ಕೋಲ್ಕತಾ :- ರೀಲ್ಸ್ ಮಾಡುವಾಗ ರೈಲು ಡಿಕ್ಕಿ ಹೊಡೆದು ಮೂವರು ಯುವಕರು ಮೃತಪಟ್ಟ ಘಟನೆ ಜರುಗಿದೆ. ಇಬ್ಬರು ನದಿಗೆ ಹಾರಿ ತಮ್ಮನ್ನು ರಕ್ಷಿಸಿಕೊಂಡಿದ್ದಾರೆ. ಅಹಿರಾನ್ ರೈಲು ನಿಲ್ದಾಣದ ಸಮೀಪ ರೈಲ್ವೆ ಸೇತುವೆಯ ಮೇಲೆ ಹಳಿಗಳ ಮಧ್ಯೆ ಐದು ಜನ ಯುವಕರು ರೀಲ್ಸ್ ಮಾಡುತ್ತಿದ್ದರು. ಈ ವೇಳೆ ಹೌರಾ-ರಾಧಿಕಾಪುರ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರು ನದಿಗೆ ಹಾರಿ ತಮ್ಮನ್ನು ರಕ್ಷಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರೈಲು ಹಳಿಗಳ ಮೇಲೆ ಯಾವುದೇ ಕ್ಷಣದಲ್ಲೂ ರೈಲು ಬರಬಹುದು ಆದ್ದರಿಂದ ಜನರು ರೈಲ್ವೆ ಹಳಿಗಳಿಂದ ದೂರವಿರಬೇಕು ಎಂದು ಅಧಿಕಾರಿಗಳು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
Author: AIN Author
ಕೋಲಾರ:- ಜಿಲ್ಲೆ ಕೆಜಿಎಫ್ ತಾಲ್ಲೂಕು ಕೊತ್ತೂರು ಗ್ರಾಮದಲ್ಲಿ ಚಾಕುವಿನಿಂದ ಇರಿದು ಅತ್ತಿಗೆಯನ್ನೇ ಮೈದುನ ಕೊಲೆ ಮಾಡಿರುವ ಘಟನೆ ಜರುಗಿದೆ. ಬುಧವಾರ ರಾತ್ರಿ ಈ ಗ್ರಾಮದಲ್ಲಿ ತನ್ನ ಅತ್ತಿಗೆಯನ್ನು ಮೈದುನನೇ ಚಾಕುವಿನಿಂದ ಇರಿದು ಬರ್ಬರವಾಗಿ ಕೊಂದಿದ್ದಾನೆ, ತೇಜಸ್ವಿನಿ ಕೊಲೆಯಾದ ಮಹಿಳೆ. ಅಷ್ಟಕ್ಕೂ ಆಗಿದ್ದೇನು ಅಂತ ನೋಡೋದಾದ್ರೆ, ಕೊತ್ತೂರು ಗ್ರಾಮದ ಪಕ್ಕದಲ್ಲಿರುವ ಬ್ಯಾಟರಾನಹಳ್ಳಿ ಗ್ರಾಮದಲ್ಲಿ ಮುರಳಿ ಹಾಗೂ ಚಲಪತಿ ಅಣ್ಣ ತಮ್ಮಂದಿರಿದ್ದಾರೆ. ಈ ಪೈಕಿ ಮುರಳಿ ಹಾಗೂ ಚಲಪತಿ ನಡುವೆ ಹಲವು ವರ್ಷಗಳಿಂದ ತಮ್ಮೂರಿನಲ್ಲಿರುವ ಮೂರು ಎಕರೆ ಭೂಮಿಗೆ ಸಂಬಂಧಿಸಿದಂತೆ ವಿವಾದ ಇತ್ತು. ಈ ಸಂಬಂಧ ಗಲಾಟೆ ಇತ್ತು. ಕಾರಣ ಮುರಳಿ ಪಿತ್ರಾರ್ಜಿತ ಅಸ್ತಿಯಲ್ಲಿ ಭಾಗ ಕೇಳಿದ್ದ ಅನ್ನೋ ಕಾರಣಕ್ಕೆ ಆಗಾಗ ಗಲಾಟೆ ನಡಯುತ್ತಲೇ ಇತ್ತು. ಮರುಳಿ ಎರಡು ಮದುವೆಯಾಗಿದ್ದ. ಈ ಪೈಕಿ ನಿನ್ನೆ ಬುಧವಾರ ಎರಡನೇ ಪತ್ನಿ ತೇಜಸ್ವಿನಿ ಮನೆಯಲ್ಲಿದ್ದಾಗ ಚಲಪತಿ ತನ್ನ ಮೂರು ಜನ ಸ್ನೇಹಿತರೊಂದಿಗೆ ಮನೆಗೆ ಬಂದು ನುಗ್ಗಿ ಮನೆಯ ಬಾಗಿಲಲ್ಲೇ ಇದ್ದ ತನ್ನ ಅತ್ತಿಗೆ ತೇಜಸ್ವಿನಿಗೆ ಚಾಕುವಿನಿಂದ ಇರಿದಿದ್ದಾನೆ.…
ಬೆಂಗಳೂರು:- ಈ ಬಾರಿಯ ಹೊಸ ವರ್ಷಾಚರಣೆಗೆ ಯಾವುದೇ ಅಡ್ಡಿ ಇಲ್ಲ ಎಂದು CM ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಹಿಂದಿನ ಕೊರೊನಾ ವೈರಸ್ ಮತ್ತು ಈಗ ಪತ್ತೆಯಾಗಿರುವ ಕೋವಿಡ್ ಉಪತಳಿ JN.1 ಅಪಾಯಕಾರಿಯಲ್ಲ. ಹೀಗಾಗಿ ಯಾರೂ ಭಯಪಡಬೇಕಾಗಿಲ್ಲ. ಆದರೆ, ಮುನ್ನೆಚ್ಚರಿಕೆ ವಹಿಸಿ ಎಂದರು. ರಾಜ್ಯದಲ್ಲಿ ಎಲ್ಲರೂ ಮಾಸ್ಕ್ ಧರಿಸಬೇಕಾಗಿಲ್ಲ ಮತ್ತು ಹೊಸ ವರ್ಷಾಚರಣೆಗೆ ಏನೂ ಅಡ್ಡಿ ಇಲ್ಲ, ಶಾಲೆಗೆ ಹೋಗುವ ಮಕ್ಕಳು ಮಾಸ್ಕ್ ಧರಿಸಿಕೊಂಡು ಹೋಗುವುದು ಕಡ್ಡಾಯವಲ್ಲ ಎಂಬ ಮಾಹಿತಿಯನ್ನು ನೀಡಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಆಕ್ಸಿಜನ್ ಸಿಗದೆ ಚಾಮರಾಜನಗರ ಸೇರಿದಂತೆ ಹಲವು ಕಡೆ ದೊಡ್ಡ ಮಟ್ಟದ ಸಾವುಗಳು ಸಂಭವಿಸಿವೆ. ಆದರೆ, ಈ ಬಾರಿ ಅಂಥ ತಪ್ಪುಗಳು ಮರುಕಳಿಸಬಾರದು ಎನ್ನುವ ಸ್ಪಷ್ಟ ಸೂಚನೆ ನೀಡಿದ್ದಾಗಿ ಸಿಎಂ ಸಿದ್ದರಾಮಯ್ಯ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು. ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಸೇರಿ ಇನ್ನಿತರ ಯಾವುದಕ್ಕೂ ಕೊರತೆ ಆಗಬಾರದು ಎಂದು ಅವರು ಹೇಳಿದರು.
ಬೆಂಗಳೂರು:- ಹೆಚ್ ಡಿ ಕುಮಾರಸ್ವಾಮಿ ಅವರು ಭ್ರಮೆಯಲ್ಲಿದ್ದಾರೆ ಮತ್ತು ಭ್ರಮಾಲೋಕದಲ್ಲಿ ತೇಲಾಡುತ್ತಿದ್ದಾರೆ ರಾಜ್ಯದಲ್ಲಿ ಅಸ್ತಿತ್ವ ಕಳೆದುಕೊಂಡವರು ಬೇರೆಯವರ ಆಶ್ರಯ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಡಿಕೆ ಸುರೇಶ್ ಹೇಳಿದರು. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ ಮತ್ತು ಮಂಡ್ಯ ಕ್ಷೇತ್ರಗಳಿಂದ ಒತ್ತಡ ಬರುತ್ತಿದೆ ಎಂದು ಕುಮಾರಸ್ವಾಮಿ ಹೇಳಿರುವುದನ್ನು ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿದರೆ ಸ್ವಾಗತಿಸುತ್ತೀರಾ ಎಂದು ಸುರೇಶ್ ಅವರನ್ನು ಪತ್ರಕರ್ತರು ಕೇಳಿದಾಗ, ತಾನು ರಾಜಕೀಯಕ್ಕೆ ಬಂದಿದ್ದೇ ಅವರಿಂದ, ಹಾಗಾಗಿ ಅವರು ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ ಸ್ವಾಗತಿಸುವುದಾಗಿ ವ್ಯಂಗ್ಯವಾಗಿ ಹೇಳಿದರು.
