ಬೆಂಗಳೂರು: ಕೋವಿಡ್ ಕುರಿತ ಉನ್ನತ ಮಟ್ಟದ ಸಭೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸಿದ ಪತ್ರಿಕಾಗೋಷ್ಠಿಯ ಹೈಲೈಟ್ಸ್ ಹೀಗಿವೆ.. ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಸೇರಿ ಇನ್ನಿತರೆ ಯಾವುದಕ್ಕೂ ಕೊರತೆ ಆಗಬಾರದು ಈಗಿನ ಉಪತಳಿ JN.1 (ಒಮಿಕ್ರಾನ್ ಯಪತಳಿ) ಇದು ಅಪಾಯಕಾರಿಯಲ್ಲ ಈ ಉಪತಳಿ ರಾಜ್ಯದಲ್ಲಿ 92 ಪತ್ತೆಯಾಗಿದೆ. ಬೆಂಗಳೂರಲ್ಲಿ 80 ಪತ್ತೆಯಾಗಿದ್ದು 20 ಮಂದಿ ಮಾತ್ರ ಆಸ್ಪತ್ರೆಯಲ್ಲಿದ್ದಾರೆ. ಉಳಿದವರು ಮನೆಯಲ್ಲೇ ಇದ್ದಾರೆ. 20 ರಲ್ಲಿ 7 ಮಂದಿ ICU ನಲ್ಲಿದ್ದಾರೆ. ಆದರೆ ಇವರಿಗೆ ಇನ್ನಿತರೆ ಆರೋಗ್ಯ ಸಮಸ್ಯೆಗಳಿರುವ ಕಾರಣಕ್ಕೆ ICU ನಲ್ಲಿದ್ದಾರೆ ದಿನ 5000 ಟೆಸ್ಟ್ ಗಳು ನಡೆಯುತ್ತವೆ. ಬೆಂಗಳೂರಲ್ಲಿ ಸಾವಿರ ಪರೀಕ್ಷೆ ಕ್ಯಾಬಿನೆಟ್ ಉಪಸಮಿತಿ ರಚಿಸಲಾಗುವುದು, ಇವರು ಸಲಹಾ ಸಮಿತಿ ಜತೆ ಸಂಪರ್ಕದಲ್ಲಿದ್ದು ನಿರಂತರ ನಿಗಾ ಇಡಬೇಕು ತತ್ರಿಕ ಸಲಹಾ ಸಮಿತಿ ಸಲಹೆಗಳನ್ನು ಪೂರ್ತಿಯಾಗಿ ಜಾರಿ ಮಾಡಬೇಕು ಗಡಿ ಜಿಲ್ಲೆಗಳಲ್ಲಿ ಹೆಚ್ಚೆಚ್ಚು ಪರೀಕ್ಷೆಅಡಬೇಕು ಆಕ ಪಡುವ ಅಗತ್ಯವಿಲ್ಲ. ಎಚ್ಚರಿಕೆಯಿಂದಿದ್ದರೆ ಸಾಕು ಜಮಸಂದಣಿಯಲ್ಲಿ ಮಾಸ್ಕ್ ಧರಿಸಬೇಕು. 60 ವರ್ಷ ಮೇಲ್ಪಟ್ಟವರು…
Author: AIN Author
ಬೆಂಗಳೂರು ಗ್ರಾಮಾಂತರ: ಪ್ರೇಮಿಗಳಿಬ್ಬರು ರಸ್ತೆಯಲ್ಲಿ ಕಿತ್ತಾಟ ಮಾಡುವಾಗ ಮಧ್ಯಪ್ರವೇಶದ ಗುಂಪೊಂದು ಪ್ರೇಮಿಗೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇನ್ನು ಯುವ ಪ್ರೇಮಿಗಳಿಬ್ಬರೂ ಪ್ರೀತಿ ಮಾಡುತ್ತಿದ್ದರು ಇಬ್ಬರು ಕೂಡ ಮಂಗಳೂರಾಗಿದ್ದರು ಯುವತಿ ಆನೇಕಲ್ ಪಟ್ಟಣದ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದಳು ಇತ್ತೀಚಿಗೆ ಯುವತಿ ಯುವಕನ ಫೋನ್ ರಿಸೀವ್ ಮಾಡುತ್ತಿರಲಿಲ್ಲ ಹೀಗಾಗಿ ಇಂದು ಆನೇಕಲ್ ಪಟ್ಟಣಕ್ಕೆ ಆಗಮಿಸಿದ ಯುವಕ ಯುವತಿ ಭೇಟಿಯಾಗಿದ್ದರು ಬಳಿಕ ಜೊತೆಗೆ ಒಬ್ಬರಿಗೊಬ್ಬರು ಮಾತನಾಡಿಕೊಂಡು ಆನೇಕಲ್ ಪಟ್ಟಣದ ಬಸ್ ನಿಲ್ದಾಣದ ಬಳಿ ಬಂದಿದ್ದರು ಈ ಮಧ್ಯೆ ಇಬ್ಬರ ನಡುವೆ ಜಗಳ ಶುರುವಾಗಿದೆ. ಜಗಳ ಆಗುತ್ತಿದ್ದಾಗ ಮಧ್ಯಪ್ರವೇಶಿಸಿದ ಇನ್ನೊಂದು ಗುಂಪು ಯುವಕನಿಗೆ ನಡು ರಸ್ತೆಯಲ್ಲಿ ಪ್ರಾದೇಶಿಕ ಹೆಲ್ಮೆಟ್ ನಿಂದ ಹಲ್ಲೆ ಮಾಡಿದ್ದಾರೆ ಆನೇಕಲ್ ಪೊಲೀಸ್ ಠಾಣೆ ಸಮೀಪದಲ್ಲಿ ನಡೆದಿದ್ದು ಸದ್ಯ ಯುವಕ ಮತ್ತು ಯುವತಿಯನ್ನು ಆನೇಕಲ್ ಠಾಣೆಗೆ ಕರೆದು ಇದು ವಿಚಾರಣೆ ಮಾಡುತ್ತಿದ್ದಾರೆ.. ಈ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…
ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿಗಳಲ್ಲಿ ಕೊನೆಯ ಗ್ಯಾರಂಟಿಯಾದ ಯುವ ನಿಧಿ ಯೋಜನೆಯಡಿಯಲ್ಲಿ ನಿರುದ್ಯೋಗಿ ಪದವೀಧರರಿಗೆ ಮಾಸಿಕ ₹ 3,000 ಹಾಗೂ ಡಿಪ್ಲೊಮಾ ಪದವೀಧರರಿಗೆ ಮಾಸಿಕ ₹1,500 ಭತ್ಯೆ ನೀಡುವ ‘ಯುವನಿಧಿ’ ಯೋಜನೆಗೆ ಡಿ. 26ರಿಂದ ನೋಂದಣಿ ಆರಂಭವಾಗಲಿದೆ. ಹಾಗಿದ್ರೆ ಈ ಯೋಜನೆಗೆ ಯಾರೆಲ್ಲಾ ಅರ್ಹರು,ದಾಖಲೆಗಳುಬೇಕು,ಅರ್ಜಿ ಸಲ್ಲಿಕೆ ಹೇಗೆ..?ಎಂಬುವುದಕ್ಕೆ ಉತ್ತರ ಇಲ್ಲಿದೆ. ಅರ್ಹತೆ ಏನು? 2022- 23ನೇ ಸಾಲಿನಲ್ಲಿ ಉತ್ತೀರ್ಣರಾಗಿ 6 ತಿಂಗಳು ಉದ್ಯೋಗ ಸಿಗದೆ ಇರುವವರಿಗೆ ಈ ಯೋಜನೆಯ ಲಾಭ ಸಿಗಲಿದೆ. ಕರ್ನಾಟಕದಲ್ಲಿ ಕನಿಷ್ಠ 6 ವರ್ಷದವರೆಗೆ ಪದವಿ/ಡಿಪ್ಲೊಮಾ ವ್ಯಾಸಂಗದ ಅವಧಿಯಲ್ಲಿ ಕರ್ನಾಟಕದ ರಹವಾಸಿಯಾಗಿರಬೇಕು ಯಾರು ಫಲಾನುಭವಿಗಳು? ವೃತ್ತಿಪರ ಕೋರ್ಸ್ ಒಳಗೊಂಡು ಎಲ್ಲ ಪದವೀಧರರಿಗೆ ಪ್ರತಿ ತಿಂಗಳು 3,000 ರೂ. ನೀಡಲಾಗುತ್ತದೆ. ಡಿಪ್ಲೊಮಾ ಪದವೀಧರರಿಗೆ ಮಾಸಿಕ 1,500 ರೂಪಾಯಿ ನಿರುದ್ಯೋಗ ಭತ್ಯೆ ಸಿಗಲಿದೆ. ಈ ಭತ್ಯೆಯು ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ 2 ವರ್ಷಗಳ ಅವಧಿಗೆ ಸಿಗಲಿದೆ. ಯಾರು ಅನರ್ಹರು? ಉನ್ನತ ವ್ಯಾಸಂಗಕ್ಕೆ ದಾಖಲಾಗುವವರು ಮತ್ತು ವಿದ್ಯಾಭ್ಯಾಸ ಮುಂದುವರಿಸುವವರು.…
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಬೈಕ್ ವ್ಹೀಲಿಂಗ್ ಹೆಚ್ಚಾಗಿದ್ದು,ಶೋಕಿಗಾಗಿ ಇನ್ನೂ ಮೀಸೆ ಚಿಗುರದ ಹುಡುಗರು ಪ್ರಮುಖ ರಸ್ತೆಗಳಲ್ಲಿ ವ್ಹೀಲಿಂಗ್ ಮಾಡುತ್ತಿರುವುದು ಹೆಚ್ಚಾಗಿದೆ.ಹಾಡುಹಗಲೇ ಪ್ರಮುಖ ರಸ್ತೆಗಳಲ್ಲಿ ಸಿನಿಮಾ ಶೈಲಿಯಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದರು ಅಧಿಕಾರಿಗಳಿಂದ ಡೋಂಟ್ ಕೇರ್ ಎನ್ನುತ್ತಿದ್ದಾರೆ. https://ainlivenews.com/sore-throat-cough-problem-in-winter-make-these-things-and-drink-tea/ ಯಾವುದೇ ಹೆಲ್ಮೆಟ್ ಹಾಕದೆ, ಕನಿಷ್ಟ ವಾಹನ ಸಂಖ್ಯೆ ಸಹ ಇಲ್ಲದೆ ಸ್ಟಂಟ್ ಮಾಡಲಾಗುತ್ತಿದೆ.ಕೆಎಲ್ ಇ ಕಾಲೇಜ್ ರಸ್ತೆ, ವಿದ್ಯಾನಗರ, ರೈಲ್ವೆ ಮೈದಾನ ರಸ್ತೆಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ಆಗುತ್ತಿದೆ.ಹೀಗಿದ್ದರೂ ಸಂಚಾರಿ ವಿಭಾಗದ ಪೊಲೀಸರು ಕಣ್ಣ್ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಕರ್ನಾಟಕ ಹಾಲು ಒಕ್ಕೂಟದ ನಂದಿನಿ ಬ್ರಾಂಡ್‌ನ ಹೊಸ ಉತ್ಪನ್ನಗಳನ್ನು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ನಂದಿನಿ ಉತ್ಪನ್ನಗಳ ನೂತನ ಬ್ರಾಂಡ್ ರಾಯಭಾರಿ ಶಿವರಾಜ್ ಕುಮಾರ್ ಅವರ ಜಾಹೀರಾತನ್ನು ಬಿಡುಗಡೆ ಮಾಡಿದರು. ನಂದಿನಿ ಬ್ರ್ಯಾಂಡ್ಗೆ ರಾಯಭಾರಿಯಾಗಲು ನಟ ಶಿವರಾಜ್ಕುಮಾರ್ ಕೂಡ ಯಾವುದೇ ಸಂಭಾವನೆ ಪಡೆಯುತ್ತಿಲ್ಲ. ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಿವಣ್ಣ, ಇದು ನಮ್ಮ ಸರ್ಕಾರದ್ದು, ನಮ್ಮ ಪ್ರಾಡೆಕ್ಟ್. ನಾವು ನಮ್ಮ ರೈತರಿಗೋಸ್ಕರ ಯಾವಾಗಲು ಜೊತೆಯಲ್ಲಿರುತ್ತೇನೆ. ಇದು ನಮ್ಮ ತ್ಯಾಗ ಅಲ್ಲ ನಮ್ಮ ಕರ್ತವ್ಯ ಎಂದು ನಟ ಶಿವರಾಜ್ ಕುಮಾರ್ ಹೇಳಿದ್ದಾರೆ. ಈ ಹಿಂದೆ ದಿವಂಗತ ಪುನೀತ್ ರಾಜಕುಮಾರ್ ಕೆಎಂಎಫ್ ರಾಯಭಾರಿಯಾಗಿದ್ದರು. ಇದೀಗ ಶಿವರಾಜ್ ಕುಮಾರ್ ಅವರನ್ನ ನಂದಿನಿ ಹಾಲಿನ ಉತ್ಪನ್ನಗಳ ರಾಯಭಾರಿಯಾಗಿ ನೇಮಕ ಮಾಡಲಾಗಿದೆ. ನಟ ಶಿವರಾಜ್ ಕುಮಾರ್ಗೆ ಹೂಗುಚ್ಚ ನೀಡಿ ಸನ್ಮಾನಿಸಲಾಯಿತು.
ಬೆಂಗಳೂರು: ನಾವು ಹೆಲ್ತ್ ಡಿಪಾರ್ಟ್ಮೆಂಟ್ ಗೈಡ್ ಲೈನ್ಸ್ ಸ್ವೀಕರಿಸುತ್ತೇವೆ. ಆತಂಕ ಸಂದರ್ಭದಲ್ಲಿ ಇಲ್ಲ, ಆದರೆ ಜವಾಬ್ದಾರಿ ಸ್ಥಾನದಲ್ಲಿದ್ದೇವೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೋವಿಡ್ ಬಗ್ಗೆ ಈಗಾಗಲೇ ಎಲ್ಲರಿಗೂ ಅನುಭವ ಆಗಿದೆ. ಇಂಥ ಸಂದರ್ಭದಲ್ಲಿ ಹೇಗಿರಬೇಕು ಅಂತ ಗೊತ್ತಿದೆ. ಮಕ್ಕಳಿಗೆ ಶೀತ ಜ್ವರ ಇದ್ದರೇ ಪೋಷಕರು ಜವಾಬ್ದಾರಿ ತಗೋತಾರೆ. ನಾವು ಆರೋಗ್ಯ ಇಲಾಖೆ ಗೈಡ್ ಲೈನ್ಸ್ ನೋಡಿ ನೋಟಿಸ್ ಕೊಡ್ತೀವಿ. ಅವರು ಎಲ್ಲಾ ಆಯಾಮಗಳಲ್ಲೂ ಕವರ್ ಮಾಡಿರ್ತಾರೆ. ಅವರೇನಾದ್ರೂ ಬಿಟ್ಟಿದ್ರೆ ನಾವು ಅದಕ್ಕೆ ಸೇರಿಸ್ತೀವಿ ಅಷ್ಟೆ. ಪ್ರವಾಸ ಹೋಗಿ ಬಂದಾಗ ಜ್ವರ, ಕೋಲ್ಡ್ ಇದ್ರೆ ಟೆಸ್ಟ್ ಮಾಡಿಸ್ಬೇಕಾಗ್ಬೋದು. ಇಲ್ಲಿಯವರೆಗೆ ನಾನು ಯಾವುದೇ ನಿರ್ಧಾರ ತಗೊಂಡಿಲ್ಲ. ಇವತ್ತು ಆರೋಗ್ಯ ಇಲಾಖೆಯಿಂದ ಏನು ಗೈಡ್ ಲೈನ್ ಬರುತ್ತೋ ಅದನ್ನು ನಾವು ಸ್ಕೂಲ್ಗಳಲ್ಲಿ ಪಾಲಿಸೋಕೆ ಹೇಳ್ತೀವಿ. ಕೊರೊನಾ ಬುದ್ದಿ ಕಲಿಸಿದೆ, ಎಲ್ಲರಿಗೂ ಗೊತ್ತಿದೆ ಹಾಗಾಗಿ ಪ್ರಿಕಾಕ್ಷನ್ ಎಲ್ಲರೂ ತಗೋತಾರೆ ಎಂದರು.
