ಕ್ರಿಸ್‌ಮಸ್ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಕ್ರಿಸ್‌ಮಸ್ ಸಂಭ್ರಮಾಚರಣೆಗೆ ಈಗಿನಿಂದಲೇ ತಯಾರಿ ನಡೆಯುತ್ತಿದೆ. ಬಗೆಬಗೆಯ ತಿಂಡಿ-ತಿನಿಸುಗಳನ್ನು ತಯಾರಿಸಲು ಸಿದ್ಧತೆಗಳು ಆರಂಭಗೊಂಡಿದೆ. ಈ ಬಾರಿ ಕ್ರಿಸ್‌ಮಸ್‌ಗೆ ವಿವಿಧ ಬಗೆಯ ಕೇಕ್‌ಗಳನ್ನು ಮನೆಯಲ್ಲಿಯೇ ಮಾಡಬಹುದಾಗಿದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಸುಲಭವಾಗಿ ಮನೆಯಲ್ಲೇ ತಯಾರಿಸಬಹುದಾದ ರೆಡ್ ವೆಲ್ವೆಟ್ ಕೇಕ್ ಹೇಗೆ ಮಾಡುವುದು ಎಂಬುದನ್ನು ತಿಳಿಸುತ್ತಿದ್ದೇವೆ ನೋಡಿ! ಬೇಕಾಗುವ ಸಾಮಗ್ರಿಗಳು: ಗೋಧಿ ಹಿಟ್ಟು – ಕಾಲು ಕಪ್ ಉಪ್ಪು – ಅರ್ಧ ಚಮಚ ಸಕ್ಕರೆ – 1 ಕಪ್ ಎಣ್ಣೆ – 1 ಕಪ್ ಕಲರ್ ಪೌಡರ್ – ಅರ್ಧ ಚಮಚ ಅಡುಗೆ ಸೋಡಾ – ಅರ್ಧ ಚಮಚ ಕೋಕೋ ಪೌಡರ್ – 1 ಚಮಚ ಮೊಟ್ಟೆ – 1 ಮಜ್ಜಿಗೆ – ಅರ್ಧ ಕಪ್ ವೆನಿಲ್ಲಾ ಸಾರಾ – 1 ಚಮಚ ಕ್ರೀಮ್ ಚೀಸ್ – ಅರ್ಧ ಕಪ್ ಸಣ್ಣದಾಗಿ ಹೆಚ್ಚಿದ ಬಾದಾಮಿ – 1 ಚಮಚ ಬೆಣ್ಣೆ – ಕಾಲು ಕಪ್ ಹೆಚ್ಚಿದ ಗೋಡಂಬಿ…
Author: AIN Author
ಇತ್ತೀಚಿನ ದಿನಗಳಲ್ಲಿ ಬಿಯರ್ ಕುಡಿಯುವವರ ಸಂಖ್ಯೆ ಸಾಕಷ್ಟು ಹೆಚ್ಚಾಗಿದೆ. ಬೇಸಿಗೆಯಲ್ಲಿ ಬಿಯರ್ ಸೇವನೆ ಹೆಚ್ಚು. ಬಿಯರ್ ಆರೋಗ್ಯಕ್ಕೆ ಹಾನಿಕಾರಕವೆಂದು ಪರಿಗಣಿಸಲಾಗಿದೆ. ಬಿಯರ್ ಜೊತೆಗೆ ಈ 5 ಆಹಾರಗಳನ್ನು ಸೇವಿಸಿದರೆ ಅದು ವಿಷದಂತೆ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಬಿಯರ್ ಜೊತೆಗೆ ಈ ವಸ್ತುಗಳನ್ನು ತಿಂದರೆ ಮೂತ್ರಪಿಂಡವನ್ನು