Author: AIN Author

ಬೆಂಗಳೂರು: ನಾನು ದೆಹಲಿಗೆ ಹೋಗೋ ಪ್ರಮೇಯ ಬಂದಿಲ್ಲ. ಅಷ್ಟಕ್ಕೂ ನನಗೂ ದೆಹಲಿಗೂ ಟಚ್ ಇಲ್ಲ ಎಂದು ಶಾಸಕ ಎಸ್.ಆರ್ ವಿಶ್ವನಾಥ್ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಾರೋ ದೆಹಲಿ ಯಾತ್ರೆ ಹೋಗ್ತಾರೆ, ಹೈಕಮಾಂಡ್ ನಾಯಕರು ಸಿಗ್ತಾರಾ?. ನಮ್ಮ ವರಿಷ್ಠರು ಬಹಳ ಬ್ಯುಸಿ ಇರುತ್ತಾರೆ. ಲೋಕಸಭೆ ಚುನಾವಣೆಗೆ ನಿಲ್ಲು ಅಂತಾ ಯಡಿಯೂರಪ್ಪ ಹೇಳಿದಾಗ ನಾನು ಓಡಿ ಹೋಗಿದ್ದೆ ಎಂದರು. ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ನನ್ನ ಮಗನಿಗೆ ಟಿಕೆಟ್ ಕೊಡುವಂತೆ ಕೇಳಿದ್ದೇನೆ. ಸರ್ವೇ ಮಾಡಲಿ, ಯಾರಿಗೇ ಟಿಕೆಟ್ ಕೊಟ್ರೂ ಪರವಾಗಿಲ್ಲ ಎಂದು ಶಾಸಕರು ತಿಳಿಸಿದರು. ಉತ್ತರ ಕರ್ನಾಟಕ ಚರ್ಚೆ ಅಂತ ಕಾಂಪ್ರಮೈಸ್ ಆಗಿದ್ದೇವೆ. ಈಗ ಸರ್ಕಾರ ಬಂದು ಏಳು ತಿಂಗಳು ಆಗಿದೆ. ಇದು ಯಾರದೆ ವೈಫಲ್ಯ ಅಲ್ಲ. ಹೊಸದಾಗಿ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಇನ್ನೂ ಸುಧಾರಣೆ ಆಗಬೇಕಿದೆ. ನಾಯಕತ್ವದ ಕೊರತೆ ನಮಗಿಲ್ಲ ಎಂದರು

Read More

ಬೆಂಗಳೂರು : ಖಾಲಿ ಜಾಗಕ್ಕೆ ಕಾಂಪೌಂಡ್ ಹಾಕೋದು. ಗೋಮಾಳ , ಕೆರೆ ಜಾಗ ಕಬಳಿಸೋದು ರಿಯಲ್ ಎಸ್ಟೇಟ್ ಮಾಫಿಯಾದಲ್ಲಿ ಹೊಸದೇನು ಅಲ್ಲ. ಆದ್ರೆ ಇಲ್ಲೊಂದು ಗ್ಯಾಂಗ್ ದೇಶ ಆಸ್ತಿಯಾಗಿರೋ ಹೆಚ್ ಎ ಎಲ್ ಜಾಗಕ್ಕೆ ಕಣ್ಣಾಕಿ ಬಿಟ್ಟಿದೆ. ಹೆಚ್ ಎ ಎಲ್ ನ ಖಾಲಿ ಜಾಗವನ್ನ ತೋರಿಸಿ ಮಾರಟಾಕ್ಕಿದೆ ಅಂತ ಕೋಟಿ ಕೋಟಿ ವಂಚಿಸಿರೋ ಪ್ರಕರಣ ಬೆಳಕಿಗೆ ಬಂದಿದೆ. ಅದು ಹೆಚ್ ಎ ಎಲ್ ಜಾಗ ಮಾರಾಟ ಮಾಡಲು ಹೊರಟಿದ್ದು ಮೈನಾರಿಟಿ ಸಂಘದ ಅಧ್ಯಕ್ಷ ಅಂತೆ. ಸರ್ಕಾರಿ‌ ಜಾಗ ಸೇಲ್ ಗಿಟ್ಟು ಕೋಟಿ ಕೋಟಿ ಡೀಲ್ ಮಾಡಿದ್ದ ಕರ್ನಾಟಕ ಮೈನಾರಿಟಿ ಕಮಿಷನ್ ಅಧ್ಯಕ್ಷ ಬಿನಿಷ್ ಥಾಮಸ್ ಅಂಡ್ ಟೀಮ್ ವಿರುದ್ಧ ಹೆಚ್ ಎಎಲ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಸರ್ಕಾರಿ ಜಮೀನು ತೋರಿಸಿ ಜಾಯಿಂಟ್ ವೆಂಚರ್ ನಲ್ಲಿ ಬಿಜಿನೆಸ್ ಮಾತುಕತೆ ಮಾಡಿ ರಿಯಲ್ ಎಸ್ಟೇಟ್ ಉದ್ಯಮಿ‌ ಸುರೇಶ್ ಜೈನ್ ಗೆ ಕೋಟಿ ಕೋಟಿ ವಂಚಿಸಿದ್ಸಾರೆಂದು ದೂರು ದಾಖಲಾಗಿದೆ. ಮೈನಾರಿಟಿ ಸಂಘದ ಅಧ್ಯಕ್ಷ ಬಿನಿಷ್…

