ಕಾಸರಗೋಡು: ಕೇರಳ ರಾಜ್ಯ ಮಟ್ಟದ ಶಾಲಾ ಕ್ರೀಡಾಕೂಟದ ಟೆಕ್ವಾಂಡೋದಲ್ಲಿ ಚಿನ್ನದ ಪದಕ ಗೆದ್ದು, (Taekwondo) ಕನ್ನಡತಿ ಎನ್. ಗಣ್ಯ ರಾಷ್ಟ್ರೀಯ ಶಾಲಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಕಾಸರಗೋಡು (Kasaragod) ಜಿಲ್ಲೆಯ ಎಡನೀರು ಸ್ವಾಮೀಜಿಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ಲಸ್ ಒನ್ ವಿದ್ಯಾರ್ಥಿನಿಯಾಗಿರುವ ಗಣ್ಯ, 17 ವರ್ಷದೊಳಗಿನ ಬಾಲಕಿಯರ 50-65 ಕೆಜಿ ವಿಭಾಗದಲ್ಲಿ ಮಿಂಚಿದರು. ಗಣ್ಯ ಸಾಧನೆಯಿಂದಾಗಿ ಕಾಸರಗೋಡು ಜಿಲ್ಲೆ ಸೀನಿಯರ್ ಹಾಗೂ ಜೂನಿಯರ್ ಟೆಕ್ವಾಂಡೋ (Junior Taekwondo) ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ಗೆದ್ದಿದೆ. ಆರ್‌ಎಸ್‌ಸಿ ಎರ್ನಾಕುಳಂನಲ್ಲಿ (Ernakulam) ನಡೆದ ಕೇರಳ ರಾಜ್ಯ ಮಟ್ಟದ ಶಾಲಾ ಕ್ರೀಡಾಕೂಟದ ಗೆಲುವಿನೊಂದಿಗೆ ಗಣ್ಯ ಮಧ್ಯಪ್ರದೇಶದಲ್ಲಿ ನಡೆಯುವ ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ. ಸ್ ಒನ್ ವಿಜ್ಞಾನ ವಿಭಾಗದಲ್ಲಿ (PCMB) ವಿದ್ಯಾಭ್ಯಾಸ ಮಾಡುತ್ತಿರುವ ಗಣ್ಯ ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದು, ಯೋಗಾಭ್ಯಾಸದಲ್ಲೂ ಸಾಧನೆ ಮಾಡಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಾಸರಗೋಡು ಯೋಧ ಟೆಕ್ವಾಂಡೋ ಅಕಾಡೆಮಿಯಲ್ಲಿ ಜಯನ್ ಪೊಯಿನಾಚಿ ಅವರಿಂದ ಗಣ್ಯ ತರಬೇತಿ ಪಡೆದಿದ್ದಾರೆ. ಖಾಸಗಿ ಸಂಸ್ಥೆಯೊಂದರಲ್ಲಿ ಮ್ಯಾನೇಜರ್…
Author: AIN Author
ಕೇರಳ: ಶುಕ್ರವಾರ ಸಂಜೆ ಕೇರಳದಲ್ಲಿ ಭೀಕರ ರಸ್ತೆ ಅಪಘಾತಗಳು ಸಂಭವಿಸಿದೆ. ಕರ್ನಾಟಕದಿಂದ ಶಬರಿಮಲೆಗೆ ತೆರಳುತ್ತಿದ್ದ ಬಸ್‌ಗೆ ಆಟೋ ಡಿಕ್ಕಿಯಾಗಿ ಐದು ಜನ ಸಾವನ್ನಪ್ಪಿರುವ ಘಟನೆ ಕೇರಳದ ಮಲಪ್ಪುರಂನಲ್ಲಿ ನಡೆದಿದೆ. ಕರ್ನಾಟಕದಿಂದ ಶಬರಿಮಲೆಗೆ ತೆರಳುತ್ತಿದ್ದ ಬಸ್‌ಗೆ ಚಾಲಕನ ನಿಯಂತ್ರಣ ತಪ್ಪಿ ಆಟೋ ಡಿಕ್ಕಿಯಾಗಿದೆ. ಅಪಘಾತದ ಭೀಕರತೆಗೆ ಆಟೋದಲ್ಲಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಟೋ ಡ್ರೈವರ್ ಅಬ್ದುಲ್ ಮಜೀದ್, ಪ್ರಯಾಣಿಕರಾದ ಮುಹ್ಸಿನಾ, ಥಸ್ನೀಮ್, ರಿಯಾಜ್ ಹಾಗೂ ಗುರು ಸಿಗದ ಇನ್ನಿಬ್ಬರು ಘಟನೆಯಲ್ಲಿ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರನ್ನು ಕೂಡಲೇ ಆ್ಯಂಬುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಮಲಪ್ಪುರಂನಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಬರಿಮಲೆಯ ಅವ್ಯವಸ್ಥೆ ನಡುವೆಯೇ ಶಬರಿಮಲೆಯತ್ತ ತೆರಳುತ್ತಿರುವ ಭಕ್ತರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಶಬರಿಮಲೆಯ ಮಾರ್ಗದಲ್ಲಿ ವಾಹನ ದಟ್ಟಣೆ ಕೂಡ ಹೆಚ್ಚಾಗುತ್ತಿದೆ, ವಾಹನ ಚಾಲಕರು ಜಾಗರೂಕತೆಯಿಂದ ವಾಹನ ಚಲಾಯಿಸಬೇಕಿದೆ. ಶಬರಿಮಲೆ ದೇವಸ್ಥಾನದಿಂದ ಸುಮಾರು ಮುನ್ನೂರು ಕೋಟಿ ರೂಪಾಯಿ ಆದಾಯ ಬಂದರೂ ಕೂಡ ಕೇರಳ ಸರ್ಕಾರ ಇಲ್ಲಿ…
ಬೆಂಗಳೂರು:- ರಸ್ತೆ ಮದ್ಯೆ ಹುಚ್ಚಾಟ ಮೆರೆದಿದ್ದ ಯುವಕರ ತಂಡದ ವಿರುದ್ದ ಚಿಕ್ಕಜಾಲ ಸಂಚಾರಿ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಏರ್ಪೋರ್ಟ್ ರಸ್ತೆಯಲ್ಲಿ ಕಾರ್ ರೂಫ್ ಮೇಲೆ ಹತ್ತಿ ಯುವಕರ ತಂಡ ಡ್ಯಾನ್ಸ್ ಮಾಡಿದ್ದರು. ಚಲಿಸುತ್ತಿರುವ ಕಾರಿನ ಮೇಲೆ ಬಟ್ಟೆ ಕಳಚಿ ಡ್ಯಾನ್ಸ್ ಮಾಡುತ್ತಿದ್ದರು. ನಾಲ್ವರು ಯುವಕರಿಂದ ನಡು ರಸ್ತೆಯಲ್ಲಿ ಪುಂಡಾಟ ತೋರಲಾಗಿತ್ತು. DL 3cba9775 ನಂಬರಿನ ಕಾರಿನಲ್ಲಿ ಪುಂಡಾಟ ನಡೆಸಲಾಗಿತ್ತು. ಕುಡಿದ ಅಮಲಿನಲ್ಲಿ ಕಾರಿನ ರೂಫ್ ಹತ್ತಿ ಪುಂಡಾಟ ಶಂಕೆ ವ್ಯಕ್ತವಾಗಿದೆ. ಎನ್ ಹೆಚ್ 7 ಏರ್ ಪೋರ್ಟ್ ರಸ್ತೆಯಲ್ಲಿ ನಡೆದಿದ್ದ ಘಟನೆ ಜರುಗಿದೆ. ಇದನ್ನ ಪೊಲೀಸರಿಗೆ ಸಾರ್ವಜನಿಕರು ಟ್ಯಾಗ್ ಮಾಡಿ ಪ್ರಶ್ನಿಸಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಚಿಕ್ಕಜಾಲ ಸಂಚಾರಿ ಪೊಲೀಸರು, ಇಂಡಿಯನ್ ಮೊಟಾರ್ ಸೈಕಲ್ ಆ್ಯಕ್ಟ್ ಅಡಿ ಪ್ರಕರಣ ದಾಖಲು ಮಾಡಿದ್ದಾರೆ.
ಬೆಂಗಳೂರು:- ಅರ್ಧ ಬೆಲೆಗೆ ದುಬೈ ಕರೆನ್ಸಿ ಕೊಡ್ತಿನಿ ಅಂತ ಕಲರ್ ಜೆರಾಕ್ಸ್ ಪೇಪರ್ ಕೊಡ್ತಿದ್ದ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ದೆಹಲಿ ಮೂಲದ ಇಮ್ರಾನ್ ಶೇಕ್ ಬಂಧಿತ ಆರೋಪಿ. ಈತನ ಜೋಡಿ ರುಕ್ಸಾನ ಎಸ್ಕೇಪ್ ಆಗಿದ್ದಾರೆ. ಆರೋಪಿಗಳು, ದುಬೈ ಕರೆನ್ಸಿ ಧಿರಾಮ್ ಎಂದು ನಂಬಿಸಿ ಕಲರ್ ಜೆರಾಕ್ಸ್ ಕೊಡುತ್ತಿದ್ದರು. ಈ ಕಿಲಾಡಿ ಜೋಡಿ, ಉದ್ಯಮಿಗಳನ್ನ ಪರಿಚಯ ಮಾಡಿಕೊಳ್ಳುತ್ತಿದ್ದ. ನಮ್ಮತ್ರ ಸಾಕಷ್ಟು ದುಬೈ ಕರೆನ್ಸಿ ಇದೆ ಆದ್ರೆ ಎಲ್ಲಾ ಕರೆನ್ಸಿನಾ ಎಕ್ಸ್ ಚೇಂಜ್ ಮಾಡೋದು ಕಷ್ಟ ಎನ್ನುತ್ತಿದ್ದರು. ಒಂದು ಧಿರಾಮ್ ಗೆ 22-25 ರೂಪಾಯಿ ಆಗುತ್ತೆ. ಆದರೆ ಕಿಲಾಡಿಗಳು 12 ರೂಪಾಯಿ ಕೊಟ್ರೆ ಧಿರಾಮ್ ಕೊಡ್ತಿವಿ ಎಂದು ನಂಬಿಸುತ್ತಿದ್ದರು. ಉದ್ಯಮಿಗಳನ್ನು ನಂಬಿಸಲು ಒಂದು ಅಸಲಿ ಕರೆನ್ಸಿ ಕೊಟ್ಟು ಚೆಕ್ ಮಾಡಿಕೊಳ್ಳಿ ಅಂತ ಬಿಡ್ತಿದ್ರು. ಯಾಮಾರಿದವರು ಹಣ ರೆಡಿ ಮಾಡಿಕೊಂಡು ಕರೆನ್ಸಿ ಎಕ್ಸ್ ಚೇಂಜ್ ಗೆ ಮುಂದಾಗ್ತಿದ್ರು.ನಂತರ ಆರೋಪಿ ಶೇಕ್ ಹಣ ಪಡೆದು ಜೆರಾಕ್ಸ್ ನೋಟ್ ಕೈಗಿಟ್ಟು ಎಸ್ಕೇಪ್ ಆಗ್ತಿದ್ದ. ಸದ್ಯ ಆರೋಪಿ ಇಮ್ರಾನ್ ಶೇಕ್…
ಬೆಂಗಳೂರು:- ಬೆಂಗಳೂರಿನ ಉದ್ಯಮಿಗಳಿಗೆ ಕರವೆ ನಾರಾಯಣ ಗೌಡ ಬಣ ಎಚ್ಚರಿಕೆ ಕೊಟ್ಟಿದೆ. ಬೆಂಗಳೂರಿನಲ್ಲಿ ಅನ್ಯಭಾಷೆ ನಾಮ ಫಲಕ ಹೆಚ್ಚಾದ ಹಿನ್ನೆಲೆ ಹೋರಾಟಕ್ಕೆ ಕರವೇ ಮುಂದಾಗಿದೆ. ಡಿಸೆಂಬರ್ 27ರೊಳಗೆ ಕನ್ನಡ ನಾಮಫಲಕ ಅಳವಡಿಸುವಂತೆ ಕರವೆ ಆಗ್ರಹಿಸಿದ್ದಾರೆ. ಕನ್ನಡ ನಾಮಪಲಕ ಅಳವಡಿಸದಿದ್ದಲ್ಲಿ ಬೃಹತ್ ಹೋರಾಟದ ಎಚ್ಚರಿಕೆ ನೀಡಲಾಗಿದೆ. ಡಿಸೆಂಬರ್ 27ರಂದು ಬೆಂಗಳೂರಿನಾದ್ಯಂತ ಕರವೇ ಬೃಹತ್ ಹೋರಾಟ ನಡೆಸಲಿದೆ. ಕರವೇ ನಾರಾಯಣ ಗೌಡ ಬಣದಿಂದ ಎಲ್ಲಾ ಅಂಗಡಿ ,ಹೋಟೆಲ್ ,ಮಾಲ್ ಗಳಿಗೆ ಎಚ್ಚರಿಕೆ ಸಂದೇಶ ನೀಡಲಾಗಿದೆ.
