Author: AIN Author

ಹುಬ್ಬಳ್ಳಿ: ದೇಶದ ಪ್ರಜಾಪ್ರಭುತ್ವದ ದೇಗುಲವಾಗಿರುವ ಸಂಸತ್ ಮೇಲೆ ಅಧಿವೇಶನ ನಡೆದ ಸಮಯದಲ್ಲಿ, ಆರು ಜನರು ಸೇರಿ ಕುತಂತ್ರದಿಂದ ಸಂಸತ್ ಒಳಗೆ ದಾಳಿ ಮಾಡಿ ಸ್ಮೋಕ್ ಬಾಂಬ್ ಸಿಡಿಸಿ, ದೇಶದ ಮಾನ ಹರಾಜು ಹಾಕಿರುವ ಈ ಕೃತ್ಯವು ಯಾವುದೇ ಭಯೋತ್ಪಾದನೆ ಕೃತ್ಯಕ್ಕೆ ಕಡಿಮೆ ಇಲ್ಲದಂತಹ ಹಾಗೂ ದೇಶದ್ರೋಹಕ್ಕೆ ಸಮನಾದ ಕೆಲಸವಾಗಿದೆ ಎಂದು ಖಂಡಿಸುತ್ತಾ,ಇವರನ್ನು ಯಾವುದೇ ಕಾರಣಕ್ಕೂ ಕ್ಷಮೆ ತೋರದೆ ದೇಶದ್ರೋಹದ ಕಾಯ್ದೆ ಅಡಿ ಇವರನ್ನು ಶಿಕ್ಷಿಸಬೇಕೆಂದು ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಭಾಸ್ಕರ ಜಿತೂರಿ ಆಗ್ರಹಿಸಿದರು. ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆಗೆ ಮಾತನಾಡಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದೇಶದ್ರೋಹಿ ಕೃತ್ಯ ನಡೆಸಿರುವವರನ್ನು ಖಂಡಿಸುವುದನ್ನು ಬಿಟ್ಟು,ಇವರಿಗೆ ಸಂಸತ್ ಪ್ರವೇಶದ ಪಾಸು ನೀಡಿರುವ ಸಂಸದರಾದ ಶ್ರೀ ಪ್ರತಾಪ ಸಿಂಹರನ್ನು ಸಂಸದರ ಸ್ಥಾನದಿಂದ ಉಚ್ಛಾಟಿ ಸಬೇಕೆಂದು ವಿಪಕ್ಷಗಳ ಆಗ್ರಹದಲ್ಲಿ ರಾಜಕೀಯದ ವಾಸನೆ ಎದ್ದು ಕಂಡು ಬರುತ್ತಿದೆ. ಈ ಕು ಕೃತ್ಯ ಮಾಡಿ ದೇಶದ ಮಾನ ಹರಾಜು ಹಾಕಿರುವವರ ಮೇಲೆ ಯಾವ ಕ್ರಮ ತೆಗೆದುಕೊಳ್ಳಬೇಕು ಅಥವಾ…

