ಮೈಸೂರು: ಸಂಸತ್ ಭವನಕ್ಕೆ ನುಗ್ಗಿ ಭೀತಿ ಹುಟ್ಟಿಸಿದ ಯುವಕರಿಗೆ ಸಂಸದ ಪ್ರತಾಪಸಿಂಹ ಸಂಸತ್ ಭವನದ ಪಾಸ್ ನೀಡಿದ್ದರೆಂಬ ಕಾರಣಕ್ಕೆ ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿರುವ ಸಂಸದ ಪ್ರತಾಪಸಿಂಹ ಕಚೇರಿ ಎದುರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. https://ainlivenews.com/do-you-know-why-you-should-not-cut-your-nails-at-night-heres-why/ ಪಾರ್ಲಿಮೆಂಟಿಗೆ ನುಗ್ಗಿ ಭಯೋತ್ಪಾದನಾ ಕೃತ್ಯ ನಡೆಸುವ ಸಂಚಿಗೆ ಪ್ರತಾಪ್ ಸಿಂಹರವರೇ ನೇರ ಹೊಣೆ ಅಂತಾ ಆಕ್ರೋಶದಿಂದ ಘೋಷಣೆಗಳನ್ನು ಕೂಗಿದರು. ಮೈಸೂರು ನಗರ ಹಾಗೂ ಗ್ರಾಮಾಂತರ ಕಾಂಗ್ರೆಸ್ ಸಮಿತಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಹಲವು ಕಾಂಗ್ರೆಸ್ ಮುಖಂಡರು ಬಾಗಿಯಾಗಿದ್ದರು.
Author: AIN Author
ಬೆಳಗಾವಿ: ಡಿಕೆಯ ಮಾತಿನಿಂದ ಅಕ್ರೋಶಗೊಂಡ ಬಿಜೆಪಿ ನಾಯಕರು ಇದನ್ನ ರಾಜಕೀಯ ಮಾಡಲು ಹೊರಟ್ಟಿರೋದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ರು.. ಈ ವೇಳೆ ಎರಡು ಪಕ್ಷದ ಶಾಸಕರಿಂದ ಮಾತಿನ ಚಕಮಕಿ ನಡೆದು ಸದನವನ್ನ ೧೦ ನಿಮಿಷ ಮುಂದೂಡಲಾಯಿತು.. ಈ ವೇಳೆ ಖುದ್ದು ಸಿಎಂ ವಿಪಕ್ಷ ನಾಯಕರನ್ನ ಕರೆದು ಮಾತನಾಡಿ ಮತ್ತೆ ಸದನವನ್ನ ಆರಂಭಿಸಲಾಯಿತು. ಈ ವೇಳೆ ಸದನ ಆರಂಬಿಸುತ್ತಿದ್ದಂತೆ ಬಿಜೆಪಿ ನಾಯಕರನ್ನ ಮತ್ತೆ ಗುರಿಯಾಗಿಸಿ ಮಾತನಾಡಲು ನಯಾನಮೊಟ್ಟಮ್ಮ ಮುಂದಾದಗ ಸ್ವೀಕರ್ ಗರಂ ಅದ್ರು. https://ainlivenews.com/do-you-know-why-you-should-not-cut-your-nails-at-night-heres-why/ ನೀವು ಮಾತಾಡಿ ಯಾರನ್ನೂ ಮೆಚ್ಚಿಸುವ ಅಗತ್ಯ ಇಲ್ಲ.. ಸಮಯ ವ್ಯರ್ಥ ಮಾಡಬೇಡಿ, ಇನ್ನು ಮೂರು ದಿನ ಮಾತ್ರ ಕಲಾಪ ಇರೋದು ಎಂದು ಗರಂ ಅದ್ರು ಜೊತೆಗೆ ಸಂಸತ್ ಸ್ಮೋಕ್ ದಾಳಿಯನ್ನು ನಾವೆಲ್ಲ ತೀವ್ರವಾಗಿ ಖಂಡಿಸ್ತೇವೆ. ಆರೋಪಿಗಳಿಗೆ ಶಿಕ್ಷೆ ಆಗಬೇಕು ಅಂತ ಕೇಂದ್ರಕ್ಕೆ ನಾವು ಆಗ್ರಹಿಸ್ತೇವೆ..ಇಲ್ಲಿನ ಕಲಾಪದಲ್ಲಿ ಯಾರಾದರೂ ಅಸಂಸದೀಯವಾಗಿ ಮಾತಾಡಿದ್ರೆ ಕಡತದಿಂದ ತೆಗೆಸ್ತೇವೆ. ಶಾಸಕರು ಪಾಸ್ ಕೊಡುವ ಮುನ್ನ ಎಚ್ಚರ ಎಂದು ಸ್ವೀಕರ್ ಬುದ್ದಿವಾದ ಹೇಳಿದ್ರು.
