ದೇಶದ ಪ್ರಮುಖ ಯುಪಿಐ ಪ್ಲಾಟ್ಫಾರ್ಮ್ ಫೋನ್ಪೇ ಶೀಘ್ರದಲ್ಲೇ ಸಾಲದ ಸೇವೆಯನ್ನು ಪ್ರಾರಂಭಿಸಲಿದೆ ಎಂದು ವರದಿಯಾಗಿದೆ. ಜನವರಿ 2024ರಿಂದ ಈ ಸೇವೆ ಗ್ರಾಹಕರಿಗೆ ಲಭ್ಯವಾಗಲಿದೆ. ಇದಕ್ಕಾಗಿ, ಕಂಪನಿಯು ಸುಮಾರು 5 ಬ್ಯಾಂಕ್ಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳೊಂದಿಗೆ (ಎನ್ಬಿಎಫ್ಸಿ) ಮಾತುಕತೆಗಳನ್ನು ಬಹುತೇಕ ಅಂತಿಮಗೊಳಿಸಿದೆ. ವಾಲ್ಮಾರ್ಟ್ ಮಾಲೀಕತ್ವದ ಫೋನ್ಪೇ ವಿತರಕ ಸಂಸ್ಥೆಯಾಗಿ ಸಾಲ ವಿತರಣೆ ಮಾಡಲಿದೆ. ಇದರಿಂದ ಫೋನ್ಪೇ ಯುಪಿಐ ಅಪ್ಲಿಕೇಶನ್ ಬಳಸುವ 50 ಕೋಟಿಗೂ ಹೆಚ್ಚು ಗ್ರಾಹಕರು ಮತ್ತು 3.7 ಕೋಟಿ ಸಣ್ಣ ಮತ್ತು ದೊಡ್ಡ ಉದ್ಯಮಿಗಳಿಗೆ ಪ್ರಯೋಜನವಾಗಲಿದೆ. ಡಿಜಿಟಲ್ ಪಾವತಿ ವಲಯದಲ್ಲಿ ಬಲವಾದ ಹಿಡಿತ ಸಾಧಿಸಿರುವ ಫೋನ್ಪೇ ಈಗ ಹೊಸ ಹೊಸ ವಲಯಗಳನ್ನು ಪ್ರವೇಶಿಸಲು ಸಾಧ್ಯತೆಗಳನ್ನು ಪರಿಶೀಲಿಸುತ್ತಿದೆ. ಐದು ಬ್ಯಾಂಕ್ಗಳು ಮತ್ತು ಎನ್ಬಿಎಫ್ಸಿಗಳು ಫೋನ್ಪೇ ಪ್ಲಾಟ್ಫಾರ್ಮ್ಗೆ ಬರಲು ಒಪ್ಪಿಕೊಂಡಿವೆ. ಶೀಘ್ರದಲ್ಲೇ ಕಂಪನಿಯು ಈ ಬಗ್ಗೆ ಘೋಷಣೆ ಮಾಡಲಿದೆ. ಸುಮಾರು 6 ತಿಂಗಳಲ್ಲಿ ಫೋನ್ಪೇನಲ್ಲಿ ಜನರಿಗೆ ಹಲವು ರೀತಿಯ ಉತ್ಪನ್ನಗಳು ಲಭ್ಯವಾಗಲಿವೆ. ಪ್ರಸ್ತುತ ಕಂಪನಿಯು ತನ್ನ ಗ್ರಾಹಕರ ಡೇಟಾಬೇಸ್ನಿಂದ ವಿವಿಧ ರೀತಿಯ ಸಾಲಗಳಿಗೆ…
Author: AIN Author
ದಾವಣಗೆರೆ:- ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುವ ವಿಚಾರಕ್ಕೆ ಮಾಜಿ ಶಾಸಕ MP ರೇಣುಕಾಚಾರ್ಯ ವಿರೋಧ ವ್ಯಕ್ತಪಡಿಸಿದ್ದಾರೆ. ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರು ಇಡಲು ಮುಂದಾದರೆ ಬಿಜೆಪಿ ಜೊತೆ ರಾಜ್ಯದ ಜನರೂ ಕೂಡ ರೊಚ್ಚಿಗೇಳ್ತಾರೆ, ಕ್ರಾಂತಿ ಆಗುತ್ತೆ” ಅಂತ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಇನ್ನು ಬಿಜೆಪಿಯ ಹಲವು ನಾಯಕರು ಟಿಪ್ಪು ನಾಮಕರಣ ವಿರೋಧಿಸಿದ್ದು, ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪುಸುಲ್ತಾನ್ ಹೆಸರಿಡಲು ವಿರೋಧವಿದೆ. ಈ ಮೈಸೂರು ಎನ್ನುವುದು ಮಹಾರಾಜರು ಆಳಿದಂತಹ ಪವಿತ್ರ ಭೂಮಿ. ಆದರೆ ಟಿಪ್ಪು ಒಬ್ಬ ಮತಾಂದ, ದೇಶದ್ರೋಹಿ, ಹಿಂದುಗಳ ಪವಿತ್ರ ದೇವಾಲಯ ನಿರ್ನಾಮ ಮಾಡಿದವನು. ಹಿಂದೂಗಳನ್ನು ಮುಸ್ಲಿಂ ಆಗಿ ಮತಾಂತರ ಮಾಡಿದ ಮತಾಂಧ ಟಿಪ್ಪು ಹೆಸರಿಡಲು ಕಾಂಗ್ರೆಸ್ನ ಕೆಲ ನಾಯಕರು ಹೇಳಿದ್ದಾರೆ. ಇದಕ್ಕೆ ಬಿಜೆಪಿ ವಿರೋಧ ಇದೆ ಎಂದಿದ್ದಾರೆ.
ರಾಜ್ಯದ ರೈತರಿಗೆ ಬರ ಪರಿಹಾರವಾಗಿ ರೂ.2,000 ಮೊದಲ ಕಂತಿನ ಬೆಳೆನಷ್ಟ ಪರಿಹಾರಧನವನ್ನು ಈ ವಾರವೇ ರೈತರ ಖಾತೆಗಳಿಗೆ ನೇರ ವರ್ಗಾವಣೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಈಗಾಗಲೇ ಬರ ಪರಿಹಾರ ಕಾರ್ಯ ಜೋರಾಗಿ ನಡೆದಿದ್ದು, ಸದ್ಯ ರಾಜ್ಯದ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಪರಿಣಾಮ ರೈತಾಪಿ ವರ್ಗ ಬೆಳೆ ಕಳೆದುಕೊಂಡು ಸಾಕಷ್ಟು ಸಂಕಷ್ಟದಲ್ಲಿದೆ. ರೈತರ ಸಾಲ ಮರುಪಾವತಿಗೆ ಒತ್ತಡ ಹೇರದಂತೆ ಬ್ಯಾಂಕ್ ಗಳಿಗೆ ನಿರ್ದೇಶನ ನೀಡಲು ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅವರು ಬೆಳಗಾವಿಯ ಸುವರ್ಣಸೌಧದ ಕಚೇರಿಯಲ್ಲಿ ಮಾಧ್ಯಮಗಳಿಗೆ ತಿಳಿಸಿದರು. ಜಿಲ್ಲೆಯ ರೈತ ಸಂಘಟನೆಗಳ ಪ್ರತಿನಿಧಿಗಳು ಇಂದು ಕೃಷಿ ಸಚಿವರನ್ನು ಭೇಟಿ ಮಾಡು ತಮ್ಮ ಅಹವಾಲುಗಳನ್ನು ನೀಡಿದರು, ಈ ಸಂದರ್ಭದಲ್ಲಿ ಅವರುಗಳೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಕಾನೂನಿನ ಪರಿಮಿತಿ ಹಾಗೂ ಸಂಪನ್ಮೂಲಗಳ ಲಭ್ಯತೆ ಆಧಾರದ ಮೇಲೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಕೃಷಿ…
