Author: AIN Author

ಮುಂಬಯಿ: ತನ್ನ ಉತ್ಪನ್ನಗಳು ಮತ್ತು ಸೇವೆಯನ್ನು ಉನ್ನತ ಮಟ್ಟದಲ್ಲಿ ಡಿಜಿಟಲೀಕರಿಸಲು ವಿಶೇಷ ‘ಡೈವ್’ ಯೋಜನೆಯನ್ನು(DIVE: Digital Innovation And Value Enhancement) ಸರಕಾರಿ ಸ್ವಾಮ್ಯದ ವಿಮಾ ಕಂಪನಿಯಾದ ಎಲ್ಐಸಿ ಜಾರಿಗೊಳಿಸಿದೆ. ಕಂಪನಿಯಲ್ಲಿ ಡಿಜಿಟಲ್ ರೂಪಾಂತರವನ್ನು ತರುವುದು ಈ ‘ಡೈವ್’ನ ಉದ್ದೇಶ. ಮುಂಬರುವ ದಿನಗಳಲ್ಲಿ ಹೊಸ ಪ್ರೀಮಿಯಂಗಳ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಈ ನಿಟ್ಟಿನಲ್ಲಿ ಕಂಪನಿಯು ಮುಂಬರುವ ತಿಂಗಳುಗಳಲ್ಲಿ 3 ರಿಂದ 4 ಹೊಸ ಪ್ರಾಡಕ್ಟ್ಗಳನ್ನು ಪ್ರಾರಂಭಿಸಲಿದೆ. ಅಲ್ಲದೇ, ಮುಂದಿನ ದಿನಗಳಲ್ಲಿ ತನ್ನದೇ ಆದ ಫಿನ್ಟೆಕ್ ಕಂಪನಿ ಪ್ರಾರಂಭಿಸುವ ಯೋಜನೆಯೂ ಇದೆ ಎಂದು ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ಅಧ್ಯಕ್ಷ ಸಿದ್ಧಾರ್ಥ ಮೊಹಂತಿ ಹೇಳಿದ್ದಾರೆ. ‘ಇತ್ತೀಚೆಗೆ ಕೆಲವು ಫಿನ್ಟೆಕ್ ಕಂಪನಿಗಳೊಂದಿಗೆ ಭಾರತೀಯ ಜೀವ ವಿಮಾ ನಿಗಮ ಕೈಜೋಡಿಸಿದೆ. ನಮ್ಮ ಉತ್ಪನ್ನ ವಿತರಣೆಗಾಗಿ ಫಿನ್ಟೆಕ್ ಕಂಪನಿಗಳನ್ನು ಕಾರ್ಪೊರೇಟ್ ಏಜೆಂಟ್ಗಳನ್ನಾಗಿ ಮಾಡಲಾಗಿದೆ. ಈಗ ಎಲ್ಐಸಿ ತನ್ನದೇ ಆದ ಫಿನ್ಟೆಕ್ ಕಂಪನಿಯನ್ನು ಪ್ರಾರಂಭಿಸಲು ಯೋಜಿಸುತ್ತಿದೆ,” ಎಂದು ಸಿದ್ಧಾರ್ಥ ಮೊಹಂತಿ ತಿಳಿಸಿದ್ದಾರೆ. ಭಾರತೀಯ ಜೀವ ವಿಮಾ…

Read More

ಎಲೆ ಚುಕ್ಕೆ ರೋಗ, ಬರಗಾಲ ಸೇರಿದಂತೆ ಇನ್ನಿತರ ಕಾರಣಗಳಿಂದ ಅಡಿಕೆ ಬೆಳೆಗಾರರು ಸೂಕ್ತ  ಫಸಲು ಸಿಗದೇ ಹಾಗೂ ಸಿಕ್ಕ ಫಸಲಿಗೆ ಉತ್ತಮ ಬೆಲೆ ದೊರೆಯದೇ ಕಂಗಾಲಾಗಿದ್ದಾರೆ. ಆದರೆ  ಈ ನಡುವೆ ಅಡಿಕೆ ಬೆಲೆ ತೀರ ಕೆಳ ಮಟ್ಟಕ್ಕೆ ಇಳಿದಿಲ್ಲ ಎಂಬುದು ಅಡಿಕೆ ಬೆಳೆಗಾರರಿಗೆ ತಾತ್ಕಾಲಿಕ ಸಮಾಧಾನದ ವಿಷಯ. ಇನ್ನು ರಾಜ್ಯದ ಕೆಲವು ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ 25 ಸಾವಿರದಿಂದ 56 ಸಾವಿರ ವರೆಗೂ ವಹಿವಾಟು ನಡೆಸಿದೆ. ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ Bantwala ಕೋಕಾ 15000 27500 23500 Channagiri ರಾಶಿ 41229 47585 47055 Davangere ರಾಶಿ 44510 46369 45440 Kumta ಚಿಪ್ಪು 26089 34509 33269 ಕೋಕಾ 19069 30799 29729 Pavagada ಕೆಂಪು ಗೋಟು 40000 42000 40260 Puttur New Variety 27000 36500 31750 Sagar ಬಿಳಿ ಗೋಟು 30699 33209 32799 ಚಾಲಿ…

