ಬೆಂಗಳೂರು:- ಆಶ್ರಯ ಯೋಜನೆ ಜಾರಿ ಮಾಡುವುದಕ್ಕೆ ಅವಕಾಶವಿಲ್ಲ ಎಂದು ಹೈಕೋರ್ಟ್ ಹೇಳಿದೆ. ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಈ ಸಂಬಂಧ ಡಾ.ಬಿ.ಆರ್.ಅಂಬೇಡ್ಕರ್ ದಲಿತ ಮತ್ತು ಹಿಂದುಳಿದ ಅಲ್ಪ ಸಂಖ್ಯಾತರ ಗ್ರಾಮಾಭಿವೃದ್ಧಿ ಸಂಘ ಮತ್ತು ಕರ್ನಾಟಕ ಸರ್ಕಾರ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿರುವ ಹೈಕೋರ್ಟ್, ಸಂವಿಧಾನದ 162ನೇ ವಿಧಿಯ ಅಡಿ ಲಭ್ಯವಾದ ಕಾರ್ಯಕಾರಿ ಅಧಿಕಾರ ಬಳಕೆ ಮಾಡಿ ರಾಜ್ಯ ಸರ್ಕಾರವು ಆಶ್ರಯ ಯೋಜನೆ ರೂಪಿಸಿದೆ. ಸರ್ಕಾರವು ತನ್ನ ಅಧಿಕಾರ ವ್ಯಾಪ್ತಿ ಮೀರಿ ಆಶ್ರಯ ಯೋಜನೆ ರೂಪಿಸಿದೆ. ಇದರಿಂದ ಯೋಜನೆಯನ್ನು ಜಾರಿ ಮಾಡಲಾಗದು ಮತ್ತು ಯೋಜನೆಯನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದೆ. ಅಲ್ಲದೇ, ಈ ಕಾನೂನಿನ ಘೋಷಣೆಯು ಗಂಗಾಜಲದಂತೆ ಸ್ಪಷ್ಟವಾಗಿರುವ ಕಾರಣ, ಆಶ್ರಯ ಯೋಜನೆಯಡಿ ಮೇಲ್ಮನವಿದಾರರಿಗೆ ಯಾವುದೇ ಪರಿಹಾರ ಕಲ್ಪಿಸಲಾಗುವುದಿಲ್ಲ ಎಂದು ವಿಭಾಗೀಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
Author: AIN Author
ಇಸ್ಲಾಮಾಬಾದ್: ಗಂಭೀರ ಆರೋಗ್ಯ ಸಮಸ್ಯೆಗಳಿಂದಾಗಿ ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು (Dawood Ibrahim) ಪಾಕಿಸ್ತಾನದ ಕರಾಚಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ವರದಿಗಳ ನಡುವೆ, ಆತನ ಕುಟುಂಬದ ಸದಸ್ಯರು ವಿಷಪ್ರಾಶನ ವಿಚಾರವನ್ನು ಅಲ್ಲಗೆಳೆದಿದ್ದಾರೆ. ದಾವೂದ್ ಆರೋಗ್ಯದ ಕುರಿತ ವಿಚಾರ ಹೊರಬೀಳುತ್ತಿದ್ದಂತೆಯೇ ಮುಂಬೈ ಪೊಲೀಸರು ನಗರದಲ್ಲಿರುವ ಅವರ ಕುಟುಂಬ ಸದಸ್ಯರಿಂದ ಮಾಹಿತಿಯನ್ನು ಖಚಿತಪಡಿಸಿಕೊಳ್ಳಲು ತಂಡವನ್ನು ಕಳುಹಿಸಿದ್ದಾರೆ. ಆಗ ದಾವೂದ್ ಸೋದರಳಿಯ, ಆರೋಗ್ಯ ಸಮಸ್ಯೆಗಳಿಂದ ಚೆನ್ನಾಗಿಲ್ಲ ಎಂದು ಖಚಿತಪಡಿಸಿದ್ದಾರೆ. ಆದರೆ ವಿಷಪ್ರಾಶನವಾಗಿಲ್ಲ (Poisoning) ಎಂದು ಅವರು ತಿಳಿಸಿದ್ದಾರೆ. https://ainlivenews.com/aishwarya-rai-left-her-husbands-house-mother-in-law-rift-in-big-bs-house/ ಭಾನುವಾರ ರಾತ್ರಿಯಿಂದ ದಾವೂದ್ ಆರೋಗ್ಯದ ಬಗ್ಗೆ ವರದಿಗಳು ಹೊರಬಿದ್ದಿವೆ. ಆದರೆ ಭಾರತೀಯ ಅಧಿಕಾರಿಗಳಿಂದ ಯಾವುದೇ ದೃಢೀಕರಣವಿಲ್ಲ. ಈ ಸಂಬಂಧ ಪಾಕಿಸ್ತಾನ ಸರ್ಕಾರದಿಂದಲೂ ಅಧಿಕೃತ ಮಾಹಿತಿ ಇಲ್ಲ. ವಿಷಪ್ರಾಶನದಿಂದಾಗಿ ದಾವೂದ್ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ಹೇಳಲಾಗಿದೆ. ಸದ್ಯ ದಾವೂದ್ ಪಾಕಿಸ್ತಾನದ ಕರಾಚಿ ಆಸ್ಪತ್ರೆಯಲ್ಲಿ (Karachi Hospital) ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಯ ಸುತ್ತಮುತ್ತ ಪಾಕ್ ಸೇನೆಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ದಾವೂದ್ ಆಸ್ಪತ್ರೆಗೆ ದಾಖಲಾಗಿರುವುದು ಸುದ್ದಿಯಾಗುತ್ತಿದ್ದಂತೆಯೇ ಕರಾಚಿ, ರಾವಲ್ಪಿಂಡಿ,…
ಬಿಗ್ ಬಾಸ್ (Bigg Boss) ಕಂಟೆಸ್ಟೆಂಟ್ ಅಭಿಮಾನಿಗಳು ಕಿತ್ತಾಡಿಕೊಂಡ ಪ್ರಕರಣ ಹೈದರಾಬಾದ್ ನಲ್ಲಿ ನಡೆದಿದೆ. ಫಿನಾಲೆ ವೇಳೆ ಸ್ಟುಡಿಯೋದಲ್ಲಿ ಗಲಾಟೆ ನಡೆದಿದ್ದು, ಕಾರು ಮತ್ತು ಬಸ್ ಗಳು ಜಖಂ ಆಗಿವೆ. ಹೈದರಾಬಾದ್ ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಬಿಗ್ ಬಾಸ್ ತೆಲುಗು ಸೀಸನ್ 7ರ ಗ್ರ್ಯಾಂಡ್ ಫಿನಾಲೆ ನಡೆಯುತ್ತಿತ್ತು. ಈ ವೇಳೆ ಕಂಟೆಸ್ಟೆಂಟ್ ಆಗಿದ್ದ ಅಮರ್ ದೀಪ್ (Amar Deep) ಮತ್ತು ಪಲ್ಲವಿ ಪ್ರಶಾಂತ್ (Pallavi Prashant) ಅವರ ಅಭಿಮಾನಿಗಳು ಆಗಮಿಸಿದ್ದರು. ಗ್ರ್ಯಾಂಡ್ ಫಿನಾಲೆಯಲ್ಲಿ ತಮ್ಮ ನೆಚ್ಚಿನ ಕಂಟೆಸ್ಟೆಂಟ್ ವಿನ್ನರ್ ಆಗುತ್ತಾರೆ ಎನ್ನುವುದು ಅವರವರ ಅಭಿಮಾನಿಗಳ ನಿರೀಕ್ಷೆ ಆಗಿತ್ತು. ಆದರೆ, ಆಗಿದ್ದು ಉಲ್ಟಾ ಎನ್ನುವ ಕಾರಣಕ್ಕಾಗಿ ಗಲಾಟೆ ಶುರುವಾಗಿದೆ. ಪಲ್ಲವಿ ಪ್ರಶಾಂತ್ ವಿನ್ ಆಗಿ, ಅಮರ್ ದೀಪ್ ರನ್ನರ್ ಅಪ್ ಆಗಿ ಘೋಷಣೆ ಆಗುತ್ತಿದ್ದಂತೆಯೇ ಗಲಾಟೆ ಶುರುವಾಗಿದೆ. ಇಬ್ಬರ ಫ್ಯಾನ್ಸ್ ಮಾತು ವಿಕೋಪಕ್ಕೆ ಹೋದ ಕಾರಣದಿಂದಾಗಿ ಆರ್.ಟಿ.ಸಿ ಬಸ್ ಮತ್ತು ಕಾರಿನ ಗಾಜು ಪುಡಿ ಪುಡಿ ಆಗಿದೆ. ಪಲ್ಲವಿ ಪ್ರಶಾಂತ್ ಅಭಿಮಾನಿಗಳು ರನ್ನರ್…
