Author: AIN Author

ಮಹಿಳೆಯರು ತುಟಿಗಳ ಕುರಿತಾಗಿ ಹೆಚ್ಚಿನ ಕಾಳಜಿಯನ್ನು ವಹಿಸುತ್ತಾರೆ. ಕೆಲವೊಮ್ಮೆ ಒಣಗಿದ ತುಟಿ, ತುಟಿಯ ಚರ್ಮ ಕಿತ್ತು ಬರುವ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ತುಟಿ ಒಣಗಲು ಮತ್ತು ಚರ್ಮ ಕಿತ್ತುಬರಲು ಕಾರಣ ಮತ್ತು ಪರಿಹಾರವೇನು ಇಲ್ಲಿದೆ ಮಾಹಿತಿ. ತುಟಿಗಳು ಒಣಗುವುದು ಚಳಿಗಾಲದಲ್ಲಿ ಮಾತ್ರ ಎನ್ನುವ ಭಾವನೆ ತಪ್ಪು. ಬೇಸಿಗೆ ಕಾಲದಲ್ಲಿಯೂ ತುಟಿ ಡ್ರೈ ಆಗುತ್ತೆ. ತುಟಿಯ ಚರ್ಮವು ದೇಹದ ಇತರರ ಭಾಗಗಳ ಚರ್ಮಕ್ಕಿಂತ ತೆಳ್ಳಗೆ ಮತ್ತು ಮೃದುವಾಗಿರುತ್ತದೆ. ಹಾಗಾಗಿ ತುಟಿಯ ಚರ್ಮದ ಕುರಿತಾಗಿ ವಿಶೇಷ ಕಾಳಜಿಯನ್ನು ವಹಿಸಬೇಕಾಗುತ್ತದೆ. ತುಟಿಗಳಲ್ಲಿ ಕಡಿಮೆ ಪ್ರಮಾದ ತೈಲ ಗ್ರಂಥಿಗಳಿರುತ್ತವೆ. ಶೀತ, ಶುಷ್ಕಗಾಳಿ, ತುಟಿಯುನ್ನು ಒಣಗುವಂತೆ ಮಾಡುತ್ತದೆ. ಇದರಿಂದ ತುಟಿಯ ಚರ್ಮ ಒಣಗಿ ಸಿಪ್ಪೆಯಂತಾಗಿ ಕಿತ್ತು ಬರುತ್ತದೆ. ಚಳಿಗಾಲದಲ್ಲಿ ಹೆಚ್ಚಾಗಿ ತುಟಿಗಳು ಬಿರುಕು ಬಿಡುವುದು, ಚಪ್ಪಟೆಯಂತಾಗುವುದು ಸಹಜವಾಗಿದೆ. ಚಳಿಗಾಲದಲ್ಲಿ ತುಟಿ ಒಣಗಿದಂತಾಗಿ ಚರ್ಮ ಕಿತ್ತು ಬರುವುದು ಮಹಿಳೆಯರಿಗರೆ ಕಿರಿಕಿರಿಯನ್ನು ಉಂಟುಮಾಡುತ್ತದೆ. ಹೊರಗೆ ಹೋಗುವಾಗ ಮಹಿಳಿಯರು ಟೈಟಾನಿಯಂ ಡೈ ಆಕ್ಸೈಡ್ ಮತ್ತು ಜೆನಿಕ್ ಆಕ್ಸೈಡ್ ಅಂಶವನ್ನು ಹೊಂದಿರುವ ಸನ್ಸ್ಕ್ರೀನ್ ಬಳಕೆಯನ್ನು…

