Author: AIN Author

ಈ ಚಳಿಗಾಲದಲ್ಲಿ ಜ್ವರ, ನೆಗಡಿ, ಗಂಟಲು ಕೆರೆತ ಹೆಚ್ಚಿನವರಲ್ಲಿ ಸರ್ವೇಸಾಮಾನ್ಯ. ಹವಾಮಾನ ಬದಲಾವಣೆ ವೇಳಗೆ ಆರೋಗ್ಯದಲ್ಲಾಗುವ ಏರುಪೇರು ಕಿರಿಕಿರಿಯುಂಟುಮಾಡುತ್ತದೆ. ಇಂತಹ ಸಂದರ್ಭದಲ್ಲಿ ನೀವು ಬೆಚ್ಚಗಿನ ಗಿಡಮೂಲಿಕೆಗಳ ಚಹಾ ಕುಡಿಯುವುದು ಉತ್ತಮ. ನಾವಿಂದು ಪುದೀನಾ ಚಹಾ ಮಾಡೋದು ಹೇಗೆಂದು ಹೇಳಿಕೊಡುತ್ತೇವೆ. ಬೇಕಾಗುವ ಪದಾರ್ಥಗಳು: ನೀರು – 3 ಕಪ್ ದಾಲ್ಚಿನ್ನಿ ಚಕ್ಕೆ – 1 ಇಂಚು ಲವಂಗ – 2 ನಿಂಬೆಹಣ್ಣು – 1 ತಾಜಾ ಪುದೀನಾ ಎಲೆಗಳು – 1 ಕಪ್ ಜೇನು ತುಪ್ಪ – ಸ್ವಾದಕ್ಕನುಸಾರ ಮಾಡುವ ವಿಧಾನ: * ಮೊದಲಿಗೆ ಒಂದು ಪಾತ್ರೆಯಲ್ಲಿ ನೀರು ಹಾಕಿ ಕುದಿಸಿಕೊಳ್ಳಿ. * ಉರಿಯನ್ನು ಕಡಿಮೆ ಮಾಡಿ, ಅದಕ್ಕೆ ದಾಲ್ಚಿನ್ನಿ, ಲವಂಗ ಸೇರಿಸಿ 1 ನಿಮಿಷ ಕುದಿಸಿಕೊಳ್ಳಿ. * ನಂತರ ಪುದೀನಾ ಎಲೆಗಳನ್ನು ಸೇರಿಸಿ 1-2 ನಿಮಿಷ ಕುದಿಸಿ. * ಈಗ ಉರಿಯನ್ನು ಆಫ್ ಮಾಡಿ, ಅದನ್ನು ಕಪ್‌ಗಳಿಗೆ ಸೋಸಿಕೊಳ್ಳಿ. * ಬಳಿಕ ಜೇನುತುಪ್ಪ ಹಾಗೂ ನಿಂಬೆ ರಸವನ್ನು ಸೇರಿಸಿ. * ಇದೀಗ…