Read More

ಬೆಂಗಳೂರು: ಲೋಕಸಭೆಯ (Lok Sabha) ಮೇಲೆ ದಾಳಿ ನಡೆಸಿದ್ದ ಮೈಸೂರು (Mysuru) ಮೂಲದ ಮನೋರಂಜನ್‌ (Manoranjan) ಮೂರು ಬಾರಿ ಸಂಸದ ಪ್ರತಾಪ್ ಸಿಂಹ (Pratap Simha) ಕಚೇರಿಯಿಂದ ಪಾಸ್ (Pass) ಪಡೆದಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ. ಕಳೆದ ಅಧಿವೇಶನದ ಸಮಯದಲ್ಲಿ ಹೊಸ ಸಂಸತ್ ವೀಕ್ಷಣೆ ನೆಪದಲ್ಲಿ ಎರಡು ಬಾರಿ ಮನೋರಂಜನ್ ಪಾಸ್‌ ಪಡೆದಿದ್ದ. ಪಾಸ್ ಪಡೆದು ವೀಕ್ಷಕರ ಗ್ಯಾಲರಿಯವರೆಗೂ ಇರುವ ಭದ್ರತಾ ವ್ಯವಸ್ಥೆ ಬಗ್ಗೆ ಅಧ್ಯಯನ ಮಾಡಿದ್ದಾನೆ. ಹಾಗೆ ಆರೋಪಿ ಮನೋರಂಜನ್ ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಆರೋಪಿ ಮನೋರಂಜನ್​ಗೆ ಬೆಂಗಳೂರಿನ ಜೊತೆ ಅವಿನಾಭಾವ ಸಂಬಂಧವಿದೆ. ಈತನ ಬಹುತೇಕ ಸ್ನೇಹಿತರು ಬೆಂಗಳೂರಿನವರಾಗಿದ್ದು (Bengaluru) ತನಿಖೆ ನಡೆಯುತ್ತಿದೆ. ಮೈಸೂರಿನ ಮರಿಮಲ್ಲಪ್ಪದಲ್ಲಿ ಹೈಸ್ಕೂಲ್ ಓದಿದ್ದು, ಸೇಂಟ್ ಜೋಸೆಫ್‍ನಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದ. ಬಳಿಕ ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಬಿಇ ಡ್ರಾಪ್ ಔಟ್ ವಿದ್ಯಾರ್ಥಿಯಾಗಿದ್ದಾನೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ವಿವಿಪುರಂ ಬಳಿ ಇರುವ ಬೆಂಗಳೂರು…

Read More

ಬೆಂಗಳೂರು: ಸಂಸತ್ (Parliament) ಭವನದಲ್ಲಿ ಸ್ಮೋಕ್ ದಾಳಿ (Smoke Bomb) ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ (BJP) ಸಂಸದ ಪ್ರತಾಪ್ ಸಿಂಹ (Prathap Simha) ವಿರುದ್ಧ ಕಾಂಗ್ರೆಸ್ (Congress) ಕಾರ್ಯಕರ್ತರು (Activist) ಪ್ರತಿಭಟನೆ (Protest) ನಡೆಸಿದ್ದಾರೆ. ರೇಸ್‌ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಕೈ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಪ್ರತಾಪ್ ಸಿಂಹ ಹಾಗೂ ಬಿಜೆಪಿ ವಿರುದ್ಧ ಧಿಕ್ಕಾರ ಕೂಗುತ್ತಿದ್ದಾರೆ ಬಂಧನಕ್ಕೆ ಆಗ್ರಹಿಸಿ ಕಾರ್ಯಕರ್ತರು ಪ್ರತಾಪ್ ಸಿಂಹ ಫೋಟೋಗೆ ಬೆಂಕಿ ಹಚ್ಚಿದ್ದು, ಅವರ ಪ್ಲೇ ಕಾರ್ಡ್‌ಗೆ ಚಪ್ಪಲಿಯಿಂದ ಹೊಡೆದು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಕೂಡಲೇ ಸಂಸದ ಪ್ರತಾಪ್ ಸಿಂಹರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಇನ್ನು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Read More