Read More

ಮೊನ್ನೆಯಷ್ಟೇ ತಮ್ಮ ಹೊಸ ಚಿತ್ರಕ್ಕೆ ಟಾಕ್ಸಿಕ್ ಎಂದು ಹೆಸರಿಟ್ಟು ಸಾಕಷ್ಟು ಕುತೂಹಲ ಮೂಡಿಸಿರುವ ಯಶ್, ತಮ್ಮ ಹೊಸ ಸಿನಿಮಾದ ಶೂಟಿಂಗ್ (Shooting) ಅನ್ನು ಜನವರಿಯಿಂದ ಶುರು ಮಾಡಲಿದ್ದಾರಂತೆ. ಚಿತ್ರೀಕರಣಕ್ಕೆ ಆಗಲೇ ಸಾಕಷ್ಟು ತಯಾರಿಯನ್ನು ಮಾಡಿಕೊಂಡಿದ್ದು, ಜನವರಿ (January) ಎರಡನೇ ವಾರದಿಂದ ಚಿತ್ರೀಕರಣಕ್ಕೆ ಹೋಗಲಿದ್ದಾರೆ ಎನ್ನುತ್ತಿವೆ ಮೂಲಗಳು. ಯಶ್ (Yash) ಈ ಬಾರಿ ಪ್ಯಾನ್ ಇಂಡಿಯಾವನ್ನೂ ದಾಟಿಕೊಂಡು ಯೋಚನೆ ಮಾಡಿದ್ದಾರೆ. ಸಿನಿಮಾದ ಟೈಟಲ್ ಮತ್ತು ಆಯ್ಕೆ ಮಾಡಿಕೊಂಡಿರುವ ಕಥೆ ನೋಡಿದರೆ, ಇದೊಂದು ಹಾಲಿವುಡ್ ರೇಂಜ್ ನಲ್ಲಿ ತಯಾರಾಗುತ್ತಿರುವ ಕನ್ನಡದ ಸಿನಿಮಾ ಎಂದೇ ಹೇಳಬಹುದು. ಯಾವುದೇ ಭಾಷೆಯಲ್ಲಿ ಈ ಸಿನಿಮಾ ಬಂದರೂ, ಅದಕ್ಕೆ ತೊಂದರೆ ಆಗದಿರುವಂತೆ ‘ಟಾಕ್ಸಿಕ್’ (Toxic) ಎಂದು ಹೆಸರಿಟ್ಟಿದ್ದಾರೆ. ಇದು ಎಲ್ಲ ಭಾಷೆಗೂ ಸಲ್ಲುವಂತೆ ಟೈಟಲ್ ಆಗಿದೆ. ಇದರ ಜೊತೆಗೆ ಮತ್ತೊಂದು ವಿಷಯವೂ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಅದಕ್ಕೆ ಪುಷ್ಠಿ ಎನ್ನುವಂತೆ ಇಂದು ರಿಲೀಸ್ ಆಗಿರುವ ಟೈಟಲ್ ಟೀಸರ್ ನಲ್ಲಿ ಅದರ ಛಾಯೆ ಕೂಡ ಇದೆ. ಟಾಕ್ಸಿಕ್ ಸಿನಿಮಾದಲ್ಲಿ ಇಂಟರ್ ನ್ಯಾಷನಲ್ ಡ್ರಗ್ಸ್…

