ಬೆಂಗಳೂರಿಗರೇ ಪಾಲಿಕೆಯ ಮತ್ತಷ್ಟು ಕೋವಿಡ್ ನಿರ್ಬಂಧಗಳನ್ನ ಎದುರಿಸಲು ಸಿದ್ಧರಾಗಿ. ಯಾಕಂದ್ರೆ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಹೆಚ್ಚಳವಾಗುವ ಭೀತಿ ಹಿನ್ನೆಲೆ ಕೋವಿಡ್ ಕಟ್ಟಿಹಾಕಲು ಬಿಬಿಎಂಪಿ ಮತ್ತೊಂದು ಪ್ಲಾನ್ ರೂಪಿಸಿದೆ. ನಗರಕ್ಕೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲು ಸಿದ್ಧತೆ ಕೂಡ ನಡೆಸಿದೆ. ಬೆಂಗಳೂರಿಗಾಗಿಯೇ ಸಿದ್ಧವಾಗ್ತಿರೊ ಪ್ರತ್ಯೇಕ ಗೈಡ್ಲೈನ್ಸ್ನಲ್ಲಿ ಏನೆಲ್ಲಾ ನಿರ್ಬಂಧಗಳ ಹೇರಿಕೆಯಾಗಲಿದೆ ಅನ್ನೋದ್ರ ಡಿಟೇಲ್ಸ್ ಇಲ್ಲಿದೆ… ಕೊರೊನಾ ದೇಶ ಬಿಟ್ಟು ತೊಲಗುವ ಯಾವ ಲಕ್ಷಣ ಕಾಣ್ತಿಲ್ಲ.ಅಲೆಗಳ ಮೇಲೆ ಅಲೆಗಾಗಿ ಬಂದು ಜನರನ್ನು ಹಿಂಡಿ ಹಿಪ್ಪೆ ಮಾಡ್ತಿದೆ.ಈಗಾಗಲೇ ಮೊದಲೆರಡು ಅಲೆಯಿಂದ ಬೆಂದುಹೋಗಿರೋ ಜನಕ್ಕೆ ಇದೀಗ ಹೊಸ ರೂಪಾಂತದಲ್ಲಿ ಬಂದಿರೋ ಕೊರೊನಾ ಕ್ರಿಮಿ ಮತ್ಗೆ ಆತಂಕ ಹುಟ್ಟಿಸಿದೆ.ಈಗಾಗಲೇ ಕೇರಳದಲ್ಲಿ ಸಾವಿನ ಕೇಕ್ ಹಾಕ್ತಿರೋ ಕೊರೊನಾ ಮಾಹಾಮರಿ ರಾಜ್ಯಕ್ಕೂ ಕಾಲಿಟ್ಟು ಬೆಂಗಳೂರು ನಗರದಲ್ಲಿ ಒಬ್ಬರನ್ನು ಬಲಿ ಕೂಡ ಪಡಿದದೆ.ಈ ಕ್ರೂರಿಯ ಅಟ್ಟಹಾಸಕ್ಕೆ ಎದುರಿ ಹೋಗಿರೋ ಬಿಬಿಎಂಪಿ ಆರಂಭದಲ್ಲಿ ಕೊರೊನಾ ಕಟ್ಟಿಹಾಕೋಕ್ಕೆ ಮುಂದಾಗಿದೆ. ಹೌದು..ಬೆಂಗಳೂರು ನಗರದಲ್ಲಿ ಮಹಾಮಾರಿ ಕೊರೊನೊ ಸೋಂಕಿತರ ಸಂಖ್ಯೆ ಹೆಚ್ಚಳವಾಗುವ ಮುನ್ಸೂಚನೆ ಸಿಕ್ಕಿದೆ. ಇದು ಬಿಬಿಎಂಪಿಗೆ ಆತಂಕ ಹುಟ್ಟಿಸಿದೆ.…
Author: AIN Author
ವಿಜಯಪುರ: ರಾಜ್ಯದಲ್ಲಿಯೂ ಕೋವಿಡ್ ಉಪತಳಿ ಜೆಎನ್.1 ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗುವದು ಎಂದು ವಿಜಯಪುರ ಡಿಸಿ ಟಿ.