ಬೆಂಗಳೂರು: ವರ್ಷಾಚರಣೆಗೆ ಇನ್ನೂ ಕೆಲವೇ ದಿನಗಳ ಮಾತ್ರ ಬಾಕಿ ಇದೆ. ಸಿಲಿಕಾನ್ ಸಿಟಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಈ ಸಲ ಭಾರೀ ಭದ್ರತೆ ನೀಡಲು ಬೆಂಗಳೂರು ನಗರ ಪೊಲೀಸರು ಹಾಗೂ ಪಾಲಿಕೆ ಅಲರ್ಟ್ ಆಗಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ಧಾರೆ. ಹೊಸ ವರ್ಷಕ್ಕೆ ಪಾಲಿಕೆ ಹಾಗೂ ಪೊಲೀಸ್ ಇಲಾಖೆಯಿಂದ ಗೈಡ್ ಲೈನ್ಸ್ ರೆಡಿ ಮಾಡಿದ್ದು, ಇದರಿಂದ ಸಿಲಿಕಾನ್ ಸಿಟಿಯಲ್ಲಿ ನ್ಯೂ ಇಯರ್ ಗುಂಗಿನಲ್ಲಿದ್ದವರಿಗೆ ಲಗಾಮು ಬೀಳಲಿದೆ. ಈ ಬಾರೀ ಹೆಚ್ಚು ಸಿಸಿಟಿವಿ ಅಳವಡಿಕೆಗೆ ಪಾಲಿಕೆಗೆ ಸೂಚನೆ ನೀಡಲಾಗಿದೆ. ಅದರಲ್ಲೂ ಈ ಬಾರಿ ಪಾಲಿಕೆ, ಪೊಲೀಸ್ ಇಲಾಖೆ ಜೊತೆ ಕೈಜೋಡಿಸಿ ಕೆಲಸ ಮಾಡುತ್ತಿದೆ. ಗೈಡ್ ಲೈನ್ಸ ಹೀಗಿದೆ ರಾತ್ರಿ 1 ಗಂಟೆಯೊಳಗೆ ಹೊಸ ವರ್ಷಾಚರಣೆ ಮುಗಿಸಬೇಕು. ಎಂ.ಜಿ.ರಸ್ತೆ,ಬ್ರಿಗೇಡ್ ರಸ್ತೆ, ಇಂದಿರಾನಗರದಲ್ಲಿ ಆಚರಣೆಗೆ ಅನುಮತಿ. ರಾತ್ರಿ 10 ಗಂಟೆ ಬಳಿಕ ಪ್ರಮುಖ ಫ್ಲೈ ಓವರ್ ಗಳು ಬಂದ್. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ 200ಕ್ಕೂ ಹೆಚ್ಚು ಸಿಸಿಟಿವಿ ಅಳವಡಿಕೆ. ರಾತ್ರಿ 8 ಗಂಟೆ ಬಳಿಕ ಎಂ.ಜಿ.ರಸ್ತೆ,…
Author: AIN Author
ಗದಗ: ಪರಿಹಾರ ಕೊಡದ ಹಿನ್ನೆಲೆ, ಸ್ಮಶಾನಕ್ಕೆ ತೆರಳಲು ಹೊಲದ ಮಾಲೀಕ ರಸ್ತೆ ಬಿಡದಿದ್ದನ್ನು ಖಂಡಿಸಿ ಗ್ರಾಮ ಪಂಚಾಯತ್ ಮುಂದೆ ಶವ ಇಟ್ಟು ಪ್ರತಿಭಟನೆ ನಡೆಸಿರುವ ಘಟನೆ ಗದಗ ಜಿಲ್ಲೆ ರೋಣ ತಾಲ್ಲೂಕಿನ ಚಿಕ್ಕಮಣ್ಣೂರು ಗ್ರಾಮದಲ್ಲಿ ನಡೆದಿದೆ. https://ainlivenews.com/aishwarya-rai-left-her-husbands-house-mother-in-law-rift-in-big-bs-house/ ಯಲ್ಲಮ್ಮ ವಾಲ್ಮೀಕಿ (75) ಮೃತ ಮಹಿಳೆಯಾಗಿದ್ದು, ಗ್ರಾಮ ಪಂಚಾಯತಿ ಮುಂದೆ ಮೃತ ಯಲ್ಲಮ್ಮ ಸಂಬಂಧಿಕರು ಹಾಗೂ ಗ್ರಾಮಸ್ಥರು ಜಮಾಯಿಸಿಅಂತ್ಯಸಂಸ್ಕಾರಕ್ಕೆ ಸ್ಮಶಾನಕ್ಕೆ ದಾರಿ ಇಲ್ಲದ ಹಿನ್ನೆಲೆ ಗ್ರಾಮ ಪಂಚಾಯತಿ ಮುಂದೆ ಶವ ಇಟ್ಟು ಗ್ರಾಮ ಪಂಚಾಯತಿ ಹಾಗೂ ಜಿಲ್ಲಾಡಳಿತದ ವಿರುಧ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಸಮಾನಮ್ ಫುಡ್ ಫ್ರೈವೇಟ್ ಲಿಮಿಟೆಡ್ ಬೃಹತ್ ಕೈಗಾರಿಕಾ ಘಟಕದ ಸಮಾರಂಭದ ಉದ್ಗಾಟನೆಯನ್ನು ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ಶ್ರೀ ವಿಧುಶೇಖರ್ ಭಾರತಿ ಮಹಾಸ್ವಾಮಿಗಳ ಪೂರ್ವನುಗ್ರಹದಿಂದ ಉದ್ಘಾಟನೆ ಮಾಡಲಾಯಿತು. ʼರಾಗಿ ತಿಂದವನು ನಿರೋಗಿ, ಜೋಳ ತಿಂದವನು ಜಟ್ಟಿʼ ಎಂಬ ಘೋಷವಾಕ್ಯದೊಂದಿಗೆ ಆರಂಭಿಸಿದ ಈ ಮಿಲ್ಲೆಕ್ಸ್ ಬ್ರಾಂಡ್ ಈಗ ಎಲ್ಲಾ ಕಡೆ ಪ್ರಸಿದ್ದಿ ಪಡೆಯಲು ಶುರುವಾಗಿದೆ. ಸತತ ಆರು ವರ್ಷಗಳ ಹಿಂದೆ ಶುರುವಾದ ಸಂಸ್ಥೆಯು ಇದೀಗ ಸಮಾನಮ್ ಎಂಬ ಹೆಸರಿನ ಬೃಹತ್ ಕೈಗಾರಿಕಾ ಘಟಕದಡಿ ಮಿಲೆಕ್ಸ ಸರಣಿ ಉತ್ಪನ್ನಗಳನ್ನ ಆರಂಭಿಸಲು ಕರ್ನಾಟಕ ರಾಜ್ಯ ಅಷ್ಟೇ ಅಲ್ಲದೇ ಭಾರತದಾದ್ಯಂತ ಸಂತೃಪ್ತ ಗ್ರಾಹಕರನ್ನ ಹೊಂದಿದೆ. ಈ ಮಿಲ್ಲೆಕ್ಸ್ ಬ್ರಾಂಡ್ FSSAI ಮತ್ತು ISO ಯಂದ ಕೂಡ ಪ್ರಮಾಣಿಕೃತಗೊಂಡಿದ್ದು ಮಿಲಿಕ್ಸ್ ಉತ್ಪನ್ನ ಶ್ರೇಣಿಯ ಮಿಲ್ಲೆಕ್ಸ್ ಚೂಣಂ, ಮಿಲ್ಲೆಕ್ಸ್ ಹೆಲ್ತ್ ಮಿಕ್ಸ್ ಹಾಗೂ ಮಿಲ್ಲೆಕ್ಸ್ ಮದರ್ ರೂಟ್ ಉತ್ಪನ್ನಗಳನ್ನು ಸಹ ಹೊಂದಿದೆ. ಈ ಉದ್ಘಾಟನಾ ಸಮಾರಂಭ ವೇಳೆ ಅನೇಕ ಗಣ್ಯರು ಪಾಲ್ಗೊಂಡಿದ್ದರು ಹಾಗೆ ಮುಂದಿನ ದಿನಗಳಲ್ಲಿ ಉದ್ಯೋಗವಕಾಶಗಳನ್ನು…