Read More

ಲಕ್ನೋ: ತಾಯಿಯೇ ತನ್ನ ಮಗಳನ್ನು 4 ಲಕ್ಷ ರೂ.ಗೆ ಮಾರಾಟ ಮಾಡಿದ ಪ್ರಕರಣ ಉತ್ತರಪ್ರದೇಶದ (Uttar Pradesh) ಗೋರಖ್‍ಪುರದ ಮಹೇಸ್ರಾ ಎಂಬಲ್ಲಿ ನಡೆದಿದೆ. ಹಣ ಕೊಟ್ಟು ಯುವತಿಯನ್ನು ಮದುವೆಯಾದ (Marriage) ಹರಿಯಾಣ (Haryana) ಮೂಲದ ವ್ಯಕ್ತಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗುವಂತೆ ಬಲವಂತಪಡಿಸಿ ನಿರಂತರ ಕಿರುಕುಳ ನೀಡುತ್ತಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಯುವತಿ ಈಗ ನ್ಯಾಯಕ್ಕಾಗಿ ಪೊಲೀಸ್ (Police) ಠಾಣೆಯ ಮೆಟ್ಟಿಲೇರಿದ್ದಾಳೆ. ಚಿಲುತಾಲ್ ಠಾಣೆಯಲ್ಲಿ ಆಕೆ ದೂರು ದಾಖಲಿಸಿದ್ದು, ದೂರಿನಲ್ಲಿ ಹರಿಯಾಣ ಮೂಲದ ವ್ಯಕ್ತಿಯಿಂದ ತನ್ನ ತಾಯಿ ಹಣ ಪಡೆದು ನ.23 ರಂದು ಬಲವಂತದಿಂದ ಮದುವೆ ಮಾಡಿದ್ದಾರೆ. ಈಗ ಅಕ್ರಮ ಚಟುವಟಿಕೆಯಲ್ಲಿ ತೊಡಗುವಂತೆ ನಿರಂತರವಾಗಿ ಆತ ಹಲ್ಲೆ ನಡೆಸುತ್ತಿದ್ದಾನೆ ಎಂದು ಆಕೆ ಆರೋಪಿಸಿದ್ದಾಳೆ. https://ainlivenews.com/do-you-know-why-you-should-not-cut-your-nails-at-night-heres-why/ ಯುವತಿ ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಲಾಗುತ್ತದೆ. ಈಗಾಗಲೇ ಪೊಲೀಸರು ಆಕೆಯ ಕುಟುಂಬಸ್ಥರ ಬಳಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಪೊಲೀಸ್ ಅಧೀಕ್ಷಕ ಮನೋಜ್ ಅವಸ್ತಿ ತಿಳಿಸಿದ್ದಾರೆ. ಮಹಿಳೆಯ ಇಬ್ಬರು ಹಿರಿಯ ಸಹೋದರಿಯರು…

