Author: AIN Author

ಕಬ್ಬು ಬೆಳೆಯುವ ಎಲ್ಲ ಜಿಲ್ಲೆಗಳ ಸರಾಸರಿ ಆಧಾರದಲ್ಲಿ ನೋಡಿದಾಗ ಒಂದು ಎಕರೆಗೆ 28ರಿಂದ 30 ಟನ್ ಇಳುವರಿ ತೆಗೆಯಲಾಗುತ್ತಿದೆ. ಬೆಳಗಾವಿ ಜಿಲ್ಲೆಯ ರೈತರು ಒಂದು ಎಕರೆಗೆ ಸರಾಸರಿ 75 ಟನ್ವರೆಗೆ ಕಬ್ಬು ಬೆಳೆದರೆ, ಮಂಡ್ಯ ಜಿಲ್ಲೆಯ ರೈತರು ಎಕರೆಗೆ ಸರಾಸರಿ 40 ಟನ್ ಇಳುವರಿ ತೆಗೆಯುತ್ತಾರೆ. ಆದರೆ ಬೆಳಗಾವಿ ಜಿಲ್ಲೆಯ ರೈತರೊಬ್ಬರು ವಾರ್ಷಿಕ ಸರಾಸರಿ 90 ಟನ್ ಕಬ್ಬು ಬೆಳೆಯುವ ಮುಲಕ ಗಮನಸೆಳೆಯುತ್ತಿದ್ದಾರೆ. ಬೆಳಗಾವಿ ಜಿಲ್ಲೆ, ಅಥಣಿ ತಾಲೂಕಿನ ಶೇಡಬಾಳ ಗ್ರಾಮದ ಕಬ್ಬು ಬೆಳೆಗಾರ ಸುರಗೌಡ ರಾಯಗೌಡ ಪಾಟೀಲ ಅವರು 2019ರಲ್ಲಿ ಒಂದು ಎಕರೆಗೆ ಬರೋಬ್ಬರಿ 148 ಟನ್ ಕಬ್ಬು ಬೆಳೆದು ದಾಖಲೆ ನಿರ್ಮಿಸಿದ್ದರು. ರಾಜ್ಯ ಒಂದೇ ಆದರೂ ಕಬ್ಬು ಇಳುವರಿಯಲ್ಲಿ ಇಷ್ಟೊಂದು ವ್ಯತ್ಯಾಸ ಏಕೆ. ವ್ಯತ್ಯಾಸವಾದರೂ 10-20 ಟನ್ ಆಗಬಹುದು. ಆದರೆ 70-100 ಟನ್ ವರೆಗೆ ವ್ಯತ್ಯಾಸವಾಗಲು ಕಾರಣವೇನು ಎಂಬುದು ಹಲವು ರೈತರ ಪ್ರಶ್ನೆ. ಇದಕ್ಕೆ ಉತ್ತರ. ಆಯಾ ಪ್ರದೇಶದ ಮಣ್ಣಿನ ಗುಣ, ವಾತಾವರಣ ಹಾಗೂ ಎಲ್ಲಕ್ಕಿಂತಲೂ ಮುಖ್ಯವಾಗಿ ಕಬ್ಬು…

