ಸಾಮಾನ್ಯವಾಗಿ ಮಹಿಳೆಯರು ಯಾವುದೇ ಆಹಾರವಾಗಲಿ ಫ್ರಿಡ್ಜ್‌ನಲ್ಲಿಟ್ಟರೆ ಬೇಗನೆ ಹಾಳಾಗುವುದಿಲ್ಲ ಎಂದು ಹೆಚ್ಚು ಇಲ್ಲೇ ಇಡುತ್ತಾರೆ. ಟೊಮೆಟೊ, ಈರುಳ್ಳಿ, ಬಾಳೆಹಣ್ಣು ಎಲ್ಲವನ್ನೂ ಫ್ರಿಡ್ಜ್‌ನಲ್ಲಿಡುವ ಅಭ್ಯಾಸ ಇರುತ್ತದೆ. ಆದರೆ ಕೆಲವೊಂದು ಆಹಾರಗಳನ್ನು ಫ್ರಿಡ್ಜ್‌ನಲ್ಲಿಟ್ಟರೆ ಅದು ವಿಶವಾಗುತ್ತದೆ, ಆದ್ದರಿಂದ ಅಂಥ ಆಹಾರಗಳನ್ನು ಫ್ರಿಡ್ಜ್‌ನಲ್ಲಿ ಇಡದಿದ್ದರೆ ಒಳ್ಳೆಯದು, ಇನ್ನು ಕೆಲವೊಂದು ಆಹಾರಗಳನ್ನು ಇಟ್ಟರೆ ಅವುಗಳನ್ನ 24 ಗಂಟೆಗಳಿಗೊಮ್ಮೆ ಸೇವಿಸಬೇಕು. ಯಾವ ಆಹಶರಗಳು ಫ್ರಿಡ್ಜ್‌ನಲ್ಲಿಟ್ಟರೆ ಅದು ವಿಷಕಾರಿ ಇಲ್ಲಿದೆ ಮಾಹಿತಿ:- ಬೆಳ್ಳುಳ್ಳಿ ಈರುಳ್ಳಿ ಶುಂಠಿ ಅನ್ನ ಇವುಗಳನ್ನು ಫ್ರಿಡ್ಜ್ ನಲ್ಲಿಟ್ಟು ಬಳಸಬೇಡಿ. ಸುಲಿದ ಬೆಳ್ಳುಳ್ಳಿಯನ್ನು ಫ್ರಿಡ್ಜ್‌ನಲ್ಲಿಡುವ ಅಭ್ಯಾಸ ತುಂಬಾ ಜನರಿಗೆ ಇರುತ್ತದೆ, ಆದರೆ ಅಂಥ ಆಹಾರಗಳನ್ನು ಫ್ರಿಡ್ಜ್‌ನಲ್ಲಿ ಇಡಲೇಬೇಡಿ ಅಥವಾ ಫ್ರಿಡ್ಜ್‌ನಲ್ಲಿ ಸ್ಟೋರ್ ಮಾಡಿಟ್ಟ ಸುಲಿದ ಬೆಳ್ಳುಳ್ಳಿ ಖರೀದಿಸಲೇಬೇಡಿ. ಏಕೆಂದರೆ ಇಂಥ ಬೆಳ್ಳುಳ್ಳಿ ಬಳಸುವುದರಿಂದ ಕ್ಯಾನ್ಸರ್ ಬರುತ್ತದೆ. ಆದ್ದರಿಂದ ಯಾವಾಗಲೂ ಸಿಪ್ಪೆ ಸಹಿತ ಬೆಳ್ಳುಳ್ಳಿ ಖರೀದಿಸಿ ಅಡುಗೆ ಮಾಡುವಾಗ ಅಷ್ಟೇ ಬೆಳ್ಳುಳ್ಳಿಯ ಸುಪ್ಪೆ ಸುಲಿದು ಬಳಸಿ. ಈರುಳ್ಳಿಯನ್ನು ಕೂಡ ಫ್ರಿಡ್ಜ್‌ನಲ್ಲಿ ಇಡಲೇಬಾರದು. ಅಲ್ಲದೆ ಈರುಳ್ಳಿಯನ್ನು ಅರ್ಧ ಕತ್ತರಿಸಿ ಫ್ರಿಡ್ಜ್‌ನಲ್ಲಿ…
Author: AIN Author
