ನಾಳೆ ನಟ ಶ್ರೀಮುರಳಿ ಅವರ ಹುಟ್ಟು ಹಬ್ಬ (Birthday). ಈ ವರ್ಷದಲ್ಲಿ ಅತ್ತಿಗೆಯ ಸಾವಿನಿಂದಾಗಿ ಬಹುಶಃ ಶ್ರೀಮುರಳಿ (Srimurali) ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದೇ ನಂಬಲಾಗಿತ್ತು. ಆದರೆ, ಅಭಿಮಾನಿಗಳ ಒತ್ತಾಯಕ್ಕೆ ಮಣಿದು, ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಮತ್ತು ಅಭಿಮಾನಿಗಳನ್ನು ಅಂದು ಭೇಟಿ ಕೂಡ ಮಾಡಲಿದ್ದಾರೆ. ಈ ಕುರಿತಂತೆ ವಿಡಿಯೋವೊಂದನ್ನು ಮಾಡಿರುವ ಶ್ರೀಮುರಳಿ, ತಮ್ಮ ಮನದಾಳದ ಮಾತುಗಳನ್ನು ಅದರಲ್ಲಿ ಹಂಚಿಕೊಂಡಿದ್ದಾರೆ. ಅತ್ತಿಗೆಯ ಕಳೆದುಕೊಂಡ ನೋವಿನ ಮಧ್ಯೆಯೂ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವುದಕ್ಕೆ ಅವರು ಕಾರಣವನ್ನೂ ನೀಡಿದ್ದಾರೆ ಎಲ್ಲರಿಗೂ ನಮಸ್ಕಾರ. ಇಷ್ಟು ವರ್ಷದ ಹುಟ್ಟುಹಬ್ಬಕ್ಕೆ ಸೇರಲು ಆಗಿರಲಿಲ್ಲ. ಯಾಕೆ ಎಂಬುದು ನಿಮಗೂ ಗೊತ್ತು. ಈ ಬಾರಿಯೂ ಸೇರುವ ಪರಿಸ್ಥಿತಿ ಇರಲಿಲ್ಲ. ಆದ್ರೂ, ಅಭಿಮಾನಿಗಳ ಒತ್ತಾಯದ ಮೇರೆಗೆ , ನೀವು ಕೊಡ್ತಿರೋ ಪ್ರೀತಿ, ಏನ್ ಹೇಳಬೇಕು ಅಂತ ಗೊತ್ತಾಗ್ತಿಲ್ಲ. ನಿಮ್ಮ ಆಜ್ಞೆಯಂತೆಯೇ ನಡೀಬೇಕು. ಹಾಗಾಗಿ ಈ ವರ್ಷ ನಿಮ್ಮನ್ನೆಲ್ಲ ಭೇಟಿ ಮಾಡೋಕೆ ನನಗೊಂದು ಅವಕಾಶ ಸಿಕ್ಕಿದೆ. ಇದೇ ಡಿಸೆಂಬರ್ 17ನೇ ತಾರೀಖು, ವಸಂತ ನಗರದ ದೇವರಾಜ್ ಅರಸ್…
Author: AIN Author
ಬೆಂಗಳೂರು: ಆ ಜೋಡಿ.ದುಡ್ಡಿರೊ ಉದ್ಯಮಿಗಳನ್ನೇ ಟಾರ್ಗೆಟ್ ಮಾಡ್ತಿದ್ರು.ವಿದೇಶಿ ಕರೆನ್ಸಿ ಕಡಿಮೆ ಬೆಲೆಗೆ ಕೊಡ್ತೀವಿ ಕಲರ್ ಕಲರ್ ಟೋಪಿ ಹಾಕ್ತಿದ್ರು ಕಲರ್ ಜೆರಾಕ್ಸ್ ತೋರಿಸಿ ವರ್ಜಿನಲ್ ಅಂತ ಕಾಗೆ ಹಾರಿಸ್ತಿದ್ರು. ಒಂದು ಸಣ್ಣ ಸುಳಿವು ಸಿಕ್ಕಿದ್ದೇ ತಡ ಸಿಸಿಬಿ ಪೊಲೀಸರು ಒಂದು ವಾರ ಹಿಂದೆ ಬಿದ್ದಿದ್ದಾರೆ..