ಬೆಂಗಳೂರು: ರಾಜ್ಯದ ಮತ್ತೊಂದು ರೈಲ್ವೇ ಸೇವೆ ರದ್ದಾಗಿದ್ದು ಬೂದಗುಂಪಾ ಮತ್ತು ಚಿಕ್ಕಬೆಣಕಲ್ ಯಾರ್ಡ್ ನಡುವೆ ರೈಲು ಸೇವೆ ರದ್ದು ಪಡಿಸಲಾಗಿದೆ. ಬೂದಗುಂಪಾ ಮತ್ತು ಚಿಕ್ಕಬೆಣಕಲ್ ನಡುವೆ ತುರ್ತು ಕಾಮಗಾರಿ ಹಿನ್ನೆಲೆ ರೈಲು ಸೇವೆ ರದ್ದು ಪಡಿಸಿದ ನೈರುತ್ಯ ರೈಲ್ವೇ ಇಲಾಖೆ ಪ್ರಯಾಣಿಕರು ಸಹಕರಿಸುವಂತೆ ಮನವಿ ಮಾಡಿದ ರೈಲ್ವೇ ಇಲಾಖೆ ಮನವಿ ಮಾಡಲಾಗಿದೆ. ಯಾವ ರೈಲು ಸೇವೆ ರದ್ದು? 1. ರೈಲು ಸಂಖ್ಯೆ 07381 ಎಸ್‌ಎಸ್‌ಎಸ್ ಹುಬ್ಬಳ್ಳಿ-ಕಾರಟಗಿ ಡೈಲಿ ಪ್ಯಾಸೆಂಜರ್ ವಿಶೇಷ ರೈಲು ಸೇವೆ ಇಂದು ಮತ್ತು ನಾಳೆ ರದ್ದು 2. ರೈಲು ಸಂಖ್ಯೆ 07382 ಕಾರಟಗಿ-ಎಸ್‌ಎಸ್‌ಎಸ್ ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್ ವಿಶೇಷ ರೈಲು ಸೇವೆ ಇಂದು ಮತ್ತು ನಾಳೆ ರದ್ದು ಗುಂಟೂರು ವಿಭಾಗದಲ್ಲಿ ಸುರಕ್ಷತೆ-ಸಂಬಂಧಿತ ನಿರ್ವಹಣಾ ಕಾರ್ಯಗಳಿಂದ ರೈಲು ಸೇವೆ ರದ್ದು ದಕ್ಷಿಣ ಮಧ್ಯ ರೈಲ್ವೆಯಿಂದ ಈ ಕೆಳಗಿನ ರೈಲು ಸೇವೆಗಳನ್ನು ರದ್ದುಗೊಳಿಸುವಂತೆ ಸೂಚನೆ 1. ರೈಲು ಸಂಖ್ಯೆ 17329- SSS ಹುಬ್ಬಳ್ಳಿ-ವಿಜಯವಾಡ ಡೈಲಿ ಎಕ್ಸ್‌ಪ್ರೆಸ್ ಪ್ರಯಾಣವನ್ನು ಡಿಸೆಂಬರ್ 18 ರಿಂದ…
ಬೆಂಗಳೂರು: ರಾಜ್ಯದ ವಿದ್ಯಾರ್ಥಿಗಳ ಭವಿಷ್ಯ ಕಿತ್ತುಕೊಳ್ಳುತ್ತಿದೆಯಾ “ಶಕ್ತಿ” ಯೋಜನೆ ಎಂದು ಅನಿಸುತ್ತಿದೆ ಹಾಗಾಗಿ ಶಕ್ತಿ ಯೋಜನೆ ವಿರುದ್ಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಕಿಡಿಕಾರಿದ್ದಾರೆ. ಪ್ರತಿನಿತ್ಯವೂ ಶಾಲಾ ಅವಧಿಗೆ ಸರಿಯಾಗಿ ಹೋಗೋಕಾಗದೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದು ಬಸ್ ನಿಲ್ದಾಣಕ್ಕೆ ಬಂದು