ಬೆಂಗಳೂರು:- ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಕರಿಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅನುಭವ ಆಗಿರುತ್ತದೆ. ಒಬ್ಬರಿಗೆ ಒಳ್ಳೆಯ ಅನುಭವವಾದರೆ, ಇನ್ನೂ ಕೆಲವರಿಗೆ ಕೆಟ್ಟ ಅನುಭವವಾಗಿರುತ್ತದೆ. ಅದೇ ರೀತಿ ಬೆಂಗಳೂರಿನ ವ್ಯಕ್ತಿಯೊಬ್ಬರು ಇತ್ತೀಚೆಗೆ ವಾಯು ವಜ್ರ ಬಸ್‌ನಲ್ಲಿ ತಮಗಾದ ವಿಶಿಷ್ಟ ಅನುಭವವನ್ನು ಹಂಚಿಕೊಂಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಿಎಂಟಿಸಿ ತನಗಾಗಿ ಹೇಗೆ ಸೇವೆ ನೀಡಿತು ಎಂದು ಬರೆದು ಬಸ್ ಚಾಲಕ ಮತ್ತು ಕಂಡಕ್ಟರ್‌ಗೆ ಧನ್ಯವಾದ ತಿಳಿಸಿದ್ದಾರೆ. ಹರಿಹರನ್ ಎನ್ನುವ ವ್ಯಕ್ತಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೀಗೆ ಬರೆದುಕೊಂಡಿದ್ದಾರೆ.” ನಾನು ಏರ್‌ಪೋರ್ಟ್‌ನಿಂದ ಹಿಂದಿರುಗುವಾಗ, ಬಸ್‌ನಲ್ಲಿ ನಾನೊಬ್ಬನೇ ಇದ್ದರೂ ಸಹ ಇವರಿಬ್ಬರು ಜಂಟಲ್‌ಮೆನ್‌ಗಳು ಸಮಯಕ್ಕೆ ಸರಿಯಾಗಿ ಬಸ್ ಚಲಾಯಿಸಿದರು. ಜೊತೆಗೆ ಈ ಪ್ರಯಾಣದಲ್ಲಿ ನನಗೆ ಒಳ್ಳೆಯ ಕಂಪನಿ ನೀಡಿದರು. ಹಾಗೂ ಸುರಕ್ಷಿತವಾಗಿ ನನ್ನನ್ನು ಕರೆತಂದರು” ಎಂದು ಬಿಎಂಟಿಸಿ ವಜ್ರ ಬಸ್‌ನ ಚಾಲಕ ಹಾಗೂ ನಿರ್ವಾಹಕರ ಫೋಟೋ ಹಂಚಿಕೊಂಡಿದ್ದಾರೆ. ಈ ಸಂಚಾರ ದಟ್ಟಣೆಯಲ್ಲಿ ತುಂಬಿರುವ ಬೆಂಗಳೂರು ನಗರದಲ್ಲಿ ಈ ಬಸ್‌ನಲ್ಲಿ ನಾನೊಬ್ಬನೆ ಪ್ರಯಾಣಿಕನಾಗಿದ್ದು ಅಚ್ಚರಿ ಎನಿಸಿತು. ಆದರೆ ಚಾಲಕ ಹಾಗೂ…