ಭೂಬಾಲನ ಹೇಳಿಕೆ ನೀಡಿದರು. ನಗರದಲ್ಲಿ ಮಾಧ್ಯಮಗಳ ಜೊತೆ ಸುದ್ದಿಗೋಷ್ಠಿ ನಡೆಸಿ, ಕೋವಿಡ್ -19 ನ ರೂಪಾಂತರಿ ಜೆ ಎನ್ 1 ವೈರಸ್ ಆತಂಕ ಶುರುವಾಗಿದೆ. ಸದ್ಯಕ್ಕೆ ನಮ್ಮ ಜಿಲ್ಲೆಯಲ್ಲಿ ಯಾವುದೇ ಆತಂಕ ಇಲ್ಲ ಪಕ್ಕದ ರಾಜ್ಯ ಕೇರಳ ಹಾಗೂ ತಮಿಳುನಾಡಿನಲ್ಲಿ ಸ್ವಲ್ಪ ಆತಂಕ ಇರುವ ಕಾರಣ. ಈಗಾಗಲೇ ನಮಗೆ ಕರ್ನಾಟಕ ಸರಕಾರದ ಆರೋಗ್ಯ ಇಲಾಖೆಯಿಂದ ಸುತ್ತೋಲೆ ಬಂದಿದೆ. ಜೆ ಎನ್ 1 ಇದು ಓಮಿಕ್ರಾನ್ ನ ಸಬ್ ವೇರಿಯಂಟ್ ಆಗಿದೆ ಕೋವಿಡ್ ನ ಲಕ್ಷಣಗಳೇ ಇದರಲ್ಲೂ ಇದೆ.ಕರ್ನಾಟಕದಲ್ಲಿ 70 ಕೋವಿಡ್ ಕೇಸ್ ಇದೆ ಕೇರಳದಲ್ಲಿ ಸುಮಾರು 2 ಸಾವಿರ ಕೇಸುಗಳಿವೆ ನಾವು ಗಾಬರಿ ಪಡುವ ಅವಶ್ಯಕತೆ ಇಲ್ಲ. 60 ವರ್ಷ ಮೇಲ್ಪಟ್ಟವರು, ಗರ್ಭಿಣಿಯರು, ವಿವಿಧ ರೋಗದಿಂದ ಬಳಲುತ್ತಿರುವವರು ಮಾಸ್ಕ ಧರಿಸಲೇ ಬೇಕು. ಗಾಬರಿ ಪಡುವ ಅವಶ್ಯಕತೆ ಇಲ್ಲ, ಆದರೂ ಮುಂಜಾಗೃತೆ ವಹಿಸಬೇಕಿದೆ…
ಬೆಂಗಳೂರು: ರಾಜ್ಯದಲ್ಲಿಯೂ ಕೋವಿಡ್ ಉಪತಳಿ ಜೆಎನ್.1 ಕಾಣಿಸಿಕೊಂಡಿದೆ. ವಿಶೇಷ ಅಂದ್ರೆ ಅದು ಈಗಾಗಲೇ ಬಂದು ಹೋಗಿದೆ. ಕಾರವಾರದ ಸದಾಶಿವಗಡದ ಯುವಕರೊಬ್ಬರಲ್ಲಿ 15 ದಿನಗಳ ಹಿಂದೆ ಈ ಸೋಂಕು ಪತ್ತೆಯಾಗಿತ್ತು. ಲಸಿಕೆ ಪಡೆದ ಎರಡ್ಮೂರು ದಿನಗಳಲ್ಲಿ ಆತ ಚೇತರಿಸಿಕೊಂಡಿದ್ದಾನೆ. ಈಗ ಆರ್ ಟಿಪಿಸಿಆರ್ ಟೆಸ್ಟ್ ನೆಗೆಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ನಾಳೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕೋವಿಡ್ ಮೀಟಿಂಗ್ ಏರ್ಪಾಡಿಸಿದ್ದು ನಾಳೆ ಮಧ್ಯಾಹ್ನ 1 ಗಂಟೆಗೆ ಗೃಹ ಕಚೇರಿ ಕೃಷ್ಣದಲ್ಲಿ ಸಭೆ ನಡೆಯಲಿದೆ. ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಜೊತೆ ಸಿಎಂ ಸಿದ್ದರಾಮಯ್ಯನವರು ಸಭೆ ನಡೆಸಿ ಮುಂದಿನ ಹಂತದ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ.
