ಚಹಾ ಕುಡಿಯುವಾಗ ನೀವು ಮಾಡುವ ಕೆಲವು ತಪ್ಪುಗಳು ಆರೋಗ್ಯಕ್ಕೆ ಹಾನಿ ಮಾಡಬಹುದು. ಒಂದು ಕಪ್ ಚಹಾ… ಕುಡಿದ್ರೆ ಇನ್ನೂ ಚೆನ್ನಾಗಿರುತ್ತೆ… ತುಂಬಾ ತಲೆ ನೋವು, ಸುಸ್ತು ಕಾಡುತ್ತಿದೆ… ಶುಂಠಿ ಚಹಾ ಕುಡಿದ್ರೆ ಎಲ್ಲಾನೂ ಸರಿಯಾಗುತ್ತೆ… ಮನೆಯಲ್ಲಿ ಅತಿಥಿಗಳು ಬಂದಿದ್ದಾರೆ… ಬೇಗ ಚಹಾ ರೆಡಿ ಮಾಡು… ಭಾರತೀಯರು ಮತ್ತು ಚಹಾಕ್ಕೆ ಎಲ್ಲಿಲ್ಲದ ಸಂಬಂಧ. ಏನೇ ಆದ್ರೂ ಆಗಿಲ್ಲಾಂದ್ರೂ ಒಂದು ಕಪ್ ಚಹಾ ಎಲ್ಲರಿಗೂ ಬೇಕೇ ಬೇಕು… ಅಷ್ಟೊಂದು ಚಹಾ ಪ್ರಿಯರು ನಮ್ಮ ಜನ. ಭಾರತೀಯ ಮನೆಗಳಲ್ಲಿ ಚಹಾ ಕುಡಿಯಲು ಇಂತಹ ಒಂದು ಅಲ್ಲ, ಅನೇಕ ನೆಪಗಳಿವೆ. ಅದನ್ನು ಎಣಿಸಲು ಸಹ ಸಾಧ್ಯವಿಲ್ಲ. ಚಹಾ ನಮ್ಮ ಮನೆಗಳಲ್ಲಿ ಕೇವಲ ಪಾನೀಯವಲ್ಲ, ಅದು ಅಭ್ಯಾಸವಾಗಿ ಮಾರ್ಪಟ್ಟಿದೆ. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ ಆರೋಗ್ಯವಾಗಿರಲು ಗ್ರೀನ್ ಟೀ ಮತ್ತು ಬ್ಲೂ ಟೀ ಸೇರಿದಂತೆ ಅನೇಕ ಆರೋಗ್ಯಕರ ಚಹಾಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ, ಆದರೆ ಶುಂಠಿ-ಏಲಕ್ಕಿ ದೇಸಿ ಚಹಾ ಯಾವಾಗಲೂ ಬೆಸ್ಟ್ . ಚಹಾ ಆರೋಗ್ಯಕರವಾಗಿದೆಯೇ ಅಥವಾ ಇಲ್ಲವೇ, ಚರ್ಚೆ ಯಾವಾಗಲೂ…
Author: AIN Author
ನಮ್ಮ ಆರೋಗ್ಯದ ವೃದ್ದಿ ಹೆಚ್ಚಿಸಲು ಇಂಗೂ ಅತ್ಯಂತ ಸಹಾಯಕ.ಜೀರ್ಣಶಕ್ತಿಯನ್ನು ಹೆಚ್ಚಿಸಲು ನೆರವಾಗುವ ಅನೇಕ ಪದಾರ್ಥಗಳಲ್ಲಿ ಇಂಗು ಪ್ರಮುಕ ಪಾತ್ರವಹಿಸುತ್ತದೆ. ನಮ್ಮ ಗ್ಯಾಸ್ಟ್ರಿಕ್ ಸಮಸ್ಯೆಗೆ ಇದು ರಾಮಬಾಣ. ನೈಸರ್ಗಿಕವಾಗಿ ರುವುದರಿಂದ ಇದರಿಂದ ಸಿಗುವ ಪ್ರಯೋಜನಗಳು ಜಾಸ್ತಿ. ಮೆಟಬೋಲಿಸಂ ಮತ್ತು ಜೀರ್ಣಾಂಗ ವ್ಯವಸ್ಥೆಗೆ ಸಾಕಷ್ಟು ಅನುಕೂಲವಾಗಿರುವ ಇಂಗು ಉತ್ತಮ ಜೀರ್ಣ ಶಕ್ತಿಯನ್ನು ನಿಮ್ಮದಾಗುವಂತೆ ಮಾಡಿ ದೇಹಕ್ಕೆ ಪೌಷ್ಟಿಕಾಂಶ ಗಳು ಹೆಚ್ಚಾಗಿ ಹೀರಿಕೊಳ್ಳುವಂತೆ ಮಾಡುತ್ತದೆ. ಇಂಗು ಸೇವನೆಯಿಂದ ಸಿಗುವ ಲಾಭಗಳು