ಅಭಿವೃದ್ಧಿ ಹೊಂದುತ್ತಿರುವ ಕಾರ್ಮಿಕ ಶಕ್ತಿ, ಕ್ಷಿಪ್ರ ನಗರೀಕರಣ, ಸ್ಮಾರ್ಟ್‌ಫೋನ್‌ಗಳ ಬಳಕೆ ಹಾಗೂ ಸುಧಾರಿತ ತಂತ್ರಜ್ಞಾನಗಳ ಸೌಕರ್ಯಗಳೊಂದಿಗೆ ನಮ್ಮ ದೇಶ ಕೂಡಾ ಸ್ವಯಂ ಉದ್ಯೋಗದತ್ತ ದಾಪುಗಾಲಿಡುತ್ತಿದೆ. ಭಾರತೀಯ ಗಿಗ್ ವರ್ಕ್‌ಫೋರ್ಸ್ 2029-30ರ ವೇಳೆಗೆ 23.5 ಮಿಲಿಯನ್ ಕಾರ್ಮಿಕರಿಗೆ ವಿಸ್ತರಿಸುವ ನಿರೀಕ್ಷೆಯಿದ್ದು, ಇದು ಪ್ರಸ್ತುತ ಇರುವ 7.7 ಮಿಲಿಯನ್‌ನಿಂದ ಸುಮಾರು 200% ರಷ್ಟು ಜಿಗಿತವಾಗಿದೆ. ಗಿಗ್ ಆರ್ಥಿಕತೆ ಹಾಗೂ ಚಂಚಲವಾದ ಮಾರುಕಟ್ಟೆಯ ಮೂಲಕ ಹೇಗೆ ಸಾಗುವುದು ಎಂಬುದರ ಕುರಿತು ಹೆಚ್ಚು ಅಧ್ಯಯನ ಮಾಡುವ ಮೊದಲು, ಗಿಗ್ ಆರ್ಥಿಕತೆ ಎಂದರೇನು ತಿಳಿಯೋಣ! ಗಿಗ್ ಆರ್ಥಿಕತೆಯು ಮುಕ್ತ ಮಾರುಕಟ್ಟೆ ವ್ಯವಸ್ಥೆಯನ್ನು ಪ್ರತಿನಿಧಿಸುತ್ತದೆ. ಇಲ್ಲಿ ತಾತ್ಕಾಲಿಕ ಉದ್ಯೋಗ ನಿರ್ವಹಣೆಯನ್ನು ಒಡಂಬಡಿಕೆಗಳ ಮೇಲೆ ಮಾಡಲಾಗುತ್ತದೆ. ಸಂಕ್ಷಿಪ್ತ ಒಪ್ಪಂದದ ಜವಾಬ್ದಾರಿಯನ್ನು ಹೊಂದಿರುವ ಹಾಗೂ ಕಂಪನಿಯ ವೇತನದಾರರಲ್ಲದ ಸ್ವತಂತ್ರ ಕೆಲಸಗಾರರನ್ನು ಉದ್ಯಮಗಳು ತೊಡಗಿಸಿಕೊಳ್ಳುತ್ತವೆ. ಫ್ರೀಲ್ಯಾನ್ಸರ್‌ಗಳು, ಸ್ವತಂತ್ರ ಗುತ್ತಿಗೆದಾರರು, ಪ್ರಾಜೆಕ್ಟ್ ಆಧಾರಿತ ಕೆಲಸಗಾರರು, ತಾತ್ಕಾಲಿಕ ನೇಮಕ ಮತ್ತು ಅರೆಕಾಲಿಕ ಕೆಲಸಗಾರರು ಗಿಗ್ ಆರ್ಥಿಕತೆಯ ಒಂದು ಭಾಗವಾಗಿರುತ್ತಾರೆ. ಈ ಉದ್ಯಮಕ್ಕೆ ಕಾಲಿಡುವ ಮೊದಲು, ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ…
Author: AIN Author
ಷೇರು ಮಾರುಕಟ್ಟೆ ಸೂಚ್ಯಂಕಗಳು ಸೋಮವಾರ ಮತ್ತೆ ಭಾರೀ ಏರಿಕೆ ಕಂಡಿದ್ದು, ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿವೆ. ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 969.55 ಅಂಕ ಅಥವಾ ಶೇ. 1.37ರಷ್ಟು ಏರಿಕೆ ಕಂಡು 71,483.75 ಅಂಕ ತಲುಪಿದೆ. ನಿನ್ನೆ ಕೂಡ ಸೆನ್ಸೆಕ್ಸ್ 929.60 ಅಂಕ ಗಳಿಕೆ ಕಂಡಿತ್ತು. ಇದರಿಂದ ಕೇವಲ 2 ದಿನದಲ್ಲಿ ಷೇರು ಹೂಡಿಕೆದಾರರ ಆಸ್ತಿ ಸುಮಾರು 7 ಲಕ್ಷ ಕೋಟಿ ರೂ.ಗಳಷ್ಟು ಹೆಚ್ಚಾಗಿದೆ. 30 ಷೇರುಗಳ ಸೆನ್ಸೆಕ್ಸ್ ಗುಚ್ಛದಲ್ಲಿ 27 ಷೇರುಗಳು ಏರಿಕೆ ಕಂಡಿದ್ದರೆ, 3 ಷೇರುಗಳು ಇಳಿಕೆ ಕಂಡಿವೆ. ಸೋಮವಾರದ ವಹಿವಾಟಿನಲ್ಲಿ ಐಟಿ ಮತ್ತು ರಿಯಾಲ್ಟಿ ಷೇರುಗಳಲ್ಲಿ ಹೆಚ್ಚಿನ ಏರಿಕೆ ದಾಖಲಿಸಿವೆ. ಈ ವರ್ಷದ ಆರಂಭದಲ್ಲಿ ಅಂದರೆ ಜನವರಿ 2 ರಂದು (ಜನವರಿ 1 ರಂದು ಮಾರುಕಟ್ಟೆ ಮುಚ್ಚಿತ್ತು) ಸೆನ್ಸೆಕ್ಸ್ 61,167 ಮಟ್ಟದಲ್ಲಿತ್ತು. ಈಗ ಡಿಸೆಂಬರ್ 15 ರಂದು 71,483 ಅಂಕಳನ್ನು ತಲುಪಿದೆ. ಅಂದರೆ, ಈ ವರ್ಷ ಇದುವರೆಗೆ ಶೇ. 15ಕ್ಕಿಂತ ಹೆಚ್ಚು ಏರಿಕೆ ಕಂಡಿದೆ. ಈ ಏರಿಕೆಯು ಭವಿಷ್ಯದಲ್ಲಿಯೂ…
ಖ್ಯಾತ ನಟ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ (Shruti Haasan)ತಮ್ಮ ವೈಯಕ್ತಿಕ ಜೀವನದ ಬಗ್ಗೆ ಆಗಾಗ್ಗೆ ಮಾತಾಡ್ತಾ ಇರುತ್ತಾರೆ. ಬಾಯ್ ಫ್ರೆಂಡ್, ಡಿಪ್ರೆಷನ್ ಹೀಗೆ ಅನೇಕ ವಿಚಾರಗಳನ್ನು ಈವರೆಗೂ ಮಾತನಾಡಿದ್ದಾರೆ. ಈ ಬಾರಿ ಕುಡಿತ (Alcohol) ಮತ್ತು ಡ್ರಗ್ಸ್ (Drugs) ಬಗ್ಗೆ ಮಾತನಾಡಿದ್ದಾರೆ. ತಾನು ಕುಡಿತದ ಚಟಕ್ಕೆ ದಾಸಳಾಗಿದ್ದೆ ಎನ್ನುವುದನ್ನು ಹೇಳಿಕೊಂಡಿದ್ದಾರೆ. ನಾನು ಸಾಕಷ್ಟು ಕುಡಿತಿದ್ದೆ. ಫ್ರೆಂಡ್ಸ್ ಸಿಕ್ಕಾಗೆಲ್ಲ ಕುಡಿತಿದ್ದೆ. ಕುಡಿತದ ಚಟ ನನ್ನನ್ನು ಆಳುತ್ತಿದೆ ಅಂತ ಅನಿಸಿತು. ಕುಡಿತದ ಬಗ್ಗೆ ಬೇಸರವಾಯಿತು. ಆಗ ಬಿಟ್ಟು ಬಿಟ್ಟು. ನಾನು ಕುಡಿಯೋದನ್ನು ಬಿಟ್ಟು ಎಂಟು ವರ್ಷಗಳೇ ಆಗಿವೆ. ಕುಡಿತಿದ್ದೆ ನಿಜ. ಆದರೆ, ಡ್ರಗ್ಸ್ ತಗೆದುಕೊಳ್ಳುತ್ತಿರಲಿಲ್ಲ. ಇವತ್ತಿನವರೆಗೂ ನಾನು ಒಂದೇ ಒಂದು ಬಾರಿಯೂ ಡ್ರಗ್ಸ್ ತೆಗೆದುಕೊಂಡಿಲ್ಲ ಎಂದಿದ್ದಾರೆ ಶ್ರುತಿ. ಯೂಟ್ಯೂಬ್ ವಾಹಿನಿಯೊಂದರ ಜೊತೆ ಮಾತನಾಡಿರುವ ಶ್ರುತಿ, ತಮ್ಮ ಬದುಕಿನ ಬಗ್ಗೆ ಅನೇಕ ವಿಚಾರಗಳನ್ನು ಮಾತನಾಡಿದ್ದಾರೆ. ಅದರಲ್ಲೂ ಕುಡಿತದ ಬಗ್ಗೆ ಯಾವುದೇ ಮುಚ್ಚು ಮರೆ ಇಲ್ಲದೇ ಹೇಳಿಕೊಂಡಿದ್ದರು. ಜೊತೆಗೆ ಇನ್ನಷ್ಟೇ ರಿಲೀಸ್ ಆಗಬೇಕಿರುವ ಸಲಾರ್…