ಬೆಂಗಳೂರು : ರಷ್ಯಾ ಹಾಗೂ ಉಕ್ರೇನ್ ವಾರ್ ನಿಲ್ಲಿಸುತ್ತೇವೆ ಅಂತ ವಿಶ್ವಗುರು ಹೇಳಿಕೊಳ್ತಾರೆ. ಅದೇ ವಿಶ್ವಗುರು ವಿಶ್ವದ ಮುಂದೆ ಭಾರತದ ಮರ್ಯಾದೆ ಹರಾಜು ಹಾಕುತ್ತಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಕುಟುಕಿದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರೋಡ್ ನಿಂದ ಹಿಡಿದು ರಫೆಲ್ ತನಕ ಪ್ರತಾಪ್ ಸಿಂಹ ಮಾತನಾಡೋದು ಅಷ್ಟೇ ಅಲ್ಲ. ಪ್ರತಾಪ್ ಸಿಂಹ ಅಪರಾಧಿ ಸ್ಥಾನದಲ್ಲಿ ಇದ್ದಾರೆ. ಅವರ ತನಿಖೆ ಆಗಲೇ ಬೇಕು ಎಂದು ಆಗ್ರಹಿಸಿದರು. ವಿಪಕ್ಷ ನಾಯಕ ಆರ್. ಅಶೋಕ್ ಅವರು ನಮ್ಮ ನಾಯಕ ರಾಹುಲ್ ಗಾಂಧಿ ಬಗ್ಗೆ ಮಾತನಾಡುವ ಮಟ್ಟಕ್ಕೆ ಬೆಳೆದಿಲ್ಲ. ಬಿಜೆಪಿಯವರಿಗೆ ನಮ್ಮ ಲೋಪಗಳನ್ನು ಹೇಳಿಕೊಳ್ಳಲು ಆಗಲೇ ಇಲ್ಲ. ಬಿಜೆಪಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಮಾತೇ ಆಡಲಿಲ್ಲ. ಅದಕ್ಕೆ ಅವಕಾಶ ನೀಡಿದವರು ಸಭಾಧ್ಯಕ್ಷ ಖಾದರ್ ಹಾಗೂ ಸಭಾಪತಿ ಹೊರಟ್ಟಿ ಎಂದು ಹೇಳಿದರು.
ಬೆಂಗಳೂರು: ಪಕ್ಷಕ್ಕೆ ಡ್ಯಾಮೇಜ್ ಆಗುವ ಹೇಳಿಕೆ ನೀಡಬೇಡಿ. ವ್ಯಕ್ತಿಗತವಾಗಿ ಯಾರ ಬಗ್ಗೆಯೂ ಟೀಕೆ ಬೇಡ ಅಂತಾ ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯಗೆ (Renukacharya) ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ತಾಕೀತು ಮಾಡಿದ್ದಾರೆ. ಇಂದು ವಿಜಯೇಂದ್ರ ಅವರನ್ನು ರೇಣುಕಾಚಾರ್ಯ ಬಿಜೆಪಿ ಕಚೇರಿಯಲ್ಲಿ (BJP Office) ಭೇಟಿ ಮಾಡಿದ್ದರು. ಈ ವೇಳೆ ಮಾಧ್ಯಮಗಳಲ್ಲಿ ಮಾತಾಡಿ ಗೊಂದಲ ಮೂಡಿಸದಂತೆ ಬಿಜೆಪಿ ರಾಜ್ಯಾಧ್ಯಕ್ಷ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಮಾತಾಡದೇ ರೇಣುಕಾಚಾರ್ಯ ಅವರು ಬಿಜೆಪಿ ಕಚೇರಿಯಿಂದ ಹೊರಟಿದ್ದಾರೆ. ಈ ವೇಳೆ ಏನೂ ಮಾತಾಡದಂತೆ ಸೂಚಿಸಿದ್ದಾರೆ ಎಂದು ಹೇಳಿ ಹೋಗಿದ್ದಾರೆ. ಈ ಹಿಂದೆ ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹಾಗೂ ಮಾಜಿ ಸಚಿವ ವಿ.