ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ, ರಾಶಿ ಹರಳು ಪರಿಣಿತರು. Mob.9353488403 ಸರ್ಕಾರಿ ಕೆಲಸ ಅವುಗಳಲ್ಲಿ ನೂರಾರು ಇಲಾಖೆಗಳಿವೆ. ತುಂಬಾ ಜನ ಪ್ರಯತ್ನ ಮಾಡುತ್ತಾರೆ ಆದರೆ ದುರ್ದೈವ ಯಶಸ್ವಿನಿ ದಾರಿ ದೊರೆಯುವುದಿಲ್ಲ.ಆದ್ದರಿಂದ ಅವನು ಜೀವನದಲ್ಲಿ ತುಂಬಾ ಹತಾಶನಾಗುತ್ತಾನೆ. ಅದಕ್ಕಾಗಿ ಜ್ಯೋತಿಷ್ಯಶಾಸ್ತ್ರ ಏನು ಹೇಳುತ್ತದೆ ಬನ್ನಿ ತಿಳಿಯೋಣ. ಜಾತಕದ ಕುಂಡಲಿಯಲ್ಲಿ ಲಗ್ನ ಹಾಗೂ ದಶಮ ಸ್ಥಾನದಲ್ಲಿ ಮಂಗಳ, ರಾಹು ಹಾಗೂ ಶನಿ ಗ್ರಹಗಳು ಇದ್ದರೆ ಸರಕಾರಿ ಕೆಲಸ ಸಿಗುತ್ತದೆ. ಮೇಷ ಲಗ್ನವಾಗಿ ದಶಮ ಸ್ಥಾನದಲ್ಲಿ ಶನಿ ಮಂಗಳ ಗ್ರಹ ಇದ್ದರೆ ಸರಕಾರಿ ಇಲಾಖೆಯಲ್ಲಿ ಮೇಲಾಧಿಕಾರಿ ಆಗುತ್ತಾನೆ. ಮೇಷ ಲಗ್ನದಲ್ಲಿ ಶುಕ್ರ ಯೋಗ ಇದ್ದರೆ ನೌಕರಿ ಸಿಗಲು ಅವಕಾಶ ತುಂಬಾ ಇದೆ. ದಶಮ ಸ್ಥಾನ ಚರರಾಶಿ ಆಗಿ ಅಂದರೆ ಮೇಷ, ಕರ್ಕ ತುಲಾ ಹಾಗೂ ಮಕರವಾದರೆ ಜಾತಕ ಹೊಂದಿದವರಿಗೆ ಸರ್ಕಾರಿ ಯಾವುದಾದರೂ ಇಲಾಖೆಯಲ್ಲಿ ಕೆಲಸ ದೊರೆಯುತ್ತದೆ. ಸೋಮಶೇಖರ್B.Sc ಜಾತಕ ಬರೆಯುವುದು, ಜಾತಕ ವಿಶ್ಲೇಷಣೆಗಾರರು,ರಾಶಿ ಹರಳು ತಿಳಿಸುವುದು. ವಂಶಪಾರಂಪರಿಕ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರಹಾಗೂ ಸಂಖ್ಯಾಶಾಸ್ತ್ರ ಪರಿಣಿತರು. Mob.9353488403
Author: AIN Author
ಮಂಡ್ಯ: ಫೇಸ್ ಬುಕ್ ನಲ್ಲಿ ಮಹಿಳೆಯರನ್ನು ಪರಿಚಯ ಮಾಡಿಕೊಂಡು ತನ್ನ ಸಮಸ್ಯೆಯ ಹೇಳಿ ಹಣ ದೋಚುತ್ತಿದ್ದ ಆಸಾಮಿಯನ್ನ ಮಂಡ್ಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ರಂಜನ್ ಗೌಡ ಬಂಧಿತ ಆರೋಪಿಯಾಗಿದ್ದು,. ನೋಡುವುದಕ್ಕೆ ಅಂದವಾಗಿ ಕಂಡರು ಇತ ಮಾಡುತ್ತಿದ್ದದ್ದು ಮಾತ್ರ ಖತರ್ನಾಕ್ ಕೆಲಸ. ಈತನ ಬಣ್ಣದ ಮಾತಿಗೆ ಅದೆಷ್ಟೋ ಮಹಿಳೆಯರು ಲಕ್ಷಾಂತರ ರೂಪಾಯಿಯನ್ನು ಕಳೆದುಕೊಂಡಿದ್ದಾರೆ. https://ainlivenews.com/aishwarya-rai-left-her-husbands-house-mother-in-law-rift-in-big-bs-house/ ಎಲ್ಲಿ ಗಂಡನಿಗೆ, ಕುಟುಂಬಸ್ಥರಿಗೆ ಗೊತ್ತಾಗಿ ಬಿಡುತ್ತೆ ಎಂದು ಎಷ್ಟೋ ಜನ ಮಹಿಳೆಯರು ದೂರು ಕೊಡಲು ಸಹಾ ಹಿಂದೇಟು ಹಾಕಿದ್ದಾರೆ. ಆದರೆ, ಇತ್ತೀಚೆಗೆ ಈತನಿಂದ ಮೋಸಹೋದ ಮಹಿಳೆಯೊಬ್ಬಳು, ಮಂಡ್ಯದ ಸೆಂಟ್ರಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಅದರಂತೆ ಪೊಲೀಸರು ಆರೋಪಿ ರಂಜನ್ನನ್ನು ಬಂಧಿಸಿ ವಿಚಾರಣೆ ಮಾಡಿದಾಗ, ಇದೇ ರೀತಿ ಹತ್ತಾರು ಮಹಿಳೆಯರಿಗೆ ಮೋಸ ಮಾಡಿರುವುದು ಕೂಡ ಗೊತ್ತಾಗಿದೆ. ಬಳಿಕ ಆರೋಪಿಯಿಂದ 182 ಗ್ರಾಂ ಚಿನ್ನಾಭರಣವನ್ನು ಕೂಡ ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು: ನಗರದ ಕೆಸಿ ಜನರಲ್ (KC General) ಅಸ್ಪತ್ರೆಯ ವೈದ್ಯರ ಎಡವಟ್ಟಿನಿಂದಾಗಿ ಜಗತ್ತಿಗೆ ಬರುವ ಮುಂಚೆಯೇ ಕಂದಮ್ಮ ಕಣ್ಣು ಮುಚ್ಚಿದ ಘಟನೆಯೊಂದು ನಡೆದಿದೆ. ಚೊಕ್ಕಸಂದ್ರದ ದೇವಿಕಾ ಎಂಬವರಿಗೆ 9 ತಿಂಗಳು ಭರ್ತಿಯಾಗಿ 12 ದಿನದ ಬಳಿಕ ಆಸ್ಪತ್ರೆ ವೈದ್ಯರು ಡೆಲಿವರಿಗೆ ಡೇಟ್ ಕೊಟ್ಟರು. ಆದರೆ ಡೇಟ್ ಮೀರಿದೆ ಸಿಜೇರಿಯನ್ ಮಾಡಿ ಅಂತಾ ಕುಟುಂಬಸ್ಥರು ಮನವಿ ಮಾಡಿದರೂ ವೈದ್ಯರು ಒಪ್ಪದೇ ನಾರ್ಮಲ್ ಗೆ ರೆಡಿ ಮಾಡಿದ್ದಾರೆ. ಬಳಿಕ ನಾರ್ಮಲ್ ಆಗಲ್ಲ ಸಿಜೇರಿಯನ್ ಮಾಡ್ತೀವಿ ಅಂತಾ ಹೇಳಿದ್ದಾರೆ. ಕೊನೆಗೆ ಮಗು ಗಲೀಜು ನೀರು ಕುಡಿದಾಗಿದ್ದು, ಮಗು ಸತ್ತು ಹೋಗಿದೆ ಎಂದು ತಿಳಿಸಿದ್ದಾರೆ. ಇದಾದ ಬಳಿಕ ಆಸ್ಪತ್ರೆಯಲ್ಲಿ ಕುಟುಂಬಸ್ಥರು ಗಲಾಟೆ ನಡೆಸಿದ್ದು, ಆಕ್ರೋಶ ಹೊರಹಾಕಿ ಕಣ್ಣೀರು ಹಾಕುತ್ತಿದ್ದಾರೆ. ಅಲ್ಲದೇ ಮಗು ಸತ್ತು ಹೋದ ಮೇಲೆಯೂ ದುಡ್ಡು ಕೊಡಿ ಎಂದು ಆಸ್ಪತ್ರೆಯವರು ಕೇಳಿದ್ದಾರೆ. ಭಾನುವಾರ 10 ಗಂಟೆಗೆ ಮಹಿಳೆ ಆಸ್ಪತ್ರೆಗೆ ಬಂದಿದ್ದಾರೆ. ಆದರೆ ಸಂಜೆ 7 ಗಂಟೆಯವರೆಗೆ ಆಸ್ಪತ್ರೆಯವರು ಕಾಯಿಸಿದ್ದಾರೆ. ಒಂದು ವಾರದ ಹಿಂದೆ ನಾರ್ಮಲ್ ಆಗಲ್ಲ, ಸಿಜೇರಿಯನ್…
ಖ್ಯಾತ ನಟ ಕಿಚ್ಚ ಸುದೀಪ್ ಅವರು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಭೇಟಿ ಮಾಡಿ, ಸಮಾಲೋಚನೆ ನಡೆಸಿದರು. ನಟ ವಿಷ್ಣುವರ್ಧನ್ ಅವರ ಪುಣ್ಯಭೂಮಿ ವಿಚಾರವಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆ ಕಿಚ್ಚ ಸುದೀಪ್ ಮಾತನಾಡಿದ್ದಾರೆ. ನಿನ್ನೆ ಡಿಕೆಶಿಯನ್ನು ಭೇಟಿ ಮಾಡಿದ್ದ ಸುದೀಪ್, ಅಭಿಮಾನ ಸ್ಟುಡಿಯೋದಲ್ಲಿರುವ ವಿಷ್ಣು ಪುಣ್ಯ ಭೂಮಿಯನ್ನು ಅಭಿಮಾನಿಗಳ ಕೋರಿಕೆಯ ಮೇರೆಗೆ ಹಾಗೆಯೇ ಉಳಿಸಿಕೊಳ್ಳಬೇಕು ಮತ್ತು ಹತ್ತು ಗುಂಟೆ ಜಮೀನನ್ನು ನೀಡಲು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ. ಕನ್ನಡ ಸಿನಿಮಾ ರಂಗದ ಮೇರುನಟ ಡಾ.ವಿಷ್ಣುವರ್ಧನ್ ಅವರ ಸಮಾಧಿ ನೆಲಸಮ ಆಗುತ್ತಾ? ಇಂತಹ ಆತಂಕದ ಮಾಹಿತಿಯನ್ನು ಡಾ.ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಹೊರಹಾಕಿದ್ದಾರೆ.
ಚಿಕ್ಕೋಡಿ: ಮಕ್ಕಳನ್ನು ಶಾಲೆಗೆ ಕರೆ ತರುವಾಗ ಖಾಸಗಿ ಶಾಲಾ ಬಸ್‌ವೊಂದು ಪಲ್ಟಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶೇಗುಣಸಿ ಗ್ರಾಮದಲ್ಲಿ ನಡೆದಿದೆ. ಓವರ್ ಟೆಕ್ ಮಾಡುವಾಗ ರಸ್ತೆ ಪಕ್ಕದ ತಗ್ಗಿಗೆ ಶಾಲಾ ಬಸ್ ವಾಲಿ ಪಲ್ಟಿಯಾಗಿದೆ. ಕೂಡಲೆ ಸ್ಥಳೀಯರು ಮಕ್ಕಳನ್ನು ಹಾಗೂ ಡ್ರೈವರ್‌ನನ್ನು ರಕ್ಷಣೆ ಮಾಡಿದ್ದಾರೆ. ಶಾಲಾ ಮಕ್ಕಳಿಗೆ ಸಣ್ಣ- ಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಥಣಿ ತಾಲೂಕಿನ ಹಲವು ಬಾರಿ ಬಸ್ ಬಿದ್ದಿರುವ ಘಟನೆ ನಡೆದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಕಿಡಿಕಾರಿದ್ದಾರೆ. ಮಕ್ಕಳ ಸುರಕ್ಷತೆ ಆದ್ಯತೆ ಮರೆತು ನಿಯಮ ಪಾಲಿಸದೆ ಬೇಕಾಬಿಟ್ಟಿ ವಾಹನ ಚಲಾಯಿಸುವ ಚಾಲಕರ ಕ್ರಮಕ್ಕೆ ಆಗ್ರಹಿಸಿದ್ದಾರೆ. ಕಳೆದ 5 ತಿಂಗಳಲ್ಲಿ ಮೂರನೇ ಪ್ರಕರಣ ಇದು ಎಂದು ಆಕ್ರೋಶ ಹೊರಹಾಕಿದ್ದಾರೆ.