ಉರಿಯುತದ ವಿರುದ್ಧ ರಕ್ಷಣೆ ನೀಡಲು ಸಹಾಯಕ ಜೀರ್ಣ ಶಕ್ತಿ ಹೆಚ್ಚಿಸುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆಗೆ ಇದು ರಾಮಬಾಣ. ಜೀರ್ಣಶಕ್ತಿಯನ್ನು ಹೆಚ್ಚಿಸಲು ಇದು ಸಹಾಯಕ ಇಂಗು ವಾಟರ್ ತಯಾರಿಸುವುದು ಹೇಗೆ? ಬಹಳ ಸುಲಭವಾಗಿ ನೀವು ಇದನ್ನು ತಯಾರಿಸಿಕೊಳ್ಳಬಹುದು. ಮೊದಲಿಗೆ ಒಂದು ಗ್ಲಾಸ್ ನೀರನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಕುದಿಸಿ ಸ್ವಲ್ಪ ಇಂಗು ಇದರಲ್ಲಿ ಸೇರಿಸಿ ಕೆಲವು ನಿಮಿಷಗಳ ಕಾಲ ಇದನ್ನು ಚೆನ್ನಾಗಿ ತಿರುಗಿಸಿ ಕುದಿಸಿ.ಈಗ ಇದನ್ನು ಸೋಸಿಕೊಂಡು ಕುಡಿಯಿರಿ ಇದಕ್ಕೆ ಬೇಕಾದರೆ ಸ್ವಲ್ಪ ಜೇನುತುಪ್ಪ ಅಥವಾ ನಿಂಬೆಹಣ್ಣಿನ…
ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಪೊಲೀಸ್ ಠಾಣೆ (Police Station) ಒಂದರ ಮೇಲೆ ಆತ್ಮಹತ್ಯಾ ಬಾಂಬರ್‌ಗಳು ನಡೆಸಿದ ದಾಳಿಯಲ್ಲಿ ಕನಿಷ್ಠ 23 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅಫ್ಘಾನಿಸ್ತಾನದ ಗಡಿಯಲ್ಲಿರುವ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಈ ದಾಳಿ ನಡೆದಿದೆ. ಉಗ್ರರು ಸ್ಫೋಟಕಗಳನ್ನು ತುಂಬಿದ ವಾಹನವನ್ನು ಪೊಲೀಸ್ ಠಾಣೆಯ ಮುಖ್ಯ ಗೇಟ್‍ಗೆ ನುಗ್ಗಿಸಿದ್ದಾರೆ. ಬಳಿಕ ಗುಂಡು ಹಾರಿಸಲು ಪ್ರಾರಂಭಿಸಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. https://ainlivenews.com/know-how-to-take-care-of-gums-and-teeth-in-winter-here-are-the-tips/ ಉಗ್ರರ ನಡುವೆ ಗುಂಡಿನ ಚಕಮಕಿ ಇನ್ನೂ ಮುಂದುವರೆದಿದೆ. ಪಾಕಿಸ್ತಾನಿ ಸೇನೆ ಹಾಗೂ ಪೊಲೀಸರನ್ನು ಗುರಿಯಾಗಿಟ್ಟುಕೊಂಡು ಉಗ್ರರು ಈ ದಾಳಿ (Terrorist Attack) ನಡೆಸಿದ್ದಾರೆ. ದೇಶದ ಭಯೋತ್ಪಾದಕ ಸಂಘಟನೆಗಳಲ್ಲಿ ಒಂದಾದ ತೆಹ್ರೀಕ್-ಎ-ಜಿಹಾದ್ ಪಾಕಿಸ್ತಾನವು ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಗ್ರಗಾಮಿ ಸಂಘಟನೆ ತಹ್ರೀಕ್-ಎ-ತಾಲಿಬಾನ್‍ನೊಂದಿಗೆ ಈ ಸಂಘಟನೆ ಸಂಪರ್ಕ ಹೊಂದಿದೆಯೇ ಎಂಬುದರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಯೋಧ್ಯದಲ್ಲಿ ನಡೆಯುವ ಪ್ರತಿಷ್ಟಿತ ಅಯೋಧ್ಯ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ‘ತಾರಿಣಿ’ (Tarini) ಚಿತ್ರ ಸ್ಪರ್ಧಾತ್ಮಕ ವಿಭಾಗದಲ್ಲಿ ಪ್ರದರ್ಶನಗೊಂಡು ಅತ್ಯುತ್ತಮ ಸಾಮಾಜಿಕ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ಈಗಾಗಲೇ ಈ ಚಿತ್ರ ಹಲವಾರು ಚಲನಚಿತ್ರೋತ್ಸವಗಳಲ್ಲಿ ಭಾಗವಹಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಶ್ರೀ ಗಜನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಡಾ. ಸುರೇಶ್ ಕೋಟ್ಯಾನ್ ಚಿತ್ರಾಪು ಒಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸಿ ಬಂಡವಾಳವನ್ನೂ ಹೂಡಿದ್ದಾರೆ. ಕಥೆ, ಚಿತ್ರಕಥೆ , ಸಂಭಾಷಣೆ ಬರೆದು ಸಿದ್ದು ಪೂರ್ಣಚಂದ್ರ ನಿರ್ದೇಶನ ಮಾಡಿದ್ದಾರೆ. ಈ ಕಥೆ ಗರ್ಭಿಣಿ ಹೆಂಗಸಿನ ಕಥೆಯಾಧಾರಿತ ಚಿತ್ರವಾಗಿರುವುದರಿಂದ ನಾಯಕಿ ಮಮತಾ ರಾಹುತ್ ಗರ್ಭಿಣಿ ಪಾತ್ರಕ್ಕೆ ನೈಜ ಗರ್ಭಿಣಿಯಾಗೇ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಆಗಷ್ಟೇ ಹುಟ್ಟಿದ ಮಮತಾ ರಾಹುತ್ ಮಗುವಿನ ದೃಶ್ಯಗಳೂ ‘ತಾರಿಣಿ’ ಚಿತ್ರದಲ್ಲಿರುವುದು ವಿಶೇಷ ಎಂದು ನಿರ್ದೇಶಕರು ತಿಳಿಸಿದ್ದಾರೆ. ಈಗಾಗಲೇ ಲಂಡನ್ ಇಂಡಿಪೆಂಡೆಂಟ್ ಫಿಲ್ಮ್ ಅವಾರ್ಡ್ಸ್, ಗ್ಲೋಬಲ್ ತಾಜ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್, ಮೋಕ್ಖೊ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್, ಇಂಡೋಗ್ಮಾ ಫಿಲ್ಮ್ ಫೆಸ್ಟಿವಲ್, ಮುಂಬೈ…
ಚಿತ್ತಾಪುರ:- ವಿಷ ಸೇವಿಸಿ ಅಪ್ರಾಪ್ತ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ತಾಪುರ ತಾಲೂಕಿನ ಕೊಲ್ಲೂರ ಗ್ರಾಪಂ ವ್ಯಾಪ್ತಿಯಲ್ಲಿ ಜರುಗಿದೆ. ರಾಂಪುರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ತರಕಸ್‌ಪೇಠ ಗ್ರಾಮದ ರಾಧಿಕಾ ಮೆತ್ತನ್(೧೪) ಹಾಗೂ ಯಾದಗಿರಿಯಲ್ಲಿ ಐಟಿಐ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಕೊಲ್ಲೂರ ಗ್ರಾಮದ ನಿವಾಸಿ ಆಕಾಶ ಬೋವಿ(೧೯) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂದ್ದಾರೆ. ತರಕಸಪೇಠ್ ಸಮೀಪದ ಚೌಕಂಡಿ ತಾಂಡಾ ಪರಿಸರದ ನಿರ್ಜನ ಪ್ರದೇಶದಲ್ಲಿ ಸೇರಿದ್ದ ಈ ಪ್ರೇಮಿಗಳು ಏಕಕಾಲಕ್ಕೆ ಕೀಟನಾಶಕ ಸೇವಿಸಿದ್ದಾರೆ ಎನ್ನಲಾಗಿದ್ದು, ಸಾವು ಬದುಕಿನ ಮಧ್ಯೆ ಹೊರಾಡುತ್ತಿದ್ದ ಪ್ರೇಮಿಗಳನ್ನು ಗಮನಿಸಿದ ಸ್ಥಳೀಯರು ಖಾಸಗಿ ವಾಹನದಲ್ಲಿ ಕೊಲ್ಲೂರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಕಲಬುರಗಿ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಇಬ್ಬರು ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ.
ಐಸಿಸಿ ವಿಶ್ವಕಪ್ ವಿಜೇತ ಭಾರತ ಕ್ರಿಕೆಟ್ ತಂಡದ ನಾಯಕ ಮತ್ತು ಭಾರತೀಯ ಕ್ರಿಕೆಟ್ ಸೂಪರ್ಸ್ಟಾರ್ ಮಹೇಂದ್ರ ಸಿಂಗ್ ಧೋನಿ ಬೆಂಗಳೂರು ಮೂಲದ ಸ್ಟಾರ್ಟಪ್ ಒಂದರಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಬೆಂಗಳೂರಿನ ‘ತಗ್ಡಾ ರಹೋ’ ಹೆಸರಿನ ಫಿಟ್ನೆಸ್ ಸ್ಟಾರ್ಟ್ಅಪ್ನಲ್ಲಿ ಧೋನಿ ಹಣ ಹೂಡಿದ್ದಾರೆ. ಆದರೆ, ಸ್ಟಾರ್ಟಪ್ ಮಾಲೀಕರು ಧೋನಿ ಎಷ್ಟು ಪ್ರಮಾಣದ ಹೂಡಿಕೆ ಮಾಡಿದ್ದಾರೆ ಅಥವಾ ಎಷ್ಟು ಷೇರುಗಳನ್ನು ಖರೀದಿಸಿದ್ದಾರೆ ಎಂಬುದನ್ನು ಮಾತ್ರ ಬಹಿರಂಗಪಡಿಸಿಲ್ಲ. ಕ್ರಿಕೆಟಿಗರ ಫಿಟ್ನೆಸ್ಗೆ ಬೇಕಾಗುವ ಭಾರತೀಯ ಭೌತಿಕ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ತಗ್ಡಾ ರಹೋ ಸಂಸ್ಥಾಪಕ ರಿಷಬ್ ಮಲ್ಹೋತ್ರಾ ಹೇಳಿದ್ದಾರೆ. ಇದಕ್ಕೂ ಮುನ್ನ ಮಹೇಂದ್ರ ಸಿಂಗ್ ಧೋನಿ ಗರುಡ ಏರೋಸ್ಪೇಸ್, ಹೋಮ್ಲೇನ್, ರಿಗಿ ಸೇರಿದಂತೆ ಹಲವು ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದರು. ಇದೀಗ ಅವರು ಆಧುನಿಕ ತರಬೇತಿಗೆ ಬೇಕಾದ ಸಾಂಪ್ರದಾಯಿಕ ಭಾರತೀಯ ವ್ಯಾಯಾಮ ಸಾಧನಗಳನ್ನು ಒದಗಿಸುವ ಈ ಫಿಟ್ನೆಸ್ ಸ್ಟಾರ್ಟ್ಅಪ್ನಲ್ಲಿ ಹೂಡಿಕೆ ಮಾಡಿದ್ದಾರೆ. ಈ ಸ್ಟಾರ್ಟ್ಅಪ್ ತನ್ನ ವೆಬ್ಸೈಟ್ ಮೂಲಕವೂ ಫಿಟ್ನೆಸ್ಗೆ ಬೇಕಾದ ತರಬೇತಿ ಸಾಧನಗಳನ್ನು…
ಬೆಳಗಾವಿ:-ರಾಜ್ಯ ಸರ್ಕಾರ ಬದುಕಿದೆಯೋ? ಸತ್ತಿದೆಯೋ? ಎಂದು ಹೇಳುವ ಮೂಲಕ ಆರ್ ಅಶೋಕ್ ಗುಡುಗಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದ್ದು, ಸರ್ಕಾರ ಬದುಕಿದೆಯೋ ಸತ್ತಿದೆಯೋ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಸರ್ಕಾರ ವಿರುದ್ಧ ವಾಕ್ಪ್ರಹಾರ ನಡೆಸಿದರು. ನಿಲುವಳಿ ಸೂಚನೆ ಮಂಡಿಸಿದ ಅವರು, ಸರ್ಕಾರ ಬಂದ ಮೇಲೆ 43 ಸಾವಿರ ಪ್ರಕರಣ ದಾಖಲಾಗಿದೆ. ಡಕಾಯಿತಿ, ದರೋಡೆ, ಕೊಲೆ ಪ್ರಕರಣ ಹೆಚ್ಚಾಗಿವೆ. ಚಿಕ್ಕಮಗಳೂರಿನಲ್ಲಿ ವಕೀಲರ ಮೇಲೆ ಹಲ್ಲೆಯಾಯಿತು, ಪೊಲೀಸರೇ ಧರಣಿ ನಡೆಸಿದರು. ಭದ್ರಾವತಿ, ಬೆಳಗಾವಿಯಲ್ಲಿ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆಯಾಯಿತು. ಶಿವಮೊಗ್ಗದಲ್ಲಿ ಟಿಪುಪ ಮತ್ತಿತರರ ಕಟೌಟ್ನಿಂದ ಗಲಾಟೆಯಾಯಿತು ಎಂದರು. ಕಾನೂನು ಸುವ್ಯವಸ್ಥೆ ವಿಷಯ ನಿಲುವಳಿ ಸೂಚನೆ ವ್ಯಾಪ್ತಿಗೆ ಬಾರದಿರುವುದರಿಂದ ಪ್ರತ್ಯೇಕ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿದ ಸ್ಪೀಕರ್ ಪ್ರತಿಪಕ್ಷದ ನಾಯಕರ ಮಾತಿಗೆ ಬ್ರೇಕ್ ಹಾಕಿದರು.
ಭುವನೇಶ್ವರ: ಅಕ್ರಮ ಸಂಬಂಧದ ಶಂಕೆಯ ಮೇಲೆ ಪತ್ನಿಯನ್ನು ಕೊಂದು ಆಕೆಯ ತಲೆಯನ್ನು ಕತ್ತರಿಸಿ, ಅದನ್ನು ಹಿಡಿದುಕೊಂಡೇ ಪತಿ ಪೊಲೀಸ್ ಠಾಣೆಗೆ ಬಂದು ಶರಣಾಗಿರುವ ಆಘಾತಕಾರಿ ಘಟನೆ ಒಡಿಶಾದ (Odisha) ನಯಾಗಢ (Nayagarh) ಜಿಲ್ಲೆಯಲ್ಲಿ ನಡೆದಿದೆ. ಬಿಡಪಾಜು ಗ್ರಾಮದ ನಿವಾಸಿ ಅರ್ಜುನ ಬಾಘಾ (35) ಪತ್ನಿ ಧರಿತ್ರಿಯನ್ನು (30) ಅಕ್ರಮ ಸಂಬಂಧ ಹೊಂದಿರುವ ಶಂಕೆಯ ಮೇಲೆ ಹತ್ಯೆ ಮಾಡಿದ್ದಾನೆ. ಆಕೆಯನ್ನು ಕ್ರೂರವಾಗಿ ಕೊಂದ ಬಳಿಕ ಹರಿತವಾದ ಆಯುಧ ಬಳಸಿ ಶಿರಚ್ಛೇದನ (Beheading) ಮಾಡಿದ್ದಾನೆ. ಬಳಿಕ ಪತ್ನಿಯ ರುಂಡವನ್ನು ಹಿಡಿದುಕೊಂಡು ನಡೆದೇ ಪೊಲೀಸ್ ಠಾಣೆಗೆ ಹೋಗಿದ್ದಾನೆ. ವ್ಯಕ್ತಿ ದಾರಿಯುದ್ದಕ್ಕೂ ಪತ್ನಿಯ ತಲೆಯನ್ನು ಝಾಡಿಸಿ ಸ್ಥಳೀಯರನ್ನು ಬೆಚ್ಚಿಬೀಳಿಸಿದ್ದಾನೆ. https://ainlivenews.com/see-how-hot-and-hot-this-cold-can-be/ ಪೊಲೀಸ್ ಠಾಣೆಗೆ ಬಂದ ಬಾಘಾ ಪೊಲೀಸರ ಮುಂದೆ ತಾನು ಪತ್ನಿಯನ್ನು ಅಕ್ರಮ ಸಂಬಂಧ ಹೊಂದಿದ್ದ ಹಿನ್ನೆಲೆ ಕೊಂದಿರುವುದಾಗಿ ತಿಳಿಸಿ ಶರಣಾಗಿದ್ದಾನೆ. ಜೊತೆಗೆ ಪೊಲೀಸ್ ಠಾಣೆ ವರೆಗೂ ಹಿಡಿದುಕೊಂಡೇ ಬಂದಿದ್ದ ಪತ್ನಿಯ ತಲೆಯನ್ನು ತೋರಿಸಿದ್ದಾನೆ. ವ್ಯಕ್ತಿಯ ಅಮಾನವೀಯ ಕೃತ್ಯ ಕಂಡು ಪೊಲೀಸರು ತಬ್ಬಿಬ್ಬಾಗಿದ್ದಾರೆ. ಪತ್ನಿಯನ್ನು ಕ್ರೂರವಾಗಿ ಕೊಂದ ಆರೋಪಿಯನ್ನು…
ದಾಳಿಂಬೆ ನಾರಿನಂಶ, ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಈ ಹಣ್ಣು ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದಾಳಿಂಬೆ ಸಿಪ್ಪೆಯ ಚಹಾವನ್ನು ಮನಸ್ಸನ್ನು ಚುರುಕುಗೊಳಿಸಲು ತಯಾರಿಸಬಹುದು. ದಾಳಿಂಬೆ ಸಿಪ್ಪೆಯ ಚಹಾವನ್ನು ತಯಾರಿಸಲು ಸುಲಭವಾದ ಪಾಕವಿಧಾನವನ್ನು ಹಂಚಿಕೊಂಡಿದ್ದಾರೆ. ಇದನ್ನು ನೀವು ಸ್ಥಳೀಯ ಭಾಷೆಯಲ್ಲಿ ದಾಳಿಂಬೆ ಸಿಪ್ಪೆಗಳ ಕಷಾಯ ಎಂದೂ ಕರೆಯಬಹುದು. ದಾಳಿಂಬೆ ಸಿಪ್ಪೆ ಚಹಾ(Pomogranate peel