ಚಿಕ್ಕಬಳ್ಳಾಪುರ: ರೈಲಿಗೆ ಸಿಕ್ಕಿ 80 ಕುರಿಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ-ಶಿಡ್ಲಘಟ್ಟ ರೈಲು ಮಾರ್ಗದ ಲಕ್ಕಹಳ್ಳಿ ಗ್ರಾಮದ ಬಳಿ ನಡೆದಿದೆ. ರೈಲ್ವೆ ಹಳಿಗಳ ಪಕ್ಕದಲ್ಲೇ ಕೂದಲಮ್ಮ, ಕೂದಲಪ್ಪ, ಹಾಗೂ ದೇವರಾಜ್ ಎಂಬುವವರು ಕುರಿಗಳನ್ನ ಮೇಯಿಸುತ್ತಿದ್ದ ವೇಳೆ ನಾಯಿಗಳು ದಾಳಿ ಮಾಡಿವೆ. ನಾಯಿಗಳ ದಾಳಿಯಿಂದ ಕುರಿಗಳು ಬೆದರಿ ರೈಲು ಬರುವ ಸಮಯಕ್ಕೆ ರೈಲ್ವೆ ಹಳಿಗಳ ಮೇಲೆ ನುಗ್ಗಿವೆ. ಹೈಸ್ಪೀಡ್‌ನಲ್ಲಿ ಬರುತ್ತಿದ್ದ ರೈಲಿಗೆ ಸಿಕ್ಕಿ 80 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ರೈಲ್ವೆ ಹಳಿಗಳ ಮೇಲೆ ರಾಶಿ ರಾಶಿ ಕುರಿಗಳು ಸಾವನ್ನಪ್ಪಿ ಬಿದ್ದಿವೆ. ಘಟನೆಯಲ್ಲಿ ಕುರಿಗಾಹಿ ಮಹಿಳೆ ಕೂದಲಮ್ಮ ಸಹ ಗಾಯಗೊಂಡಿದ್ದಾರೆ.
Author: AIN Author
ಬೆಳಗಾವಿ: ಟಿಪ್ಪು ಜಯಂತಿ ಆಚರಣೆ ಮಾಡಬೇಕು ಎಂದು ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಹೇಳಿದರು. ಬೆಳಗಾವಿ ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಟಿಪ್ಪು ಪರವಾಗಿ ಬ್ಯಾಟಿಂಗ್ ಮಾಡಿದರು. ಮೈಸೂರು ಏರ್ ಪೋರ್ಟ್‌ಗೆ ಟಿಪ್ಪು ಹೆಸರು ಇಡಬೇಕು ಎಂದು ಸದನಲ್ಲಿ ಪ್ರಸ್ತಾಪಿಸಿದ್ದೇನೆ. ಇದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಮುಸ್ಲಿಂ ರಾಷ್ಟ್ರೀಯ ನಾಯಕರನ್ನ ವಿರೋಧಿಸಿಕೊಂಡು ಬಂದಿದ್ದಾರೆ ಎಂದರು. ಟಿಪ್ಪು ಒಬ್ಬ ರಾಷ್ಟ್ರೀಯ ಪ್ರೇಮಿ. ಮೊದಲ ಸ್ವಾತಂತ್ರ್ಯ ಹೋರಾಟಗಾರರು. https://ainlivenews.com/mother-sells-her-daughter-for-rs-4-lakh-compulsion-to-engage-in-immoral-activity-by-an-intoxicated-person/ ಮೈಸೂರು ಆಂಗ್ಲೋ ಮೂರು ಯುದ್ದ ಮಾಡಿದವರು.ತಮ್ಮ ಮಗನನ್ನೇ ಒತ್ತೆ ಇಟ್ಟ ಇತಿಹಾಸವಿದೆ.ಆದ್ರೆ ಬಿಜೆಪಿಯವರು ಇತಿಹಾಸ ತಿರುಚುವ ಕೆಲಸ ಮಾಡ್ತಿದ್ದಾರೆ ಎಂದರು. ಯಾರು ಬ್ರಿಟಿಷ್‌ರಿಗೆ ಸೆರೆಂಡರ್ ಆಗಿದ್ರೋ ಯಾರು ಬ್ರಿಟಿಷ್‌ರಿಂದ ಪಿಂಚಣಿ ಪಡೆಯುತ್ತಿದ್ರೋ ಅವರನ್ನ ಬಿಜೆಪಿ ರಾಷ್ಟ್ರ ಪ್ರೇಮಿ ಎಂದು ಬಿಜೆಪಿ ಬಿಂಬಿಸಲು ಹೊರಟಿದೆ. ಪರೋಕ್ಷವಾಗಿ ಸಾವರ್ಕರ್ ಫೋಟೋ ಹಾಕಿದ್ದಕ್ಕೆ ಅಬ್ಬಯ್ಯ ಕಿಡಿಕಾರಿದರು.
