Author: AIN Author

ಕೋಲಾರ: ರಾಜ್ಯದಲ್ಲಿ ಪಿಎಸ್​ಐ ನೇಮಕಾತಿ, ಶಿಕ್ಷಕರ ನೇಮಕಾತಿ ಸೇರಿದಂತೆ ಕೆಲವೊಂದು ಇಲಾಖೆಗಳಲ್ಲಿನ ನೇಮಕಾತಿಯಲ್ಲಿ ನಡೆದ ಅಕ್ರಮಗಳು ಬಯಲಿಗೆ ಬಂದಂತೆ, ಇದೀಗ ಕೋಲಾರ ಹಾಲು ಒಕ್ಕೂಟದ ನೇಮಕಾತಿಯಲ್ಲಿ ನಡೆದ ದಂಧೆ ವಿಚಾರವೂ ಬಟಾಬಯಲಾಗಿದೆ. ಸಂಭವನೀಯ ಅಭ್ಯರ್ಥಿಗಳ ಪಟ್ಟಿ ವೈರಲ್ ಆಗುತ್ತಿದ್ದು, ನೇಮಕಾತಿಯಲ್ಲಿ ಲಕ್ಷ ಲಕ್ಷ ಡೀಲ್ ನಡೆದಿರುವ ಅನುಮಾನ ವ್ಯಕ್ತವಾಗಿದೆ. ಕೋಲಾರ ಹಾಲು ಒಕ್ಕೂಟದ ನೇಮಕಾತಿಯಲ್ಲಿ ವಿದ್ಯಾರ್ಹತೆಗಿಂತ ಶಿಫಾರಸ್ಸು ಪತ್ರವೇ ಮುಖ್ಯವಾಗಿದೆ. ಶಿಫಾರಸ್ಸು ಇದ್ದವರಿಗೆ ಮಾತ್ರ ಒಕ್ಕೂಟದಲ್ಲಿ ಕೆಲಸ ನೀಡಲಾಗುತ್ತದೆ. ಸೆಪ್ಟೆಂಬರ್​ನಲ್ಲಿ ಕೆರೆಯಲಾಗಿದ್ದ 81 ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿ ಲಿಖಿತ ಪರೀಕ್ಷೆ ನಡೆದಿದ್ದು, ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಕೂಡ ಸಿದ್ಧವಾಗಿದೆ. ಸದ್ಯ, ಸಂಭವನೀಯ ಅಭ್ಯರ್ಥಿಗಳ ಪಟ್ಟಿ ವೈರಲ್ ಆಗಿದ್ದು, ಅಭ್ಯರ್ಥಿಗಳ ಹೆಸರ ಮುಂದೆ ಶಿಫಾರಸ್ಸು ಮಾಡಿದರ ಹೆಸರು ಹಾಕಲಾಗಿದೆ. https://ainlivenews.com/dont-eat-eggplant-because-of-this-health-problem/ ಒಕ್ಕೂಟದ ನಿರ್ದೇಶಕರು ಸೇರಿ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಶಾಸಕರುಗಳ ಹೆಸರುಗಳು ಪತ್ತೆಯಾಗಿವೆ. ಇದರ ಪ್ರತಿ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗಿದೆ. ಇನ್ನೂ ಕೋಲಾರ ಹಾಲು…

