Author: AIN Author

ಬಾಲಿವುಡ್ ನ ಹೆಸರಾಂತ ನಟಿ ಕಂಗನಾ ರಣಾವತ್ ರಾಜಕಾರಣಕ್ಕೆ ಬರುವ ವಿಚಾರ ಹಲವು ತಿಂಗಳಿಂದ ಭಾರೀ ಸದ್ದು ಮಾಡುತ್ತಿದೆ. ಅದರಲ್ಲೂ ಅವರು 2024 ಲೋಕಸಭಾ ಚುನಾವಣೆಗೆ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡುತ್ತಿದ್ದಾರೆ ಎನ್ನುವುದು ಚರ್ಚೆಗೂ ಕಾರಣವಾಗಿದೆ. ನಿಜವಾಗಿಯೂ ಕಂಗನಾ ಚುನಾವಣೆಗೆ ನಿಲ್ತಾರಾ? ಅವರಿಗೆ ಬಿಜೆಪಿ ಟಿಕೆಟ್ ಕೊಡುತ್ತಾ ಎನ್ನುವ ಕುತೂಹಲ ಮೂಡಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ಭೇಟಿ ಮಾಡುವ ಮೂಲಕ ಕಂಗನಾ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ. ಈ ಹಿಂದೆ ಕಂಗನಾ ಅವರ ತಂದೆಯೂ ಮಗಳ ರಾಜಕೀಯ ಭವಿಷ್ಯ ಕುರಿತಂತೆ ಮಾತನಾಡಿದ್ದರು. ತಂದೆ ಅಮರ್ದೀಪ್ ರನೌತ್ ರಾಜಕಾರಣದ ಬಗ್ಗೆ ಮಾತನಾಡಿ, ಮಗಳು 2024 ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಹೇಳಿದ್ದರು. ಆದರೆ, ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನುವುದನ್ನು ಹೇಳಿರಲಿಲ್ಲ. ಈ ಕುರಿತಂತೆ ನಡ್ಡಾ ಜೊತೆ ಕಂಗನಾ ಮಾತನಾಡಿದ್ದಾರೆ. ನಟಿ ಕಂಗನಾ ರಣಾವತ್, ರಾಜಕಾರಣಕ್ಕೆ (Politics) ಪ್ರವೇಶ ಮಾಡುತ್ತಾರಾ? ಮುಂದಿನ ಲೋಕಸಭಾ (Lok Sabha) ಚುನಾವಣೆಯಲ್ಲಿ (Elections) ಭಾಗಿ ಆಗ್ತಾರಾ…

Read More

ಬೆಂಗಳೂರು:- ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಚಳಿಯ ವಾತಾವರಣ ಹೆಚ್ಚಿದೆ. ರಾಜ್ಯದಾದ್ಯಂತ ಒಣ ಹವೆ ಇರುವ ಸಾಧ್ಯತೆ ಇದೆ. ಡಿ.21 ರಿಂದ 26ರ ವರೆಗೆ ಒಣ ಹವೆ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ ಮುಂದಿನ 24 ಗಂಟೆಗಳು ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕುವ ಬಹಳಷ್ಟು ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 26 ಮತ್ತು ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರುವ ಬಹಳಷ್ಟು ಸಾಧ್ಯತೆಗಳಿವೆ. ಇನ್ನು ಮಳೆಯ ಮುನ್ಸೂಚನೆ ಇಲ್ಲ ಆದರೂ ರಾಜ್ಯದ ಕೊಡಗು, ಹಾಸನ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿಅಲ್ಲಲ್ಲಿ ಚದುರಿದಂತೆ ಹಗುರ ಮಳೆ ಆಗಲಿದ್ದು ರಾಜ್ಯದ ಉಳಿದ ಭಾಗಗಳಲ್ಲಿ ಒಣ ಹವೆಯಿರುವ ಸಾಧ್ಯತೆಯಿದೆ. ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ನಗರ ಕೇಂದ್ರದ ಮಾಹಿತಿಯ ಪ್ರಕಾರ ಬೆಂಗಳೂರಿನಲ್ಲಿ 23.6 ° C ಗರಿಷ್ಠ ತಾಪಮಾನ ದಾಖಲಾಗಿದೆ. ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶ ಕುಸಿದಿದೆ.…