ಕಷ್ಟುಪಟ್ಟ ಬೆಳೆದ ರಾಶಿ ಮಾಡಲು ಹೊಲದಲ್ಲಿ ಕುಡಿಟ್ಟ ರೈತನ ಮೆಕ್ಕೆಜೋಳ ತೆನೆಗೆ ದುಷ್ಕರ್ಮಿಗಳು ಮಧ್ಯರಾತ್ರಿ ಬೆಂಕಿ ಹಚ್ಚಿ ವಿಕೃತಿ ಮರೆದ ಘಟನೆ ನವಲಗುಂದದ್ದ ಹನಸಿ ಗ್ರಾಮದಲ್ಲಿ ನಡೆದಲ್ಲಿ. ಸುಮಾರು 2 ಲಕ್ಷಕ್ಲೂ ಅಧಿಕ ಬೆಲೆ ಬಾಳುವ ಮೆಕ್ಕೆಜೋಳ ತೆನೆ ಸುಟ್ಟು ಹಾಳಾಗಿದ್ದು, ದುಷ್ಕರ್ಮಿಗಳ ಅಟಹಾಸಕ್ಕೆ ಚೆನ್ನಪ್ಪ ಹುಡ್ಕೇರಿ ಕುಟುಂಬ ಈಗ ಕಣ್ಣಿರಲ್ಲಿ ಕೈ ತೊಳೆಯುವಮತಾಗಿದೆ. ಇನ್ನೂ ಇಂದು ಮುಂಜಾನೆ ಘಟನೆ ಬೆಳಕಿಗೆ ಬಂದಿದ್ದು, ಚೆನ್ನಪ್ಪ ಹೊಲಕ್ಲೆ ಹೋಗಿದ್ದಾನೆ. ಆಗ ಬೆಂಕಿ ವಿಷಯ ಹೊರ ಬಂದಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಐದು ಎಕರೆಯಲ್ಲಿ ಬೆಳದಿದ್ದ ಮೇಕೆಜೋಳವನ್ನು ರೈತ ಚೆನ್ನಪ್ಪ ರಾಶಿ ಮಾಡುವ ಉದ್ದೇಶದಿಂದ ಹೊಲದಲ್ಲಿ ತೆನೆಗಳನ್ನು ಜಮೆ ಮಾಡಿದನ್ನು. ಹೊಲದಲ್ಲಿ ಯಾರು ಇಲ್ಲದ ಸಮಯ ನೋಡಿಕೊಂಡ ದುಷ್ಕರ್ಮಿ ಖದೀಮರು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಈ ಕುರಿತು ಈಗ ರೈತ ಕುಟುಂಬ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಭೇಟಿ ಜೊತೆಗೆ ಪರಿಹಾರಲ್ಕೆ ಆಗ್ರಹಿಸಿದ್ದಾರೆ. ಇನೂ ಘಟನೆಯ ಕುರಿತು ನವಲಗುಂದ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಬ್ಬಳ್ಳಿ- ನಮಗೆ ಸ್ವಾತಂತ್ರ್ಯ ಸಿಕ್ಕು 7 ದಶಕ ಕಳೆದಿದೆ..ಆದ್ರೆ ಇನ್ನು ದೇಶದ ಬಹುತೇಕ ಕಡೆ ಅಸ್ಪ್ರಶ್ಯತೆ ಜೀವಂತವಾಗಿದೆ.ಕೆಳಜಾತಿ ಮೇಲ್ಜಾತಿ ಅನ್ನೋ ಪೆಂಡಭೂತ ನಮ್ಮ ಸಮಾಜದಲ್ಲಿದೆ.ದಲಿತರು ಸವರ್ಣೀಯರು ನಡುವಿನ ಕಂದಕ ಆಧುನಿಕ ಸಮಾಜದಲ್ಲಿ ಹೆಚ್ಚುತ್ತಿದೆ.ಇದಕ್ಕೆ ತಾಜಾ ಉದಾಹರಣೆಗೆ ಮತ್ತೊಂದು ಜಿಲ್ಲೆ ಸೇರಿದೆ.