ಹುಬ್ಬಳ್ಳಿ: ನಗರದ ಗೋಪನಕೊಪ್ಪದ ಹರಿಜನಕೇರಿಯಲ್ಲಿ ಹಣದ ವಿಚಾರವಾಗಿ ಮಗ ತಂದೆಗೆ ಚಾಕುವಿನಿಂದ ಇರಿದಿರುವ ಘಟನೆ ನಡೆದಿದ್ದು, ಪ್ರಕರಣ ಸಂಬಂಧ ಆರೋಪಿ ಉಮೇಶನನ್ನು ಪೊಲೀಸರು ಬಂಧಿಸಿದ್ದಾರೆ. ಆನಂದ ಹೊಸಮನಿ ಚಾಕು ಇರಿತಕ್ಕೆ ಒಳಗಾದವರು. ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾಲ ತೀರಿಸಲು ₹3 ಲಕ್ಷ ಕೊಡಿಸುವಂತೆ ಆರೋಪಿ ಉಮೇಶ ತನ್ನ ತಾಯಿ ರೇಣುಕಾ ಹೊಸಮನಿ ಅವರನ್ನು ಪೀಡಿಸಿದ್ದಾನೆ. ಬಳಿಕ ತಂದೆಯೊಂದಿಗೂ ಜಗಳವಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಜಗಳ ವಿಕೋಪಕ್ಕೆ ಹೋಗಿ ಆತ ಚಾಕುವಿನಿಂದ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಟ ದರ್ಶನ್ ಅಭಿನಯದ ಕಾಟೇರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಡಿ ಬಾಸ್ ಅಭಿನಯಕ್ಕೆ ಫಿದಾ ಆಗಿದ್ದಾರೆ. ಕಾಟೇರ ಟ್ರೈಲರ್ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಕಾಟೇರ ಟ್ರೈಲರ್ ಸದ್ದು ಜೋರಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದರ್ಶನ್ ಸರ್ ಹೊಸ ಮಾಸ್ ಲುಕ್ ಅಭಿಮಾನಿಗಳಿಗೆ ಹಬ್ಬ ಆಗಲಿದೆ. ನಿರ್ದೇಶಕ ತರುಣ್ ಸುಧೀರ್, ರಾಕ್ಲೈನ್ ವೆಂಕಟೇಶ್ ಸರ್ ಗೆ ಅಭಿನಂದನೆಗಳು. ಕಾಟೇರ ಚಿತ್ರಕ್ಕೆ ಅತ್ಯುತ್ತಮ ಅಭೂತಪೂರ್ವ ಯಶಸ್ಸು ಸಿಗಲೆಂದು ಆಶಿಸುತ್ತೇನೆ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಮಾಸ್ ಗೆ ಇರೋದು ಒಂದೇ ಅಡ್ರೆಸ್ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮನಸೋರೆ ಟ್ರೈಲರ್ ಬಗ್ಗೆ ಪ್ರತಿಕ್ರಿಯಿಸಿದ್ದು, ಮಾಸ್ ಗೆ ಇರೋದು ಒಂದೇ ಅಡ್ರೆಸ್, ಅದು ಡಿ ಬಾಸ್ ದರ್ಶನ್ ಸರ್. ಫುಲ್ ಮಾಸ್ ಟ್ರೈಲರ್ ಎಂದು ಹಾಡಿ ಹೊಗಳಿದ್ದಾರೆ. ಸಿಂಪಲ್ ಸುನಿ ಅವರು, ಒಂದ್ ಬಂದೂಕು ಅಲ್ಲ .. ನೂರು ಫಿರಂಗಿ ಬಂದ್ರೂ ತಡೆಯೋಕಾಗೋಲ್ಲ ಎಂದು ಪೋಸ್ಟ್ ಮಾಡಿದ್ದಾರೆ. ಸಿನಿ ಪ್ರಿಯರಿಗೆ ಮುತ್ತಿನಹಾರ ಈ ‘ಕಾಟೇರ’ ನಟ ಸತೀಶ್…
