ಬಳ್ಳಾರಿ: ದೇವಸ್ಥಾನದಲ್ಲಿ ಕಳೆದ ಒಂದು ವರ್ಷದಿಂದ ಇದ್ದ ದೊಡ್ಡ ಹುಂಡಿಯನ್ನು ಕಳ್ಳರು ಕದ್ದಿರುವ ಘಟನೆ ಬಳ್ಳಾರಿ ಜಿಲ್ಲೆ, ಸಿರುಗುಪ್ಪ ತಾಲೂಕಿನ, ತಾಳೂರು ಗ್ರಾಮದ ತಾಳೂರು ಗ್ರಾಮದಲ್ಲಿ ನಡೆದಿದೆ. ತಾಳೂರು ಗ್ರಾಮದ ಶ್ರೀ ಗಾದಿಲಿಂಗೇಶ್ವರ ದೇವಸ್ಥಾನದಲ್ಲಿ ಹುಂಡಿ ಕಳವು ಆಗಿದ್ದು, ನಿನ್ನೆ ತಡರಾತ್ರಿ ಬೈಕ್ ನಲ್ಲಿ ಬಂದು ಹುಂಡಿ ಕದ್ದ ಖದೀಮರು.. ಹುಂಡಿ ಕದ್ದ ತೆಗೆದುಕೊಂಡ ಹೋಗುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸಿರಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Author: AIN Author
ಬೆಂಗಳೂರು: ಖ್ಯಾತ ನಟ ಕಿಚ್ಚ ಸುದೀಪ್ ಅವರು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಭೇಟಿ ಮಾಡಿ, ಸಮಾಲೋಚನೆ ನಡೆಸಿದರು. ಕನ್ನಡದ ಹೆಸರಾಂತ ನಟ ವಿಷ್ಣುವರ್ಧನ್ (Vishnuvardhan) ಅವರ ಪುಣ್ಯಭೂಮಿ (Punya Bhumi) ವಿಚಾರವಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ((D.K. Shivakumar)) ಜೊತೆ ಕಿಚ್ಚ ಸುದೀಪ್ (Sudeep) ಮಾತನಾಡಿದ್ದಾರೆ. ನಿನ್ನೆ ಡಿಕೆಶಿಯನ್ನು ಭೇಟಿ ಮಾಡಿದ್ದ ಸುದೀಪ್, ಅಭಿಮಾನ ಸ್ಟುಡಿಯೋದಲ್ಲಿರುವ ವಿಷ್ಣು ಪುಣ್ಯ ಭೂಮಿಯನ್ನು ಅಭಿಮಾನಿಗಳ ಕೋರಿಕೆಯ ಮೇರೆಗೆ ಹಾಗೆಯೇ ಉಳಿಸಿಕೊಳ್ಳಬೇಕು ಮತ್ತು ಹತ್ತು ಗುಂಟೆ ಜಮೀನನ್ನು ನೀಡಲು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ. ಕನ್ನಡ ಸಿನಿಮಾ ರಂಗದ ಮೇರುನಟ ಡಾ.ವಿಷ್ಣುವರ್ಧನ್ ಅವರ ಸಮಾಧಿ ನೆಲಸಮ ಆಗುತ್ತಾ? ಇಂತಹ ಆತಂಕದ ಮಾಹಿತಿಯನ್ನು ಡಾ.ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಹೊರಹಾಕಿದ್ದಾರೆ. ಈ ಕುರಿತು ಅವರು ಈ ಹಿಂದೆ ವಿಡಿಯೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಯಾವುದೇ ಕಾರಣಕ್ಕೂ ಬೆಂಗಳೂರಿನ ಅಭಿಮಾನ ಸ್ಟುಡಿಯೋದಲ್ಲಿರುವ ಯಜಮಾನರ (ವಿಷ್ಣುವರ್ಧನ್) ಸಮಾಧಿಯನ್ನು ನೆಲಸಮ ಮಾಡುವುದಕ್ಕೆ…
ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್‌ಬಾಸ್ ಮನೆಯೊಳಗೆ ಪ್ರವೇಶಿಸಿದ್ದ ಪವಿ ಪೂವಪ್ಪ ಅವರ ಮೇಲಿನ ನಿರೀಕ್ಷೆಗಳೂ ಜಾಸ್ತಿಯೇ ಇದ್ದವು. ಹಳೆಯ ಎಪಿಸೋಡ್‌ಗಳನ್ನು ನೋಡಿಕೊಂಡು, ಸದಸ್ಯರ ವರ್ತನೆಗಳನ್ನು ಅರಿತುಕೊಂಡು ಲೆಕ್ಕಾಚಾರ ಮಾಡಿ ಆಡುವ ಅವಕಾಶ ಇರುವುದರಿಂದ ಅವರಿಂದ ಮನೆಯ ಪರಿಸ್ಥಿತಿಯೇ ಬದಲಾಗುತ್ತದೆ ಎಂದುಕೊಳ್ಳಲಾಗಿತ್ತು. ಆದರೆ ಮನೆಯೊಳಗೆ ಪವಿತ್ರಾ ಅಂದುಕೊಂಡಷ್ಟೇನೂ ಸದ್ದು ಮಾಡಲಿಲ್ಲ. ಒಂದು ವಾರ ಉತ್ತಮ ಪಡೆದುಕೊಂಡು ಇನ್ನೊಂದು ವಾರ ಜೈಲುಶಿಕ್ಷೆಯನ್ನೂ ಅನುಭವಿಸಿದ್ದು ಅವರ ಆಟದ ಏರಿಳಿತವನ್ನು ಸೂಚಿಸುವಂತಿದೆ. ಒಳಗೆ ಹೋಗಿ ಮೂರೇ ವಾರಕ್ಕೆ ಮರಳಿ ಬಂದಿರುವ ಅವರು ಮನೆಯಿಂದ ಹೊರಬಿದ್ದಿದ್ದೇ JioCinemaಗೆ ಎಕ್ಸ್‌ಕ್ಲ್ಯೂಸಿವ್ ಸಂದರ್ಶನ ನೀಡಿದ್ದಾರೆ. ಮೂರು ವಾರಗಳ ಪುಟ್ಟ ಜರ್ನಿಯ ಕುರಿತು ಅವರು ಹಂಚಿಕೊಂಡ ಅಭಿಪ್ರಾಯಗಳು ಇಲ್ಲಿವೆ. ‘ನಾನು ಪವಿ ಪೂವಪ್ಪ. ಈವಾಗ ಜಸ್ಟ್ ಬಿಗ್‌ಬಾಸ್ ಸೀಸನ್ 10 ಮನೆಯಿಂದ ಹೊರಗೆ ಬಂದಿದ್ದೇನೆ. ಸಣ್ಣ ಸುಳಿವು ಇತ್ತು: ಮನೆಯಿಂದ ಹೊರಬರುವ ನಿರೀಕ್ಷೆ ಸಣ್ಣದಾಗಿ ಇತ್ತು. ಆದರೆ ಖಚಿತವಾಗಿ ಗೊತ್ತಿರಲಿಲ್ಲ. 80% ಹೊರಗೆ ಬರಬಹುದು ಅಂದುಕೊಂಡಿದ್ದೆ. ಎಲ್ಲರೂ ನನ್ನ ಟಾರ್ಗೆಟ್ ಮಾಡುತ್ತಿರುವುದನ್ನು…
