ಕಾಲಿವುಡ್ ಯುವ ನಿರ್ದೇಶಕ ಅಧಿಕ್ ರವಿಚಂದ್ರನ್ (Adhik Ravichandran) ಅವರು ಐಶ್ವರ್ಯ ಪ್ರಭು (Aishwarya Prabhu) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಿರಿಯ ನಟ ಪ್ರಭು ಅವರ ಪುತ್ರಿ ಐಶ್ವರ್ಯ ಜೊತೆ ನಿರ್ದೇಶಕ ಅಧಿಕ್ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ತ್ರಿಶಾ ಇಲ್ಲ ನಯನತಾರಾ, ದಬಂಗ್ 3, ಮಾರ್ಕ್ ಆ್ಯಂಟನಿ ಸಿನಿಮಾಗಳ ನಿರ್ದೇಶಕ ಅಧಿಕ್ ರವಿಚಂದ್ರನ್ ಅವರು ಐಶ್ವರ್ಯ ಪ್ರಭು ಜೊತೆ ಇಂದು (ಡಿ.15) ಚೆನ್ನೈನಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಕನ್ನಡದ ದೃಶ್ಯ, ಪವರ್ ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ನಟ ಪ್ರಭು ಅವರ ಪುತ್ರಿ ಐಶ್ವರ್ಯಗೆ ಇದು ಎರಡನೇ ಮದುವೆಯಾಗಿದ್ದು, ಮೊದಲ ಮದುವೆ ತಂದೆ ಪ್ರಭು ಅವರ ತಂಗಿ ಮಗನ ಜೊತೆ ನೆರವೇರಿತ್ತು. ವೈಯಕ್ತಿಕ ಮನಸ್ತಾಪಗಳಿಂದ ಹೆಚ್ಚು ದಿನ ಆ ದಾಂಪತ್ಯ ಉಳಿಯಲಿಲ್ಲ. ಡಿವೋರ್ಸ್ನಲ್ಲಿ ಐಶ್ವರ್ಯ ಮೊದಲ ಮದುವೆ ಅಂತ್ಯವಾಗಿತ್ತು.
Author: AIN Author
ಬಳ್ಳಾರಿ: ಸಂಕಷ್ಟದಲ್ಲಿದ್ದ ತುಂಗಭದ್ರ ಅಚ್ಚುಕಟ್ಟು ಪ್ರದೇಶದ ಮೆಣಸಿನಕಾಯಿ ಬೆಳೆಗಾರರಿಗೆ ನೀರು ಒದಗಿಸುವಲಿ ಸಚಿವ ನಾಗೇಂದ್ರ ಅವರು ಯಶಸ್ವಿಯಾಗಿದ್ದಾರೆ.ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳ ಜೊತೆ ರೈತ ಮುಖಂಡರುಗಳ ಸಭೆ ನಡೆಸಿದರು. ಹೆಚ್ ಎಲ್ ಸಿ ಕಾಲುವೆ ನೀರು ಬಿಡುವ ಅವಧಿ ಮುಗಿದಿದ್ದರೂ ಸಹ, ಐದು ದಿನಗಳ ಕಾಲ ಕಾಲುವೆಗೆ ಹೆಚ್ಚುವರಿ ನೀರು ಬಿಡಿಸುವ ಮೂಲಕ ಜಿಲ್ಲೆಯ ತುಂಗಭದ್ರ ಅಚ್ಚುಕಟ್ಟು ಪ್ರದೇಶದ ರೈತರ ಹಿತ ಕಾಪಾಡುವಲ್ಲಿ ಸಚಿವ ನಾಗೇಂದ್ರ ಅವರು ಯಶಸ್ವಿಯಾಗಿದ್ದಾರೆ. ಬಳ್ಳಾರಿ ಗ್ರಾಮಾಂತರ ವ್ಯಾಪ್ತಿಯ ಎತ್ತಿನಬುದಿಹಾಳ್ ಬಳಿಯ ೧೫,೧೬,೧೬ಎ ಡಿಸ್ಟ್ರಿಬ್ಯೂಟರ್ ಗೆ ರೈತರೊಂದಿಗೆ ಭೇಟಿ ನೀಡಿ ವೀಕ್ಷಿಸಿದರು. ರೈತರ ಹಿತ ಕಾಪಾಡುವ ಕೆಲಸ ಮಾಡಿ, ಜಮೀನುಗಳಿಗೆ ನೇರವಾಗಿ ನೀರು ಒದಗಿಸುವ ಕಾರ್ಯವನ್ನು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿರುವ ಸಚಿವ ನಡೆಯನ್ನು ರೈತರು ಪ್ರಶಂಸಿದ್ದಾರೆ.
