ರಿಷಬ್ ಶೆಟ್ಟಿ (Rishabh Shetty) ನಿರ್ದೇಶಿಸಿ, ನಟಿಸಲಿರುವ ಕಾಂತಾರ ಚಾಪ್ಟರ್ 1 (Kantara 1) ಸಿನಿಮಾಗೆ ಕಲಾವಿದರು (Artists) ಬೇಕಾಗಿದ್ದಾರೆ ಎಂದು ಚಿತ್ರತಂಡ ಪೋಸ್ಟರ್ ರಿಲೀಸ್ ಮಾಡಿತ್ತು. ಹಲವಾರು ಪಾತ್ರಗಳು ಇರುವುದರಿಂದ ಕಲಾವಿದರ ವಯಸ್ಸನ್ನೂ ನಿಗದಿ ಪಡಿಸಿ, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಅದಕ್ಕೆ ಸಾಕಷ್ಟು ರೆಸ್ಪಾನ್ಸ್ ಬಂದಿದೆ. ಚಿತ್ರತಂಡವೇ ಹೇಳಿಕೊಂಡಂತೆ 25 ಸಾವಿರಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದಾರೆ. ರಿಕ್ ಪಾರ್ಟಿ ಮಾಡಿದಾಗಲೂ ಆಡಿಷನ್ ಗೆ ಚಿತ್ರತಂಡ ಕಾಲ್ ಮಾಡಿತ್ತು. ಆಗ ಎರಡು ಸಾವಿರಕ್ಕೂ ಹೆಚ್ಚು ಕಲಾವಿದರು ಅರ್ಜಿ ಸಲ್ಲಿಸಿದ್ದರು. ಕಾಂತಾರ 1 ಚಿತ್ರಕ್ಕೆ ನಿರೀಕ್ಷೆಗೂ ಮೀರಿ ಜನರು ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಚಿತ್ರತಂಡವು ಅದನ್ನು ಪರಿಶೀಲಿಸುವ ಕೆಲಸವನ್ನು ನಡೆಸಿದೆ. ಸಾಮಾನ್ಯ ಕಲಾವಿದರು ಮಾತ್ರವಲ್ಲ, ಈಗಾಗಲೇ ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ನಾಯಕಿಯರು ಅವಕಾಶ ಕೇಳಿದ್ದಾರೆ ಎನ್ನವುದು ವಿಶೇಷ. ಕಾಂತಾರ ಸಿನಿಮಾದಲ್ಲಿ ನಟಿಸೋಕೆ ಆಸೆ ಇರುವುದಾಗಿ ಪಾಯಲ್ ರಜಪೂತ್ (Payal Rajput) ಮತ್ತು ಕನ್ನಡದ ನಟಿ ಕಾರುಣ್ಯ ರಾಮ್ (Karunya Ram)…
Author: AIN Author
ಕೋಳಿ ಸಾಕಾಣಿಕೆ ಮಾಡಬೇಕು ಎನ್ನುವ ಪ್ರತಿಯೊಬ್ಬರಿಗೂ ಉಪಯುಕ್ತವಾಗುವ ಸೂಕ್ತ ಸಲಹೆಗಳನ್ನು ಇಲ್ಲಿ ನೀಡಲಾಗಿದೆ. ಶುದ್ಧ ಪಾತ್ರೆಯಲ್ಲಿ ಯಾವಾಗಲೂ ಕೋಳಿಗಳಿಗೆ ಶುದ್ಧ ನೀರನ್ನು ಒದಗಿಸಬೇಕು. ಕೋಳಿ ಆಹಾರವನ್ನು ಒಣಗಿದ ಹಾಗೂ ಸ್ವಚ್ಛ ಸ್ಥಳದಲ್ಲಿ ಇಡಬೇಕು. ಮೇವಿಣಿಕೆಗಳನ್ನು ಮತ್ತು ನೀರುಣಿಕೆಗಳನ್ನು ಪ್ರತಿದಿನ ಶುದ್ಧ ನೀರಿನಿಂದ ತೊಳೆದು ಒಣಗಿಸಿದ ನಂತರ ಆಹಾರವನ್ನು ನೀಡಬೇಕು. ಕೋಳಿ ಮನೆಯನ್ನು ಪ್ರತಿದಿನ ಸ್ವಚ್ಛವಾಗಿ ಇಡಬೇಕು. ನೆಲ ಮತ್ತು ಗೋಡೆಯ ಸುತ್ತಮುತ್ತ ಸುಣ್ಣವನ್ನು ಹಾಕಬೇಕು. ಯಾವ ಕೋಳಿಗಳು ರೋಗಕ್ಕೆ ತುತ್ತಾಗುವ ಸಾಧ್ಯತೆ ಇದೆ ಅಂತಹ ಕೋಳಿಗಳನ್ನು ಬೇರ್ಪಡಿಸಬೇಕು. ಕೋಳಿಗಳ ಜೊತೆಯಲ್ಲಿ ಬೇರೆ ಪ್ರಾಣಿಗಳನ್ನು ಸಾಕಬಾರದು. ಜಂತುನಾಶಕ ಔಷಧಿಯನ್ನು ಲಸಿಕೆ ಹಾಕುವ 12 ರಿಂದ15 ದಿನಗಳ ಮುಂಚೆ ನೀಡಬೇಕು. ಲಸಿಕೆಯನ್ನು ವೇಳಾ ಪಟ್ಟಿಯಂತೆ ಹಾಕಿಸಬೇಕು. ಕೋಳಿಗಳಲ್ಲಿ ಪ್ರಮುಖವಾಗಿ ಕಂಡು ಬರುವ ರೋಗಗಳು ಮತ್ತು ಅವುಗಳ ನಿರ್ವಹಣೆ: ಕೋಳಿಗಳಲ್ಲಿ ಬರುವ ಮುಖ್ಯ ರೋಗಗಳೆಂದರೆ, ರಾಣಿಖೇತ, ಸಿಡುಬು ರೋಗ, ಲಿಂಪಾಯ್ಡ್ ಲ್ಯುಕೋಸಿಸ್, ರಕ್ತಬೇಧಿ. ರೋಗ ಬಂದ ಕೋಳಿಗಳು ತೋರುವ ಸಾಮಾನ್ಯ ಲಕ್ಷಣಗಳೆಂದರೆ ಆಹಾರ ತಿನ್ನದೆ ಚುರುಕಾಗಿರದೆ…
ಹೊಸದಿಲ್ಲಿ :- ಭಾರತದಲ್ಲಿ “ಸುರಕ್ಷಿತ ಸ್ವರ್ಗ’ವನ್ನೇ ಕಂಡುಕೊಂಡಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಬೇರೆ ರಾಷ್ಟ್ರಗಳಲ್ಲಿ ಕಿರುಕುಳವನ್ನು ಎದುರಿಸುತ್ತಿದ್ದರೂ, ಮುಸ್ಲಿಮರು ಭಾರತದಲ್ಲಿ “ಸುರಕ್ಷಿತ ಸ್ವರ್ಗ’ವನ್ನೇ ಕಂಡುಕೊಂಡಿದ್ದಾರೆ. ಇದು ಭಾರತದ ಸಮಾಜವು ಯಾವುದೇ ಧಾರ್ಮಿಕ ಅಲ್ಪಸಂಖ್ಯಾಕರ ಬಗ್ಗೆ ತಾರತಮ್ಯ ಹೊಂದಿಲ್ಲ ಎಂಬುದಕ್ಕೆ ನಿದರ್ಶನ’ ಎಂದರು. ದೇಶದಲ್ಲಿ ಸೂಕ್ಷ್ಮ ಅಲ್ಪಸಂಖ್ಯಾಕ ವರ್ಗವೆಂದು ಗುರುತಿ ಸಲಾಗಿರುವ ಪಾರ್ಸಿಗಳ ಆರ್ಥಿಕ ಯಶಸ್ಸಿನ ಉದಾಹರಣೆ ನೀಡಿದರು. ಅಲ್ಲದೇ, ಯಾವುದೇ ಧಾರ್ಮಿಕ ಅಲ್ಪಸಂಖ್ಯಾಕರಿಗೂ ಇಲ್ಲಿನ ಸಮಾಜ ತಾರತಮ್ಯ ತೋರುತ್ತಿಲ್ಲ. ಮುಸ್ಲಿಮರು ಬೇರೆ ರಾಷ್ಟ್ರಗಳಿಗಿಂತಲೂ ಹೆಚ್ಚಿನ ಸುರಕ್ಷಿತ ಸ್ವರ್ಗವನ್ನು ಭಾರತದಲ್ಲಿ ಕಂಡುಕೊಂಡಿದ್ದಾರೆ. ಸಂತೋಷವಾಗಿ, ಸಮೃದ್ಧವಾಗಿ ಜೀವಿಸುತ್ತಿದ್ದಾರೆ ಎಂದು ಪ್ರಧಾನಿ ಪ್ರತಿಪಾದಿಸಿದ್ದಾರೆ.