ಸಹ ಹಾನಿಗೊಳಿಸುತ್ತದೆ. ಬಿಯರ್ ಮತ್ತು ಟೊಮ್ಯಾಟೊ ಬಿಯರ್ ಕುಡಿಯುವಾಗ ಟೊಮೆಟೊ ಸಲಾಡ್ ತಿನ್ನಬೇಡಿ. ವಿಟಮಿನ್ ಸಿ ಟೊಮೆಟೊದಲ್ಲಿರುತ್ತದೆ. ಹುಳಿಯಾಗಿರುವುದರಿಂದ ಇದರಲ್ಲಿ ಟ್ಯಾನಿಕ್ ಆಮ್ಲವೂ ಕಂಡುಬರುತ್ತದೆ. ಟೊಮೆಟೊವನ್ನು ಬಿಯರ್‌ನೊಂದಿಗೆ ತಿನ್ನುವುದರಿಂದ ಚಡಪಡಿಕೆ, ಎದೆಯುರಿ ಮತ್ತು ವಾಂತಿ ಉಂಟಾಗುತ್ತದೆ. ಬಿಯರ್ ಮತ್ತು ಕ್ಯಾರೆಟ್ ಕ್ಯಾರೆಟ್ ಅನ್ನು ಬಿಯರ್ ಜೊತೆಗೆ ತಿನ್ನಬಾರದು. ಬಿಯರ್ ಮತ್ತು ಕ್ಯಾರೆಟ್ ಅನ್ನು ಒಟ್ಟಿಗೆ ಸೇವಿಸುವುದರಿಂದ ಯಕೃತ್ತಿನ ಆರೋಗ್ಯ ಹದಗೆಡುತ್ತದೆ. ಇದರಿಂದ ಇನ್ನೂ ಅನೇಕ ಸಮಸ್ಯೆಗಳು ಉದ್ಭವಿಸಬಹುದು. ಬಿಯರ್ ಮತ್ತು ಬೀನ್ಸ್ ಬಿಯರ್ ಮತ್ತು ಬೀನ್ಸ್ ಒಟ್ಟಿಗೆ ತಿನ್ನುವುದು ಆರೋಗ್ಯಕ್ಕೆ ಅಪಾಯಕಾರಿ. ಬೀನ್ಸ್ ಕಬ್ಬಿಣದ ಸಮೃದ್ಧಿಯೊಂದಿಗೆ ಬರುತ್ತದೆ. ಅದರೊಂದಿಗೆ ಬಿಯರ್ ಕುಡಿಯುವುದು ಹಾನಿಕಾರಕವಾಗಿದೆ. ಪರ್ಸಿಮನ್ ಮತ್ತು…
ನಿಯಾನ್-ಲಿಟ್ ಗಗನಚುಂಬಿ ಕಟ್ಟಡಗಳಿಂದ ಹಿಡಿದು ಪ್ರಾಚೀನ ದೇವಾಲಯಗಳಿಂದ ಕೂಡಿದ ಬಿದಿರಿನ ಕಾಡುಗಳವರೆಗೆ, ಜಪಾನ್‌ನಂತೆ ಎಲ್ಲಿಯೂ ಇಲ್ಲ. ಈ 12-ದಿನದ ಪ್ರವಾಸವು ಆಹಾರಪ್ರೇಮಿಗಳ ರಾಜಧಾನಿ ಒಸಾಕಾದಿಂದ ಟೋಕಿಯೊದ ನಗರದ ದೀಪಗಳಿಗೆ ಮತ್ತು ಹಿರೋಷಿಮಾ ಕೊಲ್ಲಿಯಲ್ಲಿರುವ ಮಿಯಾಜಿಮಾ ದ್ವೀಪದ ತೇಲುವ ಟೋರಿ ಗೇಟ್‌ಗೆ ನಿಮ್ಮನ್ನು ಕರೆದೊಯ್ಯುತ್ತದೆ. ದಾರಿಯುದ್ದಕ್ಕೂ, ನೀವು ಕ್ಯೋಟೋದಲ್ಲಿ ಗೀಷಾಗಳನ್ನು ನೋಡಬಹುದು, ಟಕಯಾಮಾದಲ್ಲಿ ಮಾದರಿಯ ಸಲುವಾಗಿ ಮತ್ತು ರಾಜಧಾನಿಯಲ್ಲಿ ಸುಮೋ ಕುಸ್ತಿಪಟುಗಳ ತರಬೇತಿಯನ್ನು ವೀಕ್ಷಿಸಬಹುದು. ನೀವು ಹೋಟೆಲ್‌ಗಳ ಶ್ರೇಣಿಯಲ್ಲಿ ಉಳಿಯಲು ಮತ್ತು ನಿಮ್ಮ ಸಹ ಪ್ರಯಾಣಿಕರೊಂದಿಗೆ ಕ್ಯಾರಿಯೋಕೆಯಲ್ಲಿ ನಿಮ್ಮ ಹೃದಯವನ್ನು ಹಾಡಲು ಅವಕಾಶವನ್ನು ಪಡೆಯುತ್ತೀರಿ. ಒಂದು ಪ್ರಯಾಣದಲ್ಲಿ ನಾವು ಹೇಗೆ ತುಂಬಾ ಹಿಂಡಬಹುದು? ಧನ್ಯವಾದ ಹೇಳಲು ನೀವು ಜಪಾನ್‌ನ ನಂಬಲಾಗದ ರೈಲು ನೆಟ್‌ವರ್ಕ್‌ಗಳನ್ನು ಹೊಂದಿದ್ದೀರಿ. ಜಪಾನ್ ಅನ್ನು ಅತ್ಯುತ್ತಮವಾಗಿ ಎಕ್ಸ್‌ಪ್ಲೋರ್ ಮಾಡುವ ಇನ್ನೊಂದು ಮಾರ್ಗವೆಂದರೆ ನಿಮ್ಮ ಸ್ವಂತ ಕಾಲುಗಳ ಮೇಲೆ ಎಕ್ಸ್‌ಪ್ಲೋರ್ ಮಾಡುವುದರಿಂದ ಇದರಲ್ಲೂ ನಿಮ್ಮ ಹೆಜ್ಜೆಗಳನ್ನು ಪಡೆಯಲು ಸಿದ್ಧರಾಗಿ ರೈಲು ಮೂಲಕ ಜಪಾನ್: ಗ್ರ್ಯಾಂಡ್ ಪ್ರವಾಸ ಬುಲೆಟ್ ಟ್ರೈನ್‌ನಲ್ಲಿ ಸವಾರಿ ಮಾಡುವ…
ಬೆಂಗಳೂರು:- ನಗರದ ಟಿ.ಸಿ. ಪಾಳ್ಯ ಜಂಕ್ಷನ್ ಬಳಿ ಸಂಚಾರ ದಟ್ಟಣೆ ನಿವಾರಿಸಲು ಪ್ರಾಯೋಗಿಕವಾಗಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ನಗರ ಸಂಚಾರಿ ಪೊಲೀಸರು ತಿಳಿಸಿದ್ದಾರೆ. ಟಿ.ಸಿ. ಪಾಳ್ಯದ ಕಡೆಯಿಂದ ಬೆಂಗಳೂರು ನಗರದ ಕಡೆಗೆ ಸಂಚರಿಸುವವರು ಒ.ಎಂ. ರಸ್ತೆ ಮಾರ್ಗವಾಗಿ ಭಟ್ಟರಹಳ್ಳಿ ಸಿಗ್ನಲ್‌ನಲ್ಲಿ ತಿರುವು ಪಡೆದು ಮುಂದಕ್ಕೆ ಸಂಚರಿಸಬೇಕು. ಹೊಸಕೋಟೆ ಕಡೆಯಿಂದ ಟಿಸಿ ಪಾಳ್ಯ ಕಡೆಗೆ ಸಂಚರಿಸುವವರು ಕೆಆರ್ ಪುರ ಸರ್ಕಾರಿ ಕಾಲೇಜು ಜಂಕ್ಷನ್ ಬಳಿ ತಿರುವು ಪಡೆದುಕೊಳ್ಳಬೇಕು. ಮೇಡಹಳ್ಳಿ ಕಡೆಯಿಂದ ಟಿಸಿ ಪಾಳ್ಯ ಕಡೆಗೆ ಸರ್ವಿಸ್ ರಸ್ತೆಯಲ್ಲಿ ಬರುವ ವಾಹನ ಸವಾರರು ಟಿಸಿ ಪಾಳ್ಯ ಜಂಕ್ಷನ್‌ಗಿಂತ ಮೊದಲು