Read More

ಮೊಸರು ಮತ್ತು ಯೋಗರ್ಟ್ ನೋಡಲು ಒಂದೇ ರೀತಿ ಕಂಡರೂ ಇವುಗಳನ್ನು ತಯಾರಿಸುವ ರೀತಿ, ಅವುಗಳ ರುಚಿ (Taste), ವಿನ್ಯಾಸದಲ್ಲಿ ವ್ಯತ್ಯಾಸವಿದೆ. ಅದರಲ್ಲೂ ಮುಖ್ಯವಾಗಿ ತಯಾರಿಕೆಯ ರೀತಿಯಿಂದ ಎರಡರ ಮಧ್ಯೆಯಿರುವ ವ್ಯತ್ಯಾಸ ಸ್ಪಷ್ಟವಾಗುತ್ತದೆ. ಬೆಚ್ಚಗಿನ ಹಾಲಿಗೆ ಹಳೆಯ ಮೊಸರು ಅಥವಾ ನಿಂಬೆ (Lemon) ರಸವನ್ನು ಸೇರಿಸಿ ಮೊಸರನ್ನು ತಯಾರಿಸಲಾಗುತ್ತದೆ. ಸಾಮಾನ್ಯವಾಗಿ ಮೊಸರನ್ನು ಮನೆಯಲ್ಲಿ ತಯಾರಿಸಬಹುದಾಗಿದೆ. ಆದರೆ, ಯೋಗರ್ಟ್‌ನ್ನು ಕೃತಕ ಆಮ್ಲಗಳೊಂದಿಗೆ ಹಾಲನ್ನು ಹುದುಗಿಸುವ ಮೂಲಕ ತಯಾರಿಸಲಾಗುತ್ತದೆ, ಇದನ್ನು ಸಾಮಾನ್ಯವಾಗಿ ವಾಣಿಜ್ಯಿಕವಾಗಿ ತಯಾರಿಸಲಾಗುತ್ತದೆ. ಯೋಗರ್ಟ್ ಪರಿಪೂರ್ಣ ರುಚಿ ಮತ್ತು ಮೃದುವಾದ ವಿನ್ಯಾಸವನ್ನು ಪಡೆಯಲು ಸೂಕ್ತವಾದ ತಾಪಮಾನದ ಅಗತ್ಯವಿರುತ್ತದೆ. ಮೊಸರು ಮತ್ತು ಯೋಗರ್ಟ್ ಎರಡೂ ಪ್ರೋಬಯಾಟಿಕ್ ಬ್ಯಾಕ್ಟೀರಿಯಾ (Bacteria)ಗಳನ್ನು ಹೊಂದಿವೆ. ಆದರೆ, ಮೊಸರಿಗೆ ಹೋಲಿಸಿದರೆ ಯೋಗರ್ಟ್ನಲ್ಲಿರುವ ಬ್ಯಾಕ್ಟೀರಿಯಾದ ಪ್ರಮಾಣವು ಹೆಚ್ಚು. ಮೊಸರು ತುಲನಾತ್ಮಕವಾಗಿ ಕಡಿಮೆ ಪ್ರಮಾಣದ ಬ್ಯಾಕ್ಟೀರಿಯಾವನ್ನು ಹೊಂದಿದೆ. ಮೊಸರು ಮತ್ತು ಯೋಗರ್ಟ್ ನಡುವಿನ ವ್ಯತ್ಯಾಸವೇನು ? ಮೊಸರನ್ನು ನಿಂಬೆ ಅಥವಾ ಮೊಸರಿನೊಂದಿಗೆ ಹಾಲನ್ನು ಬೆರೆಸಿ ತಯಾರಿಸಲಾಗುತ್ತದೆ, ಇದು ಲ್ಯಾಕ್ಟೋಬಾಸಿಲಸ್ ಎಂದೂ ಕರೆಯಲ್ಪಡುವ ಹಲವಾರು ರೀತಿಯ…

Read More

ವಿಯೆಟ್ನಂ ವರ್ಷದ ಯಾವುದೇ ಸಮಯದಲ್ಲಿ ಆಗ್ನೇಯ ಏಷ್ಯಾದ ಮ್ಯಾಜಿಕ್‌ನ ಉದಾರ ಪ್ರಮಾಣವನ್ನು ಒದಗಿಸುತ್ತದೆ, ಆದರೆ ಕೆಲವು ಋತುಗಳು ಇತರರಿಗಿಂತ ಪ್ರಯಾಣಿಕರಿಗೆ ಸುಲಭವಾಗಿರುತ್ತದೆ. ನಿಮ್ಮ ಪ್ರವಾಸದಿಂದ ನೀವು ಏನನ್ನು ಹುಡುಕುತ್ತಿದ್ದೀರಿ ಎಂಬುದರ ಮೇಲೆ ಬಹಳಷ್ಟು ಅವಲಂಬಿತವಾಗಿದೆ – ಇದು ಕೇಂದ್ರ ಕರಾವಳಿಯ ಕಡಲತೀರದ ಸಮಯವಾಗಿದ್ದರೆ, ಬೇಸಿಗೆಯ ಜನಸಂದಣಿಯು ಬರುವ ಮೊದಲು ನೀವು ಬಹುಶಃ ಫೆಬ್ರವರಿಯಿಂದ ಜೂನ್ ವರೆಗೆ ಶುಷ್ಕ ತಿಂಗಳುಗಳಿಗೆ ಅಂಟಿಕೊಳ್ಳಲು ಬಯಸುತ್ತೀರಿ; ನೀವು ಎತ್ತರದ ಪ್ರದೇಶಗಳಲ್ಲಿ ಟ್ರೆಕ್ಕಿಂಗ್ ಮಾಡಲು ಇಲ್ಲಿದ್ದರೆ, ಅಕ್ಟೋಬರ್‌ನಿಂದ ಮಾರ್ಚ್‌ವರೆಗಿನ ಅವಧಿಯು ಅತ್ಯುತ್ತಮವಾದ ಋತುವಾಗಿದೆ. ವಿಯೆಟ್ನಾಂನಲ್ಲಿ ಭೇಟಿ ನೀಡುವ ಸ್ಥಳಗಳು ಹ್ಯಾಲೊಂಗ್ ಬೇ, ಮೈ ಸನ್ ಅಭಯಾರಣ್ಯ, ಕು ಚಿ ಸುರಂಗಗಳು, ಫಾಂಗ್ ನ್ಹಾ ಕೆ ಬ್ಯಾಂಗ್ ರಾಷ್ಟ್ರೀಯ ಉದ್ಯಾನವನ, ಮೆಕಾಂಗ್ ಡೆಲ್ಟಾ, ಲಾನ್ ಹಾ ಬೇ, ಕ್ಯಾಟ್ ಬಾ ಐಲ್ಯಾಂಡ್, ಡೌ ಬಿ ಐಲ್ಯಾಂಡ್, ಟಿ ಟಾಪ್ ಐಲ್ಯಾಂಡ್, ಹೋಂಗ್ ಲಿಯೆನ್ ರಾಷ್ಟ್ರೀಯ ಉದ್ಯಾನವನ, ಬಾ ಬೆ ರಾಷ್ಟ್ರೀಯ ಉದ್ಯಾನವನ, ಬಾನ್ ಜಿಯೋಕ್ ಜಲಪಾತ, ಸಾಪಾ ಕಂಟ್ರಿಸೈಡ್,…

