Author: AIN Author

ದಾವಣಗೆರೆ:- ಬಿ. ವೈ. ವಿಜಯೇಂದ್ರರ ವಿರುದ್ಧ ಮಾತನಾಡಿದರೆ ಸುಮ್ಮನೆ ಕೂರಲ್ಲ ಎಂದು MP ರೇಣುಕಾಚಾರ್ಯ ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರರ ವಿರುದ್ಧ ಇನ್ಮುಂದೆ ಮಾತನಾಡಿದರೆ ಸುಮ್ಮನೆ ಕೂರಲು ಸಾಧ್ಯವಿಲ್ಲ. ನಮಗೂ ತಾಳ್ಮೆಯಿದೆ. ಅದನ್ನು ಪರೀಕ್ಷಿಸಬೇಡಿ ಎಂದು ಯತ್ನಾಳ್‌, ವಿ.ಸೋಮಣ್ಣ ವಿರುದ್ಧ ಎಂ.ಪಿ.ರೇಣುಕಾಚಾರ್ಯ ಅವರು ಗುಡುಗಿದ್ದಾರೆ. ಯತ್ನಾಳ್, ಸೋಮಣ್ಣ ಎಲ್ಲಿಯವರೆಗೂ ಬಿಎಸ್‌ವೈ ಹಾಗೂ ಬಿ.ವೈ.ವಿಜಯೇಂದ್ರ ವಿರುದ್ಧ ಮಾತನಾಡುತ್ತಾರೋ ಅಲ್ಲಿಯವರೆಗೆ ನಾವು ಮಾತನಾಡುತ್ತೇವೆ. ಸಹಿಸಲು ಆಗದು. ನಮಗೂ ತಾಳ್ಮೆಯಿದೆ. ಪ್ರತಿದಿನ ಇಬ್ಬರೂ ಮಾತನಾಡಿದರೆ ಯಡಿಯೂರಪ್ಪರ ತೂಕ ಕಡಿಮೆಯಾಗುತ್ತಾ? ಯಡಿಯೂರಪ್ಪನವರು ನಡೆದ ಹಾದಿಯ ಮಣ್ಣು ತೆಗೆದುಕೊಂಡು ಚಾಮರಾಜನಗರ, ಮೈಸೂರು ಜನರು ಹಣೆಗೆ ಇಟ್ಟುಕೊಳ್ಳುತ್ತಾರೆ. ಅಷ್ಟು ಹೋರಾಟದ ಮೂಲಕ ರಾಜಕಾರಣದಲ್ಲಿ ಮೇಲೆ ಬಂದು ಜನರಿಗಾಗಿ ಜೀವನ ಮುಡುಪಿಟ್ಟ ನಾಯಕ ಎಂದು ಹೇಳಿದರು. ಯತ್ನಾಳ್, ಸೋಮಣ್ಣ ಅವರ ಪಾಪದ ಕೊಡ ತುಂಬಿದೆ. ಅದಕ್ಕೆ ಸದ್ಯದಲ್ಲೇ ಅಂತ್ಯ ಆಗುತ್ತೆ ಎಂಬ ಕಾರಣಕ್ಕೆ ಯಡಿಯೂರಪ್ಪ, ವಿಜಯೇಂದ್ರರನ್ನು ಜರನ ಮುಂದೆ ವಿಲನ್ ಮಾಡಲು…