Read More

ಬೆಂಗಳೂರು:- ಬಟ್ಟೆ ಅಂಗಡಿಯಲ್ಲಿ ತಡರಾತ್ರಿ ಬೆಂಕಿ ಹೊತ್ತಿಕೊಂಡು ಅಂಗಡಿಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬಟ್ಟೆಗಳು ಸುಟ್ಟು ಕರಕಲಾದ ಘಟನೆ ಮಲ್ಲೇಶ್ವರಂನ ಸಂಪಿಗೆ ರಸ್ತೆ ಸಿಗ್ನಲ್‌ ಬಳಿಯಲ್ಲಿ ಜರುಗಿದೆ. ಎಲೆಕ್ಟ್ರಿಕ್‌ ಪರಿಕರಗಳಿಂದ ಬೆಂಕಿ ಹೊತ್ತಿಕೊಂಡು ಬಟ್ಟೆ ಅಂಗಡಿ ಉರಿದಿದೆ. ಕೂಡಲೇ ಅಗ್ನಿಶಾಮಕ‌ ಸಿಬ್ಬಂದಿ ಬೆಂಕಿ ಸಂಪೂರ್ಣ ನಂದಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಾಲೀಕರು ನಿನ್ನೆ ರಾತ್ರಿ ವ್ಯಾಪಾರ ಮುಗಿಸಿ ಅಂಗಡಿ ಕ್ಲೋಸ್ ಮಾಡಿಕೊಂಡು ಮನೆಗೆ ತೆರಳಿದ್ದರು. ಅಂಗಡಿ ಕ್ಲೋಸ್ ಮಾಡುವಾಗ ಕಂಪ್ಯೂಟರ್ ಆನ್‌ ಮಾಡಿ ಹಾಗೆ ಹೋಗಿದ್ದರು. ಮೊದಲಿಗೆ ಕಂಪ್ಯೂಟರ್‌ನಲ್ಲಿ ಕಾಣಿಸಿಕೊಂಡಿದೆ. ಕಂಪ್ಯೂಟರ್‌ನಲ್ಲಿ ಕಾಣಿಸಿಕೊಂಡ ಬೆಂಕಿ ಸಮೀಪದ ಬಟ್ಟೆಗೆ ತಗುಲಿ ಇಡೀ ಬಟ್ಟೆ ಅಂಗಡಿಯಲ್ಲಿದ್ದ ಎಲ್ಲ ಬಟ್ಟೆಗೆ ಬೆಂಕಿ ಹೊತ್ತಿಕಕೊಂಡು ಉರಿದಿದೆ. ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಮಲ್ಲೇಶ್ವರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Read More

ಬೆಂಗಳೂರು: ಟೀಮ್ ಇಂಡಿಯಾದ ಯುವ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್‌ ಇಶಾನ್‌ ಕಿಶನ್‌, ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ 2 ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯಿಂದ ಹೊರಗುಳಿಯುವ ನಿರ್ಧಾರ ಮಾಡಿದ್ದಾರೆ. ಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ ಟೂರ್ನಿಯ ಮೂರನೇ ಆವೃತ್ತಿಯ ಭಾಗವಾಗಿ ನಡೆಯಲಿರುವ ಟೆಸ್ಟ್‌ ಸರಣಿಯ ಮೊದಲ ಪಂದ್ಯ ಡಿಸೆಂಬರ್‌ 26ರಂದು ಶುರುವಾಗಲಿದೆ. ಇಶಾನ್‌ ಕಿಶನ್ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಕ್ರಿಕೆಟ್‌ ಸರಣಿಯಿಂದ ಹೊರಗುಳಿಯಲು ಮನವಿ ಮಾಡಿದ್ದಾರೆ. ವೈಯಕ್ತಿಕ ಕಾರಣ ನೀಡಿ ಅವರು ಈ ಸರಣಿಯಿಂದ ಹೊರಗುಳಿಯುವ ನಿರ್ಧಾರ ಮಾಡಿದ್ದಾರೆ. ಹೀಗಾಗಿ ಅವರನ್ನು ಸರಣಿಯಿಂದ ಹೊರಗಿಡಲಾಗಿದೆ,” ಎಂದು ಬಿಸಿಸಿಐ ಹೇಳಿಕೆ ನೀಡಿದೆ. ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟಿ20-ಐ ಸರಣಿಯಲ್ಲಿ ಇಶಾನ್‌ ಕಿಶನ್‌ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಆಡುವ 11ರ ಬಳಗದಲ್ಲಿ ಅವರಿಗೆ ಅವಕಾಶ ಸಿಗಲಿಲ್ಲ. ಸರಣಿಯ ಎರಡು ಪಂದ್ಯಗಳಲ್ಲಿ ಇಶಾನ್ ಕಿಶನ್‌ ಬದಲು ಜಿತೇಶ್‌ ಶರ್ಮಾ ಅವರನ್ನು ಆಡಿಸಲಾಗಿತ್ತು. ಸರಣಿಯ ಮೊದಲ ಪಂದ್ಯ ಮಳೆ ಕಾರಣ ರದ್ದಾಗಿತ್ತು.…