ಗಂಟೆಗಟ್ಟಲೇ ಕಾದರೂ ಬಾರದ ಸಾರಿಗೆ ಬಸ್ ಗಳು ವಿರುದ್ಧ ಸಿಡಿದೆದ್ದಿದ್ದಾರೆ ಒಂದುವೇಳೆ ಬಸ್ ಬಂದರೂ ಹೆಜ್ಜೆ ಇಡೋಕು ಜಾಗವಿಲ್ಲದಷ್ಟು ರಷ್ ಆಗಿರುತ್ತೆ ಎಂದು ಅಳಲು ನಮ್ಮಂತ ವಿದ್ಯಾರ್ಥಿಗಳ ಪರದಾಟಕ್ಕೆ ನೇರವಾಗಿ ಸರ್ಕಾರವೇ ಕಾರಣ ಎಂದು ಆಕ್ರೋಶ ಶಕ್ತಿ ಯೋಜನೆಯಿಂದಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತುಂಬಾ ತೊಂದರೆ ಆಗುತ್ತಿದೆ ಹೆಣ್ಣು ಮಕ್ಕಳಿಗೂ ಬಸ್ ಹತ್ತಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ತುಮಕೂರಿನ ವಿದ್ಯಾರ್ಥಿನಿಯೊಬ್ಬಳ ಆಕ್ರೋಶದ ವಿಡಿಯೋ ವೈರಲ್ ಬಸ್ ಸಿಗದ ಕಾರಣ ಶಕ್ತಿ ಯೋಜನೆ ವಿರುದ್ಧ ಕಿಡಿ ಕಾರುತ್ತಿರುವ ವಿದ್ಯಾರ್ಥಿಗಳು ಎಲ್ಲಾ ಮಹಿಳೆಯರಿಗೂ ಶಕ್ತಿ ಯೋಜನೆ ಜಾರಿ ಮಾಡಬಾರದಿತ್ತು ಶಾಲಾ ಕಾಲೇಜು ಹೆಣ್ಣು ಮಕ್ಕಳಿಗೆ ಮಾತ್ರ ಜಾರಿ ಮಾಡಬೇಕಿತ್ತು ಎಂದು ಆಗ್ರಹಬಸ್ ಸಿಗದೇ ಪರದಾಟ ನಡೆಸುತ್ತಿರುವ…
ಮಂಡ್ಯ: ನವಜಾತ ಹೆಣ್ಣು ಶಿಶು ಶವವಾಗಿ (Newborn Baby) ಪತ್ತೆಯಾಗಿರುವ ಘಟನೆ ಮಂಡ್ಯ (Mandya) ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆ ಬಳಿಯ ದಳವಾಯಿ ಕೆರೆ ಬಳಿ ನಡೆದಿದೆ. ಮೇಲುಕೋಟೆಯ (Melukote) ಕೆರೆಯ ಬಳಿ ಕಂಡುಬಂದಿರುವ ಹೆಣ್ಣು ನವಜಾತ ಶಿಶು ಎರಡು ದಿನದ ಹಿಂದೆ ಜನಿಸಿರುವುದಾಗಿ ತಿಳಿದುಬಂದಿದ್ದು, ಹೆಣ್ಣು ಎಂಬ ಕಾರಣಕ್ಕೆ ಶಿಶುವನ್ನು ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ. https://ainlivenews.com/do-you-know-why-you-should-not-cut-your-nails-at-night-heres-why/ ನಿರ್ಜನ ಪ್ರದೇಶದಲ್ಲಿ ಶಿಶುವನ್ನು ನೀಚರು ಎಸೆದು ಹೋಗಿದ್ದು, ಬಳಿಕ ಆ ಶಿಶು ಸಾವನ್ನಪ್ಪಿರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರ ಮಾಹಿತಿ ಮೇರೆಗೆ ಮೇಲುಕೋಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ಕಾರ್ತಿಕ್ ರಾಜಕೀಯ ಮಾಡ್ತಿದ್ದಾರೆ! ಅಲ್ಲಲ್ಲ, ರಾಜಕೀಯ ಶಾಸ್ತ್ರದ ಪಾಠ ಮಾಡ್ತಿದ್ದಾರೆ. ಆ ಪಾಠ ಹೇಗಿದೆ ಎಂಬುದು JioCinema ಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ಜಾಹೀರಾಗಿದೆ. ಈ ವಾರದ ಬಿಗ್‌ಬಾಸ್ ಪ್ರಾಥಮಿಕ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಈಗ ಹೈಯರ್ ಎಜುಕೇಷನ್‌ಗೆ ಕಾಲಿಟ್ಟಂತಿದೆ. ಚೇಷ್ಟೆಗಳು ಮುಗಿದು ಗಂಭೀರ ಚರ್ಚೆಗಳು ತರಗತಿಯಲ್ಲಿ ನಡೆಯುತ್ತಿದೆ. ಚರ್ಚೆಗೆ ಬುನಾದಿ ಹಾಕಿಕೊಟ್ಟವರು ಇಂದಿನ ಬಿಗ್‌ಬಾಸ್ ವಿದ್ಯಾಲಯದಲ್ಲಿ ಪಾಠ ಮಾಡುತ್ತಿರುವ ಕಾರ್ತಿಕ್. ಕಾರ್ತಿಕ್ ರಾಜಕೀಯದ ಬಗ್ಗೆ ವಿದ್ಯಾರ್ಥಿಗಳಿಗೆ ಪಾಠ ಮಾಡ್ತಿದ್ದಾರೆ. ಅದರಲ್ಲಿಯೂ ಉತ್ತಮ ನಾಯಕತ್ವ ಹೇಗಿರಬೇಕು ಎಂಬುದರ ಕುರಿತು ಅವರು ಚರ್ಚೆ ಹುಟ್ಟುಹಾಕಿದ್ದಾರೆ. ಅದರಲ್ಲಿ ವಿದ್ಯಾರ್ಥಿಗಳೂ ಪಾಲ್ಗೊಳ್ಳುತ್ತಿದ್ದಾರೆ. ‘ಬಿಗ್‌ಬಾಸ್ ಮನೆಯಲ್ಲಿ ರಾಜಕೀಯ ನಡೆಯುತ್ತಿದೆ’ ಎಂದು ಹೇಳುವುದರ ಮೂಲಕ ಕಾರ್ತಿಕ್ ಮನೆಯೊಳಗಿನ ಪಾಲಿಟಿಕ್ಸ್ ಬಗ್ಗೆಯೇ ಮಾತಾಡಲು ಪ್ರಾರಂಭಿಸಿದ್ದಾರೆ. ‘ಮನೆಯೊಳಗೆ ಯಾರಿಗೆ ಕೋಪ ನಿಯಂತ್ರಣ ಕೌಶಲಗಳನ್ನು ಕಲಿತುಕೊಳ್ಳುವ ಅಗತ್ಯವಿದೆ?’ ಎಂಬ ಪ್ರಶ್ನೆಗೆ ಸಂಗೀತಾ ತಾನಾಗೇ, ‘ನನ್ನ ಹೆಸ್ರೇ ಬರ್ದುಬಿಡಿ’ ಎಂದು ಹೇಳಿದ್ದಾರೆ. ಅದಕ್ಕೆ ನಕ್ಕ ಕಾರ್ತಿಕ್, ‘ಏನಪ್ಪಾ ಈವತ್ತು ಸಂಗೀತಾ ಎಲ್ಲನೂ ಅವರಾಗೇ…