ಹುಬ್ಬಳ್ಳಿ: ಇಲ್ಲಿನ ದಾಜಿಬಾನಪೇಟೆಯ ಶ್ರೀ ಗುರುಸಿದ್ಧೇಶ್ವರ ಕೋ-ಆಪ್ ಬ್ಯಾಂಕ್‌ನಲ್ಲಿ ಸೋಮವಾರ ಆಡಳಿತ ಮಂಡಳಿ ಸಭೆ ಜರುಗಿತು. ಇದೇ ವೇಳೆ ಮುಂದಿನ 5 ವರ್ಷಗಳವರೆಗೆ ಶಂಕರಣ್ಣ ಮುನವಳ್ಳಿ ಅಧ್ಯಕ್ಷರಾಗಿ, ಅರವಿಂದ ಲಿಂಬಿಕಾಯಿ ಉಪಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಬ್ಯಾಂಕ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು ಎಂದು ರಿಟರ್ನಿಂಗ್ ಅಧಿಕಾರಿ ಬಿ.ಬಿ. ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹುಬ್ಬಳ್ಳಿ; ಖಾಸಗಿ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಹಣ ದ್ವಿಗುಣ ಮಾಡಿಕೊಡಲಾಗುವುದು ಎಂದು ನಂಬಿಸಿ ನವನಗರದ ಬಸವ ಲೇಔಟ್‌ನ ಪ್ರೀತಿ ಮಠಪತಿ ಎಂಬುವರಿಗೆ ₹ 2.05 ಲಕ್ಷ ವಂಚಿಸಲಾಗಿದೆ. ಚೌಬಲಿ ಶೇಟ್ ಎಂಬಾತ ತನ್ನ ಇವಿಗೋ ಫಾಸ್ಟ್ ಚಾರ್ಜಿಂಗ್ ಕಂಪನಿಯಲ್ಲಿ ಚೈನ್ ಸಿಸ್ಟಮ್ ಮಾದರಿಯಲ್ಲಿ ವಿವಿಧ ಯೋಜನೆ ಅಡಿ ಹೂಡಿಕೆ ಮಾಡಿದರೆ ಹಣ ದ್ವಿಗುಣ ಮಾಡಿಕೊಡಲಾಗುವುದು ಎಂದು ಪ್ರೀತಿ ಅವರಿಗೆ ಕಂಪನಿಯ ವೆಬ್‌ಸೈಟ್ ಲಿಂಕ್ ಕಳಿಸಿ, ಅವರ ಹೆಸರಿನಲ್ಲಿ ಖಾತೆ ತೆರದಿದ್ದಾನೆ. ನಂತರ ಲಾಭಾಂಶದ ಹಣ ನೀಡಿ ನಂಬಿಸಿದ್ದಾನೆ. ಇದನ್ನು ನಂಬಿರುವ ಪ್ರೀತಿ ಅವರು ಹಂತಹಂತವಾಗಿ ಹಣ ಹೂಡಿಕೆ ಮಾಡಿದ್ದಾರೆ. ನಂತರ ವೆಬ್‌ಸೈಟ್ ಲಾಕ್ ಮಾಡಿ ಹಣ ಹಿಂದಿರುಗಿಸದೆ ವಂಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೈಸೂರು: ಸಂಸದ ಪ್ರತಾಪ್ ಸಿಂಹ ಅವರನ್ನು ಸಂಸತ್ ದಾಳಿ ಪ್ರಕರಣದಲ್ಲಿ ಟ್ರ್ಯಾಪ್ ಮಾಡಲಾಗಿದೆ ಎಂಬ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಹೇಳಿಕೆ ಪ್ರಕರಣದ ದಿಕ್ಕು ತಪ್ಪಿಸುವ ಯತ್ನವಾಗಿದೆ ಎಂದು ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ಆರೋಪಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, ಪಾರ್ಲಿಮೆಂಟ್ ನಲ್ಲಿ ಇತ್ತೀಚೆಗೆ ನಡೆದ ಅಹಿತಕರ ಘಟನೆ ಕುರಿತು ಲೆಹರ್ ಸಿಂಗ್ ನೀಡಿರುವ ಹೇಳಿಕೆ ಬೇಜವಾಬ್ದಾರಿತನದಿಂದ ಕೂಡಿದೆ. ಪ್ರಕರಣ ತನಿಖೆಯ ಹಂತದಲ್ಲಿರುವಾಗಲೇ ಹೇಳಿಕೆಗಳನ್ನು ನೀಡುವ ಮೂಲಕ ತನಿಖೆಯ ದಿಕ್ಕು ತಪ್ಪಿಸುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು. https://ainlivenews.com/aishwarya-rai-left-her-husbands-house-mother-in-law-rift-in-big-bs-house/ ಸಿಎಂ ಸಿದ್ದರಾಮಯ್ಯನವರು ಪುತ್ರ ಯತೀಂದ್ರರನ್ನು ಲೋಕಸಭಾ ಚುನಾವಣಾ ಕಣಕ್ಕಿಳಿಸುವ ಸಲುವಾಗಿ, ಸಂಸದ ಪ್ರತಾಪ್ ಸಿಂಹರನ್ನು ಸಿಲುಕಿಸಲು ಯತ್ನಿಸಿದ್ದಾರೆಂದು ಲೆಹರ್ ಸಿಂಗ್ ಹೇಳಿರುವುದು ಬೇಜವಾಬ್ದಾರಿತನದಿಂದ ಕೂಡಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಿ ಟಿ ರವಿ ನೀಡಿರುವ ಹೇಳಿಕೆಯೂ ಸರಿಯಲ್ಲ. ಸಂಸತ್ ನಲ್ಲಿ ನಡೆದಿರುವ ಘಟನೆಯನ್ನು ಟೂಲ್ ಕಿಟ್ ನ ಭಾಗ ಎಂದು ಹೇಳಿರುವುದು ಸರಿಯಲ್ಲ ಎಂದು ಲಕ್ಷ್ಮಣ್ ಹೇಳಿದರು.
ಲಕ್ನೋ: ಉತ್ತರ ಪ್ರದೇಶದಿಂದ (Uttar Pradesh) ಜೈಪುರಕ್ಕೆ (Jaipur) ಬರುತ್ತಿದ್ದ ಬಸ್ಸಿನಲ್ಲಿ 20 ವರ್ಷದ ದಲಿತ ಯುವತಿ (Dalit Girl) ಮೇಲೆ ಇಬ್ಬರು ಚಾಲಕರು ಸಾಮೂಹಿಕ ಅತ್ಯಾಚಾರ (Gang Rape) ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿಸೆಂಬರ್ 9ರ ಮಧ್ಯರಾತ್ರಿ ಖಾಸಗಿ ಬಸ್ ಉತ್ತರ ಪ್ರದೇಶದಿಂದ ಜೈಪುರಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದ್ದು, ಕಾನ್ಪುರದಿಂದ ಜೈಪುರಕ್ಕೆ ಪ್ರಯಾಣಿಸುತ್ತಿದ್ದ ಸಂತ್ರಸ್ತೆ ಕ್ಯಾಬಿನ್‌ನಲ್ಲಿ ಕುಳಿತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕ್ಯಾಬಿನ್‌ನೊಳಗೆ ಆರಿಫ್ ಮತ್ತು ಲಲಿತ್ ಎಂದು ಗುರುತಿಸಲಾದ ಚಾಲಕರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. https://ainlivenews.com/aishwarya-rai-left-her-husbands-house-mother-in-law-rift-in-big-bs-house/ ಆರೋಪಿಗಳ ಪೈಕಿ ಆರಿಫ್‌ನನ್ನು ಬಂಧಿಸಲಾಗಿದ್ದು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ಕನೋಟಾ ಪೊಲೀಸ್ ಠಾಣೆಯ ಎಸ್‌ಹೆಚ್‌ಒ ಭಗವಾನ್ ಸಹಾಯ್ ಮೀನಾ ತಿಳಿಸಿದ್ದಾರೆ. ಘಟನೆಯ ಬಳಿಕ ಇನ್ನೋರ್ವ ಆರೋಪಿ ಲಲಿತ್ ತಲೆಮರೆಸಿಕೊಂಡಿದ್ದು, ಶೋಧ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಸಂತ್ರಸ್ತೆ ಕ್ಯಾಬಿನ್‌ನಲ್ಲಿದ್ದಾಗ ಬಸ್‌ನೊಳಗೆ ಕೆಲವು ಪ್ರಯಾಣಿಕರಿದ್ದರು. ಆದರೆ ಕ್ಯಾಬಿನ್ ಅನ್ನು ಒಳಗಡೆಯಿಂದ ಲಾಕ್ ಮಾಡಲಾಗಿತ್ತು. ಈ…
ದಕ್ಷಿಣದ ಖ್ಯಾತನಟಿ ಸಮಂತಾ (Samantha) ಮದುವೆ ಕುರಿತಾಗಿ ಸಾಕಷ್ಟು ಸುದ್ದಿಗಳು ಚಿತ್ರೋದ್ಯಮದಲ್ಲಿ ಗಿರಕಿ ಹೊಡೆದಿವೆ. ಸಮಂತಾ ಎರಡನೇ ಮದುವೆ ಆಗುತ್ತಿದ್ದಾರೆ ಅಂತೆಲ್ಲ ಸದ್ದು ಮಾಡಿವೆ. ಡಿವೋರ್ಸ್ (Divorce) ನಂತರ ಸಮಂತಾ ಮದುವೆ (Marriage) ಯೋಚನೆಯನ್ನು ಮಾಡಿದ್ದಾರೆ ಎಂದೂ ಸುದ್ದಿ ಆಗಿದೆ. ಈ ಕುರಿತು ಸಮಂತಾ ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ. 2ನೇ ಮದುವೆ ಕುರಿತಾಗಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಡಿವೋರ್ಸ್ ನಂತರ ಯಾವುದೇ ಕಾರಣಕ್ಕೂ ಅವರು ಮದುವೆ ಬಗ್ಗೆ ಯೋಚನೆ ಮಾಡಿಲ್ಲವಂತೆ. ಎರಡನೇ ಮದುವೆ ಆಗೋದು ತಮ್ಮ ಪ್ರಕಾರ ವೇಸ್ಟ್ ಅಂತೆ. ಆ ಮದುವೆಯೂ ಮುರಿದು ಬೀಳೋಲ್ಲ ಅನ್ನೋದು ಏನು ಗ್ಯಾರಂಟಿ ಎನ್ನುವ ಸಮಂತಾ. ತಮಗೆ ಎರಡನೇ ಮದುವೆಯಲ್ಲೇ ಆಸಕ್ತಿ ಇಲ್ಲವೆಂದು ಹೇಳಿಕೊಂಡಿದ್ದಾರೆ. ಅಭಿಮಾನಿಗಳು ಮತ್ತು ಮಾಧ್ಯಮದವರು ಪದೇ ಪದೇ 2ನೇ ಮದುವೆ ಕುರಿತಾಗಿ ಪ್ರಶ್ನೆಗಳನ್ನು ಕೇಳುತ್ತಿದ್ದರು. ಈ ಇಬ್ಬರಿಗೂ ಒಂದೇ ಮಾತಿನ ಮೂಲಕ ಉತ್ತರ ನೀಡಿದ್ದಾರೆ. ತಮಗೆ ಮದುವೆ ಕುರಿತಾಗಿ ಯಾವುದೇ ಆಸಕ್ತಿ ಉಳಿದಿಲ್ಲವೆಂದು ಅವರು ಹೇಳಿದ್ದಾರೆ. ಈ ಮೂಲಕ…