Author: AIN Author

ಬೆಂಗಳೂರು: ರಾಜ್ಯದಲ್ಲಿ ನಾಯಿ ಕೊಡೆಗಳಂತೆ ತಲೆ ಎತ್ತಿತ್ತು ನಕಲಿ ಕ್ಲಿನಿಕ್ ಗಳು ಹಣಕೋಸ್ಕರ ಜನರ ಜೀವದ ಜೊತೆ ಚೆಲ್ಲಾಟ ಆಡ್ತಿದ್ದವರಿಗೆ ಶಾಕ್ ಕೊಟ್ಟ ಆರೋಗ್ಯ ಇಲಾಖೆ  ರಾಜ್ಯದ್ಯಂತ 1400ಕ್ಕೂ ಅಧಿಕ ನಕಲಿ ಕ್ಲೀನಿಕ್ಗಳಿಗೆ ಬಿತ್ತು ಬ್ರೇಕ್ ನಕಲಿ ಕ್ಲಿನಿಕ್ ಗಳಿಗೆ ಬ್ರೇಕ್ ಜಿಲ್ಲೆ ಪತ್ತೆ ಹಚ್ಚಿದ ಕೇಸ್ ಬೆಂಗಳೂರು ನಗರ 67 ಬೆಳಗಾವಿ 170 ಬೀದರ್ 423 ಬಳ್ಳಾರಿ 33 ಬಾಗಲಕೋಟೆ 01 ಬೆಂ.ಗ್ರಾಮಾಂತರ 03 ಚಾಮರಾಜನಗರ 51 ಚಿಕ್ಕಬಳ್ಳಾಪುರದ 45 ಚಿಕ್ಕಮಗಳೂರು 11 ಚಿತ್ರ ದುರ್ಗ 02 ದಕ್ಷಿಣ ಕನ್ನಡ 26 ದಾವಣಗೆರೆ 21 ಧಾರವಾಡ 70 ಗದಗ 11 ಹಾಸನ 22 ಹಾವೇರಿ 19 ಕಲಬುರಗಿ 82 ಕೊಡಗು 01 ಕೋಲಾರ 179 ಕೊಪ್ಪಳ 33 ಮಂಡ್ಯ 17 ಮೈಸೂರು 02 ರಾಯಚೂರು 11 ರಾಮನಗರ 09 ಶಿವಮೊಗ್ಗ 74 ತುಮಕೂರು 12 ಉಡುಪಿ 2 ಉತ್ತರ ಕನ್ನಡ 15 ವಿಜಯಪುರ 11 ಯಾದಗಿರಿ 11 ವಿಜಯನಗರ 2…