ಬೆಂಗಳೂರು: ಬಹುನಿರೀಕ್ಷಿತ ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಚಿತ್ರ ಇನ್ನೇನು ಕೆಲ ದಿನಗಳಲ್ಲೇ ರಿಲೀಸ್ ಮಾಡಬೇಕೆಂದಿದ್ದರು ಆದರೆ ಈಗ ದಿಢೀರ್ ಸಂಕಷ್ಟವೊಂದು ಒದಗಿ ಬಂದಿದೆ. ವನ್ಯ ಜೀವಿ ಸಂರಕ್ಷಣಾ ಒಕ್ಕೂಟದಿಂದ ದರ್ಶನ್ ಮೇಲೆ ಗರಂ ಆಗಿದ್ದಾರೆ. ವನ್ಯ ಜೀವಿಗಳ ಬಗ್ಗೆ ಅಪಕ್ವ ಸಂಭಾಷಣೆ ವಿರುದ್ಧವಾಗಿ ಆಕ್ರೋಶ ಹಾಗೆ ಟ್ರೈಲರ್ ನಲ್ಲಿ ಇರುವ ಸಂಭಾಷಣೆ ಬಗ್ಗೆ ಅಸಾಮಾಧಾನ ಹೊರ ಹಾಕಿರವ ವನ್ಯ ಜೀವಿ ಸಂರಕ್ಷಣಾ ಒಕ್ಕೂಟ “ಇವರೆಲ್ಲಾ ಹಾವು ಇದ್ದಂಗೆ. ವಿಷ ಇಲ್ಲಾಂದ್ರೆ ಹಿಡಿಬೇಕು. ವಿಷ ಇದ್ರೆ ಹೊಡಿಬೇಕು” ಎಂಹ ಖಡಕ್ ಡೈಲಾಗ್ ಅಭಿಮಾನಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಈಗಾಗಲೇ ಅಳಿವನ ಅಂಚಿನಲ್ಲಿರುವ ವಿಷಕಾರಿ ಹಾವುಗಳ ಸಂರಕ್ಷಣೆಗೆ 2021ರಲ್ಲಿ ಕಾನೂನು ರೂಪಿಸಲಾಗಿದೆ ವಿಷಕಾರಿ ಹಾವುಗಳನ್ನು ಉಳಿಸಿಕೊಂಡು ಹೋಗಬೇಕೇ ಹೊರತು ಹೊಡೆದು ಕೊಲ್ಲೋಕೆ ಪ್ರಚೋದನೆ ನೀಡಬಾರದು ರಾಜ್ಯಪಾಲರಿಗೆ ಹಾಗೂ ಸಿಎಂ ಸಿದ್ದರಾಮಯ್ಯಗೆ ಮೇಲ್ ಮೂಲಕ ದೂರು ನೀಡಿರುವ ವನ್ಯ ಜೀವಿ ಸಂರಕ್ಷಣಾ ಒಕ್ಕೂಟ
ಮುಂಬೈ: ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಮೊಹಮ್ಮದ್ ಬಿನ್ ಅಬ್ದುಲ್ಲಾ ಮಸೀದಿಯು (Ayodhya Mosque) ತಾಜ್‌ಮಹಲ್‌ಗಿಂತಲೂ ಸುಂದರವಾಗಿರಲಿದೆ ಎಂದು ಬಿಜೆಪಿ ಮುಖಂಡ ಹಾಗೂ ಅಯೋಧ್ಯೆ ಮಸೀದಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹಾಜಿ ಅರ್ಫಾತ್ ಶೇಖ್ (Haji Arfat Shaikh) ತಿಳಿಸಿದ್ದಾರೆ. ಅಯೋಧ್ಯೆಯಲ್ಲಿ ಮೊಹಮ್ಮದ್ ಬಿನ್ ಅಬ್ದುಲ್ಲಾ ಮಸೀದಿಯ ಶಿಲಾನ್ಯಾಸ ಮುಂದಿನ ವರ್ಷ ನಡೆಯಲಿದೆ. ಈ ಸಮಾರಂಭಕ್ಕೆ ಸಂತರು, ಪೀರರು ಮತ್ತು ಧರ್ಮಗುರುಗಳನ್ನು