ಅಜ್ಜಿ ಕಾಲದ ಈ ವಿಧಾನ ಅನುಸರಿಸಿದರೆ ಒಂದು ವಾರದಲ್ಲಿ ತಲೆಹೊಟ್ಟು ಮಾಯವಾಗುತ್ತಂತೆ. ಕೆಲವರಿಗೆ ವರ್ಷದ 12 ತಿಂಗಳ ಕಾಲ ತಲೆಹೊಟ್ಟು ತೊಡೆದುಹಾಕಲು ಸಾಧ್ಯವಾಗುವುದಿಲ್ಲ. ಆದರೆ ನಿಮಗೆ ಗೊತ್ತಾ, ತಲೆಹೊಟ್ಟಿನಿಂದ ಹಲವು ರೀತಿಯ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಇದರಿಂದ ಕೂದಲು ದುರ್ಬಲಗೊಳ್ಳುತ್ತದೆ ಮತ್ತು ಒಡೆಯಲು ಪ್ರಾರಂಭಿಸುತ್ತದೆ, ಒಣಗುತ್ತದೆ ಮತ್ತು ನಿರ್ಜೀವವಾಗುತ್ತದೆ. ಮೊಡವೆಗಳು ನೆತ್ತಿಯ ಮೇಲೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಆದ್ದರಿಂದ ನೀವು ಸಹ ಈ ಸಮಸ್ಯೆಯಿಂದ ಬಳಲುತ್ತಿದ್ದರೆ, ಇದನ್ನು ಮೂಲದಿಂದ ಗುಣಪಡಿಸಲು ಈ ಮಾಂತ್ರಿಕ ವಿಧಾನವನ್ನು ಪ್ರಯತ್ನಿಸಬಹುದು. ಶತಮಾನಗಳಷ್ಟು ಹಳೆಯದಾದ ಈ ವಿಧಾನ ನಿಮಗೆ ಸಂಜೀವಿನಿಯಂತೆ ಕೆಲಸ ಮಾಡುತ್ತದೆ. ಕರ್ಪೂರ 2 ರೂ.ಗೆ ಸಿಗುವ ಕರ್ಪೂರ ನಿಮಗೆ ತುಂಬಾ ಪ್ರಯೋಜನಕಾರಿ. ಕರ್ಪೂರದಲ್ಲಿ ಆಯಂಟಿ ಫಂಗಲ್ ಮತ್ತು ಆಯಂಟಿ ಬ್ಯಾಕ್ಟೀರಿಯಲ್ ಗುಣಗಳಿವೆ. ಇದು ಕೂದಲಲ್ಲಿ ಎಲಾಸ್ಟಿನ್ ಮತ್ತು ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ತೆಂಗಿನೆಣ್ಣೆ ಬಳಸಿ ತಲೆಹೊಟ್ಟು ಹೋಗಲಾಡಿಸಬಹುದು. ತೆಂಗಿನ ಎಣ್ಣೆ ಮತ್ತು ಕರ್ಪೂರದ ಮಿಶ್ರಣವು ಪರಿಣಾಮಕಾರಿ ಕರ್ಪೂರದಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ತಲೆಹೊಟ್ಟು ಹೋಗಲಾಡಿಸುವಲ್ಲಿ ಪರಿಣಾಮಕಾರಿ.…
ನೆಲಮಂಗಲ :- ನೆಲಮಂಗಲದ ವಾಜರಹಳ್ಳಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಗಂಭೀರ ಗಾಯಗೊಂಡಿರುವ ಘಟನೆ ಜರುಗಿದೆ. ಸಂಜಯ್ 40, ಲೇಖನಾ 5 ವರ್ಷದ ಮಗುವಿಗೂ ಗಂಭೀರ ಗಾಯಗೊಂಡಿದ್ದಾರೆ. ವಿಜಯಮ್ಮ ಎಂಬುವವರ ಮನೆಯಲ್ಲಿ ನಡೆದಿರುವ ಘಟನೆ. ಎಂದಿನಂತೆ ಅಡುಗೆ ಮನೆಗೆ ತೆರಳಿ ಗ್ಯಾಸ್ ಆನ್ ಮಾಡಿ ಬೆಂಕಿ ಹೊತ್ತಿಸಿದ್ದರು. ಈ ವೇಳೆ ಬೆಂಕಿ ಹೊತ್ತಿಕೊಂಡು ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಸಂಜಯ್ ಎಂಬವವರಿಗೆ ತೀವ್ರ ಸ್ವರೂಪದ ಸುಟ್ಟುಗಾಯಗಳಾಗಿವೆ. ಇನ್ನು ಲೇಖನ ಎಂಬ ಮಗು ಸಹ ಗಂಭೀರವಾಗಿ ಗಾಯಗೊಂಡಿದೆ. ಗಾಯಾಳಿಬ್ಬರನ್ನು ಸರ್ಕಾರ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಬಳಿಕ ಸ್ಥಿತಿ ಗಂಭೀರವಾಗಿರುವುದರಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ವಿಜಯಮ್ಮ ಮನೆಯಲ್ಲಿ ಸಿಲಿಂಡರ್ ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ಜನರು ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ.
ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಹುಟ್ಟು ಹಬ್ಬಕ್ಕೆ ಐಪಿಎಲ್ ಫ್ರಾಂಚೈಸಿ ‘ಮುಂಬೈ ಇಂಡಿಯನ್ಸ್’ ಶುಭ ಕೋರಿದೆ. ಈ ನಡುವೆ ಫ್ರಾಂಚೈಸಿ ವಿರುದ್ಧ ರೋಹಿತ್ ಅಭಿಮಾನಿಗಳು ಕಿಡಿಕಾರಿದ್ದಾರೆ. 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ತಂಡವು ಐದು ಸಲ ಪ್ರಶಸ್ತಿ ಜಯಿಸಿದಾಗಲೂ ಅವರನ್ನು ಕೆಳಗಿಳಿಸಲಾಗಿದೆ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಮುಂಬೈ ಇಂಡಿಯನ್ಸ್ ಹಂಚಿಕೊಂಡಿರುವ ಪೋಸ್ಟ್‌ಗೆ ಅಭಿಮಾನಿಗಳು ಪ್ರತಿಕ್ರಿಯಿಸಿದ್ದು, ರೋಹಿತ್ ಶರ್ಮಾ ಅವರನ್ನು ಮತ್ತೆ ನಾಯಕರನ್ನಾಗಿ ಮಾಡಿ ಎಂದು ಒತ್ತಾಯಿಸಿದ್ದಾರೆ. ಕಳೆದ ಎರಡು ಆವೃತ್ತಿಗಳಲ್ಲಿ ಗುಜರಾತ್ ಟೈಟನ್ಸ್ ತಂಡದ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯ ಅವರನ್ನೂ ಟ್ರೇಡ್‌ನಲ್ಲಿ ಮುಂಬೈ ತಂಡವು ಸೇರ್ಪಡೆ ಮಾಡಿಕೊಂಡಿತ್ತು. ‘ನಾಯಕತ್ವದ ಬದಲಾವಣೆಯು ನಮ್ಮ ಫ್ರಾಂಚೈಸಿಯ ಭವಿಷ್ಯದ ಕ್ರಮವಾಗಿದೆ. ರೋಹಿತ್ ಅವರ ಅತ್ಯದ್ಭುತವಾದ ನಾಯಕತ್ವ ಮತ್ತು ನೀಡಿರುವ ಸೇವೆಗೆ ಆಭಾರಿಯಾಗಿದ್ದೇವೆ. ಮುಂಬೈ ತಂಡಕ್ಕೆ ಮೊದಲಿನಿಂದಲೂ ಖ್ಯಾತನಾಮ ಆಟಗಾರರ ನಾಯಕತ್ವ ಲಭಿಸಿರುವುದು…
ಹೆಚ್ಚಿನ ಜನರಿಗೆ, ಅನ್ನವನ್ನು ತಿನ್ನುವಾಗ ಮಜ್ಜಿಗೆ ಅಥವಾ ಮೊಸರು ಇಲ್ಲದೆ ತಿನ್ನುವುದು ಅಪೂರ್ಣವಾಗಿದೆ. ಆದಾಗ್ಯೂ, ಈ ಮಜ್ಜಿಗೆ ಮತ್ತು ಮೊಸರಿನಿಂದ ಅನೇಕ ಪ್ರಯೋಜನಗಳಿವೆ. ಆದಾಗ್ಯೂ, ಇವೆರಡರಲ್ಲಿ ಯಾವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುವುದು ತುಂಬಾ ಕಷ್ಟ. ಮಜ್ಜಿಗೆ ಮೊಸರಿನಿಂದ ಬರುತ್ತದೆ ಎಂದು ಸಾಮಾನ್ಯವಾಗಿ ತಿಳಿದಿದೆ. ಆದಾಗ್ಯೂ, ಇವೆರಡರಿಂದಲೂ ಅನೇಕ ಪ್ರಯೋಜನಗಳಿವೆ. ಮೊಸರಿನ ಮಜ್ಜಿಗೆ ದೇಹವನ್ನು ತಂಪಾಗಿಸುತ್ತದೆ. ಮಜ್ಜಿಗೆ ದೇಹಕ್ಕೆ ಎಲ್ಲಾ ರೀತಿಯಲ್ಲೂ ಸೂಕ್ತವಾಗಿದೆ. ಆದ್ದರಿಂದ ಮೊಸರಿಗಿಂತ ಮಜ್ಜಿಗೆ ತುಂಬಾ ಒಳ್ಳೆಯದು. ಮೊಸರು ಕೊಬ್ಬಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಉರಿಯೂತವನ್ನು ಕಡಿಮೆ ಮಾಡಲು ಇದು ಉಪಯುಕ್ತವಾಗಿದೆ. ಆದರೂ ಎಲ್ಲರೂ ಮೊಸರು ತೆಗೆದುಕೊಳ್ಳಲು ಸಾಧ್ಯವಿಲ್ಲ. ಬದಲು ಅದರಿಂದ ಮಜ್ಜಿಗೆ ಆರೋಗ್ಯಕ್ಕೆ ಒಳ್ಳೆಯದು. ಮಜ್ಜಿಗೆಯಲ್ಲಿ ಸ್ವಲ್ಪ ಜೀರಿಗೆ ಪುಡಿ, ಗುಲಾಬಿ ಉಪ್ಪು ಕೊತ್ತಂಬರಿ ಸೇರಿಸಿ ರುಚಿ ಉತ್ತಮವಾಗಿರುತ್ತದೆ. ಆದರೂ ಅದು ನಮ್ಮ ಆರೋಗ್ಯವನ್ನು ರಕ್ಷಿಸಲು ನ್ಯಾಯ ಒದಗಿಸಿದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಜೊತೆಗೆ ಜೀರ್ಣಕಾರಿ ಸಮಸ್ಯೆಗಳು, ಉರಿಯೂತದ ಸಮಸ್ಯೆಗಳು, ರಕ್ತಹೀನತೆ, ಹಸಿವಿನ ಕೊರತೆ ಇತ್ಯಾದಿಗಳನ್ನು ಅಂತಹ ಸಮಸ್ಯೆಗಳಿಂದ ನಿವಾರಿಸಬಹುದು.…
ಕರಿಮೆಣಸು ಸೂಕ್ಷ್ಮಜೀವಿ ವಿರೋಧಿ, ಉರಿಯೂತದ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಹೊಟ್ಟೆಯುಬ್ಬರ ವಿರೋಧಿ, ಮೂತ್ರವರ್ಧಕ ಮತ್ತು ಜೀರ್ಣಕಾರಿಯನ್ನು ಹೊಂದಿದೆ. ಆದ್ದರಿಂದ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಇವುಗಳಲ್ಲಿ ಹೆಚ್ಚಿನವುಗಳನ್ನು ಚಳಿಗಾಲದಲ್ಲಿ ಸೇವಿಸಲಾಗುತ್ತದೆ. ಇದು ದೇಹದ ತೂಕವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ತೂಕ ಇಳಿಸಿಕೊಳ್ಳಲು ಬಯಸುವವರು ಖಂಡಿತವಾಗಿಯೂ ಅವುಗಳನ್ನು ಆಹಾರದಲ್ಲಿ ಸೇವಿಸಬೇಕು. ಕಾಳು ಮೆಣಸು ಪ್ರಯೋಜನಗಳು: ತೂಕ ನಷ್ಟ: ಬೇಸಿಗೆಗೆ ಹೋಲಿಸಿದರೆ ಚಳಿಗಾಲದಲ್ಲಿ ತೂಕ ಹೆಚ್ಚಾಗುವುದು ಸುಲಭ. ಇದಲ್ಲದೆ, ಅವರು ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಆದಾಗ್ಯೂ, ಚಳಿಗಾಲದಲ್ಲಿ ಸುಲಭವಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ಪ್ರತಿದಿನ ತಮ್ಮ ಆಹಾರದಲ್ಲಿ ಕರಿಮೆಣಸನ್ನು ಸೇವಿಸುವ ಮೂಲಕ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಶೀತ ಮತ್ತು ಕೆಮ್ಮು