Read More

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯ ಭದ್ರನ್ನವರ ಕಲ್ಯಾಣ ಮಂಟಪದಲ್ಲಿ ನಡೆದ ಜಮಖಂಡಿ ಅರ್ಬನ್ ಬ್ಯಾಂಕ್‌ನ ಜಿ.ಎಸ್.ನ್ಯಾಮಗೌಡ ಪರ ಪ್ರಚಾರ ಸಭೆಯಲ್ಲಿ ಅವಳಿ ನಗರದ ಸದಸ್ಯರ ಪರ ಮಾತನಾಡಿದ ಧುರೀಣ ರಾಜಶೇಖರ ಸೋರಗಾಂವಿ. ಜಮಖಂಡಿ ಅರ್ಬನ್ ಬ್ಯಾಂಕ್ ಚುನಾವಣೆಯಲ್ಲಿ ನಾಮ್ ಕೆ ವಾಸ್ತಾ ಎಂಬಂತೆ ಬನಹಟ್ಟಿಯ ಒಬ್ಬನೇ ಅಭ್ಯರ್ಥಿಯನ್ನು ಪ್ರತಿ ಬಾರಿ ಪೆನಲ್‌ನಲ್ಲಿ ತೆಗೆದುಕೊಂಡರೂ ನಮ್ಮ ಪ್ರದೇಶದ ಸದಸ್ಯರ ಮತಗಳನ್ನು ಪಡೆದುಕೊಂಡರೂ ಜಮಖಂಡಿ ಪ್ರದೇಶದ ಸದಸ್ಯರ ನೀರಸ ಪ್ರತಿಕ್ರಿಯೆ ಕಾರಣ ಆದ್ಯತೆಯ ಮತಗಳ ಕೊರತೆಯಿಂದ ನಮ್ಮ ಅಭ್ಯರ್ಥಿ ಪರಾಭವಗೊಳ್ಳುವುದು ನಿರಂತರವಾಗಿದೆ. ಜಮಖಂಡಿ ಮತದಾರರು ಹೆಚ್ಚಿದ್ದು, ರಬಕವಿ-ಬನಹಟ್ಟಿ ಮತದಾರರ ಸಂಖ್ಯೆ ಕಡಿಮೆಯಿರುವ ಕಾರಣ ನಮ್ಮ ಅಭ್ಯರ್ಥಿಗಳತ್ತ ಮತ ಬಾರದ ಕಾರಣ ನಾವು ವಂಚಿತರಾಗುತ್ತಿದ್ದೇವೆ. ಈ ಬಾರಿ ಜಿ.ಎಸ್.ನ್ಯಾಮಗೌಡ ಪೆನಲ್‌ನಲ್ಲಿ ನಮ್ಮ ಭಾಗದ ಯುನೂಸ್ ಚೌಗಲಾ ಮತ್ತು ರಾಜೇಂದ್ರ ಅಂಬಲಿಯವರನ್ನು ಸೇರ್ಪಡೆಗೊಳಿಸಿಕೊಂಡಿದ್ದು, ಪೆನೆಲ್‌ನ ಪ್ರತಿಯೊಬ್ಬರೂ ನಮ್ಮ ಪ್ರದೇಶದ ಅಭ್ಯರ್ಥಿಗಳಿಗೆ ಜಮಖಂಡಿ ಮತದಾರರಿಂದ ಮತ ಹಾಕಿಸಬೇಕು. ನಾವು ರಬಕವಿ-ಬನಹಟ್ಟಿ ಪ್ರದೇಶದಿಂದ ಬಂದು ನಿಮಗೆ ಮತ್ತು…

Read More

ವಿಜಯಪುರ: ಬೆಳ್ಳಂಬೆಳಿಗ್ಗೆ ಜನತಾ ಟ್ರಾವೆಲ್ಸ್‌ಗೆ ಸೇರಿದ ಬಸ್ಸು ನಡು ರಸ್ತೆಯಲ್ಲೇ ಹೊತ್ತಿ ಉರಿದು ಸುಟ್ಟು ಕರಕಲಾದ ಘಟನೆ ವಿಜಯಪುರ ತಾಲೂಕಿನ ಹಿಟ್ಟನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ. ಬೆಂಗಳೂರಿಂದ ಪ್ರಯಾಣಿಕರನ್ನ ಹೊತ್ತು ವಿಜಯಪುರಕ್ಕೆ ಬರುತ್ತಿದ್ದಾಗ ಬಸ್ಸಿಗೆ ಬೆಂಕಿ (Fire) ಹತ್ತಿಕೊಂಡಿದೆ. ಚಕ್ರ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. https://ainlivenews.com/dengue-case-increased-again-in-bangalore-more-than-1468-cases-detected-in-one-month/ ಸ್ಫೋಟಗೊಳ್ಳುತ್ತಿದ್ದಂತೆ ಪ್ರಯಾಣಿಕರು ಬಸ್ಸಿನಿಂದ ಕೆಳಗಡೆ ಇಳಿದ ಪರಿಣಾಮ ಯಾವುದೇ ಸಾವು ನೋವು ಸಂಭವಿಸಿಲ್ಲ. ಪ್ರಯಾಣಿಕರ ಬೆಲೆಬಾಳುವ ವಸ್ತುಗಳು, ಬಟ್ಟೆಗಳು ಸುಟ್ಟು ಭಸ್ಮವಾಗಿವೆ. ಗಾಬರಿಗೊಂಡ ಪ್ರಯಾಣಿಕರು ಬೇರೆ ವಾಹನಗಳ ಸಹಾಯದಿಂದ ಊರು ಸೇರಿದ್ದಾರೆ. ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸರು ಮತ್ತು ಅಗ್ನಿ ಶಾಮಕ‌ ದಳ ದೌಡಾಯಿಸಿದ್ದು ಬೆಂಕಿ ನಂದಿಸಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More