Read More

ಮಂಡ್ಯ:- ಹೆಣ್ಣು ಭ್ರೂಣ ಹತ್ಯೆ ಪ್ರಕರಣವನ್ನು ರಾಜ್ಯಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರ್ ಅಶೋಕ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಹೆಣ್ಣು ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಪ್ರಕರಣ ಬೆಳಕಿಗೆ ಬಂದ ನಂತರ ನಿಯಮಾನುಸಾರ ತನಿಖೆ ನಡೆಸಿಲ್ಲ. ಇದುವರೆಗೆ ಸ್ಕ್ಯಾನಿಂಗ್ ಸೆಂಟರ್ ಆಗಿದ್ದ ಆಲೆಮನೆಯನ್ನು ಜಪ್ತಿ ಮಾಡಿಲ್ಲ. ಅಲ್ಲಿ ಏನೂ ನಡೆದೇ ಇಲ್ಲವೆಂಬಂತೆ ಆಲೆಮನೆ ಕಾರ್ಯನಿರ್ವಹಿಸುತ್ತಿದೆ. ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಕೂಡ ಪ್ರಕರಣವನ್ನು ನಿರ್ಲಕ್ಷಿಸಿವೆ. ನಿಯಮಬದ್ಧವಾಗಿ ತನಿಖೆ ನಡೆಸಿದ್ದರೆ ಸಾಕ್ಷ್ಯಗಳನ್ನು ಸಂಗ್ರಹಿಸಬಹುದಾಗಿತ್ತು. ಸಾಕ್ಷ್ಯ ನಾಶಕ್ಕೆ ಅಧಿಕಾರಿಗಳೇ ಎಡೆಮಾಡಿಕೊಟ್ಟಿದ್ದಾರೆ ಎಂದು ದೂಷಿಸಿದರು. ಆಲೆಮನೆ ಸ್ಕ್ಯಾನಿಂಗ್ ಸೆಂಟರ್ ಆಗಿದ್ದರಿಂದ ಸ್ಕ್ಯಾನ್ ಮಾಡುವ ಮೊದಲಿಗೆ ಜೆಲ್ ಹಚ್ಚುತ್ತಾರೆ. ಗ್ಲೌಸ್‌ಗಳನ್ನು ಹಾಕಿಕೊಂಡಿರುತ್ತಾರೆ. ಜೆಲ್ ಒರೆಸಿ ಎಸೆದ ಹತ್ತಿಗಳು, ಗ್ಲೌಸ್ಗ್‌ಗಳು, ಗೋಡೆಯ ಮೇಲೆ ಅಂಟಿರಬಹುದಾದ ಜೆಲ್, ಗರ್ಭಿಣಿ ಸ್ತ್ರೀಯರಿಗೆ ಬಳಸಿ ಬಿಸಾಡಿರುವ ಬಟ್ಟೆಗಳು, ಪ್ರಿಸ್‌ಕ್ರಿಪ್ಷನ್‌ಗಳು, ಟ್ಯಾಬ್ಲೆಟ್‌ಗಳು ಸಾಕ್ಷ್ಯಗಳನ್ನು ಸಂಗ್ರಹಿಸುವುದಕ್ಕೆ ಅವಕಾಶಗಳಿದ್ದರೂ ಆರೋಗ್ಯ ಇಲಾಖೆ ಕೈಚೆಲ್ಲಿ ಕುಳಿತಿದ್ದಾರೆ. ಒಮ್ಮೆ ಸಾಕ್ಷ್ಯಗಳು ಸಿಕ್ಕಿದ್ದರೂ ಅವುಗಳನ್ನು ಅವರೇ ನಾಶಪಡಿಸಿರುವ ಸಾಧ್ಯತೆಗಳಿವೆ.…

Read More

ಬಳ್ಳಾರಿ:- ಸಂಸತ್ ಅಕ್ರಮ ಪ್ರವೇಶ ದೇಶವೇ ತಲೆ ತಗ್ಗಿಸುವಂತಾಗಿದೆ ಎಂದು ಮಾಜಿ ಸಂಸದ ಉಗ್ರಪ್ಪ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಸಂಸತ್ ಅಕ್ರಮ ಪ್ರವೇಶ ಭದ್ರತಾ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದ್ದು, ಈ ಪ್ರಕರಣದಿಂದ ಇಡೀ ದೇಶವೇ ತಲೆ ತಗ್ಗಿಸುವಂತಾಗಿದೆ ಎಂದರು. ಸಂಸತ್ ಒಳಗೆ ಪ್ರವೇಶವಾಗಲು ನಾಲ್ಕು ಹಂತದ ತಪಾಸಣೆ ಇರುತ್ತದೆ. ಎಲ್ಲ ತಪಾಸಣೆಗಳನ್ನು ಭೇದಿಸಿಕೊಂಡು ಯುವಕರು ಒಳ ನುಗ್ಗಿದ್ದಾರೆ ಎಂದಾದರೆ ಬೇಹುಗಾರಿಕೆ ಇಲಾಖೆ ಏನು ಮಾಡುತ್ತಿತ್ತು. ದೇಶದಲ್ಲಿ ಎಲ್ಲೋ ನಡೆಯುವ ದಾಳಿಯ ಬಗ್ಗೆ ಮೊದಲೇ ಬೇಹುಗಾರಿಕೆ ಇಲಾಖೆಗೆ ಮಾಹಿತಿ ಇರುತ್ತದೆ. ಆದರೆ, ಸಂಸತ್ ನಲ್ಲಿ ನಡೆಯುವ ದಾಳಿಯ ಬಗ್ಗೆ ಯಾಕೆ ಮಾಹಿತಿ ಇರಲಿಲ್ಲ ಎಂದು ಪ್ರಶ್ನಿಸಿದರು. ಇಡೀ ಘಟನೆಯ ಬಳಿಕದ ಬೆಳವಣಿಗೆ ನೋಡಿದರೆ ಬಿಜೆಪಿ ನಾಯಕರು ಏನೂ ಆಗಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಸಂಸತ್ ರಕ್ಷಣೆ ಮಾಡದ ಪ್ರಧಾನಮಂತ್ರಿಗಳಿಂದ ಈ ದೇಶದ ರಕ್ಷಣೆ ಹೇಗೆ ಎಂಬ ಪ್ರಶ್ನೆ ಮೂಡುತ್ತಿದೆ. ದೇಶದ ಕಾವಲುಗಾರ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ ರಕ್ಷಣೆ ಮಾಡಲು…

