ಬೆಳಗಾವಿ: ಅಧಿವೇಶನದಲ್ಲಿ ಪ್ರತಿಪಕ್ಷದ ನಾಯಕ, ಅಧ್ಯಕ್ಷನಾಗಿ ಮಾಡಬೇಕಾದ ಕೆಲಸವನ್ನು ನಾನು ಸಮರ್ಥವಾಗಿ ನಿಭಾಯಿಸಿದ್ದೇನೆ. ಇದನ್ನು ಆಡಳಿತಾರೂಢ ಮತ್ತು ಪ್ರತಿಪಕ್ಷಗಳ ಶಾಸಕರೇ ಒಪ್ಪಿದ್ದಾರೆ. ಈ ಮೂಲಕ ನಾನು ಉತ್ತರ ಕರ್ನಾಟಕದ ನಾಯಕರೂ ಸಮರ್ಥವಾಗಿ ಕೆಲಸ ಮಾಡುತ್ತಾರೆ ಎಂಬುದನ್ನು ತೋರಿಸಿದ್ದೇನೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. https://ainlivenews.com/yatnal-is-like-a-mad-dog-mp-renukacharya-lashes-out/ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಚರ್ಚೆ ನಡೆದಿರುವುದು ಸಮಾಧಾನ ತಂದಿದೆ. ಮೂರು ದಿನಗಳ ಕಾಲ ನಡೆದ ಸುದೀರ್ಘ ಚರ್ಚೆಯ ಬಳಿಕ ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಅವರಿಗೂ ಈ ಭಾಗಕ್ಕೆ ಅನ್ಯಾಯವಾಗಿರುವುದು ಮನದಟ್ಟಾಗಿದೆ. ಹೀಗಾಗಿ ಉತ್ತರ ಕರ್ನಾಟಕದ ನಾನಾ ಜಿಲ್ಲೆಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗಾಗಿ ಹಣ ಮಂಜೂರು ಮಾಡಿದ್ದಾರೆ.
Author: AIN Author
ಹುಬ್ಬಳ್ಳಿ:- ಇಲ್ಲಿನ ಹಳೇ ಮೂರಾರ್ಜಿ ನಗರದಲ್ಲಿ ಜೋಡಿಯೊಂದು ಆಟೋ ಡ್ರೈವರ್ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ. ಲೋಕೇಶ ಹಾಗೂ ಆತನ ಹೆಂಡತಿಯ ತಂಗಿಯಾದ ಶಾಂತಿ ಎಂದು ಗುರುತಿಸಲಾಗಿದೆ. ಇವರಿಬ್ಬರ ನಡುವೆ ಹಲವು ದಿನಗಳಿಂದ ವಿವಾಹೇತರ ಸಂಬಂಧ ಇತ್ತು ಎಂಬ ಆರೋಪ ಇದೆ. ಹೀಗಾಗಿ ಇಬ್ಬರು ಬೆಂಗಳೂರಿನಿಂದ ಹುಬ್ಬಳ್ಳಿ ನಗರಕ್ಕೆ ಓಡಿ ಬಂದಿದ್ದರು ಎನ್ನಲಾಗಿದೆ. ಹುಬ್ಬಳ್ಳಿಗೆ ಬಂದ ಈ ಜೋಡಿ ನಗರದಲ್ಲಿ ಅಟೋವೊಂದನ್ನು ಬಾಡಿಗೆ ಪಡೆದಿದ್ದಾರೆ. ಬಳಿಕ ಆಟೋದಲ್ಲೇ ಅಕ್ಷಯ ಪಾರ್ಕ್ ಹಾಗೂ ಇನ್ನಿತರ ಕಡೆ ಸುತ್ತಾಡಿ ಆಟೋ ಡ್ರೈವರ್ ಜೊತೆ ಪರಿಚಯ ಬೆಳೆಸಿಕೊಂಡಿದ್ದಾರೆ. ಈ ಜೋಡಿ ಆಟೋ ಚಾಲಕನಿಗೆ ಹೇಳಿ ಊಟವನ್ನು