Read More

ಬೆಂಗಳೂರು:- ಆಸ್ತಿ ತೆರಿಗೆ ಪಾವತಿ ಮಾಡದ 836 ವಾಣಿಜ್ಯ ಕಟ್ಟಡಗಳಿಗೆ ಬಿಬಿಎಂಪಿ ಬೀಗ ಜಡಿದೆ. ಪಶ್ಚಿಮ ವಲಯದಲ್ಲಿ ಅತಿ ಹೆಚ್ಚು ವಾಣಿಜ್ಯ ಮಳಿಗೆಗಳಿಗೆ ಬೀಗ ಹಾಕಿದ್ದು, ಪೂರ್ವ ವಲಯದಲ್ಲಿ ಅತಿ ಕಡಿಮೆ ಸಂಖ್ಯೆ ಇದೆ. ವಾಣಿಜ್ಯ ಕಟ್ಟಡಗಳು ಹೆಚ್ಚಿನ ಆಸ್ತಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದ್ದು, ಡಿಮ್ಯಾಂಡ್‌ ನೋಟಿಸ್‌ ನೀಡಿದ 30 ದಿನಗಳ ನಂತರವೂ ಪಾವತಿಸದಿರುವುದರಿಂದ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆಸ್ತಿ ಸಂಗ್ರಹದಲ್ಲಿ ಶೇ 10ರಷ್ಟು ಹೆಚ್ಚಳವಾಗಿದ್ದು, ನ.1ರಿಂದ 1.74 ಲಕ್ಷ ಆಸ್ತಿಗಳ ತೆರಿಗೆಯನ್ನು ಪುನರ್‌ವಿಮರ್ಶಿಸಲಾಗಿದೆ. ಈ ಪುನರ್‌ವಿಮರ್ಶೆಯಿಂದಲೇ ಸುಮಾರು ₹400 ಕೋಟಿ ಹೆಚ್ಚು ಆಸ್ತಿ ತೆರಿಗೆ ಸಂಗ್ರಹಿಸುವ ನಿರೀಕ್ಷೆ ಹೊಂದಲಾಗಿದೆ. ಆಸ್ತಿ ವಿಸ್ತೀರ್ಣದ ತಪ್ಪು ಮಾಹಿತಿ, ವಲಯ ಬದಲು ಇತ್ಯಾದಿ ಲೋಪವಿರುವ ಆಸ್ತಿಗಳಿಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡಲಾಗಿದೆ. ನ.1ರಿಂದ 12 ಸಾವಿರ ಆಸ್ತಿಗಳಿಗೆ ನೋಟಿಸ್‌ ನೀಡಿ, 23 ಸಾವಿರಕ್ಕೂ ಹೆಚ್ಚಿನ ಆಸ್ತಿಗಳಿಗೆ ಡಿಮ್ಯಾಂಡ್‌ ನೋಟಿಸ್‌ ಜಾರಿ ಮಾಡಲಾಗಿದೆ. 233 ‘ಎ’ ಖಾತಾ ಹಾಗೂ 483 ‘ಬಿ’ ಖಾತಾ…

Read More

ಕರ್ನಾಟಕ ಚಲನಚಿತ್ರ ಕಲಾವಿದರ ಸಂಘವು ಹಿರಿಯ ನಟಿ ಲೀಲಾವತಿ (Leelavati) ಅವರ ನೆನಪಿನಲ್ಲಿ ಕಾರ್ಯಕ್ರಮ ನಡೆಸಲು ನಿರ್ಧಾರ ಮಾಡಲಾಗಿದೆ ಎಂದಿದ್ದಾರೆ ಹಿರಿಯ ನಟ, ಕಲಾವಿದರ ಸಂಘದ ಕಾರ್ಯದರ್ಶಿ  ಸುಂದರ್ ರಾಜ್. ಲೀಲಾವತಿ ಅವರ 11ನೇ ದಿನದ ಕಾರ್ಯಕ್ಕೆ ಆಗಮಿಸಿದ ಸುಂದರ್ ರಾಜ್ (Sundar Raj),  ‘ಹಿರಿಯ ನಟಿ ಲೀಲಾವತಿ ನೆನಪು ಅಮರವಾಗಿಸಲು ಕಲಾವಿದರ ಸಂಘ ಕಾರ್ಯಕ್ರಮ ಮಾಡಲು ನಿರ್ಧಾರ ಮಾಡಿದ್ದು, ಕಲ್ಲರಳಿ ಹೂವಾಗಿ ಅನ್ನೊ ಶೀರ್ಷಿಕೆಯಡಿ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು. ಲೀಲಾವತಿ ಅವರು ಇಂತಹ ಕಲ್ಲು ಬಂಡೆಗಳ ಜಾಗದಲ್ಲೂ ಬರೀ ತೋಟ ಮಾತ್ರ ಮಾಡಿದ್ದಲ್ಲ, ಇದೇ ಜಾಗದಲ್ಲಿ ಬಂದು ಮನೆ ಕಟ್ಟಿದ್ದಾರೆ. ಅಷ್ಟೇ ಅಲ್ಲದೆ ಪ್ರತಿಯೊಬ್ಬರನ್ನೂ ಈ ಜಾಗಕ್ಕೆ ಕರ್ಕೊಂಡು ಬಂದು ತೋರಿಸಿದ್ದಾರೆ. ಹೀಗಾಗಿ ಅವರ ನೆನಪನ್ನು ಅಮರವಾಗಿಸಲು ಪ್ಲಾನ್ ಮಾಡ್ತಿದೇವೆ’ ಎಂದಿದ್ದಾರೆ. ಲೀಲಾವತಿ ಅವರ 11ನೇ ದಿನದ ಸ್ಮರಣೆ ಕಾರ್ಯ  ಅವರ ಮನೆಯಲ್ಲಿ ನಡೆಯುತ್ತಿದೆ. ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ತೋಟದ ಮನೆಯಲ್ಲಿ ಮಗ ವಿನೋದ್ ರಾಜ್ ಮತ್ತು ಕುಟುಂಬ…