ನವದೆಹಲಿ: ಸಂಸತ್‌ನಲ್ಲಿ (Parliament) ಬುಧವಾರ ನಡೆದ ಭದ್ರತಾ ಉಲ್ಲಂಘನೆಗೆ (Security Breach) ಸಂಬಂಧಿಸಿಂತೆ ಒಟ್ಟು 5 ಜನರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ಆರೋಪಿಗಳ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (UAPA) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೇ ಆರೋಪಿಗಳನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲೋಕಸಭೆಯಲ್ಲಿ (Lok Sabha) ನಡೆದ ಸ್ಮೋಕ್ ಬಾಂಬ್ ಪ್ರಕರಣದಲ್ಲಿ ಒಟ್ಟು 6 ಮಂದಿ ಭಾಗಿಯಾಗಿದ್ದು, ಮೈಸೂರಿನ ನಿವಾಸಿ ಮನೋರಂಜನ್ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಅವರೆಲ್ಲರೂ ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಸಂಪರ್ಕ ಹೊಂದಿದ್ದರು ಎಂದು ತಿಳಿದುಬಂದಿದೆ. ಮೈಸೂರಿನ ವಿಜಯನಗರ ನಿವಾಸಿ ಎಂಜಿನಿಯರಿಂಗ್ ಪದವೀಧರ ಮನೋರಂಜನ್, ಲಕ್ನೋದ ಸಾಗರ್ ಶರ್ಮಾ, ಹರಿಯಾಣದ ಹಿಸಾರ್‌ನ ನೀಲಂ, ಮಹಾರಾಷ್ಟ್ರದ ಲಾತೂರ್‌ನ ಅಮೋಲ್ ಶಿಂಧೆ ಹಾಗೂ ವಿಶಾಲ್ ಎಂಬವರನ್ನು ಪೊಲೀಸರು ಬಂಧಿಸಿದ್ದು, https://ainlivenews.com/do-you-know-why-you-should-not-cut-your-nails-at-night-heres-why/ ಇನ್ನೋರ್ವ ಆರೋಪಿಗಾಗಿ ಶೋಧ ಮುಂದುವರೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಆದೇಶಿಸಿದ್ದಾರೆ. ಘಟನೆಯಲ್ಲಿ…