ವಿದ್ಯಾಕಾಶಿ ಎಂದು ಕರೆಸಿಕೊಳ್ಳುವ ಧಾರವಾಡ ಜಿಲ್ಲೆಯಲ್ಲೂ ಈ ಸಾಮಾಜಿಕ ಪಿಡುಗು ಜೀವಂತವಾಗಿದೆ.. ಧಾರವಾಡ ಜಿಲ್ಲೆಯ ಗ್ರಾಮವೊಂದರಲ್ಲಿ ದಲಿತರಿಗೆ ಅಘೋಷಿತ ಬಹಿಷ್ಕಾರ ಹಾಕಲಾಗಿದೆ. ಗ್ರಾಮದ ಹೊಟೆಲ್, ಕಟಿಂಗ್,ದೇವಸ್ಥಾನಕ್ಕೆ ದಲಿತರಿಗೆ ಪ್ರವೇಶ ಇಲ್ಲ.ಇದು ಆ ಗ್ರಾಮದ ಯುವಕರನ್ನ ಕೆರಳಿಸಿದೆ.ನಮಗೂ ಸಮಾನತೆ ಬೇಕು ಎನ್ನುತ್ತಿದ್ದಾರೆ. ಒಂದು ಕಡೆ ಹೊಟೆಲ್ ನಲ್ಲಿ ಪ್ಲಾಸ್ಟಿಕ್ ಪ್ಲೇಟ್ ನಲ್ಲಿ ಉಪಹಾರ. ಇನ್ನೊಂದು ಕಡೆ ಕಟಿಂಗ್ ಶಾಪ್ ನಲ್ಲಿ ಹೋದ್ರೆ ಪಂಚಾಯತ್ ಗೆ ಹೋಗಿ ಎನ್ನುತ್ತಿರೋ ಕಟಿಂಗ್ ಅಂಗಡಿ ಮಾಲೀಕರು..ಮತ್ತೊಂದು ಕಡೆ ತಮಗಾದ ಅನ್ಯಾಯ ತೋಡಿಕೊಳ್ತಿರೋ ದಲಿತ ಸಮುದಾಯದ ಜನ..ಎಸ್ ಇವೆಲ್ಲ ದೃಶ್ಯಗಳು ಕಂಡು ಬಂದಿದ್ದು ಧಾರವಾಡ ಜಿಲ್ಲೆಯಲ್ಲಿ.ಎಸ್ ಧಾರವಾಡ ಜಿಲ್ಲೆಯ ರೊಟ್ಟಿಗವಾಡ ಗ್ರಾಮದಲ್ಲಿ ಅಸ್ಪ್ರಶ್ಯತೆ ಅನ್ನೋ ಪೆಂಡಭೂತ ಇನ್ನು ಜೀವಂತವಾಗಿದೆ.ಅಂಬೇಡ್ಕರ್…
ಬೆಂಗಳೂರು: ಸಂಸತ್ತಿನ ಮೇಲೆ ದಾಳಿಯಾಗಲು ಸಹಕರಿಸಿದ ಸಂಸದ ಪ್ರತಾಪ್ ಸಿಂಹಾ ಅವರನ್ನು ಅಮಾನತು ಮಾಡುವುದಿರಲಿ ಕನಿಷ್ಠ ವಿಚಾರಣೆಗೂ ಒಳಪಡಿಸಲಿಲ್ಲ ಎಂದು ಕಾಂಗ್ರೆಸ್ ಟ್ವೀಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತ ಪಡಿಸಿದೆ! ಭದ್ರತಾ ಲೋಪವನ್ನು ಚರ್ಚಿಸಬೇಕು ಎಂದು ಒತ್ತಾಯಿಸಿದ ಕಾಂಗ್ರೆಸ್ ನ 5 ಸಂಸದರನ್ನು ಕಲಾಪದಿಂದ ಅಮಾನಾತು ಮಾಡಲಾಗಿದೆ. ಭದ್ರತಾ ಲೋಪದ ಬಗ್ಗೆ ಮಾತನಾಡಲು ಬಿಜೆಪಿಗೆ, ಕೇಂದ್ರ ಸರ್ಕಾರಕ್ಕೆ ಹಾಗೂ ಲೋಕಸಭಾ ಸ್ಪೀಕರ್ ಗೆ ಯಾಕಿಷ್ಟು ಭಯ. ಇದು ಬಿಜೆಪಿ ಪ್ರಾಯೋಜಿತ ಘಟನೆಯೇ? ಎಂದು ಕಿಡಿಕಾರಿದ್ದಾರೆ.
ಕಲಬುರಗಿ: ಪ್ರಯಾಣಿಕನಂತೆ ನಟಿಸಿ ಆಟೋದಲ್ಲಿದ್ದ ಮಹಿಳೆಯ ಸರ ಕಿತ್ತು ಎಸ್ಕೇಪ್ ಆಗಿರುವ ಘಟನೆ ಕಲಬುರಗಿ ನಗರದ ಓಲ್ಡ್ RTO ಕ್ರಾಸ್ ಬಳಿ ನಡೆದಿದೆ. ಸೂಪರ್ ಮಾರ್ಕೆಟಿನಿಂದ ಹೊರಟಿದ್ದ ಮಹಿಳೆಯ ಆಟೋ ಹತ್ತಿದ ಆರೋಪಿ ಬ್ಲೇಡ್ ತೋರಿಸಿ ಮಹಿಳೆಗೆ ಬೆದರಿಕೆ ಆಗಿದ್ದಾನೆ. ಮಹಿಳೆಗೆ ಬೆದರಿಸಿ 1.20 ಲಕ್ಷ ಮೌಲ್ಯದ ಚಿನ್ನದ ಸರ ಕಿತ್ತು ಎಸ್ಕೇಪ್ ಆಗಿದ್ದು, ಜಸ್ಟ್ 24 ಗಂಟೆಯಲ್ಲಿ ಆರೋಪಿ ಮೆಹಬೂಬ್ ಶೇಖ್ ಅರೆಸ್ಟ್ ಆಗಿದ್ದಾನೆ. ಇನ್ನೂ ಈ ಘಟನೆ ಸಂಬಂಧ ಬ್ರಹ್ಮಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಸಮಯಕ್ಕೆ ಸರಿಯಾಗಿ ಸರ್ಕಾರಿ ಸಾರಿಗೆ ಬಸ್ಸ ಬೀಡಲು ಅಗ್ರಹಿಸಿ ಧಾರವಾಡದಲ್ಲಿ ವಿದ್ಯಾರ್ಥಿಗಳು ಬೀದಿಗೆ ಇಳಿದು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಅಕ್ರೋಶ ಹೊರಹಾಕಿದರು. ನಗರದ ಕೆಲಗೇರಿ ಬಳಿಯ ಧಾರವಾಡ ಗೋವಾ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ರಸ್ತೆ ತಡೆ ನಡೆಸಿ ಸಾರಿಗೆ ಇಲಾಖೆಯ ಅಧಿಕಾರಿಗಳ ವಿರುದ್ಧ ಹಾಗೂ ಸಚಿವರ ವಿರುದ್ಧ ತಮ್ಮ ಅಸಮಧಾನ ವ್ಯಕ್ತಪಡಿಸಿದರು. ಮಕ್ಕಳ ಹೋರಾಟಕ್ಕೆ ಪೋಷಕರು ಹಾಗೂ ಸ್ಥಳೀಯ ನಿವಾಸಿಗಳು ಕೂಡಾ ಸಾಥ ನೀಡಿದರು. ಇನ್ನೂ ಪ್ರತಿಭಟನೆ ತಿವ್ರಗೊಂಡ ಹಿನ್ನೆಲೆಯಲ್ಲಿ ಕೆಲಕಾಲ ಸಂಚಾರ ಬಂದ್ ಆಗಿತ್ತು. ವಾರದ ಎರಡು ದಿನದಲ್ಲಿಮಾತ್ರ ಸಮಯಕ್ಕೆ ಸರಿಯಾಗಿ ಬಸ್ಸ ಬರುತ್ತೆ, ಉಳಿದ ದಿನ ಬಸ್ಸ ಬರದೆ ನಾವು ಒರದಾಟ ಮಾಡಬೇಕಾಗಿದೆ. ಸಮಯಕ್ಕೆ ಶಾಲೆಗೆ ತೆರಳಲುಆಗುತ್ತಿಲ್ಲ. ಜೊತೆಗೆ ಇದರಿಂದಾಗಿ ನಮ್ಮ ಶಿಕ್ಷಣಕ್ಕೂ ತೊಂದರೆಯಾಗುತ್ತಿದೆ. ಹಾಗಾಗಿ ಈ ಕೂಡಲೇ ನಮ್ಮಗೆ ಸಾರಿಗೆ ಬಸ್ಸನಿಂದಾಗುತ್ತಿರುವ ತೊಂದರೆ ಆದಷ್ಟು ಬೇಗ ಸರಿ ಮಾಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟವನ್ನು ನಾವು ಹಮ್ಮಿಕೊಳ್ಳಬೇಕಾಗುತ್ತದೆ ಎಂದು…
ಬೆಳಗಾವಿ: ಲೋಕಸಭೆಯಲ್ಲಿ ಸ್ಮೋಕ್ ದಾಳಿ ನಡೆಸಿದ ಆರೋಪಿ ಮನೋರಂಜನ್ ಹಿನ್ನೆಲೆ ಬಗ್ಗೆ ಕರ್ನಾಟಕ ಪೊಲೀಸರು ತನಿಖೆ ಮಾಡಬೇಕು ಎಂದು ವಿಧಾನಪರಿಷತ್ ಕಾಂಗ್ರೆಸ್ ಸದಸ್ಯ ಬಿ.ಕೆ ಹರಿಪ್ರಸಾದ್ ಆಗ್ರಹಿಸಿದ್ದಾರೆ. ವಿಧಾನಪರಿಷತ್ ನಲ್ಲಿ ಮಾತನಾಡಿದ ಅವರು,ನಿನ್ನೆ ಮನೋರಂಜನ್ ದೇಶಕ್ಕೆ ಮನರಂಜನೆ ಕೊಟ್ಟಿದ್ದಾನೆ. ವಿಶ್ವಗುರು ನರೇಂದ್ರ ಮೋದಿಯವರನ್ನು ದೇವರು ಎಂದು ಮನೋರಂಜನ್ ಪರಿಗಣಿಸುತ್ತಿದ್ದರು ಎಂದು ಅವರ ತಂದೆ ಹೇಳಿದ್ದಾರೆ ಎಂದರು. ಫೇಕ್ ಅಂಧಭಕ್ತರು ಯಾವ ರೀತಿ ಇರ್ತಾರೆ ಎಂದು ನಿನ್ನೆ ಸಾಬೀತು ಮಾಡಿದ್ದಾರೆ. ರಾಷ್ಟ್ರದ ಪ್ರಖ್ಯಾತಿಗೆ ಕಪ್ಪು ಬಣ ಬಳಿದಿದ್ದಾರೆ. ವಿಶ್ವಗುರು ಆಡಳಿತ ವೈಫಲ್ಯವನ್ನು ಇಡಿ ವಿಶ್ವವೇ ನೋಡಿದೆ. ಆದ್ದರಿಂದ ವಿಶ್ವಗುರು ಇದರ ಹೊಣೆ ಹೊರಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಡಿಸೆಂಬರ್ 13 ರಂದು ಯೋಧರು, ಪೊಲೀಸರು ಪಾರ್ಲಿಮೆಂಟ್ ರಕ್ಷಣೆ ಮಾಡಿದ ದಿನವಾಗಿದೆ. ಇವರೆಲ್ಲ ಅಂತಹ ದಿನವನ್ನೇ ಹುಡುಕಾತ್ತಾರೆ. https://ainlivenews.com/do-you-know-why-you-should-not-cut-your-nails-at-night-heres-why/ ಡಿಸೆಂಬರ್ 6, ಬುದ್ದ ಹುಟ್ಟಿದ ದಿನಗಳನ್ನೇ ಇವರು ಹುಡುಕುತ್ತಾರೆ. ಮನೋರಂಜನ್ ಹಿನ್ನೆಲೆಯನ್ನು ಕರ್ನಾಟಕ ರಾಜ್ಯದ ಪೊಲೀಸರು ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು. ಈ ಘಟನೆಯ ಬಗ್ಗೆ ಕೆಲವರು ಕಾಂಗ್ರೆಸ್…
ಬೆಳಗಾವಿ.ಸುವರ್ಣಸೌಧ ಡಿ.14: ಕೃಷಿ ಇಲಾಖೆ ವತಿಯಿಂದ ಬೆಳಗಾವಿ ಸುವರ್ಣ ಸೌಧದ ಬ್ಯಾಕ್ವೆಂಟ್ ಹಾಲ್ ನಲ್ಲಿ ಏರ್ಪಡಿಸಿದ್ದ ಸಿರಿಧಾನ್ಯ, ಸಾವಯವ ಅಂತರಾಷ್ಟ್ರೀಯ ವಾಣಿಜ್ಯ ಮೇಳದ ಪೂರ್ವಭಾವಿ ಕಾರ್ಯಕ್ರಮ ಅತ್ಯಂತ ಯಶ್ವಸಿಯಾಗಿ ನಡೆಯಿತು.. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಆಧುನಿಕ ಜಗತ್ತಿನಲ್ಲಿ ಸಿರಿಧಾನ್ಯ ಹೆಚ್ಚು ಜನಪ್ರಿಯ ಹಾಗು ಲಾಭದಾಯಕವಾಗಿ ರೂಪುಗೊಂಡಿದೆ. ಸರ್ಕಾರ ಕೂಡ ಇದನ್ನು ಪ್ರೋತ್ಸಾಹಿಸುತ್ತಿದೆ.. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಇದನ್ನು ಬೆಳೆಯಬೇಕಿದೆ ಎಂದರು.. ಸಿರಿಧಾನ್ಯ ಅತ್ಯಂತ ಆರೋಗ್ಯಪೂರ್ಣ ಆಹಾರವಾಗಿದ್ದು, ನಮ್ಮ ಪೂರ್ವಜರು ಇದನ್ನು ಬೆಳೆಸಿ, ಬಳಸುತ್ತಿದ್ದರು. ಒಂದು ಹಂತದಲ್ಲಿ ಬಹುಸಂಖ್ಯೆ ಜನರಿಂದ ದೂರ ಉಳಿದಿದ್ದ ಸಿರಿಧಾನ್ಯ ಇದೀಗ ಉಳ್ಳವರ ಪಾಲಿಗೂ ಫೆವರೇಟ್ ಆಗಿದೆ ಎಂದರು.. ಅತ್ಯಂತ ಕಡಿಮೆ ನೀರಿನಲ್ಲಿಯೂ ಬೆಳೆಯಬಹುದಾದ ಸಿರಿಧಾನ್ಯ ಆರ್ಥಿಕವಾಗಿಯೂ ವರದಾನವಾಗಬಲ್ಲದು ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ, 2017 ರಲ್ಲಿ ತಾವು ಮುಖ್ಯಮಂತ್ರಿಯಾಗಿದ್ದಾಗ ಸಿರಿಧಾನ್ಯ ಮೇಳಕ್ಕೆ ನೀಡಿದ ಪ್ರೋತ್ಸಾಹ ಹಾಗು ಅದಕ್ಕೆ ರಾಷ್ಟ್ರ ಮಟ್ಟದಲ್ಲಿ ಸಿಕ್ಕ ಮನ್ನಣೆ ಸ್ಮರಿಸಿದರು. ಕಾರ್ಯಕ್ರಮದಲ್ಲಿ ಪ್ರಸ್ತಾವಿಕ ನುಡಿ ಆಡಿದ ಕೃಷಿ ಸಚಿವ…