ಬೆಂಗಳೂರು:- ರಾಜ್ಯ ಸರ್ಕಾರವು ಪಾಲಿಕೆ ಅಕ್ರಮಗಳ ತನಿಖೆಗೆ ರಚಿಸಲಾಗಿದ್ದ ತನಿಖಾ ಸಮಿತಿ ರದ್ದುಗೊಳಿಸಿದೆ. 2019-20ರಿಂದ 2022-23ರವರೆಗೆ ಪ್ರಮುಖ ಕಾಮಗಾರಿಗಳಲ್ಲಿ ನಡೆದಿರುವ ಅಕ್ರಮಗಳ ಕುರಿತು ತನಿಖೆಯನ್ನು ನಡೆಸಲು ನಾಲ್ಕು ಪರಿಣಿತರ ತನಿಖಾ ಸಮಿತಿಗಳನ್ನು ರಚಿಸಿ ಆದೇಶಿಸಲಾಗಿತ್ತು. ಆದರೆ ಇದೀಗ ಕರ್ನಾಟಕ ಸರ್ಕಾರ ರದ್ದು ಮಾಡಿದೆ.. ಘನತ್ಯಾಜ್ಯ ನಿರ್ವಹಣೆ ಕಾಮಗಾರಿ, ರಸ್ತೆ ಅಭಿವೃದ್ಧಿ, ಓಎಫ್‌ಸಿ ಕೇಬಲ್ ಅಳವಡಿಕೆ, ಬೃಹತ್ ನೀರುಗಾಲುವೆ ಕಾಮಗಾರಿ, ಕೇಂದ್ರ/ವಲಯ ನಗರ ಯೋಜನೆ ವಿಭಾಗಗಳಲ್ಲಿ ನಕ್ಷೆ ಮಂಜೂರಾತಿ/ ಸ್ವಾಧೀನಾನುಭವ ಪತ್ರ ನೀಡುವಿಕೆ, ಕೆರೆಗಳ ಅಭಿವೃದ್ಧಿ ಕಾಮಗಾರಿ, ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿನ ಕಾಮಗಾರಿ, ವಾರ್ಡ್ ಮಟ್ಟದ ಕಾಮಗಾರಿಗಳಲ್ಲಿ ನಡೆದಿರುವ ಅಕ್ರಮಗಳ ಕುರಿತು ತನಿಖೆ ನಡೆಸಿ, 30 ದಿನಗಳಲ್ಲಿ ವರದಿ ಒಪ್ಪಿಸುವಂತೆ ಆದೇಶಿಸಲಾಗಿತ್ತು. ಕಾಮಗಾರಿಗಳಲ್ಲಿ ನಡೆದಿರುವ ಅಕ್ರಮಗಳನ್ನು ತನಿಖೆ ನಡೆಸಲು ಈಗಾಗಲೇ ನಿವೃತ್ತ ನ್ಯಾಯಮೂರ್ತಿ ಎಚ್. ಎನ್ ನಾಗಮೋಹಾನ್ ದಾಸ್ ನೇತೃತ್ವದಲ್ಲಿ ಆಯೋಗ ರಚಿಸಿ, ಸರ್ಕಾರ ಆದೇಶಿಸಿತ್ತು. ಬಿಬಿಎಂಪಿ ಕಾಮಗಾರಿಗಳು ಇದರ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ನಾಲ್ಕು ಸಮಿತಿಗಳನ್ನು ರದ್ದುಪಡಿಸುವಂತೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು.…
ಬೆಂಗಳೂರು: ಕೋವಿಡ್ ಹಿನ್ನೆಲೆ ಸ್ಥಗಿತಗೊಂಡಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಖಾಲಿ ಇರುವ ತಾಂತ್ರಿಕ ಸಹಾಯಕ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಗೆ ಮರುಚಾಲನೆ ನೀಡಲಾಗಿದೆ. 2020ರ ಫೆಬ್ರವರಿ 2ರಂದು ನಡೆದ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯಲ್ಲಿ ಕನಿಷ್ಠ 30 ಹಾಗೂ ಅದಕ್ಕಿಂತ ಹೆಚ್ಚು ಅಂಕ ಗಳಿಸಿದ ಅಭ್ಯರ್ಥಿಗಳಿಗೆ ದೇಹದಾರ್ಢ್ಯ ಪರಿಶೀಲನೆ ನಡೆಯಲಿದೆ. ಇದೇ ಡಿಸೆಂಬರ್ 26ರಿಂದ 28ರವರೆಗೆ ಶಾಂತಿನಗರದಲ್ಲಿರುವ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿ ಆವರಣದಲ್ಲಿ ದಾಖಲಾತಿ/ದೇಹದಾರ್ಢ್ಯ ಪರಿಶೀಲನೆ ನಡೆಯಲಿದೆ.