ಸೋಮಣ್ಣ (V Somanna) ಸೇರಿದಂತೆ ಕೆಲ ನಾಯಕರ ವಿರುದ್ಧ ರೇಣುಕಾಚಾರ್ಯ ಬಹಿರಂಗ ಹೇಳಿಕೆ ನೀಡುತ್ತಿದ್ದರು. ರೇಣುಕಾಚಾರ್ಯ ಹೇಳಿಕೆಗಳಿಂದ ಕೆಲ ಅಸಮಾಧಾನಿತರು ಕೆರಳಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷದ ಕಚೇರಿಗೆ ಕರೆದು ಇಂದು ಬಿವೈ ವಿಜಯೇಂದ್ರ ತಿಳಿ ಹೇಳಿದ್ದಾರೆ ಎನ್ನಲಾಗಿದೆ.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಅವರು ಇಂದು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಭೇಟಿ ಕುರಿತು ಸ್ಪಷ್ಟನೆಯನ್ನೂ ನೀಡಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂದು (ಬುಧವಾರ) ಮಾಜಿ ಸಿಎಂ ಕುಮಾರಸ್ವಾಮಿ ದೆಹಲಿಗೆ ಪ್ರಯಾಣ ಬೆಳೆಸಿದರು. ಈ ವೇಳೆ ಮಾತನಾಡಿದ ಅವರು, ದೆಹಲಿ ಬಿಜೆಪಿ ನಾಯಕರ ಭೇಟಿ ವಿಚಾರವನ್ನು ಅಲ್ಲಗಳೆದರು. ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸಂಬಂಧ ಯಾವುದೇ ಸೀಟು ಹಂಚಿಕೆ ಕುರಿತು ಚರ್ಚಗೆ ಹೋಗ್ತಿಲ್ಲ. ಬದಲಾಗಿ ವೈಯಕ್ತಿಕ ಕೆಲಸದ ನಿಮಿತ್ತ ಹೋಗುತ್ತಿದ್ದೇನೆ. ದೆಹಲಿಗೆ ಹೋಗೋದು ಏನ್ ವಿಶೇಷನಾ ಎಂದು ಕೇಳಿದರು.
ರಿಷಿ ಸ್ಪೀಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕರ್ನಾಟಕದ ಅತಿದೊಡ್ಡ ಬ್ಯೂಟಿ ಪೇಜೆಂಟ್ ರಿಷಿಸ್ ಮಿಸಸ್ ಕರ್ನಾಟಕ (Miss Karnataka) ಕಿರೀಟವನ್ನು ಕವಿತಾ ವೀರೇಂದ್ರ (Kavita Virendra)ತಮ್ಮದಾಗಿಸಿಕೊಂಡಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ನಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಖ್ಯಾತ ಬಾಲಿವುಡ್ ನಟಿ ಮಧುಬಾಲ ವಿಶೇಷ ಅತಿಥಿಯಾಗಿ ಆಗಮಿಸಿ ರೂಪದರ್ಶಿಗಳಿಗೆ ಪ್ರೋತ್ಸಾಹ ಕೊಟ್ಟರು ಈ ವೇಳೆ ಮಾತನಾಡಿದ ಮಧುಬಾಲ, ಈ ಕಾರ್ಯಕ್ರಮದಲ್ಲಿ ಭಾಗವಾಗಿರುವುದು ಖುಷಿ ಕೊಟ್ಟಿದೆ. ಇಂದು ಮಹಿಳೆಯರು ರಾಜಕೀಯ, ಸಾಹಿತ್ಯ, ಶಿಕ್ಷಣ ಮತ್ತು ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿ ತೋರಿಸಿದ್ದಾರೆ. ತಾಯಿಯಾಗಿ ಮಕ್ಕಳ ಲಾಲನೆ, ಪಾಲನೆ ಜೊತೆಯಲ್ಲಿ ತನ್ನ ಸೌಂದರ್ಯ ಮತ್ತು ಆರೋಗ್ಯದ ಮೇಲೆ ಗಮನಹರಿಸಬೇಕಿದೆ ಎಂದರು. ಸರ್ಕಾರದ ರಾಜಕೀಯ ದಿಗ್ಗಜರು, ಸಾಮಾಜಿಕ ಕಾರ್ಯಕರ್ತರು, ಉದ್ಯಮಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಕವಿತಾ ವೀರೇಂದ್ರ ವಿನ್ನರ್ ಆಗಿ ಹೊರಹೊಮ್ಮಿದ್ರೆ, ಪ್ರಿಯಾಂಕ ರಿಯಾ ಫಸ್ಟ್ ವಿನ್ನರ್ ಆಗಿ ಹಾಗೂ ಶಹಿಸ್ತಾ ನಾಜ್ ಸೆಕೆಂಡ್ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡರು. ರಿಷಿ ಸ್ಪೀಕ್ ಚಾರಿಟೇಬಲ್ ಟ್ರಸ್ಟ್…
ತುಮಕೂರು : ತುಮಕೂರಿನಲ್ಲಿ ಮೊದಲ ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಮಧುಗಿರಿ ಮೂಲದ ವ್ಯಕ್ತಿಗೆ ಪಾಸಿಟಿವ್ ಪತ್ತೆಯಾಗಿದೆ.ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಹೃದಯರೋಗ ಸಂಬಂಧ ಜಯದೇವ ಆಸ್ಪತ್ರೆಗೆ ಹೋಗಿದ್ದ ವ್ಯಕ್ತಿ ಈ ವೇಳೆ ಕೋವಿಡ್ ಪರೀಕ್ಷೆ ನಡೆಸಿದಾಗ ಪ್ರಕರಣ ಪತ್ತೆ ಜಯದೇವ ಆಸ್ಪತ್ರೆಯಲ್ಲೇ ಪ್ರತ್ಯೇಕವಾಗಿ ಚಿಕಿತ್ಸೆ. ಸೋಂಕಿತ ಕುಟುಂಬಸ್ಥರಿಗೆ ಕೋವಿಡ್ ಪರೀಕ್ಷೆ ನಡೆಸಿರುವ ಜಿಲ್ಲಾ ಆರೋಗ್ಯ ಇಲಾಖೆ ಸೋಂಕಿತ ಸಂಪರ್ಕಕ್ಕೆ ಬಂದವರ ಮೇಲೆ ನಿಗಾವಹಿಸಿರುವ ಆರೋಗ್ಯ ಇಲಾಖೆ ಡಿಎಚ್ಒ ಮಂಜುನಾಥ್ ಮಾಹಿತಿ.
ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ (Rachitha Ram) ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೈತುಂಬಾ ಸಿನಿಮಾಗಳ ನಡುವೆ ನಟಿ ರಚಿತಾ ಇದೀಗ ಸ್ವಿಜರ್‌ಲ್ಯಾಂಡ್‌ಗೆ ಹಾರಿದ್ದಾರೆ. ಸ್ವಿಸ್ ಟ್ರಡಿಷನಲ್ ಡ್ರೆಸ್‌ನಲ್ಲಿ ರಚಿತಾ ರಾಮ್ ಮಿಂಚಿದ್ದಾರೆ. ಸಂಜು ವೆಡ್ಸ್ ಗೀತಾ’ ಪಾರ್ಟ್ 2 (Sanju Weds Geetha 2) ಸಿನಿಮಾದ ಚಿತ್ರೀಕರಣಕ್ಕಾಗಿ ಸ್ವಿಜರ್‌ಲ್ಯಾಂಡ್‌ಗೆ ರಚಿತಾ & ಟೀಮ್ ಹೋಗಿದ್ದಾರೆ. ಸುಂದರ ತಾಣದಲ್ಲಿ ಶೂಟಿಂಗ್ ಭರದಿಂದ ಸಾಗುತ್ತಿದೆ ನಾಗಶೇಖರ್ ನಿರ್ದೇಶನದ ಸಿನಿಮಾದಲ್ಲಿ ‘ಸಂಜು ವೆಡ್ಸ್ ಗೀತಾ’ ಚಿತ್ರದಲ್ಲಿ ಶ್ರೀನಗರ ಕಿಟ್ಟಿ, ರಮ್ಯಾ ನಟಿಸಿ ಸೈ ಎನಿಸಿಕೊಂಡಿದ್ದರು. ಸಿನಿಮಾ ಸಕ್ಸಸ್ ಕಂಡಿತ್ತು. ಈಗ ಪಾರ್ಟ್ 2ನಲ್ಲಿ ಶ್ರೀನಗರ ಕಿಟ್ಟಿಗೆ ರಚಿತಾ ರಾಮ್ ಜೋಡಿಯಾಗಿದ್ದಾರೆ.