Read More

ಕಿರುತೆರೆಯ ಜನಪ್ರಿಯ ಸೀರಿಯಲ್ ‘ಗೀತಾ’ (Geetha) ಹೀರೋ ಧನುಷ್ ಗೌಡ್ (Dhanush Gowda) ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸಂಜನಾ ಜೊತೆ ಅದ್ದೂರಿಯಾಗಿ ಧನುಷ್ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ‘ಗೀತಾ’ ಸೀರಿಯಲ್ ಮೂಲಕ ಮನೆಮಾತಾದ ವಿಜಯ್ ಅಲಿಯಾಸ್ ಧನುಷ್ ಗೌಡ ಅವರು ಗ್ರ್ಯಾಂಡ್‌ ಆಗಿ ಸಂಜನಾ (Sanjana Prabhu) ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಮೂಲಕ ಗಾಸಿಪ್‌ಗೆಲ್ಲಾ ಬ್ರೇಕ್ ಹಾಕಿದ್ದಾರೆ. ಬೆಂಗಳೂರಿನ ಖಾಸಗಿ ರೆಸಾರ್ಟ್‌ವೊಂದರಲ್ಲಿ ಧನುಷ್-ಸಂಜನಾ ಎಂಗೇಜ್‌ಮೆಂಟ್ ಕಾರ್ಯಕ್ರಮ ನಡೆದಿದೆ. ‘ಗೀತಾ’ ಸಹನಟಿ ಭವ್ಯಾ ಗೌಡ ಮತ್ತು ಕುಟುಂಬಸ್ಥರು, ಆಪ್ತರು ಅಷ್ಟೇ ಈ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸೋಷಿಯಲ್ ಮೀಡಿಯಾದಲ್ಲಿ ನಟಿ ಭವ್ಯಾ ಗೌಡ (Bhavya Gowda) ಅವರು ಧನುಷ್-ಸಂಜನಾ ಜೊತೆಗಿನ ಫೋಟೋ ಹಂಚಿಕೊಂಡು ಹೊಸ ಬಾಳಿಗೆ ಶುಭಕೋರಿದ್ದಾರೆ. ಧನುಷ್ ಎಂಗೇಜ್‌ಮೆಂಟ್ ಫೋಟೋ ವೈರಲ್ ಆಗ್ತಿದ್ದಂತೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಅಂದಹಾಗೆ ಧನುಷ್‌ ನಿಶ್ಚಿತಾರ್ಥದ ಸುಂದರ ಫೋಟೋಗಳು ಸುಜಯ್‌ ನಾಯ್ಡು ಅವರ…