ಬೆಂಗಳೂರು: ಸಂಸತ್‌ನಲ್ಲಿ (Parliament) ಸ್ಮೋಕ್ ಬಾಂಬ್ (Smoke Bomb) ದಾಳಿ ನಡೆಸಿದ ವಿರುದ್ಧ  ಮಾಜಿ ಸಂಸದ, ಕಾಂಗ್ರೆಸ್ ನಾಯಕ ವಿ.ಎಸ್.ಉಗ್ರಪ್ಪ ಕಿಡಿಕಾರಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿದ ಅವರು,  ದೇಶದ ಇತಿಹಾಸದಲ್ಲಿ ಅತ್ಯಂತ ಕರಾಳ ದಿನ ನೆನ್ನೆ ದೇಶದ ಇತಿಹಾಸದಲ್ಲಿ ಸಂಸತ್ ಭವನದ ಒಳಗೆ ಎಂದೂ ದಾಳಿ ನಡೆದಿಲ್ಲ ಸಂಸತ್ ಭವನ ರಾಜ್ಯಸಭೆ ಹಾಗೂ ಲೋಕಸಭಾ ಸ್ಪೀಕರ್ ಕಂಟ್ರೋಲ್‌ ನಲ್ಲಿ ಇರುತ್ತದೆ ಸಂಸತ್ ಭವನದ ಹೊರಗೆ ನಡೆದ ಘಟನೆ ಕೂಡ ಡಿಸೆಂಬರ್ 13 ಕಠಿಣ ಶಬ್ದಗಳಲ್ಲಿ ಈ ಘಟನೆ ಖಂಡಿಸುವೆ ಎಂದು ಹೇಳಿದರು. https://ainlivenews.com/manoranjan-who-had-been-pressured-for-3-months-in-pratap-singhas-office-got-a-parliamentary-pass/ ಈ ರೀತಿಯ ಘಟನೆ ನಡೆಯಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಕಾಡ್ತಿದೆ ಸಂಸತ್ ಭವನದ ರಕ್ಷಣೆ ಸಾಧ್ಯವಾಗದ ಸ್ಥಿತಿ ಇದೆ ರಾಷ್ಟ್ರದ ಜನರ ರಕ್ಷಣೆ ಹೇಗೆ ಸಾಧ್ಯ ಎಂಬ ಪ್ರಶ್ನೆ ಕಾಡ್ತಿದೆ ನಾನು ಸಂಸತ್ ಸದಸ್ಯರಾಗಿ ಪಾಸ್ ಗಳನ್ನ ನೀಡಿದ್ದೇನೆ ಅವರ ಕ್ಷೇತ್ರದವರಾಗಿದ್ರೆ , ಪರಿಚಯ ಇದ್ರೆ ಪಾಸ್ ಕೊಡಲಾಗುತ್ತದೆ ಮೈಸೂರಿನವರು ಮೈಸೂರಿನರಿಗೆ ಪಾಸ್…

Read More

ನವದೆಹಲಿ: ಲೋಕಸಭೆಯ (Lok Sabha) ಒಳಗೆ ಸ್ಮೋಕ್‌ ಬಾಂಬ್‌ (Smoke Bomb) ಸಿಡಿಸಿದ ಮನೋರಂಜನ್‌ (Manoranjan) ಮತ್ತು ಸಾಗರ್‌ ಶರ್ಮಾ (Sagar Sharma) 45 ನಿಮಿಷಗಳ ಕಾಲ ಪಾಸ್‌ ಪಡೆದು 2 ಗಂಟೆಗಳ ಕಾಲ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದು ಹೇಗೆ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ಹೌದು. ಬೆಳಗ್ಗೆ 11:30 ರಿಂದ ಮಧ್ಯಾಹ್ನ 12:15 ರವರೆಗೆ ಕಲಾಪ ವೀಕ್ಷಣೆಗೆ ಸಮಯ ನೀಡಲಾಗಿತ್ತು. 45 ನಿಮಿಷಗಳವರೆಗೆ ಪಾಸ್‌ ಪಡೆದ ಇವರು ಸುಮಾರು 2 ಗಂಟೆಗಳ ಕಾಲ ಕಲಾಪ ವೀಕ್ಷಣೆ ಮಾಡಿದ್ದರು.   ಸಂಸತ್‌ನಲ್ಲಿ ಕಲಾಪ ನಡೆಯಲಿ, ನಡೆಯದೇ ಇರಲಿ 45 ನಿಮಿಷಗಳ ಅವಧಿ ಮುಗಿದ ಕೂಡಲೇ ವೀಕ್ಷಕರ ಗ್ಯಾಲರಿಯಿಂದ ತೆರಳಬೇಕಾಗುತ್ತದೆ. ಈ ನಿರ್ದೇಶನವಿದ್ದರೂ ಇಬ್ಬರನ್ನು 2 ಗಂಟೆಗಳ ಕಾಲ ಕಲಾಪ ವೀಕ್ಷಣೆಗೆ ಅನುಮತಿ ನೀಡಿದ್ದೇ ಅತಿದೊಡ್ಡ ಭದ್ರತಾಲೋಪ. ವೀಕ್ಷಕರ ಜಾಗ ಖಾಲಿ ಇದ್ದ ಕಾರಣ ಭದ್ರತಾ ಸಿಬ್ಬಂದಿ  ಈ ವಿಷಯವನ್ನು ಗಮನಿಸದ ಕಾರಣ ಈ ಲೋಪ ಉಂಟಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.  https://ainlivenews.com/do-you-know-why-you-should-not-cut-your-nails-at-night-heres-why/ ಸುಮಾರು ಎರಡು ಗಂಟೆಗಳ ಕಾಲ…