ನಂತರ ಏನಾಯ್ತು ಈ ಸ್ಟೋರಿ ನೋಡಿ ಈ ಪೋಟೊದಲ್ಲಿ ಕಾಣ್ತಿರೊ ಆಸಾಮಿ ಹೆಸರು ಇಮ್ರಾನ್ ಶೇಕ್.ದೇಹಲಿ ಮೂಲದವ್ನು.ಪತ್ನಿ ರುಕ್ಸಾನ ಜೊತೆಗೆ ಬೆಂಗಳೂರಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿದ ನನ್ನ ಹತ್ರ ದುಬೈ ಧಿರಾಮ್ ಕರೆನ್ಸಿ ಇದೆ ಕಡಿಮೆ ಬೆಲೆಗೆ ಅಂದ್ರೆ 50-50 ರೇಟ್ ಕೊಡ್ತೀನಿ ಅಂತಾ ವಂಚಿಸಲು ಹೊಂಚು ಹಾಕ್ತಿದ್ದ. ಹೌದು..ಬೆಂಗಳೂರಲ್ಲಿ ವಾಸವಿದ್ದ ಇಮ್ರಾನ್ ಶೇಕ್ ಮತ್ತು ರುಕ್ಸಾನ ದಂಪತಿ ಮೂರನೇ ವ್ಯಕ್ತಿ ಮೂಲಕ ದುಡ್ಡಿರೊ ಉದ್ಯಮಿಗಳ ಪರಿಚಯ ಮಾಡಿಕೊಳ್ತಿದ್ರು.ಸ್ವಲ್ಪ ದಿನ ನಯವಾಗಿ ವರ್ತಿಸಿ ಬಳಿಕ ಅಸಲಿ ಬುದ್ಧಿ ತೋರಿಸ್ತಿದ್ರು..ನಮ್ಹತ್ರ ಕಂತೆ ಕಂತೆ ದುಬೈ ಮೂಲದ ಕರೆನ್ಸಿ ಧಿರಾಮ್ ಇದೆ.ಅದರ ಬೆಲೆ ಭಾರತೀಯ ರೂಪಾಯಿಗೆ ಹೋಲಿಸಿಕೊಂಡ್ರೆ 22…
ಬೆಂಗಳೂರು: ಏರ್ಪೋರ್ಟ್ ರಸ್ತೆಯಲ್ಲಿ ಪುಂಡಾಟ ಮೆರೆದಿದ್ದವರನ್ನ ಪೊಲೀಸರು ಹೆಡೆಮುರಿ ಕಟ್ಟಿ ಬಂಧಿಸಿದ್ದಾರೆ. ಚಿಕ್ಕಜಾಲ ಸಂಚಾರಿ ಪೊಲೀಸರಿಂದ ಐವರ ಬಂಧನವಾಗಿದೆ.ಆರೋಪಿಗಳನ್ನ ಬಂಧಿಸಿ ಕಾರ್ ಸೀಜ್ ಮಾಡಿದ ಪೊಲೀಸರು ಏರ್ಪೋರ್ಟ್ ರಸ್ತೆಯಲ್ಲಿ ಮಧ್ಯರಾತ್ರಿ ಪುಂಡಾಟ ಮೆರೆದಿದ್ದ ಆರೋಪಿಗಳು ಅಜಾಗರೂಕತೆ ಚಾಲನೆ, ಕಾರಿನ ಕಿಟಕಿಯಿಂದ ಹೊರ ಬಂದು ಪುಂಡಾಟ ನಡೆಸಿದ್ದ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು ಭಾರೀ ಸುದ್ದಿ ಮಾಡಿತ್ತು. ಹಾಗೆ ಸಾರ್ವಜನಿಕರೊಬ್ಬರು ಅದನ್ನ ವಿಡಿಯೋ ಮಾಡಿ ಪೊಲೀಸರಿಗೆ ಟ್ಯಾಗ್ ಮಾಡಿದ್ದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನ ಮಾಡಿದ್ದಾರೆ. ಸದ್ಯ ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳಿಗೆ ಪೊಲೀಸರು ಸಖತ್ ಡ್ರಿಲ್ ಮಾಡಲಿದ್ದಾರೆ.