Read More

ವಾಷಿಂಗ್ಟನ್‌: ಕ್ರೀಡಾ ಅಭ್ಯಾಸದಲ್ಲಿ ತೊಡಗಿದ್ದ ವಿದ್ಯಾರ್ಥಿಯೊಂದಿಗೆ ಶಿಕ್ಷಕಿಯೊಬ್ಬಳು (US Teacher) ಲೈಂಗಿಕ ಕ್ರಿಯೆ ನಡೆಸುತ್ತಿದ್ದ ವೇಳೆ ವಿದ್ಯಾರ್ಥಿಯ ತಾಯಿ ರೆಡ್‌ಹ್ಯಾಂಡಾಗಿ ಹಿಡಿದು ಶಿಕ್ಷಿಯನ್ನ ಪೊಲೀಸರಿಗೆ (US Police) ಒಪ್ಪಿಸಿರುವ ಘಟನೆ ಅಮೆರಿಕದ ಕೌಂಟಿಯಲ್ಲಿ ನಡೆದಿದೆ. 2008ರಲ್ಲಿ ಪರಿಚಯಿಸಲಾದ ಲೈಫ್‌360 ಅಪ್ಲಿಕೇಷನ್‌ (Life360 Tracking App) ಬಳಿಸಿ ಅಮೆರಿಕದ ಮಹಿಳೆಯೊಬ್ಬರು ತನ್ನ ಮಗ ಶಿಕ್ಷಕಿಯೊಂದಿಗೆ ಅನೈಕ ಸಂಬಂಧ ಇಟ್ಟುಕೊಂಡಿರುವುದನ್ನ ಪತ್ತಹೆಚ್ಚಿದ್ದಾರೆ.  2008ರಲ್ಲಿ ಪರಿಚಯಿಸಲಾದ ಈ ಆ್ಯಪ್‌ ಫ್ಯಾಮಿಲಿ ಸೋಶಿಯಲ್‌ ನೆಟ್‌ವರ್ಕಿಂಗ್‌ ಅಪ್ಲಿಕೇಶನ್‌ ಆಗಿದ್ದು. ಮತ್ತೊಬ್ಬ ವ್ಯಕ್ತಿಯ ಇರುವಿಕೆಯನ್ನು ಗುರುತಿಸುತ್ತದೆ. ಜೊತೆಗೆ ವ್ಯಕ್ತಿ ಎಲ್ಲಿದ್ದಾರೆ? ಯಾರ ಜೊತೆ ಇದ್ದಾರೆ ಎಂಬುದನ್ನ ತಿಳಿಯುವುದಕ್ಕೂ ಅನುವು ಮಾಡಿಕೊಡುತ್ತದೆ. ಈ ಅಪ್ಲಿಕೇಶನ್‌ ಸಹಾಯದಿಂದಲೇ ತನ್ನ ಮಗನೊಟ್ಟಿಗೆ ಲೈಂಗಿಕ ಸಂಪರ್ಕ ಹೊಂದಿದ್ದ ಶಿಕ್ಷಕಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. https://ainlivenews.com/aishwarya-rai-left-her-husbands-house-mother-in-law-rift-in-big-bs-house/ 18 ವರ್ಷದ ವಿದ್ಯಾರ್ಥಿ ಸೌತ್ ಮೆಕ್ಲೆನ್‌ಬರ್ಗ್ ಹೈಸ್ಕೂಲ್‌ನ 26 ವರ್ಷದ ಶಿಕ್ಷಕಿ ಗೇಬ್ರಿಯೆಲಾ ಕಾರ್ಟಯಾಳ ಜೊತೆ ಲೈಂಗಿಕ ಸಂಪರ್ಕ ಹೊಂದಿದ್ದನು. ರಗ್ಬಿ ಕ್ರೀಡಾಭ್ಯಾಸ ನಡೆಸುತ್ತಿದ್ದ ವಿದ್ಯಾರ್ಥಿ ಪ್ರತಿದಿನವೂ ತಡವಾಗಿ ಬರುತ್ತಿದ್ದನು. ಇದರಿಂದ…

