Author: AIN Author

ಕಲಬುರಗಿ:- ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಗೆ ನಾಲ್ಕು ಲಕ್ಷ ಮೌಲ್ಯದ ಕಬ್ಬು ಸುಟ್ಟು ಕರಕಲಾದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಜೇವರ್ಗಿ ತಾಲೂಕಿನ ಕಟ್ಟಿ ಸಂಗಾವಿಯಲ್ಲಿ ಘಟನೆ ನಡೆದಿದ್ದು ರೈತ ಕರಣಪ್ಪಗೆ ಸೇರಿದ 4 ಲಕ್ಷ ಮೌಲ್ಯದ ಕಬ್ಬು ಧಗಧಗ ಹೊತ್ತಿ ಉರಿದಿದೆ. ಕೂಡಲೇ ಅಗ್ನಿಶಾಮಕ ದಳ ಸ್ಥಳಕ್ಕೆ ಬಂತಾದ್ರೂ ಅಷ್ಟೊತ್ತಿಗೆ ಕಬ್ಬು ಭಸ್ಮವಾಗಿತ್ತು.

Read More

ಬೆಂಗಳೂರು:- ಅಪಾರ್ಟ್ಮೆಂಟ್‌ವೊಂದರಲ್ಲಿ ಕುಳಿತು ಆಟವಾಡುತ್ತಿದ್ದ ಮಗುವಿನ ಮೇಲೆಯೇ ಕಾರು ಹತ್ತಿರುವ ಘಟನೆ ಕಸುವಿನಹಳ್ಳಿಯ ಅಪಾರ್ಟ್ಮೆಂಟ್‌ವೊಂದರ ಮುಂಭಾಗ ನಡೆದಿದೆ. ಕಳೆದ 10 ದಿನಗಳ ಹಿಂದೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜೋಗ್ ಜುತಾರ್, ಅನಿತಾ ದಂಪತಿಗೆ ಸೇರಿದ ಅರ್ಬಿನಾ (3) ಮಗುವಿನ ಮೇಲೆ ಚಾಲಕ ಕಾರು ಹತ್ತಿಸಿ ಹತ್ಯೆಗೈದಿದ್ದಾನೆ. ಅಮಾನವಿಯ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೊದಲು ತಮ್ಮ ಅರಿವಿಗೆ ಬಾರದೇ ಕಟ್ಟಡದ ಮೇಲಿಂದ ಮಗು ಬಿದ್ದಿರುವುದಾಗಿ ಪೋಷಕರು ದೂರು ಕೊಟ್ದಿದ್ದರು. ಆಸ್ಪತ್ರೆಗೆ ಕರೆತರುವ ಮಾರ್ಗಮಧ್ಯದಲ್ಲಿ ಮಗು ಮೃತಪಟ್ಟಿರುವುದಾಗಿ ಪೋಷಕರು ದೂರಿನಲ್ಲಿ ಉಲ್ಲೇಖಿಸಿದ್ದರು. ಆದ್ರೆ ಮಗುವಿನ ದೇಹದಲ್ಲಿ ರಕ್ತಸ್ರಾವ ಆಗುತ್ತಿದ್ದುದ್ದನ್ನು ಕಂಡು ಅನುಮಾನಗೊಂಡ ಪೊಲೀಸರು ಸಿಸಿಟಿವಿ ದೃಶ್ಯ ಪರಿಶೀಲಿಸಿದ್ದಾರೆ. ನಂತರ ಎಕ್ಸ್ ಯುವಿ ಕಾರು ಮಗುವಿನ ಮೇಲೆ ಹರಿದಿರುವುದು ಗೊತ್ತಾಗಿದೆ. ಸದ್ಯ ಕೃತ್ಯ ಎಸಗಿದ ಅಪಾರ್ಟ್ಮೆಂನ ಸುಮನ್ ಎಕ್ಸ್ ಯುವಿ ಕಾರು ಚಾಲಕನ ವಿರುದ್ಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