ಆಹ್ವಾನಿಸಲಾಗುವುದು ಎಂದು ಶೇಖ್ ಮಾಹಿತಿ ನೀಡಿದ್ದಾರೆ. https://ainlivenews.com/aishwarya-rai-left-her-husbands-house-mother-in-law-rift-in-big-bs-house/ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (ಐಐಸಿಎಫ್) ಈ ಮಸೀದಿಯ ನಿರ್ಮಾಣದ ಜವಾಬ್ದಾರಿ ಹೊತ್ತಿದೆ. ಮಸೀದಿ ಸಿದ್ಧವಾದಾಗ, ಮೆಕ್ಕಾ ಮಸೀದಿಯಲ್ಲಿ ನಮಾಜ್‌ನ ನೇತೃತ್ವ ವಹಿಸುವ ಇಮಾಮ್-ಎ-ಹರಾಮ್ ಸೇರಿದಂತೆ ಎಲ್ಲಾ ದೇಶಗಳ ಉನ್ನತ ಧರ್ಮಗುರುಗಳನ್ನು ಆಹ್ವಾನಿಸಲಾಗುವುದು ಎಂದು ಹೇಳಿದ್ದಾರೆ. ಬಾಬ್ರಿ ಮಸೀದಿಯ ಬದಲಿಗೆ ಪ್ರವಾದಿಯ ಹೆಸರನ್ನು ಇಡಲಾಗಿದೆ. ಅಯೋಧ್ಯೆಯಿಂದ 25 ಕಿಮೀ ದೂರದಲ್ಲಿರುವ ಧನ್ನಿಪುರದ ಬೇರೆ ಸ್ಥಳದಲ್ಲಿ ಮೊಹಮ್ಮದ್ ಬಿನ್ ಅಬ್ದುಲ್ಲಾ ಮಸೀದಿ ನಿರ್ಮಿಸಲಾಗುತ್ತಿದೆ. ಅಯೋಧ್ಯೆ ರಾಮಮಂದಿರ ವಿವಾದದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಂತೆ ಮಸೀದಿ ನಿರ್ಮಾಣಕ್ಕೆ ಮತ್ತೊಂದು…
ಬೆಂಗಳೂರು: ಟ್ರಾಫಿಕ್ ಪೊಲೀಸ್ರು ಗಾಡಿ ಹಿಡಿತಿಲ್ಲ. ಫೈನ್ ಹಾಕ್ತಿಲ್ಲ, ರೋಡಲ್ಲಿ ಅವ್ರು ಕಾಣ್ತಿಲ್ಲ ಅಂತ ಅಡ್ಡಾದಿಡ್ಡಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ರೆ ದಂಡಾಸ್ತ್ರದಿಂದ ಮಿಸ್ ಆಗೋಕೆ ಚಾನ್ಸೇ ಇಲ್ಲ. ಮನಡ ಹತ್ರ ತಾನೇ ಹೀಗ್ ಹೋಗಿ ಹಾಗ್ ಬರೋಣ ಅಂತ ಹೆಲ್ಮೆಟ್ ಇಲ್ದೆ, ರಾಂಗ್ ರೂಟ್ ನಲ್ಲಿ ಓಡಾಡಿದ್ರೆ ಫೈನ್ ಮಿಸ್ ಆಗಲ್ಲ. ಸದ್ಯ ನಗರದಲ್ಲಿ ಸಿಗ್ನಲ್ ನಲ್ಲಿ ಮತ್ತು ರಸ್ತೆಗಳಲ್ಲಿರೋ ಸೇಫ್ ಸಿಟಿ ಕ್ಯಾಮರದಲ್ಲೂ ನಿಮ್ಮ ಚಲನವಲನ ಕ್ಯಾಪ್ಚರ್ ಆಗುತ್ತೆ. ಹೀಗೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಪರಿಣಾಮ ಆಕ್ಟೀವಾ ಸ್ಕೂಟರ್ ಮೇಲೆ ಬರೋಬ್ಬರಿ 3.22ಲಕ್ಷ ಫೈನ್ ಬಿದ್ದಿದೆ. ಆರ್ ಟಿ ನಗರ ಗಂಗಾನಗರ ಬಳಿ ಒಡಾಡಿರೋ KA 04 KF9072 ಸ್ಕೂಟರ್ ಮೇಲೆ 643 ಸಂಚಾರ ನಿಯಮ ಉಲ್ಲಂಘನೆ ಕೇಸ್ ದಾಖಲಾಗಿದೆ.