ಧಾರವಾಡ: ಬಿಲ್ ಪಾಸ್ ಮಾಡಲು ಹಣಕ್ಕೆ ಬೇಡಿಕೆ ಇಟ್ಡಿರುವ ಇಬ್ಬರು ಅಧಿಕಾರಿಗಳನ್ನ ಲೋಕಾಯುಕ್ತ ಅಧಿಕಾರಿಗಳು ರೇಡ್ ಮಾಡಿ ಬಲೆಗೆ ಕೇಡುವಲ್ಲಿ ಯಶಸ್ವಿಯಾಗಿದ್ದಾರೆ. ಧಾರವಾಡದ ಏತ ನೀರಾವರಿ ಅಧಿಕಾರಿಗಳಾದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಂಜುನಾಥ್ ಹಾಗೂ ಕಿರಿಯ ಎಂಜಿನಿಯರ್ ಪ್ರಕಾಶ್ ಹೊಸಮನಿ ಲೋಕಾ ಬಲೆಗೆ ಬಿದ್ದಿರುವ ಅಧಿಕಾರಿಗಳಾಗಿದ್ದಾರೆ. ಉತ್ತರ ಕನ್ನಡದ ಬಾಲಕೃಷ್ಣ ನಾಯ್ಕ ಎನ್ನುವ ಕಂಟ್ರಾಕ್ಟರ್ ಕಡೆಯಿಂದ ಬಿಲ್ ಪಾಸ್ ಗೆ ಹಣಕ್ಕೆ ಬೇಡಿಕೆ ಇಟ್ಟಿದ್ದರು . ಗುತ್ತಿಗೆದಾರ ಹಾವೇರಿಯ ಮೂರು ಕಡೆಗಳಲ್ಲಿ ರಸ್ತೆ ಕಾಮಗಾರಿ ಮಾಡಿದ್ದ ಬಾಲಕೃಷ್ಣ ಅವರ ಕಾಮಗಾರಿ ಬಿಲ್ ಪಾಸ್ ಮಾಡಲು ಧಾರವಾಡದ ಅಧಿಕಾರಿಗಳಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಮೊದಲು ಪೋನ್ ಪೇ ಮೂಲಕ 83 ಸಾವಿರ ಪಡೆದು ನಂತರ, ತಲಾ 50 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರಂತೆ. ಸದ್ಯ ಇಂದು ಒಂದು ಲಕ್ಷ ಹಣ ಪಡೆಯುವ ವೇಳೆ ರೆಡ್ ಹ‌್ಯಾಂಡಾಗಿ ಲೋಕಾ ಬಲೆಗೆ ಬಿದ್ದಿದ್ದಾರೆ. ಹಾವೇರಿ ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದಲ್ಲಿ ಲೋಕಾ ದಾಳಿ ಮಾಡಿ ಅಧಿಕಾರಿಗಳಿಬ್ಬರನ್ನ ವಶಕ್ಕೆ ಪಡೆದುಕ್ಕೊಂಡಿದ್ದಾರೆ…