತ್ತು ಇತರ ಮೂವರು ಎರಡು ಪ್ರತ್ಯೇಕ ಚೆಕ್‌ಗಳ ಮೂಲಕ ಸರಿಸುಮಾರು 41.4 ಮಿಲಿಯನ್ ಟಾಕಾ ಅಂದರೆ ಸರಿಸುಮಾರು 3 ಕೋಟಿ ಭಾರತೀಯ ರೂಪಾಯಿಗಳನ್ನು…
ಮಡಿಕೇರಿ:- ಹುಲಿ ದಾಳಿಗೆ ಎರಡು ಹಸುಗಳು ಬಲಿಯಾದ ಘಟನೆ ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಸುಳುಗೋಡು ಗ್ರಾಮದಲ್ಲಿ ನಡೆದಿದೆ. https://ainlivenews.com/a-government-bus-overturned-in-mandya-after-the-driver-lost-control/ ಗ್ರಾಮದ ಎಂ. ದಿನು ಎಂಬವರಿಗೆ ಸೇರಿದ 2 ಹಸುಗಳು ಹುಲಿಗೆ ಆಹಾರವಾಗಿದೆ. ಸದ್ಯ ಆನೆಗಳ ಮೂಲಕ ಹುಲಿಸೆರೆ ಕಾರ್ಯಾಚರಣೆ ಸಿದ್ಧತೆಗೆ ಅರಣ್ಯ ಇಲಾಖೆಯ ಸಿಬ್ಬಂದಿ ಮುಂದಾಗಿದ್ದಾರೆ. ಸ್ಥಳಕ್ಕೆ ರಾಜ್ಯ ವನ್ಯಜೀವಿಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೂಡಲೇ ಹಸುಗಳಿಗೆ ಪರಿಹಾರದ ಭರವಸೆ ನೀಡಿದ್ದಾರೆ.