Read More

ಬೆಳಗಾವಿ:- ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಕರ್ನಾಟಕ ಮದ್ಯಪಾನ ಪ್ರಿಯರ ಹೋರಾಟ ಸಂಘದಿಂದ ಪ್ರತಿಭಟನೆ ನಡೆಸಿದ್ದು, ತಮ್ಮ ಬೇಡಿಕೆಗಳನ್ನ ಮುಂದಿಟ್ಟಿದ್ದಾರೆ. ಮದ್ಯಪಾನ ಪ್ರಿಯರ ಬೇಡಿಕೆಗೆ ಪಟ್ಟು ಹಿಡಿದು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಸಚಿವ ಸಂತೋಷ ಲಾಡ್ ಭೇಟಿ ನೀಡಿ, ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಕರ್ನಾಟಕ ಮದ್ಯಪಾನ ಪ್ರಿಯರ ಹೋರಾಟ ಸಂಘದಿಂದ ಪ್ರತಿಭಟನೆ ಮದ್ಯಪಾನ ಪ್ರಿಯರ ಬೇಡಿಕೆ ಕೇಳಿ ಸಚಿವ ಸಂತೋಷ ಲಾಡ್ ಸುಸ್ತೋಸುತ್ತು ಆಗಿದ್ದಾರೆ. ಇನ್ನೂ ಮದ್ಯಪಾನ ಪ್ರಿಯರ ವಿಚಿತ್ರ ಹೋರಾಟ ಕಂಡು ಶಾಕ್ ಆಗಿದ್ದಾರೆ. ಸರ್ಕಾರದ ಪರವಾಗಿ ಪ್ರತಿಭಟನಾಕಾರರ ಮನವಿ ಸ್ವೀಕಾರ ಮಾಡಲು ಬಂದಿದ್ದ ಲಾಡ್ ಮುಂದೆ ರಾಜ್ಯ ಕುಡುಕರಿಗೆ ಆಗುತ್ತಿರುವ ಅನ್ಯಾಯ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. ಅಲ್ಲದೇ ಡಿಸೆಂಬರ್ 31 ರಂದು ಮದ್ಯಪಾನ ಪ್ರಿಯರ ದಿನವನ್ನಾಗಿ ಆಚರಣೆ ಮಾಡಬೇಕು.ಅಂದು ಎಲ್ಲಾ ರೀತಿಯ ಬಾರ್ , ರೆಸ್ಟೋರೆಂಟ್ ನಲ್ಲಿ 50 ರಷ್ಟು ರಿಯಾಯಿತಿ ನೀಡಬೇಕು, ಕುಡುಕ ಎಂಬ ಪದಬಳಕೆ ನಿಷೇಧ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Read More

ಶಿವಮೊಗ್ಗ:- ಪ್ರತಾಪ್​ನಂತಹ ದೇಶಭಕ್ತನನ್ನು ಶಂಕಿಸುವುದು ಕಾಂಗ್ರೆಸ್​ಗೆ ಮಾತ್ರ ಸಾಧ್ಯ ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಪ್ರತಾಪ್​ ಸಿಂಹನಂಥ ದೇಶಭಕ್ತ, ಹಿಂದುತ್ವವಾದಿಯನ್ನು ಶಂಕಿಸುವುದು ಕಾಂಗ್ರೆಸ್​ಗೆ ಮಾತ್ರ ಸಾಧ್ಯ ಎಂದು ಕಿಡಿಕಾರಿದ್ದಾರೆ. ಭಾರೀ ಭದ್ರತೆಯ ಹೊರತಾಗಿಯೂ ಕಿಡಿಗೇಡಿಗಳು ಸಂಸತತ್‌ಇನ ಒಳಗೆ ನುಗ್ಗಿದ್ದು ಆಘಾತಕಾರಿ ಮತ್ತು ಮನಸ್ಸಿಗೆ ನೋವನ್ನುಂಟು ಮಾಡುವ ಸಂಗತಿಯಾಗಿದೆ. ಬಂಧಿತ ಆರೋಪಿಗಳಿಗೆ ಸಂಸದ ಪ್ರತಾಪ್​ ಸಿಂಹ ಅವರ ಕಚೇರಿಯಿಂದ ಪಾಸ್​ ಪಡೆದಿರುವ ಬಗ್ಗೆ ಕೇಳಿದಾಗ, ಅಚಾತುರತ್ಯ ನಡೆದಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಪ್ರಥಮ ಅಧಿವೇಶನದ ವೇಳೆ ವ್ಯಕ್ತಿಯೊಬ್ಬರು ಶಾಸಕರ ಆಸನದಲ್ಲಿ ಬಂದು ಕುಳಿತಿದ್ದರು ಅದು ಭದ್ರತಾ ಲೋಪವಲ್ಲವೇ ಎಂದು ಪ್ರಶ್ನಿಸಿದ್ದಾರೆ. ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್​ ನಾಯಕರು ತನಿಖೆಗೆ ಆಗ್ರಹಿಸಿದ ಕುರಿತು ಪ್ರತಿಕ್ರಿಯಿಸಿದ ಈಶ್ವರಪ್ಪ ಅವರಿಗೆ ಮಾಡಲು ಬೇರೆ ಉದ್ಯೋಗವಿಲ್ಲ, ಪ್ರತಾಪ್ ಸಿಂಹನಂಥ ದೇಶಭಕ್ತ ಮತ್ತು ಹಿಂದೂತ್ವವಾದಿಯ ಮೇಲೆ ಶಂಕೆ ಪಡೋದು, ಖಂಡಿಸೋದು ಕೇವಲ ಕಾಂಗ್ರೆಸ್ಸಿಗರಿಗೆ ಮಾತ್ರ ಸಾಧ್ಯ ಎಂದರು.

Read More

ಸಿಂಧನೂರು:- ತಾಲೂಕಿನ ತಿಮ್ಮಾಪೂರ ಗ್ರಾಮದ ಪರಿಸರ ಪ್ರೇಮಿ ವೀರಭದ್ರಯ್ಯಸ್ವಾಮಿ ಅವರ ಮಗನ ಮೊದಲನೆಯ ವರ್ಷದ ಹುಟ್ಟು ಹಬ್ಬವನ್ನು ಬಿಲ್ವಪತ್ರೆ ಸಸಿನೆಟ್ಟು 51ಸಸಿಗಳನ್ನು ವಿತರಣೆ ಮಾಡುವ ಮೂಲಕ ವಿಶೇಷವಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷರಾದ ಅಮರೇಗೌಡ ಮಲ್ಲಾಪುರ ಮಾತನಾಡಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ.ನಾವು ಮಾಡುವ ಪರಿಸರ ಸಂರಕ್ಷಣೆಯ ಕೆಲಸ ಇತರರಿಗೆ ಮಾದರಿಯಾಗಬೇಕು ಇವತ್ತು ವನಸಿರಿ ಫೌಂಡೇಶನ್ ಸದಸ್ಯರು,ಪರಿಸರ ಪ್ರೇಮಿಗಳು ಹಾಗೂ ಆತ್ಮೀಯರಾದ ತಿಮ್ಮಾಪೂರ ಗ್ರಾಮದ ವೀರಭದ್ರಯ್ಯಸ್ವಾಮಿ ಅವರು ವನಸಿರಿ ಫೌಂಡೇಶನ್ ಜೊತೆಗೆ ಕೈಜೋಡಿಸುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ತೊಡಗಿದ್ದಾರೆ ಇಂದು ತಮ್ಮ ಮಗುವಿನ ಹುಟ್ಟು ಹಬ್ಬದ ಅಂಗವಾಗಿ 51ಸಸಿಗಳನ್ನು ವಿತರಣೆ ಮಾಡಿ ಸಾರ್ವಜನಿಕರಿಗೆ ಪರಿಸರ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.ಇವರ ಸೇವೆ ಹೀಗೆ ನಿರಂತರವಾಗಿರಲಿ ವನಸಿರಿ ತಂಡದ ಜೊತೆಗೆ ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಕಾರ್ಯ ನಿರ್ವಹಿಸಲಿ ಎಂದು ಆಶಿಸಿದರು. ಈ ಸಂದರ್ಬದಲ್ಲಿ ವೇ.ಮೂ ಮರಿಸ್ವಾಮಿ,ವನಸಿರಿ ಫೌಂಡೇಶನ್…