ಸಿಗುವ ಮೀಡಿಯನ್ ಓಪನ್ ಬಳಿ ಬಂದು ಒಎಂ ರಸ್ತೆ ಮೂಲಕ ಮುಂದಕ್ಕೆ ಚಲಿಸಬೇಕು ಎಂದು ಸಂಚಾರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪೀಣ್ಯ ದಾಸರಹಳ್ಳಿ:- ನಾಗಸಂದ್ರ ಮೆಟ್ರೊ ಸ್ಟೇಷನ್ ಬಳಿಯ ರಸ್ತೆಯು ದಿಢೀರ್ ಕುಸಿತಗೊಂಡಿದ್ದು, ಕಳಪೆ ಕಾಮಗಾರಿಗೆ ಮತ್ತೊಂದು ನಿದರ್ಶನವಾಗಿದೆ. ಐದು ದಿನಗಳ ಹಿಂದೆ ಭಾರಿ ವಾಹನವೊಂದು ಈ ದಾರಿಯಲ್ಲಿ ಚಲಿಸಿದ ಮೇಲೆ ರಸ್ತೆ ಕುಸಿದಿದೆ. ಡಾಂಬರು ಸಹಿತ ಕುಸಿದಿದೆ. ಇವತ್ತಿನವರೆಗೂ ಅದನ್ನು ದುರಸ್ತಿ ಮಾಡಿಲ್ಲ. ಬದಲಿಗೆ, ಗುಂಡಿಯ ಸುತ್ತ, ಕಲ್ಲು ಇಟ್ಟು, ದಾರ ಕಟ್ಟಲಾಗಿದೆ. ಇದರಿಂದ ಮೆಟ್ರೊ ರೈಲು ನಿಲ್ದಾಣಕ್ಕೆ ಬಂದು ಹೋಗುವವರಿಗೆ ತುಂಬಾ ತೊಂದರೆಯಾಗುತ್ತಿದೆ. ‘ನೀರಿನ ಸಂಪರ್ಕಕ್ಕಾಗಿ ಪೈಪ್ ಅಳವಡಿಸಲು ಈ ಭಾಗದಲ್ಲಿ ಗುಂಡಿ ತೆಗೆದಿದ್ದು, ಕಾಮಗಾರಿ ಮುಗಿದ ಮೇಲೆ ಸಮರ್ಪಕವಾಗಿ ಮುಚ್ಚಿ ರಸ್ತೆ ಮಾಡದ ಕಾರಣ, ಹೀಗೆ ಗುಂಡಿ ಬಿದ್ದಿದದೆ. ಬಿಡಬ್ಲ್ಯುಎಸ್‌ಎಸ್‌ಬಿ ಅಧಿಕಾರಿಗಳು ಗುಂಡಿ ಮುಚ್ಚದೇ ನಿರ್ಲಕ್ಷ್ಯವಹಿಸಿದ್ದಾರೆ’ ಎಂದು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ. ಮೆಟ್ರೊ ನಿಲ್ದಾಣದ ಮುಂಭಾಗದಲ್ಲಿ ನೀರಿನ ಪೈಪ್ ಒಡೆದಿತ್ತು. ಅದನ್ನು ಸರಿಪಡಿಸಿದ್ದೇವೆ. ಪೈಪ್ ಅನ್ನು ಇನ್ನೊಂದು ಕಡೆಗೆ ನೇರ ಸಂಪರ್ಕ ಕಲ್ಪಿಸಬೇಕು. ಅದಕ್ಕಾಗಿ ಹಾಗೆ ಬಿಟ್ಟಿದ್ದೇವೆ. ಶೀಘ್ರವೇ ಗುಂಡಿಯನ್ನು ಮುಚ್ಚಿ ಸರಿಪಡಿಸುತ್ತೇವೆ’ ಎಂದು ಜಲಮಂಡಳಿ ಎಂಜಿನಿಯರ್ ನಾಗರಾಜ್ ಹೇಳಿದ್ದಾರೆ.