ಹುಬ್ಬಳ್ಳಿ: ಸಂಸತ್ ನಲ್ಲಿ ದಾಳಿ ಕೇವಲ ತಿಳಿಗೇಡಿ ಕೃತ್ಯವಲ್ಲ ಬದಲಾಗಿ, ಭಾರತದ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವ ಷಡ್ಯಂತ್ರವಾಗಿದೆ. ಇಂತಹ ವಿಚಾರದಲ್ಲಿ ರಾಜಕೀಯ ಸರಿಯಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು. ಶನಿವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸತ್ತಿನಲ್ಲಿ ಈ ಹಿಂದೆ ಪಿಸ್ತೂಲ್ ಮತ್ತು ಡ್ರ್ಯಾಗರ್ ತೆಗೆದುಕೊಂಡು ಸಹ ಪ್ರವೇಶಿಸಿದ್ದರು. ಒಂದೇ ವ್ಯಕ್ತಿ ಎರಡು ದಿನ ಒಂದೇ ಪಾಸ್ ನಲ್ಲಿ ಸಂಸತ್ತಿಗೆ ಪ್ರವೇಶ ಮಾಡಿದ್ದ. ಇದಕ್ಕೆ ಯಾವ ಸಂಸದ ಪಾಸ್ ನೀಡಿದ್ದರು ಎಂಬುದು ಸಹ ಗೊತ್ತಿದೆ. ಆದರೆ ಇದನ್ನು ನಾವು ಮಾತನಾಡಲ್ಲ. ಇದು ಮೋದಿ ಸರ್ಕಾರದಲ್ಲಿ ನಡೆಯುದಿಲ್ಲ. ಇದನ್ನು ರಾಜಕೀಯ ಮಾಡಬಹುದು, ಕಟುವಾಗಿ ಕಾಂಗ್ರೆಸ್ ಟೀಕಿಸಬಹುದು. ಆದರೆ ನಾವು ಅದನ್ನು ಮಾಡಲ್ಲ. ಮುಂದೆ ಇಂತಹ ಘಟನೆ ನಡೆಯದಂತೆ ಕಠಿಣ ಕೈಗೊಳ್ಳಲಾಗುವುದು ಎಂದರು. ಶೂನ್ಯ ಭಯೋತ್ಪಾದಕತೆ ಮೋದಿ ಸರ್ಕಾರದ ನಿರ್ಧಾರವಾಗಿದೆ. ಈ ಹಿಂದಿನ ಸ್ಪೀಕರ್ ತೆಗೆದುಕೊಂಡ ಕ್ರಮಕ್ಕಿಂತ ಈಗಿನ ಸ್ಪೀಕರ್ ಕಠಿಣ ಕ್ರಮ…
ಹಾವೇರಿ: ಬೈಕ್ ಕಳ್ಳತನ ಆರೋಪಿಗಳನ್ನ ಬಂಧಿಸುವಲ್ಲಿ ಹಾವೇರಿ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳೆದ 3 ತಿಂಗಳಿಂದ ಸುಮಾರು 13 ಬೈಕ್ ಗಳನ್ನ ಹಾವೇರಿ ನಗರದಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ ಖದೀಮರನ್ನ ಬಂಧಿಸಿ ಬೈಕ್ ಗಳನ್ನ ವಶಪಡಿಸಿಕೊಂಡು ಆರೋಪಿಗಳನ್ನ ಬಂಧಿಸಲಾಗಿದೆ. ಬಂಧಿತ ಆರೋಪಿಗಳು ಸಚಿನ್ ಸಂಕ್ಲಿಪುರ & ಉಡಚಪ್ಪ ದೀಪಾಳಿ ಎಂದು ಗುರುತಿಸಲಾಗಿದೆ. ಹಾವೇರಿ ತಾಲೂಕಿನ ಹೊಸರಿತ್ತಿ ಗ್ರಾಮದವರೆಂದು ತಿಳಿದಿದೆ…
ಕೋಲಾರ: ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರ 64ನೇ ವರ್ಷದ ಹುಟ್ಟುಹಬ್ಬ ಪ್ರಯುಕ್ತ ಎಪಿಎಂಸಿ ಮಾಜಿ ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಅವ್ರು ನಗರದ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸರಳವಾಗಿ ಹುಟ್ಟು ಹಬ್ಬ ಆಚರಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಕುರ್ಕಿ ರಾಜೇಶ್ವರಿ ಸುಮಾರು 19 ವರ್ಷಗಳಿಂದ ಕುಮಾರಸ್ವಾಮಿ ಅವರ ಹುಟ್ಟು ಹಬ್ಬವನ್ನು ಸಾಯಿಬಾಬಾ ದೇವಸ್ಥಾನದಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಜೊತೆಯಲ್ಲಿ ಆಚರಿಸಿತ್ತಿದ್ದೆವೆ. ದೇವರು ಅವರಿಗೆ ಹೆಚ್ಚಿನ ಆರೋಗ್ಯ ಆಯಸ್ಸು ನೀಡುವದರ ಜೊತೆಗೆ ನಾಡಿನ ಜನರ ಕಷ್ಟ ದುಃಖಗಳಿಗೆ ಸ್ವಂದಿಸುವ ಅಧಿಕಾರವನ್ನು ಮತ್ತೊಮ್ಮೆ ನೀಡುವಂತೆ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದರು. ಕರ್ನಾಟಕ ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಜನಪ್ರಿಯ ಯೋಜನೆಗಳನ್ನು ನೀಡಿದ್ದಾರೆ. ಕಳೆದ ಬಾರಿಯೂ ಪಂಚರತ್ನ ಯೋಜನೆಗಳ ಮೂಲಕ ರೈತರ ಬಡವರ ಅಭಿವೃದ್ಧಿಯ ಪರವಾದ ಯೋಜನೆಗಳನ್ನು ರೂಪಿಸಲು ಅವಕಾಶ ಸಿಗಲಿಲ್ಲ ಮುಂದೆ ನಡೆಯುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಹೆಚ್ಚಿನ ಶಕ್ತಿ ನೀಡುವಂತಾಗಲಿ ಎಂದು ತಿಳಿಸಿದ್ರು. ಈ ಸಂದರ್ಭದಲ್ಲಿ ಜೆಡಿಎಸ್…
ಬಾಲಿವುಡ್ (Bollywood) ನಟ ಸಾಹಿಲ್ ಖಾನ್ (Sahil Khan) ಸೇರಿದಂತೆ ಇನ್ನೂ ಇಬ್ಬರಿಗೆ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ. ಮಹಾದೇವ್ ಬೆಟ್ಟಿಂಗ್ (Mahadev Betting) ಆಪ್ ಅ ವ್ಯವಹಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಸಮನ್ಸ್ (Summons) ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ತಿಳಿಸಿದ್ದಾರೆ. ಬೆಟ್ಟಿಂಗ್ ಆಪ್ ನಲ್ಲಿ 15 ಸಾವಿರ ಕೋಟಿಗೂ ಅಧಿಕ ಅವ್ಯವಹಾರ ನಡೆದಿದೆ ಎಂದು ಹೇಳಲಾಗಿದ್ದು, ಆಪ್ ಮೂಲಕ ಅಕ್ರಮವಾಗಿ ಹಣ ವರ್ಗಾವಣೆ ಆಗಿದೆ ಎಂದು ಹೇಳಲಾಗುತ್ತಿದೆ. ಈ ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರು ಭೋಪಾಲ್, ಮುಂಬೈ, ಕೋಲ್ಕತ್ತಾ ನಗರಗಳಲ್ಲಿ ಶೋಧ ಕಾರ್ಯ ನಡೆಸಿದ್ದರು. ಈ ಸಮಯದಲ್ಲಿ ಹವಾಲಾ ನಡೆದಿರುವುದು ಪತ್ತೆ ಆಗಿದೆ ಎನ್ನಲಾಗಿತ್ತು. ರವಿ ಉಪ್ಪಾಲ್ ಮತ್ತು ಸೌರಭ್ ಚಂದ್ರಕಾರ್ ಎನ್ನುವವರು ಈ ಆಪ್ ಅನ್ನು ದುಬೈನಿಂದ ನಡೆಸುತ್ತಿದ್ದರು. ಬೇನಾಮಿ ಖಾತೆಗಳಿಂದ ಅಕ್ರ ಹಣ ವರ್ಗಾವಣೆ ಆಗುತ್ತಿದೆ ಎಂದು ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಪೊಲೀಸರು ಶೋಧ ನಡೆಸಿದ್ದರು. ಈ ಹಗರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನ ಇನ್ನೂ ಅನೇಕ…
ಬೆಂಗಳೂರು: ಹೆಣ್ಣು ಭ್ರೂಣ ಹತ್ಯೆ ನಿಲ್ಲಲಿ ಎಂದು ಬಿಜೆಪಿ ಬೆಂಗಳೂರು ಮಹಾನಗರ ಮಹಿಳಾ ಮೋರ್ಚಾ ವತಿಯಿಂದ ಪ್ರತಿಭಟನೆ ಮಾಡಲಾಗಿದೆ. ಬೆಂಗಳೂರಿನ ಮೇಖ್ರಿ ಸರ್ಕಲ್ ಬಳಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಗೆ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ, ಬಿಜೆಪಿ ಮಹಿಳಾ ರಾಜ್ಯ ಅಧ್ಯಕ್ಷರಾದ ಶ್ರೀಮತಿ ಗೀತಾ, ಜಿಲ್ಲಾಧ್ಯಕ್ಷರಾದ ಶ್ರೀಮತಿ ಆಶಾ ರಾವ್ ಸೇರಿದಂತೆ ಭಾಗಿಯಾಗಿದ್ದರು. ಬೃಹತ್ ಪ್ರತಿಭಟನೆಗೆ ನೂರಾರು ಬಿಜೆಪಿ ಮಹಿಳೆಯರು ಭಾಗಿಯಾಗಿದ್ದರು. ಮಹಿಳಾ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಕೂಗುವ ಮೂಲಕ ಪ್ರತಿಭಟನೆ ನಡೆಸಿದರು. ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಭ್ರೂಣ ಹತ್ಯೆ ತಡೆಗಟ್ಟುವಲ್ಲಿ ಸರ್ಕಾರ ವಿಫಲವಾಗಿದೆ. ಕಾಂಗ್ರೆಸ್ ಸರ್ಕಾರದ ವಿರುದ್ದ ಪ್ರತಿಭಟನೆ ಜೊತೆಗೆ ಗೃಹ ಸಚಿವರ ಮನೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದಾರೆ.
ಬೆಂಗಳೂರು: ಪ್ರಸಕ್ತ ಮುಂಗಾರು ಹಂಗಾಮಿನಡಿ ರಾಜ್ಯದಲ್ಲಿ ತೀವ್ರ ಮಳೆ ಕೊರತೆಯಿಂದಾಗಿ ಭತ್ತದ ಬಿತ್ತನೆ ಪ್ರದೇಶವು ನಿಗದಿತ ಗುರಿಗಿಂತ ಶೇ 35ರಷ್ಟು ಕಡಿಮೆಯಾಗಿದ್ದು, ಉತ್ಪಾದನೆಯೂ ಕುಂಠಿತವಾಗಿದೆ. ಹಾಗಾಗಿ, ಮುಂದಿನ ಮೂರ್ನಾಲ್ಕು ತಿಂಗಳಿನಲ್ಲಿ ಅಕ್ಕಿ ಧಾರಣೆಯು ಶೇ 10ರಿಂದ 20ರಷ್ಟು ಹೆಚ್ಚಳವಾಲಿದೆ. ಈಗಾಗಲೇ, ದರ ಹೆಚ್ಚಳದಿಂದ ತತ್ತರಿಸಿರುವ ಗ್ರಾಹಕರ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ಇದೆ. ಮತ್ತೊಂದೆಡೆ ರಾಜ್ಯ ಸರ್ಕಾರದ ‘ಅನ್ನಭಾಗ್ಯ’ ಯೋಜನೆಗೂ ಅಕ್ಕಿ ಪೂರೈಕೆ ಕೊರತೆಯಾಗುವ ಆತಂಕ ಎದುರಾಗಿದೆ. ಸದ್ಯ ಸಗಟು ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್ ಸಾಮಾನ್ಯ ಸೋನಾ ಮಸೂರಿ ಅಕ್ಕಿ ದರ 6 ಸಾವಿರ ಇದ್ದರೆ, ಆರ್‌ಎನ್‌ಆರ್ ಸೋನಾ ತಳಿ ಅಕ್ಕಿ ಧಾರಣೆ 6,500 ಇದೆ. ರಾಜ್ಯದಲ್ಲಿ ಕಳೆದ ವರ್ಷ ಸುಮಾರು 11 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬಿತ್ತನೆಯಾಗಿತ್ತು. ಈ ಬಾರಿ ಸುಮಾರು 7-8 ಲಕ್ಷ ಹೆಕ್ಟೇರ್ ಪ್ರದೇಶದಲ್ಲಷ್ಟೇ ಬಿತ್ತನೆಯಾಗಿದೆ. ಇದು ಅಕ್ಕಿ ಉತ್ಪಾದನೆ ಕುಸಿತಕ್ಕೆ ಕಾರಣವಾಗಲಿದೆ ಎಂದು ಅಕ್ಕಿ ಗಿರಣಿ ಮಾಲೀಕರು ಹೇಳುತ್ತಾರೆ.
ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಮುಸ್ಲಿಂರಿಗೆ ಟಿಕೆಟ್ ಕೇಳಿದ್ದೇವೆ ಎಂದು ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬೆಂಗಳೂರು ಸೆಂಟ್ರಲ್, ಹಾವೇರಿ ಹಾಗೂ ಬೀದರ್ ಲೋಕಸಭಾ ಕ್ಷೇತ್ರದ ಟಿಕೆಟ್ ಕೇಳಿದ್ದೇವೆ ಎಂದು ತಿಳಿಸಿದರು. ಎಲ್ಲ ಕ್ಷೇತ್ರಗಳಲ್ಲಿ ಲೋಕಸಭೆಗೆ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ನಮ್ಮ ಸರ್ಕಾರ ಬಂದ ಬಳಿಕ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ರಾಜ್ಯದ ಜನ ಬದಲಾವಣೆ ಬಯಸಿದ್ದಾರೆ. ಕರ್ನಾಟಕ ಮಾತ್ರವಲ್ಲ ಇಡೀ ದೇಶದಲ್ಲಿ ಜನ ಬದಲಾವಣೆ ಬಯಸಿದ್ದಾರೆ. ಜನ ಈಗ ತೀರ್ಮಾನ ತೆಗೆದುಕೊಂಡು ಆಗಿದೆ. ರಾಜ್ಯದಲ್ಲಿ ಕನಿಷ್ಠ 25 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ. ಮೂರು ಕ್ಷೇತ್ರದಲ್ಲಿ ಮುಸ್ಲಿಂರಿಗೆ ಟಿಕೆಟ್ ಕೇಳಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಂತಸ್ ಭವನದಲ್ಲಿ ಗಲಾಟೆ ಕಾಂಗ್ರೆಸ್ ಕುತಂತ್ರ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದರಲ್ಲಿ ಕಾಂಗ್ರೆಸ್ ಕುತಂತ್ರ ಹೇಗಿರುತ್ತೆ? ಅವರಿಗೆ ಪಾಸ್ ಕೊಟ್ಟವರು ಯಾರು? ಇದರಲ್ಲಿ ರಾಜಕೀಯ ಮಾತನಾಡಲು ನಾನು ಇಷ್ಟಪಡುವುದಿಲ್ಲ. ಇದರಲ್ಲಿ ಭದ್ರತಾ ವೈಫಲ್ಯ ಆಗಿದೆ. ಆತ…