Read More

ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಖ್ಯಾತ ನಟ ಬ್ರಿಜೇಶ್ ತ್ರಿಪಾಠಿ (Brijesh Tripathi) ಮೀರತ್ ನ ಆಸ್ಪತ್ರೆಗೆ ದಾಖಲಾಗಿದ್ದರು. ಜ್ವರಕ್ಕೆ ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಈ ಸಂದರ್ಭದಲ್ಲಿ ಅವರಿಗೆ ಹೃದಯಾಘಾತವಾಗಿ ನಿಧನರಾಗಿದ್ದಾರೆ (passed away). ಭೋಜ್ ಪುರಿ (BhojPuri) ಚಿತ್ರರಂಗದಲ್ಲಿ ತ್ರಿಪಾಠಿ ಜನಪ್ರಿಯ ನಟರಾಗಿದ್ದಾರೆ. 46 ವರ್ಷಗಳ ಕಾಲ ಸಿನಿಮಾ ರಂಗದಲ್ಲೇ ಸೇವೆ ಸಲ್ಲಿಸಿರುವ ತ್ರಿಪಾಠಿ, ಭೋಜ್ ಪುರಿ ಸಿನಿಮಾ ರಂಗದಲ್ಲಿ ಮಾತ್ರವಲ್ಲ, ಹಿಂದಿ ಸಿನಿಮಾ ರಂಗದಲ್ಲೂ ತಮ್ಮದೇ ಆದ ಪಾತ್ರಗಳ ಮೂಲಕ ಹೆಸರು ಮಾಡಿದವರು. 250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ ಇವರದ್ದು. ಭೋಜ್ ಪುರಿಯ ಓಂ ಸಿನಿಮಾ ಇವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ನೆಚ್ಚಿನ ನಟನ ನಿಧನಕ್ಕೆ ಭೋಜ್ ಪುರಿ ಚಿತ್ರರಂಗ ಮತ್ತು ಫ್ಯಾನ್ಸ್ ಕಂಬನಿ ಮಿಡಿದಿದೆ. ಅವರ ಚಿತ್ರಗಳನ್ನು ಕೊಂಡಾಡಿದೆ. ಮೃತರ ಆತ್ಮಕ್ಕೆ ಅನೇಕ ನಟರು ಮತ್ತು ತಂತ್ರಜ್ಞರು ಸಂತಾಪ ಸೂಚಿಸಿದ್ದಾರೆ.

Read More

ಈ ವರ್ಷ ತೆರೆಕಂಡ ಅನೇಕ ಸಿನಿಮಾಗಳಲ್ಲಿ ಪ್ರೇಕ್ಷಕರಿಂದ  ಅಪಾರ ಪ್ರಶಂಸೆಗೆ, ಚರ್ಚೆಗೆ ಒಳಗಾದ ಚಿತ್ರ ಟೋಬಿ (Toby) . ರಾಜ್ ಬಿ ಶೆಟ್ಟಿ ((Raj B Shetty)) ಬರೆದು, ನಟಿಸಿದ ದೊಡ್ಡ ವೆಚ್ಚದ ಚಿತ್ರ ಟೋಬಿ ಭಾಷೆಯ ಎಲ್ಲೆಯನ್ನೂ ಮೀರಿ ದೇಶದಾದ್ಯಂತ ಮೆಚ್ಚುಗೆಯನ್ನು ಪಡೆದಿತ್ತು. ಥಿಯೇಟರ್ ನಲ್ಲಿ ಗೆದ್ದ ಟೋಬಿಯನ್ನು ಒಟಿಟಿಯಲ್ಲಿ ನೋಡಲು ಕಾಯುತ್ತಿದ್ದ ಸಿನಿ ರಸಿಕರಿಗೆ ಹೊಸ ಮಾಹಿತಿಯೊಂದು ಬಂದಿದೆ, ಹೌದು ಟೋಬಿ ಚಿತ್ರ ಇದೇ ಡಿಸೆಂಬರ್ 22 ಕ್ಕೆ ಪ್ರಖ್ಯಾತ ಸೋನಿ ಲಿವ್ ಒಟಿಟಿ ಆ್ಯಪ್ ನಲ್ಲಿ ಬಿಡುಗಡೆಗೊಳ್ಳಲಿದೆ. ಒಟಿಟಿಯಲ್ಲಿ  ನೋಡಬೇಕು ಎಂದು ಕಾದವರಿಗೆ ಅವಕಾಶ ಸಿಕ್ಕಿದೆ. ಪುನೀತ್ ರಾಜ್ ಕುಮಾರ್ ನಟಿಸಿದ ಕೊನೆಯ ಚಿತ್ರ ‘ಜೇಮ್ಸ್’ ನ ನಂತರ ಸೋನಿ ಸಂಸ್ಥೆ ಯಲ್ಲಿ ಬಿಡುಗಡೆಗೊಳ್ಳಲಿರುವ ಎರಡನೇ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಯೂ ಟೋಬಿಗೆ ಸಿಕ್ಕಿದೆ. ಜೇಮ್ಸ್ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು. ಈ ಸಿನಿಮಾಗೂ ಸಿಗಲಿದೆ ಎನ್ನುವ ವಿಶ್ವಾಸ ಸಂಸ‍್ಥೆಯದ್ದು.