ಮಂಡ್ಯ: ಬೀದಿ ಬದಿಯಲ್ಲಿದ್ದ ಹಣ್ಣಿನ ಅಂಗಡಿಗಳು ಸೇರಿದಂತೆ ಇತರೆ ಅಂಗಡಿಗಳು (Shops) ಬೆಂಕಿಯಿಂದ (Fire Accident) ಸುಟ್ಟು ಕರಕಲಾಗಿರುವ ಘಟನೆ ಮಂಡ್ಯದ (Mandya) ಹೊಳಲು ಸರ್ಕಲ್‌ನಲ್ಲಿ (Holalu Circle) ಜರುಗಿದೆ. ಇಂದು ಬೆಳಗ್ಗಿನ ಜಾವ 3.30ರ ವೇಳೆಯಲ್ಲಿ ಹೊಳಲು ಸರ್ಕಲ್‌ನಲ್ಲಿ ರಸ್ತೆ ಬದಿಯಲ್ಲಿದ್ದ ಹಣ್ಣಿನ ಅಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಪಕ್ಕದಲ್ಲೇ ಇದ್ದ ಮತ್ತೊಂದು ಅಂಗಡಿಗೂ ಈ ಬೆಂಕಿ ವ್ಯಾಪಿಸಿದೆ. ಬೆಂಕಿಯ ತೀವ್ರತೆ ಹೆಚ್ಚಿದ ಕಾರಣ ಎರಡೂ ಅಂಗಡಿಗಳು ಸುಟ್ಟು ಕರಕಲಾಗಿವೆ. https://ainlivenews.com/aishwarya-rai-left-her-husbands-house-mother-in-law-rift-in-big-bs-house/ ಘಟನೆ ಬಳಿಕ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿದ್ದ ಅವಘಡವನ್ನು ತಪ್ಪಿಸಿದ್ದಾರೆ. ಮಹದೇವ, ರಾಧಮ್ಮ ಎಂಬವರಿಗೆ ಸೇರಿದ ಎರಡು ಅಂಗಡಿಗಳು ಸುಟ್ಟು ಕರಕಲಾಗಿವೆ ಎಂದು ತಿಳಿದು ಬಂದಿದೆ. ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಬೆಂಕಿಯ ಕೆನ್ನಾಲೆಗೆ ಸುಟ್ಟು ಕರಕಲಾಗಿರುವ ಅಂಗಡಿಗಳ ಮಾಲೀಕರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ಈ ಕುರಿತು ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ…
ಗೂಗಲ್ ಮ್ಯಾಪ್‌ನ (Google Maps) ಅತ್ಯಂತ ಉಪಯುಕ್ತವಾಗಿರೋ ಸ್ಟ್ರೀಟ್ ವ್ಯೂ (Street View) ಫೀಚರ್ ಇದೀಗ ಇಡೀ ಭಾರತದಲ್ಲಿ (India) ಲಭ್ಯವಾಗಿದೆ. ಈ ಫೀಚರ್ ಬಳಸಿ ಬಳಕೆದಾರರು ಕುಳಿತಲ್ಲೇ ತಮ್ಮ ನಗರ, ಹಳ್ಳಿ, ಶಾಲೆ, ಪಟ್ಟಣದ ಚಿತ್ರವನ್ನು 360 ಡಿಗ್ರಿ ಆಂಗಲ್‌ನಲ್ಲಿ ವೀಕ್ಷಿಸಬಹುದು. 2016ರಲ್ಲಿ ಭಾರತದಲ್ಲಿ ಪ್ರಾರಂಭವಾಗಬೇಕಿದ್ದ ಈ ಫೀಚರ್ ಭದ್ರತಾ ಕಾರಣಗಳಿಂದಾಗಿ ತಡವಾಗಿ ಕಳೆದ ವರ್ಷ ದೇಶಕ್ಕೆ ಲಗ್ಗೆಯಿಟ್ಟಿತು. ಆದರೆ ಆರಂಭದಲ್ಲಿ ಬೆಂಗಳೂರು ಸೇರಿದಂತೆ ಭಾರತದ 10 ನಗರಗಳಲ್ಲಿ ಮಾತ್ರವೇ ಈ ಫೀಚರ್ ಲಭ್ಯವಾಗಿತ್ತು. ಇದೀಗ ಗೂಗಲ್ ಸ್ಟ್ರೀಟ್ ವ್ಯೂ ದೇಶದ ಬಹುತೇಕ ಮೂಲೆಗಳನ್ನು ಆವರಿಸಿಕೊಂಡಿದ್ದು, ಬಳಕೆದಾರರು ಪ್ರವಾಸವನ್ನು ಕೈಗೊಳ್ಳದೇ ತಾವು ಇಷ್ಟಪಡುವ ಪ್ರದೇಶವನ್ನು ಕುಳಿತಲ್ಲಿಯೇ 360 ಡಿಗ್ರಿ ಕೋನದಲ್ಲಿ ವೀಕ್ಷಿಸಲು ಅನುವು ಮಾಡಿಕೊಡುತ್ತಿದೆ. ಏನಿದರ ಉಪಯೋಗ? ನೀವು ಯಾವುದೇ ಒಂದು ಪ್ರದೇಶಕ್ಕೆ ಹೋಗಬಯಸಿದರೆ ಆ ಸ್ಥಳದ ಸ್ಥಿತಿಯ ಬಗ್ಗೆ ಮೊದಲೇ ತಿಳಿದುಕೊಳ್ಳಲು ಗೂಗಲ್ ಸ್ಟ್ರೀಟ್ ವ್ಯೂ (Google Street View) ಸಹಾಯ ಮಾಡುತ್ತದೆ. ಇದಕ್ಕಾಗಿ ನೀವು ಆ ಪ್ರದೇಶಕ್ಕೆ ತೆರಳಿ…
ಸ್ಮಾರ್ಟ್ ಫೋನ್‌ಗಳು ಈಗ ಎಲ್ಲರ ಬದುಕಿನ ಭಾಗವಾಗಿದೆ. ದಿನದ ಸಾಕಷ್ಟು ಕೆಲಸ ಕಾರ್ಯಗಳಿಗೆ ಸ್ಮಾರ್ಟ್‌ಫೋನ್‌ಗಳೇ ಆಧಾರವಾಗಿವೆ. ನಮ್ಮ ಆಂಡ್ರಾಯ್ಡ್ ಫೋನ್‌ನನ್ನು ಫಾಸ್ಟ್ ಆಗಿಸಲು ಕೆಲವೊಂದು ಮಾರ್ಗೋಪಾಯಗಳಿವೆ. ಇವುಗಳನ್ನು ಪಾಲಿಸಿಕೊಂಡು ಹೋದರೆ ಫೋನ್ ಸ್ಲೋ ಆಗುವ ಕಷ್ಟದಿಂದ ಕೊಂಚ ಮುಕ್ತಿ ಪಡೆಯುವ ಸಾಧ್ಯತೆಗಳು ಹೆಚ್ಚಿರುತ್ತವೆ. ಆ ಮಾರ್ಗೋಪಾಯಗಳೇನು…? ಇಲ್ಲಿದೆ ಕೆಲ ಸರಳ ಟಿಪ್ಸ್. ಕ್ಯಾಶೆ ಕ್ಲಿಯರ್ ಮಾಡಿ : ದಿನ ಕಳೆದಂತೆ ಕ್ಯಾಶೆ ಡೇಟಾ ಸಂಗ್ರಹವಾಗುತ್ತಾ ಹೋಗುತ್ತದೆ. ಇದು ನಿಮ್ಮ ಫೋನನ್ನು ನಿಧಾನಗೊಳಿಸುತ್ತದೆ. ಹೀಗಾಗಿ ಕ್ಯಾಶೆ ಡೇಟಾ ಕ್ಲಿಯರ್ ಮಾಡುವುದು ಬಹಳ ಅಗತ್ಯ. ಅದಕ್ಕೆ ನೀವು ಸೆಟ್ಟಿಂಗ್‌ಗೆ > ಸ್ಟೋರೇಜ್ > ಕ್ಯಾಶೆಡ್ ಡೇಟಾಕ್ಕೆ ಹೋಗಿ ಕ್ಲಿಯರ್ ಮಾಡಬೇಕು. ಹೀಗೆ ಆಗಾಗ ಕ್ಯಾಶೆ ಡೇಟಾ ಕ್ಲಿಯರ್ ಮಾಡುತ್ತಿದ್ದರೆ ಮೆಮೋರಿ ಸ್ಪೇಸ್ ಫ್ರೀ ಆಗುತ್ತದೆ ಮತ್ತು ನಿಮ್ಮ ಡಿವೈಜ್‌ನ ಪರ್ಫಾರ್ಮೆನ್ಸ್ ಉತ್ತಮವಾಗುತ್ತದೆ. ಅನಗತ್ಯ ಆಪ್‌ಗಳು : ಸಾಕಷ್ಟು ಆಪ್‌ಗಳನ್ನು ನಾವು ಬಳಸುತ್ತೇವೆ. ಆದರೆ ಕೆಲವೊಂದು ಆಪ್‌ಗಳನ್ನು ಒಮ್ಮೆ ಬಳಸಿ ಮತ್ತೆ ಅವುಗಳತ್ತ ತಿರುಗಿಯೂ ನೋಡುವುದಿಲ್ಲ ಅಥವಾ ಅಪರೂಪಕ್ಕೊಮ್ಮೆ ಬಳಸುತ್ತೇವೆ. ಹೀಗೆ ನಿಮ್ಮ ಮೊಬೈಲ್‌ನಲ್ಲಿ…