ಬೆಂಗಳೂರು: ಹೋದ್ಯಲ್ಲಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿ ಅನ್ನೋ ಹಾಗೇ ಆಗಿದೆ ಕೊರೋನಾ ಕಥೆ. ಅದ್ಯಾಕೋ ಕೊರೊನಾ ಬಿಟ್ಟು ಹೋಗೋ ಲಕ್ಷಣಗಳೇ ಕಾಣ್ತಿಲ್ಲ. ಕಂಟ್ರೋಲ್ ಇಲ್ಲದೇ ಓಡಿ ದಿಢೀರ್ ಅಂತ ತೆರೆಮರೆಗೆ ಸರಿದಿದ್ದ ವೈರಸ್ ಮತ್ತೆ ಕಾಟ ಕೊಡೋಕೆ ಎಂಟ್ರಿ ಬಂದಿದೆ. ಇಡೀ ರಾಜ್ಯದಲ್ಲೇ ಬೆಂಗಳೂರುನ್ನ ಟಾರ್ಗೆಟ್ ಮಾಡಿರೋ ಕೊರೋನಾ ಅನ್ನೋ ಕ್ರಿಮಿ ಆಟ ಆಡೋಕೆ ಶುರುಮಾಡಿರೋದು ಪಾಲಿಕೆಗೆ ನಿದ್ದೆಗೆಡಿಸಿದೆ…ಕೊರೊನಾ ಏರಿಕೆ ಯಿಂದ ತಲೆಕೆಡಿಸಿಕೊಂಡಿರುವ ಬಿಬಿಎಂಪಿ ಮತ್ತೆ ಇಂದಿನಿಂದ ಕೋವಿಡ್ ಟೆಸ್ಟಿಂಗ್ ಮಾಡ್ತಿದೆ. ಕೊರೊನಾ ಮತ್ತೆ ರಿಟರ್ನ್ ಆಗಿದೆ. ಮೊದಲೆರೆಡು ಅಲೆಗಳಲ್ಲಿ ಬದುಕಿಗೆ ಕೊಳ್ಳಿ ಇಟ್ಟಿದ್ದ ಕೋವಿಡ್, ಈಗ ಮಾರುವೇಷ ತೊಟ್ಟು ಮತ್ತೊಮ್ಮೆ ಅಗೋಚರ ಯುದ್ಧ ಸಾರಿದೆ. ಮಾಯಾವಿಯ ಈ ಹೊಸ ರೂಪಾಂತರಿ ಅವತಾರ ಮತ್ತೆ ಚಿಂತೆಗೆ ದೂಡಿದೆ. ಈ ಬಾರಿ JN1 ಹೆಸರು ಹೊತ್ತು ಬಂದ ರೂಪಾಂತರಿ ಉಳಿದೆಲ್ಲಕ್ಕಿಂತ ಕ್ರೂರಿ ಅಂತ ಹೇಳಲಾಗ್ತಿದೆ. ಹೀಗಾಗಿ ಆರಂಭದಲ್ಲೇ ಅಲರ್ಟ್ ಆಗಿರೋ ಬಿಬಿಎಂಪಿ ಕೋವಿಡ್ ನಿಯಂತ್ರಣಕ್ಕೆ ಮುಂದಾಗಿದೆ. ಕಳೆದ ಎರಡು ವರ್ಷದಿಂದ ಬೆಂಗಳೂರು…