ಸಮಸ್ಯೆ: ಚಳಿಗಾಲದಲ್ಲಿ, ಶೀತ ಮತ್ತು ಕೆಮ್ಮಿನ ಸಮಸ್ಯೆಗಳು ಆಗಾಗ್ಗೆ ಕಂಡುಬರುತ್ತವೆ. ಇಂತಹ ಸಮಸ್ಯೆಗಳನ್ನು ತಪ್ಪಿಸಲು ಕರಿಮೆಣಸಿನಿಂದ ತಯಾರಿಸಿದ ಆಹಾರವನ್ನು ಹೆಚ್ಚು ಸೇವಿಸಬೇಕು. ಅಲ್ಲದೆ, ಅವುಗಳನ್ನು ಕಷಾಯವಾಗಿ ತಯಾರಿಸುವುದು ಮತ್ತು ಕುಡಿಯುವುದು ಕೆಮ್ಮು ಮತ್ತು ಶೀತದಂತಹ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಅನೇಕ…
ಚೆನ್ನೈ: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಸಚಿವ ಕೆ ಪೊನ್ಮುಡಿಗೆ (K Pondmudy) ಮದ್ರಾಸ್ ಹೈಕೋರ್ಟ್ (Madras Highcourt) ಗುರುವಾರ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಪ್ರಕಟಿಸಿದೆ. 1.75 ಕೋಟಿ ರೂ. ಅಕ್ರಮ ಆಸ್ತಿ ಪ್ರಕರಣದಲ್ಲಿ ಡಿಎಂಕೆ ನಾಯಕ ಮತ್ತು ಅವರ ಪತ್ನಿಯನ್ನು ದೋಷಿಗಳು ಎಂದು ಮದ್ರಾಸ್ ಹೈಕೋರ್ಟ್ ಎರಡು ದಿನಗಳ ಹಿಂದೆ ತೀರ್ಪು ನೀಡಿ ಇಂದು ಶಿಕ್ಷೆಯ ಪ್ರಮಾಣ ಪ್ರಕಟವಾಗಿದೆ. ಈ ಆದೇಶದಿಂದ ತಮಿಳುನಾಡು ಸಿಎಂ ಸ್ಟಾಲಿನ್ (Stalin) ಸರ್ಕಾರಕ್ಕೆ ಭಾರೀ ಹಿನ್ನಡೆಯಾಗಿದೆ. ಶಿಕ್ಷೆಯ ಜೊತೆಗೆ ದಂಪತಿಗೆ ತಲಾ 50 ಲಕ್ಷ ದಂಡವನ್ನೂ ವಿಧಿಸಲಾಗಿದೆ. ಸದ್ಯ ಪೊನ್ಮುಡಿಯ ಉನ್ನತ ಶಿಕ್ಷಣ ಖಾತೆಯನ್ನು ಅವರ ಸಹೋದ್ಯೋಗಿಗಳಿಗೆ ಹಸ್ತಾಂತರಿಸುವ ಸಾಧ್ಯತೆಗಳಿವೆ. ಕಾನೂನಿನಡಿಯಲ್ಲಿ, ಶಾಸಕಾಂಗ ವ್ಯವಸ್ಥೆಯ ಸದಸ್ಯರು ತಪ್ಪಿತಸ್ಥರಾದರೆ ಸಂಸತ್ತು ಅಥವಾ ವಿಧಾನಸಭೆಯಿಂದ ಅವರು ಅನರ್ಹರಾಗುತ್ತಾರೆ. https://ainlivenews.com/sore-throat-cough-problem-in-winter-make-these-things-and-drink-tea/ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರನ್ನು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ಒತ್ತಾಯಿಸಿದ ಮರುದಿನವೇ ಪೊನ್ಮುಡಿಯವರಿಗೆ ಈ ಶಿಕ್ಷೆ ವಿಧಿಸಲಾಗಿದೆ. 1996ರಿಂದ 2001ರ ವರೆಗಿನ ಡಿಎಂಕೆ…