ಮಂಗಳೂರು: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಹೈದರಾಬಾದ್ʼನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವ ವಿಜ್ಞಾನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಭರತ್ ಕಲ್ಲರ್ಪೆ (24) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಪುತ್ತೂರಿನ ಕಲ್ಲರ್ಪೆ ನಿವಾಸಿಯಾಗಿದ್ದ. DRDO ಹೈದರಾಬಾದ್ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ. ತಾತ್ಕಾಲಿಕ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ. https://ainlivenews.com/mother-sells-her-daughter-for-rs-4-lakh-compulsion-to-engage-in-immoral-activity-by-an-intoxicated-person/ ಎರಡು ತಿಂಗಳ ಹಿಂದೆಯಷ್ಟೇ ಉದ್ಯೋಗಕ್ಕೆ ಭರತ್ ಸೇರಿಕೊಂಡಿದ್ದ. ಕಳೆದ ಒಂದು ವಾರದ ಹಿಂದೆ ಊರಿಗೆ ಬಂದಿದ್ದ. ಸಂಸ್ಥೆಗೆ ರಾಜೀನಾಮೆ ಪತ್ರ ನೀಡಿದ್ದರೂ ರಾಜೀನಾಮೆ ಸ್ವೀಕಾರ ಮಾಡಿರಲಿಲ್ಲ. ನಿನ್ನೆ ರಾತ್ರಿ DRDO ಕಚೇರಿಯಿಂದ ಫೋನ್ ಬಂದಿತ್ತು. ಆ ಬಳಿಕ ಇಂದು (ಶುಕ್ರವಾರ) ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಇಡೀ ವಾರ ಬಿಗ್‌ಬಾಸ್ ಮನೆಯ ಸದಸ್ಯರು ಶಾಲೆಯಲ್ಲಿ ಮಕ್ಕಳಾಗಿ ನಲಿದಿದ್ದರು. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಹೊರತುಪಡಿಸಿದರೆ, ಯಾವುದೇ ಜಗಳಗಳಿಲ್ಲದೆ, ಅನಾಹುತಗಳಿಲ್ಲದೆ ಸುವ್ಯವಸ್ಥಿತವಾಗಿಯೇ ಕಳೆಯಿತು. ಇನ್ನೇನು ಇದೇ ರೀತಿ ಈ ವಾರ ಸುಖಾಂತ್ಯವನ್ನು ಕಾಣಲಿದೆ ಎನ್ನುವ ಹೊತ್ತಿಗೇ ಬಿಗ್‌ಬಾಸ್ ಮನೆಯಲ್ಲಿ ಕೋಲಾಹಲವೆದ್ದಿದೆ… ‘ಆಲ್ರೆಡಿ ಅವ್ರೆಲ್ಲ ರಾಕ್ಷಸರಾಗ್ತಿದಾರೆ’ ಎಂದು ತುಕಾಲಿ ಸಂತೋಷ್ ಕಳವಳದಿಂದ ಕ್ಯಾಮೆರಾ ಎದುರು ನಿಂತು ಅಲವತ್ತುಕೊಳ್ಳುತ್ತಿದ್ದಾರೆ. ಹಾಗಾದ್ರೆ ನಿಜಕ್ಕೂ ನಡೆದಿದ್ದೇನು? ಮನೆಯೊಳಗೆ ನಡೆದಿದ್ದರ ಸಣ್ಣ ಸುಳಿವು ಇಂದು JioCinemaಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಸಿಕ್ಕಿದೆ. ರಾಗಿ ಹಿಟ್ಟನ್ನು ನೋಡಿ, ಪ್ರತಾಪ್‌ಗೆ ಯಾಕೋ ಮುದ್ದೆ ತಿನ್ನುವ ಮನಸ್ಸಾಗಿದೆ. ‘ಯಾರಿಗೆಲ್ಲ ಮುದ್ದೆ ಬೇಕು?’ ಎಂದು ಮನೆಯ ಸದಸ್ಯರನ್ನು ಕೇಳಿದ್ದಾರೆ. ಕಾರ್ತಿಕ್, ‘ತಿಂತೀನಿ ಕಣೋ ಮಾಡೋ’ ಎಂದು ಪ್ರತಾಪ್‌ಗೆ ಪ್ರೋತ್ಸಾಹ ಕೊಟ್ಟಿದ್ದಾರೆ. ತುಕಾಲಿ ಅವರೂ, ‘ಮಾಡೋದ್ ಮಾಡ್ತಿದೀಯಾ. ಸ್ವಲ್ಪ ದಪ್ಪ ಮಾಡೋ’ ಎಂದು ಕೇಳಿದ್ದಾರೆ. ಪ್ರತಾಪ್ ಉತ್ಸಾಹದಿಂದಲೇ ಎಲ್ಲರಿಗೂ ಮುದ್ದೆ ಮಾಡಿ ಬಡಿಸಿದ್ದಾರೆ. ಎಲ್ಲರೂ ಖುಷಿಯಿಂದ ತಿಂದಿದ್ದಾರೆ ಕೂಡ. ಆದರೆ ಮಧ್ಯದಲ್ಲಿ ಎಲ್ಲೋ ತಾಳ ತಪ್ಪಿದೆ. ಮನೆಯ…
ಬೆಂಗಳೂರು: ಬಿಎಂಟಿಸಿ ಡ್ರೈವರ್ಗಳೆಂದ್ರೆ ಅವರು ಯಮದೂತರೆನ್ನೋ ಕಳಂಕವಿದೆ. ಅವರ ಯಾವಾಗಲೂ ಸುದ್ದಿಯಾಗದೇ ಆಕ್ಸಿಡೆಂಟ್ ಗಳಿಂದ. ಹೀಗಾಗಿ ಬಿಎಂಟಿಸಿಗೆ ಕಿಲ್ಲರ್ ಬಸ್ ಅನ್ನೋ ಹಣೆಪಟ್ಟಿ ಅಂಟಿದೆ. ಆದ್ರೆ ಇದೀಗ ಈ ಅಪವಾದಿಂದ ಮುಕ್ತವಾಗುವದಕ್ಕೆ ಹೆಜ್ಜೆ ಇರಿಸಿದೆ. ನಗರದಲ್ಲಿ ಹೆಚ್ಚಾಗ್ತಿರೋ ಆಕ್ಸಿಡೆಂಟ್ ರೇಟ್ ಇಳಿಸಲು ಇದೀಗ ಬಿಎಂಟಿಸಿಗೆ ಗುದ್ದು ನೀಡಲು ಪೊಲೀಸ್ ಇಲಾಖೆ ಮಧ್ಯೆ ಪ್ರವೇಶ ಮಾಡಿದೆ. ಅದು ಹೇಗೆ ಅಂತೀರಾ. ಈ ಸ್ಟೋರಿ.. ಬಿಎಂಟಿಸಿ ಬೆಂಗಳೂರು ನಗರದ ಜೀವನಾಡಿ. ಮೆಟ್ರೋ ಶುರುವಾದ್ರೂ ನಗರದಲ್ಲಿ ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ ಇಳಿಯಾಗಿಲ್ಲ. ನಗರದ ರಸ್ತೆ ರಸ್ತೆಯಲ್ಲೂ ಬಿಎಂಟಿಸಿ ಬಸ್ ಗಳು ಓಡಾಟ ನಡೆಸುತ್ತವೆ. ಬೆಂಗಳೂರಿನ ಟ್ರಾಫಿಕ್ ದಟ್ಟನೆಯಲ್ಲಿ ಓಡಾಟದ ವೇಳೆ ಈ ಬಿಎಂಟಿಸಿ ಬಸ್ ಗಳು ನೆಗಟಿವ್ ಕಾರಣಕ್ಕೆ ತುಂಬಾನೆ ಸುದ್ದಿ ಮಾಡ್ತಾವೆ. ಯಾವಾಗಲೂ ಬಿಎಂಟಿಸಿ ಡ್ರೈವರ್ ಗಳು ಸರಿಯಿಲ್ಲ, ಸರಿಯಾಗಿ ಡ್ರೈವ್ ಮಾಡಲ್ಲ, ರ್ಯಾಶ್ ಡ್ರೈವಿಂಗ್ ಮಾಡ್ತಾರೆ ಅನ್ನೋ ಸಾಲು ಸಾಲು ಆರೋಪ ಜನ ಮಾಡ್ತಾರೆ. ಮುಖ್ಯವಾಗಿ ನಗರದಲ್ಲಿ ಬಿಎಂಟಿಸಿ ಬಸ್ ಗಳು ಆಕ್ಸಿಡೆಂಟ್…
ಬೆಂಗಳೂರು: ಇದು ಪವಾಡವೋ? ಚರಿತ್ರೆಯೋ? ಮರು ಜನ್ಮವೋ? ಯಾಕಂದ್ರೆ ಅಂತಹದೊಂದು ಘಟನೆ ನಡೆದಿದೆ. ತಲೆಗೆ ಗುಂಡು ಹೊಕ್ಕಿ 18 ವರ್ಷ ಕಳೆದವನಿಗೆ ನಗರದ ಆಸ್ಪತ್ರೆಯಲ್ಲಿ ಮರುಜನ್ಮ ಸಿಕ್ಕಿದೆ. ಈ ಕುರಿತ ವರದಿ ಇಲ್ಲಿದೆ. ಕಿವಿ ಕೇಳಿಸುತ್ತಿರಲಿಲ್ಲ, ಭಾಷೆ ಬರ್ತಿರ್ಲಿಲ್ಲ. ಅಲೆಯದ ಆಸ್ಪತ್ರೆ ಇಲ್ಲ..ಭೇಟಿಯಾಗದ ವೈದ್ಯರಿಲ್ಲ.ನೋವು ಅನುಭವಿಸದ ದಿನಗಳಿಲ್ಲ…ಇದು 18 ವರ್ಷಗಳ ಕಾಲ ಯಾತನೆ ಅನುಭವಿಸಿ ಸಾವಿನ ಮನೆಯಿಂದ ಹೊರ ಬಂದವನ ಸ್ಟೋರಿ. ಯೆಮನ್ ಪ್ರಜೆಗೆ ನಗರದ ಆಸ್ಪತ್ರೆಯಲ್ಲಿ ಮರುಜನ್ಮ ಸಿಕ್ಕ ಕಹಾನಿ. ತಲೆಗೆ ಗುಂಡು ಹೊಕ್ಕಿ 18 ವರ್ಷ ಕಳೆದವನಿಗೆ ಬೆಂಗಳೂರಿನ ಆಸ್ಟರ್ ಆಸ್ಪತ್ರೆ ಮರು ಜನ್ಮ ಕೊಟ್ಟಿದೆ. ಬದುಕಿನುದ್ದಕ್ಕೂ ನರಕ ಯಾತನೆ ಕಟ್ಟಿಟ್ಟ ಬುತ್ತಿ ಅಂದುಕೊಂಡು ದಿನ ದೂಡುತ್ತಿದ್ದ ಅಮಾಯಕ ವ್ಯಕ್ತಿಯ ಬಾಳಿಗೆ ಹೊಸ ಹುರುಪು ಸಿಕ್ಕಿದೆ. ಇನ್ನೇನು ಜೀವನ ಮುಗಿದೇ ಹೋಯಿತು, ಬದುಕು ಕ್ಷಣಿಕ ಅಂದುಕೊಂಡವನಿಗೆ ಬೆಂಗಳೂರು ವೈದ್ಯರು ದೇವರಾಗಿ ಬಂದು ಜೀವ ಉಳಿಸಿದ್ದಾರೆ. ಇದು ಪವಾಡವೋ? ಚರಿತ್ರೆಯೋ? ಮರು ಜನ್ಮವೋ? ಗೊತ್ತಿಲ್ಲ. ಆದರೆ ನಮ್ಮ ಹೆಮ್ಮೆಯ ಬೆಂಗಳೂರಿನ…