ರಾಮನಗರ: ರಾಮನಗರದಲ್ಲಿಯೂ ಕೊರೊನಾ ಕೇಸ್ ಹೆಚ್ಚಾಗ್ತಿದೆ. ಕಳೆದ ಎರಡು ದಿನಗಳಲ್ಲಿ ಮೂರು ಕೋವಿಡ್ ಪ್ರಕರಣ ಪತ್ತೆಯಾಗಿದ್ದು, ಅದರಲ್ಲೂ ಒಂದೇ ಗ್ರಾಮದ ಇಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ರಾಮನಗರ ತಾಲೂಕಿನ ಬೈರಮಂಗಲ ಗ್ರಾಮದ ಎಂಜಿನಿಯರಿಂಗ್ ವಿದ್ಯಾರ್ಥಿ ಹಾಗೂ ಗೃಹಿಣಿಗೆ ಪಾಸಿಟಿವ್ ಬಂದಿದೆ. ಅಲ್ಲದೇ ಕೆಂಗೇರಿಯಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಬಿಡದಿ ಗ್ರಾಮದ ಓರ್ವ ವ್ಯಕ್ತಿಗೂ ಕೋವಿಡ್ ಧೃಡಪಟ್ಟಿದೆ. ಆದ್ರೆ ಈ ಮೂವರಿಗೆ ಸಂಬಂಧಿಸಿದ ಟ್ರಾವೆಲ್ ಹಿಸ್ಟರಿ ಇಲ್ಲವೆಂದು ಆರೋಗ್ಯ ಇಲಾಖೆ ಖಚಿತ ಪಡೆಸಿದೆ. ಮೂವರ ಕುಟುಂಬಸ್ಥರನ್ನೂ ಕೋವಿಡ್ ಟೆಸ್ಟ್‌ಗೆ ಒಳಪಡಿಸಿ ಕ್ವಾರಂಟೈನ್ ಮಾಡಿದ್ದು, https://ainlivenews.com/sore-throat-cough-problem-in-winter-make-these-things-and-drink-tea/ ಜೆಎನ್.1 ಸೋಂಕು ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ. ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಸಾರ್ವಜನಿಕರ ಅನುಕೂಲಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. 15 ಹಾಸಿಗೆಗಳ ಎರಡು ಕೋವಿಡ್ ವಾರ್ಡ್, 500 ಲೀ. ಸಾಮರ್ಥ್ಯದ ಎರಡು ಆಕ್ಸಿಜನ್ ಪ್ಲ್ಯಾಂಟ್‌ಗಳು ಕಾರ್ಯಾರಂಭ ಮಾಡಿವೆ. 4 ವೆಂಟಿಲೇಟರ್ ಹಾಗೂ 19 ಐಸಿಯು ಹಾಸಿಗಳನ್ನ ಕಾಯ್ದಿರಿಸಲಾಗಿದೆ.