Read More

ಸೇಡಂ ಪಟ್ಟಣದಲ್ಲಿ ಕರುವಿಗೆ ತೊಟ್ಟಿಲಲ್ಲಿ ಕೂರಿಸಿ ನಾಮಕರಣ ಮಾಡಿದ ಅಪರೂಪದ ಕಾರ್ಯಕ್ರಮ ನಡೆಯಿತು. ಅಪರೂಪವಷ್ಟೇ ಅಲ್ಲ ಬಹುಶ ಇದು ವಿಶಿಷ್ಟ ಕಾರ್ಯಕ್ರಮ ಅಂದ್ರೂ ತಪ್ಪಾಗಲಿಕ್ಕಿಲ್ಲ.. ಪಟ್ಟಣದ ನವನೀತ ಗೋಶಾಲೆಯಲ್ಲಿ ಮುದ್ದಾದ ಕರುವಿಗೆ ತೊಟ್ಟಿಲಲ್ಲಿ ಕೂರಿಸಿ ತುಳಸಿ ಅಂತ ನಾಮಕರಣ ಮಾಡಲಾಯಿತು.ಥೇಟ್ ಕೂಸಿಗೆ ಮಾಡುವ ತೊಟ್ಟಿಲ ಕಾರ್ಯಕ್ರಮ ತರ ಮುದ್ದಾದ ಕರುವನ್ನ ಸಿಂಗರಿಸಿದ ತೊಟ್ಟಿಲಲ್ಲಿ ಹಾಕಿ ಬಡಾವಣೆಯ ಜನರೆಲ್ಲ ಸೇರಿ ಕಾರ್ಯಕ್ರಮ ಮಾಡಿದ್ದು ವಿಶೇಷವಾಗಿತ್ತು..