Read More

ಅಟ್ಲಾಂಟಾ: ಮಹಿಳೆಯರ ಸೃಜನಶೀಲತೆ ಮತ್ತು ಬುದ್ಧಿವಂತಿಕೆ ವೈವಿಧ್ಯಮಯ ಕೈಗಾರಿಕೆಗಳಲ್ಲಿ ವ್ಯವಹಾರವನ್ನು ಅಭೂತಪೂರ್ವ ಎತ್ತರಕ್ಕೆ ಕೊಂಡೊಯ್ಯುತ್ತಿದೆ. ಅಂತಹ ಯಶಸ್ಸನ್ನು ಸಾಧಿಸಿದ ಒಬ್ಬ ಮಹಿಳೆ ಸುನೀರಾ ಮದ̧ನಿ ಹೌದು 34 ನೇ ವಯಸ್ಸಿನಲ್ಲಿ ಅಸಾಧಾರಣ ಯಶಸ್ಸನ್ನು ಸಾಧಿಸಿದ ಮಹಿಳೆ ಸುನೀರಾ ಮದನಿ (Suneera Madhani). ಕನಿಷ್ಠ ಹಣಕಾಸಿನಿಂದ ಪ್ರಾರಂಭಿಸಿದ ಈ ಕಂಪನಿಯಲ್ಲೀಗ ಮೂರು ಲಕ್ಷ ಮಹಿಳಾ ಸಿಇಒಗಳಿದ್ದಾರೆ.  ಅಮೆರಿಕದಲ್ಲಿ(US) ಯಶಸ್ಸು ಕಂಡುಕೊಂಡ ವಲಸಿಗ ಉದ್ಯಮಿ ಸುನೀರಾ. ಅವರು 2014 ರಲ್ಲಿ ತನ್ನ ಸಹೋದರ ಸಾಲ್ ರೆಹಮೆತುಲ್ಲಾ ಅವರೊಂದಿಗೆ ಸ್ಟ್ಯಾಕ್ಸ್ (Stax) ಅನ್ನು ಸ್ಥಾಪಿಸಿದರು . ಕಂಪನಿಯ ಕಾರ್ಯಾಚರಣೆಯು ಮಾರಾಟದ ಶೇಕಡಾವಾರು ಬದಲಿಗೆ ನಿಗದಿತ ದರದಲ್ಲಿ ಪ್ರತಿ ತಿಂಗಳು ಚಂದಾದಾರಿಕೆ ಶುಲ್ಕವನ್ನು ಬಿಲ್ಲಿಂಗ್ ಮಾಡುವ ಮೇಲೆ ಕೇಂದ್ರೀಕೃತವಾಗಿದೆ. ಸ್ಟಾಕ್ಸ್ ಮುನ್ನೂರಕ್ಕೂ ಹೆಚ್ಚು ಜನರನ್ನು ನೇಮಿಸಿಕೊಂಡಿದೆ. ಕಳೆದ ಎಂಟು ವರ್ಷಗಳಲ್ಲಿ 23 ಬಿಲಿಯನ್ ಅಮೆರಿಕನ್ ಡಾಲರ್ ಆದಾಯವನ್ನು ಗಳಿಸಿದೆ. ಪಾಕಿಸ್ತಾನದಿಂದ ವಲಸೆ ಬಂದ ಪೋಷಕರಿಗೆ ಜನಿಸಿದ ಆಕೆಯ ಪೋಷಕರು ಹಲವಾರು ವ್ಯವಹಾರಗಳನ್ನು ಪ್ರಯತ್ನಿಸಿದರು ಆದರೆ ಎಲ್ಲದರಲ್ಲೂ ವಿಫಲರಾಗಿದ್ದರು.…