ಚಿಕ್ಕಬಳ್ಳಾಪುರ: ಹೆಂಡತಿ ಸಮಾಧಿಗೆ ಪೂಜೆ ಮಾಡಿ ಹೆಂಡತಿ ಸಮಾಧಿ ಎದುರೇ ಗಂಡ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಹೊರವಲಯದ ತೀಮಾಕಲಪಲ್ಲಿ ಸ್ಮಶಾನದಲ್ಲಿ ನಡೆದಿದೆ. ಬಾಗೇಪಲ್ಲಿ ನಗರದ 16 ನೇ ವಾರ್ಡ್ ನಿವಾಸಿ ವೃತ್ತಿಯಲ್ಲಿ ಕಾರು ಚಾಲಕನಾಗಿದ್ದ ಗುರುಮೂರ್ತಿ ಅಲಿಯಾಸ್ ಲೆಗ್ ಆತ್ಮಹತ್ಯೆಗೆ ಶರಣಾಗಿರವ ವ್ಯಕ್ತಿ. ಅಂದಹಾಗೆ ಕಳೆದ ವರ್ಷ ಡಿಸೆಂಬರ್ 20 ರಂದು ಪತ್ನಿ ಮೌನಿಕಾ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಳು. ಇನ್ನೂ ಹೆಂಡತಿ ಸಾವಿನ ನೋವಲ್ಲೇ ಮಾನಸಿಕ ಕಿನ್ನತೆಯಿಂದ ಆತ್ಮಹತ್ಯೆಗೆ ಶರಣಾಗಿರುವ ಶಂಕೆ! ವ್ಯಕ್ತವಾಗಿದೆ. ಇಂದು ಬೆಳಿಗ್ಗೆ ವಾಕಿಂಗ್ ಹೋಗಿ ಬರೋದಾಗಿ ಹೇಳಿ ಹೋಗಿರೋ ಗುರುಮೂರ್ತಿ ಪತ್ನಿ ಸಮಾಧಿಗೆ ಪೂಜೆ ಸಲ್ಲಿಸಿ ತದನಂತರ ಅಲ್ಲೇ ಇದ್ದ ಮರಕ್ಕೆ ನೇಣಿಗೆ ಶರಣಾಗಿದ್ದಾನೆ. https://ainlivenews.com/aishwarya-rai-left-her-husbands-house-mother-in-law-rift-in-big-bs-house/ ಘಟನಾ ಸ್ಥಳಕ್ಕೆ ಬಾಗೇಪಲ್ಲಿ ಪೊಲೀಸರು ಭೇಟಿ ನೀಡಿ ಮೃತದೇಹವನ್ನು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪೊಲೀಸ್ ಠಾಣೆ…
ತಾಜ್ ಮಹಲ್ ಅರಮನೆಯು ಮುಂಬೈನಲ್ಲಿರುವ ವಾಸ್ತುಶಿಲ್ಪದ ಆಭರಣವಾಗಿದೆ. ತಾಜ್‌ನ ಅಡಿಪಾಯವನ್ನು 1898 ರಲ್ಲಿ ಹಾಕಲಾಯಿತು ಮತ್ತು ಗೇಟ್‌ವೇ ಆಫ್ ಇಂಡಿಯಾಕ್ಕೆ ಅಡಿಪಾಯ ಹಾಕುವ ಮೊದಲೇ (ಮಾರ್ಚ್ 31, 1911 ರಂದು) ಡಿಸೆಂಬರ್ 16, 1902 ರಂದು ಹೋಟೆಲ್ ತನ್ನ ಗೇಟ್‌ಗಳನ್ನು ಮೊದಲ ಬಾರಿಗೆ ಅತಿಥಿಗಳಿಗೆ ತೆರೆಯಿತು. ಇದು ಗೇಟ್‌ವೇ ಆಫ್ ಇಂಡಿಯಾದ ಪಕ್ಕದಲ್ಲಿ ಕೊಲಾಬಾದಲ್ಲಿದೆ ಮತ್ತು ಗೇಟ್‌ವೇ ನಿರ್ಮಾಣದ ಮೊದಲು ಬಾಂಬೆ ಬಂದರಿಗೆ ಕರೆ ಮಾಡುವ ಹಡಗುಗಳಿಗೆ ಇದು ಮೊದಲ ದೃಶ್ಯವಾಗಿತ್ತು. ತಾಜ್ ಮಹಲ್ ಅರಮನೆಯು ಬಾಂಬೆಯಲ್ಲಿ ವಿದ್ಯುಚ್ಛಕ್ತಿಯಿಂದ ಬೆಳಗಿದ ಮೊದಲ ಕಟ್ಟಡವಾಗಿದೆ. ಒಂದು ಕಾಲದಲ್ಲಿ, ‘ಬಿಳಿಯರಿಗೆ ಮಾತ್ರ’ ಸೀಮಿತವಾಗಿದ್ದ ವ್ಯಾಟ್ಸನ್ ಹೋಟೆಲ್‌ನಲ್ಲಿ ಪ್ರವೇಶವನ್ನು ನಿರಾಕರಿಸಿದ ನಂತರ ಜಮ್‌ಶೆಡ್‌ಜಿ ಟಾಟಾ ಅವರು ಈ ಹೋಟೆಲ್ ಅನ್ನು ನಿರ್ಮಿಸಲು ಪ್ರೇರೇಪಿಸಿದರು ಎಂದು ನಂಬಲಾಗಿದೆ. ಜನರಿಗೆ ‘ಬಾಂಬೆಗೆ ಯೋಗ್ಯವಾದ’ ರಾಜ ಅನುಭವವನ್ನು ಉಡುಗೊರೆಯಾಗಿ ನೀಡಲು ಈ ಭವ್ಯವಾದ ಹೋಟೆಲ್ ಅನ್ನು ನಿರ್ಮಿಸಲಾಗಿದೆ. ತಾಜ್ ಯೋಜನೆಯಲ್ಲಿ ಮೂಲತಃ ಭಾರತೀಯ ವಾಸ್ತುಶಿಲ್ಪಿಗಳು ಸೀತಾರಾಮ್ ಖಂಡೇರಾವ್ ವೈದ್ಯ ಮತ್ತು…
ರಾಯಚೂರು : ಹತ್ತಿ ಸಾಗಿಸುತ್ತಿದ್ದ ಟ್ರ್ಯಾಕ್ಟರ್ ನ ಹಗ್ಗ ಲಾರಿಗೆ ಸಿಕ್ಕು, ಟ್ರ್ಯಾಕ್ಟರ್ ರಸ್ತೆಯಲ್ಲಿ ಪಲ್ಟಿಯಾಗಿ, ಹತ್ತಿ ಚೆಲ್ಲಾಪಿಪ್ಪಿಯಾದ ಘಟನೆ ನಡೆದಿದೆ. ನಗರದ ಜೆಸ್ಕಾಂ ಕಚೇರಿ ಮುಂಭಾಗದಲ್ಲಿ ಘಟನೆ ನಡೆದಿದೆ, ಹತ್ತಿ ತುಂಬಿಕೊಂಡು, ಮಾರುಕಟ್ಟೆಗೆ ಹೋಗುತ್ತಿದ್ದ ಟ್ರಾಕ್ಟರ್‌ಗೆ ಎದುರಿಗೆ ಬಂದ ಲಾರಿ, ಸೈಡ್ ಹೋಗುತ್ತಿದ್ದಾಗ ಲಾರಿಯ ಕೊಂಡಿಗೆ ಟ್ರಾಕ್ಟರ್‌ಗೆ ಕಟ್ಟಿದ್ದ ಹಗ್ಗ ಸಿಲುಕಿದೆ. ಇದನ್ನು ಗಮನಿಸದೇ ಲಾರಿ ಮುಂದೆ ಚಲಿಸಿದೆ, ಇದರಿಂದಾಗಿ ಟ್ರ್ಯಾಕ್ಟರ್ ನಡು ರಸ್ತೆಯಲ್ಲಿ ಉರುಳಿ ಬಿದ್ದಿದ್ದು, ರಸ್ತೆಯಲ್ಲಿ ಹತ್ತಿ ಚೆಲ್ಲಾ ಪಿಲ್ಲಿಯಾಗಿ ಬಿದ್ದಿದೆ. ನಡು ರಸ್ತೆಯಲ್ಲಿ ಘಟನೆ ನಡೆದಿದ್ದರಿಂದ ಕೆಲಕಾಲ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಯಿತು. ಸಂಚಾರಿ ಪೋಲಿಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಘಟನೆಯು ಸಂಚಾರಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.