Read More

ಬಳ್ಳಾರಿ: ಬಳ್ಳಾರಿಯಿಂದ ಆಂಧ್ರ ಗಡಿಗೆ ತೆರಳುವ ಮತ್ತು ಹೊಸ ಏರ್ಪೋರ್ಟ್ ಗೆ ಹೋಗುವ ಚತುಷ್ಪಥ ರಸ್ತೆ… ಹನ್ನೆರಡು ವರ್ಷಗಳ ಹಿಂದೆ ಏರ್ಪೋರ್ಟ್ ನಿರ್ಮಾಣ ಮಾಡುವ ಹಿನ್ನೆಲೆ ಬಳ್ಳಾರಿಯಿಂದ ಮೋಕಾ ಗ್ರಾಮದವರೆಗೂ ಇರೋ ಇಪ್ಪತ್ತು ಕಿ.ಮೀ. ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಜನಾರ್ದನ ರೆಡ್ಡಿ ಕಾಲದಲ್ಲಿ ನಿರ್ಮಾಣ ಮಾಡಿದ್ರು. ಕಾರಣಾಂತರದಿಂದ ಏರ್ಪೋರ್ಟ್ ವಿಳಂಬವಾದ್ರೂ ಈ ರಸ್ತೆಯ ಮೇಲೆ ಎಂದಿನಂತೆ ಜನರ ಓಡಾಟ ಇತ್ತು. ಆದರೆ ಇದೀಗ ಈ ರಸ್ತೆ ಮಾರ್ಗದಲ್ಲೊಂದು ಟೋಲ್ ನಿರ್ಮಾಣ ಮಾಡಲಾಗಿದೆ ಕಳೆದೊಂದು ವಾರದಿಂದ ಹಣವನ್ನು ವಸೂಲಿ ಮಾಡಲಾಗುತ್ತಿದೆ. ನಿಯಮಗಳ ಪ್ರಕಾರ 60 ಕಿ.ಮೀ. ರಸ್ತೆಗೆ ಟೋಲ್ ಹಾಕಬೇಕು. ಆದರೆ ಬಳ್ಳಾರಿಯಿಂದ ಮೂವತ್ತು  ಕಿ.ಮೀ. ಈ ರಸ್ತೆ ಮೂಲಕ ತೆರಳಿದ್ರೇ, ಆಂಧ್ರ ತಲುಪುತ್ತೆವೆ. ಅಲ್ಲಿಗೆ ರಾಜ್ಯ ಹೆದ್ದಾರಿ ಮುಗಿಯುತ್ತಿದೆ. ಹೀಗಿದ್ರೂ ಇಲ್ಲಿ ಟೋಲ್ ಯಾಕೆ ನಿರ್ಮಾಣ ಮಾಡಿದ್ದಾರೆ ಎನ್ನುವುದು ಸ್ಥಳೀಯರ ಪ್ರಶ್ನೆಯಾಗಿದೆ. ಇನ್ನೂ ಮೂಲಗಳ ಪ್ರಕಾರ ಹನ್ನೆರಡು ವರ್ಷಗಳ ಹಿಂದೆ ಖಾಸಗಿಯವರು ಈ ರಸ್ತೆ ನಿರ್ಮಾಣ ಮಾಡಿದ್ರು. ಹತ್ತು ವರ್ಷಗಳ ಕಾಲ…

Read More

ದೊಡ್ಡಬಳ್ಳಾಪುರ: ಶ್ರೀಕ್ಷೇತ್ರ ಹುಲುಕುಡಿ ಬೆಟ್ಟದ ವೀರಭದ್ರಸ್ವಾಮಿ ಹಾಗೂ ಭದ್ರಕಾಳಮ್ಮ ದೇಗುಲದಲ್ಲಿ ಕಡೆಯ ಕಾರ್ತೀಕ ಸೋಮವಾರದ ಪ್ರಯುಕ್ತ ಮಂಗಳವಾರ ರಾತ್ರಿ 13ನೇ ವರ್ಷದ ಲಕ್ಷ ದೀಪೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ವೀರಭದ್ರ ಸ್ವಾಮಿ ಹಾಗೂ ಭದ್ರಕಾಳಮ್ಮ ದೇವಿಗೆ ಬೆಳಿಗ್ಗೆ ಅಭಿಷೇಕ ನೆರವೇರಿಸಿ, ವಿಶೇಷ ಅಲಂಕಾರ ಮಾಡಲಾಯಿತು. ಸಂಜೆ ಉಯ್ಯಾಲೋತ್ಸವ ಹಾಗೂ ಮುತ್ತಿನ ಪಲ್ಲಕ್ಕಿ ಉತ್ಸವದ ಬಳಿಕ ದೀಪೋತ್ಸವ ಆರಂಭಿಸಲಾಯಿತು. 5 ಸಾವಿರಕ್ಕೂ ಹೆಚ್ಚು ಜನರು ದೀಪೋತ್ಸವದಲ್ಲಿ ಭಾಗವಹಿಸಿ ಮಣ್ಣಿನ ದೀಪ ಬೆಳಗಿದರು. ವೀರಭದ್ರಸ್ವಾಮಿ ಹಾಗೂ ಭದ್ರಕಾಳಮ್ಮ ಒಕ್ಕಲುಗಳು ಸೇರಿದಂತೆ ದೊಡ್ಡಬಳ್ಳಾಪುರ, ಬೆಂಗಳೂರು, ಗೌರಿಬಿದನೂರು ಹಾಗೂ ತುಮಕೂರು ಭಾಗಗಳಿಂದ ಭಕ್ತರು ಆಗಮಿಸಿ ದೀಪ ಹಚ್ಚುವ ಮೂಲಕ ದೇವರ ಕೃಪೆಗೆ ಪಾತ್ರರಾದರು. ಕಳೆದ 13 ವರ್ಷಗಳಿಂದ ಹುಲುಕಡಿ ಬೆಟ್ಟದ ವೀರಭದ್ರಸ್ವಾಮಿ ಹಾಗೂ ಭದ್ರಕಾಳಮ್ಮ ದೇವಾಲಯದ ಆಡಳಿತ ಮಂಡಳಿ ದೀಪೋತ್ಸವ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ರಾಜ್ಯದ ನಾನಾ ಭಾಗಗಳಿಂದ ದೀಪೋತ್ಸವಕ್ಕೆ 5 ಸಾವಿರ ಭಕ್ತರು ಆಗಮಿಸಿ ದೀಪ ಹಚ್ಚಿದ್ದಾರೆ. ಎಲ್ಲರಿಗೂ ದೇವಾಲಯದ ವತಿಯಿಂದ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿದೆ…