Read More

ಹುಬ್ಬಳ್ಳಿ:- ಕಾಂಗ್ರೆಸ್‌ ಸರ್ಕಾರ ಇರುವ ರಾಜ್ಯಗಳಲ್ಲಿ ದೌರ್ಜನ್ಯ ಹೆಚ್ಚಳವಾಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ. ಬೆಳಗಾವಿ ತಾಲ್ಲೂಕಿನ ಹೊಸ ವಂಟಮೂರಿಯಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ, ಹಲ್ಲೆ ಮಾಡಿದ ಪ್ರಕರಣ ನಾಗರಿಕ ಸಮಾಜ ತಲೆ ತಗ್ಗಿಸುವಂತದ್ದು. ಕಾಂಗ್ರೆಸ್ ಸರ್ಕಾರ ಇರುವ ರಾಜ್ಯಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಿವೆ’ ಎಂದರು. ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ, ಮಹಿಳೆಯರಿಗೆ ರಕ್ಷಣೆ ಒದಗಿಸಲು ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. ದೇಶದ ಪ್ರಜಾಪ್ರಭುತ್ವ ಮಂದಿರಕ್ಕೆ ಕಳಂಕ ತರಲು ವ್ಯವಸ್ಥಿತವಾಗಿ ಸಂಚು ರೂಪಿಸಿ ಸಂಸತ್‌ ಭವನದಲ್ಲಿ ಹೊಗೆ ಬಾಂಬ್‌ ಸಿಡಿಸಲಾಗಿದೆ. ಪ್ರಕರಣ ಸಂಬಂಧ ಸ್ಪೀಕರ್ ಅವರು ಉನ್ನತಮಟ್ಟದ ತನಿಖೆಗೆ ಆದೇಶ ನೀಡಿದ್ಧಾರೆ. ಈಗಾಗಲೇ ತನಿಖೆ ಆರಂಭವಾಗಿದೆ. ಈ ರೀತಿಯ ಘಟನೆಗಳಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಎಲ್ಲರೂ ಒಂದಾಗಿ ಎದುರಿಸಬೇಕು’ ಎಂದರು.

Read More

ಬೆಂಗಳೂರು:- ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ವ್ಯಕ್ತಿಯ ವಿರುದ್ಧ ಗಿರಿನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಇನ್ಸ್‌ಪೆಕ್ಟರ್ ದೇವರಾಜೇ ಅರಸು ನೀಡಿದ ದೂರಿನ ಅನ್ವಯ ಜಗದೀಶ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಇನ್ನೂ ಡಿಸೆಂಬರ್ 14ರಂದು ಬೆಳಗ್ಗಿನ ಜಾವ ಆರೋಪಿ ಜಗದೀಶ್, ತನಗೆ ಪರಿಚಿತ ಮಹಿಳೆಯೊಬ್ಬರು ಹಾಗೂ ಅರುಣ್ ಕುಮಾರ್ ಎಂಬಾತನ ಮಧ್ಯೆ ಹಣದ ವರ್ಗಾವಣೆ, ಮೆಸೇಜ್ ರವಾನೆಯಾಗಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಅರುಣ್ ಕುಮಾರ್ ಮನೆ ಮುಂದೆ ಗಲಾಟೆ ಮಾಡುತ್ತಿದ್ದ. ಇದರಿಂದ ಅರುಣ್ ಕುಮಾರ್ ಪಕ್ಕದ ಮನೆಯವರು ಹೊಯ್ಸಳ ಕಂಟ್ರೋಲ್​ ರೂಂಗೆ ಕರೆ ಮಾಡಿದ್ದರು. ಹೊಯ್ಸಳ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಆತನನ್ನು ಅಲ್ಲಿಂದ ಕಳುಹಿಸಲು ಯತ್ನಿಸಿದಾಗ ಅವಾಚ್ಯವಾಗಿ ನಿಂದಿಸಲಾರಂಭಿಸಿದ್ದ ಜಗದೀಶ್, ನನಗೆ ಮಾನವ ಹಕ್ಕು ಆಯೋಗದವರು ಗೊತ್ತು, ನಿಮ್ಮನ್ನು ಜೈಲಿಗೆ ಕಳಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ. ತಕ್ಷಣ ಆರೋಪಿ ವಶಕ್ಕೆ ಪಡೆದ ಪೊಲೀಸ್ ಸಿಬ್ಬಂದಿ ಆರೋಪಿಯನ್ನ ಠಾಣೆಗೆ ಕರೆತಂದು, ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ಇನ್ಸ್‌ಪೆಕ್ಟರ್ ಮುಂದೆ ಹಾಜರುಪಡಿಸಿದ್ದರು ಈ ಸಂದರ್ಭದಲ್ಲಿ ಇನ್ಸ್‌ಪೆಕ್ಟರ್​ಗೆ…

Read More

ಗೃಹ ಸಾಲದ ಮೇಲೆ ಕಡಿಮೆ ಬಡ್ಡಿ ದರ ಕಡಿಮೆ ಮಾಡಿಕೊಳ್ಳಲು ಈ ಸುದ್ದಿ ಸಂಪೂರ್ಣವಾಗಿ ಓದಿ. ಆರ್‌ಬಿಐ ಹಣಕಾಸು ನೀತಿ ಪರಾಮರ್ಶೆಯಲ್ಲಿ ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿದೆ. ಹೀಗಾಗಿ, ಗೃಹ, ವಾಹನ ಸೇರಿ ಬಹುತೇಕ ಸಾಲಗಳ ಬಡ್ಡಿ ದರವು ಮೊದಲಿನಿಂತೆಯೇ ಮುಂದುರಿದಿದೆ. ರೆಪೋ ದರ ಯಥಾಸ್ಥಿತಿಯಲ್ಲಿ ಮುಂದುವರಿದ ಪರಿಣಾಮ ಗ್ರಾಹಕರು ಪಡೆದುಕೊಂಡ ಬಹುತೇಕ ಸಾಲಗಳ ಮೇಲೆ ಬಡ್ಡಿ ದರ ಕೂಡ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ರೆಪೋ ದರ ಕಡಿಮೆಯಾಗಿ ತಮ್ಮ ಸಾಲದ ಬಡ್ಡಿ ಕಡಿಮೆಯಾಗುವ ಮೂಕಲ ಮಾಸಿಕ ಕಂತಿನ ಮೊತ್ತ ಕಡಿಮೆ ಆಗಬಹುದು ಎಂಬ ಗ್ರಾಹಕರ ನಿರೀಕ್ಷೆ ಹುಸಿಯಾಗಿದೆ. ಅಕ್ಟೋಬರ್ 2019 ರಿಂದ, ಬ್ಯಾಂಕ್​ಗಳು ನೀಡುವ ಎಲ್ಲಾ ಫ್ಲೋಟಿಂಗ್ ದರದ ಸಾಲಗಳನ್ನು (floating rate loans) ಬಾಹ್ಯ ಮಾನದಂಡ ಆಧಾರಿತ ಸಾಲ ದರಕ್ಕೆ (EBLR) ಲಿಂಕ್ ಮಾಡಲಾಗಿದೆ, ಇದು ಚಿಲ್ಲರೆ ಸಾಲಗಳ ಸಂದರ್ಭದಲ್ಲಿ ವಿಧಿಸಲಾಗುವ ರೆಪೋ ದರವಾಗಿದೆ. ರೆಪೋ ದರದಲ್ಲಿ ಯಾವುದೇ ಬದಲಾವಣೆಯಾದರೆ, ಅಂದರೆ ರೆಪೋ ಬಡ್ಡಿ ದರದಲ್ಲಿ ಏರಿಕೆ ಅಥವಾ ಕಡಿತವಾದರೆ…