ಬೆಂಗಳೂರು: ಸಾರಿಗೆ ಇಲಾಖೆ ಅಂದರೆ ಸಾಕು ಸಮಸ್ಯೆಗಳ ಕೂಪ,ಬೇಜವಾಬ್ದಾರಿಗಳ ಯಡವಟ್ಟು ಅನ್ನುವಷ್ಟರ ಮಟ್ಟಿಗೆ ಫೇಮಸ್. ಅಧಿಕಾರಿಗಳು ಹಾಗೂ ರೋಸ್ ಮಾರ್ಟ್ ಕಂಪನಿ ಆಟಕ್ಕೆ ವಾಹನ ಸವಾರರು ಅಂತೂ ಸುಸ್ತು ಆಗ್ಬಿಟ್ಟಿದ್ದಾರೆ.ಯಾಕೆಂದರೆ ಅಕ್ರಮ ತಪ್ಪಲಿ ಎಂಬ ಉದ್ದೇಶದಿಂದ ಆರ್‌ಸಿ, ಡಿಎಲ್‌ಗಳನ್ನು ಸ್ಮಾರ್ಟ್ ಕಾರ್ಡ್ ರೂಪದಲ್ಲಿ ನೀಡಲಾಗುತ್ತಿದೆ.ಆದರೆ ಇದೇ ವ್ಯವಸ್ಥೆಯಿಂದ ಜನರಿಗೆ ತೊಂದರೆಯಾಗುತ್ತಿದೆ.ಬರೋಬ್ಬರಿ ಹತ್ತು ದಿನದಿಂದ ಆರ್ಟಿಓ ಕಚೇರಿಗಳಲ್ಲಿ ಸ್ಮಾರ್ಟ್ ಕೊರತೆ ಎದುರಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗಲಿ ಹಾಗೂ ಅಕ್ರಮ ತಪ್ಪಲಿ ಅಂತ ಆರ್ ಟಿ ಓ ಕಚೇರಿಗಳಲ್ಲಿ ವಾಹನಗಳ ಆರ್ಸಿ ಕಾರ್ಡ್ ಹಾಗೂ ಡಿಎಲ್ ಗಳನ್ನ ಸ್ಮಾರ್ಟ್ ಕಾರ್ಡ್ ರೂಪದಲ್ಲಿ ನೀಡಲಾಗ್ತಿದೆ.ಆದ್ರೆ ಇದೇ ವ್ಯವಸ್ಥೆ ವಾಹನ ಸವಾರರಿಗೆ ಸಮಸ್ಯೆ ತಂದೊಡ್ಡಿದೆ..ಹೌದು ಆರ್ಟಿಓ ಕಚೇರಿಗಳಲ್ಲಿ ಚಾಲನಾ ಪರೀಕ್ಷೆ ಪಾಸಾಗಿ ದಿನಗಳೇ ಗತಿಸಿದರೂ ಡಿಎಲ್ ಕೈಸೇರಿಲ್ಲನೋಂದಣಿ ಪ್ರಮಾಣ ಪತ್ರ ದ್ದೂ ಇದೇ ಸ್ಥಿತಿ ಇದೆ.ವಾಹನ ಖರೀದಿಸಿರುವವರು ಸ್ಮಾರ್ಟ್ ಕಾರ್ಡ್ ಲಭಿಸದೆ ಇರುವುದರಿಂದ ಕಾರು, ಬೈಕ್‌ಗಳನ್ನು ಖರೀದಿಸಿ ಮನೆಯ ಮುಂದೆ ನಿಲ್ಲಿಸುವ ಸ್ಥಿತಿ ಎದುರಾಗಿದೆ.ನಗರ ಎಲ್ಲ ಆರ್‌ಟಿಒಗಳಲ್ಲಿ ಪರಿಸ್ಥಿತಿ…