ಬೆಳಗಾವಿ:-ಹಿಂದುಳಿದ‌ ಕಲ್ಯಾಣ ಇಲಾಖೆ ವ್ಯಾಪ್ತಿಯಡಿ ಬರುವ ಬೆಳಗಾವಿ ಜಿಲ್ಲೆ‌‌ ಬೈಲಹೊಂಗಲ‌ ತಾಲ್ಲೂಕಿನಲ್ಲಿರುವ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಸೈನಿಕ‌ ಶಾಲೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ‌ಇಲಾಖೆ‌ ಸಚಿವ‌ ಶಿವರಾಜ್ ತಂಗಡಗಿ‌ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗುರುವಾರ ಸ್ಥಳೀಯ ಶಾಸಕ ಮಹಾಂತೇಶ್ ಕೌಜಲಗಿ ಹಾಗೂ ಅಧಿಕಾರಿಗಳೊಂದಿಗೆ ಸೈನಿಕ ಶಾಲೆಗೆ ಭೇಟಿ ನೀಡಿದ‌ ಸಚಿವರು ಶಾಲೆಯಲ್ಲಿನ ಮೂಲಸೌಲಭ್ಯ ಹಾಗೂ ಗುಣಮಟ್ಟದ ಶಿಕ್ಷಣದ ಬಗ್ಗೆ ಮಾಹಿತಿ ಪಡೆದರು. ಈ ವೇಳೆ ಸಚಿವರು ಶಾಲೆಯ ಭೋಜನಾಲಯ, ಗ್ರಂಥಾಲಯ, ಶಿಕ್ಷಕರ ವಸತಿ ಗೃಹ, ಆಡಿಟೋರಿಯಂ ಹಾಗೂ ಕೆಲಸಗಾರರು ಉಳಿದುಕೊಳ್ಳಲು ಹೈಟೆಕ್ ವಸತಿ ಗೃಹ, 30ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಿರುವ ಬೃಹತ್ ಒಳಾಂಗಣ ಮತ್ತು ಹೊರಾಂಗಣದಲ್ಲಿ ಬರುವ ಈಜುಕೊಳ, ಹಾರ್ಸ್ ರೈಡಿಂಗ್, ಹಾಕಿ, ಕಬಡ್ಡಿ, ವಾಲಿಬಾಲ್ ಕೋರ್ಟ್ ಗೆ ಭೇಟಿ ನೀಡಿ ಅಲ್ಲಿನ‌ ವ್ಯವಸ್ಥೆ ಬಗ್ಗೆ ಪರಿಶೀಲಿಸಿದರು.‌ 6ನೇ ತರಗತಿಯಿಂದ 12ನೇ ತರಗತಿವರೆಗೆ ಶಾಲೆಯಲ್ಲಿ ವಿದ್ಯಾಭ್ಯಾಸಕ್ಕೆ ಅವಕಾಶವಿದ್ದು, ಕೇಂದ್ರ‌ ರಕ್ಷಣಾ ಇಲಾಖೆ‌ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ…