Read More

ದಕ್ಷಿಣ ಭಾರತದ ಖ್ಯಾತ ಸ್ಟಂಟ್ ಕೊರಿಯೋಗ್ರಾಫರ್ ರಾಮ-ಲಕ್ಷ್ಮಣ (Rama-Laxman) ಜೋಡಿ ಮತ್ತೆ ಕನ್ನಡ ಚಿತ್ರವೊಂದಕ್ಕೆ ಸಾಹಸ ದೃಶ್ಯಗಳನ್ನು ಕಂಪೋಸ್ ಮಾಡುತ್ತಿದೆ. ಧ್ರುವ ಸರ್ಜಾ ನಟನೆ, ಜೋಗಿ ಪ್ರೇಮ್ ನಿರ್ದೇಶನ ಮಾಡುತ್ತಿರುವ ಕೆಡಿ (KD) ಸಿನಿಮಾದ ಸಾಹದ ದೃಶ್ಯವೊಂದಕ್ಕೆ ಈ ಜೋಡಿ ಸ್ಟಂಟ್ ಕೊರಿಯೋಗ್ರಫಿ ಮಾಡುತ್ತಿದೆ. ಈಗಾಗಲೇ ಚಿತ್ರೀಕರಣದಲ್ಲೂ ಇವರ ತೊಡಗಿಕೊಂಡಿದ್ದಾರೆ. ಇದೇ ತಂಡದಿಂದ ಮತ್ತೊಂದು ತಾಜಾ ಸುದ್ದಿ ಬಂದಿದ್ದು, ಈ ಸಿನಿಮಾದಲ್ಲಿ ಧ್ರುವ ಸರ್ಜಾ ಅವರ ಅಣ್ಣನಾಗಿ ರಮೇಶ್ ಅರವಿಂದ್ ನಟಿಸಲಿದ್ದಾರೆ. ಸದ್ಯದಲ್ಲೇ ತಮ್ಮ ಭಾಗದ ಚಿತ್ರೀಕರಣದಲ್ಲೂ ಅವರು ಭಾಗಿಯಾಗಲಿದ್ದಾರೆ. ತಾರಾಗಣದ ಕಾರಣದಿಂದಾಗಿಯೇ ಈ ಸಿನಿಮಾ ಕುತೂಹಲ ಮೂಡಿಸಿದ್ದು, ರವಿಚಂದ್ರನ್, ಸಂಜಯ್ ದತ್, ಶಿಲ್ಪಾ ಶೆಟ್ಟಿ ಹೀಗೆ ಹೆಸರಾಂತ ಕಲಾವಿದರೇ ತಾರಾಗಣದಲ್ಲಿದ್ದಾರೆ. ಈ ಹಿಂದೆ ತಮ್ಮದೇ ಸಿನಿಮಾದಲ್ಲಿ ನಟಿಸಿದ್ದ ರೀಷ್ಮಾ ನಾಣಯ್ಯ (Reeshma Nanaiah) ಅವರಿಗೆ ಮತ್ತೊಂದು ಅವಕಾಶ ನೀಡಿದ್ದಾರೆ ಪ್ರೇಮ್. ಕೆಡಿ ಸಿನಿಮಾದಲ್ಲಿ ರೀಷ್ಮಾ ಅವರು ಮಚ್‌ಲಕ್ಷ್ಮೀ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸೂಪರ್ ಸ್ಟಾರ್‌ಗಳಿರುವ ತಾರಾಗಣ ಅಂದ್ರೆ ಅದು ಕೆಡಿ ಸಿನಿಮಾ.…