ಚಿತ್ರದುರ್ಗ: ಮಾಜಿ ಸಚಿವ ಹೆಚ್. ಏಕಾಂತಯ್ಯ ಅವರು ಮುರುಘಾ ಮಠದಿಂದ ನಿರ್ಮಾಣ ಮಾಡುತ್ತಿರುವ ಕಂಚಿನ ಬಸವ ಪುತ್ಥಳಿ ಅನುದಾನದಲ್ಲಿ ದುರುಪಯೋಗವಾಗಿದೆ ಎಂದು ಜಿಲ್ಲಾಧಿಕಾರಿಗೆ ದೂರು ನೀಡಿದ್ದು, ಇದರಲ್ಲಿ ಯಾವುದೇ ದುರುಪಯೋಗವಾಗಿಲ್ಲ ಎಂದು ಮಠದ ಉಸ್ತುವಾರಿಗಳಾದ ಬಸವಪ್ರಭು ಶ್ರೀಗಳು ಸ್ಪಷ್ಟನೆ ನೀಡಿದರು. ಅವರು ಮುರುಘಾ ಮಠದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು. ಮುರುಘಾ ಮಠದಲ್ಲಿ ನಿರ್ಮಾಣವಾಗುತ್ತಿರುವ 320 ಅಡಿಗಳ ಬಸವ ಪುತ್ಥಳಿ ಯಲ್ಲಿ ದುರಪಯೋಗವಾಗಿದೆ ಎಂದು ಅವರು ಆರೋಪಿಸಿರುವುದು ಯಾವುದೋ ದ್ವೇಷದಿಂದ ಮಾಡಿದ್ದಾರೆ. ಜಿಲ್ಲೆ ಅಭಿವೃದ್ದಿಯಾಗುವುದು ಅವರಿಗೆ ಬೇಡವಾಗಿದೆ ಅನಿಸುತ್ತದೆ. ದುರಪಯೋಗವಾಗಿದೆ ಎಂಬ ದೂರಿನ ಮೇರೆಗೆ ಜಿಲ್ಲಾಧಿಕಾರಿ ಐದು ಜನರ ಸಮಿತಿಯೊಂದನ್ನು ರಚಿಸಿದ್ದಾರೆ. ಅವರು ತನಿಖೆ ನಡೆಸಲು ಬಂದಾಗ ಅವರಿಗೆ ಎಲ್ಲಾ ರೀತಿಯ ದಾಖಲೆಗಳನ್ನು ಕೊಡಲು ನಾವು ಸಿದ್ದರಿದ್ದೇವೆ. 25ಕೋಟಿ ಹಣ ಖರ್ಚಾಗಿದೆ. 10 ಕೋಟಿ ಬ್ಯಾಂಕಿನಲ್ಲಿದೆ. ಈ ಹಣದಲ್ಲಿ ಮತ್ತೆ ಕಾಮಗಾರಿ ಆರಂಭವಾಗುತ್ತದೆ . ಏಕಾಂತಯ್ಯ ಅವರು ಸುಮ್ಮನೆ ಆರೋಪಗಳನ್ನು ಮಾಡುತ್ತಿದ್ದು, ಯಾವುದೇ ತನಿಖೆ ಎದುರಿಸಲು ಸಿದ್ದರಿದ್ದೇವೆ. ಇದರ ಬಗ್ಗೆ ಕಾನೂನಿ ಹೋರಾಟ…
ಕಲಬುರಗಿ: ಸರ್ಕಾರಿ ಬಸ್ ಮತ್ತು ಆಟೋ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.. ಜೇವರ್ಗಿ ರಸ್ತೆಯ ಸೆಂಟ್ರಲ್ ಜೈಲ್ ಬಳಿ ಘಟನೆ ನಡೆದಿದ್ದು ರಾಯಚೂರಿನಿಂದ ಕಲಬುರಗಿ ಕಡೆ ಬಸ್ ಬರ್ತಿತ್ತು ಎನ್ನಲಾಗಿದೆ. ಸ್ಥಳಕ್ಕೆ ಸಂಚಾರಿ ಠಾಣೆ ಪೋಲೀಸ್ರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ..