Read More

ಗದಗ: ಡಾ. ಬಿ ಆರ್ ಅಂಬೇಡ್ಕರ್ ಪುಥ್ಥಳಿ ಪ್ರತಿಷ್ಠಾಪನೆ ಮಾಡದ ಹಿನ್ನೆಲೆ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿರೋ ಘಟನೆ ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ನಡೆದಿದೆ. ಡಾ. ಬಿ ಆರ್ ಅಂಬೇಡ್ಕರ್ ಅಭಿಮಾನಿ ಬಳಗದಿಂದ ಪ್ರತಿಭಟನೆ ಮಾಡಲಾಗಿದೆ. ಮುಂಡರಗಿ ಪಟ್ಟಣದ ಪೊಲೀಸ್ ಮೈದಾನದ ಪಕ್ಕದ ಉದ್ಯಾನವನದಲ್ಲಿ ಅಂಬೇಡ್ಕರ್ ಪುಥ್ಥಳಿ ನಿರ್ಮಾಣ ಮಾಡಲು ಅಕ್ಟೋಬರ್ 22, 2021 ರಲ್ಲೇ ಠರಾವು ಪಾಸ್ ಮಾಡಲಾಗಿತ್ತು. ಆದರೆ ಈವರೆಗೂ ಪ್ರತಿಷ್ಠಾಪನೆ ಮಾಡದ ಹಿನ್ನೆಲೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.  ಇನ್ನು ಪುಥ್ಥಳಿ ಪ್ರತಿಷ್ಠಾಪನೆಗೆ ಭೂಮಿ ಪೂಜೆ ಮಾಡುವಂತೆ ಸಂಘಟನೆಗಳು ಗಡುವು ನೀಡಿದ್ದವು. ಗಡುವು ಮುಗಿದಿದ್ದರಿಂದ ಇಂದು ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗಿದೆ. ಪೊಲೀಸರು ಪುರಸಭೆ ಗೇಟ್ ಬಂದ್ ಮಾಡಿದ್ರೂ ಕೂಡಾ ಗೇಟ್ ದೂಡಿಕೊಂಡು ಒಳನುಗ್ಗಿ ಪ್ರತಿಭಟನಾಕಾರರು ಮುತ್ತಿಗೆಗೆ ಯತ್ನಿಸಿದ್ರು. ತಮಟೆ ಬಾರಿಸುತ್ತಾ ಪ್ರತಿಭಟಿಸಿ ತಮ್ಮ ಆಕ್ರೋಶ ಹೊರಹಾಕಿದ್ರು. ಸ್ಥಳದಲ್ಲೇ ತಹಶಿಲ್ದಾರ ಧನಂಜಯ ಮಾಲಗಿತ್ತಿ ಮತ್ತು ಸಿಪಿಐ ಮಂಜುನಾಥ ಹಾಜರಿದ್ರೂ ಕೂಡಾ ಸ್ಥಳಕ್ಕೆ ಎಸಿ ಬರುವಂತೆ ಪ್ರತಿಭಟನಾಕಾರರು…

Read More

ಕಿರುತೆರೆಯ ನಟಿ ರಾಧಿಕಾ ರಾವ್ (Radhika Rao) ಅವರ ಮನೆಯಲ್ಲಿ ಸಂತಸ ಮನೆ ಮಾಡಿದೆ. ಕೆಲ ತಿಂಗಳುಗಳ ಹಿಂದೆ ರಾಧಿಕಾ, ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಮುದ್ದಾದ ಮಗುವಿಗೆ ರಾಧಿಕಾ ನಾಮಕರಣ ಮಾಡಿದ್ದಾರೆ. ಚೆಂದದ ಫೋಟೋಶೂಟ್ ಶೇರ್ ಮಾಡಿಕೊಳ್ಳುವ ಮೂಲಕ ಮಗನ ಹೆಸರನ್ನ ನಟಿ ರಿವೀಲ್ ಮಾಡಿದ್ದಾರೆ. ಜುಲೈನಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ರಾಧಿಕಾ ರಾವ್ (Radhika Rao) ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಮಗುವಿನ ಚೆಂದದ ಫೋಟೋ ಶೇರ್ ಮಾಡಿದ್ದಾರೆ. ಮಗನಿಗೆ ‘ಅಗಸ್ತ್ಯ’ ಎಂದು ನಾಮಕರಣ ಮಾಡಿದ್ದಾರೆ. ನಟಿ ರಾಧಿಕಾ ರಾವ್ ಅವರು 2020ರಲ್ಲಿ ಆಕರ್ಷ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆರಂಭದಲ್ಲಿ ಸ್ನೇಹಿತರಾಗಿದ್ದ ರಾಧಿಕಾ ಮತ್ತು ಆಕರ್ಷ್ ಭಟ್, ಪ್ರೀತಿಸಲು ಆರಂಭಿಸಿದ್ದರು. ಇಬ್ಬರ ಮನೆಯಲ್ಲೂ ಲವ್ ವಿಚಾರ ತಿಳಿಸಿ ಕುಟುಂಬದವರ ಸಮ್ಮತಿ ಪಡೆದು ಮದುವೆ ಆಗಿದ್ದರು

Read More

ತುಮಕೂರು: ತುಮಕೂರಿನ ಹೆಬ್ಬೂರು ಪೊಲೀಸರು ಕಾರ್ಯಾಚರಣೆ ನಡೆಸಿ 12 ಬೈಕ್ ಕಳವು ಹಾಗೂ  ಐದು ಪೊಲೀಸ್ ಠಾಣೆಗೆ ಬೇಕಿದ್ದ ಕಳ್ಳಾನಾಗಿದ್ದ ಖದೀಮನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇರ್ಫಾನ್ ಅಲಿಯಾಸ್ ಫಾಕ್ಸ್ ಬಂಧಿತ ಆರೋಪಿಯಾಗಿದ್ದುಬೈಕ್ ನಲ್ಲಿ ಹೋಗುತ್ತಿದ್ದ, ಇರ್ಫಾನ್ ಅನ್ನು ಅನುಮಾನದ ಮೇಲೆ ತಡೆದು ದಾಖಲಾತಿ ಪರಿಶೀಲನೆ ವೇಳೆ ಆರೋಪಿ ಸಿಕ್ಕಿಬಿದ್ದೀದ್ದಾನೆ. ಜಯನಗರ, ತಿಲಕ್ ಪಾರ್ಕ್,  ಹೆಬ್ಬೂರು, ಕ್ಯಾತ್ಸಂದ್ರ, ತುಮಕೂರು ನಗರ ಪೊಲೀಸರಿಗೆ ಬೇಕಿದ್ದ ಖದೀಮ ಕದ್ದ ಬೈಕ್ ಗಳನ್ನು ಐದಾರು ಸಾವಿರಕ್ಕೆ ಮಾರಾಟ ಮಾಡುತ್ತಿದ್ದನು. ಇನ್ನೂ ಘಟನೆ ಸಂಬಂಧ ಹೆಬ್ಬೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಧಾರವಾಡ: ಸಂಗೀತ, ಚಿತ್ರಕಲಾ,ರಂಗಕಲಾ ಹಾಗೂ ದೈಹಿಕ ಶಿಕ್ಷಕರ ನೇಮಕಾತಿಗೆ ಅಗ್ರಹಿಸಿ ಧಾರವಾಡದಲ್ಲಿ ಬೀದಿಗೆ ಇಳಿದು ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಎಐಡಿವೈಓ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಅತಿಥಿ ಉಪನ್ಯಾಸಕರು, ಸಂಗೀತ ವಿದ್ಯಾರ್ಥಿಗಳು‌ ಸೇರಿ ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಹಾಜರಾತಿ ಕಡಿಮೆ ಕಾರಣ ನೀಡಿ ಹುದ್ದೆಗಳ ರದ್ದು ಮಾಡಲಾಗುತ್ತಿದೆ. ಇದು ವಿದ್ಯಾರ್ಥಿಗಳ ಭವಿಷ್ಯಕ್ಕೂ ತೊಂದರೆಯಾಗುತ್ತಿದೆ. ನಿರುದ್ಯೋಗ ಸಮಸ್ಯೆಯಿಂದ ಈಗಾಗಲೇ ಯುವ ಸಮುದಾಯ ತತ್ತರಿಸಿ ಹೋಗಿದೆ. ಈ ಕೂಡಲೇ ಸರ್ಕಾರ ನೇಮಕಾತಿ ಮಾಡಬೇಕು, ಇಲ್ಲವಾದಲ್ಲಿ ಸರ್ಕಾರದ ವಿರುದ್ಧ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.  