Read More

 ಬೆಂಗಳೂರು:  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್‌ ಮತ್ತು ಕೆನರಾ ಬ್ಯಾಂಕ್‌ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್‌ಸೆಟ್‌ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ ಮೊಬೈಲ್‌ ರಿಪೇರಿ ಮತ್ತು ಸೇವೆ ಕುರಿತ 30 ದಿನಗಳ ಉಚಿತ ತರಬೇತಿಯು ಡಿಸೆಂಬರ್ 20 ರಿಂದ ಪ್ರಾರಂಭವಾಗಲಿದ್ದು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ ಹಾಗೂ ತುಮಕೂರು ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ಆಸಕ್ತ ನಿರುದ್ಯೋಗಿ ಯುವಕ-ಯುವತಿಯರು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತರು 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಬಿಪಿಎಲ್‌ ಕಾರ್ಡ್‌ ಅಥವಾ ಜಾಬ್‌ ಕಾರ್ಡ್‌ ಹಾಗೂ ಆಧಾರ್‌ ಕಾರ್ಡ್‌ನ್ನು ಕಡ್ಡಾಯವಾಗಿ ಹೊಂದಿರುವ ಗ್ರಾಮೀಣ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್‌ 18 ಆಗಿದೆ. ತರಬೇತಿಯು ಕಡ್ಡಾಯವಾಗಿ ವಸತಿಯುತವಾಗಿದ್ದು, ತರಬೇತಿಯ ಅವಧಿಯಲ್ಲಿ ಉಚಿತವಾಗಿ ಊಟ ಮತ್ತು ವಸತಿ ನೀಡಲಾಗುವುದು ಹಾಗೂ ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು. ಆಸಕ್ತರು ಅರ್ಜಿ ಸಲ್ಲಿಸಲು ಹಾಗೂ…

Read More

ಚೇತನ್ ಕುಮಾರ್ ಹಾಗೂ ರಕ್ಷ್ ಜೋಡಿಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಬರ್ಮದ ಶೂಟಿಂಗ್ ಭರದಿಂದ ಸಾಗುತ್ತಿದೆ. ಟೈಟಲ್ ಪೋಸ್ಟರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಅಂಗಳದಿಂದ ಲೇಟೆಸ್ಟ್ ಅಪ್ ಡೇಟ್ ಹೊರಬಿದ್ದಿದೆ. ಬರ್ಮ ಬಳಗದಲ್ಲಿ ಯಾವ ಯಾವ ತಾರೆಯರು ಇರ್ತಾರೆ? ಯಾರು ಚಿತ್ರದ ಭಾಗವಾಲಿದ್ದಾರೆ ಅನ್ನೋದನ್ನು ಚಿತ್ರತಂಡ ರಿವೀಲ್ ಮಾಡಿರಲಿಲ್ಲ. ಆದ್ರೀಗ ನಿರ್ದೇಶಕ ಚೇತನ್ ಕುಮಾರ್ ಬರ್ಮಗಾಗಿ ಬಾಲಿವುಡ್ ತಾರೆಯನ್ನು ಕರೆದು ತಂದಿದ್ದಾರೆ. ಬರ್ಮ ಅಖಾಡಕ್ಕೀಗ ಬಾಲಿವುಡ್ ಸ್ಟಾರ್ ಎಂಟ್ರಿಯಾಗಿದೆ. ಹಿಂದಿ ಮಾತ್ರವಲ್ಲ ತೆಲುಗು ಸಿನಿಮಾಗಳಲ್ಲಿ ಮಿಂಚಿರುವ ಶಾವರ್ ಅಲಿ ಮತ್ತೊಮ್ಮೆ ಕನ್ನಡ ಚಿತ್ರರಂಗದತ್ತ ಮುಖ ಮಾಡಿದ್ದಾರೆ. ಆದಿತ್ಯ ನಟನೆಯ ರೆಬಲ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದ ಶಾವರ್ ಅಲಿ, ದರ್ಶನ್ ಅಭಿನಯದ ಚಕ್ರವರ್ತಿ ಸಿನಿಮಾದಲ್ಲಿಯೂ ವಿಲನ್ ಆಗಿ ಅಬ್ಬರಿಸಿದ್ದರು. ಇದೀಗ ಆರು ವರ್ಷದ ನಂತ್ರ ಮಗದೊಮ್ಮೆ ಕನ್ನಡ ಚಿತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಬಾಲಿವುಡ್ ಸಿನಿಮಾರಂಗದಿಂದ ಬಣ್ಣದ ಬದುಕು ಆರಂಭಿಸಿದ್ದ ಅವರೀಗ ಟಾಲಿವುಡ್, ಸ್ಯಾಂಡಲ್…