Read More

ಸಂಡೂರು:- ತಾಲೂಕಿನ ಹೊಸದರೋಜಿ ಗ್ರಾಮದಲ್ಲಿ ದಿನಾಂಕ 16-12-2023 ರಂದು ಆರೋಗ್ಯ ಆಯುಷ್ ಮತ್ತು ಕ್ಷೇಮಾಭಿವೃದ್ಧಿ ಅಡಿಯಲ್ಲಿ ಸ್ವಚ್ಛತಾ ಆಂದೋಲನ ಮತ್ತು ಯೋಗಾ ತರಬೇತಿ ಕಾರ್ಯಕ್ರಮ ಸಹಕಾರ ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ (ಬಿ.ಸಿ.ಎಂ) ಹೊಸದರೋಜಿ ಹಮ್ಮಿಕೊಳ್ಳಲಾಗಿತ್ತು. ನಮ್ಮ ಆರೋಗ್ಯ ಚೆನ್ನಾಗಿ ಇರಬೇಕಾದರೆ ದಿನ ನಿತ್ಯ ನಮ್ಮ ಸುತ್ತಲಿನ ಪ್ರದೇಶವನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು ಹಾಗೂ ನಮ್ಮ ಆರೋಗ್ಯವನ್ನು ಕಾಪಾಡಿಕೊಳೊಳಲು ದಿನ ನಿತ್ಯ ಯೋಗಾಭ್ಯಾಸ ಮತ್ತು ಧ್ಯಾನ ಮಾಡಬೇಕು ಎಂದು ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟನಾ ಕಾರ್ಯಕ್ರಮವನ್ನು ನೇರವೇರಿಸಿ ಆರ್ಯವೇದಿಕ ಡಾಕ್ಟರ್ ಡಾ.ಫಣೀಂಧರ ಉದ್ಘಾಟಕರ ನುಡಿಯನ್ನು ನುಡಿದರು. ನೆಮ್ಮದಿ ಎಂಬುವುದು ಈಗೀನ ಜನರಲ್ಲಿ ಇಲ್ಲ ಪ್ರತಿ ನಿತ್ಯ ಜಂಜಾಟದಲ್ಲಿ ಮುಳುಗಿ ಹೋಗುವುದನ್ನು ಕಾಣುತ್ತೇವೆ.ಸುಖವಾಗಿ ಜೀವನ ನಡೆಸಲು ಆಗುತ್ತಿಲ್ಲ ಏಕೆಂದರೆ ನಾವು ಊಟ ಮಾಡುವ ಜಿಂಗಾ ಆಹಾರವನ್ನು ಸೇವನೆ ಮಾಡುತ್ತೇವೆ. ಅದಕ್ಕಾಗಿ ನಮಗೆ ಬೆಳಿಗ್ಗೆ ಏಳಲು, ನಡೆಯಲು ಆಗುತ್ತಿಲ್ಲ. ನಾವು ತಿನ್ನುವ ಪ್ರತಿಯೊಂದು ಆಹಾರದಲ್ಲಿ ಕ್ಯಾಮಿಕಲ್ಸ್ ಒಳಗೊಂಡಿರುವುದು ತಿನ್ನುತ್ತೇವೆ. ಅದಕ್ಕಾಗಿ ನಾವೆಲ್ಲರೂ…

Read More

ಬೆಳಗಾವಿ: ಸಮೀಪದ ಹೊಸ ವಂಟಮುರಿ ಗ್ರಾಮದಲ್ಲಿ ಇತ್ತೀಚೆಗೆ ದೌರ್ಜನ್ಯಕ್ಕೆ ಒಳಗಾಗಿರುವ ಮಹಿಳೆಗೆ ಸರಕಾರವು 2.03 ಎಕರೆ ಜಮೀನು ಮಂಜೂರು ಮಾಡಿ ಆದೇಶಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ತಿಳಿಸಿದ್ದಾರೆ. ದೌರ್ಜನ್ಯಕ್ಕೆ ಒಳಗಾಗಿರುವ ಕಾಕತಿ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸ ವಂಟಮುರಿ ಗ್ರಾಮದ ಸಂತ್ರಸ್ತ ಮಹಿಳೆಗೆ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ ಭೂ ಒಡೆತನ ಯೋಜನೆಯಡಿ ಜಮೀನು ಮಂಜೂರು‌ ಮಾಡಿ ಆದೇಶಿಸಲಾಗಿರುತ್ತದೆ. ಪರಿಶಿಷ್ಟ ವರ್ಗಗಳ ಕಲ್ಯಾಣ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಚಿವರಾದ ಬಿ.ನಾಗೇಂದ್ರ ಅವರು ವಿಶೇಷ ಪ್ರಕರಣವೆಂದು ಪರಿಗಣಿಸಿ ತಕ್ಷಣವೇ ಜಮೀನು ಮಂಜೂರಾತಿಗೆ ನಿರ್ದೇಶನ ನೀಡಿದ್ದರು. ಈ. ಹಿನ್ನೆಲೆಯಲ್ಲಿ ನೊಂದ ಮಹಿಳೆಗೆ ಆರ್ಥಿಕ ಸ್ಥಿರತೆ ಒದಗಿಸುವ ದೃಷ್ಟಿಯಿಂದ ವಿಶೇಷ ಪ್ರಕರಣವೆಂದು ಪರಿಗಣಿಸಿ ಜಮೀನು ಮಂಜೂರು ಮಾಡಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಅನುಮೋದನೆ ನೀಡಿರುತ್ತದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. 2.03 ಎಕರೆ ಜಮೀನು…