Read More

ಬೆಂಗಳೂರು:- ಸಂಸತ್ ಭದ್ರತಾ ವೈಫಲ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮನೋರಂಜನ್ ಯಾರು? ಆತನ ಹಿನ್ನೆಲೆ ಏನು ಎಂಬುವ ಪಿನ್ ಟು ಪಿನ್ ಮಾಹಿತಿ ಇಲ್ಲಿದೆ. ಸಂಸತ್ ದಾಳಿ ಬಳಿಕ ಮೈಸೂರಿನ ಮನೋರಂಜನ್ ಹಿನ್ನೆಲೆ ಹುಡುಕಾಟ ಶುರುಮಾಡಿದ ಪೊಲೀಸರು. ಮನೋರಂಜನ್ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಾಗಿರುವ ಬಗ್ಗೆ ಈವರೆಗೂ ಮಾಹಿತಿ ಸಿಕ್ಕಿಲ್ಲ. ಇನ್ನು ಅವನ ಸೋಷಿಯಲ್ ಮೀಡಿಯಾ ಅಕೌಂಟ್ ಬಗ್ಗೆಯು ಹುಡುಕಾಟ ನಡೆಸಿದ್ದಾರೆ. ಸದ್ಯ ಆತನ ಸೋಷಿಯಲ್ ಮೀಡಿಯಾ ಅಕೌಂಟ್ ಕೂಡ ಈವರೆಗು ಪತ್ತೆಯಾಗಿಲ್ಲ. ಬೇರೆ ಹೆಸರಿನಲ್ಲಿ ಸೋಷಿಯಲ್ ಮೀಡಿಯಾ ಅಕೌಂಟ್ ಇದೆಯಾ ಎಂಬ ಬಗ್ಗೆಯು ಹುಡುಕಾಟ‌ ನಡೆಸಿರುವ ತನಿಖಾಧಿಕಾರಿಗಳು.ಸದ್ಯ ಮೈಸೂರು ಪೊಲೀಸರಿಗೆ ಈತನ ಪೂರ್ವಪರ ವಿಚಾರಿಸಿ ಯಾವುದೇ ದೆಹಲಿ ಪೊಲೀಸರಾಗಲಿ ಯಾರೂ ಕೂಡ ಸಂಪರ್ಕಮಾಡಿಲ್ಲ. ಆದರೂ ಆತನ ಹಿನ್ನೆಲೆ ಬಗ್ಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಕ್ರಾಂತಿಕಾರಿ ವಿಚಾರಗಳನ್ನು, ಪುಸ್ತಕಗಳನ್ನು ಓದುತ್ತಿದ್ದರೂ ಒಂದೇ ಒಂದು ಹೋರಾಟದಲ್ಲೂ ಭಾಗಿಯಾಗದ ಮನೋರಂಜನ್ ಹೋರಾಟದಲ್ಲಿ ಭಾಗಿಯಾದ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಆತನ ವಿರುದ್ಧ ಕೇಸ್…

Read More

ಮುಂಬೈ:- ಬಿಹಾರದಲ್ಲಿ 8,700 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲು ಅದಾನಿ ಗ್ರೂಫ್‌ ಯೋಜನೆ ರೂಪಿಸುತ್ತಿದ್ದು, ಈ ಮೂಲಕ ಅಂದಾಜು 10,000 ಉದ್ಯೋಗ ಸೃಷ್ಟಿಯಾಗಲಿದೆ. ಹಾಗೂ ಇದು ನಿರುದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಿದಂತಾಗಿದೆ. ಈ ಬಗ್ಗೆ ಅದಾನಿ ಎಂಟರ್‌ ಪ್ರೈಸಸ್‌ ನಿರ್ದೇಶಕ ಪ್ರಣವ್‌ ಅದಾನಿ ಮಾಹಿತಿ ನೀಡಿದ್ದಾರೆ. ಬಿಹಾರ ಬ್ಯುಸಿನೆಸ್‌ ಕನೆಕ್ಟ್‌ 2023ರ ಯೋಜನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅದಾನಿ, ನಿತೀಶ್‌ ಕುಮಾರ್‌ ನೇತೃತ್ವದ ಸರ್ಕಾರವು ರಾಜ್ಯದಲ್ಲಿ ಬಂಡವಾಳ ಹೂಡಲು ಉದ್ಯಮಿಗಳನ್ನು ಆಹ್ವಾನಿಸಿದ್ದು, ಈ ಮೂಲಕ ಹಿಂದುಳಿದ ರಾಜ್ಯದಲ್ಲಿ ಉದ್ಯೋಗಾವಕಾಶ ಕಲ್ಪಿಸುವ ಭರವಸೆಯನ್ನು ಈಡೇರಿಸಲು ಮುಂದಾಗಿದ್ದಾರೆಂದು ಹೇಳಿದರು. ಬಿಹಾರ ಈಗ ಬಂಡವಾಳ ಹೂಡಿಕೆಯ ಆಕರ್ಷಣೆಯ ಸ್ಥಳವಾಗಿದೆ. ಬಿಹಾರದಲ್ಲಿನ ಬದಲಾವಣೆ ಕಾಣಿಸುತ್ತಿದೆ. ಸಾಮಾಜಿಕ ಬದಲಾವಣೆ, ಕಾನೂನು ಸುವ್ಯವಸ್ಥೆ, ಸಾಕ್ಷರತೆ ಮತ್ತು ಮಹಿಳಾ ಸಬಲೀಕರಣ ಪ್ರಮುಖವಾಗಿದೆ ಎಂದರು ಬಿಹಾರದ ಅಭಿವೃದ್ಧಿ ಪಥದ ನಿತೀಶ್‌ ಕುಮಾರ್‌ ಅವರ ಯೋಜನೆಗೆ ಅದಾನಿ ಗ್ರೂಪ್‌ ಕೈಜೋಡಿಸುತ್ತದೆ. ಈಗಾಗಲೇ ಬಿಹಾರದಲ್ಲಿ ಲಾಜಿಸ್ಟಿಕ್ಸ್‌ ಮತ್ತು ಗ್ಯಾಸ್‌ ವಿತರಣೆ ಸೆಕ್ಟರ್‌ ನಲ್ಲಿ 850…