ಬೆಂಗಳೂರು: 9 ಸಾವಿರ ಸಾರಿಗೆ ಸಿಬ್ಬಂದಿ ನೇಮಕಾತಿ ಮಾಡಲಿದ್ದೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡಿರುವ ಅವರು, 2016ರ ನಂತರ ಸಿಬ್ಬಂದಿ ನೇಮಕಾತಿ ಆಗಲಿಲ್ಲ. ಪ್ರಯಾಣಿಕರಿಗೆ ಗುಣಮಟ್ಟದ ಸಂಚಾರ ಸೌಲಭ್ಯ ಒದಗಿಸುವ ಉದ್ದೇಶದಿಂದ 9 ಸಾವಿರ ಸಿಬ್ಬಂದಿ ನೇಮಕಾತಿ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ. ಶಕ್ತಿ ಯೋಜನೆಯಿಂದ ನಮ್ಮ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ 15 ರಿಂದ 20 ಲಕ್ಷ ಹೆಚ್ಚಾಗಿದೆ. 4 ವರ್ಷ ಸತತವಾಗಿ ಬಸ್ ಖರೀದಿ ಮಾಡಿಲ್ಲ. ಫೆಬ್ರವರಿ ಕೊನೆ ವೇಳೆಗೆ 5,500 ಬಸ್ ಬರಲಿವೆ ಎಂದು ಹೇಳಿದ್ದಾರೆ. ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆ ಕುರಿತು ಶಾಸಕ ಬಿ.ವೈ ವಿಜಯೇಂದ್ರ ಪೋಸ್ಟ್ ವಿಚಾರವಾಗಿ ಮಾತನಾಡಿ, ವಿಜಯೇಂದ್ರ ಅವರು ತುಮಕೂರಿನ ವಿದ್ಯಾರ್ಥಿಗಳ ಬಸ್ ಸಮಸ್ಯೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದರು. ಶಾಲಾ ಮಕ್ಕಳಿಗೆ ತೊಂದರೆ ಆಗದಂತೆ ಮಾಡ್ತಿದ್ದೇವೆ. ಜನವರಿ, ಫೆಬ್ರವರಿಯಲ್ಲಿ ಹೊಸ ಬಸ್ ಗಳು ಬರಲಿವೆ. ಜೊತೆಗೆ ಡ್ರೈವರ್, ಕಂಡಕ್ಟರ್ ಗಳ ನೇಮಕಾತಿ ಕೂಡ ಆಗಲಿದೆ ಎಂದು ತಿಳಿಸಿದ್ದಾರೆ. ಈಗಿನ ಸಮಸ್ಯೆಗಳಿಗೆ ಹಿಂದಿನ ಬಿಜೆಪಿ ಸರ್ಕಾರ ಕಾರಣ. ಹಿಂದೆ ನೇಮಕಾತಿ ಮಾಡಿರಲಿಲ್ಲ. ಈಗ…
ಹುಬ್ಬಳ್ಳಿ: ಇಲ್ಲಿಯ ಮೂರುಸಾವಿರ ಮಠದ ಶಾಲೆ ಆವರಣದಲ್ಲಿ ಹುಬ್ಬಳ್ಳಿ ಆಕಾಶ ಬುಟ್ಟಿ ಹಬ್ಬವನ್ನು ಡಿ. 16ರಂದು ಸಂಜೆ 5ಗಂಟೆಗೆ ಏರ್ಪಡಿಸಲಾಗಿದೆ ಎಂದು ಆಯೋಜಕಕ ರಾಜು ಜರತಾರಘರ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸುವರು. ಮೂರುಸಾವಿರಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕ ಮಹೇಶ ಟೆಂಗಿನಕಾಯಿ ಸೇರಿದಂತೆ ಇತರ ನಾಯಕರು ಆಗಮಿಸುವರು ಎಂದರು. ಸತತ ಮೂರು ವರ್ಷ ಈ ಹಬ್ಬವನ್ನು ಎಲ್ಲರೂ ಸೇರಿ ಆಚರಿಸಿದ್ದೇವೆ. ಇದು ನಾಲ್ಕನೇ ವರ್ಷ. ಈ ವರ್ಷ ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಿಶೇಷ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದರು. ಈಗಾಗಲೇ 10 ಶಾಲೆಗಳಲ್ಲಿ ಮಕ್ಕಳಿಗೆ ಆಕಾಶ ಬುಟ್ಟಿ ತಯಾರಿಸುವ ಸ್ಪರ್ಧೆ ನಡೆದಿದೆ. ಬೆಂಕಿಯಿಲ್ಲದೇ ಅಡುಗೆ ತಯಾರಿಸುವುದು, ಮಕ್ಕಳಿಗೆ ಆನ್‌ಲೈನ್ ಶ್ಲೋಕ ಅಥವಾ ಮಂತ್ರ ಪಠಣ, ವೇಷಭೂಷಣ, ಕೇಶವಿನ್ಯಾಸ ಸ್ಪರ್ಧೆ ಆಯೋಜಿಸಲಾಗಿದೆ. ಗೆದ್ದವರಿಗೆ ನಗದು ಬಹುಮಾನ ನೀಡಲಾಗುವುದು. 10 ಲಕ್ಕಿ ಡ್ರಾ ಕೂಪನ್ ಬಹುಮನವನ್ನೂ ಕೊಡಲಾಗುತ್ತಿದೆ ಎಂದರು. ಬಿಜೆಪಿ ರಾಜ್ಯ ಶಿಸ್ತು ಸಮಿತಿ…