ಪ್ರಶಾಂತ್ ವರ್ಮಾ ಆಕ್ಷನ್ ಕಟ್ ಹೇಳಿರುವ ತೇಜ ಸಜ್ಜ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಹನು-ಮಾನ್’ ಟೀಸರ್ ಬಿಡುಗಡೆಯಾಗಿದೆ. ಪ್ರೈಮ್ ಶೋ ಎಂಟಟೈನ್ಮೆಂಟ್ ಬ್ಯಾನರ್ ನಿರ್ಮಾಣದಲ್ಲಿ ಮೂಡಿ ಬರ್ತಿರುವ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದೆ. ಟ್ರೇಲರ್ ಝಲಕ್ ಮೂಲಕ ಪ್ರೇಕ್ಷಕರೆದುರು ಸೂಪರ್ ಹೀರೋ ‘ಹನುಮಾನ್’ ದರ್ಶನ ಕೊಟ್ಟಿದ್ದಾರೆ. ನಿರ್ದೇಶಕ ಪ್ರಶಾಂತ್ ವರ್ಮಾ ಭಾರತದ ಮೊದಲ ಸೂಪರ್ ಹೀರೋ ‘ಹನು-ಮಾನ್’ ಬಗ್ಗೆ ಕಥೆ ಹೆಣೆದು ಪ್ಯಾನ್ ಇಂಡಿಯಾ ನಿರ್ದೇಶಕನಾಗಿ ಹೊರ ಹೊಮ್ಮುತ್ತಿದ್ದಾರೆ. ಚಿತ್ರದಲ್ಲಿ ನಾಯಕ ನಟನಾಗಿ ತೇಜ ಸಜ್ಜ ನಟಿಸುತ್ತಿದ್ದು, ಚಿತ್ರಕ್ಕಾಗಿ ಭರ್ಜರಿ ತಯಾರಿ ನಡೆಸಿರೋದು ಟ್ರೇಲರ್ ನೋಡಿದಾಗಲೇ ತಿಳಿದು ಬರುತ್ತೆ. ಚಿತ್ರದಲ್ಲಿ ನಾಯಕಿಯಾಗಿ ಅಮೃತಾ ಐಯ್ಯರ್ ನಟಿಸಿದ್ದಾರೆ. ಟ್ರೇಲರ್ ಸಖತ್ ಪ್ರಾಮಿಸಿಂಗ್ ಆಗಿದ್ದು, ನಾಯಕ ನಟ ತೇಜ ಸಜ್ಜ ಲುಕ್, ಚಿತ್ರದ ಮೇಕಿಂಗ್, ಕ್ಯಾಮೆರಾ ವರ್ಕ್, ಮ್ಯೂಸಿಕ್ ಎಲ್ಲವೂ ಗಮನ ಸೆಳೆಯುತ್ತಿದೆ. ಯಥೋ ಧರ್ಮ ತತೋ ಹನುಮಾ… ಯಥೋ ಹನುಮ ತತೋ ಜಯ… (ಎಲ್ಲಿ ಸದಾಚಾರವಿದೆಯೋ ಅಲ್ಲಿ ಹನುಮಂತನು,…
Author: AIN Author
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಮಹಾಮಾರಿ ಮತ್ತೆ ತಲೆದೂರಿದ್ದು ಇದರ ಅಟ್ಟಹಾಸಕ್ಕೆ 76 ವರ್ಷದ ವೃದ್ಧ ಬಲಿಯಾಗಿದ್ದು ಇದು ರಾಜ್ಯದ ಎರಡನೇ ಕೇಸ್ ಆಗಿರುತ್ತದೆ. ಬೆಂಗಳೂರಿನ ಜೆಪಿ ನಗರದದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ವ್ಯಕ್ತಿ ಸಾರಿ ಲಕ್ಷಣಗಳಿಂದ ಬಳಲುತ್ತಿದ್ದ ವೃದ್ಧ .76 ವರ್ಷದ ವೃದ್ದನಿಗೆ ಉಸಿರಾಟದ ಸಮಸ್ಯೆಇತ್ತು ಉಸಿರಾಟದ ಸಮಸ್ಯೆ ಸೇರಿದಂತೆ ವಯೋ ಸಹಜ ಸಮಸ್ಯೆಯಿಂದ ಬಳಲುತ್ತಿದ್ದ ವೃದ್ಧ 12-09-23 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧ ಡಿ 17ರಂದು ಕೊವಿಡ್ ನಿಂದ ಮೃತಪಟ್ಟಿದ್ದಾರೆ ಬೆಂಗಳೂರಿನಲ್ಲಿ ಕೊವಿಡ್ ನಿಂದ ಮೃತಪಟ್ಟ ಇಬ್ಬರು ಪ್ರಾಥಮಿಕ ಸಂಪರ್ಕಿತರನ್ನು ಕೊವಿಡ್ ಟೆಸ್ಟ್ ಗೆ ಒಳಪಡಿಸಿರುವ ಆರೋಗ್ಯ ಇಲಾಖೆ