Read More

ಬೆಳಗಾವಿ:- ಇಲ್ಲಿ ನಡೆದ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆಯ ಭೇಟಿಗೆ ಬೆಂಗಳೂರು ಹೈಕೋರ್ಟ್ ನಿರ್ಬಂಧ ವಿಧಿಸಿದೆ. ಕೋರ್ಟ್ ಸಾಮಾನ್ಯವಾಗಿ ವ್ಯಕ್ತಿಗಳ ಸ್ವಾತಂತ್ರ್ಯ ನಿರ್ಬಂಧಿಸುವುದಿಲ್ಲ. ನೊಂದಿರುವ ಸಂತ್ರಸ್ತ ಮಹಿಳೆಗೆ ವೈದ್ಯರು ಚಿಕಿತ್ಸೆ ಒದಗಿಸುತ್ತಿದ್ದಾರೆ. ಹೀಗಾಗಿ ಸಂತ್ರಸ್ತೆಯ ಭೇಟಿಗೆ ಷರತ್ತುಬದ್ಧ ನಿರ್ಬಂಧ ವಿಧಿಸಲಾಗಿದೆ. ವೈದ್ಯಾಧಿಕಾರಿ ಲಿಖಿತ ಅನುಮತಿಯಿಲ್ಲದೇ ಭೇಟಿ ನೀಡುವಂತಿಲ್ಲ ಹಾಗೂ ವ್ಯಕ್ತಿ, ಸಂಘಟನೆ ಅಥವಾ ರಾಜಕೀಯ ಪಕ್ಷಗಳ ಭೇಟಿಗೂ ಕೂಡ ನಿರ್ಬಂಧ ಹೇರಲಾಗಿದೆ. ಆಯೋಗಗಳು, ತನಿಖಾ ಸಂಸ್ಥೆಗಳು ಮಾತ್ರ ಸಂತ್ರಸ್ತೆ ಭೇಟಿ ಮಾಡಬಹುದು. ಇದು ಸಂತ್ರಸ್ತೆಯ ಹಿತದೃಷ್ಟಿಯಿಂದ‌ ಈ ಕ್ರಮ ಎಂದು ಮುಖ್ಯ ನ್ಯಾಯಾಧೀಶರಾದ ಪ್ರಸನ್ನ ಬಿ ವರಾಳೆ ಹಾಗೂ ನ್ಯಾಯಮೂರ್ತಿ.ಕೃಷ್ಣ ದೀಕ್ಷಿತ್‌ರಿದ್ದ ಪೀಠ ಆದೇಶಿಸಿದೆ. ಈ ವೇಳೆ ಆದೇಶ ಪಾಲಿಸುವುದಾಗಿ ಸರ್ಕಾರದ ಎಎಜಿ ಪ್ರತಿಮಾ ಹೊನ್ನಾಪುರ ಭರವಸೆ ನೀಡಿದ್ದಾರೆ. ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಹೋಗಲು ತಡ ಮಾಡಿದ ಹಿನ್ನಲೆ ನಿನ್ನೆ(ಡಿ.15) ಕಾಕತಿ ಠಾಣೆಯ ಸಿಪಿಐ ವಿಜಯ್ ಸಿನ್ನೂರ್ ಅವರನ್ನು ಅಮಾನತುಗೊಳಿಸಿ ಬೆಳಗಾವಿ ಪೊಲೀಸ್ ಆಯುಕ್ತ…