ತರಿಸಿಕೊಂಡಿದ್ದಾರೆ. ಪರಿಚಯವಾಗಿದ್ದರಿಂದ ಆಟೋ ಚಾಲಕ ಆ ಜೋಡಿಯನ್ನು ಮೂರಾರ್ಜಿ ನಗರದಲ್ಲಿನ ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ. ನಂತರ ನಮ್ಮ ಮನೆಯಲ್ಲಿಯೇ ಊಟವನ್ನು ಮಾಡಿ ಎಂದು ಇವರಿಬ್ಬರಿಗೂ ಹೇಳಿ ತಾನು ಬೇರೆ ಪ್ಯಾಸೆಂಜರ್‌ನ್ನ ಬಿಡಲು ತೆರಳಿದ್ದಾನೆ. ಪ್ಯಾಸೆಂಜರ್ ಬಿಟ್ಟು ಮನೆಗೆ ಬಂದು ನೋಡಿದಾಗ ಇಬ್ಬರೂ ಒಂದೇ…
ಬೆಂಗಳೂರು:- ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಎರಡು ದಿನಗಳ ಕಾಲ ಭಾರಿ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆ ಸುರಿಯುವ ನಿರೀಕ್ಷೆಯಿದೆ. ಅದೇ ರೀತಿ ದಕ್ಷಿಣ ಒಳನಾಡಿನ ಬೆಂಗಳೂರು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು ಸೇರಿದಂತೆ ಒಂದೆರಡು ಭಾಗದಲ್ಲಿ ಮಾತ್ರ ಮಳೆ ಸುರಿಯಬಹುದು. ಆದರೆ ಉತ್ತರ ಕರ್ನಾಟಕದಲ್ಲಿ ಒಣ ಹವೆಯ ವಾತಾವರಣ ಮುಂದುವರಿಯಲಿದೆ ಎಂದು ತಿಳಿಸಿದೆ. ಇನ್ನು ರಾಜ್ಯ ರಾಜಧಾನಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ ಎರಡು ದಿನವೂ ಮೋಡ ಕವಿದ ವಾತಾವರಣ ಇರಲಿದ್ದು, ನಗರದ ಕೆಲವೆಡೆ ಸಾಧಾರಣ ಮಳೆ ಸುರಿಯುವ ನಿರೀಕ್ಷೆಯಿದೆ ಎಂದು ಮುನ್ಸೂಚನೆ ನೀಡಿದೆ. ಮತ್ತೊಂದೆಡೆ ನೋಡುವುದಾದರೆ ಗರಿಷ್ಠ ಉಷ್ಣಾಂಶದಲ್ಲಿ ಕೊಂಚ ಕುಸಿತ ಕಾಣಲಿದೆ. ಗರಿಷ್ಠ ಉಷ್ಣಾಂಶವು ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ 26 ಡಿಗ್ರಿ ಸೆಲ್ಸಿಯಸ್‌ನಷ್ಟು ಇದ್ದರೆ, ಕನಿಷ್ಠ ಉಷ್ಣಾಂಶದ ಪ್ರಮಾಣ 19 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲು…