IPL 2024 ಹರಾಜು, ಮಾರಾಟವಾದ ಮತ್ತು ಮಾರಾಟವಾಗದ ಆಟಗಾರರ ಸಂಪೂರ್ಣ ಪಟ್ಟಿ: ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ ಹರಾಜು ಕೋಷ್ಟಕವನ್ನು ಸಾಕಷ್ಟು ನಿರೀಕ್ಷಿತವಾಗಿ ಬೆಂಕಿ ಹಚ್ಚಿದರು. ವೇಗದ ಬೌಲಿಂಗ್ ಆಲ್‌ರೌಂಡರ್ ಅವರನ್ನು ಎಸ್‌ಆರ್‌ಹೆಚ್ ₹20.5 ಕೋಟಿಗೆ ಪಡೆದುಕೊಂಡಿತು, ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡರು. ನ್ಯೂಜಿಲೆಂಡ್‌ನ ಆಲ್‌ರೌಂಡರ್ ಡೇರಿಲ್ ಮಿಚೆಲ್ ₹ 14 ಕೋಟಿಗೆ ಹತ್ತಿರವಾಗಿದ್ದಾರೆ. ಅವರನ್ನು ಸಿಎಸ್‌ಕೆ ಆಯ್ಕೆ ಮಾಡಲಾಯಿತು. ₹ 11.75 ಕೋಟಿಗೆ ಖರೀದಿಸಿದ ಹರ್ಷಲ್ ಪಟೇಲ್‌ಗೆ ಪಿಬಿಕೆಎಸ್ ಬ್ಯಾಂಕ್ ಒಡೆಯಿತು. ಎರಡನೇ ಸೆಟ್‌ನಲ್ಲಿ ಶಾರ್ದೂಲ್ ಠಾಕೂರ್ (₹ 4 ಕೋಟಿ) ಮತ್ತು ರಚಿನ್ ರವೀಂದ್ರ (1.8 ಕೋಟಿ) ಅವರನ್ನು ಆಯ್ಕೆ ಮಾಡಿದ ಸಿಎಸ್‌ಕೆ ಆಲ್‌ರೌಂಡರ್‌ಗಳೊಂದಿಗೆ ಸಿಲುಕಿಕೊಂಡಿತು. ರಾಜಸ್ಥಾನ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಬಿಡ್ಡಿಂಗ್ ಯುದ್ಧದ ನಂತರ ವೆಸ್ಟ್ ಇಂಡೀಸ್ ಟಿ20 ನಾಯಕ ರೋವ್‌ಮನ್ ಪೊವೆಲ್ ಆರ್‌ಆರ್‌ಗೆ ₹ 7.40 ಕೋಟಿಗೆ ಮಾರಾಟವಾದರು. ₹1 ಕೋಟಿ ಮೂಲ ಬೆಲೆ ಹೊಂದಿದ್ದ ಪೊವೆಲ್, ಐಪಿಎಲ್…
ಬೆಂಗಳೂರು:- ಜಾತಿಗಣತಿ ಅನುಮಾನದ ಬಗ್ಗೆ ಸಿಎಂ ಗೆ ತಿಳಿಸಿದ್ದೇವೆ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ. ಜಾತಿ ಗಣತಿಗೆ ತಾವು ವಿರೋಧವಿಲ್ಲ, ಆದರೆ ಹಿಂದೆ ನಡೆದ ಗಣತಿ ವೇಳೆ ಎಲ್ಲರ ಮನೆಗಳಿಗೆ ಹೋಗಿಲ್ಲ, ಸರಿಯಾಗಿ ಸಮೀಕ್ಷೆ ನಡೆದಿಲ್ಲ ಎಂಬ ದೂರುಗಳು ಇವೆ. 7 ವರ್ಷಗಳ ಹಿಂದೆ ನಡೆದ ಗಣತಿ ಬಗ್ಗೆ ನಮ್ಮ ಅನುಮಾನವಿದೆ. ಹಾಗಾಗಿ ಹೊಸದಾಗಿ ಜಾತಿ ಗಣತಿ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ ಎಂದರು. ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಗಣತಿ ನಡೆಯಬೇಕು. ಅವಕಾಶ ವಂಚಿತರಿಗೆ ಹೆಚ್ಚಿನ ಅನುಕೂಲ ದೊರೆಯಬೇಕು ಎಂದು ಹೇಳಿದ್ದಾರೆ. ಈ ವಿಷಯದಲ್ಲಿ ನಮ್ಮ ಸಹಮತ ಇದೆ. ಆದರೆ ಏಳು ವರ್ಷಗಳ ಹಿಂದೆ ನಡೆದ ಗಣತಿ ಬಗ್ಗೆ ಅನುಮಾನ ಇದೆ. ಮನೆ ಮನೆಗಳಿಗೆ ಭೇಟಿ ನೀಡಿ ಗಣತಿ ಮಾಡಿಲ್ಲ ಎಂಬ ದೂರುಗಳು ಇವೆ. ಕೆಲವರು ಸರ್ಕಾರಿ ಸೌಲಭ್ಯಕ್ಕಾಗಿ ಜಾತಿ ಬಳಕೆ ಮಾಡುತ್ತಿದ್ದಾರೆ. ನಡೆದಿರುವ ಜಾತಿ ಗಣತಿಯ ಕುರಿತು ಇರುವ ಅನುಮಾನಗಳನ್ನು…
ನವದೆಹಲಿ:- ಬರ ಪರಿಹಾರ ಅಮಿತ್ ಷಾ ಜತೆ ಚರ್ಚೆ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯಗೆ ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರಾಜ್ಯದ ಬರ ಪರಿಹಾರ ಮನವಿಗೆ ಸಂಬಂಧಿಸಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಜತೆ ಮಾತುಕತೆ ನಡೆಸಿ, ಸೂಕ್ತ ಕ್ರಮಕ್ಕೆ ಸೂಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಸಂಸತ್ ಭವನದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರೊಂದಿಗೆ ಪ್ರಧಾನಿಯನ್ನು ಸಿದ್ದರಾಮಯ್ಯ ಭೇಟಿ ಮಾಡಿ, ರಾಜ್ಯದ ಬರ ಪರಿಸ್ಥಿತಿ ಮತ್ತು ಪರಿಹಾರ ಕೋರಿ ಸಲ್ಲಿಸಲಾಗಿರುವ ಮನವಿ ಬಗ್ಗೆ ಗಮನಸೆಳೆದಾಗ ಪಿಎಂ ಈ ಪ್ರತಿಕ್ರಿಯೆ ನೀಡಿದ್ದಾರೆ. ಬುಧವಾರ ಬೆಳಗ್ಗೆ ಅಮಿತ್ ಷಾ ಭೇಟಿಗೂ ಸಮಯ ಸಿಕ್ಕಿದ್ದು, ಬರ ಪರಿಹಾರದ ಬಗ್ಗೆ ಶೀಘ್ರ ಕ್ರಮ ಕೈಗೊಂಡು, ಹಣ ಬಿಡುಗಡೆಗೆ ಸಿಎಂ ಒತ್ತಾಯಿಸಲಿದ್ದಾರೆ. ಪ್ರಧಾನಿ ಭೇಟಿ ಬಳಿಕ ಸುದ್ದಿಗಾರರ ಜತೆ ಮಾಹಿತಿ ಹಂಚಿಕೊಂಡ ಸಿದ್ದರಾಮಯ್ಯ, ಅಮಿತ್ ಷಾ ನೇತೃತ್ವದ ಹೈ ಪವರ್ ಸಮಿತಿ ಸಭೆಯನ್ನು ತುರ್ತಾಗಿ…
ಆಧುನಿಕ ಜೀವನದ ಅವಿಭಾಜ್ಯ ಅಂಗವಾದ ಟೆಲಿವಿಶನ್ ಅನ್ನು ಮನೆಯಲ್ಲಿ ಯಾವ ಕೋಣೆಯ, ಯಾವ ದಿಕ್ಕಿನಲ್ಲಿಡಬೇಕು ಎಂಬುದೂ ವಾಸ್ತು ಶಾಸ್ತ್ರದ ಪ್ರಕಾರ ಮುಖ್ಯವಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಎಲ್ಲೆಂದರಲ್ಲಿ ಟಿವಿ ಹಾಕುವುದರಿಂದ ವಾಸ್ತು ದೋಷ ಉಂಟಾಗುತ್ತದೆ. ಇದರಿಂದ ಮನೆ ಮಾಲೀಕರು ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿ, ತೀವ್ರ ಆರ್ಥಿಕ ನಷ್ಟ ಅನುಭವಿಸುತ್ತಾರೆ ಎನ್ನಬಹುದು. ಹಾಗಿದ್ದರೆ ಮನೆಯಲ್ಲಿ ಟಿವಿಯನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎಂಬುದನ್ನು ಇಲ್ಲಿ ತಿಳಿಯೋಣ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಟಿ.ವಿ ಇಡಲು ಆಗ್ನೇಯ ಅಥವಾ ಪೂರ್ವ ದಿಕ್ಕು ಸರಿಯಾದ ದಿಕ್ಕು. ಈ ದಿಕ್ಕಿನಲ್ಲಿ ಟಿ.ವಿಯನ್ನು ಇಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದರಿಂದ ಧನಾತ್ಮಕ ಶಕ್ತಿಯು ಮನೆಗೆ ಪ್ರವೇಶಿಸುತ್ತದೆ ಎಂದು ನಂಬಲಾಗಿದೆ. ವಾಸ್ತು ಪ್ರಕಾರ ಟಿ.ವಿ ನೋಡುವಾಗ ಪೂರ್ವಕ್ಕೆ ಮುಖ ಮಾಡಬೇಕು. ಅಲ್ಲದೆ, ಮನೆಯ ಪ್ರವೇಶದ್ವಾರದ ಮುಂದೆ ಟಿವಿಯನ್ನು ಎಂದಿಗೂ ಇಡಬೇಡಿ ಎಂಬುದನ್ನ ನೆನಪಿಡಿ. ಈ ರೀತಿ ಮಾಡುವುದರಿಂದ ಮನೆಯಲ್ಲಿ ಸದಾ ಜಗಳ ನಡೆದು, ಕುಟುಂಬ ಸದಸ್ಯರ ನಡುವೆ ಕಲಹದ ವಾತಾವರಣ ನಿರ್ಮಾಣವಾಗುತ್ತದೆ.…
ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಬೈಕ್ ಕಳ್ಳರ ಹಾವಳಿ ಹೆಚ್ಚಾಗಿದೆ. ಮನೆ ಮುಂಭಾಗದ ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್ ಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದಾರೆ. ಅದರಂತೆ ನಿನ್ನೆ ತಡರಾತ್ರಿ ಯಲಹಂಕದಲ್ಲಿ ಕವಿತಾ ಎಂಬುವರ ಬೈಕ್ ಕಳ್ಳತನವಾಗಿದ್ದು, ಬೈಕ್ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮುಖಕ್ಕೆ ಕರ್ಚೀಪ್ ಕಟ್ಟಿಕೊಂಡು ಬಂದಿದ್ದ ಅಸಾಮಿಯಿಂದ ಕೃತ್ಯ ಎಸಗಲಾಗಿದೆ. ಯಲಹಂಕ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಜರುಗಿದೆ.