ಬಾಗಲಕೋಟೆ: 15 ಸಾವಿರ ರೂ. ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬೀಳಗಿಯ ಸರ್ವೇಯರ್ ಬಿದ್ದಿದ್ದಾನೆ. ಸರ್ವೇಯರ್ ಮಹಾಂತೇಶ್ ಕವಳಿಕಟ್ಟಿ, ಅಣ್ಣೇಶಿ ಲಮಾಣಿ ಎಂಬವರಿಂದ 15 ಸಾವಿರ ರೂ. ಹಣ ಪಡೆಯುವಾಗ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸುನಗ ಗ್ರಾಮದಲ್ಲಿದ್ದ 8 ಎಕರೆ ಜಮೀನಿನ ಪಿಟಿ ಶೀಟ್ ಮಾಡಿ ಕೊಡಲು ಆತ ಲಂಚ ಕೇಳಿದ್ದ. https://ainlivenews.com/if-the-scar-on-your-face-is-ruining-you-then-look-here-its-the-best/ ಈ ಹಿಂದೆ 28 ಸಾವಿರ ರೂ. ಪಡೆದು ಕೆಲಸ ಮಾಡಿಕೊಟ್ಟಿರಲಿಲ್ಲ. ಅಲ್ಲದೇ 38 ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ ಎಂದು ತಿಳಿದು ಬಂದಿದೆ. 15 ಸಾವಿರ ರೂ. ಹಣವನ್ನು ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಆತ ಸಿಕ್ಕಿಬಿದ್ದಿದ್ದಾನೆ. ಮಹಾಂತೇಶ್ ಕವಳಿಕಟ್ಟಿಯನ್ನು ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಲೋಕಾಯುಕ್ತ ಎಸ್‍ಪಿ ಹನುಮಂತರಾಯ ಮಾರ್ಗದರ್ಶನದಲ್ಲಿ ಡಿವೈಎಸ್‍ಪಿ ಪುಷ್ಪಲತಾ ನೇತೃತ್ವದಲ್ಲಿ ದಾಳಿ ನಡೆದಿದೆ.
Author: AIN Author
ನವದೆಹಲಿ: ಮೂರು ವರ್ಷದ ಬಳಿಕ ವೆನೆಜುವಲಾದಿಂದ (Venezuela) ಭಾರತ (India) ಕಚ್ಚಾ ತೈಲವನ್ನು ಖರೀದಿಸಲು ಮುಂದಾಗಿದೆ. ವೆನೆಜುವೆಲಾ ಸೇರಿದಂತೆ ನಿರ್ಬಂಧ ಇಲ್ಲದ ಯಾವುದೇ ದೇಶದಿಂದ ತೈಲ (Crude Oil) ಆಮದು ಮಾಡಿಕೊಳ್ಳಲು ಭಾರತ ಸಿದ್ಧ ಎಂದು ಕೇಂದ್ರ ಪೆಟ್ರೋಲಿಯಂ ಖಾತೆಯ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri) ಹೇಳಿದ್ದಾರೆ. ಭಾರತದ ಮೂರು ಕಂಪನಿಗಳಾದ ರಿಲಯನ್ಸ್ ಇಂಡಸ್ಟ್ರೀಸ್ (RIL), ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC) ಮತ್ತು ಎಚ್‌ಪಿಸಿಎಲ್-ಮಿತ್ತಲ್ ಎನರ್ಜಿ (HMEL) ವೆನೆಜುವೆಲಾದ ತೈಲ ಖರೀದಿಸಿದ್ದು, ಇದು ಮುಂದಿನ ಎರಡು ತಿಂಗಳುಗಳಲ್ಲಿ ಭಾರತಕ್ಕೆ ಬರುವ ಸಾಧ್ಯತೆಯಿದೆ. ಭಾರತದಲ್ಲಿ ನಿರ್ದಿಷ್ಟವಾಗಿ ಖಾಸಗಿ ವಲಯದ ರಿಫೈನರ್ಸ್ ಆರ್‌ಐಎಲ್ ಮತ್ತು ನಯಾರಾ ಎನರ್ಜಿ (NEL) ವೆನೆಜುವೆಲಾದ ತೈಲವನ್ನು ಖರೀದಿಸುತ್ತಿದ್ದವು. ಆದರೆ ಅಮೆರಿಕ ಹೇರಿದ ನಿರ್ಬಂಧದ ಬಳಿಕ ಆಮದು ನಿಂತಿತ್ತು. ಭಾರತವು ಕೊನೆಯದಾಗಿ ವೆನೆಜುವೆಲಾದ ಕಚ್ಚಾ ತೈಲವನ್ನು ನವೆಂಬರ್ 2020 ರಲ್ಲಿ ಆಮದು ಮಾಡಿಕೊಂಡಿತ್ತು. https://ainlivenews.com/many-disguises-to-make-girls-too-it-is-exciting-that-this-khatarnak-lover-has-been-caught/ ಭಾರತದ ಅಧಿಕೃತ ವ್ಯಾಪಾರದ ಮಾಹಿತಿಯ ಪ್ರಕಾರ 2019 ರಲ್ಲಿ ವೆನೆಜುವೆಲಾ ಐದನೇ…
ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಅನುದಾನದ ಕೊರತೆ ಎದ್ದು ಕಾಣುತ್ತಿದ್ದು ಶಕ್ತಿಗಾಗಿ ಮೀಸಲಿಟ್ಟ ಹಣ ಖಾಲಿ ಖಾಲಿ ಯಾಗಿದ್ದು ಮಾರ್ಚ್ ತಿಂಗಳವರೆಗೆ ಅಂದಾಜಿಸಿದ್ದ 2800ಕೋಟಿ ರೂ. ಡಿಸೆಂಬರ್ ಅಂತ್ಯಕ್ಕೂ ಮೋದಲೆ ಮೀಸಲಿಟ್ಟ ಹಣ ಸಂಪೂರ್ಣ ಖಾಲಿಯಾಗಿ ಹೋಗಿದೆ. ಈಗಾಗಲೇ 2,800ಕೋಟಿಯಲ್ಲಿ 2,778ಕೋಟಿ ಹಣ ಖಾಲಿಯಾಗಿದ್ದು ಯೋಜನೆ ಯಶಸ್ಸಿನ ಬೆನ್ನೆಲ್ಲೇ ಅನುಧಾನ ಕೊರತೆಯ ಅತಂಕ ಈಗ ಎಲ್ಲರನ್ನ ಕಾಡುತ್ತಿದೆ. ಯೋಜನೆ ಮುಂದುವರಿಯಲು ಸರ್ಕಾರ ಇನ್ನಷ್ಟು ಅನುಧಾನ ನೀಡೋದು ಅನಿವಾರ್ಯ ಉಂಟಾಗಿದ್ದು ಶಕ್ತಿಯೋಜನೆಗೆ ಶಕ್ತಿ ತುಂಬಲು ಅನುದಾನ ಬಿಡುಗಡೆ ಮಾಡೋದು ಅನಿವಾರ್ಯ ವಾಗಿ ಬಿಟ್ಟಿದೆ. ಸಾರಿಗೆ ಸಚಿವರಿಗೆ ತಲೆ ನೋವಾದ ಅನುದಾನ ಕೊರತೆ ಯೋಜನೆ 10ವರ್ಷಗಳವರೆಗೆ ಮುಂದುವರೆಯಲಿದೆ ಎಂದಿದ್ದ ರಾಮಲಿಂಗಾರೆಡ್ಡಿಯವರು ಈಗ ಅನುದಾನದ ಕೊರೆ ಕಾಣುತ್ತಿದ್ದು ಸರ್ಕಾರ ಹಣ ಬಿಡುಗಡೆ ಮಾಡದೇ ಇದ್ರೆ ಸಾರಿಗೆ ನಿಗಮಕ್ಕೆ ಎದುರಾಗಲಿದೆ ಆರ್ಥಿಕ ಸಂಕಷ್ಟ ರಾಜ್ಯದಲ್ಲಿ ಶಕ್ತಿ ಯೋಜನೆ ಜೂನ್ 11ರಂದು ಜಾರಿಯಾಗಿತ್ತು ಜೂನ್ 11ರಿಂದ ಡಿಸೆಂಬರ್ 17ವರೆಗೆ ಶಕ್ತಿಯೋಜನೆಯಡಿ ಬರೊಬ್ಬರಿ 31,73,48,773 ಮಹಿಳೆಯರು…
ಈ ವಾರದ ನಾಮಿನೇಷನ್ ಗುಮ್ಮ ಬಂದೇಬಿಟ್ಟಿದೆ. ಅದಕ್ಕೆ ಇರುವ ಚಟುವಟಿಕೆ ಕೂಡ ಭಿನ್ನವಾಗಿದೆ. ಆ ಚಟುವಟಿಕೆಯ ಸ್ವರೂಪ JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಜಾಹೀರಾಗಿದೆ. ನಿಯೋಜಿತ ಕುರ್ಚಿಯಲ್ಲಿ ಪ್ರತಿಯೊಂದು ಸದಸ್ಯರು ಕೂಡಬೇಕು. ಎದುರು ನಿಂತಿರುವ ಸದಸ್ಯರಲ್ಲಿ ಯಾರಿಗೆ ಕುರ್ಚಿಯಲ್ಲಿ ಕೂತಿರುವ ಸದಸ್ಯರು ನಾಮಿನೇಟ್ ಆಗಬೇಕು ಅನಿಸುತ್ತದೆಯೋ ಅವರು ಬೋರ್ಡ್ ಎತ್ತಿ ಸೂಚಿಸಬೇಕು. ಆಮೇಲೆ ಮಸಿನೀರನ್ನು ಅವರ ಮೇಲೆ ಸುರಿಯಬೇಕು. ಕೊನೆಗೆ ಅತಿ ಹೆಚ್ಚು ಸದಸ್ಯರಿಂದ ಸೂಚಿತರಾದವರು ನಾಮಿನೇಟ್ ಆಗುತ್ತಾರೆ. ಈ ಚಟುವಟಿಕೆಯಲ್ಲಿ ಮೈಕಲ್ ಅವರು ಕಾರ್ತೀಕ್ ಅವರನ್ನು ನಾಮಿನೇಟ್ ಮಾಡಿದ್ದಾರೆ. ಆದರೆ ಅವರು ಕೊಟ್ಟ ಕಾರಣ ಕಾರ್ತೀಕಗ ಅವರಿಗೆ ಸೂಕ್ತ ಅನಿಸಿಲ್ಲ. ಹಾಗಾಗಿ ಅದೇ ಕಾರಣ ಇಟ್ಟುಕೊಂಡು ಕಾರ್ತೀಕ್ ಕೂಡ ಮೈಕಲ್ ಅವರನ್ನು ನಾಮಿನೇಟ್ ಮಾಡಿದ್ದಾರೆ. ಹಾಗೆಯೇ ಸಂಗೀತಾ, ಪ್ರತಾಪ್ ಸೇರಿದಂತೆ ಹಲವರ ಹೆಸರುಗಳು ಸೂಚಿತಗೊಂಡಿವೆ. ಯಾರ ಹೆಸರು ಹೆಚ್ಚು ಸಲ ಸೂಚಿತಗೊಂಡಿದೆ? ಯಾರು ಯಾರೆಲ್ಲ ನಾಮಿನೇಟ್ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಷ್ಟೆ.