ಹುಬ್ಬಳ್ಳಿ: ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ(ಕಿಮ್ಸ್)ಯ ಮಾಜಿ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಅವರ ಹೆಸರಲ್ಲಿ ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ಸೃಷ್ಟಿಸಲಾಗಿದೆ. ಖದೀಮರು ಕಿಮ್ಸ್‌ನ ಮಾಜಿ ನಿರ್ದೇಶಕ, ಪ್ರಸೂತಿ ಮತ್ತು ಸೀರೋಗ ಶಾಸ ವಿಭಾಗದ ಪ್ರಾಧ್ಯಾಪಕ ಡಾ. ರಾಮಲಿಂಗಪ್ಪ ಅಂಟರತಾನಿ ಅವರ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ನಕಲಿ ಐಡಿ ಖಾತೆ ಸೃಷ್ಟಿಸಿ, ವಾಟ್ಸ್‌ಅಪ್‌ನಲ್ಲಿ 7578851012 ಸಂಖ್ಯೆ ಮೂಲಕ ಸ್ನೇಹಿತರ ಕೋರಿಕೆ ಹಾಗೂ ಹಣಕಾಸಿನ ವಿನಂತಿ ಮಾಡುತ್ತಿದ್ದಾರೆ. ದಯಮಾಡಿ ಯಾರು ಇದನ್ನು ಸ್ವೀಕರಿಸಬಾರದು ಮತ್ತು ಇದಕ್ಕೆ ಪ್ರತಿಕ್ರಿಯಿಸಬಾರದು ಎಂದು ಡಾ. ರಾಮಲಿಂಗಪ್ಪ ಅಂಟರತಾನಿ ಅವರು ತಮ್ಮ ವಾಟ್ಸ್‌ಅಪ್ ಸ್ಟೇಟಸ್‌ನಲ್ಲಿ ಮನವಿ ಮಾಡಿದ್ದಾರೆ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ ಮೂಲಕ ಕನ್ನಡ ಶಾಲೆಗಳ ಉಳಿವಿನ ಬಗ್ಗೆ ಜಾಗೃತಿಮೂಡಿಸಿ ಹಲವಾರು ಕನ್ನಡ ಶಾಲೆಗಳ ಉಳಿವಿಗೆ ಕಾರಣನಾಗಿರುವ ನಟ ನಿರ್ದೇಶಕ ರಿಷಬ್ ಶೆಟ್ಟಿ ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೇ ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ರಿಷಭ್ ಶೆಟ್ಟಿ ಫೌಂಡೇಶನ್ ಮೂಲಕ ಅಳಿವಿನಂಚಿನಲ್ಲಿದ್ದ ತಾನು ಓದಿದ ಕೆರಾಡಿ (Keradi) ಸರ್ಕಾರಿ ಕನ್ನಡ ಶಾಲೆಯನ್ನು (School) ದತ್ತು ಪಡೆದಿದ್ದಾರೆ ಕೆರಾಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಲೆಗೆ ಭೇಟಿನೀಡಿ ಕನ್ನಡ ಶಾಲೆ ಉಳಿಸುವ ಮತ್ತು ಬೆಳೆಸುವ ತನ್ನ ಕನಸನ್ನು ಬಿಚ್ಚಿಟ್ಟರು. ಈ ಸಂದರ್ಭದಲ್ಲಿ ಊರ ಪ್ರಮುಖರು,ಹಿರಿಯರು ಉಪಸ್ಥಿತರಿದ್ದು ಹುಟ್ಟೂರಿನ ಶಾಲೆಯ ದತ್ತು ರಿಷಬ್ ಶೆಟ್ಟಿಯವರನ್ನು ಅಭಿನಂದಿಸಿದರು. ರಿಷಬ್ ಸದ್ಯ ಕಾಂತಾರ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಮೊನ್ನೆಯಷ್ಟೇ ರಿಲೀಸ್ ಆಗಿರುವ ಕಾಂತಾರ (Kantara) ಚಾಪ್ಟರ್ 1 ಸಿನಿಮಾದ ಟೀಸರ್ (Teaser) ಕೋಟಿ ಕೋಟಿ ವಿವ್ಸ್ಯೂ ಪಡೆಯುತ್ತಿದ್ದು, ಟೀಸರ್ ನೋಡಿದ ಭಾರತವೇ ಬೆಚ್ಚಿ ಬಿದ್ದಿದೆ. ಟೀಸರ್ ನಲ್ಲಿ ತೋರಿಸಲಾದ ಆಶಯ ಮತ್ತು ರಿಷಬ್ ಶೆಟ್ಟಿ…