Read More

ಬೆಂಗಳೂರು: ರಾಜ್ಯದೆಲ್ಲೆಡೆ ಬರದ ಛಾಯೆ ಆವರಿಸಿದ್ದರೂ ಬರ ಪರಿಹಾರ ನೀಡುವಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದರು. ಈ ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿರುವ ಅವರು, ರೈತರ ಸಾಲ ಮನ್ನಾ ಮಾಡಿ ಎಂದರೆ ಸದನದಲ್ಲಿ ಅಸಡ್ಡೆ ಉತ್ತರ ನೀಡಿದ್ದ ಮುಖ್ಯಮಂತ್ರಿಗಳಿಗೆ ರೈತರ ಆತ್ಮಹತ್ಯೆ ಪ್ರಕರಣಗಳು ಕಾಣಿಸುತ್ತಿಲ್ಲವೇ? ಬೆಳೆ ಹಾನಿ, ಸಾಲಬಾಧೆ ಕಾರಣಗಳಿಂದಾಗಿ ಕಳೆದ 8 ತಿಂಗಳಲ್ಲಿ 456 ರೈತರು ನೇಣಿಗೆ ಶರಣಾಗಿರುವುದು ಆತಂಕಕಾರಿ ಬೆಳವಣಿಗೆ. ಅದರಲ್ಲಿಯೂ ಉತ್ತರ ಕರ್ನಾಟಕ ಭಾಗದ ರೈತರ ಆತ್ಮಹತ್ಯೆ ಪ್ರಕರಣಗಳೇ ಹೆಚ್ಚು ದಾಖಲಾಗಿವೆ. https://ainlivenews.com/what-is-cm-siddaramaiahs-demand-for-prime-minister-modi-here-are-the-complete-details/ ಕಾಂಗ್ರೆಸ್ ನ ಮರುಳುಗೊಳಿಸುವ ಆಶ್ವಾಸನೆಗಳನ್ನು ನಂಬಿ ಮತ ನೀಡಿದ ಆ ಭಾಗದ ಮುಗ್ಧ ಅನ್ನದಾತರಿಗೆ ಆತ್ಮಹತ್ಯೆಯ ದುರ್ಭಾಗ್ಯ ಕರುಣಿಸಿದ ಕೀರ್ತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲಬೇಕಿದೆ. ಈಗಲಾದರೂ ಸರ್ಕಾರ ಸಂಕಷ್ಟದಿಂದ ನೊಂದಿರುವ ರೈತರಿಗೆ ನ್ಯಾಯ ಸಮ್ಮತ ಬರಪರಿಹಾರ ನೀಡಲಿ, ಇಲ್ಲವಾದರೆ ರೈತ ಆಕ್ರಂದನದ ಶಾಪ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.