Read More

ಬೆಂಗಳೂರು: ಮನೆ ಮುಂದೆ ಆಟವಾಡ್ತಿದ್ದ ವೇಳೆ ಆಯಾತಪ್ಪಿ ಸಂಪ್ ಗೆ ಬಿದ್ದು ಮಗುವೊಂದು ಸಾವನ್ನಪ್ಪಿರುವ ಘಟನೆ  ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನೆನ್ನೆ ಸಂಜೆ ನಡೆದಿರೋ ಘಟನೆಯಾಗಿದ್ದು  ಆಯಿದಾ (5) ವರ್ಷ ಮೃತಪಟ್ಟ ಮಗುವಾಗಿದೆ. ನೀರು ಸಂಪ್ ಕ್ಯಾಪ್ ಓಪನ್ ಮಾಡಿ ಒಳ ಹೋಗಿದ್ದ ಬಾಡಿಗೆದಾರರು ಈ ವೇಳೆ ಮಗು ಆಟವಾಡಲು ಬಿಟ್ಟು ಮನೆಯೊಳಗೆ ಹೋಗಿದ್ದ ತಾಯಿ ತುಂಬಾ ಸಮಯದ ಬಳಿಕ ಮಗು ನೋಡಲು ಬಂದಾಗ ಸಂಪ್ ನಲ್ಲಿ ಬಿದ್ದಿದ್ದ ಮಗು ಮೃತಪಟ್ಟಿದೆ. ಘಟನೆ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಕೇಸ್‌ ಮುಂದುವರೆದಿದೆ.

Read More

ಬೆಂಗಳೂರು: ಇಲ್ಲಿಯವರೆಗೆ ಮೋದಿಗೆ (Narendra Modi) ಮ್ಯಾಚ್ ಆಗುವ ನಾಯಕತ್ವ ಸಿಕ್ಕಿರಲಿಲ್ಲ. ಈಗ ಖರ್ಗೆಯವರು (Mallikarjun Kharge) ಮೋದಿಗೆ ಮ್ಯಾಚ್ ಆಗುವಂತಹ ನಾಯಕ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಇಂಡಿಯಾ (INDIA) ಒಕ್ಕೂಟ ಸದಸ್ಯರು ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ (Prime Minister Candidate) ಪ್ರಸ್ತಾಪ ಮಾಡಿರುವುದು ಒಳ್ಳೆಯ ಬೆಳವಣಿಗೆ. ಮೋದಿ ವರ್ಸಸ್‌ ಖರ್ಗೆ ಎಂಬುದು ಖಂಡಿತ ಪರಿಣಾಮ ಬೀರುತ್ತದೆ ಎಂದು ಭವಿಷ್ಯ ನುಡಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ದಲಿತ ನಾಯಕ ಎನ್ನುವುದು ಮಾತ್ರವಲ್ಲ. ಖರ್ಗೆ ಅನುಭವದ ಆಧಾರದ ಮೇಲೆ ಅವರ ಹೆಸರು ಮುನ್ನೆಲೆಗೆ ಬಂದಿದೆ. ದಲಿತ ನಾಯಕ ಎಂಬ ಲಾಭ ನಷ್ಟ ಸೆಕೆಂಡರಿ. ಮಲ್ಲಿಕಾರ್ಜುನ ಖರ್ಗೆ ಒಬ್ಬ ಒಳ್ಳೆಯ ಸಂಸದೀಯ ಪಟು ಎಂದರು. ವಿರೋಧ ಪಕ್ಷದ ನಾಯಕರು, ರಾಜ್ಯ ಅಧ್ಯಕ್ಷರು ಆಗಿ ಅನುಭವ ಇದೆ. ರಾಷ್ಟ್ರೀಯ ಅಧ್ಯಕ್ಷರು ಅವರೊಬ್ಬ ಪ್ರಬುದ್ದ ರಾಜಕಾರಣಿ. ಇಂಡಿಯಾ ಒಕ್ಕೂಟ ತಂಡದಲ್ಲಿರುವ ಅತ್ಯಂತ ಹಿರಿಯ ನಾಯಕರಾಗಿದ್ದಾರೆ ಎಂದು ಹೇಳಿದರು.

Read More

ಬೆಂಗಳೂರು:  ಸಿಲಿಕಾನ್ ‌ಸಿಟಿಯಲ್ಲಿ  ಅಗ್ನಿ ಅವಘಡ ನಡೆದಿದ್ದು  ಮೀಟರ್ ಬೋರ್ಡ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿಕೊಂಡ ಬೆಂಕಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಐದು ಹಂತಸ್ಥಿನ ಕಟ್ಟಡದಲ್ಲಿ, ಏರಕ್ಕೂ ಹೆಚ್ಚು ಮಳಿಗೆಗಳಿದ್ದವು ಮಧ್ಯಾಹ್ನ 2.30ಕ್ಕೆ ಡ್ಯಾಷ್ ಬೋರ್ಡ್ ನಲ್ಲಿ ಕಾಣಿಸಿಕೊಂಡ ಬೆಂಕಿ ಸ್ಥಳಕ್ಕೆ ಆಗಮಿಸಿದ ಎರಡು ಅಗ್ನಿಶಾಮಕ ವಾಹನಗಳು ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ, ಕೇವಲ ಮೀಟರ್ ಗಳು ಸುಟ್ಟು ಹೋಗಿವೆ ಬೆಂಕಿ ನಂದಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ.

Read More

ಚಿಕ್ಕೋಡಿ: ಕಳೆದ 27 ದಿನಗಳಿಂದ ಅಥಣಿ ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಸೇವೆ ಖಾಯಮ್ಮಾತಿಗಾಗಿ ಧರಣಿ ಮಾಡುತ್ತಿರುವ ಅತಿಥಿ ಉಪನ್ಯಾಸಕರು ಈ ದಿನ ರಕ್ತದಾನ ಮಾಡಿ ಗಮನ ಸೆಳೆದರು.ತಹಸೀಲ್ದಾರ ಕಚೇರಿ ಆವರಣದಲ್ಲಿ ಧರಣಿ ಸ್ಥಳದಲ್ಲಿ ಸುಮಾರು ಹದಿನೈದಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ರಕ್ತದಾನ ಮಾಡಿದರು. ಈ ವೇಳೆ ಹಿರಿಯ ಉಪನ್ಯಾಸಕ ಪಿ ಎಲ್ ಪೂಜಾರಿ  ಮಾತನಾಡಿ, ಅತಿಥಿ ಉಪನ್ಯಾಸಕರ ಧರಣಿ ಸತ್ಯಾಗ್ರಹದಲ್ಲಿ ನಮ್ಮ ಅಥಣಿ ತಾಲೂಕಿನ ಸ್ನೇಹಿತರು ವಿಭಿನ್ನ ಮಾದರಿಯಲ್ಲಿ ಧರಣಿ ಮಾಡುತ್ತಿದ್ದು ಇಂದು ರಕ್ತದಾನ ಮಾಡಿ ಸತ್ಯಾಗ್ರಹ ಮಾಡುತ್ತಿದ್ದಾರೆ. ಇಂದು ಹಲವಾರು ಅಥಿತಿ ಉಪನ್ಯಾಸಕರು ರಕ್ತದಾನ ಮಾಡಿದ್ದು ಸುಮಾರು 20-25 ವರ್ಷಗಳಿಂದ ಸರಕಾರ ಸರ್ಕಾರಿ ಕಾಲೇಜುಗಳಲ್ಲಿ ನಮ್ಮನ್ನು ದುಡಿಸಿಕೊಳ್ಳುತ್ತಿದೆ. ನಾವು ಸರ್ಕಾರಕ್ಕೆ ರಕ್ತ ಕೊಟ್ಟೇವು ಹೊರತು – ಖಾಯಮಾತಿ ಬೇಡಿಕೆ ಬಿಡುವುದಿಲ್ಲ ಖಾಯಂ ಆಗುವವರೆಗೂ ನಮ್ಮ ಹೋರಾಟ ನಿಲ್ಲದು ಸುಮಾರು ಒಂದು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಮಾತ್ರ ಜಾಣ ಕುರುಡನಂತೆ ಮೌನ ವಹಿಸಿ ವರ್ತಿಸುತ್ತಿರುವುದು ನಮ್ಮನ್ನು ಆತಂಕ್ಕೆ ಈಡು ಮಾಡಿದೆ,…

Read More

ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಲ್ಲಿರೋ (Gruhalakshmi Scheme) ಸಮಸ್ಯೆಗಳ ನಿವಾರಣೆಗೆ ಸರ್ಕಾರ ಮುಂದಾಗಿದೆ. ಸಮಸ್ಯೆ ನಿವಾರಣೆಗೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕ್ಯಾಂಪ್ ಆಯೋಜಸಲು ಸರ್ಕಾರ ಆದೇಶ ಹೊರಡಿಸಿದೆ. ಡಿಸೆಂಬರ್ 27 ರಿಂದ 29ರ ವರೆಗೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕ್ಯಾಂಪ್ (Camp) ಆಯೋಜನೆಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಮೂಲಕ ಸುತ್ತೋಲೆ ಹೊರಡಿಸಲಾಗಿದೆ. ಪಿಡಿಓಗಳ (PDO) ನೇತೃತ್ವದಲ್ಲಿ ಕ್ಯಾಂಪ್ ಆಯೋಜನೆ ಆಗಲಿದ್ದು, ಈ ಕ್ಯಾಂಪ್ ನಲ್ಲಿ ಫಲಾನುಭವಿಗಳಿಗೆ ಇರುವ ಸಮಸ್ಯೆ ಸರಿಪಡಿಸಲು ಸೂಚನೆ ನೀಡಲಾಗಿದೆ. ಗೃಹಲಕ್ಷ್ಮಿ ಕ್ಯಾಂಪ್ ಹೇಗೆ!?: ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೇತೃತ್ವದಲ್ಲಿ ಕ್ಯಾಂಪ್‍ಗಳನ್ನು ಅಯೋಜಿಸತಕ್ಕದ್ದು. ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಎಲ್ಲಾ ತಾಂತ್ರಿಕ ಮತ್ತು ಬ್ಯಾಂಕ್ ಸಂಬಂಧಿಸಿದ ಸಮಸ್ಯೆಗಳನ್ನು ಈ ಕ್ಯಾಂಪ್‍ಗಳಲ್ಲಿ ಪರಿಹರಿಸತಕ್ಕದ್ದು. ಸ್ಥಳೀಯ ಬಾಪೂಜಿ ಸೇವಾ ಕೇಂದ್ರದ ಗಣಕ ಯಂತ್ರ ನಿರ್ವಾಹಕರು, ಅಂಗನವಾಡಿ ಕಾರ್ಯಕರ್ತರು ಮತ್ತು Electronic Delivery of Citizen Services (EDCS) ತಂಡಗಳು ಈ ಕ್ಯಾಂಪ್‍ಗಳಲ್ಲಿ ಭಾಗವಹಿಸತಕ್ಕದ್ದು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನ ಪ್ರತಿನಿಧಿಗಳು ಮತ್ತು ಇತರ…

Read More

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿಗಳಲ್ಲಿ ಕೊನೆಯ ಗ್ಯಾರಂಟಿಯಾದ ಯುವ ನಿಧಿಗೆ  ಡಿ. 26ರಿಂದ ನೋಂದಣಿಗೆ ಚಾಲನೆ ನೀಡಲಾಗುತ್ತಿದೆ ಎಂದು ಸಚಿವ‌ ಡಾ. ಶರಣಪ್ರಕಾಶ್ ಹೇಳಿದ್ದಾರೆ. ಹೌದು,ಯುವನಿಧಿಯ ಹಣ ಜ. 12ರಂದು ಖಾತೆಗೆ ನೇರವಾಗಿ ಜಮೆಯಾಗಲಿದೆ.ಆದರೆ, ಒಂದು ವೇಳೆ ಉದ್ಯೋಗ ಸಿಕ್ಕ ಮೇಲೆಯೂ ಇಲ್ಲವೇ ಉದ್ಯೋಗದಲ್ಲಿದ್ದೂ ಅರ್ಜಿ ಹಾಕಿ ಹಣ ಪಡೆದಿದ್ದು ಸಾಬೀತಾದರೆ ಅಂಥವರ ಮೇಲೆ ಕಾನೂನು ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು. ಅಲ್ಲದೆ, ಅವರು ಪಡೆದ ಅಷ್ಟೂ ಹಣವನ್ನು ವಾಪಸ್‌ ಪಡೆಯಲಾಗುವುದು ಎಂದು ಕೌಶಲ್ಯಾಭಿವೃದ್ಧಿ, ಜೀವನೋಪಯೋಗಿ ಸಚಿವ‌ ಡಾ. ಶರಣಪ್ರಕಾಶ್ ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಚಿವ‌ ಡಾ. ಶರಣಪ್ರಕಾಶ್ ಪಾಟೀಲ್, ಯುವ ನಿಧಿ ಯೋಜನೆಯ ದುರುಪಯೋಗದ ಬಗ್ಗೆ ಸರ್ಕಾರ ಕ್ರಮವಹಿಸಬೇಕಿದೆ. ಯುವನಿಧಿ ದುರುಪಯೋಗ ತಡೆಯುವ ಉದ್ದೇಶದಿಂದ ಈ ಕ್ರಮವನ್ನು ತೆಗೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು. ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮೆ ಜನವರಿ 12ರಂದು ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆ ಆಗಲಿದ್ದು, ಅಂದು ಶಿವಮೊಗ್ಗದಲ್ಲಿ…

Read More

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಜ್ಯೋತಿಷಿಯ ಮಾತು ಕೇಳಿ ಯುವತಿಯನ್ನು ಮನೆಯೊಳಗೆ ಕೂಡಿಟ್ಟು ಚಿತ್ರಹಿಂಸೆ ನೀಡಿರುವ ಘಟನೆ ಲಗ್ಗೆರೆಯಲ್ಲಿ (Laggere) ನಡೆದಿದೆ. ಸದ್ಯ 26 ವರ್ಷದ ಯುವತಿಯನ್ನು (Woman Home Arrest) ಬೆಂಗಳೂರು ಉತ್ತರ ವಲಯದ ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಶಶಿಧರ್ ಟೀಂ ನೇತೃತ್ವದಲ್ಲಿ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಇತ್ತ ಅಧಿಕಾರಿಗಳು ಯುವತಿ ಹಾಗೂ ಕುಟುಂಬಸ್ಥರ ಮಾಹಿತಿ ಕಲೆ ಹಾಕುತ್ತಿದ್ದಾರೆ. ಘಟನೆ ಏನು..?: ಮೂಲತಃ ಚನ್ನರಾಯಪಟ್ಟಣದ ಮಾದೇಹಳ್ಳಿ ಗ್ರಾಮದ ಯುವತಿ ಡಿಗ್ರಿ ಮುಗಿಸಿದ್ದಾಳೆ. ಈಕೆಗೆ 4 ತಿಂಗಳ ಹಿಂದೆ ಬೆನ್ನುನೋವು ಶುರುವಾಗಿತ್ತು. ಈ ವೇಳೆ ಯುವತಿ ತಮ್ಮ ಈ ಸಮಸ್ಯೆಯ ಕುರಿತು ವೈದ್ಯರ ಬಳಿ ತೆರಳದೆ ಜ್ಯೋತಿಷಿ ಮೊರೆ ಹೋಗಿದ್ದಾನೆ. ಅಂತೆಯೇ ಜ್ಯೋತಿಷಿ ಮಾತು ಕೇಳಿ ಕಳೆದ ಮೂರು ತಿಂಗಳಿನಿಂದ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿರಲಿಲ್ಲ. ಪರಿಣಾಮ ಆಕೆಯ ಆರೋಗ್ಯದಲ್ಲಿ ತೀವ್ರ ಸಮಸ್ಯೆಯಾಗಿದೆ. 3 ತಿಂಗಳಿನಿಂದ ಅರಿಶಿಣ ನೀರು, ನಿಂಬೆ ಹಣ್ಣು ರಸ ಕುಡಿಸ್ತಿದ್ರು. ಊಟನೇ ನೀಡ್ತಿರಲಿಲ್ಲ.…