Read More

ಆನ್‌ಲೈನ್ ಪಾವತಿ ಕಷ್ಟ, ಗ್ರಾಮೀಣ ಭಾಗದಲ್ಲಿ ಯುಪಿಐ ಪಾವತಿ ಸಾಧ್ಯವೇ ಇಲ್ಲ ಎಂದು ಹೇಳುತ್ತಿದ್ದ ಮಂದಿಗೆ ಭಾರತ ಜನ ತಿರುಗೇಟು ನೀಡಿದ್ದಾರೆ. ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ಡಿಜಿಟಲ್ ಪಾವತಿಗಳಲ್ಲಿ ಗಣನೀಯ ಏರಿಕೆಯಾಗಿದ್ದು, ಕೇವಲ 5 ವರ್ಷದಲ್ಲಿ ವಹಿವಾಟು 92 ಕೋಟಿಯಿಂದ 8,375 ಕೋಟಿಗೆ ಏರಿಕೆಯಾಗಿದೆ ಎಂದು ಸರ್ಕಾರ ತಿಳಿಸಿದೆ. ಲೋಕಸಭೆಗೆ ಲಿಖಿತ ಉತ್ತರ ನೀಡಿರುವ ಕೇಂದ್ರ ಹಣಕಾಸು ಸಚಿವಾಲಯ, ಯುಪಿಐ ಪಾವತಿಗಳ ಗಣನೀಯ ವಿಸ್ತರಣೆಯಿಂದಾಗಿ ಕಳೆದ ಆರ್ಥಿಕ ವರ್ಷದಲ್ಲಿ ಚಲಾವಣೆಯಲ್ಲಿರುವ ಬ್ಯಾಂಕ್ ನೋಟುಗಳ ಬೆಳವಣಿಗೆಯನ್ನು 7.8%ಕ್ಕೆ ಇಳಿಸಲು ಸಹಾಯ ಮಾಡಿದೆ ಎಂದು ತಿಳಿಸಿದೆ. ಈ ಬಗ್ಗೆ ಲೋಕಸಭೆಗೆ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕೆ ಕರದ್ ಲಿಖಿತ ಉತ್ತರ ನೀಡಿದ್ದಾರೆ. ಯುಪಿಐ ವಹಿವಾಟುಗಳು ಗಣನೀಯ ಬೆಳವಣಿಗೆಯನ್ನು ಕಂಡಿದೆ. ಆರ್ಥಿಕ ವರ್ಷ 2017-18ರಲ್ಲಿ 92 ಕೋಟಿ ಇದ್ದರೆ 2022-23 ಆರ್ಥಿಕ ವರ್ಷದಲ್ಲಿ ವಹಿವಾಟು 8,375 ಕೋಟಿಗೆ ಏರಿಕೆಯಾಗಿದೆ. ಇದರಿಂದ ಸಂಯುಕ್ತ ವಾರ್ಷಿಕ ಬೆಳವಣಿಗೆಯ ದರ (CAGR) 147% ಕ್ಕೆ ಏರಿಕೆಯಾಗಿದೆ…