Read More

ಬೆಂಗಳೂರು: ರಾಜ್ಯದಲ್ಲಿರುವ ಬರ ಸಮಸ್ಸೆಗೆ ಪರಿಹಾರ ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ಸಿದ್ದರಾಮಯ್ಯ ಅವರು, ಪ್ರಧಾನಿಗೆ ಕರ್ನಾಟಕ ಸರ್ಕಾರದ ಮನವಿ ಪತ್ರ ನೀಡಿ, ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. https://x.com/CMofKarnataka/status/1737010751972499968?s=20 ರಾಜ್ಯದ ಬರ ಪರಿಸ್ಥಿತಿಯ ಕುರಿತು ವಿವರಿಸಿ, ಶೀಘ್ರವೇ 18,177 ಕೋಟಿ ರೂ. ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಇದರಲ್ಲಿ 4,663 ಕೋಟಿ ರೂ. ಇನ್‌ಪುಟ್‌ ಸಬ್ಸಿಡಿ, 12,577 ಕೋಟಿ ರೂ. ತುರ್ತು ಪರಿಹಾರ, 566 ಕೋಟಿ ರೂ. ಕುಡಿಯುವ ನೀರಿಗಾಗಿ ಹಾಗೂ 363 ಕೋಟಿ ರೂ. ಜಾನುವಾರುಗಳ ಸಂರಕ್ಷಣೆಗಾಗಿ ಒದಗಿಸುವಂತೆ ಕೋರಲಾಗಿದೆ. ರಾಜ್ಯದಲ್ಲಿ 236 ತಾಲೂಕುಗಳ ಪೈಕಿ 223 ತಾಲ್ಲೂಕುಗಳು ಬರಪೀಡಿತವಾಗಿದ್ದು, ಅದರಲ್ಲಿ 196 ತಾಲ್ಲೂಕುಗಳಲ್ಲಿ ಬರದ ತೀವ್ರತೆ ಹೆಚ್ಚಾಗಿದೆ. ಇದರಿಂದಾಗಿ 48.19 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ನಷ್ಟವಾಗಿದ್ದು, ಇದರಿಂದ ಹೆಚ್ಚಿನ ಸಂಖ್ಯೆಯ ಸಣ್ಣ ಮತ್ತು…

Read More

ದಾವಣಗೆರೆ ಉಪ್ಪಿನಕಾಯಿ ಬೇಕು ಎಂದು ಕೇಳುತ್ತಾ ಮನೆಯೊಳಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿ ಕೆನ್ನೆಯನ್ನು ಕಚ್ಚಿ ಪರಾರಿಯಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಉಪ್ಪಿನ ಕಾಯಿ ಕೇಳುವ ನೆಪದಲ್ಲಿ ಬಂದು ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಗ್ರಾಮಯೊಂದರಲ್ಲಿ‌ ನಡೆದಿದೆ. ಮಹಿಳೆಯ ಕೆನ್ನೆಗೆ ಕಚ್ಚಿ ಗಾಯಗೊಳಿಸಿ ಪರಾರಿಯಾದ ಆರೋಪಿ ಮಂಜಪ್ಪ ಅಲಿಯಾಸ್ ಮಂಜುನಾಥ್ ಡಿ.ಹೆಚ್. ಎಂದು ಹೇಳಲಾಗುತ್ತಿದೆ. ಡಿಸೆಂಬರ್ 2 ರಂದು ನಡೆದಿದ್ದ ಘಟನೆಯ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮಹಿಳೆಯರು ಗುಂಪಾಗಿ ಬಂದು ನ್ಯಾಯ ಕೊಡಿಸುವಂತೆ ಆಗ್ರಹಿಸಿದ್ದಾರೆ. ಮಹಿಳೆ ಮನೆಯಲ್ಲಿ ಒಬ್ಬಳೇ ಇರುವುದನ್ನ ಗಮನಿಸಿ ಅತ್ಯಾಚಾರಕ್ಕೆ ಯತ್ನ ಮಾಡಿದ ಆರೋಪಿಯನ್ನು ಬಂಧಿಸಿ ಆತನಿಗೆ ತಕ್ಕ ಶಿಕ್ಷೆಯನ್ನು ಕೊಡಬೇಕು. ದೂರು ಕೊಟ್ಟು ಹಲವು ದಿನಗಳಾದರೂ ಆತನನ್ನು ಬಂಧಿಸದ ಹಿನ್ನೆಲೆಯಲ್ಲಿ ದಾವಣಗೆರೆ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ ಹಲವು ಮಹಿಳೆಯರು ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದಾರೆ. 

Read More