Read More

ಮೈಸೂರು:- ಸಂಸದ ಪ್ರತಾಪ್ ಸಿಂಹ ವಿರುದ್ಧ ತನಿಖೆಯಾಗಲಿ ಎಂದು ಸಚಿವ ಮಹದೇವಪ್ಪ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,2024 ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ಅವಧಿ ಸಮೀಪಿಸುತ್ತಿದೆ. ಈ ವೇಳೆ ಭಾರಿ ಭದ್ರತಾ ವೈಫಲ್ಯ ಕಾಣಿಸಿಕೊಂಡಿದೆ. ಇದರಿಂದ ಲೋಕಸಭೆಯೊಳಗೆ ಆತಂಕ ಸೃಷ್ಟಿ ಆಗಿದ್ದು, ನಮ್ಮ ಮೈಸೂರಿನ ಸಂಸದರೇ ಆಗಂತುಕ ಆರೋಪಿಗೆ ಪಾಸ್ ನೀಡಿರುವುದು ಸ್ಪಷ್ಟವಾಗಿದೆ. ಒಂದು ವೇಳೆ ಅಲ್ಲಿ ಏನಾದರೂ ದೊಡ್ಡ ಅನಾಹುತ ಘಟಿಸಿದ್ದರೆ ಅದಕ್ಕೆ ಯಾರು ಜವಾಬ್ದಾರಿ?. ಭದ್ರತಾ ದೃಷ್ಟಿಯಿಂದ ಸಂಸದ ಪ್ರತಾಪ್ ಅವರನ್ನು ತನಿಖೆಗೆ ಒಳಪಡಿಸಬೇಕು ಮತ್ತು ಇದರ ಹಿಂದಿನ ನೈಜ ಕಾರಣಗಳನ್ನು ಪತ್ತೆ ಹಚ್ಚಬೇಕೆಂದು ಈ ಮೂಲಕ ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತೇನೆ ಎಂದು ಸಚಿವ ಡಾ. ಎಚ್‌ ಸಿ ಮಹದೇವಪ್ಪ ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಲೋಕಸಭೆಯ ವೀಕ್ಷಕರ ಗ್ಯಾಲರಿಯಿಂದ ಬುಧವಾರ ಸದನಕ್ಕೆ ಹಾರಿದ್ದ ಆರೋಪಿಗೆ ಪಾಸ್​ ನೀಡಿದ ಆರೋಪದ ಮೇಲೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರನ್ನು ಲೋಕಸಭೆಯಿಂದ ಉಚ್ಛಾಟನೆ ಮಾಡುವಂತೆ ಟಿಎಂಸಿ ಒತ್ತಾಯಿಸಿದೆ. ಅಲ್ಲದೇ, ಹಲವು…