Read More

ಬಾಗಲಕೋಟ:- ಸಂಸತ್ ಮೇಲಿನ ಸ್ಮೋಕ್ ಬಾಂಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಆರೋಪಿ ಮನೋರಂಜನ್ ನಂಟು ಬಾಗಲಕೋಟೆಗೂ ವ್ಯಾಪಿಸಿದೆ. ಇದೀಗ ಆರೋಪಿ ಮನೋರಂಜನ್‌ ಸಹಪಾಠಿ ನಗರದ ಸಾಯಿಕೃಷ್ಣ ಜಗಲಿಯನ್ನು ದಿಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಿಲ್ಲಿಯ ನಾಲ್ವರು ಅಧಿಕಾರಿಗಳ ತಂಡ 30 ವರ್ಷದ ಸಾಯಿಕೃಷ್ಣರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ನವ ನಗರ ಪೊಲೀಸ್‌ ಠಾಣೆಯಲ್ಲಿ ನಿರಂತರ ಎರಡು ಗಂಟೆ ವಿಚಾರಣೆ ನಡೆಸಿದ ಪೊಲೀಸರು ಮನೋರಂಜನ್‌ ಜತೆಗಿನ ಸ್ನೇಹ, ವಿಚಾರಧಾರೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ನಂತರ ಪೊಲೀಸ್‌ ಜೀಪ್‌ನಲ್ಲಿ ಸಾಯಿಕೃಷ್ಣ ಕರೆದೊಯ್ದರು. ಅವರನ್ನು ಹೆಚ್ಚಿನ ವಿಚಾರಣೆಗಾಗಿ ಹೊಸದಿಲ್ಲಿಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಬಿಐಟಿ ಎಂಜಿನಿಯರಿಂಗ್‌ ಕಾಲೇಜ್‌ನಲ್ಲಿ 2008ರಲ್ಲಿ ಮನೋರಂಜನ್‌ ಹಾಗೂ ಸಾಯಿಕೃಷ್ಣ ಒಟ್ಟಿಗೆ ಓದಿದ್ದರು. ಇಬ್ಬರೂ ಸ್ನೇಹಿತರಾಗಿದ್ದು, ಈಗಲೂ ಸಂಪರ್ಕದಲ್ಲಿದ್ದರು. ಈ ಹಿನ್ನೆಲೆಯಲ್ಲಿ ಮನೋರಂಜನ್‌ ವಿಚಾರಣೆ ಸಂದರ್ಭದಲ್ಲಿ ಡೈರಿಯಲ್ಲಿ ದೊರೆತ ಮಾಹಿತಿ ಆಧರಿಸಿ ದಿಲ್ಲಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಖಾಸಗಿ ಕಂಪನಿಯೊಂದರಲ್ಲಿ ಸಾಯಿಕೃಷ್ಣ ಕಾರ್ಯನಿರ್ವಹಿಸುತ್ತಿದ್ದಾರೆ. ನಿವೃತ್ತ ಡಿಎಸ್‌ಪಿ ವಿಠ್ಠಲ ಜಗಲಿಯವರ ಪುತ್ರನಾಗಿರುವ…

Read More

ಸ್ಪೇನ್‌: ನೋಡ ನೋಡುತ್ತಿದ್ದಂತೆಯೇ ಯುವತಿಯೊಬ್ಬಳ ಗಂಟಲಿನಲ್ಲಿ ರಾತ್ರಿ ತಿಂದ ಆಹಾರ ಸಿಕ್ಕಿಕೊಂಡಿದೆ. ಗಂಟಲು ನೋವಿನಿಂದಾಗಿ ಬೆಳಿಗ್ಗೆ ಹಲ್ಲುಜ್ಜುವ ಸಮಯದಲ್ಲಿ ಬ್ರಷ್​​​ ಸಹಾಯದಿಂದ ಸಿಕ್ಕಿಕೊಂಡಿರುವ ಆಹಾರ ಹೊರತೆಗೆಯಲು ಪ್ರಯತ್ನಿಸಿದ್ದಾಳೆ. ಪರಿಣಾಮ ಹಲ್ಲುಜ್ಜುವ ಬ್ರಷ್ ಆಕೆಯ​​​​​ ಗಂಟಲಲ್ಲಿ ಸಿಕ್ಕಿಕೊಂಡಿದೆ. ಈ ಸಮಯದಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು,ತಕ್ಷಣ ಆಕೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಮಾರು ಮೂರ್ನಾಲ್ಕು ಗಂಟೆಗಳ ವೈದ್ಯರ ಹರಸಾಹಸದ ನಂತರ ಬ್ರಷ್​​ ಹೊರಕ್ಕೆ ತೆಗೆಯಲಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ವರದಿಗಳ ಪ್ರಕಾರ ನವೆಂಬರ್ 29 ರಂದು ಈ ಘಟನೆ ನಡೆದಿದೆ. ಯುವತಿ ರಾತ್ರಿ ಊಟದ ವೇಳೆ ಮಾಂಸವನ್ನು ತಿಂದಿದ್ದಳು. ಆದರೆ ಮಾಂಸದ ಮೂಳೆ ಗಂಟಲಿಗೆ ಸಿಲುಕಿಕೊಂಡಿದ್ದು,ಉಸಿರಾಡಲು ಕಷ್ಟ ಪಡುವಂತಾಗಿದೆ. ಆದರೆ ಬೆಳಿಗ್ಗೆ ಹಲ್ಲುಜ್ಜುವ ಸಮಯದಲ್ಲಿ ಬ್ರಷ್​​​​ ಬಳಸಿ ಆಹಾರ ಹೊರತೆಗೆಯಲು ಪ್ರಯತ್ನಿಸಿದ್ದಾಳೆ. ಪರಿಣಾಮ 8 ಇಂಚಿನ ಟೂತ್ ಬ್ರಷ್ ಆಕೆಯ​​​​​ ಗಂಟಲಲ್ಲಿ ಸಿಕ್ಕಿಕೊಂಡಿದೆ. ಆಕೆಯ ಒದ್ದಾಟ ಕಂಡು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ವೈದ್ಯರು ಕೂಡ ಅವರ ಸ್ಥಿತಿಯನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ. https://ainlivenews.com/hebburu-police-operation-thieves-wanted-by-five-police-stations-arrested/ ಅಂತಿಮವಾಗಿ, ಮೂರು…

Read More

ಹುಬ್ಬಳ್ಳಿ: ಕಾರ್ತಿಕ ಮಾಸದಂದು ಮಠ ಮಂದಿರಗಳಲ್ಲಿ ಬೆಳಗಿಸುವ ದೀಪಗಳು ಮನದ ಕತ್ತಲನ್ನು ದೂರ ಮಾಡಿ, ಬೆಳಕು ಪ್ರಜ್ವಲಿಸುವಂತೆ ಮಾಡುವುದರ ಜತೆಗೆ ಅಂಧಕಾರ ಹೋಗಲಾಡಿಸುತ್ತವೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು. ಹಳೇಹುಬ್ಬಳ್ಳಿಯ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರೀ ವೀರಭದ್ರೇಶ್ವರ ಟ್ರಸ್ಟ್ ಕಮಿಟಿ ವತಿಯಿಂದ ಏರ್ಪಡಿಸಿದ್ದ ಲಕ್ಷ್ಮ ದೀಪೋತ್ಸವ, ಬೆಳ್ಳಿ ಪಲ್ಲಕ್ಕಿ ಮೆರವಣಿಗೆ ಮತ್ತು ಅಗ್ನಿಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಭಕ್ತರು ಕಾರ್ತಿಕ ಮಾಸದಲ್ಲಿ ದೀಪ ಪ್ರಜ್ವಲಿಸಿ, ಜ್ಞಾನದ ಜ್ಯೋತಿ ಬೆಳಗಿಸುವ ಮೂಲಕ ಅಂಧಕಾರ ದೂರ ಮಾಡಬೇಕು. ಆಧುನಿಕ ಜಗತ್ತಿನ ಒತ್ತಡದ ಜೀವನ ಶೈಲಿಯಿಂದ ಹೊರಬರಲು ಇಂತಹ ಧಾಮಿರ್ಕ ಆಚರಣೆಗಳು ಸಹಕಾರಿಯಾಗಿವೆ. ಇದರಿಂದ ಆತ್ಮಶುದ್ಧಿಯಾಗಲಿದೆ ಎಂದು ಹೇಳಿದರು. ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಶೇಖರ ಮಟ್ಟಿ, ಉಪಾಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟರ್, ಜಾತ್ರೆ ಹಾಗೂ ಲಕ್ಷ ದೀಪೋತ್ಸವ ಸಮಿತಿ ಅಧ್ಯಕ್ಷ ಡಾ. ಎನ್.ಎ. ಚರಂತಿಮಠ, ಚಂದ್ರಶೇಖರ ಪಾಟೀಲ, ಈರಣ್ಣ ಬಲೂಚಗಿ, ಶಿವಯೋಗಿ ವಿಭೂತಿಮಠ, ಚಂದ್ರಶೇಖರ ಹುರಕಡ್ಲಿ, ವೀರಣ್ಣ ಹಳ್ಳಿಕೇರಿ, ರಾಚಯ್ಯ ವಾರಿಕಲ್ಮಠ,…