Read More

ಹುಬ್ಬಳ್ಳಿ : ನನ್ನ ತಂಟೆಗೆ ಬಂದ್ರೆ ಸುಮ್ಮನೆ ಬಿಡಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ವಿರೋಧಿಗಳಿಗೆ ವಾರ್ನ್ ಮಾಡಿದರು‌. ನಗರದ ಸವಾಯಿ ಗಂಧರ್ವ ಹಾಲ್ ನಲ್ಲಿ ತಮ್ಮ 68 ನೇ ಹುಟ್ಟು ಹಬ್ಬ ಕಾರ್ಯಕ್ರಮದಲ್ಲಿ ಗುಡುಗಿದ ಅವರು, ಕಳೆದ ವರ್ಷವೂ ನಾನು ಇದೇ ಮಾತು ಹೇಳಿದ್ದೆ ನನ್ನ ತಂಟೆಗೆ ಬಂದವರಿಗೆ ತಕ್ಕ ಉತ್ತರವನ್ನೂ ನೀಡಿದ್ದೇವೆ. ನಾನು ವಿಧಾನಸಭೆ ಚುನಾವಣೆಯಲ್ಲಿ ಸೋತಿರಬಹುದು ಆದ್ರೆ ಆರು ಬಾರಿ ನನ್ನನ್ನು ಜನ ಗೆಲ್ಲಿಸೋದನ್ನ ಮರೆಯಲ್ಲ ನಾನು ಸೋತರೂ ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಸೀಟು ಗೆಲ್ಲಿಸಿದ್ದೇವೆ. ಆದರೆ ನನ್ನ ಉಸಾಬರಿಗೆ ಬಂದವರಿಗೆ ತಕ್ಕ ಉತ್ತರ ಕೊಟ್ಟಿದ್ದೇನೆ. ಮುಂದೆಯೂ ನನ್ನ ಉಸಾಬರಿಗೆ ಬಂದವರಿಗೆ ಸುಮ್ಮನೆ ಬಿಡಲ್ಲ ಎಂದು ಹೇಳುವ ಮೂಲಕ ಸವಾಯಿಗಂಧರ್ವ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಶೆಟ್ಟರ್ ಎಚ್ಚರಿಕೆ ನೀಡಿದರು‌

Read More

ಕೋಲಾರ : ಜಿಲ್ಲೆಯ ಮಾಲೂರು ತಾಲ್ಲೂಕು ಯಲವಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅಮಾನವೀಯ ಕೃತ್ಯ ನಡೆದಿತ್ತು. ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಕ್ಲೀನ್ ಮಾಡಿಸಲಾಗಿತ್ತು. ಸದ್ಯ ಪ್ರಾಂಶುಪಾಲೆ ಭಾರತಮ್ಮ, ಸಹ ಶಿಕ್ಷಕ ಮುನಿಯಪ್ಪರನ್ನು ಮಾಸ್ತಿ ಪೊಲೀಸ್‌ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಪ್ರಾಂಶುಪಾಲೆ ಭಾರತಮ್ಮ, ಸಹ ಶಿಕ್ಷಕ ಮುನಿಯಪ್ಪ ಬಂಧಿತರು. ಹಾಸ್ಟೆಲ್ ವಾರ್ಡನ್ ಮಂಜುನಾಥ್ ಮತ್ತು ಅತಿಥಿ ಶಿಕ್ಷಕ ಅಭಿಷೇಕ್‌ ಪರಾರಿ ಆಗಿದ್ದು, ಹುಡುಕಾಟ ನಡೆಸುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ದೂರು ಹಿನ್ನೆಲೆ ಮಲಹೊರುವ ಪದ್ಧತಿ ನಿಯಂತ್ರಣ ಕಾಯ್ದೆ, ಅಟ್ರಾಸಿಟಿ ಕಾಯ್ದೆಯಡಿ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಕಳೆದ ಹಲವು ದಿನಗಳಿಂದ ಮಕ್ಕಳಿಗೆ ವಿವಿಧ ರೀತಿಯಲ್ಲಿ ಕಿರುಕುಳ ಕೂಡ ನೀಡಲಾಗುತ್ತಿದೆ ಅಂತಾ ಪ್ರಾಂಶುಪಾಲೆ ಭಾರತಮ್ಮ, ಶಿಕ್ಷಕ ಅಭಿಷೇಕ್, ಹಾಗೂ ವಾರ್ಡನ್ ಮಂಜುನಾಥ್ ಸೇರಿ ಕೆಲವು ಶಿಕ್ಷಕರ ವಿರುದ್ಧ ಆರೋಪ ಕೇಳಿಬಂದಿತ್ತು. ಮಕ್ಕಳಿಗೆ ಥಳಿಸುತ್ತಿರೋ, ಶಿಕ್ಷೆ ಕೊಡುತ್ತಿರುವ ವಿಡಿಯೋಗಳು ಕೂಡ ಲಭ್ಯವಾಗಿದ್ದವು. ಈ ವಸತಿ ಶಾಲೆಯಲ್ಲಿ ಮಕ್ಕಳಿಗೆ ಕಿರುಕುಳ…