ಬೆಂಗಳೂರು:- ಉದ್ಯಮಿಯನ್ನ ಟ್ರಾಪ್ ಮಾಡಿದ್ದ ಹನಿಟ್ರ್ಯಾಪ್ ಗ್ಯಾಂಗ್ ಅನ್ನು ಸಿಸಿಬಿ ಪೊಲೀಸು ಅರೆಸ್ಟ್ ಮಾಡಿದ್ದಾರೆ. ಖಲೀಮ್, ಸಭಾ, ಓಬೆದ್ ರಕೀಮ್, ಅತೀಕ್ ಬಂಧಿತ ಆರೋಪಿಗಳು.. ಅತೀವುಲ್ಲಾ ಎಂಬ ಉದ್ಯಮಿಯನ್ನ ಆರೋಪಿಗಳು ಟ್ರ್ಯಾಪ್ ಮಾಡಿದ್ದರು. ಬಂಧಿತ ಆರೋಪಿಗಳಲ್ಲಿ ಖಲೀಮ್ ಮತ್ತು ಸಭಾ ಇಬ್ಬರೂ ಗಂಡ ಹೆಂಡತಿ.. ಅತೀವುಲ್ಲಾಗೆ ಪತ್ನಿ ಸಭಾಳನ್ನ ವಿಧವೆ ಅಂತಾ ಖಲೀಮ್ ಪರಿಚಯ ಮಾಡಿಸಿಕೊಟ್ಟಿದ್ದ. ಪರಿಚಯ ಮಾಡಿಸಿ ಆಕೆಯನ್ನ ನೋಡಿಕೊಳ್ಳುವಂತೆ ಹೇಳಿದ್ದ.. ನಂತರ ಸಭಾ ಮತ್ತು ಅತೀವುಲ್ಲಾ ನಡುವೆ ದೈಹಿಕ ಸಂಪರ್ಕ ನಡೆದಿತ್ತು.. ಕೆಲ ದಿನಗಳ ನಂತರ ಆರ್ ಆರ್ ನಗರದಲ್ಲಿ ರೂಮ್ ಬುಕ್ ಮಾಡಲು ಸಭಾ ಕರೆದಿದ್ದ. ಆಧಾರ್ ಕಾರ್ಡ್ ಜೊತೆ ಬಾ ಎಂದು ಅತೀವುಲ್ಲಾಗೆ ಕರೆದಿದ್ಳು. ರೂಮ್ ಬುಕ್ ಮಾಡಿ ಕೆಲ ಹೊತ್ತಲ್ಲೇ ಆರೋಪಿಗಳು ಎಂಟ್ರಿ ಕೊಟ್ಟಿದ್ದಾರೆ. ಏಕಾಏಕಿ ಎಂಟ್ರಿ ಕೊಟ್ಟು ಆರೋಪಿಗಳು ಸೀನ್ ಕ್ರಿಯೇಟ್ ಮಾಡಿದ್ದರು. ಖಲೀಮ್, ರಕೀಬ್, ಅತೀಕ್ ರಿಂದ ಸೀನ್ ಕ್ರಿಯೇಟ್ ಮಾಡಿದ್ದಾರೆ. ಇಜ ವಿಚಾರ ನಿಮ್ಮ ಮನೆಯವ್ರಿಗೆ ಹೇಳ್ತೀವಿ ಅಂತಾ ಆರು…
ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 9 ಚಿನ್ನಾಭರಣ ಮಳಿಗೆ ಮೇಲೆ ನಡೆದ ಐಟಿ ದಾಳಿ ಅಂತ್ಯವಾಗಿದೆ. ಚಿನ್ನದ ವ್ಯಾಪಾರಿ ಓರ್ವರಿಗೆ ಸೇರಿದ ಮನೆಯಲ್ಲಿ ಕಳೆದ ಮೂರು ದಿನಗಳಿಂದ ಐಟಿ ಅಧಿಕಾರಿಗಳು ನಡೆಸಿದ ಶೋಧ ಅಂತ್ಯವಾಗಿದೆ. ಐಟಿ ಅಧಿಕಾರಿಗಳು ಜಯನಗರ 3ನೇ ಬ್ಲಾಕ್ನ 8ನೇ ಮುಖ್ಯರಸ್ತೆಯಲ್ಲಿರುವ ಆಭೂಷಣ ಮಳಿಗೆ, ಪೊಲ್ಕಿಸ್, ಮಂಗಳ, ರಿದ್ದಿ, ತಿರುಮಲ ಸೇರಿದಂತೆ 9 ಮಳಿಗೆ ಮೇಲೆ ದಾಳಿ ನಡೆಸಿದ್ದರು ಜಯನಗರ 2ನೇ ಬ್ಲಾಕ್ನಲ್ಲಿರುವ ಆಭೂಷಣ ಮಳಿಗೆ ಮಾಲೀಕನ ಫ್ಲ್ಯಾಟ್ ಮೇಲೂ ಐಟಿ ದಾಳಿ ನಡೆದಿತ್ತು. ಕಳೆದ ಮೂರು ದಿನಗಳಿಂದ ಐಟಿ ಅಧಿಕಾರಿಗಳು ಶೋಧ ನಡೆಸುತ್ತಿದ್ದರು. ಸದ್ಯ ಮೂರು ದಿನಗಳ ಪರಿಶೀಲನೆ ತಡ ರಾತ್ರಿ 2ಗಂಟೆಗೆ ಅಂತ್ಯವಾಗಿದೆ. ಹಲವು ಮಹತ್ವದ ದಾಖಲೆಗಳು, ರಶೀದಿ ಇನ್ವಾಯ್ಸ್ ಪರಿಶೀಲಿಸಲಾಗಿದೆ. ಆದಾಯ ತೆರಿಗೆ ವಂಚನೆ ಆರೋಪ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ನಗರದಲ್ಲಿ ಐಟಿ ರೇಡ್ ನಡೆಯುತ್ತಿದೆ. ಅಂಗಡಿ, ಶೋರೂಂ, ಮಾಲೀಕರ ಮನೆಯಲ್ಲಿ ಐಟಿ ಶೋಧ ಮಾಡುತ್ತಿದೆ. ಇದೀಗ ಆಭೂಷಣ ಚಿನ್ನದ ಅಂಗಡಿಯ ಮಾಲೀಕನ…
ಬೆಂಗಳೂರು:- ಕೋರ್ಟ್ ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಮಂಜುನಾಥ್ ಬಂಧಿತ ಆರೋಪಿ. ಹತ್ಯೆ, ಕೊಲೆಯತ್ನ, ವಾಹನಗಳಿಗೆ ಬೆಂಕಿ ಹಚ್ಚಿದ ಪ್ರಕರಣಗಳಲ್ಲಿ ಆರೋಪಿಯಾಗಿರುವ ಮಂಜುನಾಥ್ ಕಳೆದ ಆರೇಳು ತಿಂಗಳುಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಕೊನೆಗೆ ಬೆಂಗಳೂರು, ಮಾಗಡಿ, ಕುಣಿಗಲ್ ಮಾರ್ಗದ ಬಸ್‌ಗಳಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಸಂಪಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಹುಬ್ಬಳ್ಳಿ,: ನಗರದ ಬೆಂಡಿಗೇರಿಯಲ್ಲಿನ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹ ಮಾಡಿದ್ದ 1635 ಗ್ರಾಂ ಗಾಂಜಾ ವನ್ನು ಬೆಂಡಿಗೇರಿ ಪೊಲೀಸರು ವಶಪಡಿಸಿಕೊಂಡು, ಇಬ್ಬರನ್ನು ಬಂಧಿಸಿದ ಘಟನೆ ನಡೆದಿದೆ. ಅಂದಾಜು 40 ಸಾವಿರ ರೂ. ಮೌಲ್ಯದ ಗಾಂಜಾ ಇದಾಗಿದೆ. ಅಖಿಲೇಶ್ ಯರಮಸಾಳ, ಪ್ರಭು ಗೆಜ್ಜೆಹಳ್ಳಿ ಬಂಧಿತ ಆರೋಪಿಗಳು. ಇನ್ನು ಮನೆ ಪರಿಶೀಲನೆ ವೇಳೆ ಅಖಿಲೇಶ್ ಯರಮಸಾಳ ಬಳಿಯಿದ್ದ 1250 ಗ್ರಾಂ ಗಾಂಜಾ ಹಾಗೂ ಕಬ್ಬಿಣದ 4 ತಲ್ವಾರ್, 1ಕೊಡಲಿ ವಶಕ್ಕೆ ಪಡೆಯಲಾಗಿದೆ. ಮತ್ತೋರ್ವ ಆರೋಪಿ ಪ್ರಭು ಗೆಜ್ಜಿಹಳ್ಳಿ ಬಳಿ 385 ಗ್ರಾಂ ಗಾಂಜಾಯಿದ್ದು ಜಪ್ತಿ ಮಾಡಲಾಗಿದೆ. ಈ ಕುರಿತು ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Dr Bro, ನಮಸ್ಕಾರ ದೇವ್ರು ಅಂತಲೇ ವಿಡಿಯೋ ಶುರು ಮಾಡುವ ಗಗನ್ ಶ್ರೀನಿವಾಸನ್ ಯೂಟ್ಯೂಬ್ ನೋಡೋ ಜನರು ಮಾತ್ರವಲ್ಲ ಸೋಷಿಯಲ್ ಮೀಡಿಯಾ ಬಳಸೋ ಎಲ್ಲರಿಗೂ ಅತ್ಯಂತ ಅಚ್ಚು ಮೆಚ್ಚು ಅಂತಲೇ ಹೇಳಬಹುದುಕಳೆದೊಂದು ತಿಂಗಳಿಂದ ಒಂದೇ ಒಂದು ವಿಡಿಯೋ ಸಹ ಹಾಕದೆ ಎಲ್ಲಿದ್ದಾರೆ ಎಂಬ ಮಾಹಿತಿಯೂ ಇಲ್ಲದೆ ಅವರ ಅಭಿಮಾನಿಗಳು, ನೆಟ್ಟಿಗರು ಆತಂಕಕ್ಕೂ ಒಳಗಾಗಿದ್ದಾರೆ. ಕಳೆದ ಚೀನಾ ಪ್ರವಾಸ ಕೈಗೊಂಡಿದ್ದ ಅವರು ಇದಾದ ಬಳಿಕ ಒಂದೂ ವಿಡಿಯೋ ಹಂಚಿಕೊಂಡಿಲ್ಲ. ಇನ್ನು ಇದೀಗ ಡಾ ಬ್ರೋ(Dr Bro) ಕಳೆದ ಒಂದು ತಿಂಗಳಿನಿಂದ ವಿಡಿಯೋ ಮಾಡಿಲ್ಲ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಇದನ್ನ ನೋಡೊದ ಗಗನ್ ಅವ್ರು ಅಭಿಮಾನಿಗಳು ಹಾಗೂ ನೆಟ್ಟಿಗರು ನಾಪತ್ತೆಯಾಗಿದ್ದಾರೆ ಗಗನ್ ಅಂತ ಸುದ್ದಿ ಹಬ್ಬಿಸಿದ್ರು. ಮಾಧ್ಯಮದವರು ಕೂಡ ಚೀನಾ ದೇಶದ ವಿಡಿಯೋ ಮಾಡಿ ಡಾ. ಬ್ರೋ ತೊಂದ್ರೇಗೆ ಸಿಲುಕಿದ್ದಾರೆ ಅಂತ ಹೇಳಿದ್ರು ಆದ್ರೆ ಇದೀಗ ಡಾ. ಬ್ರೋ ಬಗ್ಗೆ ಹೊಸ ಸುದ್ದಿಯೊಂದು ಸ್ಯಾಂಡಲ್ವುಡ್ ನಲ್ಲಿ ಹರಿದಾಡುತ್ತಿದ್ದೂ, ನಟ ಶೈನ್ ಶೆಟ್ಟಿ ಈ ಕುರಿತ ವಿಚಾರವೊಂದನ್ನ…