ಬೆಂಗಳೂರು: ಪ್ರತಿ ವರ್ಷದಂತೆ ಈ ಬಾರಿಯು ಬೆಂಗಳೂರಿನಲ್ಲಿ ಕ್ರಿಸ್ಮಸ್ ಕೇಕ್ ಶೋ ಪ್ರಾರಂಭವಾಗಿದೆ. ನ್ಯೂ ಪಾರ್ಲಿಮೆಂಟ್ ಈ ಬಾರಿಯ ಪ್ರಮುಖ ಆಕರ್ಷಣೆಯಾಗಿದ್ದು,ಇನ್ನೂ ಹಲವು ಕಲಾಕೃತಿಗಳ ಕೇಕ್ ಜನರ ಮನಸೂರೆಗೊಳ್ಳತ್ತಿವೆ.ಈ ಕುರಿತ ಒಂದು ರಿಪೋರ್ಟ್ ಇಲ್ಲಿದೆ ನೋಡಿ. ದೈವೀ ಕಳೆ ಇರುವ ದೇವಿ ದುರ್ಗಾಮಾತೆ, ಗಾಂಭೀರ್ಯತೆಯ ಕ್ಯೂಟ್ ಗಜರಾಜ, ಕುದುರೆ ಮೇಲೆ ಕುಳಿತ ಶಿವಾಜಿ ಮಹಾರಾಜ , ಕಲಾಕೃತಿ, ಸಕ್ಕರೆ ಶಿಲ್ಪಕಲೆಯಲ್ಲಿ ಚಂದ್ರಯಾನ-3,ಗೇಟರ್ ಗ್ರೋವ್ ಡಿಲೈಟ್: ದಿ ಎಡಿಬಲ್ ಇಂಡಿಯನ್ ಅಲ್ಲಿಗೇಟರ್, ಫ್ರೀ ಬಸ್, ಅಬ್ಬಬ್ಬ ಒಂದಾ ಎರಡ, ಎಷ್ಟೊಂದು ವೆರೈಟಿ ಕೇಕ್ ಗಳು,ಇವೆಲ್ಲವೂ ಈ ಬಾರಿಯ ಕ್ರಿಸ್ ಮಸ್ ಕೇಕ್ ಶೋನ ಹೈಲೈಟ್ಸ್. ವರ್ಷದ ಕೊನೆಗೆ ಬರುವ ಕ್ರಿಸ್‌ಮಸ್ ಪ್ರಯುಕ್ತ ಬೆಂಗಳೂರಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಸಹ 49ನೇ ವಾರ್ಷಿಕ ಕೇಕ್ ಪ್ರದರ್ಶನ ನಡೆಯುತ್ತಿದೆ. ಹಳೆ ವರ್ಷ ಅಂತ್ಯಕ್ಕೆ ಕೇಕ್ ಶೋ ಎಲ್ಲರನ್ನು ಹೊಸ ವರ್ಷಕ್ಕೆ 2024ಕ್ಕೆ ಸ್ವಾಗತಿಸುತ್ತದೆ. ಪ್ರತಿ ವರ್ಷದಂತೆ ಈ ವರ್ಷವು ಸಹ ಇನ್ಸ್‌ಟಿಟ್ಯೂಟ್ ಆಫ್ ಬೇಕಿಂಗ್…
ಧಾರವಾಡ: ಅತಿಥಿ ಉಪನ್ಯಾಸಕರನ್ನು ಕಾಯಂ ಮಾಡಿಕೊಳ್ಳುವಂತೆ ಆಗ್ರಹಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ಧಾರವಾಡದಲ್ಲಿ ಪಂಜಿನ ಮೆರವಣಿ ಮಾಡಿದರು. ಧಾರವಾಡದ ಕಲಾಭವನದಿಂದ ಕೋರ್ಟ್ ವೃತ್ತದವರೆಗೂ ಪಂಜಿನ ಮೆರವಣಿಗೆ ಮಾಡಿದ ಉಪನ್ಯಾಸಕರು, ತಮ್ಮನ್ನು ಕಾಯಂ ಉಪನ್ಯಾಸಕರು ಎಂದು ಪರಿಗಣಿಸುವಂತೆ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದರು. https://ainlivenews.com/sore-throat-cough-problem-in-winter-make-these-things-and-drink-tea/ ಅತಿಥಿ ಉಪನ್ಯಾಸಕರನ್ನು ಕಾಯಂ ಮಾಡಿಕೊಳ್ಳುವಂತೆ ಅನೇಕ ವರ್ಷಗಳಿಂದ ಪ್ರತಿಭಟನೆ ನಡೆಯುತ್ತಿದ್ದರೂ ಸರ್ಕಾರಗಳು ಮಾತ್ರ ಈ ಉಪನ್ಯಾಸಕರತ್ತ ತಿರುಗಿಯೂ ನೋಡಿಲ್ಲ. ಹೀಗಾಗಿ ಅತಿಥಿ ಉಪನ್ಯಾಸಕರ ಹೋರಾಟ ಮತ್ತೆ ಆರಂಭಗೊಂಡಂತಾಗಿದೆ.