ಬೆಂಗಳೂರು : ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಆಗಿದ್ದು, ಸೀಟು ಹಂಚಿಕೆ ವಿಚಾರ ಮುನ್ನೆಲೆಗೆ ಬಂದಿದೆ. ಈ ಸಂಬಂಧ ಬಿಜೆಪಿ ವರಿಷ್ಠರೊಂದಿಗೆ ಮಾತುಕತೆ ನಡೆಸಿ ಅಂತಿಮಗೊಳಿಸಲು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಇನ್ನೂ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಸಹ ದೆಹಲಿಯಲ್ಲಿಯೇ ತಂಗಿದ್ದಾರೆ. ಹೀಗಾಗಿ, ಬಿಜೆಪಿ ವರಿಷ್ಠರ ಜೊತೆ ಚರ್ಚಿಸಲು ಸೂಕ್ತವಾಗಿದೆ. ಸೀಟು ಹಂಚಿಕೆ ವಿಚಾರವಾಗಿ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಸಮಾಲೋಚನೆ ನಡೆಸಿ ಅಂತಿಮಗೊಳಿಸುವ ಸಾಧ್ಯತೆ ಇದೆ. ಲೋಕಸಭೆ ಚುನಾವಣೆಗೆ ಜೆಡಿಎಸ್ 4ರಿಂದ 5 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಆಕಾಂಕ್ಷೆಯನ್ನು ಹೊಂದಿದೆ. ಈ ವಿಚಾರವಾಗಿ ಬಿಜೆಪಿ ವರಿಷ್ಠರೊಂದಿಗೆ ಪ್ರಸ್ತಾಪಿಸಿ ಚರ್ಚಿಸಲಾಗುವುದು. ಈಗಾಗಲೇ ಹಾಸನ ಜೆಡಿಎಸ್ ಹಿಡಿತದಲ್ಲಿದ್ದು, ಈ ಕ್ಷೇತ್ರದ ಜೊತೆಗೆ ತುಮಕೂರು, ಕೋಲಾರ ಮತ್ತು ಉತ್ತರ ಕರ್ನಾಟಕದ ಒಂದು ಕ್ಷೇತ್ರ ಸೇರಿದಂತೆ ನಾಲ್ಕೈದು ಸ್ಥಾನಗಳನ್ನು ನೀಡುವಂತೆ ಕೇಳುವ ಸಾಧ್ಯತೆ ಇದೆ. ಮಾಜಿ ಪ್ರಧಾನಿ…
ಬೆಂಗಳೂರು: ಎಚ್.ಡಿ.ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರುವಾರ ಇಂದು ಬೆಳಿಗ್ಗೆ 11 ಗಂಟೆಗೆ ಭೇಟಿಯಾಗಿ ಸಮಾಲೋಚನೆ ನಡೆಸಲಿದ್ದಾರೆ. ಕಳೆದ ವಾರ ಪ್ರಧಾನಿ ಅವರನ್ನು ಭೇಟಿಯಾಗಬೇಕಿತ್ತು. ಆದರೆ, ಸಾಧ್ಯವಾಗಿರಲಿಲ್ಲ. ಗುರುವಾರ ಭೇಟಿ ಮಾಡಿ ಚರ್ಚಿಸುತ್ತೇನೆ. ಇದೊಂದು ಸೌಜನ್ಯದ ಭೇಟಿ’ ಎಂದು ಕುಮಾರಸ್ವಾಮಿ ತಿಳಿಸಿದರು. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಸೀಟು ಹಂಚಿಕೆ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಸಮಾಲೋಚನೆ ನಡೆಸಲಾಗುತ್ತದೆ. ಆದಷ್ಟು ಶೀಘ್ರದಲ್ಲಿ ಸೀಟು ಹಂಚಿಕೆ ಅಂತಿಮಗೊಳಿಸಲು ಯೋಜಿಸಲಾಗಿದೆ ಎಂದರು.
ಮೂಲಂಗಿ ಎಲೆಗಳಲ್ಲಿನ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ. ಇದು ಲಿವರ್, ಸ್ತನ, ಗರ್ಭಕಂಠ, ಪ್ರಾಸ್ಟೇಟ್ ಮತ್ತು ಶ್ವಾಸಕೋಶದ ಕ್ಯಾನ್ಸರ್ ನ ವಿರುದ್ಧ ಹೋರಾಡುತ್ತದೆ. ಇದರ ಎಲೆಗಳಲ್ಲಿ ಫೈಬರ್ ಅಂಶ ಸಮೃದ್ಧವಾಗಿದ್ದು, ಇದು ಹೊಟ್ಟೆಯ ಆರೋಗ್ಯವನ್ನು ಉತ್ತಮವಾಗಿಡುತ್ತದೆ ಮತ್ತು ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ. ಇದರ ಎಲೆಗಳಲ್ಲಿರುವ ಪೋಷಕಾಂಶಗಳು ಫ್ರಿ ರಾಡಿಕಲ್ಸ್ ಗಳ ವಿರುದ್ಧ ಹೋರಾಡುತ್ತದೆ. ಇದರಿಂದ ಅಂಗಾಂಶಗಳ ಮೇಲೆ ಅವುಗಳಿಂದಾಗುವ ಹಾನಿಯನ್ನು ತಪ್ಪಿಸುತ್ತದೆ. ಮೂಲಂಗಿ ಎಲೆಗಳು ಮೆದುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ನಿಮ್ಮ ಜ್ಞಾಪಕಶಕ್ತಿಯನ್ನು ಹೆಚ್ಚಿಸುತ್ತದೆ.
ಬಾಗಲಕೋಟೆ: ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದ ಹೊರವಲಯದ ಪೆಟ್ರೋಲ್ ಬಂಕ್ ಬಳಿ ಬೈಕ್ಗೆ ಕ್ರೊಸರ್ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಕೊನೆಯುಸಿರೆಳೆದಿರುವ ಘಟನೆ ನಡೆದಿದೆ. ಸಿದ್ದಪ್ಪ ಜಂಗಣ್ಣವರ (52) ಸಾವನ್ನಪ್ಪಿದ ರ್ದುದೈವಿ. ಬೈಕ್ಗೆ ಡಿಕ್ಕಿ ಹೊಡೆದ ಕ್ರೂಸರ್, ಪೆಟ್ರೋಲ್ ಬಂಕ್ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಇದರಿಂದ ಕ್ರೊಸರ್ನಲ್ಲಿದ್ದ 15 ಜನರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಅಮಿನಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ನಗರದ ಹಲವೆಡೆ ಇಂದು ಪವರ್ ಕಟ್ ಇರಲಿದೆ. ಬೆಂಗಳೂರಿನ ಉತ್ತರ ಭಾಗದ ಹಲವೆಡೆ ಬೆಳಗ್ಗೆ 10.30ರಿಂದ ಮಧ್ಯಾಹ್ನ 3.30ರವರೆಗೆ ಇಂದಿನಿಂದ ಗುರುವಾರದವರೆಗೆ ಹಲವೆಡೆ ವಿದ್ಯುತ್ ಕಡಿತವಾಗಲಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ನಿರ್ವಹಣಾ ಕಾರ್ಯದಿಂದಾಗಿ ಮೂರು ದಿನ ಪವರ್ ಕಟ್ ಇರಲಿದೆ. ಯುನಿಕ್ಸ್ ಕಾಲೋನಿ, ಇಂದಿರಾ ನಗರ, ಜಯನಗರ, ಹೊಂಡಾಡ ಸರ್ಕಲ್, ಭೋವಿ ಕಾಲೋನಿ, ಮಹಾಗಣಪತಿ ನಗರ, ಪುಷ್ಪಾಂಜಲಿ ಅಪಾರ್ಟ್‌ಮೆಂಟ್, ಶಿವನಹಳ್ಳಿ ಪಾರ್ಕ್, ಟೊಯೋಟಾ ಶೋ ರೂಂ, ಎಸ್ಟೀಮ್ ಕ್ಲಾಸಿಕ್ ಅಪಾರ್ಟ್‌ಮೆಂಟ್, ಮೌನೇಶ್ವರ ಬಡಾವಣೆ, ಆದರ್ಶ ನಗರ, ಆದರ್ಶ ಲೇಔಟ್, ಮಂಜುನಾಥ ನಗರ, 3ನೇ ಹಂತ 1ನೇ ಬ್ಲಾಕ್, ಜಾಲಿ ನಗರ, ಶಿವಾಜಿ ನಗರ, ಮಂಜುನಾಥ ನಗರ, ತಿಮ್ಮಯ್ಯ ರಸ್ತೆ, ಲುಮೋಸ್ ಅಪಾರ್ಟ್‌ಮೆಂಟ್, ಐಗೂರು, ಲಿಂಗದಹಳ್ಳಿ, ಎಂ.ಬಿ.ಕೇರಿ, ಚಲುವಾದಿ ಕೇರಿ ಮತ್ತು ಒಡ್ಡನಹಳ್ಳಿಯಲ್ಲಿ ಗುರುವಾರ ಪವರ್ಕಟ್ ಇರಲಿದೆ.
ಬೆಂಗಳೂರು:- ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ರೌಡಿಶೀಟರ್ಸ್, ಮೀಟರ್ ಬಡ್ಡಿ ನಡೆಸ್ತಿದ್ದವರ ಮನೆ ಮೇಲೆ ದಾಳಿ ಮಾಡಿದೆ. ಅನ್ನಪೂರ್ಣೇಶ್ವರಿ ನಗರ ರೌಡಿಶೀಟರ್ ಅನಿಲ್ ಕುಮಾರ್, ಯಶವಂತಪುರ ರೌಡಿಶೀಟರ್ ಗಿರೀಶ್ ಅಲಿಯಾಸ್ ರಾಬರಿ ಗಿರಿ, ವಿವೇಕನಗರ ರೌಡಿಶೀಟರ್ಗಳಾದ ನಾರಾಯಣ, ಹೇಮಂತ್, ರಾಮು, ಸೋಲದೇವನಹಳ್ಳಿ ರೌಡಿಶೀಟರ್ ತಿಮ್ಮ ಸೇರಿ ಅನೇಕರ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ತಲಾಶ್ ಮಾಡಿದ್ದಾರೆ. ಅನಿಲ ಮನೆಯಲ್ಲಿ ತಕಾರಾರು ಆಸ್ತಿಪತ್ರ, ಹಲವು ಚೆಕ್ಗಳು ಪತ್ತೆಯಾಗಿವೆ. ಅಧಿಕಾರಿಗಳು ಏಕಾಏಕಿ ರೌಡಿಶೀಟರ್ಸ್, ಮೀಟರ್ ಬಡ್ಡಿ ನಡೆಸ್ತಿದ್ದವರ ಮನೆ ಮೇಲೆ ದಾಳಿ ಮಾಡಿ ತಪಾಸಣೆ ನಡೆಸಿದ್ದಾರೆ. ಬೋರ್ ವೆಲ್ ಅನಿಲ ಮನೆಯಲ್ಲಿ ತಕಾರಾರು ಆಸ್ತಿಪತ್ರ, ಹಲವು ಚೆಕ್ಗಳು ಪತ್ತೆಯಾಗಿವೆ. ಅನಿಲ್ ಮೇಲೆ ಅಮಾಯಕರಿಗೆ ಬೆದರಿಸಿ ನಿವೇಶನ ಕಬಳಿಸಿರುವ ದೂರು ಕೇಳಿಬಂದಿತ್ತು. ಅಷ್ಟೇ ಅಲ್ಲದೆ ಮೀಟರ್ ಬಡ್ಡಿ ವ್ಯವಹಾರದ ಶಂಕೆ ಕೂಡ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಅನಿಲ್ ಮನೆ ಮೇಲೆ ಸಿಸಿಬಿ ತಂಡ ದಾಳಿ ಮಾಡಿದೆ. ಅನಿಲ್ ಮನೆಯಲ್ಲಿ ಸಿಕ್ಕ ದಾಖಲೆ…
ಗದಗ: ಮನುಷ್ಯನಲ್ಲಿರುವ ಅಜ್ಞಾನ ಎಂಬ ಕಗ್ಗತ್ತಲೆ ಹೊಡೆದೋಡಿಸಲು ಸುಜ್ಞಾನವೆಂಬ ದೀಪ ಹಚ್ಚಬೇಕು. ಅದಕ್ಕೆ ಗುರು ಉಪದೇಶ ಅತ್ಯಂತ ಅವಶ್ಯವಾಗಿ ಬೇಕೆಂದು ಹಿರಿಯ ಸಾಹಿತಿ ಐ. ಕೆ. ಕಮ್ಮಾರ ಹೇಳಿದರು. ಅವರು ದಕ್ಷಿಣ ಕಾಶಿ ಖ್ಯಾತಿಯ ಗದಗ ತಾಲೂಕಿನ ಹಿರೇಹಂದಿಗೋಳ ಗ್ರಾಮದ ಬೆಟ್ಟದ ಮೇಲೆ ವಿರಾಜಮಾನವಾಗಿರುವ ಪಂಚಲಿಂಗೇಶ್ವರ ದೇವರ ದೀಪೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ, ಸಿದ್ಧಿ ಪುರುಷರಾಗಿದ್ದ ಮಣಕವಾಡದ ಲಿಂ. ಮೃತ್ಯುಂಜಯ ಶರಣರು ಈ ಪಂಚಲಿಂಗೇಶ್ವರ ದೇವರ ಬಗ್ಗೆ ಕೊಂಡಾಡಿ ಜಾಗೃತ ಸ್ಥಳವನ್ನಾಗಿ ಮಾಡಿದ್ದಾರೆ. ಅಲ್ಲದೆ ಹಿರೇಹಂದಿಗೋಳ ಗ್ರಾಮದೊಂದಿಗೆ ಬಾಂಧವ್ಯ ಹೊಂದಿದ್ದರು. ಹೀಗಾಗಿ ಲಿಂ. ಮಣಕವಾಡ ಶ್ರೀಗಳವರ ಪಾದ ಸ್ಪರ್ಶದಿಂದ ಹಿರೇಹಂದಿಗೋಳ ಪಾವನವಾಗಿದೆ ಎಂದ ಅವರು, ಮಕ್ಕಳಿಗೆ ಉತ್ತಮ ಸಂಸ್ಕಾರ ವಿದ್ಯಾ ಬುದ್ಧಿ ಕೊಟ್ಟರೆ ಅವರ ಬದುಕು ಬಂಗಾರವಾಗುವುದು ಎಂದು ಅಪಾರ ಸಂಖ್ಯೆಯಲ್ಲಿ ಸೇರಿದ ಭಕ್ತರಲ್ಲಿ ಅದರಲ್ಲೂ, ವಿಶೇಷವಾಗಿ ತಾಯಂದಿರಲ್ಲಿ ಪ್ರಾರ್ಥಿಸಿಕೊಂಡರು. ನಿವೃತ್ತ ಉಪ ತಹಶೀಲ್ದಾರರಾಗಿದ್ದ ಗ್ರಾಮದ ವೇ.