ಬೆಳಗಾವಿ :-ಜಿಲ್ಲೆಯ ರಾಯಬಾಗ ಸರ್ಕಾರಿ ಆಸ್ಪತ್ರೆಯು ಕತ್ತಲೆಯಲ್ಲಿ ಎರಡು ದಿನಗಳಿಂದ ಸರ್ಕಾರಿ ಆಸ್ಪತ್ರೆಯು ಕತ್ತಲೆಯಲ್ಲಿ ಇದೆ ಬೆಳಕಿನ ವ್ಯವಸ್ಥೆಗೆ ಜನರೇಟರ್ ಇದ್ದರೂ ಸ್ಟಾರ್ಟ್ ಮಾಡಿಲ್ಲ. ರೋಗಿಗಳು ಬಾಣಂತಿಯರು ಅಷ್ಟೇ ಅಲ್ಲ ಹುಟ್ಟಿದ ಮಗು ಕೂಡಾ ಎಲ್ಲಿದೆ ಅನ್ನೋದು ಕತ್ತಲೆಯಲ್ಲಿ ಹುಡುಕಬೇಕಾಗಿದೆ. ಸಂಜೆ ಆದರೆ ಸಾಕು ಯಾವ ಸಿಬ್ಬಂದಿಗಳು ಇರೋದಿಲ್ಲ. ಸರ್ಕಾರ ಜನರೇಟರ್ ವ್ಯವಸ್ಥೆಗೆ ಹಣ ಕೊಟ್ಟರು ಸ್ಟಾರ್ಟ್ ಮಾಡದೆ ಕತ್ತಲೆಯಲ್ಲಿ ಮುಖ್ಯಾಧಿಕಾರಿ R ರಂಗಣ್ಣವರ್ ತಳ್ಳಿದ್ದಾರೆ. ಸರ್ಕಾರಿ ಆಸ್ಪತ್ರೆಗೆ ಬರುವ ಅನುದಾನ ಏನಾಗುತ್ತಿದೆ ಜನರೇಟರ್ ಸ್ಟಾರ್ಟ್ ಗೆ ಹಣ ಇಲ್ವಾ…ಅಥವಾ ಕತ್ತಲೆಯಲ್ಲಿ ಇರಬೇಕಾ ರೋಗಿಗಳು ಬಾಣಂತಿಯರು..ಇದನೆಲ್ಲ ಕೇಳೋಕೆ ಅಲ್ಲಿ ಯಾವ ಸಿಬ್ಬಂದಿಗಳು ಇಲ್ಲ ರಾಯಬಾಗ ಸರ್ಕಾರಿ ಆಸ್ಪತ್ರೆಯು ಸಂಜೆ ಆದರೆ ಸಾಕು ಭೂತದ ಮನೆ ಮಾರ್ಪಟ್ಟಿದ್ದಾರೆ ಅಧಿಕಾರಿಗಳು.