ಮಾಲ ಎಂಬುವವರಿಗೆ ಸೇರಿದ ಸ್ಕೂಟರ್ ನಲ್ಲಿ ಹೆಲ್ಮೆಟ್ ಧರಿಸದೆ ಓಡಾಡಿರೋ ಪರಿಣಾಮ ಮೂರು ಲಕ್ಷಕ್ಕೂ ಹೆಚ್ಚು ಫೈನ್ ಬಿದ್ದಿದೆ. ಸ್ಕೂಟರ್ ಬೆಲೆನೆ 70-80ಸಾವಿರ ಇದ್ದು ದಂಡದ ಮೊತ್ತ…
ಬೆಂಗಳೂರು: ಜ್ಯೋತಿಷ್ಯ ಹೇಳೋ ಗುರೂಜಿ ವಿರುದ್ಧ ಹಿರಿಯ ನಟ ವಂಚನೆ ಕೇಸ್ ದಾಖಲಿಸಿದ್ದಾರೆ. ಗೋಲ್ಡ್ , ದುಬೈ ಟಿಕೇಟ್ , ಸೈಟ್ ಕೊಡುಸ್ತಿನಿ ಎಂದು ವಂಚಿಸಿದ್ದಾರೆಂದು ಗುರೂಜಿ ಹಾಗು ಆತನ ಪತ್ನಿ ವಿರುದ್ಧ ಕಿರುತೆರೆ ಹಾಗು ಸ್ಯಾಂಡಲ್ ವುಡ್ ಹಿರಿಯ ನಟ ರವಿಕಿರಣ್ ದೂರು ನೀಡಿದ್ದಾರೆ. ನವೀನ್ ಭಾಗ್ಯಶ್ರೀ ಗುರೂಜಿ ವಿರುದ್ಧ 4 ಲಕ್ಷಕ್ಕೂ ಹೆಚ್ಚು ಹಣ ವಂಚನೆ ಮಾಡಿದ್ದಾರೆಂದು ದೂರು ದಾಖಲಾಗಿದೆ. ತನ್ನ ಅನಾಥಾಶ್ರಮಕ್ಕೆ ರೇಷನ್ ಕೊಡಿಸಿ ಎಂದು ನಟನ ಬಳಿ ಗುರೂಜಿ ಬಂದಿದ್ದಾರೆ ಈ ವೇಳೆ 2500 ರೂಪಾಯಿ ಗುರೂಜಿ ಅಕೌಂಟ್ ಗೆ ರವಿಕಿರಣ್ ಗೂಗಲ್ ಪೇ ಮಾಡಿದ್ದಾರೆ. ಸ್ವಲ್ಪ ದಿನದ ಬಳಿಕ ದುಬೈನಲ್ಲಿ ಪ್ರೋಗ್ರಾಂ ಇದೆ ನೀವೇ ಚೀಫ್ ಗೆಸ್ಟ್ .ಹೋದರೆ ಹಣ ಕೊಡ್ತಾರೆ ಅಂತ ಗುರೂಜಿ ಕರೆ ಮಾಡಿದ್ದಾರೆ. ಇದಕ್ಕೆ ಒಪ್ಪಿ ಟಿಕೇಟ್ ಮಾಡಿಸಿಕೊಡಿ ಎಂದು ರವಿಕಿರಣ್ ಹೇಳಿದ್ದಾರೆ.ಅದಕ್ಕೂ ಹಣ ಪಡೆದಿದ್ದ ಗುರೂಜಿ ವೀಸಾ ಹಾಗು ಟಿಕೇಟ್ ಗೆ 42 ಸಾವಿರ ಹಣ ಹಾಕಿಸಿಕೊಂಡಿದ್ರಂತೆ.ನಂತರ ಅಲ್ಲಿನ…