Read More

ಬೆಂಗಳೂರು:- ಖಾಸಗಿ ದೇವಾಲಯ ಮುಜರಾಯಿ ಇಲಾಖೆಗೆ ಒಳಪಡಿಸುವ ಯತ್ನ ನಡೆಯುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ ಈ ಸಂಬಂಧ ಟ್ವೀಟ್ ಮಾಡಿರುವ ಅವರು, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಮಾಹಿತಿ ಕೊರತೆಯಿದೆ. ನಮ್ಮ ಸರ್ಕಾರ ಬಂದ ಮೇಲೆ ಯಾವುದೇ ರೀತಿಯ ನೋಟಿಸ್ ಜಾರಿಮಾಡಿಲ್ಲ. ಖಾಸಗಿ ದೇವಾಲಯ ಮುಜರಾಯಿ ಇಲಾಖೆಗೆ ಸೇರಿಸುವ ವಿಷಯ ಪ್ರಸ್ತಾಪಿಸಿಲ್ಲ ಎಂದು ಟ್ವೀಟ್ ಮೂಲಕ ರಾಮಲಿಂಗಾರೆಡ್ಡಿ ಸ್ಪಷ್ಟನೆ ನೀಡಿದರು. ನಮ್ಮ ಸರ್ಕಾರ ಬಂದ ಮೇಲೆ ಯಾವುದೇ ರೀತಿಯ ನೋಟೀಸ್ ಆಗಲಿ ಯಾವುದೇ ಖಾಸಗಿ ದೇವಾಲಯವನ್ನು ಮುಜರಾಯಿ ಇಲಾಖೆಗೆ ಸೇರ್ಪಡಿಸುವ ವಿಷಯ ಬಂದಿರುವುದಿಲ್ಲ , ರಾಜಕೀಯವಾಗಿ ಆರೋಪ ಮಾಡಿ ಜನರನ್ನು ದಾರಿ ತಪ್ಪಿಸುವ ಕೆಲಸ ರಾಜ್ಯಾಧ್ಯಕ್ಷರು ಮಾಡುತ್ತಿದ್ದಾರೆ ಎಂದರು. ಹಿಂದಿನ ಅವರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೆಚ್ಚು ಖಾಸಗಿ ದೇವಾಲಯಗಳನ್ನು ಮುಜರಾಯಿ ಇಲಾಖೆಗೆ ಒಳಪಡಿಸಿರುತ್ತಾರೆ. ಬಿಜೆಪಿ ಬೆಂಬಲಿತ ಕೆಲ ಹಿಂದೂ ಸಂಘಟನೆಗಳು ಈ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು. ಇದನ್ನು ಬಳಸಿಕೊಂಡು ರಾಜಕೀಯ…