ಸೂರ್ಯೋದಯ: 06.36 AM, ಸೂರ್ಯಾಸ್ತ : 05.58 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ದಕ್ಷಿಣಾಯಣ, ಶರತ್ ಋತು, ತಿಥಿ: ಇವತ್ತು ಸಪ್ತಮಿ 01:06 PM ತನಕ ನಂತರ ಅಷ್ಟಮಿ ನಕ್ಷತ್ರ: ಇವತ್ತು ಶತಭಿಷ 01:22 AM ತನಕ ನಂತರ ಪೂರ್ವಾ ಭಾದ್ರ ಯೋಗ: ಇವತ್ತು ಸಿದ್ಧಿ 06:38 PM ತನಕ ನಂತರ ವ್ಯತೀಪಾತ ಕರಣ: ಇವತ್ತು ಗರಜ 02:08 AM ತನಕ ನಂತರ ವಣಿಜ 01:06 PM ತನಕ ನಂತರ ವಿಷ್ಟಿ ರಾಹು ಕಾಲ: 03:00 ನಿಂದ 04:30 ವರೆಗೂ ಯಮಗಂಡ: 09:00 ನಿಂದ 10:30 ವರೆಗೂ ಗುಳಿಕ ಕಾಲ: 12:00 ನಿಂದ 01:30 ವರೆಗೂ ಅಮೃತಕಾಲ: 04.29 PM to 05.59 PM ಅಭಿಜಿತ್ ಮುಹುರ್ತ: ಬೆಳಗ್ಗೆ.11:51 ನಿಂದ ಮ.12:34 ವರೆಗೂ ಮೇಷ ರಾಶಿ: ನಿಮ್ಮ ಸಂಗಾತಿಯ ಒಳ ಮನಸ್ಸು ಮತ್ತು ಹೊರ ಮನಸ್ಸು ಸಾಕಷ್ಟು ವ್ಯತ್ಯಾಸ ಗಮನಿಸುವಿರಿ, ಬಂಧುಗಳನ್ನು…
ಬೆಂಗಳೂರು:- ಪ್ರಧಾನಿ ಭೇಟಿಗೆ ಸಮಯ ಕೇಳಿದ್ದೇನೆ, ಇನ್ನೂ ನಿಗದಿ ಆಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಭದ್ರಾ ಮೇಲ್ದಂಡೆ ಯೋಜನೆ ಅನುದಾನ ಸೇರಿದಂತೆ ನೀರಾವರಿ ಇಲಾಖೆ ಹಾಗೂ ಬೆಂಗಳೂರು ಅಭಿವೃದ್ಧಿ ವಿಚಾರವಾಗಿ ಚರ್ಚೆ ಮಾಡಲು ಪ್ರಧಾನಿ ಮೋದಿ ಭೇಟಿಗೆ ಸಮಯ ಕೇಳಿದ್ದೇನೆ, ಇನ್ನೂ ನಿಗದಿಯಾಗಿಲ್ಲ’ ಎಂದರು. ಪ್ರಧಾನಿ ಭೇಟಿಗೆ ಸಿಎಂ ಸಮಯ ಕೇಳಿದ್ದು, ಬರ ಪರಿಹಾರ, ನರೇಗಾ ಯೋಜನೆಯಲ್ಲಿ ಮಾನವ ದಿನಗಳ ಹೆಚ್ಚಳ ಸೇರಿದಂತೆ ಇತರೆ ಪ್ರಮುಖ ವಿಚಾರವಾಗಿ ಚರ್ಚೆ ಮಾಡಲಿದ್ದಾರೆ. ಪ್ರಧಾನಿ ಭೇಟಿಗೆ ನನಗೆ ಇನ್ನು ಸಮಯ ನಿಗದಿಯಾಗಿಲ್ಲ. ಹೀಗಾಗಿ ಕೆಲವು ಕೇಂದ್ರ ಸಚಿವರ ಭೇಟಿಗೆ ಸಮಯ ಕೇಳಿದ್ದೇನೆ’ ಎಂದು ತಿಳಿಸಿದರು. ‘ಇಂದು ಪಕ್ಷದ ನಾಯಕರ ಜತೆ ಸಭೆ ನಡೆಯಲಿದೆ. ಯಾವೆಲ್ಲಾ ವಿಷಯ ಚರ್ಚೆ ಮಾಡುತ್ತೇವೆ ಎಂಬುದನ್ನು ನಾನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ನಿಗಮ, ಮಂಡಳಿಗಳಿಗೆ ಮೊದಲು ಶಾಸಕರ ನೇಮಕ ಆಗಲಿದೆ. ಸಾಧ್ಯವಾದರೆ ಕೆಲವು ಕಾರ್ಯಕರ್ತರ ನೇಮಕವನ್ನೂ ಮಾಡುತ್ತೇವೆ. ಒಟ್ಟು ಮೂರು ಹಂತಗಳಲ್ಲಿ ನಿಗಮ…
ಚಹಾದಲ್ಲಿ ಕೆಫೇನ್ ಅಂಶ ಹೆಚ್ಚಾಗಿರುವ ಕಾರಣ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ನೀವು ಬೆಳಿಗ್ಗೆ ಕುಡಿಯುವಾಗ ಈ ತಪ್ಪನ್ನು ಮಾಡಬೇಡಿ. ಚಹಾವನ್ನು ಹೆಚ್ಚಿನ ಜನರು ಕಾಲಿ ಹೊಟ್ಟೆಯಲ್ಲಿ ಕುಡಿಯುತ್ತಾರೆ. ಇದರಿಂದ ಹೊಟ್ಟೆಯ ಸಮಸ್ಯೆ ಕಾಡುತ್ತದೆಯಂತೆ. ಹೊಟ್ಟೆಯಲ್ಲಿ ಉರಿ, ಆಯಸಿಡಿಟಿಯಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಯಾವುದೇ ಆಹಾರ ಅಥವಾ ಪಾನೀಯದೊಂದಿಗೆ ಚಹಾವನ್ನು ಕುಡಿಯಬೇಡಿ. ಇದು ತಲೆನೋವಿನ ಸಮಸ್ಯೆಗೆ ಕಾರಣವಾಗಬಹುದು. ಹಾಗೇ ಚಹಾದೊಂದಿಗೆ ನಿಂಬೆ ರಸವನ್ನು ಬೆರೆಸಿ ಕುಡಿಯಬೇಡಿ. ಇದು ಆಯಸಿಡಿಟಿ ಮತ್ತು ಅತಿಸಾರದಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆಯಂತೆ. ಅಲ್ಲದೇ ತಣ್ಣನೆಯ ವಸ್ತು ಅಥವಾ ನೀರನ್ನು ಚಹಾದೊಂದಿಗೆ ಸೇವಿಸಬೇಡಿ. ಇದು ಜೀರ್ಣಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆಯಂತೆ.