Read More

ಬೆಂಗಳೂರು:   ನಾಳೆಯಿಂದ 2023ನೇ ಸಾಲಿಗೆ ಎಂಜಿನಿಯರಿಂಗ್ ಕೋರ್ಸುಗಳಿಗೆ ಇನ್ನೊಂದು ಸುತ್ತಿನ ಪ್ರವೇಶಾತಿ ಸೀಟು ಹಂಚಿಕೆಯಾಗಿದ್ದು  DCET ಮೂಲಕ ಎಂಜಿನಿಯರಿಂಗ್ ಕೋರ್ಸುಗಳಿಗೆ ಇನ್ನೊಂದು ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ನಡೆಯುತ್ತಿದೆ. ಮೊದಲ ಎರಡು ಸುತ್ತುಗಳಲ್ಲಿ ಯಾವುದೇ ಸೀಟು ಪಡೆಯದ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ಎರಡನೇ ಸುತ್ತಿನ ನಂತರ ಉಳಿದಿರುವ ಸೀಟುಗಳ ಆಯ್ಕೆ ಮಾಡಿ ಅವಕಾಶ ಕಲ್ಪಿಸಿದ KEA ದಂಡ ಪಾವತಿಸಿ ಅಭ್ಯರ್ಥಿಗಳು ಇಚ್ಚೆಯಂತೆ ಸೀಟು ರದ್ದುಪಡಿಸಿಕೊಳ್ಳಲು ಅವಕಾಶ ಡಿಸೆಂಬರ್ 19 ರ ಒಳಗೆ ರೂ. 5000 ಪಾವತಿಸಿ ಇಚ್ಚೆಯಂತೆ ಸೀಟು ರದ್ದುಪಡಿಸಿಕೊಳ್ಳಲು ಅವಕಾಶ ಈಗಾಗಲೇ ಸೀಟು ರದ್ದುಪಡಿಸಿಕೊಂಡಿರುವ ಅಭ್ಯರ್ಥಿಗಳಿಗೆ ರೂ.5000 ಕಡಿತಗೊಳಿಸಿ ಶುಲ್ಕ ಮರುಪಾವತಿಸಲು ಸೂಚನೆ ಕ್ಯಾಶುಯಲ್ ತೆರವು ಹಂತದ ಸುತ್ತಿನ ಸೀಟು ಹಂಚಿಕೆಯ ನಂತರ ಸೀಟು ರದ್ದುಪಡಿಸಿಕೊಂಡಲ್ಲಿ ಪೈನ್ ಕಟ್ಟಲು KEA ಆದೇಶ ಅಂತಹ ಅಭ್ಯರ್ಥಿಗಳು ಒಂದು ವರ್ಷದ ಶುಲ್ಕ ಮತ್ತು ಐದು ಪಟ್ಟು ಶುಲ್ಕವನ್ನು ದಂಡದ ರೂಪದಲ್ಲಿ ಪಾವತಿಸಲು ಸೂಚನೆ ಕ್ಯಾಶುಯಲ್‌ ತೆರವು ಹಂತದ ಸೀಟು ಹಂಚಿಕೆ ವೇಳಾಪಟ್ಟಿಗಾಗಿ ಪ್ರಾಧಿಕಾರದ…

Read More

ಕಲಬುರಗಿ: ಕಲಬುರಗಿಯ ಸೇಡಂ ಹೊರವಲಯದ ಕೋಡ್ಲಾ ರಸ್ತೆಯಲ್ಲಿ ಭವ್ಯವಾಗಿ ನಿರ್ಮಾಣವಾಗಿರುವ ಗುರು ರಾಘವೇಂದ್ರ ಸ್ವಾಮಿಗಳ ಮಠ ಇವತ್ತು ಲೋಕಾರ್ಪಣೆ ಆಗಲಿದೆ. ಈ ಹಿನ್ನಲೆ ಸೇಡಂ ಪಟ್ಟಣದಲ್ಲಿ ರಾತ್ರಿ ಭವ್ಯ ಶೋಭಾಯಾತ್ರೆ ನಡೆಯಿತು. ಮಂತ್ರಾಲಯದ 1008 ಶ್ರೀ ಸುಬುಧೇಂದ್ರ ಶ್ರೀಪಾದಂಗಳರವರ ಪುರಪ್ರವೇಶ ನಿಮಿತ್ಯ ನಡೆದ ಶೋಭಾಯಾತ್ರೆಯಲ್ಲಿ ನೂರಾರು ಭಕ್ತರು ಹಾಡು ಭಜನೆ ಮೂಲಕ ಶ್ರೀಗಳಿಗೆ ಸ್ವಾಗತ ಕೋರಿದ್ರು.. ರಾಯರ ಮಠದಲ್ಲಿ ಪ್ರತಿಷ್ಠಾಪಿಸಲಾದ ಮೃತ್ತಿಕಾ ಬೃಂದಾವನಕ್ಕೆ ಮಂತ್ರಾಲಯದ ಶ್ರೀಗಳು ಇವತ್ತು  ಪೂಜೆ ಸಲ್ಲಿಸಲಿದ್ದಾರೆ..ಪೂಜೆಗೆ ಮುನ್ನ ಅಭಿಷೇಕ ಅಲಂಕಾರ ವಸ್ತ್ರ ಸಮರ್ಪಣೆ ಸೇವೆಗಳು ನಡೆಯಲಿವೆ ಅಂತ ಮಠದ ಮೂಲಗಳು ತಿಳಿಸಿವೆ…