Read More

ಬೆಂಗಳೂರು:- ಕೊರೊನಾ ಲಕ್ಷಣ ಕಂಡು ಬಂದ್ರೆ ನಿರ್ಲಕ್ಷ್ಯ ಬೇಡ, ಕಡ್ಡಾಯ ಪರೀಕ್ಷೆ ಮಾಡಿಸಿ ಎಂದು ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ. ಕೇರಳದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿರುವ ಬಗ್ಗೆ ವರದಿಯಾಗುತ್ತಿದೆ. ಕರ್ನಾಟಕದಲ್ಲಿ ಈವರೆಗೆ 58 ಕೋವಿಡ್ ಪಾಸಿಟಿವ್ ಕೇಸ್ ಇವೆ. ಈ ಪೈಕಿ 11 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ಕು ತಿಂಗಳಿನಲ್ಲಿ ಕೊರೊನಾದಿಂದ ಒಬ್ಬರು ಸಾವನ್ನಪ್ಪಿದ್ದು, ಈಗ ಕರೊನಾ ಹೆಚ್ಚಾಗುತ್ತದೆ ಎಂಬ ಬಗ್ಗೆ ಮಾಹಿತಿಯಿದೆ. ಹೀಗಾಗಿ ಕೇಂದ್ರದ ಅಧಿಕಾರಿಗಳ ಜತೆ ನಮ್ಮ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ. ಐಎಲ್‌ಐ ಹಾಗೂ ಸಾರಿ ಪ್ರಕರಣ ಕಂಡು ಬಂದರೆ ಕಡ್ಡಾಯವಾಗಿ ಟೆಸ್ಟ್ ಮಾಡಬೇಕು. ಕೊರೊನಾ ಲಕ್ಷಣ ಕಂಡು ಬಂದರೆ ಕಡ್ಡಾಯ ಪರೀಕ್ಷೆಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ವರದಿ ಬಂದ ನಂತರ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದೆಯಾ ಎಂಬುವುದು ಗೊತ್ತಾಗುತ್ತೆ. ಯಾರೂ ಕೂಡ ಆತಂಕ ಪಡುವ ಅಗತ್ಯವಿಲ್ಲ, ಯಾವುದೇ ಗಂಭೀರ ತೊಂದರೆ ಆಗಲ್ಲ. ಯಾರಿಗೆ ರೋಗ ಲಕ್ಷಣಗಳು ಕಂಡು ಬಂದರೆ ಪರೀಕ್ಷಿಸಿಕೊಳ್ಳಿ. ಕೊರೊನಾ ಪರೀಕ್ಷೆಗೆ ಹೆಚ್ಚಿನ ಕಿಟ್ ಖರೀದೀಗೆ ಸೂಚಿಸಲಾಗಿದೆ.…

Read More

ಬೀದರ್:- ವಸತಿ ಶಾಲೆಗಳಲ್ಲಿ 12 ಸಾವಿರ ಹುದ್ದೆಗಳು ಖಾಲಿ ಇವೆ ಎಂದು ಸಚಿವ ಎಚ್‌.ಸಿ.ಮಹದೇವಪ್ಪ ಹೇಳಿದ್ದಾರೆ. ಅರವಿಂದಕುಮಾರ ಅರಳಿಯವರು ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು, ಬೋಧಕ, ಬೋಧಕೇತರ ಹಾಗೂ ಗ್ರುಪ್‌ ‘ಡಿ’ ಸೇರಿದಂತೆ ಒಟ್ಟು 19,094 ಹುದ್ದೆಗಳು ಸರ್ಕಾರದಿಂದ ಮಂಜೂರಾಗಿವೆ. ಇದರಲ್ಲಿ 6,403 ಕಾಯಂ ಹುದ್ದೆಗಳಿವೆ. 12,696 ಹುದ್ದೆಗಳು ಖಾಲಿ ಉಳಿದಿವೆ. ಅತಿಥಿ ಶಿಕ್ಷಕ/ಉಪನ್ಯಾಸಕರನ್ನು ಏಜೆನ್ಸಿ ಮೂಲಕ ಜಿಲ್ಲಾ ಹಂತದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಸ್ವಂತ ಕಟ್ಟಡದಲ್ಲಿ ಕೆಲಸ ನಿರ್ವಹಿಸುತ್ತಿರುವ ವಸತಿ ಶಾಲೆಗಳ ಪೈಕಿ 91 ಶಾಲೆ/ಕಾಲೇಜುಗಳಿಗೆ ಕಂಪ್ಯೂಟರ್‌ ಲ್ಯಾಬ್‌ಗಳ ಸೌಕರ್ಯ ಕಲ್ಪಿಸಲಾಗಿದೆ. 25 ವಸತಿ ಶಾಲೆಗಳಲ್ಲಿ ಕಂಪ್ಯೂಟರ್‌ ಲ್ಯಾಬ್‌ ಅಳವಡಿಸಲು ಆಡಳಿತಾತ್ಮಕ ಅನುಮೋದನೆ ದೊರೆತಿದೆ ಎಂದು ತಿಳಿಸಿದ್ದಾರೆ.

Read More