Read More

ಕಾಸರಗೋಡು: ಕೇರಳ ರಾಜ್ಯ ಮಟ್ಟದ ಶಾಲಾ ಕ್ರೀಡಾಕೂಟದ ಟೆಕ್ವಾಂಡೋದಲ್ಲಿ ಚಿನ್ನದ ಪದಕ ಗೆದ್ದು, (Taekwondo) ಕನ್ನಡತಿ ಎನ್.‌ ಗಣ್ಯ ರಾಷ್ಟ್ರೀಯ ಶಾಲಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಕಾಸರಗೋಡು (Kasaragod) ಜಿಲ್ಲೆಯ ಎಡನೀರು ಸ್ವಾಮೀಜಿಸ್‌ ಹೈಯರ್‌ ಸೆಕೆಂಡರಿ ಶಾಲೆಯಲ್ಲಿ ಪ್ಲಸ್‌ ಒನ್‌ ವಿದ್ಯಾರ್ಥಿನಿಯಾಗಿರುವ ಗಣ್ಯ, 17 ವರ್ಷದೊಳಗಿನ ಬಾಲಕಿಯರ 50-65 ಕೆಜಿ ವಿಭಾಗದಲ್ಲಿ ಮಿಂಚಿದರು. ಗಣ್ಯ ಸಾಧನೆಯಿಂದಾಗಿ ಕಾಸರಗೋಡು ಜಿಲ್ಲೆ ಸೀನಿಯರ್‌ ಹಾಗೂ ಜೂನಿಯರ್‌ ಟೆಕ್ವಾಂಡೋ (Junior Taekwondo) ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ಗೆದ್ದಿದೆ. ಆರ್‌ಎಸ್‌ಸಿ ಎರ್ನಾಕುಳಂನಲ್ಲಿ (Ernakulam) ನಡೆದ ಕೇರಳ ರಾಜ್ಯ ಮಟ್ಟದ ಶಾಲಾ ಕ್ರೀಡಾಕೂಟದ ಗೆಲುವಿನೊಂದಿಗೆ ಗಣ್ಯ ಮಧ್ಯಪ್ರದೇಶದಲ್ಲಿ ನಡೆಯುವ ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ. ಅ`ಗಣ್ಯʼ ಸಾಧನೆ..!: ಟ್ವೆಕಾಂಡೋ ಮಾತ್ರವಲ್ಲ ಗಣ್ಯಗೆ ಇತರೆ ಕ್ರೀಡೆಗಳಲ್ಲೂ ಆಸಕ್ತಿ ಇದೆ. ಗಣ್ಯಳ ಸಾಧನೆಯ ಕಿರುವಿವರ ಇಲ್ಲಿದೆ ನೋಡಿ. 2022ರಲ್ಲಿ ಕಾಸರಗೋಡು ಜಿಲ್ಲೆಯ ಪಡನ್ನಕ್ಕಾಡ್‌ನಲ್ಲಿ ನಡೆದ 23ನೇ ಕಾಸರಗೋಡು ಜಿಲ್ಲಾ ಮಟ್ಟದ ಟೆಕ್ವಾಂಡೋ ಸ್ಪರ್ಧೆಯಲ್ಲಿ ಬೆಳ್ಳಿ ಪದಕ 2018ರಲ್ಲಿ ಕಾಸರಗೋಡು ಜಿಲ್ಲಾ ಮಟ್ಟದ ಟ್ವೆಕಾಂಡೋ…