Read More

ಬೆಂಗಳೂರು:- ಬೆಳಗಾವಿ ಮಹಿಳೆ ವಿವಸ್ತ್ರಗೊಳಿಸಿದ ಕೇಸ್​ ಗೆ ಸಂಬಂಧಿಸಿದಂತೆ ಮಹಿಳೆಯ ನೆರವಿಗೆ ಯಾರು ಬಂದಿಲ್ಲ ಎಂದು ಹೈಕೋರ್ಟ್ ಹೇಳಿದೆ. ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಪೀಠ ವಿಚಾರಣೆ ನಡೆಸಿತು. ಘಟನೆ ಕುರಿತಂತೆ ಪ್ರಸ್ತಾಪಿಸಿದ ನ್ಯಾಯಪೀಠ, ದ್ರೌಪದಿಯನ್ನು ವಿವಸ್ತ್ರಗೊಳಿಸಿದಾಗ ರಕ್ಷಿಸಲು ಕೃಷ್ಣಾ ಇದ್ದ. ಇದು ದುಶ್ಯಾಸನರ ಕಾಲವಾಗಿದೆ. ಮಹಿಳೆ ನೆರವಿಗೆ ಯಾರೂ ಬಂದಿಲ್ಲ. ನಮ್ಮಲ್ಲಿ ಕಾನೂನಿನ ಭಯವಿಲ್ಲವೆಂಬ ಸಂದೇಶ ಹೋಗುತ್ತಿದೆ. ಸ್ವಾತಂತ್ರ್ಯ ಬಂದ 75 ವರ್ಷದ ನಂತರವೂ ಇಂತಹ ಘಟನೆ ನಡೆದಿದೆ. ಬಡ ಜನತೆಗೆ ರಕ್ಷಣೆ ಬೇಕಾಗಿದೆ. ಬದಲಾಗಿ ಇಂತಹ ಸಮಾಜದಲ್ಲಿ ಬದುಕುವುದಕಿಂತ ಸಾಯುವುದು ಮೇಲು ಎಂಬ ಸ್ಥಿತಿ ಬರದಂತೆ ನೋಡಿಕೊಳ್ಳಬೇಕು ಎಂದು ಪೀಠ ತಿಳಿಸಿತು. ಮಗ ಮಾಡಿದ ತಪ್ಪಿಗೆ ತಾಯಿಗೆ ಶಿಕ್ಷೆ ನೀಡಲಾಗಿದೆ. ಮಗನನ್ನು ಹೆತ್ತಿದ್ದೆ ಆ ತಾಯಿಯ ತಪ್ಪಾ?, ಸಂತ್ರಸ್ತೆಯನ್ನು ಪ್ರಾಣಿಗಿಂತ ಕೀಳಾಗಿ ನಡೆಸಿಕೊಂಡಿದ್ದಾರೆ. ಅಂತಹ ವ್ಯಕ್ತಿಗಳು ಮನುಷ್ಯರೆಂದು ಕರೆಸಿಕೊಳ್ಳಲು ಯೋಗ್ಯರಲ್ಲ. ಎರಡು ಗಂಟೆಗಳ ಕಾಲ ಮಹಿಳೆಯನ್ನು ಹಿಂಸಿಸಲಾಗಿದೆ. ವಿವಸ್ತ್ರಗೊಳಿಸಿ, ಕಂಬಕ್ಕೆ…

Read More

ಬೆಂಗಳೂರು:- ಮೇಕೆದಾಟು ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿಸಿಎಂ ಶಿವಕುಮಾರ್ ಭರವಸೆ ನೀಡಿದ್ದಾರೆ. ವಿಧಾನಪರಿಷತ್‌ನಲ್ಲಿ ಸದಸ್ಯ ಶರವಣ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಮೇಕೆದಾಟು ಯೋಜನೆಗೆ ಇದುವರೆಗೆ ಯಾವುದೇ ಭೂಮಿಯನ್ನು ವಶಪಡಿಸಿಕೊಂಡಿರುವುದಿಲ್ಲ. ಕರ್ನಾಟಕ ಮತ್ತು ತಮಿಳುನಾಡು ಅಂತರ ರಾಜ್ಯ ಗಡಿಯಲ್ಲಿರುವ ಸಿಡಬ್ಲ್ಯುಸಿ ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ ಜುಲೈ 2023 ರಿಂದ ನವೆಂಬರ್ 2023 ರ ವರೆಗೆ 10.658 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಲಾಗಿದೆ. ಸಂಕಷ್ಟ ಜಲ ವರ್ಷಗಳಲ್ಲಿ ನೀರಿನ ಹಂಚಿಕೆ ಕುರಿತು ಸೂತ್ರ ರೂಪಿಸುವ ಬಗ್ಗೆ ಕಾವೇರಿ ಜಲ ನಿಯಂತ್ರಣಾ ಸಮಿತಿಯ (CWRC)/ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರದ (CWMA) ಸಭೆಗಳಲ್ಲಿ ಚರ್ಚಿಸಲಾಗುತ್ತಿದ್ದು, ಸಂಕಷ್ಟ ಹಂಚಿಕೆ ಸೂತ್ರವು ಅಂತಿಮವಾಗಬೇಕಿದೆ ಎಂದು ಸ್ಪಷ್ಟಪಡಿಸಿದರು. ಪ್ರಸ್ತುತ, ಜಲವರ್ಷ 2023-24 ಆರಂಭದಿಂದಲೂ ಸಂಕಷ್ಟ ಜಲ ವರ್ಷವಾಗಿದೆ. CWRC ಹಾಗೂ CWMA ಸಭೆಗಳಲ್ಲಿ ಕಾವೇರಿ ಜಲಾನಯನಗಳ ಜಲಾಶಯಗಳಲ್ಲಿ ಕಳೆದ 30 ವರ್ಷಗಳ ಸರಾಸರಿ ಒಳಹರಿವು, ಕಾಲಕಾಲಕ್ಕೆ ಉಂಟಾದ ಮಳೆಯ ಪ್ರಮಾಣ/ಕೊರತೆ, ಕಣಿವೆಯಲ್ಲಿನ ಪ್ರಮುಖ ಜಲಾಶಯಗಳಲ್ಲಿನ…