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವಾಹನ ಚಾಲನಾ ತರಬೇತಿ ಪಡೆಯಬೇಕು ಅಂತಿದ್ದೀರಾ ಹಾಗೇನಾದರೂ ಅಂದುಕೊಂಡಿದ್ರೆ ಈ ತಿಂಗಳೇ ಪಡೆದುಕೊಂಡುಬಿಡಿ ಇಲ್ಲದಿದ್ದರೆ ಮುಂದಿನ ತಿಂಗಳಿನಿಂದ ದುಬಾರಿಯಾಗಲಿದೆ ದುನಿಯಾ! ಹೊಸ ವರ್ಷದ ಮೊದಲ ದಿನದಿಂದಲೇ ದುಬಾರಿಯಾಗಲಿದೆ ವಾಹನ ಚಾಲನಾ ತರಬೇತಿ ಜ.1 ರಿಂದಲೇ ದುಬಾರಿಯಾಗಲಿದೇ ವಾಹನ ಚಾಲನಾ ತರಬೇತಿ ಶುಲ್ಕ ಜ.1 2024 ರಿಂದ ಹೊಸ ದರ ಅನ್ವಯವಾಗುವಂತೆ ಆದೇಶ ರಾಜ್ಯದಲ್ಲಿರುವ ಡ್ರೈವಿಂಗ್ ಸ್ಕೂಲ್ ಗಳು ಶುಲ್ಕ ಹೆಚ್ಚಿಸುವಂತೆ ಆದೇಶ ಆದೇಶ ಹೊರಡಿಸಿದ ರಾಜ್ಯ ಸಾರಿಗೆ ಇಲಾಖೆ ಜ.1 ರಿಂದ ಅನ್ವಯವಾಗುವ ಹೊಸ ದರ – ಕಾರು ಚಾಲನೆ ಕಲಿಯಬೇಕು ಅಂದಿದ್ರೆ ಈ ಹಿಂದೆ 4 ಸಾವಿರ ಕಟ್ಟಬೇಕಿತ್ತು – 2024 ಜ.1 ರಿಂದ ಸಾರಿಗೆ ಇಲಾಖೆ ಹೊಸ ದರ ಅನ್ವಯವಾಗವಂತೆ ಆದೇಶ – ಜ.1 ರಿಂದ ಚಾಲನಾ ಕಲಿಯಲು ಹೊಸ ದರ 7 ಸಾವಿರ ಕಟ್ಟಬೇಕು -ಲಘು ಮೋಟಾರು ವಾಹನ, ಆಟೋರಿಕ್ಷಾ ,ಮೋಟಾರುಸೈಕಲ್ ಹಾಗೂ ಸಾರಿಗೆ ವಾಹನಗಳೆಂದು 4 ವರ್ಗದಲ್ಲಿ ಶುಲ್ಕ ನಿಗದಿ -…
ಬೆಂಗಳೂರು: ಬಿಎಂಟಿಸಿ ಬಸ್ ನಲ್ಲಿ ಟಿಕೆಟ್ ಪಡೆಯದೆ ಪ್ರಯಾಣ ಮಾಡಿದವರಿಗೆ ಬಿತ್ತು ದಂಡ. ಮಹಿಳಾ ಮೀಸಲು ಸೀಟ್ ನಲ್ಲಿ ಕೂತವರ ಜೇಬಿಗೆ ಬಿತ್ತು ಕತ್ತರಿ. ದಂಡದಿಂದಲೆ ಬಿಎಂಟಿಸಿ ಬೊಕ್ಕಸಕ್ಕೆ ಬಂದ ಹಣವೆಷ್ಟು ಗೊತ್ತಾ? ಇಲ್ಲಿದೆ ಡೀಟೈಲ್ಸ್ ಟಿಕೆಟ್ ಪಡೆಯದೆ ಪ್ರಯಾಣ ಮಾಡ್ತಿದ್ದವರಿಗೆ ಬಿಎಂಟಿಸಿ ಶಾಕ್ ನೀಡಿದೆ. ನವೆಂಬರ್ ತಿಂಗಳಿನಲ್ಲಿ ಟಿಕೆಟ್ ರಹಿತ ಪ್ರಯಾಣಿಕರಿಂದ 6.68.610 ದಂಡ ವಸೂಲಿ ಮಾಡಿದ್ದಾರೆ. ಅಷ್ಟೇ ಅಲ್ಲ ಮಹಿಳಾ ಪ್ರಯಾಣಿಕರಲ್ಲಿ ಮೀಸಲಿರಿಸಿದ್ದ ಸೀಟ್ ನಲ್ಲಿ ಪ್ರಯಾಣಿಸಿದ್ದ 438 ಪುರುಷರಿಗೂ ದಂಡ ಬಿದ್ದಿದೆ.16,421 ಟ್ರಿಪ್ ಗಳಲ್ಲಿ ತಪಾಸಣೆ ಮಾಡಿದ್ದ ಚೆಕ್ಕಿಂಗ್ ಇನ್ಸ್‌ಪೆಕ್ಟರ್ ಗಳು,3,329 ಮಂದಿ ಟಿಕೇಟ್ ರಹಿತ ಪ್ರಯಾಣ ಮಾಡಿದ ಪ್ರಯಾಣಿಕರನ್ನು ಪತ್ತೆ ಮಾಡಿದ್ದಾರೆ. ಮಹಿಳಾ ಸೀಟ್ ನಲ್ಲಿ ಕುಳಿತ ಪ್ರಯಾಣಿಕರಿಂದ 43800ರೂ ದಂಡ ವಸೂಲಿ ಮಾಡಿದ್ದಾರೆ.ಮೋಟಾರು ವಾಹನ ಕಾಯ್ದೆ 1988ರ ಕಾಲಂ 177 ಹಾಗೂ94 ರ ಅನ್ವಯದಂತೆ ದಂಡ ವಿಧಿಸಲಾಗಿದ್ದು,ನವೆಂಬರ್ ತಿಂಗಳಲ್ಲಿ ಬಿಎಂಟಿಸಿಯ ಬೊಕ್ಕಸಕ್ಕೆ ಒಟ್ಟು 7,12,410 ರೂಪಾಯಿ ಹಣ ಬಂದಿದೆ. ಇಷ್ಟೇ ಅಲ್ಲದೇ ಬೇಜವಾಬ್ದಾರಿಯಾಗಿ ವರ್ತಿಸುತ್ತಿದ್ದ…
ವಿಧಾನಸಭೆ: ಕಲಾಪದಲ್ಲಿ 2023-24 ನೇ ಸಾಲಿನ ಪೂರಕ ಅಂದಾಜುಗಳ ಮೊದಲನೇ ಕಂತಿನ ಬೇಡಿಕೆಗಳ ಪ್ರಸ್ತಾವಗಳಿಗೆ ಅಂಗೀಕಾರ ಮಾಡಿದ್ದು ಚರ್ಚೆ, ಜಟಾಪಟಿ ನಂತರ ಹೆಚ್ಚುವರಿ ವೆಚ್ಚಗಳಿಗೆ ಸದನದಲ್ಲಿ ಅಂಗೀಕಾರ ದೊರೆತಿದೆ. ಒಟ್ಟು 3542.10 ಕೋಟಿ ರೂ ಮೊತ್ತದ ಪೂರಕ ಅಂದಾಜುಗಳ ಪ್ರಸ್ತಾವಗಳಿಗೆ ಅಂಗೀಕಾರ ಹಲವು ಇಲಾಖೆಗಳಲ್ಲಿ ಹೆಚ್ಚುವರಿ ವೆಚ್ಚಗಳಿಗೆ ಸದನ ಅಂಗೀಕಾರ ಪೂರಕ ಅಂದಾಜು ವೆಚ್ಚಗಳೇನು..? – ಶಾಸಕರಿಗೆ ಹೊಸ ಕಾರುಗಳ ಖರೀದಿಗೆ ಹೆಚ್ಚುವರಿಯಾಗಿ 4 ಕೋಟಿ ರೂ – ಡಿಸಿಎಂ ಮತ್ತು ಮಂತ್ರಿಗಳ ಕಚೇರಿಗಳ ವೆಚ್ಚಕ್ಕೆ ಹೆಚ್ಚುವರಿಯಾಗಿ 2.71 ಕೋಟಿ ರೂ – ವಿಷ್ಣು ಸ್ಮಾರಕಕ್ಕೆ ಹೆಚ್ಚುವರಿಯಾಗಿ 75.47 ಲಕ್ಷ ರೂ – ದಸರಾ ಆಚರಣೆಗೆ ಹೆಚ್ಚುವರಿಯಾಗಿ 8.5 ಕೋಟಿ ರೂ – ದಸರಾ ಸಿಎಂ ಕಪ್ ಗೆ 4.85 ಕೋಟಿ ರೂ – 2022-23 ನೇ ಸಾಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ 7.30 ಕೋಟಿ ರೂ – ಮುಂದಿನ ಜನವರಿಯಲ್ಲಿ ದಾವೋಸ್ ನಲ್ಲಿ ನಡೆಯಲಿರುವ ವರ್ಲ್ಡ್ ಎಕಾನಾಮಿಕ್ ಫೋರಂ…