Read More

ಐಪಿಎಲ್ 17ನೇ ಆವೃತ್ತಿಗೆ ಪೂರ್ವಭಾವಿಯಾಗಿ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ಇಂದು ದುಬೈನಲ್ಲಿ ನಡೆಯಲಿದೆ. ಏಕದಿನ ವಿಶ್ವಕಪ್ ವಿಜೇತ ಆಸೀಸ ತಂಡದ ತಾರೆಯರಾದ ಟ್ರಾವಿಸ್ ಹೆಡ್, ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್ ಹಾಗೂ ಬೆಂಗಳೂರು ಮೂಲದ ನ್ಯೂಜಿಲೆಂಡ್‌ನ ರಚಿನ್ ರವೀಂದ್ರ , ದಕ್ಷಿಣ ಆಫ್ರಿಕಾ ವೇಗಿ ಗೆರಾಲ್ಡ್ ಕೋಟ್‌ಜೀ ದೊಡ್ಡ ಮೊತ್ತಕ್ಕೆ ಮಾರಾಟವಾಗುವ ನಿರೀಕ್ಷೆ ಇದೆ. ಭಾರತೀಯರಲ್ಲಿ ಕನ್ನಡಿಗ ಮನೀಷ್ ಪಾಂಡೆ, ಆರ್‌ಸಿಬಿ ಮಾಜಿ ಆಟಗಾರ ಹರ್ಷಲ್ ಪಟೇಲ್, ಶಾರ್ದೂಲ್ ಠಾಕೂರ್ ಹಾಗೂ ಶಾರುಖ್ ಖಾನ್‌ಗೆ ಉತ್ತಮ ಉತ್ತಮ ಬೇಡಿಕೆ ಪಡೆಯುವ ನಿರೀಕ್ಷೆ ಇದೆ. ದೇಶಿಯ ಆಟಗಾರರ ಪೈಕಿ ವಿಜಯ್ ಹಜಾರೆ ಟ್ರೋಫಿಯಲ್ಲಿ ವೇಗದ ಶತಕ ಸಿಡಿಸಿದ ಉರ್ವಿಲ್ ಪಟೇಲ್, ವೇಗಿ ಸಿದ್ದಾರ್ಥ್ ಕೌಲ್, ಕಾರ್ತಿಕ್ ತ್ಯಾಗಿ ಸಹ ಉತ್ತಮ ಮೊತ್ತ ಪಡೆಯುವ ನಿರೀಕ್ಷೆ ಇದೆ. ಕರ್ನಾಟಕದ ಒಟ್ಟು 14 ಆಟಗಾರರು ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ. 214 ಭಾರತೀಯರು,119 ವಿದೇಶೀಯರ ಸಹಿತ ಒಟ್ಟು 333 ಆಟಗಾರರು ಹರಾಜು ಕಣದಲ್ಲಿದ್ದಾರೆ. ಇದರಲ್ಲಿ 30…