Read More

ಕೆಲ ಗಂಟೆಗಳ ಹಿಂದೆಯಷ್ಟೇ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಸಹಾಯಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ ಹಿಂದಿ (Bollywood) ಕಿರುತೆರೆಯ ಖ್ಯಾತ ನಟಿ ವೈಷ್ಣವಿ ಧನರಾಜ್ (Vaishnavi Dhanraj). ತೀವ್ರವಾಗಿ ತಮ್ಮ ಮೇಲೆ ಹಲ್ಲೆ ಮಾಡಲಾಗಿದೆ. ದಯವಿಟ್ಟು ನನ್ನ ಸಹಾಯಕ್ಕೆ ಬನ್ನಿ ಎಂದು ಹೇಳಲಾದ ಅವರ ವಿಡಿಯೋ ವೈರಲ್ ಕೂಡ ಆಗಿದೆ. ನಟಿಯ ಮುಖ ಮತ್ತು ಕೈಗಗಳಲ್ಲಿ ಗಾಯಗಳಾಗಿದ್ದು, ತನ್ನ ಮೇಲೆ ನಡೆದ ಹಲ್ಲೆಯ ಸಂಪೂರ್ಣ ವಿವರಣೆಯನ್ನು ಅವರು ಹೇಳಿಕೊಂಡಿದ್ದಾರೆ. ತಮಗೆ ಅತ್ತಿಗೆ, ಆಕೆಯ ತಾಯಿಯಿಂದ ನಿರಂತರ ಕಿರುಕುಳ ಆಗುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಜೊತೆಗೆ ಪತಿ ಕುಟುಂಬದಿಂದಲೂ ತಮಗೆ ಕಿರುಕುಳ ಆಗಿರುವುದಾಗಿ ತಿಳಿಸಿದ್ದಾರೆ. ಕೌಟುಂಬಿಕ ಹಿಂಸೆಯ ಕುರಿತಾಗಿ ಈ ಹಿಂದೆಯೂ ವೈಷ್ಣವಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಪತಿಯ ಹಿಂಸೆಯಿಂದಾಗಿ ಬೇಸತ್ತು ವಿಚ್ಛೇದನೆ ಕೂಡ ನೀಡಿದ್ದರು. ಹಲವಾರು ಧಾರಾವಾಹಿಗಳಲ್ಲಿ ನಟಿಸಿರುವ ವೈಷ್ಣವಿ, ಸಿಐಡಿ ಪಾತ್ರದ ಮೂಲಕ ಫೇಮಸ್ ಆದವರು. ಕೌಟುಂಬಿಕ ಹಿಂಸೆಯ ಕುರಿತಾಗಿ ಈ ಹಿಂದೆಯೂ ವೈಷ್ಣವಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಪತಿಯ ಹಿಂಸೆಯಿಂದಾಗಿ ಬೇಸತ್ತು…

Read More

ಮೊಸರಿನಲ್ಲಿರುವ ಪೋಷಕಾಂಶಗಳು ಅನೇಕ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತವೆ. ಆದಾಗ್ಯೂ, ಮೊಸರಿನ ಆರೋಗ್ಯ ಪ್ರಯೋಜನಗಳ ಹೊರತಾಗಿಯೂ, ಕೀಲು ನೋವು ಇರುವವರು ತಿನ್ನುವುದು ಸೂಕ್ತವಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ನೀವು ಪ್ರತಿದಿನ ಮೊಸರು ಸೇವಿಸಿದರೆ, ನೋವು ಹೆಚ್ಚಾಗುತ್ತದೆ. ಫ್ರಿಜ್ ನಲ್ಲಿ ಇಟ್ಟಿರುವ ಮೊಸರು ಮತ್ತು ಹುಳಿ ಮೊಸರನ್ನು ಸೇವಿಸಿದರೆ, ಕೀಲು ನೋವು ಹೆಚ್ಚಾಗಬಹುದು, ಆದರೆ ಮೊಸರು ತಿನ್ನಲು ಬಯಸುವವರು ಮೊಸರಿನ ಬದಲು ಮಜ್ಜಿಗೆಯನ್ನು ಬಳಸಬಹುದು. ಆದಾಗ್ಯೂ, ನೀವು ಮಜ್ಜಿಗೆಯಲ್ಲಿ ಬೆಲ್ಲವನ್ನು ತೆಗೆದುಕೊಂಡರೆ, ಮೂಳೆಗಳು ಮತ್ತು ಸ್ನಾಯುಗಳು ಬಲಗೊಳ್ಳುತ್ತವೆ ಮತ್ತು ಕೀಲು ನೋವುಗಳನ್ನು ನಿವಾರಿಸುತ್ತದೆ. ಇದಲ್ಲದೆ, ಆಯಾಸವನ್ನು ಸಹ ತೆಗೆದುಹಾಕಲಾಗುತ್ತದೆ. ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಮೊಸರಿನ ಬದಲು ಮಜ್ಜಿಗೆಯನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ.

Read More

ತಮ್ಮ ನೆಚ್ಚಿನ ನಟನ ಸಿನಿಮಾಗೆ ಭಾರೀ ಮೊತ್ತ ಕೊಟ್ಟು ಟಿಕೆಟ್ ಖರೀದಿಸಿದ್ದಾರೆ ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ (Rajamouli). ಬಾಹುಬಲಿ ಸಿನಿಮಾದಲ್ಲಿ ನಟಿಸಿದ್ದ ಪ್ರಭಾಸ್ ನಟನೆಯ ಸಲಾರ್ ಸಿನಿಮಾ ಇನ್ನಷ್ಟೇ ರಿಲೀಸ್ ಆಗಬೇಕಿದ್ದು, ಈ ಚಿತ್ರದ ಟಕೆಟ್ ಅನ್ನು ಬರೋಬ್ಬರಿ ಹತ್ತು ಸಾವಿರ ರೂಪಾಯಿ ಕೊಟ್ಟು ಖರೀದಿಸಿದ್ದಾರಂತೆ ರಾಜಮೌಳಿ. ಬಿಡುಗಡೆ ದಿನ ಹೈದರಾಬಾದ್ ನ ಸಂಧ್ಯಾ ಚಿತ್ರಮಂದಿರದಲ್ಲಿ ಸಲಾರ್ ಸಿನಿಮಾ ವೀಕ್ಷಿಸಲಿದ್ದಾರಂತೆ. ಇಡೀ ವಿಶ್ವವೇ ಇದರತ್ತ ನೋಡುತ್ತಿದೆ. ಮೂರು ವರ್ಷದಿಂದ ಕಾಯುತ್ತಿದ್ದ ಗಳಿಗೆ ಹತ್ತಿರವಾಗಿದೆ. ಕಾರಣ ಸಲಾರ್ (Salaar) ಅಬ್ಬರಿಸಲು ಸಜ್ಜಾಗಿದೆ. ಈ ಹೊತ್ತಲ್ಲಿ ಹಲವು ರಹಸ್ಯ ಬಿಚ್ಚಿಟ್ಟಿದ್ದಾರೆ ಕ್ಯಾಮೆರಾಮನ್ ಭುವನ್ ಗೌಡ. ಯಾರ್ ಯಾರೋ ಏನೇನೊ ಅಂದುಕೊಂಡಿದ್ದು ಸುಳ್ಳು. ಇದು ಸತ್ಯ ಎಂದು ಗುಡುಗಿದ್ದಾರೆ. ಏನಿದು ಸಲಾರ್ ಅಪರೂಪದ ಸಮಾಚಾರ ಇಲ್ಲಿದೆ ನೋಡಿ. ಬರೀ ಪ್ರಭಾಸ್ (Prabhas) ಫ್ಯಾನ್ಸ್ ಮಾತ್ರ ಅಲ್ಲ, ಇಡೀ ವಿಶ್ವವೇ ಸಲಾರ್‌ಗಾಗಿ ಕಾಯುತ್ತಿದೆ. ಒಂದು ಕಡೆ ಪ್ರಶಾಂತ್ ನೀಲ್ ಏನು ಮಾಡಲಿದ್ದಾರೆ ಎನ್ನುವ ಕುತೂಹಲ ಇನ್ನೊಂದು ಕಡೆ…

Read More

ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ದಿನದಿಂದ ದಿನಕ್ಕೆ ಹೆಚ್ಚಾಗುತಿದ್ದು ಪಕ್ಷದ ನಾಯಕರ ವಿರುದ್ಧವೇ ಬಹಿರಂಗವಾಗಿ ಹಿಗ್ಗಾಮುಗ್ಗ ಮಾತನಾಡುವ ವಿಜಯಪುರ ಶಾಸಕ ನೇತೃತ್ವದಲ್ಲಿಂದು ಹುಬ್ಬಳ್ಳಿಯಿಂದ ಮೂವರು ನಾಯಕರು ನವದೆಹಲಿಗೆ ಕೊಪ್ಪಳ ಸಂಸದ ಸಂಗಣ್ಣ ಕರಡಿ ಹಾಗೂ ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಒಂದೇ ವಿಮಾನದಲ್ಲಿ ಪ್ರಯಾಣ ಬೆಳಸಿದರು‌. ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರಾಗಿ ವಿಜೇಯಂದ್ರ ಹಾಗೂ ಭಾರತೀಯ ಜನತಾ ಪಕ್ಷದ ವಿರೋಧ ಪಕ್ಷದ ನಾಯಕರಾಗಿ ಆರ್ ಅಶೋಕ ಅವರು ನೇಮಕ ಮಾಡುತಿದ್ದಂತೆ ಬಸನಗೌಡ ಪಾಟೀಲ್ ಯತ್ನಾಳ ಬಹಿರಂಗವಾಗಿ ಟೀಕೆ ಮಾಡಲಾರಂಬಿಸಿದರು‌ . ಆದ್ದರಿಂದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರಿಗೆ ಇನ್ನು ಮುಂದೆ ಬಹಿರಂಗವಾಗಿ ಮಾತನಾಡಬಾರದು ಎಂಬ ತಾಕೀತು ಮಾಡುವುದು ಯಾವುದೇ ಕಾರಣಕ್ಕೂ ಪಕ್ಷದ ಆಂತರಿಕ ವಿಚಾರ ಬಹಿರಂಗವಾಗಿ ಮಾತನಾಡಿರುವ ವಿಚಾರವನ್ನ ಚರ್ಚೆ ಮಾಡಬಾರದು ಎಂಬ ತಾಕೀತು ಮಾಡುವ ಸಾಧ್ಯತೆ ಇದೆ. ಪಕ್ಷದ ವರಿಷ್ಠರಿಂದ ಯತ್ನಾಳ ಗೆ ಬುಲಾವ್ ಮೇರೆಗೆ ದೆಹಲಿಗೆ ತೆರಳಿದ್ದು ಇನ್ನು ಇದೇ ಸಂದರ್ಭದಲ್ಲಿ…

Read More

ಟಾಕ್ಸಿಕ್ ಸಿನಿಮಾದ ಅಪ್ ಡೇಟ್ ಕೊಟ್ಟ ಲಂಡನ್ ಗೆ ಹಾರಿದ್ದಾರೆ ನಟ ಯಶ್ ಮತ್ತು ರಾಧಿಕಾ ಪಂಡಿತ್ (Radhika Pandit). ಕ್ರಿಸ್ ಮಸ್ ಗಾಗಿ ಸಿಂಗಾರ ಗೊಂಡಿರುವ ಲಂಡನ್ (London) ಬೀದಿಯಲ್ಲಿ ನಿಂತುಕೊಂಡು ಯಶ್ ದಂಪತಿ ಪೋಸ್ ಕೊಟ್ಟಿದ್ದಾರೆ. ಆ ಫೋಟೋವನ್ನು ರಾಧಿಕಾ ತಮ್ಮ ಇನ್ಸ್ಟಾ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಯಶ್ ಲಂಡನ್ ಪ್ರಯಾಣ ಬೆಳೆಸಿದ್ದರೆ, ಇತ್ತ ಟಾಕ್ಸಿಕ್ ಸಿನಿಮಾದ ಬಗ್ಗೆ ಅನೇಕ ಕಡೆ ಚರ್ಚೆಯಾಗುತ್ತಿದೆ. ಅನೇಕರು ಟೈಟಲ್ ಟೀಸರ್ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಹಿರಿಯ ನಟಿ ಶಿವರಾಜ್ ಕುಮಾರ್ (Shivaraj Kumar) ಕೂಡ ಟೈಟಲ್ ಟೀಸರ್ ಬಗ್ಗೆ ಮಾತನಾಡಿದ್ಧಾರೆ. ಯಶ್ ಅವರ ಬೆಳವಣಿಗೆ ನೋಡ್ತಾ ಇದ್ದರೆ ನನ್ನ ತಮ್ಮನೇ ಬೆಳೆಯುತ್ತಿದ್ದಾನೆ ಅನಿಸುತ್ತಿದೆ ಎಂದು ಹೇಳಿದ್ದಾರೆ. ಈ ಮೂಲಕ ಅಪ್ಪು ಅವರನ್ನೂ ಶಿವರಾಜ್ ಕುಮಾರ್ ನೆನಪಿಸಿಕೊಂಡಿದ್ದಾರೆ. ಒಂದು ನಿಮಿಷ ಹದಿನೆಂಟು ಸೆಕೆಂಡ್‌ನ ‘ಟಾಕ್ಸಿಕ್’ (Toxic Film) ವಿಡಿಯೋ ಸೈಕ್ ಮಾಡ್ತಿದೆ. ಪ್ರತಿ ಬಾರಿ ಈ ಟೈಟಲ್ ಟೀಸರ್‌ನ ನೋಡಿದಾಗ…

Read More

ಹುಬ್ಬಳ್ಳಿ: ಹುಧಾ ಸೆಂಟ್ರಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳ ಪದಗ್ರಹಣ ಹಾಗೂ ಪೂರ್ವಭಾವಿ ಸಭೆಯನ್ನು ಡಿ. 19ರಂದು ಬೆಳಗ್ಗೆ 9ಕ್ಕೆ ಇಲ್ಲಿಯ ಮೂರುಸಾವಿರ ಮಠದ ಆವರಣದಲ್ಲಿ ಕರೆಯಲಾಗಿದೆ. ದಾವಣಗೆರೆಯಲ್ಲಿ ನಡೆಯಲಿರುವ ಮಹಾ ಅಧಿವೇಶನದ ತಯಾರಿ ಕುರಿತು ಸಭೆಯಲ್ಲಿ ಚಚಿರ್ಸಲಾಗುವುದು. ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಹಾಸಭಾ ತಾಲೂಕು ಅಧ್ಯಕ್ಷ ಶಶಿಶೇಖರ ಡಂಗನವರ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಅಧ್ಯಕ್ಷ ಗುರುರಾಜ ಹುಣಸಿಮರದ, ರಾಜ್ಯ ಯುವ ಘಟಕದ ಉಪಾಧ್ಯಕ್ಷ ದೇವರಾಜ ಧಾಡಿಬಾವಿ ಮುಂತಾದವರು ಭಾಗವಹಿಸುವರು.

Read More

ಭಾರತೀಯ ಕಿರುತೆರೆಯಲ್ಲಿ ಸದ್ಯ ಬಿಗ್ ಬಾಸ್ (Bigg Boss) ನದ್ದೇ ಸದ್ದು. ಕನ್ನಡ, ತೆಲುಗು, ಹಿಂದಿ ಹೀಗೆ ಹಲವು ಭಾಷೆಗಳಲ್ಲಿ ಬಿಗ್ ಬಾಸ್ ಶೋ ಟೆಕಾಸ್ಟ್ ಆಗುತ್ತಿದೆ. ಒಂದೊಂದು ಭಾಷೆಯಲ್ಲೂ ಒಂದೊಂದು ರೀತಿಯ ಕಂಟೆಸ್ಟೆಂಟ್ ಗಳು ದೊಡ್ಮನೆ ಪ್ರವೇಶ ಮಾಡಿದ್ದಾರೆ. ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವುದರ ಜೊತೆಗೆ ತಮ್ಮ ವ್ಯಕ್ತಿತ್ವವನ್ನು ತೋರಿಸುತ್ತಿದ್ದಾರೆ. ಅದರಲ್ಲೂ ಈ ಬಾರಿಯ ಹಿಂದಿ ಬಿಗ್ ಬಾಸ್ ನಲ್ಲಿ ಅನಾಹುತ ಕಂಟೆಸ್ಟೆಂಟ್ ಗಳೇ ಇರುವುದು ವಿಶೇಷ. ಹಿಂದಿ ಬಿಗ್ ಬಾಸ್ ಶೋನಲ್ಲಿ ವಿಕ್ಕಿ ಜೈನ್, ಖಾನ್ಜಾದಿ, ನೀಲ್ ಭಟ್, ಅಭಿಷೇಕ್ ಕುಮಾರ್, ಅಂಕಿತಾ ಲೋಖಂಡೆ, ಮುನಾವರ್ ಫರುಕಿ, ಜಿಗ್ನಾ ವೋರಾ ಹೀಗೆ ಮುಂತಾದ ಕಂಟೆಸ್ಟೆಂಟ್ ಇದ್ದಾರೆ. ಅದರಲ್ಲೂ ಗಂಡ ಹೆಂಡತಿ ಜೋಡಿಯೂ ಮನೆಯೊಳಗೆ ಇದೆ. ಇದೆಲ್ಲದಕ್ಕಿಂತ ಮುಖ್ಯವಾಗಿ ಕಾಮಿಡಿಯನ್ ಮುನಾವರ್ ಫರುಕಿ (Munawar Faruqui)ಕೂಡ ಇದ್ದಾರೆ. ಅವರ ಗರ್ಲ್ ಫ‍್ರೆಂಡ್ ಎಂದು ಹೇಳಿಕೊಂಡ ಹುಡುಗಿಯೊಬ್ಬಳು ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡು ದೊಡ್ಮನೆ ಪ್ರವೇಶ ಮಾಡುತ್ತಿದ್ದಾರೆ. ಹೆಸರಾಂತ ಸ್ಯಾಂಡ್ ಅಪ್ ಕಾಮಿಡಿಯನ್…

Read More