Read More

ರೋಹಿತ್​ ಶರ್ಮ ಅವರನ್ನು ಮುಂಬೈ ಇಂಡಿಯನ್ಸ್​ ತಂಡದ ನಾಯಕತ್ವದಿಂದ ಅಕಾಲಿಕವಾಗಿ ಕೆಳಗಿಳಿಸಿರುವುದಕ್ಕೆ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮುಂಬೈ ಇಂಡಿಯನ್ಸ್​ ತಂಡವನ್ನು ಲಾಂತರ ಸಂಖ್ಯೆಯಲ್ಲಿ ಅನ್​ಫಾಲೋ ಮಾಡುವ ಮೂಲಕವೂ ಅಭಿಮಾನಿಗಳು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಮುಂಬೈ ತಂಡದ ಕೆಲ ಸಹ ಆಟಗಾರರೂ ಪರೋಕ್ಷವಾಗಿ ಬೆಂಬಲ ಸೂಚಿಸಿದ್ದಾರೆ. ಇತ್ತೀಚೆಗೆ ಹಾರ್ದಿಕ್​ ಪಾಂಡ್ಯ ಗುಜರಾತ್​ ಟೈಟಾನ್ಸ್​ನಿಂದ ಮುಂಬೈ ತಂಡಕ್ಕೆ ಮರಳಿದಾಗ ಸಂಭ್ರಮಿಸಿದ್ದ ಅಭಿಮಾನಿಗಳಿಗೆ, ರೋಹಿತ್​ರನ್ನು ದಿಢೀರನೆ ನಾಯಕತ್ವದಿಂದ ಕೆಳಗಿಳಿಸಿರುವುದು ತೀವ್ರ ಆಘಾತ ನೀಡಿದೆ. 2011ರಿಂದ ಮುಂಬೈ ತಂಡದ ಭಾಗವಾಗಿರುವ ರೋಹಿತ್​, 2013ರಲ್ಲಿ ಮೊದಲ ಬಾರಿ ನಾಯಕತ್ವ ವಹಿಸಿಕೊಂಡಾಗಲೇ ತಂಡ ಮೊದಲ ಬಾರಿ ಐಪಿಎಲ್​ ಟ್ರೋಫಿ ಗೆದ್ದಿತ್ತು. ನಂತರದಲ್ಲಿ 6 ವರ್ಷಗಳ ಅಂತರದಲ್ಲಿ ಮತ್ತೆ 4 ಟ್ರೋಫಿ ಗೆದ್ದುಕೊಟ್ಟಿದ್ದರು. ಆದರೆ ಇದೀಗ ತಂಡದ ನಾಯಕತ್ವದಿಂದ ಕಸಿದಿರುವ ರೋಹಿತ್ ಶರ್ಮಾ ಫ್ಯಾನ್ಸ್ ನಿಂದ ಅನ್ ಫಾಲೋ ಪ್ರತಿಭಟನೆ ಜರುಗಿದೆ.

Read More

ರಿಂಕು ಉತ್ತಮ ಆಟಗಾರ, ಅವಕಾಶಗಳನ್ನು ಸೃಷ್ಟಿಸಿಕೊಂಡಿದ್ದಾರೆ ಎಂದು ಕನ್ನಡಿಗ ಕೆಎಲ್​ ರಾಹುಲ್​ ಹೇಳಿದ್ದಾರೆ. ನಡೆಯಲಿರುವ ಮೊದಲ ಏಕದಿನ ಪಂದ್ಯಕ್ಕೂ ಮುನ್ನಾದಿನ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೆಎಲ್ ರಾಹುಲ್​​ ಮಾತನಾಡಿದರು. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನಗಳಲ್ಲಿ ರಿಂಕು ಸಿಂಗ್​ ನಂ.6 ರಲ್ಲಿ ಬ್ಯಾಟ್ ಮಾಡಬಹುದೇ ಎಂದು ರಾಹುಲ್‌ ಕೇಳಿದ ಪ್ರಶ್ನೆಗೆ,”ರಿಂಕು ಎಂತಹ ಉತ್ತಮ ಆಟಗಾರ ಎಂಬುದನ್ನು ತೋರಿಸಿದ್ದಾರೆ. ಐಪಿಎಲ್‌ನಲ್ಲಿ ಅವರನ್ನು ಎಷ್ಟು ನುರಿತವರು ವೀಕ್ಷಿಸಿದ್ದಾರೆಂದು ನಮಗೆಲ್ಲರಿಗೂ ತಿಳಿದಿದೆ. ಟಿ20 ಸರಣಿಯಲ್ಲಿ ತೋರಿದ ಪ್ರದರ್ಶನ ಮತ್ತು ಒತ್ತಡವನ್ನು ನಿಯಂತ್ರಿಸುವ ರೀತಿ ಉತ್ತಮವಾಗಿದೆ. ಇದು ನೋಡಲು ಉಲ್ಲಾಸದಾಯಕವಾಗಿತ್ತು. ಅವರು ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ, ಹೀಗಾಗಿ ಅವರು ಅವಕಾಶಗಳನ್ನು ಸೃಷ್ಠಿಸಿಕೊಳ್ಳುತ್ತಾರೆ” ಎಂದಿದ್ದಾರೆ. 2023ರ ಐಪಿಎಲ್​ ಆವೃತ್ತಿಯ ಪ್ರದರ್ಶನದಿಂದ ರಾಷ್ಟ್ರೀಯ ತಂಡದಲ್ಲಿ ರಿಂಕು ಅವಕಾಶ ಪಡೆದುಕೊಂಡರು. ವೆಸ್ಟ್​ ಇಂಡೀಸ್​ ಪ್ರವಾಸ, ಐರ್ಲೆಂಡ್​ ಪ್ರವಾಸ, ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ20 ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಟಿ-20 ಸರಣಿಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಏಕದಿನ ತಂಡದಲ್ಲಿ ಅವಕಾಶ…