Read More

ಮಾಜಿ ಬಿಗ್ ಬಾಸ್ ತಾರೆ ಉರ್ಫಿ ಜಾವೇದ್ (Urfi Javed) ತಮ್ಮ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇನ್ಸ್ಟಾದಲ್ಲಿ ಹಂಚಿಕೊಂಡ ಫೋಟೋದಲ್ಲಿ ಅವರ ಮೈ ತುಂಬಾ ಮುತ್ತಿನ ಗುರುತುಗಳಿವೆ.  ಆ ತುಟಿಗಳ ಮಾರ್ಕ್ ಅನ್ನು ಕೊಟ್ಟಿದ್ದು ತಮ್ಮ ಫ್ರೆಂಡ್ಸ್ ಎಂದು ಹೇಳಿಕೊಂಡಿದ್ದಾರೆ ಉರ್ಫಿ. ಜೊತೆಗೆ ಫ್ರೆಂಡ್ಸ್ ಮೈ ತುಂಬಾ ಕಿಸ್ (Kiss) ಕೊಡುತ್ತಿರುವ ವಿಡಿಯೋವನ್ನೂ ಅವರು ಶೇರ್ ಮಾಡಿದ್ದು, ಸಾಕಷ್ಟು ಕಾಮೆಂಟ್ಸ್ ಹರಿದು ಬಂದಿವೆ. ಭಿನ್ನ ಭಿನ್ನ ಕಾಸ್ಟ್ಯೂಮ್ ಧರಿಸಿ ಕ್ಯಾಮೆರಾ ಮುಂದೆ ಬರುವುದು ಅವರಿಗೆ ಚಾಲಿ ಆಗಿದೆ. ಅವರ ವಿಚಿತ್ರ ಉಡುಗೆಯೇ ಅನೇಕ ಬಾರಿ ಟ್ರೋಲ್‌ಗರ ಬಾಯಿಗೆ ಆಹಾರವಾಗಿದ್ದು ಇದೆ. ಈ ಹಿಂದೆ ಬಾಳೆಹಣ್ಣಿನ ಸಿಪ್ಪೆಯಲ್ಲಿ ಉರ್ಫಿ ಮೈ ಮುಚ್ಚಿಕೊಂಡಿದ್ದರು. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಬಟ್ಟೆ ವಿಚಾರದಲ್ಲಿ ಸದಾ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಉರ್ಫಿ, ಇದೀಗ ಬಾಳೆ ಹಣ್ಣಿನ ಸಿಪ್ಪೆಯಿಂದ ಮೈ ಮುಚ್ಚಿಕೊಂಡು ಕ್ಯಾಮೆರಾಗೆ ಪೋಸ್ ನೀಡಿದ್ದರು. ಬಾಳೆಹಣ್ಣು ತಿನ್ನುತ್ತ ಫೋಟೋಶೂಟ್ ಮಾಡಿಸಿದ್ದರು. ಉರ್ಫಿ ಅವತಾರ ನೋಡಿ…

Read More

ಬೆಂಗಳೂರು:- ರಾಜ್ಯದಲ್ಲಿ ಸೋಂಕು ಹರಡದಂತೆ ತಡೆಯಲು ಆರೋಗ್ಯ ಇಲಾಖೆ ಸಜ್ಜಾಗುತ್ತಿದೆ. ಈ ನಿಟ್ಟಿನಲ್ಲಿ ಇಂದು ಕೋವಿಡ್ ಮಾರ್ಗಸೂಚಿ ಹೊರಬೀಳುವ ಸಾಧ್ಯತೆ ಇದೆ. ಕ್ರಿಸ್ ಮಸ್ ಹಬ್ಬ ಹಾಗೂ ಹೊಸ ವರ್ಷ ಸಮೀಪಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಒಂದು ವಾರಗಳ ಪ್ರಕರಣಗಳನ್ನು ಆಧರಿಸಿ ಹಬ್ಬ ಹಾಗೂ ವರ್ಷಾಚರಣೆಗೆ ಪ್ರತ್ಯೇಕ ಮಾರ್ಗಸೂಚಿ ಹೊರಬೀಳಲಿದೆ. ಭಾರತದಲ್ಲಿ ಕರೊನಾ ವೈರಸ್ ಪ್ರಕರಣ ಮತ್ತೆ ಹೆಚ್ಚಾಗತೊಡಗಿದ್ದು, ಭಾನುವಾರ 335 ಹೊಸ ಪ್ರಕರಣಗಳು ಪತ್ತೆಯಾಗಿದೆ. ಸೋಂಕಿಗೆ ಕೇರಳದಲ್ಲಿ ನಾಲ್ವರು, ಉತ್ತರಪ್ರದೇಶದಲ್ಲಿ ಒಬ್ಬರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,701ಕ್ಕೆ ಏರಿಕೆ ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕೇರಳದಲ್ಲಿ ಪ್ರಸ್ತುತ 1,324 ಕೋವಿಡ್-19 ಸಕ್ರಿಯ ಪ್ರಕರಣಗಳಿವೆ ಎಂಬುದು ಕಳವಳಕಾರಿ ವಿಷಯವಾಗಿದೆ. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಕಳೆದೊಂದು ವಾರದಲ್ಲಿ 81 ಸೋಂಕು ಪ್ರಕರಣಗಳು ದೃಢಪಟ್ಟಿವೆ. ಡಿ.12 ರಿಂದ 18ವರೆಗೆ ಕೋವಿಡ್ ಸೋಂಕು ಲಕ್ಷಣ ಹೊಂದಿರುವ 2,619 ಶಂಕಿತರ ಸ್ವಾಯಬ್ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ…