Read More

ಭೋಪಾಲ್: ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 20 ವರ್ಷದ ಯುವಕನೊಬ್ಬನನ್ನು ಇಂದೋರ್ (Indore) ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಪ್ರವೀಣ್ ಸಿಂಗ್ ಧಾಕಡ್ (24) ಎಂದು ಗುರುತಿಸಲಾಗಿದೆ. ಮೂಲತಃ ಗುಣಾ ಜಿಲ್ಲೆಯ ನಿವಾಸಿಯಾಗಿರುವ ಈತ ಲಿವ್- ಇನ್- ಪಾರ್ಟ್ನರ್‌ ನ ಕುತ್ತಿಗೆಗೆ ಕತ್ತರಿಯಿಂದ ಇರಿದು ಕೊಲೆ ಮಾಡಿದ್ದಾನೆ. ಸಂತ್ರಸ್ತೆ ಮತ್ತು ಆರೋಪಿ ಇನ್‍ಸ್ಟಾಗ್ರಾಮ್‍ನಲ್ಲಿ (Instagram) ಸ್ನೇಹಿತರಾಗಿ ಕಳೆದ ಕೆಲವು ದಿನಗಳಿಂದ ನಗರದ ಬಾಡಿಗೆ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. https://ainlivenews.com/if-the-scar-on-your-face-is-ruining-you-then-look-here ನಡೆದಿದ್ದೇನು..?: ಡಿಸೆಂಬರ್ 7 ರಂದು ರಾವ್ಜಿ ಬಜಾರ್ ಪ್ರದೇಶದಲ್ಲಿ ದಂಪತಿ ಬಾಡಿಗೆ ಮನೆಯಲ್ಲಿ ಮಹಿಳೆಯನ್ನು ಕೊಲ್ಲಲಾಯಿತು. ಎರಡು ದಿನಗಳ ನಂತರ ಡಿಸೆಂಬರ್ 9 ರಂದು ಪೊಲೀಸರು ಆಕೆಯ ದೇಹವನ್ನು ವಶಪಡಿಸಿಕೊಂಡರು ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ಅಭಿನಯ್ ವಿಶ್ವಕರ್ಮ ಸುದ್ದಿಗಾರರಿಗೆ ತಿಳಿಸಿದರು.  ಆರೋಪಿ ಪ್ರವೀಣ್, ಸಂತ್ರಸ್ತೆ ತನ್ನೊಂದಿಗೆ ದೈಹಿಕ ಸಂಬಂಧವನ್ನು ಹೊಂದಲು ನಿರಾಕರಿಸಿದಾಗ ಕೋಪಗೊಂಡು ಅವಳ ಕುತ್ತಿಗೆಗೆ ಕತ್ತರಿಯಿಂದ ಇರಿದಿದ್ದಾನೆ. ಪರಿಣಾಮ ಮಹಿಳೆ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಬಳಿಕ ಆರೋಪಿಗಳು…

Read More

ನಾಲಿಗೆಯನ್ನು ತಣಿಸುವ ರುಚಿಕರ ತರಕಾರಿ ಸಾರು ಮಾಡಿಕೊಳ್ಳುವ ಬಯಕೆ ನಿಮಗಾಗಿಲ್ಲವೆ. ಹಾಗದ್ರೆ ಕ್ಯಾರೆಟ್, ಮೂಲಂಗಿ, ಕ್ಯಾಪ್ಸಿಕಂ (ದಪ್ಪ ಮೆಣಸಿನ ಕಾಯಿ), ಹಸಿರು ಬಟಾಣಿ, ಬೀಟ್‍ರೂಟ್, ಎಲೆಕೋಸು, ಹೂಕೋಸು ಹೀಗೆ ತರಹೇವಾರಿ ತರಕಾರಿಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಿವೆ. ಇಂದು ರುಚಿಕರವಾದ ಆಲೂ ಕ್ಯಾಪ್ಸಿಕಂನ  ಕರಿಯನ್ನು ಮಾಡಿದರೆ ಬಿಸಿ ಬಿಸಿಯಾದ ಅನ್ನಕ್ಕೆ ಸೂಪರ್ ಆಗಿರುತ್ತದೆ. ಒಮ್ಮೆ ನೀವು ಮನೆಯಲ್ಲಿ ಮಾಡಲು ಪ್ರಯತ್ನಿಸಲು ಇಲ್ಲಿದೆ ಮಾಡುವ ವಿಧಾನ ಜೊತೆಗೆ ಬೇಕಾಗುವ ಸಾಮಗ್ರಿಗಳ ಪಟ್ಟಿ. ಬೇಕಾಗುವ ಸಾಮಗ್ರಿಗಳು: * ಆಲೂಗಡ್ಡೆ- 4 * ಕ್ಯಾಪ್ಸಿಕಂ – 3 * ಈರುಳ್ಳಿ – 1 * ಟೊಮೆಟೊ – 2 * ಬೆಳ್ಳುಳಿ – 1 * ಅರಿಶಿಣ ಪುಡಿ – 1 ಟೀ ಸ್ಪೂನ್ * ಖಾರದ ಪುಡಿ – 1 ಟೀ ಸ್ಪೂನ್ * ಜೀರಿಗೆ ಪುಡಿ – 2 1 ಟೀ ಸ್ಪೂನ್ * ಗರಂ ಮಸಾಲ ಪುಡಿ – 1 ಟೀ ಸ್ಪೂನ್…

Read More