Read More

ಬೆಂಗಳೂರು: ವಂಟಮುರಿ ಮಹಿಳೆ ವಿವಸ್ತ್ರ ಪ್ರಕರಣದ ಬಗ್ಗೆ ಸರ್ಕಾರದ ವಿರುದ್ಧ ಮಾತನಾಡದೇ ಸುಮ್ಮನಿದ್ದಾರೆ ಎಂದು ರಾಜ್ಯ ಬಿಜೆಪಿ ನಾಯಕರ ಮೇಲೆ ಹೈಕಮಾಂಡ್‌ ಗರಂ ಆಗಿದೆ ವಂಟಮುರಿ ಮಹಿಳೆ ವಿವಸ್ತ್ರ ಕೇಸ್‌ ದೇಶಾದ್ಯಂತ ಸದ್ದು ಮಾಡುತ್ತಿದೆ. ಸರ್ಕಾರ ಹಾಗೂ ಬೆಳಗಾವಿ ಪೊಲೀಸರಿಗೆ ಹೈಕೋರ್ಟ್‌ ಛೀಮಾರಿ ಹಾಕಿದೆ. ಪ್ರಕರಣವನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಅಟ್ಯಾಕ್‌ ಮಾಡಲು ಬಿಜೆಪಿ ಮುಂದಾಗಿದೆ. ಇದುವರೆಗೂ ಏನನ್ನೂ ಮಾತನಾಡದ ರಾಜ್ಯ ನಾಯಕರಿಗೆ ಹೈಕಮಾಂಡ್‌ ಬಿಸಿ ಮುಟ್ಟಿಸಿದೆ https://ainlivenews.com/nandini-milk-yogurt-price-likely-to-increase-for-new-year/ ನಿಯಮ 69 ರಡಿ ನಡೆಯಲಿರುವ ಕಾನೂನು ಸುವ್ಯವಸ್ಥೆ ವೈಫಲ್ಯ ಕುರಿತ ಚರ್ಚೆ ವೇಳೆ ಒಗ್ಗಟ್ಟಿನ ವಾಗ್ದಾಳಿ ನಡೆಸಲು ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ಖಡಕ್ ಸೂಚನೆ ನೀಡಿದೆ. ಪ್ರಕರಣ ಬಗ್ಗೆ ಗಟ್ಟಿಯಾಗಿ ಪ್ರಸ್ತಾಪಿಸಿ ಸರ್ಕಾರಕ್ಕೆ ಚಾಟಿ ಬೀಸುವಂತೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೂಚನೆ ನೀಡಿದ್ದಾರೆ. ಇದುವರೆಗೆ ಸದನದಲ್ಲಿ ಈ ಪ್ರಕರಣದ ಬಗ್ಗೆ ಸರಿಯಾದ ಹೋರಾಟ ಮಾಡದಿರುವ ಬಿಜೆಪಿ ನಾಯಕರ ನಡೆಗೆ ನಡ್ಡಾ ಬೇಸರ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ವಂಟಮುರಿ ಮಹಿಳೆ ಮೇಲಿನ…

Read More

ಬೆಂಗಳೂರು: ಹೊಸ ವರ್ಷಕ್ಕೆ ನಂದಿನಿ ಹಾಲು, ಮೊಸರು ದರ ಹೆಚ್ಚಾಗುವ ಸಾಧ್ಯತೆಯಿದೆ. ಈ ಸಂಬಂಧ ಅಧಿವೇಶನದಲ್ಲಿ (Belagavi Session) ಸರ್ಕಾರ ದರ ಏರಿಸುವ ಸುಳಿವು ನೀಡಿದೆ. ಹಾಲಿನ ದರ ಏರಿಕೆ ಪ್ರಸ್ತಾಪ ಪರಿಶೀಲನೆಯಲ್ಲಿದೆ ಎಂದು ಸರ್ಕಾರ (Karnataka Government) ಹೇಳಿದೆ. ದರ ಹೆಚ್ಚಳ ಕುರಿತು ಮಾಲೂರು ಶಾಸಕ ಕೆ ವೈ ನಂಜೇಗೌಡ ಪ್ರಶ್ನೆಗೆ ಪಶು ಸಂಗೋಪನೆ ಖಾತೆ ಸಚಿವ ಕೆ ವೆಂಕಟೇಶ್ ಉತ್ತರ ನೀಡಿದ್ದಾರೆ. ಇತರೇ ಖಾಸಗಿ ಬ್ರ್ಯಾಂಡ್‌ಗಳ ದರಕ್ಕಿಂತ ನಂದಿನಿ ಬ್ರ್ಯಾಂಡ್‌ಗಳ ದರ 10-12 ರೂ. ಕಡಿಮೆ ಇದೆ. ಹಾಲು ಉತ್ಪಾದಕರು, ಒಕ್ಕೂಟಗಳು ನಷ್ಟದಲ್ಲಿದ್ದು, ಗ್ರಾಹಕರಿಗೆ ಹೊರೆಯಾಗದಂತೆ ದರ ಹೆಚ್ಚಿಸುವುದಾಗಿ ಉತ್ತರ ಕೊಟ್ಟಿದ್ದಾರೆ ಒಂದು ವೇಳೆ ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಂಡರೆ ನಾಲ್ಕೇ ತಿಂಗಳ ಒಳಗಡೆ ಮತ್ತೊಮ್ಮೆ ಹಾಲಿನ ದರ ಏರಿಕೆಯಾಗಲಿದೆ. ನಂದಿನಿ ಹಾಲಿನ ದರ ಪರಿಷ್ಕರಣೆಗೆ ಕರ್ನಾಟಕ ಹಾಲು ಮಾರಾಟ ಮಹಾಮಂಡಳ (KMF) ಈಗಾಗಲೇ ಚಿಂತನೆ ನಡೆಸಿದೆ. ಕೆಎಂಎಫ್ ಅಧಿಕಾರಿಗಳ ಮಟ್ಟದಲ್ಲಿ ದರ ಏರಿಕೆ ಕುರಿತು ಸದ್ಯ ಚಿಂತನೆ…

Read More

ಕೋಲಾರ : ಜಿಲ್ಲೆಯ ಮುಳಬಾಗಿಲು ತಾಲೂಕಿನ ಸುನುಪಕುಂಟೆ ಗ್ರಾಮದಲ್ಲಿ ಮಲಗಿದ್ದವರ ಮೇಲೆ ಮನೆಯ ಮೇಲ್ಚಾವಣಿ ಏಕಾಏಕಿ ಕುಸಿದು ಬಿದ್ದು, 7 ಮಂದಿಗೆ ಗಾಯಗೊಂಡಿದ್ದು , ಓರ್ವ ಬಾಲಕಿ ಸ್ಥಿತಿ ಚಿಂತಾಜನಕವಾದ ಘಟನೆ ಬೆಳಕಿಗೆ ಬಂದಿದೆ. ಶ್ರೀನಿವಾಸ್, ಹೇಮಶ್ರಿ, ಶಿವ, ಮಕ್ಕಳಾದ, ಮೇಘನಾ (6), ವೈಶಾಲಿ (7) ಶ್ರೀನಿವಾಸ್ ಸಂಬಂಧಿಕರಾದ ನಾಗಮ್ಮ, ಮುನಿವೆಂಕಟಮ್ಮ ಗಾಯಾಳುಗಳಾಗಿದ್ದಾರೆ. https://ainlivenews.com/faster-mohammad-shami-farm-house-tight-security/ ಓರ್ವ ಬಾಲಕಿ ಮೇಘನಾ ಸ್ಥಿತಿ ಗಂಭೀರವಾಗಿದೆ. ಕೂಡಲೇ ಅಸ್ವಸ್ಥಗೊಂಡವರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಶ್ರೀನಿವಾಸ್ ಮತ್ತು ಕುಟುಂಬ ಕಲ್ಲು ಚಪ್ಪಡಿ ಮನೆಯೊಂದರಲ್ಲಿ ಗಾಢ ನಿದ್ರೆಗೆ ಜಾರಿದ್ರು, ಮಲಗಿದ್ದ ವೇಳೆ ತಡರಾತ್ರಿ ಮೇಲ್ಚಾವಣಿ ಕುಸಿದುಗೊಂಡ ಈ ಅವಘಡ ನಡೆದಿದೆ. ಘಟನೆ ತಿಳಿದು ಸ್ಥಳಕ್ಕೆ ನಂಗಲಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More