ದಕ್ಷಿಣ ಭಾರತದ ಖ್ಯಾತನಟಿ, ಮಂಗಳೂರು ಮೂಲದ ಪೂಜಾ ಹೆಗ್ಡೆಗೆ (Pooja Hegde) ಕೊಲೆ ಬೆದರಿಕೆ ಹಾಕಲಾಗಿದೆ ಎನ್ನುವ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಕ್ಲಬ್ ವೊಂದರ ಉದ್ಘಾಟನೆಗೆ ಪೂಜಾ ದುಬೈಗೆ (Dubai) ಹಾರಿದ್ದರಂತೆ. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ನಟಿ ಜಗಳ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಹಾಗಾಗಿ ಅಲ್ಲಿಂದಲೇ ಕೊಲೆ ಬೆದರಿಕೆ (Death Threats) ಬಂದಿದೆ ಎನ್ನುವುದು ಸಮಾಚಾರದ ಸಾರ. ದುಬೈನಲ್ಲಿ ಗಲಾಟೆಯಾದರೂ, ಅಲ್ಲಿದ್ದಾಗ ಯಾವುದೇ ಬೆದರಿಕೆಯೂ ಬಂದಿರಲಿಲ್ಲವಂತೆ. ದುಂಬೈನಿಂದ ವಾಪಸ್ಸು ಭಾರತಕ್ಕೆ ಬಂದಾಗ ಕರೆ ಮಾಡಿ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ವರದಿ ಆಗಿದೆ. ಈ ಸುದ್ದಿ ಸಾಕಷ್ಟು ವೈರಲ್ ಕೂಡ ಆಗಿದೆ. ಈ ಸುದ್ದಿಗೆ ಸ್ವತಃ ಪೂಜಾ ಅವರೇ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. ದುಬೈಗೆ ಹೋಗಿದ್ದು ನಿಜ. ಕ್ಲಬ್ ಉದ್ಘಾಟನೆಗಾಗಿ ಅಲ್ಲಿಗೆ ಹೋಗಿದ್ದೆ. ಆದರೆ, ಈ ಸಂದರ್ಭದಲ್ಲಿ ಯಾವುದೇ ಗಲಾಟೆ ಆಗಿಲ್ಲ. ಅಲ್ಲದೇ, ನನಗೆ ಕೊಲೆ ಬೆದರಿಕೆ ಕೂಡ ಬಂದಿಲ್ಲ. ಇದು ಯಾರೋ ಸೃಷ್ಟಿಸಿದ ಸುಳ್ಳು ಸುದ್ದಿಯಾಗಿದೆ ಎಂದಿದ್ದಾರೆ ಪೂಜಾ. ಈ…
ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ (MS Dhoni) ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿ ಈಗಾಗಲೇ 3 ವರ್ಷ ಕಳೆದಿದೆ. ಈಗ ಅವರ ನಂ.7 ಜೆರ್ಸಿಯನ್ನೂ ನಿವೃತ್ತಗೊಳಿಸಲು ನಿರ್ಧರಿಸಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ತಿಳಿಸಿದೆ. ಭಾರತ ಕ್ರಿಕೆಟ್ ಕಂಡ ಯಶಸ್ವಿ ನಾಯಕರಲ್ಲಿ ಧೋನಿ ಅಗ್ರಗಣ್ಯರು. ಭಾರತ ತಂಡಕ್ಕೆ ಮೂರು ಐಸಿಸಿ (ICC) ಟ್ರೋಫಿ ಗೆಲ್ಲಿಸಿಕೊಟ್ಟ ಏಕೈಕ ನಾಯಕ. ಅವರ ಸಾಧನೆಗೆ ಸಮಾನಾರ್ಥಕವಾಗಿದೆ ಜೆರ್ಸಿ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ನಂ. 10 ಶರ್ಟ್ ಕೂಡ ಈಗಾಗಲೇ ಭಾರತೀಯ ಮಂಡಳಿಯಿಂದ ನಿವೃತ್ತಿ ಹೊಂದಿದೆ. ಅಂತೆಯೇ ಭಾರತ ತಂಡಕ್ಕೆ ಧೋನಿ ನೀಡಿದ ಕೊಡುಗೆಯನ್ನು ಗೌರವಿಸಿ ನಂ. 7 ಜೆರ್ಸಿಯನ್ನು ಆ ಪಟ್ಟಿಗೆ ಸೇರಿಸಲು ನಿರ್ಧರಿಸಲಾಗಿದೆ ಭಾರತೀಯ ಜೆರ್ಸಿ ಧರಿಸುವಾಗ 10 ನೇ ಶರ್ಟ್ ಅನ್ನು ಆಯ್ಕೆ ಮಾಡಲು ಯಾರಿಗೂ ಅವಕಾಶವಿಲ್ಲ. ಹಾಗೆಯೇ ಭಾರತೀಯ ತಂಡದಲ್ಲಿರುವ ಆಟಗಾರರು ನಂಬರ್ 7 ಜೆರ್ಸಿ ಧರಿಸುವಂತಿಲ್ಲ ಎಂದು ಬಿಸಿಸಿಐ ಹೇಳಿದೆ. ಯುವ…
ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಬಗ್ಗೆ ಅನೇಕ ಕಡೆ ಚರ್ಚೆಯಾಗುತ್ತಿದೆ. ಅನೇಕರು ಟೈಟಲ್ ಟೀಸರ್ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಹಿರಿಯ ನಟಿ ಶಿವರಾಜ್ ಕುಮಾರ್ (Shivaraj Kumar) ಕೂಡ ಟೈಟಲ್ ಟೀಸರ್ ಬಗ್ಗೆ ಮಾತನಾಡಿದ್ಧಾರೆ. ಯಶ್ ಅವರ ಬೆಳವಣಿಗೆ ನೋಡ್ತಾ ಇದ್ದರೆ ನನ್ನ ತಮ್ಮನೇ ಬೆಳೆಯುತ್ತಿದ್ದಾನೆ ಅನಿಸುತ್ತಿದೆ ಎಂದು ಹೇಳಿದ್ದಾರೆ. ಈ ಮೂಲಕ ಅಪ್ಪು ಅವರನ್ನೂ ಶಿವರಾಜ್ ಕುಮಾರ್ ನೆನಪಿಸಿಕೊಂಡಿದ್ದಾರೆ. ಒಂದು ನಿಮಿಷ ಹದಿನೆಂಟು ಸೆಕೆಂಡ್ನ ‘ಟಾಕ್ಸಿಕ್‘ (Toxic Film) ವಿಡಿಯೋ ಸೈಕ್ ಮಾಡ್ತಿದೆ. ಪ್ರತಿ ಬಾರಿ ಈ ಟೈಟಲ್ ಟೀಸರ್ನ ನೋಡಿದಾಗ ಹೊಸದೊಂದು ಅನುಭವ ಕೊಡ್ತಿದೆ. ಅಷ್ಟೋಂದು ವಿಷಗಳನ್ನ ಈ ಪುಟ್ಟ ವಿಡಿಯೋದಲ್ಲಿ ಅಡಗಿಸಲಾಗಿದೆ. ಈ ಟೀಸರ್ನಲ್ಲಿ ರ್ಯಾಪ್ ಮಾಡಿರೋದು ಯಾರು? ಮ್ಯೂಸಿಕ್ ಕೊಟ್ಟವರು ಯಾರು? ಡಿಸೈನರ್ ಯಾರು ಅನ್ನೋ ಹಲವಾರು ಪ್ರಶ್ನೆಗಳು ಅಭಿಮಾನಿಗಳು ಕೇಳ್ತಿದ್ದಾರೆ. ಕಾಯಿಸಿಸತಾಯಿಸಿ ಯಶ್ ಅದ್ಬುತವಾದ ಕಂಟೆಂಟ್ನ ಜನರ ಮುಂದಿಟ್ಟಿದ್ದಾರೆ. ಡಿಸೆಂಬರ್ 8ರಂದು ರಿಲೀಸ್ ಆದ ‘ಟಾಕ್ಸಿಕ್‘ ಟೈಟಲ್ ಟೀಸರ್ ಗಂಟೆಗಳಲ್ಲಿ…
ಧಾರವಾಡ:- ಸಚಿವೆ ಲಕ್ಷ್ಮಿ ಹೆಬ್ಬಾಳಕರ ಮೆರವಣಿಗೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ನಿಯಮ ಉಲ್ಲಂಘನೆ ಮಾಡಲಾಗಿದೆ. ಬಿ.ಆರ್.ಟಿ.ಎಸ್ ಕಾರಿಡಾರ್ನಲ್ಲಿ ಅನಧಿಕೃತ ಪ್ರವೇಶ ಮಾಡಿ, ಕಾರಿಡಾರ್ನಲ್ಲಿಯೇ ಕಾರ್ಯಕರ್ತರು ಬೈಕ್ ರ್ಯಾಲಿ ಮಾಡಿದ್ದಾರೆ. ಲೋಕಸಭೆ ಚುನಾವಣೆ ಟಿಕೆಟ್ ಆಕಾಂಕ್ಷಿಗಳ ಸಭೆಗೆ ಲಕ್ಷ್ಮೀ ಹೆಬ್ಬಾಳಕರ್ ಬಂದಿದ್ದು, ಈ ವೇಳೆ ನಿಯಮಗಳ ಉಲ್ಲಂಘನೆ ಮಾಡಲಾಗಿದೆ. ಹುಬ್ಬಳ್ಳಿ-ಧಾರವಾಡ ಮಧ್ಯೆ ಇರುವ ಬಿ.ಆರ್.ಟಿ.ಎಸ್ ಕಾರಿಡಾರ್ ನಲ್ಲಿ, ಚಿಗರಿ ಬಸ್ ಮತ್ತು ಅಂಬ್ಯುಲೆನ್ಸ್ ಓಡಾಡಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಆದರೆ ಕಾರಿಡಾರ್ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅನಧಿಕೃತ ಪ್ರವೇಶ ಮಾಡಿದ್ದಾರೆ. ಧಾರವಾಡದ ಮಯೂರ ಹೊಟೇಲ್ಗೆ ಸಭೆ ನಡೆಸಲು ಆಗಮಿಸಬೇಕಿದ್ದ ಹೆಬ್ಬಾಳಕರ, ಈ ವೇಳ ಟೋಲ್ ನಾಕಾದಲ್ಲಿ ಬೃಹತ್ ಹಾರ ಹಾಕಿ ಸ್ವಾಗತ ಮಾಡಿದ್ದಾರೆ. ಬಳಿಕ ಬಿ.ಆರ್.ಟಿ.ಎಸ್ ಕಾರಿಡಾರ್ನಲ್ಲೇ ನಡೆದ ಬೈಕ್ ರ್ಯಾಲಿ ನಡೆದಿದೆ. ರ್ಯಾಲಿ ಮೂಲಕ ಮಯೂರ ಹೊಟೇಲ್ವರೆಗೆ ಕಾರ್ಯಕರ್ತರು ಕರೆ ತಂದಿದ್ದಾರೆ.
ಬೆಂಗಳೂರು ಗ್ರಾಮಾಂತರ: ಕರ್ನಾಟಕ ಸರ್ಕಾರ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಜನ ಸಾಮಾನ್ಯರ ಅನುಕೂಲಕ್ಕಾಗಿ ‘ಮಾಂಗಲ್ಯ ಭಾಗ್ಯ’ ಎಂಬ ಯೋಜನೆಯ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮವನ್ನ 2024ರ ಜನವರಿ 31ರ ಬೆಳಗ್ಗೆ 11:20 ರಿಂದ 12:20ರವರೆಗೆ ಅಭಿಜಿನ್ ಲಗ್ನದಲ್ಲಿ ಆಯೋಜಿಸಲಾಗಿದೆ. ಮಾಂಗಲ್ಯ ಭಾಗ್ಯ ಶುಭ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವರನಿಗೆ 5 ಸಾವಿರ ಹಾಗೂ ವಧುವಿಗೆ 10 ಸಾವಿರ ಸೇರಿದಂತೆ ಚಿನ್ನದ ತಾಳಿ, ಎರಡು ಚಿನ್ನದ ಗುಂಡು ಹೀಗೆ ಒಟ್ಟು 55 ಸಾವಿರ ರೂ.ಗಳನ್ನ ದೇವಾಲಯದ ವತಿಯಿಂದ ಭರಿಸಲಾಗುವುದು. ಅದೇ ರೀತಿ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸುವ ವಧು-ವರರು ಮತ್ತು ಅವರ ಬಂಧುಗಳಿಗೆ ಊಟೋಪಚಾರ ವ್ಯವಸ್ಥೆಯನ್ನು ಸಹ ದೇವಾಲಯ ವತಿಯಿಂದ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ: 9590300410, 9241297450, 9980907997ನ್ನು ಸಂಪರ್ಕಿಸಬಹುದಾಗಿದೆ. ಮಾಂಗಲ್ಯ ಭಾಗ್ಯ ಕಾರ್ಯಕ್ರಮದಲ್ಲಿ ಭಾಗವಹಿಸುವ ವಧು-ವರರು ಅರ್ಜಿಯನ್ನು ದೇವಾಲಯದ ಕಾರ್ಯನಿರ್ವಾಹ ಕಚೇರಿಯಲ್ಲಿ ಪಡೆದು ಜನವರಿ 20ರೊಳಗಾಗಿ ಸೂಕ್ತ…
ಪಾದರಕ್ಷೆ, ಚಪ್ಪಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಮನೆಯಲ್ಲಿ ಶನಿಯ ಅಶುಭ ಪ್ರಭಾವವಿದೆ. ವಾಸ್ತವವಾಗಿ, ಶನಿಗೂ ಪಾದಗಳಿಗೂ ಸಂಬಂಧಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಪಾದಗಳಿಗೆ ಸಂಬಂಧಿಸಿದ ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ಸ್ಥಳದಲ್ಲಿ ಇಡಬೇಕು. ವಾಸ್ತು ಶಾಸ್ತ್ರದ ಪ್ರಕಾರ, ಅಸ್ತವ್ಯಸ್ತವಾಗಿ ಬೂಟುಗಳು ಮತ್ತು ಚಪ್ಪಲಿಗಳನ್ನು ಮನೆಯ ಹೊರಗೆ ಇಡುವುದರಿಂದ ನಕಾರಾತ್ಮಕ ಶಕ್ತಿಯು ಸಕ್ರಿಯಗೊಳ್ಳುತ್ತದೆ. ಆದ್ದರಿಂದ ಅವುಗಳನ್ನು ಯಾವಾಗಲೂ ವ್ಯವಸ್ಥಿತವಾಗಿ ಯಾವುದಾದರೂ ಮೂಲೆಯಲ್ಲಿ ಇಡಬೇಕು. ಪಾದರಕ್ಷೆಗಳನ್ನು ಯಾವ ದಿಕ್ಕಿನಲ್ಲಿಡಬೇಕು?: ಪದೇ ಪದೇ ಬಳಸುವ ಶೂ ಮತ್ತು ಚಪ್ಪಲಿಗಳನ್ನು ಪಶ್ಚಿಮ ದಿಕ್ಕಿನಲ್ಲಿ ವ್ಯವಸ್ಥಿತವಾಗಿ ಇಡಬೇಕು. ಮನೆಯಲ್ಲಿ ಹಳೆಯ ಶೂ ಮತ್ತು ಚಪ್ಪಲಿಗಳನ್ನು ಇಡುವುದರಿಂದ ನಕಾರಾತ್ಮಕ ಶಕ್ತಿಯು ಹುಟ್ಟಿಕೊಳ್ಳುತ್ತದೆ. ಇದರ ಹೊರತಾಗಿ ಮಾನಸಿಕ ಮತ್ತು ಆರ್ಥಿಕ ಸಮಸ್ಯೆಗಳು ಮನೆಯಿಂದ ಹೊರಹೋಗುವುದೇ ಇಲ್ಲ. ಸದಾ ಕಾಲ ಇದರಿಂದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಶೂ ರ್ಯಾಕ್ ಈ ದಿಕ್ಕಿನಲ್ಲಿಡಬೇಡಿ: ಶೂ ರ್ಯಾಕ್ ಅನ್ನು ಎಂದಿಗೂ ಪೂಜೆ ಕೋಣೆಯ ಗೋಡೆ ಅಥವಾ ಅಡುಗೆಮನೆಯ ಪಕ್ಕದಲ್ಲಿ ಇಡಬಾರದು. ಇದರೊಂದಿಗೆ, ಶೂ ರ್ಯಾಕ್ ಅಥವಾ ಕಪಾಟುಗಳನ್ನು ಮನೆಯ…
ಧಾರವಾಡ :- 2024 ರ ಲೋಕಸಭೆ ಚುನಾವಣೆ ಟಿಕೆಟ್ ಆಕಾಂಕ್ಷಿಗಳ ಜೊತೆ ಧಾರವಾಡದ ಮಯೂರ ಹೊಟೇಲ್ನಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ವೀಕ್ಷಕೆ ಲಕ್ಷ್ಮೀ ಹೆಬ್ಬಾಳಕರ ಸಭೆ ನಡೆಸಿದರು. ಸಭೆ ಆಗುವುದಕ್ಕೂ ಮುನ್ನ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಸಭೆ ಈಗಾಗಲೇ ಆಗಬೇಕಾಗಿತ್ತು. ಗೃಹ ಲಕ್ಷ್ಮಿ ಯೋಜನೆಯಲ್ಲಿ ನಾನು ಬ್ಯುಸಿಯಾಗಿದ್ದೆ ನಾನು ಉಡುಪಿಯ ಉಸ್ತುವಾರಿಯೂ ಹೌದು. ಬೆಳಗಾವಿಗೆ ಹೋಗಲು ವಾರಕ್ಕೆ ಎರಡು ದಿನ ಸಿಗ್ತಾ ಇತ್ತು. ಹೀಗಾಗಿ ಧಾರವಾಡಕ್ಕೆ ಬರೋದಕ್ಕೆ ಸ್ವಲ್ಪ ತಡ ಆಗಿದೆ . ಡಿ. 30ರೊಳಗೆ ಆಕಾಂಕ್ಷಿಗಳ ಪಟ್ಟಿ ಕೊಡಬೇಕಿದೆ. ಈ ಸಂಬಂಧ ನನಗೆಸೂಚನೆ ಕೊಟ್ಟಿದ್ದಾರೆ. ಈ ಭಾಗದ ಶಾಸಕರು, ಸಚಿವರೊಂದಿಗೆ ಮಾತನಾಡಿಕೊಳ್ಳಬೇಕಿದೆ. ಆಕಾಂಕ್ಷಿಗಳೆಲ್ಲ ಖುದ್ದಾಗಿ ಭೇಟಿಯಾಗಿ ಅರ್ಜಿ ಕೊಡಬೇಕು . ಅಲ್ಪಸಂಖ್ಯಾತರದ್ದು ಇಡೀ ರಾಜ್ಯದಲ್ಲಿ 3 ಕ್ಷೇತ್ರದ ಬೇಡಿಕೆ ಇದೆ. ಎಲ್ಲವನ್ನೂ ಪಕ್ಷದ ಅಧ್ಯಕ್ಷರಿಗೆ ವರದಿ ಮಾಡುತ್ತೇನೆ. ಧಾರವಾಡದಿಂದ ಅಲ್ಪಸಂಖ್ಯಾತರು ಯಾರು ಅರ್ಜಿ ಸಲ್ಲಿಸಿಲ್ಲ. ನಾನು ಈಗ ಎಲ್ಲ ಮುಖಂಡರೊಂದಿಗೆ ಸಭೆ ಮಾಡ್ತೀನಿ ಎಂದರು.