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ 2023ರಲ್ಲಿ ನಿವೃತ್ತಿ ಘೋಷಿಸಿದ ಮೊದಲ ಆಟಗಾರ ದಕ್ಷಿಣ ಆಫ್ರಿಕಾ ತಂಡದ ಆಲ್‌ರೌಂಡರ್ ಡ್ವೇಯ್ನ್ ಪ್ರಿಟೋರಿಯಸ್. ವಿಶ್ವದ ವಿವಿಧ ಭಾಗಗಳಲ್ಲಿ ನಡೆಯುವ ಟಿ20 ಲೀಗ್‌ಗಳಲ್ಲಿ ಆಡುವುದಕ್ಕೆ ಆದ್ಯತೆ ನೀಡಿದ ಡ್ವೇಯ್ನ್ ಪ್ರಿಟೋರಿಯಸ್ ಅಂತಾರಾಷ್ಟ್ರೀಯ ವೃತ್ತಿಬದುಕನ್ನು ಅಂತ್ಯಗೊಳಿಸಿದರು. ಹರಿಣಗಳ ಪರ ಡ್ವೇಯ್ನ್ ಪ್ರಿಟೋರಿಯಸ್ 30 ಟಿ20-ಐ, 27 ಒಡಿಐ ಮತ್ತು 3 ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಅಂದಹಾಗೆ 2023ರಲ್ಲಿ ನಿವೃತ್ತಿ ಘೋಷಿಸಿದ 5 ಸ್ಟಾರ್ ಆಟಗಾರರ ವಿವರವನ್ನು ಇಲ್ಲಿ ನೀಡಲಾಗಿದೆ. 01. ಹಶೀಮ್ ಆಮ್ಲಾ 2023ರ ಸಾಲಿನಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಆಯೋಜನೆ ಆಗಲಿದೆ ಎಂಬುದು ಗೊತ್ತಿದ್ದರೂ ಕೂಡ ದಕ್ಷಿಣ ಆಫ್ರಿಕಾ ತಂಡದ ಅನುಭವಿ ಆರಂಭಿಕ ಬ್ಯಾಟರ್ ಹಶೀಮ್ ಆಮ್ಲಾ ಹಠಾತ್ ನಿವೃತ್ತಿ ಘೋಷಿಸಿದರು. 02. ಆರೊನ್ ಫಿಂಚ್ ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ತಂಡದ ಪರ ದೀರ್ಘ ಕಾಲದವರೆಗೆ ಆಡಿರುವ ಮಾಜಿ ನಾಯಕ ಆರೊನ್ ಫಿಂಚ್, ತಮ್ಮ ವೈಭವಯುತ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಬದುಕಿಗೆ 2023ರ ಫೆಬ್ರವರಿಯಲ್ಲಿ ನಿವೃತ್ತಿ ಘೋಷಿಸಿದರು 03.…
ರಾಮನಗರ:- ತೋಟಕ್ಕೆ ತೆರಳಿದ ರೈತನ ಮೇಲೆ ಒಂಟಿ ಸಲಗ ದಾಳಿ ಮಾಡಿದ ಹಿನ್ನೆಲೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲೂಕಿನಿ ಹಳ್ಳಿಕೆರೆದೊಡ್ಡಿಯಲ್ಲಿ ನಡೆದಿದೆ. ಅರವತ್ನಾಲ್ಕು ವರ್ಷದ ತಿಮ್ಮಯ್ಯ, ಉರ್ಫ್ ತಿಮ್ಮಪ್ಪ ಆನೆ ತುಳಿತದಿಂದ ಬರ್ಬರವಾಗಿ ಸಾವಾಗೀಡಾಗಿದ್ದಾನೆ. ತಲೆಯ ಮೇಲೆಯೇ ಕಾಲಿನಿಂದ ತುಳಿದ ಪರಿಣಾಮ ತಲೆ ಬುರೆಡೆ ಒಡೆದುಹೋಗಿ ಮುಖವೂ ಗುರುತು ಸಿಗಲಾರದ ರೀತಿ ಮರಣಹೊಂದಿದ್ದಾನೆ. ಇನ್ನು ಐದು ಗಂಟೆ ಸುಮಾರಿಗೆ ನೀರು ಬಿಡಲು ತೆರಳಿದ್ದ ತಂದೆ, ಇನ್ನೂ ಯಾಕೆ ಮನೆಗೆ ಬಂದಿಲ್ಲ ಎಂದು ನೋಡಲು ಹೋದಾಗ ತೋಟದಲ್ಲೇ ತಂದೆ ಶವ ಬಿದ್ದಿದ್ದು ಕಂಡು ಮಗನಿಗೆ ಆಕಾಶವೇ ಕಳಚಿ ಬಿದ್ದಂತಾಗಿದೆ. ಹಲವು ದಿನಗಳಿಂದಲೂ ಆನೆಗಳ ಗುಂಪು ಊರಿನ ಸಮೀಪ ಬರುತ್ತಿದ್ದು, ಕೂಡಲೇ ಅವುಗಳನ್ನು ಕಾಡಿಗೆ ಓಡಿಸಿ ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದರೆನ್ನಲಾಗಿದೆ. ಅಲ್ಲದೆ ಕಾಡಾನೆಗಳ ಗುಂಪು ಹಗಲಿನಲ್ಲಿಯೂ ಊರು ಪ್ರವೇಶ ಮಾಡುತ್ತಿದ್ದು, ಸೂಕ್ತ ಭದ್ರತೆ ಇಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈ ಬಾರಿ ಬಿಗ್ ಬಾಸ್ (Bigg Boss) ಫಿನಾಲೆ (Finale) ವೇದಿಕೆಯ ಮೇಲೆ ಸೂಪರ್ ಸ್ಟಾರ್ ಇರಲಿದ್ದಾರೆ ಎನ್ನುವ ಸುದ್ದಿ ಟಾಲಿವುಟ್ ಅಂಗಳಲ್ಲಿ ಹರಿದಾಡುತ್ತಿದೆ. ತೆಲುಗಿನ ಬಿಗ್ ಬಾಸ್ ಫಿನಾಲೆಗೆ ಮುಖ್ಯ ಅತಿಥಿಯಾಗಿ ಮಹೇಶ್ ಬಾಬು ಇರಲಿದ್ದಾರಂತೆ. ಈಗಾಗಲೇ ಮಹೇಶ್ ಬಾಬು ಬರಲು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಮಹೇಶ್ ಬಾಬು (Mahesh Babu) ಸದ್ಯ ಗುಂಟೂರು ಖಾರ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿಯಲಿದೆಯಂತೆ. ಈ ಸಿನಿಮಾದ ಪ್ರಚಾರಕ್ಕಾಗಿ ಫಿನಾಲಿ ವೇದಿಕೆ ಏರಲಿದ್ದಾರೆ ಎಂದು ಅಲ್ಲಿ ಮಾಧ್ಯಮಗಳು ಸುದ್ದಿ ಮಾಡಿವೆ. ತೆಲುಗಿನ ಬಿಗ್ ಬಾಸ್ ಕೂಡ ಕೊನೆಯ ಹಂತಕ್ಕೆ ಬಂದು ತಲುಪಿದೆ. ಈ ಬಾರಿ ಕನ್ನಡತಿ ಶೋಭಾ ಶೆಟ್ಟಿ ಅವರು ಫಿನಾಲೆಯಲ್ಲಿ ಇರಲಿದ್ದಾರೆ ಎಂದು ನಂಬಲಾಗಿತ್ತು. ಆದರೆ, ಮೊನ್ನೆಯಷ್ಟೇ ಅವರು ಎಲಿಮಿನೇಟ್ ಆಗಿ ಮನೆಯಿಂದ ಹೊರ ಬಂದಿದ್ದಾರೆ. ಹಾಗಾಗಿ ಸಹಜವಾಗಿಯೇ ಕನ್ನಡಿಗರಿಗೆ ನಿರಾಸೆಯಾಗಿದೆ.