Read More

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ದಿನದಿಂದ ದಿನಕ್ಕೆ ಮಾರುಕಟ್ಟೆಯಲ್ಲಿ ದಿನ ನಿತ್ಯ ಬಳಕೆಯ ಪದಾರ್ಥಗಳ ಬೆಲೆಗಳು ಏರುತ್ತಲೆ ಇವೆ. ಮೊದಲು ಈರುಳ್ಳಿ  ಬೆಲೆಯ ಏರಿಕೆಯ ಹೊಡೆತದಿಂದ ಗ್ರಾಹಕರು ರಿಲ್ಯಾಕ್ಸ್‌ ಆಗುವ ಹೊತ್ತಿಗೆಯೇ ಟೊಮೆಟೋ ಬೆಲೆಯಲ್ಲಿ ಏರಿಕೆ ಕಂಡು ಗ್ರಾಹಕರ ಜೇಬಿಗೆ ಮತ್ತಷ್ಟು ಕತ್ತರಿ ಹಾಕಿತ್ತು. ಸದ್ಯ ಇದೀಗ ಗ್ರಾಹಕರಿಗೆ ಬೆಳ್ಳುಳ್ಳಿಯ ಬೆಲೆ ಏರಿಕೆಯ ಹೊಡೆತ ಬಿದ್ದಿದೆ. ಸದ್ಯ ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿಕೊಂಡಿದೆ ಇದರ ಪರಿಣಾಮ ಕೆಲವು ಬೆಳೆಗಳ ಮೇಲೆ ಪರಿಣಾಮ ಬೀರಿರುವದರಿಂದ ಇಳುವರಿ ಕುಂಠಿತಗೊಂಡ ಪೂರೈಕೆ ಕಡಿಮೆಯಾದ ಕಾರಣ ಬೆಲೆ ಏರಿಕೆಯಾಗುವುದು ಸಹಜ ಪ್ರಕ್ರಿಯೇ. ಆದರೆ ಬೆಳ್ಳುಳ್ಳಿಯ ವಿಷಯದಲ್ಲಿ ಪ್ರತಿವರ್ಷ ಡಿಸೆಂಬರ್‌ ಅಂತ್ಯಕ್ಕೆ ಕೆಲವು ಹವಾಮಾನ ಹಾಗೂ ಋತುಮಾನದ ಕಾರಣಗಳಿಂದ, ಪೂರೈಕೆಯಲ್ಲಿ ಕಡಿಮೆಯಾಗಿ ಬೆಲೆಯಲ್ಲಿ ಏರಿಳಿತ ಕಾಣುತಿತ್ತು, ಆದರೆ ಈ ವರ್ಷ ಡಿಸೆಂಬರ್‌ ಆಗಮನಕ್ಕೂ ಮುನ್ನವೆ ಬೆಳ್ಳುಳ್ಳಿಯ ದರದಲ್ಲಿ ಏರಿಕೆ ಕಂಡು ಬಂದಿದೆ. ಪರಿಣಾಮ ಕೇವಲ ಐದೇ ಐದು ವಾರದಲ್ಲಿ ಬೆಳ್ಳುಳ್ಳಿ ದರ ದುಪ್ಪಟ್ಟಾಗಿದೆ. ಇಷ್ಟು ದಿನಗಳ ಕಾಲ ನಾಸಿಕ್ ನಿಂದ…