Read More

ಅಡುಗೆಯಲ್ಲಿ ಎಣ್ಣೆಯಂಶ ಹೆಚ್ಚಾಗಿದ್ದರೆ ನಾವು ಹೇಳುವ ಈ ಒಂದು ಸಲಹೆ ಪಾಲಿಸಿ. ಕೆಲವೊಮ್ಮೆ ಅಡುಗೆಯಲ್ಲಿ ಎಣ್ಣೆಯಂಶ ಹೆಚ್ಚಾಗುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಈ ಎಣ್ಣೆಯನ್ನು ತೆಗೆಯಲು ಈ ಸಲಹೆ ಪಾಲಿಸಿ. ಜೋಳದ ಹಿಟ್ಟನ್ನು ನೀರಿನಲ್ಲಿ ಬೇಯಿಸಿ ನಂತರ ಸಾಂಬಾರಿಗೆ ಮಿಕ್ಸ್ ಮಾಡಿದರೆ ಅದು ಎಣ್ಣೆಯಂಶವನ್ನು ಹೀರಿಕೊಳ್ಳುತ್ತದೆ. ಹಾಗೇ ತರಕಾರಿಗಳನ್ನು ಬೇಯಿಸುವಾಗ ಎಣ್ಣೆಯಂಶ ಹೆಚ್ಚಾಗಿದ್ದರೆ ಅದಕ್ಕೆ ಕಡಲೆ ಹಿಟ್ಟು ಬಳಸಬಹುದು. ಕಡಲೆಹಿಟ್ಟನ್ನು ಸಣ್ಣ ಉರಿಯಲ್ಲಿ ಹುರಿದು ನಂತರ ತರಕಾರಿಯ ಜೊತೆಗೆ ಬೆರೆಸಿದರೆ ಎಣ್ಣೆಯಂಶ ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ.

Read More

ಭಾರತದ ಸ್ಟಾರ್ ಆಲ್​ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಮುಂಬೈ ಇಂಡಿಯನ್ಸ್​ ತಂಡದ ನೂತನ ನಾಯಕರಾಗಿ ನೇಮಕಗೊಂಡಿದ್ದಾರೆ. ಮುಂಬೈ ಇಂಡಿಯನ್ಸ್​ ಮ್ಯಾನೇಜ್​ಮೆಂಟ್ ಮಹತ್ವದ ನಿರ್ಧಾರ ಕೈಗೊಂಡಿದೆ. ಹಾರ್ದಿಕ್ ಪಾಂಡ್ಯ ಅವರನ್ನು ಐಪಿಎಲ್​ 2024 ಸೀಸನ್​ಗೆ ನಾಯಕನನ್ನಾಗಿ ನೇಮಿಸಲಾಗಿದೆ ಎಂದು ಅಧಿಕೃತವಾಗಿ ಪ್ರಕಟಿಸಿದೆ. ಇತ್ತೀಚೆಗಷ್ಟೇ ಹಾರ್ದಿಕ್ ಪಾಂಡ್ಯ ಅವರನ್ನು ಗುಜರಾತ್ ಟೈಟಾನ್ಸ್​ನಿಂದ ಟ್ರೇಡ್ ಮೂಲಕ ಸ್ವಾಧೀನಪಡಿಸಿಕೊಂಡ ಮುಂಬೈ ತಂಡ ತಕ್ಷಣವೇ ಅವರಿಗೆ ಪ್ರಮುಖ ಜವಾಬ್ದಾರಿಯನ್ನು ನೀಡಿದೆ. ಅಲ್ಲದೆ, ಪಾಂಡ್ಯಗೆ ಆಲ್​ ದಿ ಬೆಸ್ಟ್​ ಹೇಳಿದೆ. ರೋಹಿತ್‌ ಶರ್ಮಾ ಅವರ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್‌ ತಂಡವು 2013, 2015, 2017, 2019 ಹಾಗೂ 2020ರ ಆವೃತ್ತಿಗಳಲ್ಲಿ ಮುಂಬೈ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. 2024ರ ಆವೃತ್ತಿಯಲ್ಲಿ ಪಾಂಡ್ಯ ನಾಯಕತ್ವದಲ್ಲಿ ಟ್ರೋಫಿ ಗೆಲ್ಲುವ ವಿಶ್ವಾಸ ಹೊಂದಿದೆ ರೋಹಿತ್ ಫ್ಯಾನ್ಸ್​ ಹಾರ್ಟ್​ ಛಿದ್ರ! ಮುಂಬೈ ತಂಡದ ನಾಯಕರಾಗಿ ರೋಹಿತ್ ಬದಲಿಗೆ ಪಾಂಡ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಇದರಿಂದ ರೋಹಿತ್ ಶರ್ಮಾ ಅಭಿಮಾನಿಗಳು ತೀವ್ರ ನಿರಾಸೆಗೊಂಡಿದ್ದಾರೆ. ಮುಂಬೈಗೆ ಐದು ಬಾರಿ ಐಪಿಎಲ್​ ಟ್ರೋಫಿ ಗೆಲ್ಲಿಸಿಕೊಟ್ಟ…