ಬೆಂಗಳೂರು: ನಗರದಲ್ಲಿ ದಿನೇದಿನೆ ಡೆಂಗ್ಯೂ ಪ್ರಕರಣಗಳು ಏರುತ್ತಲೇ ಸಾಗಿದ್ದು, ಜನ ಹಾಗೂ ವೈದ್ಯರಲ್ಲಿ ಆತಂಕ ಹೆಚ್ಚಿಸಿದೆ. ಕೇವಲ ಒಂದೇ ತಿಂಗಳಲ್ಲೇ 1468ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದು, ಈವರೆಗೂ ಕೇವಲ ರಾಜ್ಯ ರಾಜಧಾನಿಯಲ್ಲಿ ಒಟ್ಟು 7800ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಒಟ್ಟು 15200ಕ್ಕೂ ಹೆಚ್ಚು ಪ್ರಕರಣಗಳು ಸಕ್ರಿಯವಾಗಿವೆ. ಇಲ್ಲಿಯವರೆಗೂ ಸುಮಾರು 2 ಲಕ್ಷಕ್ಕೂ ಹೆಚ್ಚು ಜನರ ಬ್ಲಡ್ ಸ್ಯಾಂಪಲ್‌ ಅನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದ್ದು, 80,000ಕ್ಕೂ ಹೆಚ್ಚು ಡೆಂಗ್ಯೂ ಸೋಂಕಿತರು ಪತ್ತೆಯಾಗಿದ್ದಾರೆ. https://ainlivenews.com/finding-and-murdering-the-embryo-which-created-a-lot-of-excitement-ta-sharavana-caught-the-attention-of-the-government/ ಬೆಂಗಳೂರಿನ ಬೊಮ್ಮನಹಳ್ಳಿ ವಲಯದಲ್ಲಿ 180 ಕೇಸ್, ದಾಸರಹಳ್ಳಿ ವಲಯದಲ್ಲಿ 3 ಕೇಸ್, ಮಹದೇವಪುರ ವಲಯದಲ್ಲಿ 182 ಕೇಸ್‌ ಹಾಗೂ ಯಲಹಂಕ ವಲಯದಲ್ಲಿ 144 ಕೇಸ್ ಪತ್ತೆಯಾಗಿದೆ. ಸಾರ್ವಜನಿಕರು ಹೆಚ್ಚು ಜಾಗೃತರಾಗಿರಬೇಕೆಂದು ವೈದ್ಯರು ಸೂಚಿಸಿದ್ದಾರೆ. ವಲಯವಾರು ಡೆಂಘಿ ಪ್ರಕರಣ ಬೊಮ್ಮನಹಳ್ಳಿ 182 ದಾಸರಹಳ್ಳಿ 3 ಪೂರ್ವ 343 ಮಹದೇವಪುರ 180 ಆರ್ ಆರ್ ನಗರ 149 ದಕ್ಷಿಣವಲಯ 299 ಪಶ್ಚಿಮವಲಯ 168 ಯಲಹಂಕವಲಯ 144 ನಗರದಲ್ಲಿ ಒಟ್ಟು 1,468 ಕೇಸ್…

Read More