ಬೆಂಗಳೂರು:- ಸಿಐಡಿ ಎಡಿಜಿಪಿಯಾಗಿ ಬಿಜಯ್ ಕುಮಾರ್ ಸಿಂಗ್ ನೇಮಕ ಮಾಡಿ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖಾ ತಂಡ ಎಸ್ಐಟಿಯ ಮುಖ್ಯಸ್ಥರಾಗಿದ್ದ ಬಿಜಯ್ ಸಿಂಗ್, ಕಳೆದ ನಾಲ್ಕು ವರ್ಷಗಳಿಂದ ಕೇಂದ್ರ ಸೇವೆಗೆ ತೆರಳಿದ್ದರು. ಇದೀಗ ಮತ್ತೆ ರಾಜ್ಯ ಸೇವೆಗೆ ಮರಳಿದ ಹಿನ್ನೆಲೆ ಸಿಐಡಿ ಎಡಿಜಿಪಿಯಾಗಿ ನಿಯುಕ್ತಿಗೊಳಿಸಲಾಗಿದೆ. ಇನ್ನೂ ಬಲಪಂಥೀಯ ಸಿದ್ಧಾಂತಗಳನ್ನು ವಿರೋಧಿಸುತ್ತಾ ಬರಹಗಳನ್ನು ಬರೆಯುತ್ತಿದ್ದ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ರಾಯಚೂರು : ‘ ಪಡಿತರದಾರರಿಗೆ ಹಣದ ಬದಲು ಅಕ್ಕಿ ನೀಡಲು ಪ್ರಯತ್ನ ನಡೆಸಲಾಗುತ್ತಿದ್ದು, ಶೀಘ್ರವೇ ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ ಸದ್ಯ ಐದು ಕೆಜಿ ಅಕ್ಕಿ ವಿತರಿಸಲಾಗುತ್ತಿದ್ದು, ಐದು ಕೆಜಿ ಅಕ್ಕಿಯ ಹಣವನ್ನು ಪಡಿತರದಾರರ ಖಾತೆಗೆ ಜಮಾ ಮಾಡಲಾಗುತ್ತಿದೆ. ತೆಲಂಗಾಣ, ಆಂಧ್ರ ಮತ್ತು ಛತ್ತೀಸಗಡ್‌ದಲ್ಲಿ ಅಕ್ಕಿ ಖರೀದಿಗೆ ಪರಿಶೀಲನೆ ನಡೆಸಲಾಗುತ್ತಿದೆ’ ಎಂದರು. ‘ರಾಜ್ಯದಲ್ಲಿ 1.16 ಕೋಟಿ ಪಡಿತರ ಚೀಟಿಗಳಿದ್ದು 4 ಕೋಟಿ ಫಲಾನುಭವಿಗಳಿದ್ದಾರೆ. ಈ ತಿಂಗಳು 644 ಕೋಟಿ ರೂ. ಹಣವನ್ನು ಪಡಿತರದಾರರ ಖಾತೆಗೆ ಜಮಾ ಮಾಡಲಾಗಿದೆ. ಕೆಲವರ ಬ್ಯಾಂಕ್ ಖಾತೆ ಇಲ್ಲದ ಕಾರಣ ಹಣ ಜಮೆ ಮಾಡಲು ಸಮಸ್ಯೆಯಾಗಿದ್ದು, 680 ಕೋಟಿ ರೂ.ವರೆಗೆ ನೀಡಬೇಕಾಗುತ್ತದೆ. https://ainlivenews.com/yatnal-is-like-a-mad-dog-mp-renukacharya-lashes-out/ ಚುನಾವಣೆ ಪ್ರಯುಕ್ತ ಹೊಸದಾಗಿ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದವರಿಗೆ ಕಾರ್ಡ್ ನೀಡುವುದನ್ನು ನಿಲ್ಲಿಸಲಾಗಿತ್ತು. ರಾಜ್ಯದಲ್ಲಿ2.95 ಅರ್ಜಿಗಳು ಬಾಕಿಯಿದ್ದು, ಜಿಲ್ಲೆಯಲ್ಲಿ 12 ಸಾವಿರ ಅರ್ಜಿಗಳು ಬಂದಿವೆ. 15 ದಿನದೊಳಗೆ…