Read More

ಪ್ರಸಕ್ತ ಸಾಲಿನಲ್ಲಿ ಹಲ್ಲಿನ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆಯೇ ಹೆಚ್ಚು ಎನ್ನುತ್ತಾರೆ ವೈದ್ಯಕೀಯ ತಜ್ಞರು. ಹಲ್ಲಿನ ಸಮಸ್ಯೆ ಇರುವವರು ಯಾವುದೇ ಆಹಾರ ಸೇವಿಸಿದರೆ ನೋವು ಬರಬಹುದು. ನೀವೂ ಈ ಸಮಸ್ಯೆಯಿಂದ ಬಳಲುತ್ತಿದ್ದೀರಾ..? ಈ ಸಲಹೆಗಳನ್ನು ಪಾಲಿಸಿ.. ಪ್ರತಿದಿನ ಬೆಳಿಗ್ಗೆ ಮತ್ತು ಮಲಗುವ ಮುನ್ನ ಹಲ್ಲುಜ್ಜಬೇಕು. ಹೀಗೆ ಮಾಡುವುದರಿಂದ ಹಲ್ಲು ನೋವು ಮತ್ತು ವಸಡು ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಹಲ್ಲುನೋವು ಎಂದರೆ ಏನು? ಅದರಿಂದ ಪರಿಹಾರ ಪಡೆಯುವುದು ಹೇಗೆ ಎಂದು ತಿಳಿಯೋಣ ಹಲ್ಲಿನ ನರವು ಹಾನಿಗೊಳಗಾದಾಗ ಹಲ್ಲುನೋವು ಸಂಭವಿಸುತ್ತದೆ. ಅಲ್ಲದೆ, ಹಲ್ಲುನೋವಿಗೆ ಹಲವು ಕಾರಣಗಳಿವೆ. ಕಿವಿ ನೋವು ಮತ್ತು ಜ್ವರದಿಂದಲೂ ನೋವು ಉಂಟಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ನೋವು 2 ದಿನಗಳಿಗಿಂತ ಹೆಚ್ಚು ಇದ್ದರೆ, ನೀವು ದಂತವೈದ್ಯರನ್ನು ಸಂಪರ್ಕಿಸಬೇಕು. ಹಲ್ಲುನೋವಿಗೆ ಕಾರಣವಾಗುವ ಹಲವು ಪರಿಸ್ಥಿತಿಗಳೂ ಇವೆ. ಹಲ್ಲಿನ ಮುರಿತ, ಸೋಂಕಿತ ಹಲ್ಲು, ಹೃದಯದ ಸಮಸ್ಯೆ, ಆಗಾಗ್ಗೆ ಹಲ್ಲುಗಳನ್ನು ರುಬ್ಬುವ ಮೂಲಕ ನೋವು ಕೂಡ ಉಂಟಾಗುತ್ತದೆ. ಒಂದು ಚಿಟಿಕೆ ಉಪ್ಪು : ತೀವ್ರ ಹಲ್ಲುನೋವು…

Read More