ಹುಬ್ಬಳ್ಳಿ: ರಾಜ್ಯ ರಾಜಕಾರಣದಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದೆ. ಬಹುದಿನದ ಬಳಿಕ ಹಿಂದೂ ಫೈರ್ ಬ್ರ್ಯಾಂಡ್ ನಾಯಕರು ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಅಚ್ಚರಿಯ ಜೊತೆಗೆ ತೀವ್ರ ಕುತೂಹಲ ಹುಟ್ಟಿಸಿದ್ದಾರೆ. ಸಂಸದ ಅನಂತ್ ಕುಮಾರ್ ಹೆಗ್ಡೆ (Anantkumar Hegde) ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಇಬ್ಬರೂ ಜೊತೆಗೂಡಿ ದೆಹಲಿಗೆ ಪಯಣ ಬೆಳೆಸಿದ್ದಾರೆ. ಭಾನುವಾರ ರಾತ್ರಿ 8.30ರ ವಿಮಾನದಲ್ಲಿ ಇಬ್ಬರು ಹಿಂದೂ ಫೈರ್ ಬ್ರ್ಯಾಂಡ್‍ಗಳು ರಾಷ್ಟ್ರ ರಾಜಧಾನಿಗೆ ಹಾರಿದ್ದಾರೆ. https://ainlivenews.com/aishwarya-rai-left-her-husbands-house-mother-in-law-rift-in-big-bs-house/ ಈ ಇಬ್ಬರು ನಾಯಕರ ಜೊತೆಗೆ ಸಂಸದ ಸಂಗಣ್ಣ ಕರಡಿ ಕೂಡ ಅದೇ ವಿಮಾನದಲ್ಲಿ ದೆಹಲಿಗೆ ತೆರಳಿದ್ದಾರೆ. ಸದ್ಯ ಯತ್ನಾಳ್ ಹಾಗೂ ಅನಂತ್ ಕುಮಾರ್ ನಾಯಕರ ಭೇಟಿ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರು: ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ವಲಯ ಕಚೇರಿ 18 ನೇ ಡಿಸೆಂಬರ್ 2023 ರ ಮುಂಜಾನೆ ವರೆಗಿನ ರಾಜ್ಯದ ಮಳೆ ಮುನ್ಸೂಚನೆಯ ವರದಿಯನ್ನು ನೀಡಿದೆ ಮುಂದಿನ 24 ಘಂಟೆಗಳು ಕರಾವಳಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಭಾಗಗಳಲ್ಲಿ ಮಳೆ ಬರುವ ಬಹಳಷ್ಟು ಸಂಭವವಿದೆ ಇದ್ದು, ಉತ್ತರ ಒಳನಾಡಿನಲ್ಲಿ ಒಣ ಹವೆಯ ಸಂಭವವಿದೆ ಇದೆ ಎಂದು ಇಲಾಖೆ ಅಂದಾಜಿಸಿದೆ. ಮುಂದಿನ 48 ಘಂಟೆಗಳು ರಾಜ್ಯದಾದ್ಯಂತ ಒಣಹವೆಯ ಸಂಭವವಿದೆ ಇದೆ. ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಭಾಗಗಳಲ್ಲಿ ಬೆಳಗಿನ ಜಾವ ಮಂಜು ಮುಸುಕುವ ಬಹಳಷ್ಟು ಸಂಭವವಿದೆ ಇದೆ. ಗರಿಷ್ಠ ಉಷ್ಣಾಂಶ 29 ಮತ್ತು ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರುವ ಬಹಳಷ್ಟು ಸಂಭವಗಳಿವೆ. ಮುಂದಿನ 48 ಗಂಟೆಗಳು: ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಭಾಗಗಳಲ್ಲಿ ಬೆಳಗಿನ ಜಾವ ಮಂಜು ಮುಸುಕುವ ಬಹಳಷ್ಟು ಸಂಭವವಿದೆ ಇದೆ. ಗರಿಷ್ಠ ಉಷ್ಣಾಂಶ 29 ಮತ್ತು ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರುವ…
ಕೋಲಾರ: ಜಿಲ್ಲೆಯ ಮಾಲೂರು ತಾಲ್ಲೂಕು ಯಲವಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳಿಗೆ ಕಿರುಕುಳ ಆರೋಪದ ಜೊತೆಗೆ ಮತ್ತೊಂದು ಗಂಭೀರ ಆರೋಪವೂ ಕೇಳಿಬಂದಿದೆ. ಪೊಷಕರೊಬ್ಬರು ಮತ್ತೊಂದು ಸ್ಟೋಟಕ ಹೇಳಿಕೆ ನೀಡಿದ್ದಾರೆ. ಹೆಣ್ಣು ಮಕ್ಕಳು ಬಟ್ಟೆ ಬದಲಿಸುವ ಫೋಟೋ ಕೂಡ ತಗೆಯಲಾಗ್ತಿತ್ತು ಅಂತಾ ಆರೋಪಿಸಿದ್ದಾರೆ. https://ainlivenews.com/aishwarya-rai-left-her-husbands-house-mother-in-law-rift-in-big-bs-house/ ಶಾಲೆಯಲ್ಲಿ ಹೆಣ್ಣು ಮಕ್ಕಳ ಬಟ್ಟೆ ಬದಲಿಸುವ ಫೋಟೋ ತೆಗೆದ ವಿಷಯ ಶುದ್ಧ ಸುಳ್ಳು. ಶಾಲೆಯಲ್ಲಿ ಮಾರೇಶ್, ಚಿತ್ರಕಲಾ ಶಿಕ್ಷಕರು ಮುನಿಯಪ್ಪರಿಂದ ಗುಂಪುಗಾರಿಕೆ ನಡೆದಿದೆ ಅಂತಾ ಪ್ರಾಂಶುಪಾಲೆ ಭಾರತಮ್ಮ ಆರೋಪಿಸಿದ್ದಾರೆ. ಬಟ್ಟೆ ಬದಲಾಯಿಸುವ ವೇಳೆ ನನ್ನ ಹಾಗೂ ಮತ್ತೊಬ್ಬ ವಿದ್ಯಾರ್ಥಿನಿಯ ಬೆತ್ತಲೆ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ ಎಂದು ವಿದ್ಯಾರ್ಥಿನಿ ಆರೋಪ ಮಾಡಿದ್ದಾಳೆ. ಶಾಲಾ ಸಿಬ್ಬಂದಿ ವಿರುದ್ಧ ವಿದ್ಯಾರ್ಥಿನಿ, ಪೋಷಕರಿಂದ ಗಂಭೀರ ಆರೋಪ ಕೇಳಿಬಂದಿದೆ.
ಬೆಂಗಳೂರು: ದಕ್ಷಿಣ ಆಫ್ರಿಕಾ ವಿರುದ್ಧ ಡಿಸೆಂಬರ್ 17 ( ಭಾನುವಾರ) ಜೋಹಾನ್ಸ್ ಬರ್ಗ್ ನಲ್ಲಿ ನಡೆದ ಮೊದಲ ಟಿ20-ಐ ಪಂದ್ಯದಲ್ಲಿ ತಮ್ಮ ಪದಾರ್ಪಣೆ ಪಂದ್ಯದಲ್ಲೇ ಅರ್ಧಶತಕ (55* ರನ್) ಸಿಡಿಸಿದ ಸಾಯಿ ಸುದರ್ಶನ್ ಟೀಮ್ ಇಂಡಿಯಾ ಪರ ಚೊಚ್ಚಲ ಪಂದ್ಯದಲ್ಲೇ ಫಿಫ್ಟಿ ಬಾರಿಸಿದ 17ನೇ ಹಾಗೂ 4ನೇ ಆರಂಭಿಕ ಬ್ಯಾಟರ್ ಎಂಬ ದಾಖಲೆ ನಿರ್ಮಿಸಿದ್ದಾರೆ. ಭಾರತ ತಂಡದ ಪರ ಪದಾರ್ಪಣೆ ಮಾಡಿದ 400ನೇ ಆಟಗಾರರಾದ ಸಾಯಿ ಸುದರ್ಶನ್ ನಾಯಕ ಕೆ.ಎಲ್.ರಾಹುಲ್ ರಿಂದ ಕ್ಯಾಪ್ ಪಡೆದರು. ಋತುರಾಜ್ ಗಾಯಕ್ವಾಡ್ ರೊಂದಿಗೆ ಇನಿಂಗ್ಸ್ ಆರಂಭಿಸಿದ ಸಾಯಿ ಸುದರ್ಶನ್ , ದಕ್ಷಿಣ ಆಫ್ರಿಕಾದ ಯುವ ವೇಗಿ ನಂಡ್ರೆ ಬರ್ಗರ್ ಬೌಲಿಂಗ್ ನಲ್ಲಿ ಕವರ್ ಡ್ರೈವ್ ಮೂಲಕ ರನ್ ಗಳಿಸಿದ ಸಾಯಿಸುದರ್ಶನ್ ಅವರು ಬರ್ಗರ್ ಬೌಲಿಂಗ್ ನಲ್ಲಿ ಚೆಂಡನ್ನು ಪ್ಯಾಡ್ ಮೇಲೆ ಎಳೆದುಕೊಂಡಿದ್ದರಾದರೂ ಅಂಪೈರ್ ಕೃಪೆಯಿಂದ ಜೀವದಾನ ಪಡೆದಿದ್ದರು. ದಕ್ಷಿಣ ಆಫ್ರಿಕಾ ರಿವ್ಯೂ ಪಡೆಯದ ಕಾರಣ ತಮಿಳುನಾಡಿನ ಯುವ ಆಟಗಾರ ಮತ್ತೊಮ್ಮೆ ಪಾರಾದರು. ಋತುರಾಜ್ ಗಾಯಕ್ವಾಡ್ (5ರನ್)…