ಬೆಂಗಳೂರು: ಐಸಿಸ್ ಉಗ್ರರ ಜೊತೆಗಿನ ನಂಟು ಪ್ರಕರಣಕ್ಕೆ (ISIS Network Case) ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (NIA) ಕರ್ನಾಟಕದ ಬೆಂಗಳೂರು (Bengaluru) ಸೇರಿದಂತೆ 4 ರಾಜ್ಯಗಳಲ್ಲಿ 4 ರಾಜ್ಯಗಳಾದ್ಯಂತ ಸುಮಾರು 20 ಸ್ಥಳಗಳಲ್ಲಿ ದಾಳಿ ನಡೆಸಿದೆ. ಕರ್ನಾಟಕದ 11 ಸ್ಥಳಗಳು, ಜಾರ್ಖಂಡ್‌ನ 4, ಮಹಾರಾಷ್ಟ್ರದ 3 ಮತ್ತು ದೆಹಲಿಯ 1 ಸ್ಥಳಗಳಲ್ಲಿ ಅಧಿಕಾರಿಗಳ ತಂಡ ದಾಳಿ (NIA Raid) ನಡೆಸಿದೆ. ಕರ್ನಾಟಕದಲ್ಲಿ ಬೆಂಗಳೂರಿನ ಆರ್.ಸಿ ನಗರ, ಹೆಬ್ಬಾಳ, ಪುಲಿಕೇಶಿ ನಗರ, ಶಿವಾಜಿ ನಗರ, ಜೆ.ಸಿ. ನಗರದ ಚಿನ್ನಪ್ಪ ಗಾರ್ಡನ್ ಸೇರಿದಂತೆ ಹಲವು ಕಡೆ ದಾಳಿ ನಡೆಸಿ ತಪಾಸಣೆ ನಡೆಸುತ್ತಿದ್ದಾರೆ. ಬಳ್ಳಾರಿಯಲ್ಲಿಯೂ ಒಟ್ಟು 9 ತಂಡಗಳು ಕಾರ್ಯಾಚರಣೆ ನಡೆಸಿವೆ. ಸೋಮವಾರ (ಇಂದು) ಮುಂಜಾನೆಯಿಂದಲೇ ಬಳ್ಳಾರಿಯಲ್ಲಿ ಎನ್‌ಐಎ ಕಾರ್ಯಾಚರಣೆ ಭರ್ಜರಿಯಾಗಿ ಸಾಗಿದೆ. ನಿಷೇಧಿತ ಪಿಎಫ್‌ಐನ 7 ಮಂದಿಯ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಬಳ್ಳಾರಿಯ ಶಮೀವುಲ್ಲಾ, ಅಜಾಜ್ ಅಹಮದ್, ಸುಲೇಮಾನ್, ತಬ್ರೇಜ್, ನಿಖಿಲ್ ಅಲಿಯಾಸ್ ಸೂಫಿಯಾನ್, ಮುಜಾಮಿಲ್ ಎಂಬವರನ್ನ ಬಂಧಿಸಲಾಗಿದೆ ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ…
ಬೆಂಗಳೂರು: ನಗರದ ಏರ್ಪೋರ್ಟ್ ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ಸರಣಿ ಅಪಘಾತವಾಗಿದ್ದು 8ಕ್ಕೂ ಹೆಚ್ಚು ವಾಹನ ಒಂದಕ್ಕೊಂಡು ಡಿಕ್ಕಿ ಹೊಡೆದು ಜಖಂಗೊಂಡಿವೆ. ಬೆಂಗಳೂರು-ದೇವನಹಳ್ಳಿ ಏರ್ಪೋರ್ಟ್ ರಸ್ತೆ ಸಾದಹಳ್ಳಿ ಗೇಟ್ ಬಳಿ ಇಂದು ಅಪಘಾತವಾಗಿದ್ದು ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಸಾದಹಳ್ಳಿ ಗೇಟ್ ಬಳಿ ಸರಣಿ ಅಪಘಾತವಾಗಿದೆ. 8ಕ್ಕು ಹೆಚ್ಚು ವಾಹನ ಒಂದಕ್ಕೊಂಡು ಡಿಕ್ಕಿ ಹೊಡೆದು ಜಖಂ ಆಗಿದ್ದು ಸರಣಿ ಅಪಘಾತದಿಂದ ಏರ್ಪೋರ್ಟ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದೆ. ಟ್ರಾಫಿಕ್ ಜಾಮ್ ನಿಂದ ಏರ್ಪೋರ್ಟ್ ರಸ್ತೆಯಲ್ಲಿ ಅರ್ಧಗಂಟೆ ಪರದಾಡಿದ ವಾಹನ ಸವಾರರು ಸ್ಥಳಕ್ಕಾಗಮಿಸಿದ ಚಿಕ್ಕಜಾಲ ಸಂಚಾರಿ ಪೊಲೀಸರಿಂದ ಸುಗಮ ಸಂಚಾರ ವ್ಯವಸ್ಥೆ ಮಾಡಿಕೊಡಲಾಯಿತು.!