Read More

ಬದನೆಕಾಯಿಗಳಲ್ಲಿ ಹಲವಾರು ರೀತಿಯ ಬಣ್ಣಗಳು ಮತ್ತು ಗಾತ್ರಗಳು ಇರುವುದನ್ನು ನಾವು ನೀವು ಗಮನಿಸಿರುತ್ತೇವೆ. ಬಿಳಿ ಬದನೆಕಾಯಿ, ಕೆಂಪು ಬದನೆಕಾಯಿ, ನೇರಳೆ ಬದನೆಕಾಯಿ, ಹಸಿರು ಬದನೆಕಾಯಿ ಮತ್ತು ಕಪ್ಪು ಬದನೆಕಾಯಿಗಳು ಗಾತ್ರದಲ್ಲೂ ತಮ್ಮದೇ ಆದ ಗುಣಲಕ್ಷಣಗಳನ್ನು ಹೊಂದಿರುತ್ತವೆ. ನೋಡಲು ಹೆಚ್ಚಾಗಿ ಮೊಟ್ಟೆಯಾಕಾರದಲ್ಲಿ ಕಂಡು ಬರುವ ಕಾರಣದಿಂದ ಬದನೆಕಾಯಿ ಗಿಡಗಳನ್ನು ಎಗ್ ಪ್ಲಾಂಟ್ ಎಂದು ಸಹ ಕರೆಯುತ್ತಾರೆ. ನಮ್ಮ ಆರೋಗ್ಯ ದೃಷ್ಟಿಯಿಂದ ನೋಡುವುದಾದರೆ ಬದನೆಕಾಯಿಗಳಲ್ಲಿ ಬಾಯಿ ಮೇಲೆ ಬೆರಳಿಡುವಂತಹ ಅಚ್ಚರಿ ವಿಚಾರಗಳು ಕಂಡುಬರುತ್ತವೆ. ಆದ್ರೆ ಈ ಆರೋಗ್ಯ ಸಮಸ್ಯೆ ಇರುವವರು ಬದನೆ ತಿನ್ನುವುದನ್ನು ತಪ್ಪಿಸಬೇಕು. ಮೂತ್ರಕೋಶದ ಕಲ್ಲಿನ ಅಪಾಯ  ಕಿಡ್ನಿ ಸ್ಟೋನ್ ಇರುವವರು ಅಂದರೆ ಮೂತ್ರಕೋಶದ ಕಲ್ಲಿನ ಬದನೆ ತಿನ್ನಬಾರದು. ಬದನೆ ಬೀಜಗಳು ಹೆಚ್ಚುವರಿ ಕಲ್ಲುಗಳನ್ನು ಉತ್ಪತ್ತಿ ಮಾಡುವ ಕೆಲಸ ಮಾಡುತ್ತವೆ. ಇದು ಮೂತ್ರಪಿಂಡಕ್ಕೆ ಹಾನಿಯನ್ನುಂಟುಮಾಡುತ್ತದೆ. ಮೂಳೆಗಳಿಗೆ ಒಳ್ಳೆಯದಲ್ಲ  ಆಕ್ಸಲೇಟ್ ಅಂಶ ಬದನೆಕಾಯಿಯಲ್ಲಿ ಕಂಡುಬರುತ್ತದೆ. ಈ ಕಾರಣದಿಂದಾಗಿ, ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯು ಕಡಿಮೆಯಾಗುತ್ತದೆ. ಮೂಳೆ ಆರೋಗ್ಯಕ್ಕೆ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಮೂಳೆಗಳು ದುರ್ಬಲವಾಗಿರುವವರು ಬದನೆ ತಿನ್ನುವುದನ್ನು…

Read More