Read More

ಮಹಾಂತೇಶ್ ವಿ.ಕೆ. ಅವರ ನಿರ್ಮಾಣದ ‘ಸತ್ಯಂ’ (Satyam) ಚಿತ್ರದ  ಆಡಿಯೋ ಬಿಡುಗಡೆ ಸಮಾರಂಭ ಗಂಗಾವತಿಯ ಜಗಜೀವನ ರಾಮ್ ಸರ್ಕಲ್ ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ  ನೆರವೇರಿತು. ಸಚಿವರಾದ ಶಿವರಾಜ್ ತಂಗಡಗಿ (Shivaraj Thangadagi) ಅವರು ಸತ್ಯಂ ಚಿತ್ರದ ಆಡಿಯೋ ಬಿಡುಗಡೆಗೊಳಿಸಿ ಮಾತನಾಡುತ್ತ ಬಾಂಧವ್ಯದ ಕಥೆ ಇಟ್ಟುಕೊಂಡು ಉತ್ತರ ಕರ್ನಾಟಕದವರೇ ಆದ  ನಿರ್ಮಾಪಕರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ನಮ್ಮ ಭಾಗದವರಾದ ಇವರನ್ನು ನಾವೆಲ್ಲ ಸೇರಿ ಗೆಲ್ಲಿಸಬೇಕು. ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಪ್ರತಿಭಾವಂತರಿದ್ದಾರೆ. ಅವರಿಗೆಲ್ಲ ಅವಕಾಶ ಸಿಗುವಂತಾಗಲಿ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು. ನಂತರ ನಿರ್ಮಾಪಕ ಮಹಾಂತೇಶ್ ಅವರು  ಮಾತನಾಡುತ್ತ ಇದು ನಮ್ಮ ಸಂಸ್ಥೆಯ ಎರಡನೇ ಚಿತ್ರ. ತಲೆಮಾರುಗಳ ನಡುವಿನ ಕಥಾಹಂದರ  ಇಟ್ಟುಕೊಂಡು ಒಂದೊಳ್ಳೇ ಸಿನಿಮಾ ಮಾಡಿದ್ದೇವೆ. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ತಯಾರಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ, ನಮ್ಮ ಜನರ ಸಮ್ಮುಖದಲ್ಲಿ  ಆಡಿಯೋ ಬಿಡುಗಡೆ  ಮಾಡಬೇಕೆಂಬುದು ನನ್ನ ಕನಸಾಗಿತ್ತು. ದಯವಿಟ್ಟು ನಮ್ಮ ಚಿತ್ರವನ್ನು ಥೇಟರಿನಲ್ಲಿ ವೀಕ್ಷಿಸುವ ಮೂಲಕ ಪ್ರೋತ್ಸಾಹಿಸಿ ಎಂದು ಹೇಳಿದರು.…

Read More