ಬೆಂಗಳೂರು:- ಪ್ರಧಾನಿ ಮೋದಿ ಅವರು ವಿರೋಧ ಪಕ್ಷಗಳ ಮುಖ್ಯಮಂತ್ರಿಗಳನ್ನು ಕಡೆಗಣಿಸುತ್ತಾರೆ ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ. ಸಿಎಂ ಭೇಟಿಗೆ ಪ್ರಧಾನಿ ಕಾಲಾವಕಾಶ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ವರ್ಷಾನುಗಟ್ಟಲೆ ಅವಕಾಶ ಕೊಟ್ಟಿರಲಿಲ್ಲ. ರಾಜ್ಯದ ಸಮಸ್ಯೆಗಳು, ಅನುದಾನದ ಬಗ್ಗೆ ಚರ್ಚೆ ಮಾಡುವುದಕ್ಕೆ ಹೋದಾಗ ಅವಕಾಶ ಕೊಟ್ಟಿರಲಿಲ್ಲ. ಈಗ ಕೊನೆ ಗಳಿಗೆಯಲ್ಲಿ ಅವಕಾಶ ಕೊಟ್ಟಿದ್ದಾರೆ. ಇನ್ನೂ ಸ್ವಲ್ಪ ದಿನ ಬಿಟ್ಟು ಅವಕಾಶ ಕೊಟ್ಟಿದ್ದರೆ ಚುನಾವಣಾ ನೀತಿ ಸಂಹಿತೆ ಬರುತ್ತಿತ್ತು. ವಿರೋಧ ಪಕ್ಷದ ಮುಖ್ಯಮಂತ್ರಿಗಳಿರಬಹುದು, ಸ್ವಪಕ್ಷದ ಮುಖ್ಯಮಂತ್ರಿಗಳಿರಬಹುದು. ಈ ರೀತಿ ಕಡೆಗಣಿಸಿರುವ ಇತಿಹಾಸವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಟೀಕಿಸಿದರು. ಈ ಹಿಂದೆ ವಾಜಪೇಯಿ, ಮನಮೋಹನ್ ಸಿಂಗ್, ರಾಜೀವ್ ಗಾಂಧಿ ಯಾರೂ ಈ ರೀತಿ ನಡೆಸಿಕೊಂಡಿರಲಿಲ್ಲ. ಈ ರೀತಿಯಾಗಿ ಮುಖ್ಯಮಂತ್ರಿಗಳನ್ನು ನಡೆಸಿಕೊಂಡಿಲ್ಲ. ಪ್ರಧಾನಿ ವಿರೋಧ ಪಕ್ಷಗಳ ಮುಖ್ಯಮಂತ್ರಿಗಳನ್ನು ಕಡೆಗಣಿಸುತ್ತಾರೆ. ಆ ರಾಜ್ಯಗಳು ಅಭಿವೃದ್ಧಿ ಹೊಂದಬಾರದು, ಅನುದಾನ ಸಿಗಬಾರದು ಅಂತ ಅವರ ಮನಸ್ಥಿತಿ ಇದ್ದಂತೆ ಕಾಣುತ್ತಿದೆ ಎಂದು ಹೇಳಿದರು.