Read More

ಮೊಟ್ಟೆಯಲ್ಲಿ ದೇಹಕ್ಕೆ ದಿನದಲ್ಲಿ ಅಗತ್ಯವಿರುವ ಎಲ್ಲಾ ಜೀವಸತ್ವಗಳು ಮತ್ತು ಖನಿಜಗಳಿವೆ. ಇಡೀ ಮೊಟ್ಟೆಯು 6 ಗ್ರಾಂ ಪ್ರೋಟೀನ್ ಮತ್ತು ದೇಹದ ಸಾಮಾನ್ಯ ಕಾರ್ಯನಿರ್ವಹಣೆಗೆ ಅಗತ್ಯವಿರುವ ಹಲವಾರು ಪೋಷಕಾಂಶಗಳನ್ನು ಹೊಂದಿರುತ್ತದೆ. 44 ಗ್ರಾಂ ತೂಕದ 1 ಬೇಯಿಸಿದ ಮೊಟ್ಟೆ 5.5 ಗ್ರಾಂ ಪ್ರೋಟೀನ್‌ನ್ನು ಒಳಗೊಂಡಿದೆ. 4.2 ಗ್ರಾಂ ಕೊಬ್ಬಿನ ಪ್ರಮಾಣ, 24.6 ಮಿ.ಗ್ರಾಂ ಕ್ಯಾಲ್ಸಿಯಂ, 0.8 ಮಿಗ್ರಾಂ ಕಬ್ಬಿಣ, 5.3 ಮಿಗ್ರಾಂ ಮೆಗ್ನೀಸಿಯಮ್, 86.7 ಮಿಗ್ರಾಂ ರಂಜಕ, 60.3 ಮಿಗ್ರಾಂ ಪೊಟ್ಯಾಸಿಯಮ್, 0.6 ಮಿಗ್ರಾಂ ಸತು, 162 ಮಿಗ್ರಾಂ ಕೊಲೆಸ್ಟ್ರಾಲ್, 13.4 ಮೈಕ್ರೋಗ್ರಾಂ ಸೆಲೆನಿಯಮ್ ಒಳಗೊಂಡಿದೆ. ಮೊಟ್ಟೆಗಳನ್ನು ಸಂಗ್ರಹಿಸಲು ಸರಿಯಾದ ರೀತಿ ಯಾವುದು ? ಆರೋಗ್ಯಕ್ಕೆ ಉತ್ತಮ ಎಂದು ಮನೆಗೆ ಒಂದು ಟ್ರೇ ತಂದಿಟ್ಟು ದಿನಕ್ಕೊಂದು ಮೊಟ್ಟೆ ಎಂದು ಬೇಯಿಸಿ ತಿನ್ಬೋದು ಎಂದು ನೀವು ಪ್ಲಾನ್ ಏನೋ ಮಾಡ್ಬೋದು. ಆದರೆ, ಮೊಟ್ಟೆಗಳನ್ನು ಸಂಗ್ರಹಿಸುವ ಸರಿಯಾದ ಮಾರ್ಗ ಯಾವುದು ಎಂದು ನೀವು ಎಂದಾದರೂ ಯೋಚಿಸಿದ್ದೀರಾ ? ಕೆಲವು ದೇಶಗಳಲ್ಲಿ ಮೊಟ್ಟೆಗಳನ್ನು ಫ್ರಿಡ್ಜ್‌ನಲ್ಲಿ ಸಂಗ್ರಹಿಸಬಾರದು ಎಂದು…

Read More