ಬೆಳಗಾವಿ: ವಂಟಮೂರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಸಖಿ ಒನ್ ಸ್ಟಾಪ್ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತ ಮಹಿಳೆಯ ಆರೋಗ್ಯವನ್ನು ಕೇಂದ್ರ ಬಿಜೆಪಿ ಸತ್ಯಶೋಧನಾ ಸಮಿತಿ ವಿಚಾರಿಸಿತು. ಸಂಸದರಾದ ಅಪ್ರಜಿತಾ ಸಾರಂಗಿ, ಸುನಿತಾ ದುಗ್ಗಿ, ರಂಜಿತಾ ಕೋಲಿ, ಲಾಕೆಟ್ ಚಟರ್ಜಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಶಾ ಲಾಕ್ರಾ ಅವರನ್ನೊಳಗೊಂಡ ಐದು ಜನರ ಸಮಿತಿ ಸಂತ್ರಸ್ತ ಮಹಿಳೆಗೆ ಸಾಂತ್ವನ ಹೇಳಿದರು. ಘಟನೆಯಿಂದ ಧೃತಿಗೆಡಬೇಡಿ ನಿಮ್ಮ ಜೊತೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು. ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಂಸದೆ ಅಪ್ರಜಿತಾ ಸಾರಂಗಿ ಮಾತನಾಡಿ, ಬೆಳಗಾವಿ ನಗರದಿಂದ 15 ಕಿ.ಮೀ. ದೂರದಲ್ಲಿರುವ ವಂಟಮೂರಿ ಗ್ರಾಮದಲ್ಲಿ ರಾತ್ರಿ 1.30ರ ಸುಮಾರಿಗೆ ಮನೆಗೆ ನುಗ್ಗಿ, ಮಹಿಳೆಯನ್ನು ಹೊರ ತಂದ ಪುರುಷರು ವಿವಸ್ತ್ರಗೊಳಿಸಿ ರಸ್ತೆಯಲ್ಲಿ ಮೆರವಣಿಗೆ ಮಾಡಿ, ಬಳಿಕ ಕಂಬಕ್ಕೆ ಕಟ್ಟಿ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ. ಘಟನೆ ಆದ ಎರಡು ಗಂಟೆ ಬಳಿಕ ಸ್ಥಳಕ್ಕೆ ಪೊಲೀಸರು ಬಂದರು. ಸಿಪಿಐಗೆ ವಿಷಯ ತಿಳಿಸಿದರೂ…
ದೊಡ್ಮನೆ ಆಟಕ್ಕೆ ‘ನಮ್ಮನೆ ಯುವರಾಣಿ’ (Nammane Yuvarani) ಸೀರಿಯಲ್ ಹೀರೋ ಸ್ನೇಹಿತ್ ಗೌಡ (Snehith Gowda) 9ನೇ ವಾರಕ್ಕೆ ಎಲಿಮಿನೇಟ್ ಆಗಿ ಹೊರ ಬಂದಿರೋ ವಿಚಾರ ಎಲ್ಲರಿಗೂ ಗೊತ್ತಿದೆ. ಇದೀಗ ಲೇಟೆಸ್ಟ್ ಅಪ್ಡೇಟ್ ಏನಂದರೆ, ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದ್ಮೇಲೆ ಸ್ನೇಹಿತ್ಗೆ ಫಾಲೋವರ್ಸ್ ಹೆಚ್ಚಾಗಿದೆ. ‘ನಮ್ಮನೆ ಯುವರಾಣಿ’ ಹೀರೋ ಆಗಿ ಗಮನ ಸೆಳೆದಿದ್ದ ಸ್ನೇಹಿತ್, ನಮ್ರತಾ ದಿಲ್ ಕದಿಯೋಕೆ ಹರಸಾಹಸ ಮಾಡಿದ್ದರು. ವಿನಯ್ ಗೌಡ ಟೀಮ್ನಲ್ಲಿ ಒಬ್ಬರಾಗಿದ್ದರು. ಇನ್ನೂ ವಿಶೇಷ ಅಂದರೆ ಸ್ನೇಹಿತ್ ಎಲಿಮಿನೇಷನ್ ಮುನ್ನ ಅವರಿಗೆ 59 ಸಾವಿರ ಫಾಲೋವರ್ಸ್ ಹೊಂದಿದ್ದರು. ಈಗ 80 ಸಾವಿರಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಇಲ್ಲಿ ಎಲ್ಲವೂ ರಿವರ್ಸ್ ಆಗಿದೆ. ಯಾವುದೇ ಸ್ಪರ್ಧಿ ಬಿಗ್ ಬಾಸ್ ಮನೆಗೆ (Bigg Boss Kannada 10) ಹೋದಾಗ ಫಾಲೋವರ್ಸ್ ಹೆಚ್ಚಾಗೋದು ಕಾಮನ್. ಆದರೆ ಸ್ನೇಹಿತ್ ವಿಚಾರದಲ್ಲಿ ಎಲ್ಲಾ ಉಲ್ಟಾ ಆಗಿದೆ. ದೊಡ್ಮನೆ ಆಟಕ್ಕೆ ಅಂತ್ಯ ಬಿದ್ದ ಮೇಲೆ ಫಾಲೋವರ್ಸ್ ಜಾಸ್ತಿ ಆಗಿದ್ದಾರೆ. 80 ಸಾವಿರಕ್ಕೂ ಹೆಚ್ಚಿನ…
ಬೆಂಗಳೂರು: ತನ್ನ ಪತ್ನಿಯನ್ನು ವಿಧವೆ ಎಂದು ಹೇಳಿ ನೋಡಿಕೊಳ್ಳುವಂತೆ ಉದ್ಯಮಿ ಜೊತೆ ಬಿಟ್ಟು ಹನಿಟ್ಯ್ರಾಪ್ ನಡೆಸಿದ ಪ್ರಕರಣ ಸಂಬಂಧ ದಂಪತಿ ಸಹಿತ ನಾಲ್ವರು ಆರೋಪಿಗಳನ್ನು CCB ಪೊಲೀಸರು ಬಂಧಿಸಿದ್ದಾರೆ. ಖಲೀಮ್, ಸಭಾ, ಓಬೆದ್ ರಕೀಮ್, ಅತೀಕ್ ಬಂಧಿತ ಆರೋಪಿಗಳಾಗಿದ್ದು, ಈ ಪೈಕಿ ಖಲೀಮ್ ಮತ್ತು ಸಭಾ ದಂಪತಿಯಾಗಿದ್ದಾರೆ. ಈ ಗ್ಯಾಂಗ್ ಅತೀವುಲ್ಲಾ ಎಂಬ ಉದ್ಯಮಿಗೆ ಬಲೆಬೀಸಿ ಕೆಡ್ಡಕ್ಕೆ ಕೆಡವಿ ಹನಿಟ್ರ್ಯಾಪ್ ಮಾಡಿತ್ತು. ಅತೀವುಲ್ಲಾಗೆ ಪತ್ನಿ ಸಭಾಳನ್ನ ವಿಧವೆ ಅಂತಾ ಪರಿಚಯ ಮಾಡಿಸಿಕೊಟ್ಟು ಆಕೆಯನ್ನು ನೋಡಿಕೊಳ್ಳುವಂತೆ ಹೇಳಿದ್ದ. ನಂತರ ಸಭಾ ಮತ್ತು ಅತೀವುಲ್ಲಾ ನಡುವೆ ದೈಹಿಕ ಸಂಪರ್ಕ ನಡೆದಿತ್ತು. ಕೆಲ ದಿನಗಳ ನಂತರ ಆರ್.ಆರ್ ನಗರದಲ್ಲಿ ರೂಮ್ ಬುಕ್ ಮಾಡಲು ಆಧಾರ್ ಕಾರ್ಡ್ ಜೊತೆ ಬಾ ಎಂದು ಅತೀವುಲ್ಲಾನನ್ನು ಕರೆದಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.
ಕಲಬುರಗಿ: ಬೆಳಗಾವಿಯಲ್ಲಿ ನಡೆದ ಮಹಿಳೆ ವಿರುದ್ಧ ಅಮಾನವೀಯ ಘಟನೆ ಖಂಡಿಸಿ ಕಲಬುರಗಿಯಲ್ಲಿ ಬಿಜೆಪಿ ಪ್ರೊಟೆಸ್ಟ್ ನಡೆಸಿತು ಸಂಸದ ಉಮೇಶ್ ಜಾಧವ್ ನೇತ್ರತ್ವದಲ್ಲಿ ಡಿಸಿ ಕಚೇರಿ ಮುಂಭಾಗ ನಡೆದ ಪ್ರತಿಭಟನೆ. ಈ ಫ್ರತಿಭಟನೆಯಲ್ಲಿ ಮಹಿಳಾ ಮೋರ್ಚಾ ಪದಾಧಿಕಾರಿಗಳು ಭಾಗವಹಿಸಿದ್ರು.ರಾಜ್ಯ ಸರ್ಕಾರಕ್ಕೆ ಈ ಘಟನೆ ಬಗ್ಗೆ ಎಚ್ಚರಿಕೆ ಕೊಡ್ತಿದ್ದೀವಿ. ಕೂಡಲೇ ಮಹಿಳಾ ಮಕ್ಕಳ ಸಚಿವರು ರಾಜೀನಾಮೆ ಕೊಡ್ಬೇಕು ಅಂತ ಆಗ್ರಹಿಸಿದ್ರು..
ಟೆಲ್ ಅವೀವ್: ಜೆರುಸಲೆಮ್ ಮೇಲೆ ರಾಕೆಟ್ ದಾಳಿ ನಡೆದ ಸಂದರ್ಭದಲ್ಲಿ ಭಯೋತ್ಪಾದಕರು ಎಂದು ತಪ್ಪಾಗಿ ಭಾವಿಸಿ ಮೂವರು ಒತ್ತೆಯಾಳುಗಳನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಸೇನೆ (Israel Army) ತಿಳಿಸಿದೆ. ಹಮಾಸ್ (Hamas) ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ದಾಳಿ ನಡೆಸಿದ ನಂತರ ಯುದ್ಧ ಪ್ರಾರಂಭವಾಯಿತು. ಇಲ್ಲಿಯವರೆಗೆ ಇಸ್ರೇಲಿ ಅಧಿಕಾರಿಗಳು ಸುಮಾರು 1,200 ಜನರನ್ನು ಹತ್ಯೆ ಮಾಡಿದ್ದಾರೆ. ಅವರ ಪೈಕಿ ಹೆಚ್ಚಿನವರು ನಾಗರಿಕರೇ ಆಗಿದ್ದಾರೆ ಎಂದು ತಿಳಿದುಬಂದಿದೆ. ಹಮಾಸ್ ಬಂಡುಕೋರರ ಗುಂಪನ್ನು ನಾಶಮಾಡಲು ಮತ್ತು ಉಗ್ರಗಾಮಿಗಳಿಂದ ಅಪಹರಿಸಲ್ಪಟ್ಟ ಅಂದಾಜು 250 ಒತ್ತೆಯಾಳುಗಳನ್ನು ವಾಪಸ್ ಕರೆತರುವುದಾಗಿ ಪ್ರತಿಜ್ಞೆ ಮಾಡಿದ ಇಸ್ರೇಲ್, ಭಾರಿ ಆಕ್ರಮಣ ನಡೆಸಿದೆ. ಇಸ್ರೇಲ್ ಸೇನೆ ಮುತ್ತಿಗೆ ಹಾಕಿದ ಹೆಚ್ಚಿನ ಪ್ರದೇಶವನ್ನು ನಾಶಮಾಡಿದೆ. ಯುದ್ಧದಿಂದ ಕನಿಷ್ಠ 18,800 ಜನರು ಹತರಾಗಿದ್ದಾರೆ. ಅವರ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಎಂದು ಹಮಾಸ್ ಸರ್ಕಾರ ತಿಳಿಸಿದೆ. ಶುಕ್ರವಾರವೂ ಭೀಕರ ದಾಳಿ ಮುಂದುವರಿದಿದ್ದು, ದಕ್ಷಿಣದ ನಗರವಾದ ಖಾನ್ ಯೂನಿಸ್ನಲ್ಲಿ ಇಸ್ರೇಲಿ ಸೈನಿಕರಿದ್ದ ಮನೆಯನ್ನು ಸ್ಫೋಟಿಸಿರುವುದಾಗಿ…
ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಪೊಲೀಸ್ ಠಾಣೆ (Police Station) ಒಂದರ ಮೇಲೆ ಆತ್ಮಹತ್ಯಾ ಬಾಂಬರ್ಗಳು ನಡೆಸಿದ ದಾಳಿಯಲ್ಲಿ ಕನಿಷ್ಠ 23 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅಫ್ಘಾನಿಸ್ತಾನದ ಗಡಿಯಲ್ಲಿರುವ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಈ ದಾಳಿ ನಡೆದಿದೆ. ಉಗ್ರರು ಸ್ಫೋಟಕಗಳನ್ನು ತುಂಬಿದ ವಾಹನವನ್ನು ಪೊಲೀಸ್ ಠಾಣೆಯ ಮುಖ್ಯ ಗೇಟ್ಗೆ ನುಗ್ಗಿಸಿದ್ದಾರೆ. ಬಳಿಕ ಗುಂಡು ಹಾರಿಸಲು ಪ್ರಾರಂಭಿಸಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಗ್ರರ ನಡುವೆ ಗುಂಡಿನ ಚಕಮಕಿ ಇನ್ನೂ ಮುಂದುವರೆದಿದೆ. ಪಾಕಿಸ್ತಾನಿ ಸೇನೆ ಹಾಗೂ ಪೊಲೀಸರನ್ನು ಗುರಿಯಾಗಿಟ್ಟುಕೊಂಡು ಉಗ್ರರು ಈ ದಾಳಿ (Terrorist Attack) ನಡೆಸಿದ್ದಾರೆ. ದೇಶದ ಭಯೋತ್ಪಾದಕ ಸಂಘಟನೆಗಳಲ್ಲಿ ಒಂದಾದ ತೆಹ್ರೀಕ್-ಎ-ಜಿಹಾದ್ ಪಾಕಿಸ್ತಾನವು ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು: ಇಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ತಮ್ಮ 64ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ ಈ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ಅವರು ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನ ಕೋರಿದ್ದಾರೆ. ನಮ್ಮೆಲ್ಲರ ಪ್ರೀತಿಯ ಕುಮಾರಣ್ಣ, ಮಾಜಿ ಮುಖ್ಯಮಂತ್ರಿಗಳು, ಜಾತ್ಯಾತೀತ ಜನತಾದಳ ಪಕ್ಷದ ಶಾಸಕಾಂಗ ಅಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಟ್ವೀಟ್ ಮೂಲಕ ಶುಭ ಹಾರೈಸಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಭಗವಂತ ಉತ್ತಮ ಆಯುಷ್ಯ ಆರೋಗ್ಯ ನೀಡಿ ಕಾಪಾಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹಾರೈಸಿದ್ದಾರೆ. ಈಗಾಗಲೇ HDK ಸಿಂಗಾಪುರ ಪ್ರವಾಸದಲ್ಲಿದ್ದು ಆದರೆ ಹೋಗುವ ಮೊದಲು ಅಭಿಮಾನಿಗಳಿಗೆ ಪೋಸ್ಟ್ ಮಾಡಿದ್ದಾರೆ. ನನ್ನ ಜನ್ಮದಿನವಾದ ಡಿಸೆಂಬರ್ 16ರಂದು, ನಾನು ಬೆಂಗಳೂರು ನಗರದಲ್ಲಿ ಲಭ್ಯವಿರುವುದಿಲ್ಲ. ಕಾರ್ಯಕರ್ತರಾದಿಯಾಗಿ ನನ್ನ ಮೇಲೆ ಪ್ರೀತಿ, ವಾತ್ಸಲ್ಯ ಇರಿಸಿರುವ ಪ್ರತಿಯೊಬ್ಬರೂ ನನ್ನ ವೈಯಕ್ತಿಕ ಭೇಟಿಗೆ ಪ್ರಯತ್ನಿಸದೇ ತಾವು ಇದ್ದಲ್ಲಿಂದಲೇ ಶುಭ ಕೋರಬೇಕಾಗಿ ನಿಮ್ಮೆಲ್ಲರಲ್ಲೂ ವಿನಂತಿ ಮಾಡಿಕೊಳ್ಳುತ್ತೇನೆ ಎಂದು ಹೆಚ್ಡಿಕೆ ಪೋಸ್ಟ್ ಮಾಡಿದ್ದಾರೆ.…
ಧಾರವಾಡ: ಬೆಳಗಾವಿ ವಂಟಮೂರಿ ಗ್ರಾಮದಲ್ಲಿ ಮಹಿಳೆ ಬೆತ್ತಲೆ ಮಾಡಿ ಹಲ್ಲೆ ಮಾಡಿದ ಪ್ರಕರಣ ಖಂಡಿಸಿ ಧಾರವಾಡದಲ್ಲಿ ರಾಜ್ಯ ಸರ್ಕಾರದ ವಿರುದ್ದ ಬೀದಿಗಿಳಿದು ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಲಾಯಿತು. ಧಾರವಾಡ ಜಿಲ್ಲೆಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟಿಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು. ಹು-ಧಾ ಮಾಹಾನಗರ ಜಿಲ್ಲಾಧ್ಯಕ್ಷ ಸಂಜಯ ಹಾಗೂ ಮಾಜಿ ಶಾಸಕಿ ಸೀಮಾ ನೇತೃತ್ವದಲ್ಲಿ ಪ್ರತಿಭಟನೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ ಬೆಳಗಾವಿಯ ವಂಟಮೂರಿ ಗ್ರಾಮದಲ್ಲಿ ಮಹಿಳೆ ಬೆತ್ತಲೆ ಮಾಡಿ ಹಲ್ಲೆ ಮಾಡಿರುವ ಘಟನೆ ಖಂಡನೀಯವಾಗಿದೆ ಸರ್ಕಾರ ಗ್ಯಾರಂಟಿ ಹೆಸರು ಹೇಳಿಕೊಂಡು ದಿನಗಳ ದೂಡುತ್ತಿದೆ ಹಲವಾರು ಮಹಿಳೆಯರು ಕಾಂಗ್ರೆಸ್ ಗ್ಯಾರಂಟಿ ಮುಟ್ಟಿಲ್ಲವೆಂದು ಹೇಳುತ್ತಿದ್ದಾರೆ ಈ ರಾಜ್ಯ ಸರ್ಕಾರಕ್ಕೆ ಅಧಿಕಾರವೇ ಮುಖ್ಯವಾಗಿದೆ ದಿನ ದಲಿತರ ಹಾಗೂ ಸಾಮನ್ಯ ಜನರ ಸುರಕ್ಷತೆ ಕಾಂಗ್ರೆಸ್ ಸರ್ಕಾರಕ್ಕೆ ಮುಖ್ಯವಾಗಿಲ್ಲ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ವಂಟಮೂರಿ ಘಟನೆಯ ಬಳಿಕ ಹೈ ಕೋರ್ಟ ಪೀಠವು ಕೂಡಾ ಸರ್ಕಾರದ ಕಾರ್ಯವೈಖರಿ ಬಗ್ಗೆ ಅಸಮಧಾನ ಹೊರಹಾಕಿದೆ ಘಟನೆಯ ಕುರಿತು…