Read More

ಮಾಸ್ಟರ್ ಮೈಂಡ್ ಪ್ರಶಾಂತ್ ನೀಲ್- ಪ್ರಭಾಸ್ ಕಾಂಬಿನೇಷನ್‌ನ ‘ಸಲಾರ್’ (Salaar) ಸಿನಿಮಾದ ಮೊದಲ ಹಾಡು ಇಂದು ಬಿಡುಗಡೆ ಆಗಿದೆ. ಒಟ್ಟು ಐದು ಭಾಷೆಗಳಲ್ಲಿ ಹಾಡು ಬಿಡುಗಡೆಯಾಗಿದೆ. ಮೊದಲ ಹಾಡಿಗೆ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಪೃಥ್ವಿರಾಜ್-ಪ್ರಭಾಸ್ (Prabhas) ಹಾಡು ಫ್ಯಾನ್ಸ್‌ಗೆ ಮೋಡಿ ಮಾಡಿದೆ. ‘ಆಕಾಶ ಗಡಿಯದಾಟಿ ತಂದಾನೋ ಬೆಳಕ ಕೋಟಿ’ ಎಂಬ ಹಾಡು ಕೆಜಿಎಫ್ ಸಾಂಗ್ ನೆನಪಿಸಿದೆ. ಸಲಾರ್‌ನಲ್ಲೂ ತಾಯಿ- ಮಗನ ಬಾಂಧವ್ಯ ತೋರಿಸಲಾಗಿದೆ. ಇಲ್ಲೂ ಕೆಜಿಎಫ್ ರವಿ ಬಸ್ರೂರು ಮ್ಯೂಸಿಕ್ ಮ್ಯಾಜಿಕ್ ಮಾಡಿದೆ. ಒಟ್ನಲ್ಲಿ ಸಲಾರ್ ಫಸ್ಟ್ ಸಾಂಗ್ ಅಭಿಮಾನಿಗಳಿಗೆ ಕಿಕ್ ಕೊಟ್ಟಿರೋದಂತೂ ನಿಜ. ಪ್ರಭಾಸ್ ಅಲ್ಲದೇ, ‘ಸಲಾರ್’ (Salaar) ಸಿನಿಮಾದಲ್ಲಿ ಮಲಯಾಳಂನ ಹೆಸರಾಂತ ನಟ ಪೃಥ್ವಿರಾಜ್ ಸುಕುಮಾರನ್ ಹೊಸಬಗೆಯ ಪಾತ್ರ ಮಾಡಿದ್ದಾರೆ. ಐದು ಭಾಷೆಗಳಲ್ಲಿ ಈ ಸಿನಿಮಾ ಮೂಡಿ ಬಂದಿದ್ದು ವಿಶೇಷವೆಂದರೆ ತಮ್ಮ ಪಾತ್ರಕ್ಕೆ ಐದೂ ಭಾಷೆಗಳಲ್ಲಿ ತಾವೇ ಡಬ್ ಮಾಡಿದ್ದಾರಂತೆ ಪೃಥ್ವಿರಾಜ್ ಈಗಾಗಲೇ ಸಿನಿಮಾ ರಿಲೀಸ್‌ಗೆ ಸರ್ವಸಿದ್ಧತೆ ನಡೆದಿದೆ. ಈ ನಡುವೆ ಸಲಾರ್ ಸಿನಿಮಾಗೆ ಪ್ರಾದೇಶಿಕ ಸೆನ್ಸಾರ್…

Read More