ಮೂ. ಶಿವಪುತ್ರಯ್ಯ ಯಲಬುರ್ಗಿಮಠ ಅವರು ದೀಪೋತ್ಸವ ಕಾರ್ಯಕ್ರಮಕ್ಕೆ ದೀಪ ಹಚ್ಚುವ ಮೂಲಕ…
ಮೈಸೂರು: ಪ್ರಧಾನಿಯಾಗಲು ಮಲ್ಲಿಕಾರ್ಜುನ ಖರ್ಗೆ ಸಮರ್ಥರು ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಹೇಳಿದ್ದಾರೆ. ಸಂಸತ್ತಿನ ವ್ಯವಹಾರ ಮಂತ್ರಿಗಳಿಗೆ ವಿಪಕ್ಷಗಳ ಕೆಲಸವೇ ಅರ್ಥವಾಗುತ್ತಿಲ್ಲ. ಪ್ರಶ್ನಿಸಿದವರನ್ನೇ ಅಮಾನತ್ತುಗೊಳಿಸುತ್ತಿದ್ದಾರೆ. ಮೂರು ಸುತ್ತಿನ ಬೇಹುಗಾರಿಕೆ ಭೇದಿಸಿ ಒಳ ಬಂದಿದ್ದಾರೆ ಅಂದರೆ ಅದರ ಹಿಂದೆ ಯಾರಿದ್ದಾರೆ? ಅದನ್ನ ಕೇಳಲು ಹೋದರೆ ಅಮಾನತು ಮಾಡಿದ್ದಾರೆ. ಹಾಗಾದರೇ ಸಂಸತ್ ಇರೋದು ಯಾಕೇ? ಸಂಸತ್ ಚರ್ಚೆ ಮಾಡಲಿಕ್ಕೆ ಇರುವ ಒಂದು ವೇದಿಕೆ ಅಲ್ಲವೇ ಎಂದರು. ಪ್ರಧಾನಿಗೆ ಮಾಧ್ಯಮ ಎದುರು ಬಂದು ನಿಲ್ಲುವ ತಾಕತ್ತು ಇಲ್ಲ. ಇಡೀ ಜಗತ್ತಿನ ಮುಂದೆ ಭಾರತದ ಮಾನ ಬೆತ್ತಲಾಗಿದೆ. ಸಂಸತ್ತನ್ನು ಸಂಸತ್ತಿನ ಪ್ರಶ್ನೋತ್ತರಗಳನ್ನು ದುರ್ಬಲಗೊಳಿಸುವುದು ಪ್ರಜಾಪ್ರಭುತ್ವಕ್ಕೆ ದೊಡ್ಡ ದ್ರೋಹ ಮಾಡಿದಂತೆ. ಇಂಥಾ ವ್ಯವಸ್ಥೆಯಲ್ಲಿ ಪ್ರಶ್ನೆ ಮಾಡೋದೆ ಬೇಡ ಅಂದರೆ ಹೇಗೆ? ಇದು ನಮ್ಮ ದೇಶದ ಸಂವಿಧಾನ ವ್ಯವಸ್ಥೆಗೆ ಮಾರಕ. 141 ಜನರ ಅಮಾನತನ್ನು ಹಿಂದಕ್ಕೆ ಪಡೆಯಬೇಕು. ಆರೋಗ್ಯಕರ ವಾತಾವರಣದಲ್ಲಿ ಚರ್ಚೆಗಳ ನಡೆಯಬೇಕು ಎಂದು ಭಾರತ ಸರ್ಕಾರವನ್ನು ನಾನು ಒತ್ತಾಯ ಮಾಡುತ್ತಿದ್ದೇನೆ. ಈ ಕೂಡಲೇ ಅಮಾನತು ಆದೇಶ…