Read More

ಅಡುಗೆ ಮನೆಯಲ್ಲಿರುವ ಕೆಲ ಸಾಮಗ್ರಿಯಿಂದ ಆರೋಗ್ಯಕರ ಅಡುಗೆ ಮಾಡಿಕೊಂಡು ತಿನ್ನುತ್ತೇವೆ. ಕೆಲವು ಬಾರಿ ಜ್ವರ, ನೆಗಡಿ, ಕೆಮ್ಮು, ಗಾಯ ಇವುಗಳಿಗೆಲ್ಲ ಅಡುಗೆ ಮನೆಯಲ್ಲೇ ಔಷದಿ ಇರುತ್ತದೆ. ಆದರೆ ಅಡುಗೆ ಕೋಣೆಯಲ್ಲಿರುವ ಕೆಲ ವಸ್ತುಗಳು ಮಾತ್ರ, ನಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಹಾಗಾದ್ರೆ ಅದು ಯಾವ ವಸ್ತು ಅಂತಾ ತಿಳಿಯೋಣ ಬನ್ನಿ.. ಅಲ್ಯೂಮಿನಿಯಂ ಪಾತ್ರೆ ಮತ್ತು ಅಲ್ಯೂಮಿನಿಯಂ ಫಾಯ್ಲ್. ಅಲ್ಯೂಮಿನಿಯಂ ಪೇಪರ್‌ನಲ್ಲಿ ಕೆಲವರು ಕೆಲವು ಆಹಾರ ಪದಾರ್ಥಗಳನ್ನು ಸುತ್ತಿಡುತ್ತಾರೆ. ಆದೆರೆ ಇದು ಆರೋಗ್ಯಕ್ಕೆ ತುಂಬಾ ಕೆಟ್ಟದ್ದು, ಇದರಿಂದ ಕ್ಯಾನ್ಸರ್‌ನಂಥ ಖಾಯಿಲೆ ಬರುವ ಸಾಧ್ಯತೆ ಇರುತ್ತದೆ. ಅದೇ ರೀತಿ ಅಲ್ಯೂಮಿನಿಯಂ ಪಾತ್ರೆ ಕೂಡ ಹಾಗೆ. ಆ ಪಾತ್ರೆ ಬಳಸಿ, ಅಡುಗೆ ಮಾಡಿ, ಊಟ ಮಾಡುವುದರಿಂದ, ರೋಗ ರುಜಿನಗಳು ಬರುತ್ತದೆ. ಹಾಗಾಗಿ ಇದನ್ನು ಬಳಸಬೇಡಿ. ಮೈಕ್ರೋವೇವ್ ಓವನ್. ಇಂದಿನ ಕಾಲದಲ್ಲಿ ಓವನ್ ಬಳಸುವುದು ಶೋಕಿಯಾಗಿದೆ. ಆದರೆ ಇದನ್ನು ಬಳಸಿ, ಆಹಾರವನ್ನು ತಯಾರಿಸುವುದರಿಂದ, ಅಥವಾ ಇದರಲ್ಲಿ ಆಹಾರವನ್ನು ಬಿಸಿ ಮಾಡುವುದರಿಂದ, ನಮ್ಮ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆ. ಹೃದಯ ಸಮಸ್ಯೆ…

Read More