tea ) ತಯಾರಿಸೋದು ಹೇಗೆ ಎಂದು ಇಲ್ಲಿದೆ ನೋಡಿ: ದಾಳಿಂಬೆ ಸಿಪ್ಪೆ ಚಹಾ ತಯಾರಿಸಲು, ಮೊದಲನೆಯದಾಗಿ, ಖಾಲಿ ಟೀ ಬ್ಯಾಗ್ ತೆಗೆದುಕೊಂಡು ಅದರಲ್ಲಿ ಒಂದು ಟೀಸ್ಪೂನ್ ದಾಳಿಂಬೆ ಸಿಪ್ಪೆ ಪುಡಿಯನ್ನು ಬೆರೆಸಿ ಮತ್ತು ಅದನ್ನು ಒಂದು ಲೋಟ ಬಿಸಿ ನೀರಿಗೆ ಹಾಕಿ. ಚಹಾದ ರುಚಿಯನ್ನು ಹೆಚ್ಚಿಸಲು ಈ ಚಹಾಕ್ಕೆ ಸ್ವಲ್ಪ ಜೇನುತುಪ್ಪ ಸಹ ಸೇರಿಸಬಹುದು. ದಾಳಿಂಬೆ ಸಿಪ್ಪೆಯಿಂದ ತಯಾರಿಸಿದ ಚಹಾ ಕುಡಿಯುವುದರ ಪ್ರಯೋಜನಗಳು ಚರ್ಮದ ಸಮಸ್ಯೆಗಳಿಗೆ ಸಹಾಯಕಾರಿ- ದಾಳಿಂಬೆ ಸಿಪ್ಪೆಗಳಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಪಾಲಿಫಿನಾಲ್…
ಪ್ರಕೃತಿಯಲ್ಲಿ ದೊರೆಯುವ ವಿವಿಧ ಹಣ್ಣುಗಳಲ್ಲಿ ಪಪ್ಪಾಯಿ ಅತ್ಯಂತ ಅದ್ಭುತವಾಗಿದೆ. ಇದು ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳು, ವಿಟಮಿನ್ ಬಿ, ವಿಟಮಿನ್ ಕೆ, ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಅನೇಕ ರೀತಿಯ ಪೋಷಕಾಂಶಗಳನ್ನು ಒಳಗೊಂಡಿದೆ. ಹಾಗಾಗಿಯೇ ಪಪ್ಪಾಯಿ ಆರೋಗ್ಯಕ್ಕೆ ಒಳ್ಳೆಯದು. ಆದರೆ ಕೆಲವು ಆರೋಗ್ಯ ಸಮಸ್ಯೆಗಳಿರುವವರಿಗೆ ಪಪ್ಪಾಯಿ ಒಳ್ಳೆಯದಲ್ಲ ಎಂದು ವೈದ್ಯರು ಸೂಚಿಸುತ್ತಾರೆ. ಅಲರ್ಜಿ ಸಮಸ್ಯೆ ಇರುವವರು ಪಪ್ಪಾಯಿಯನ್ನು ತ್ಯಜಿಸಬೇಕು. ಏಕೆಂದರೆ ಪಪ್ಪಾಯಿಯ ಹಾಲು ಅಲರ್ಜಿಯನ್ನು ಉಂಟು ಮಾಡುತ್ತದೆ. ಪಪ್ಪಾಯಿಯನ್ನು ಗರ್ಭಿಣಿಯರು ತಿನ್ನಬಾರದು. ಇದರಲ್ಲಿರುವ ಪಾಪೈನ್ ಗರ್ಭದಲ್ಲಿರುವ ಮಗುವಿಗೆ ಹಾನಿ ಮಾಡುತ್ತದೆ. ಪಪ್ಪಾಯಿಯನ್ನು ಮಿತಿ ಮೀರಿ ತಿನ್ನುವುದರಿಂದ ಗ್ಯಾಸ್, ಹೊಟ್ಟೆ ಉಬ್ಬುವುದು ಮತ್ತು ಅತಿಸಾರ ಸಮಸ್ಯೆಗಳು ಬರಬಹುದು. ಪಪ್ಪಾಯಿಯಲ್ಲಿ ವಿಟಮಿನ್ ಕೆ ಅಧಿಕವಾಗಿದೆ. ಇದರಿಂದ ರಕ್ತ ಬೇಗ ಹೆಪ್ಪುಗಟ್ಟುತ್ತದೆ. ರಕ್ತ ತೆಳುವಾಗಿಸುವವರು ತಮ್ಮ ವೈದ್ಯರ ಸಲಹೆಯಂತೆ ಪಪ್ಪಾಯಿಯನ್ನು ಸೇವಿಸಬೇಕು.