ಬೆಂಗಳೂರು: ದೇಶದಲ್ಲಿ ಕೋವಿಡ್ ಅರ್ಭಟ ಯಾಕೋ ನಿಲ್ಲವ ಲಕ್ಷಣ ಕಾಣ್ತಿಲ್ಲ.ಅಲೆಗಳ ಮೇಲೆ ಅಲೆಗಳು ಬಂದು ಈಗಾಗಲೇ ಜನರನ್ನ ಹಿಂಡಿ ಹಿಪ್ಪೆ ಮಾಡಿರೋ ಈ ಕ್ರೂರಿ ಇದೀಗ ಮತ್ತಷ್ಟು ಆತಂಕ ಹುಟ್ಟಿಸಿದೆ. ದೇಶದ ಕೆಲ ರಾಜ್ಯಗಳಲ್ಲಿ ಸೈಲೆಂಟ್ ಆಗಿ ಕೊರೋನಾ ಉಲ್ಬಣವಾಗ್ತಿರೋದು ಮತ್ತೆ ಆ ದಿನಗಳು ಬರುತ್ತಾ ಅನ್ನೋ ಪ್ರಶ್ನೆ ಮೂಡಿದೆ.. ಕೇರಳದಲ್ಲಿ ಕೊರೋನಾ ನರ್ತನದಿಂದ ಅಲರ್ಟ್ ಆಗಿರೋ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ತಾಂತ್ರಿಕ ಸಲಹಾ ಸಮಿತಿ ಮೊರೆ ಹೋಗಿದೆ. ಹಾಗಾದ್ರೆ ನಾಡಿದ್ದು ಸಲಹಾ ಸಮಿತಿ ಏನೆಲ್ಲಾ ಸಲಹೆ ನೀಡ್ತಾರೆ ಬನ್ನಿ ಹೇಳ್ತೀವಿ ದೇಶದಲ್ಲಿ ಕೊರೋನಾ ಹೆಸರು ಕೇಳಿದ್ರೆ ಸಾಕು ಜನ ಬೆಚ್ಚಿಬೀಳ್ತಾರೆ. ಯಾಕೆಂದ್ರೆ ಅಲೆಗಳ ಮೇಲೆ ಅಲೆಗಳಾಗಿ ಬಂದು ಜನರನ್ನ ಹಿಂಡಿ ಹಿಪ್ಪೆ ಮಾಡಿದೆ. ಕಳೆದ ಎರಡು ವರ್ಷದಿಂದ ಮರೆಯಾಗಿದ್ದ ಡೆಡ್ಲಿ ಕ್ರೂರಿ ಮತ್ತೆ ವಕ್ಕರಿಸಿದೆ.ಕಳೆದ ಕೆಲ ದಿನದಿಂದ ಕೇರಳ ತಮಿಳುನಾಡು ಸೇರಿ ಹಲವೆಡೆ ಕೊರೊನಾ ಕೇಸ್ ಗಳ ಸಂಖ್ಯೆ ಉಲ್ಬಣಗೊಂಡಿದೆ.ಅಮೆರಿಕ, ಬ್ರಿಟನ್, ಚೀನಾ, ಫ್ರಾನ್ಸ್ ದೇಶಗಳಲ್ಲಿ ಕಂಡುಬಂದಿದ್ದ…
ಮಡಿಕೇರಿ: ದೇಶದ ಕೆಲ ರಾಜ್ಯಗಳಲ್ಲಿ ಸೈಲೆಂಟ್ ಆಗಿ ಕೊರೋನಾ ಉಲ್ಬಣವಾಗ್ತಿರೋದು ಮತ್ತೆ ಆ ದಿನಗಳು ಬರುತ್ತಾ ಅನ್ನೋ ಪ್ರಶ್ನೆ ಮೂಡಿದೆ.. ಕೇರಳದಲ್ಲಿ ಕೊರೋನಾ ನರ್ತನದಿಂದ ಅಲರ್ಟ್ ಆಗಿರೋ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ತಾಂತ್ರಿಕ ಸಲಹಾ ಸಮಿತಿ ಮೊರೆ ಹೋಗಿದೆ. ಹೌದು ರಾಜ್ಯದಲ್ಲಿ ಕೊರೊನಾ ರೂಪಾಂತರಿ ಬಗ್ಗೆ ಯಾರೂ ಕೂಡ ಆತಂಕಪಡಬೇಕಿಲ್ಲ. ಆದರೆ 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ ಮಾಡಲಾಗುತ್ತದೆ. ಇಂದಿನಿಂದಲೇ ರಾಜ್ಯ ಸರ್ಕಾರ ಆದೇಶ ಹೊರಡಿಸಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ನಗರದಲ್ಲಿ ಮಾತಾನಾಡಿದ ಅವರು, ಮೊನ್ನೆ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿದ್ದೇವೆ. ರವಿ ಅವರ ನೇತೃತ್ವದಲ್ಲಿ ನಿನ್ನೆಯೂ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಯಾವ ಕ್ರಮ ತೆಗೆದುಕೊಳ್ಳಬೇಕು ಚರ್ಚೆ ನಡೆಸಿದ್ದಾರೆ. ಅಲ್ಲದೇ ಕೇಂದ್ರ ಸರ್ಕಾರದ ಜೊತೆಗೂ ಚರ್ಚೆ ಮಾಡಿದ್ದಾರೆ. ಕೆಲವು ಸಲಹೆ ಮಾರ್ಗಸೂಚಿ ಪಡೆದಿದ್ದೇವೆ. 60 ವರ್ಷ ಮೇಲ್ಪಟ್ಟವರು ಮತ್ತು ಹೃದಯ, ಕಿಡ್ನಿ ಸಂಬಂಧಿತ ಇತರ ಕಾಯಿಲೆಗಳಿಂದ ಬಳಲುತ್ತಿರುವವರು ಹಾಗೂ ಜ್ವರ, ಕಫ, ಶೀತ…
ಬೆಂಗಳೂರು: ಜಗದೀಶ್ ಶೆಟ್ಟರ್ (Jagadeesh Shettar) ನನ್ನ ವಿರುದ್ಧ ಸ್ಪರ್ಧೆ ಮಾಡಿದ್ರೆ ನನಗೇನೂ ತೊಂದರೆಯಿಲ್ಲ. ಸ್ಪರ್ಧೆ ಮಾಡಲಿ ಅಂತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಸವಾಲ್ ಹಾಕಿದ್ದಾರೆ. ಹುಬ್ಬಳ್ಳಿ ಧಾರವಾಡ ಕ್ಷೇತ್ರದಿಂದ ಜಗದೀಶ್ ಶೆಟ್ಟರ್ ಲೋಕಸಭೆ ಅಭ್ಯರ್ಥಿ ಆಗೋ ಇಚ್ಛೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಜೋಶಿ, ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷದ ನಾಯಕರು ಹೀಗಾಗಿ ಸಿಎಂ ಅವರು ಅವರ ಮನೆಗೆ ಹೋಗಿ ಭೇಟಿ ಕೊಟ್ಟಿದ್ದಾರೆ. ಶೆಟ್ಟರ್ ಅವರು ನನ್ನ ವಿರುದ್ಧ ಸ್ಪರ್ಧೆ ಮಾಡಲಿ. ಬಹಳ ಸಂತೋಷ. ಅವರ ಪಕ್ಷದ ಅಭ್ಯರ್ಥಿ ಯಾರು ಅಂತ ನಮ್ಮನ್ನ ಕೇಳೋದು ಬೇಡ ಎಂದರು. ನಾನು ಈಗ ಬಿಜೆಪಿಯ (BJP) ಹುಬ್ಬಳ್ಳಿ-ಧಾರವಾಡದಲ್ಲಿ ಎಂಪಿ ಆಗಿದ್ದೇನೆ ನಾನು ಹುಬ್ಬಳ್ಳಿಯಿಂದಲೇ ಮತ್ತೆ ಸ್ಪರ್ಧೆ ಮಾಡ್ತೀನಿ.ಶೆಟ್ಟರ್ ಬಂದರೆ ನನಗೇನೂ ಭಯ ಇಲ್ಲ. ಯಾರು ಬೇಕಾದ್ರು ಸ್ಪರ್ಧೆ ಮಾಡಬಹುದು ಎಂದು ಹೇಳಿದರು.