ವೀಕೆಂಡ್ ಎಪಿಸೋಡ್‌ನಲ್ಲಿ ಸುದೀಪ್ ಮನೆಯ ದಿನಸಿಗಳನ್ನು ಗಳಿಸುವ ಚಟುವಟಿಕೆಯ ಬಗ್ಗೆ ಬಗ್ಗೆ ಹಲವು ಕಿವಿಮಾತುಗಳನ್ನು ಹೇಳಿದ್ದರು. ಹಿಂದಿನ ಹಲವು ವಾರಗಳಲ್ಲಿ ತಪ್ಪು ಲೆಕ್ಕಾಚಾರದಿಂದ, ಸಿಲ್ಲಿ ತಪ್ಪುಗಳಿಂದ ದಿನಸಿಗಳನ್ನು ಕಳೆದುಕೊಳ್ಳುತ್ತಿರುವುದರ ಬಗ್ಗೆ ಸೂಕ್ಷ್ಮವಾಗಿ ಎಚ್ಚರಿಸಿದ್ದರು. ಅಷ್ಟೇ ಅಲ್ಲ, ಅದನ್ನು ಹೇಗೆ ನಿರ್ವಹಿಸಬೇಕು ಎಂಬ ಟಿಪ್ಸ್ ಕೂಡ ಕೊಟ್ಟಿದ್ದರು. ಆಗ ಯಾರಿಗೂ ಸುದೀಪ್ ಯಾಕೆ ಇದನ್ನು ಹೇಳುತ್ತಿದ್ದಾರೆ ಎಂದು ಅರ್ಥವಾಗಿರಲಿಲ್ಲ. ಅವರ ಮಾತಿನ ಅರ್ಥ ಈಗ ಅಂದರೆ, ವಾರದ ಮೊದಲ ದಿನ ಅರ್ಥವಾಗಿದೆ. ಅದೂ ಕಾಲಮಿಂಚಿ ಹೋದಮೇಲೆ! ಹಾಗಾದರೆ ಆಗಿದ್ದೇನು? ಇದರ ಸುಳಿವು JioCinemaಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಸಿಕ್ಕಿದೆ. ಬಿಗ್‌ಬಾಸ್ ದಿನಸಿ ಪಡೆದುಕೊಳ್ಳುವ ಕುರಿತು ಒಂದು ಟಾಸ್ಕ್ ನೀಡಿದ್ದಾರೆ. ನಾಲ್ಕು ಸ್ಪರ್ಧಿಗಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬಝರ್ ಎದುರು ನಿಂತುಕೊಂಡಿದ್ದಾರೆ. ಬಿಗ್‌ಬಾಸ್ ಮನೆಗೆ ಬೇಕಾದ ದಿನಸಿಗಳನ್ನು ಮತ್ತು ಅವುಗಳ ಪ್ರಮಾಣವನ್ನು ಹೇಳುತ್ತ ಹೋಗುತ್ತಾರೆ. ಆಗ ಬೇಕಾದ ದಿನಸಿಗಳ ಹೆಸರು-ಪ್ರಮಾಣ ಬಂದಾಗ ಬಝರ್ ಒತ್ತಬೇಕು. ಈ ಟಾಸ್ಕ್ ಮೂಲ ಲಾಜಿಕ್ ಗೊತ್ತಾಗದೆ ಸದಸ್ಯರು ಎಡವಟ್ಟು ಮಾಡಿಕೊಂಡಿರುವಂತಿದೆ.…
ಬೀಜಿಂಗ್: ಚೀನಾದ ಗನ್ಸು-ಕಿಂಗ್ಹೈ (China’s Gansu) ಗಡಿ ಪ್ರದೇಶದಲ್ಲಿ ಭೀಕರ ಭೂಕಂಪ (Earthquake) ಸಂಭವಿಸಿದ್ದು, 111 ಮಂದಿ ಸಾವನ್ನಪ್ಪಿದ್ದಾರೆ. 230ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರವು (EMSC) ಭೂಕಂಪದ ತೀವ್ರತೆಯನ್ನು 6.1 ಎಂದು ಗುರುತಿಸಿದೆ. ಆದ್ರೆ ಚೀನಾದ ಸರ್ಕಾರಿ ಮಾಧ್ಯಮ ಭೂಕಂಪದ ತೀವ್ರತೆ 6.2 ಎಂದು ತಿಳಿಸಿದೆ. ಭೂಕಂಪದ ಕೇಂದ್ರ ಬಿಂದು ಪಶ್ಚಿಮ-ನೈಋತ್ಯಕ್ಕೆ 102 ಕಿಮೀ ದೂರದಲ್ಲಿರುವ ಗನ್ಸು (Gansu) ಪ್ರಾಂತ್ಯದ ರಾಜಧಾನಿ ಲಾನ್‌ಝೌ ಬಳಿ 35 ಕಿಮೀ ಆಳದಲ್ಲಿ ಪತ್ತೆಯಾಗಿದೆ. https://ainlivenews.com/many-disguises-to-make-girls-too-it-is-exciting-that-this-khatarnak-lover-has-been-caught/ ಕ್ವಿಂಗ್‌ಹೈ ಪ್ರಾಂತ್ಯದ ಹಲವು ಭಾಗಗಳಲ್ಲಿಯೂ ಭೂಮಿ ಕಂಪಿಸಿದ ಅನುಭವವಾಗಿದೆ. ವಿಪತ್ತು ನಿರ್ವಹಣೆ, ಕಡಿತ ಮತ್ತು ಪರಿಹಾರಕ್ಕಾಗಿ ಚೀನಾದ ರಾಷ್ಟ್ರೀಯ ಆಯೋಗ ಮತ್ತು ತುರ್ತು ನಿರ್ವಹಣೆಯ ಸಚಿವಾಲಯವು 4ನೇ ಹಂತದ ಪರಿಹಾರ, ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ.
ಬೆಂಗಳೂರು: ಹಿಟ್ ಆ್ಯಂಡ್ ರನ್‌ಗೆ (Hit&Run) ವೃದ್ಧೆ (Old Woman) ಬಲಿಯಾದ ಘಟನೆ ಬ್ಯಾಟರಾಯನಪುರ (Byatarayanapura) ಬಳಿಯ ಮೈಸೂರು ರೋಡ್‌ನಲ್ಲಿ (Mysuru Road) ನಡೆದಿದೆ. ಜಯಲಕ್ಷ್ಮಿ ಮೃತ ವೃದ್ಧೆ. ಇಂದು ಬೆಳಗ್ಗೆ 6 ಗಂಟೆಯ ವೇಳೆಗೆ ಘಟನೆ ನಡೆದಿದೆ. ನಡೆದುಕೊಂಡು ಹೋಗುತ್ತಿದ್ದ ವೃದ್ಧೆಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಚಾಲಕ ವಾಹನದ ಸಮೇತ ಪರಾರಿಯಾಗಿದ್ದಾನೆ. ವಾಹನ ಡಿಕ್ಕಿ ಹೊಡೆದ ರಭಸಕ್ಕೆ ವೃದ್ಧೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಬ್ಯಾಟರಾಯನಪುರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ. ಮೃತ ವೃದ್ಧೆ ಹೊಸಗುಡ್ಡದಹಳ್ಳಿ ನಿವಾಸಿಯಾಗಿದ್ದು, ಅಗರಬತ್ತಿ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸದ್ಯ ಅವರ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಪೊಲೀಸರು ಸಿಸಿಟಿವಿ ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ
ಚೆನ್ನೈ: ತಮಿಳುನಾಡಿನ (Tamil Nadu) ದಕ್ಷಿಣ ಭಾಗಗಳಲ್ಲಿ ಭಾರೀ ಮಳೆಯಿಂದಾಗಿ (Rain) ಸುಮಾರು 500ಕ್ಕೂ ಹೆಚ್ಚು ಪ್ರಯಾಣಿಕರು ತೂತುಕುಡಿ ಜಿಲ್ಲೆಯ ಶ್ರೀವೈಕುಂಟಂನ ರೈಲು ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ. ಅಲ್ಲದೇ ಮಳೆಯಿಂದ ತೂತುಕುಡಿಯಲ್ಲಿ ಓರ್ವ ಸಾವನ್ನಪ್ಪಿದ್ದಾರೆ. ರೈಲು (Train) ನಿಲ್ದಾಣದ ಎಲ್ಲಾ ಕಡೆಗಳಲ್ಲೂ ಜಲಾವೃತವಾಗಿದ್ದು, ಭಾರೀ ಮಳೆಯ ಪರಿಣಾಮ ರೈಲು ನಿಲ್ದಾಣದ ಬಳಿಯ ಹಳಿಗಳ ಬಳಿ ಮಣ್ಣಿನ ಸವೆತ ಉಂಟಾಗಿದೆ. ಇದರಿಂದ ಸಿಮೆಂಟ್ ಚಪ್ಪಡಿಗಳು ಹಾನಿಗೊಳಗಾಗಿವೆ. ಇದರಿಂದಾಗಿ ತಿರುಚೆಂದೂರಿನಿಂದ ಚೆನ್ನೈಗೆ ಹೋಗುತ್ತಿದ್ದ ರೈಲನ್ನು ನಿಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ. ನಿಲ್ದಾಣದ ಮಾರ್ಗ ಸಂಪರ್ಕ ಕಡಿತಗೊಂಡಿರುವುದರಿಂದ ರಕ್ಷಣಾ ಕಾರ್ಯ ಸಹ ವಿಳಂಬವಾಗುತ್ತಿದೆ. https://ainlivenews.com/many-disguises-to-make-girls-too-it-is-exciting-that-this-khatarnak-lover-has-been-caught/ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ನಿಲ್ದಾಣವನ್ನು ತಲುಪಲು ಪ್ರಯತ್ನಿಸುತ್ತಿದೆ. ಆಹಾರವನ್ನು ಹೆಲಿಕಾಪ್ಟರ್ ಮೂಲಕ ತಲುಪಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲವೆಡೆ ಮಳೆ ಬಿಡುವು ನೀಡಿದ್ದರೂ, ಅಣೆಕಟ್ಟುಗಳಿಂದ ಹೆಚ್ಚುವರಿ ನೀರು ಬಿಡುಗಡೆ ಮುಂದುವರಿದಿದೆ. ಇದರಿಂದ ಕೆಲವೆಡೆ ನೀರು ನಿಂತಿದೆ. ಮಳೆಯಿಂದ ಕನ್ಯಾಕುಮಾರಿ, ತೂತುಕುಡಿ, ತೆಂಕಶಿ ಮತ್ತು ತಿರುನಲ್ವೇಲಿ ಜಿಲ್ಲೆಗಳು…
ನವದೆಹಲಿ: ಲೋಕಸಮರದಲ್ಲಿ (Lok Sabha Election) ಬಿಜೆಪಿ (BJP) ವಿರುದ್ಧ ರಣಕಹಳೆ ಮೊಳಗಿಸುತ್ತಿರುವ INDIA ಒಕ್ಕೂಟದ ನಾಲ್ಕನೇ ಸಭೆ ದೆಹಲಿಯ ಅಶೋಕ ಹೋಟೆಲಿನಲ್ಲಿ (Ashok Hotel) ನಡೆಯಲಿದೆ. ಈ ಸಭೆಯಲ್ಲಿ ಪ್ರತಿ ರಾಜ್ಯದಲ್ಲಿ ಸೀಟ್ ಹೊಂದಾಣಿಕೆ ಮತ್ತು ಪ್ರಧಾನಿ ಅಭ್ಯರ್ಥಿ (Prime Minister Candidate) ಕುರಿತಾಗಿ ಚರ್ಚೆ ನಡೆಯಲಿದೆ. ನಮ್ಮ ಒಳಗೆ ಸ್ಪರ್ಧೆ ನಡೆದರೆ ಬಿಜೆಪಿಗೆ (BJP) ಲಾಭ ಎಂಬುದನ್ನು ಅರಿತ ವಿಪಕ್ಷಗಳು ಒಂದೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಈ ಮೂಲಕ ಬಿಜೆಪಿ ವಿರುದ್ಧ ಮತಗಳ ಕ್ರೋಢಿಕರಣಕ್ಕೆ ತಂತ್ರ ರೂಪಿಸಲಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಒಕ್ಕೂಟ ನಾಯಕರು ಒಟ್ಟಾಗಿ ಪ್ರಚಾರ ನಡೆಸುವ ಸಾಧ್ಯತೆಯಿದೆ. ಇದರ ಜೊತೆಗೆ ಪ್ರಧಾನಿ ಅಭ್ಯರ್ಥಿ ಘೋಷಣೆ ಮಾಡಬೇಕೇ? ಬೇಡವೇ ಎಂಬುದರ ಬಗ್ಗೆ ಸಮಾಲೋಚನೆ ನಡೆಯಲಿದೆ. https://ainlivenews.com/many-disguises-to-make-girls-too-it-is-exciting-that-this-khatarnak-lover-has-been-caught/ ಪ್ರಧಾನಿ ಅಭ್ಯರ್ಥಿ ರೇಸ್‌ನಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಇದ್ದರೆ ಟಿಎಂಸಿಯಿಂದ ಮಮತಾ, ಜೆಡಿಯುನಿಂದ ನಿತೀಶ್ ಕುಮಾರ್ ಮಧ್ಯೆ ಪೈಪೋಟಿ ನಡೆಯುತ್ತಿದೆ. ತೀವ್ರ ಪೈಪೊಟಿ ಹಿನ್ನೆಲೆಯಲ್ಲಿ ವಿಪಕ್ಷ ನಾಯಕರು ಈಗ ಗೊಂದಲದಲ್ಲಿದ್ದಾರೆ. ಈಗಾಗಲೇ…
ಬೆಂಗಳೂರು: ರಾಜ್ಯದ ಶಾಲಾ ಮಕ್ಕಳಿಗೆ ಶಿಕ್ಷಣ ಇಲಾಖೆಯಿಂದ ಸಿಹಿಸುದ್ದಿ ನೀಡಿದ್ದು ಮುಂದಿನ ವರ್ಷದಿಂದ ಶಾಲಾ ಮಕ್ಕಳಿಗೆ ಒಂದೇ ವಿಷಯದ ಎರಡೆರಡು ಪಠ್ಯ ಪುಸ್ತಕ ಹಾಗೆ ಶಾಲಾ ಮಕ್ಕಳ ʻಬ್ಯಾಗ್ ಹೊರೆʼ ಇಳಿಕೆಗೆ ಮಹತ್ವದ ಕ್ರಮ ತೆಗೆದುಕೊಳ್ಳಲಾಗಿದೆ. 2 ಭಾಗಗಳಾಗಿ ಪಠ್ಯ ಮುದ್ರಿಸಲು ಶಿಕ್ಷಣ ಇಲಾಖೆ ನಿರ್ಧಾರ ಕೈಗೊಂಡಿದ್ದು ಬ್ಯಾಗ್ ಹೊರೆ ತಗ್ಗಿಸುವ ನಿಟ್ಟಿಲ್ಲಿ ಮಹತ್ವದ ಕ್ರಮಕ್ಕೆ ಮುಂದಾಗಿರುವ ಶಿಕ್ಷಣ ಇಲಾಖೆ. ಎರಡು ಭಾಗ ಮಾಡಿ ಪಠ್ಯಪುಸ್ತಕ ಮುದ್ರಿಸುವುದರಿಂದ ಶೇಕಡ 50ರಷ್ಟು ತೂಕ ಕಡಿಮೆಯಾಗಲಿದೆ ಎನ್ನುತ್ತಿರುವ ಶಿಕ್ಷಣ ಇಲಾಖೆ. 2024-25ನೇ ಸಾಲಿನಿಂದಲೇ ಅಳವಡಿಸಲಾಗುತ್ತಿದ್ದು 1 ರಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಬ್ಯಾಗ್ ಹೊರೆಯನ್ನ, ಕಡಿಮೆ ಮಾಡಲು ಶಾಲಾ ಶಿಕ್ಷಣ ಇಲಾಖೆ ಈ ಕ್ರಮ ತೆಗೆದುಕೊಂಡಿದೆ.