ಬೆಂಗಳೂರು:- ಒಬ್ಬ ಅಥವಾ ಹೆಚ್ಚಿನ ಪತ್ನಿಯರು ಕುಟುಂಬ ಪಿಂಚಣಿ ಪಡೆಯಲು ಅರ್ಹರು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಮೊದಲನೇ ಪತ್ನಿ ಮತ್ತು ಆಕೆಯ ಪುತ್ರಿಯರಿಗೆ ಶೇ.50 ಕುಟುಂಬ ಪಿಂಚಣಿ ಮಂಜೂರು ಮಾಡುವಂತೆ ನೈಋತ್ಯ ರೈಲ್ವೆಗೆ ಆದೇಶಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಾವನ್ನಪ್ಪಿದ ರೈಲ್ವೆ ಉದ್ಯೋಗಿಯ 2ನೇ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠ ಭಾಗಶಃ ಪುರಸ್ಕರಿಸದೆ. ಪಿಂಚಣಿ ಪಾವತಿಸಲು ಯಾವೆಲ್ಲ ನಿಯಮಗಳು ಅನ್ವಯಿಸಲಿವೆಯೋ ಅವುಗಳನ್ನು ಅನ್ವಯಿಸಲಾಗುವುದು. ಉದ್ಯೋಗಿಯ ಹಕ್ಕುಗಳು ಅಥವಾ ಅವರ ಕುಟುಂಬವು ಪಿಂಚಣಿ ನಿಯಮವನ್ನು ಅವಲಂಬಿಸಿರುತ್ತದೆ. ನಿಯಮಗಳು ಇಲ್ಲದಿದ್ದರೆ ಪಿಂಚಣಿ ಇಲ್ಲ. ಒಂದೊಮ್ಮೆ ನಿಯಮಗಳು ಇದ್ದರೆ ಪಿಂಚಣಿಯನ್ನು ನಿಯಮದ ಪ್ರಕಾರ ಪಾವತಿಸಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಎಲ್ಲರ ಮನೆಯಲ್ಲಿ ಬಾಳೆ ಹಣ್ಣು ಇದ್ದೆ ಇರುತ್ತದೆ. ಊಟ ಆದ ಮೇಲೆ ತಿಂದು ಅದರ ಸಿಪ್ಪೆಯನ್ನು ಕಸದ ಬುಟ್ಟಿಗೆ ಎಸೆಯುತ್ತೇವೆ. ಆದರೆ ಬಾಳೆಹಣ್ಣಿನಲ್ಲಿ ಇರುವಂತಹ ಹಲವಾರು ರೀತಿಯ ಪೋಷಕಾಂಶಗಳು ಬಾಳೆಹಣ್ಣಿನ ಸಿಪ್ಪೆಯಲ್ಲೂ ಇದೆ. ಇದನ್ನು ಕೆಲವೊಂದು ಅಧ್ಯಯನಗಳು ಹೇಳುತ್ತವೆ. ಬಾಳೆಹಣ್ಣಿನ ಸಿಪ್ಪೆ ಕೂಡ ಆರೋಗ್ಯಕ್ಕೆ ತುಂಬಾ ಲಾಭಕರವಾಗಿದೆ. ಬಾಳೆಹಣ್ಣಿನ ಸಿಪ್ಪೆಯಲ್ಲಿ ವಿಟಮಿನ್ ಬಿ6 ಮತ್ತು ವಿಟಮಿನ್ ಬಿ12 ಅತ್ಯಧಿಕ ಮಟ್ಟದಲ್ಲಿ ಇರುತ್ತದೆ. ಅಷ್ಟೇ ಅಲ್ಲದೇ ಮೆಗ್ನಿಷಿಯಂ, ಪೊಟ್ಯಾಶಿಯಂ, ನಾರಿನಾಂಶ ಮತ್ತು ಪ್ರೋಟಿನ್ ಬಾಳೆಹಣ್ಣಿನ ಸಿಪ್ಪೆಯಲ್ಲಿದೆ. ಆದ್ದರಿಂದ ಬಾಳೆ ಹಣ್ಣಿನ ಸಿಪ್ಪೆಯಿಂದ ಏನೆಲ್ಲಾ ಸದುಪಯೋಗಗಳನ್ನು ಪಡೆದುಕೊಳ್ಳಬಹುದು ಎಂಬುದನ್ನು ತಿಳಿಯೋಣ. ಹೊಳೆಯುವ ಹಲ್ಲುಗಳಿಗಾಗಿ:ಬಾಳೆಹಣ್ಣಿನ ಸಿಪ್ಪೆಯನ್ನು ಚಿಕ್ಕ ತುಂಡುಗಳನ್ನಾಗಿ ಮಾಡಿಕೊಂಡು ಎರಡರಿಂದ ಮೂರು ನಿಮಿಷದ ತನಕ ಹಲ್ಲುಗಳ ಮೇಲೆ ಉಜ್ಜಿ. ಆಮೇಲೆ ಹತ್ತು ನಿಮಿಷ ಹಾಗೆಯೇ ಬಿಡಿ. ನಂತರ ನಿಮ್ಮ ಹಲ್ಲುಗಳನ್ನು ತೊಳೆಯಿರಿ. ಇದರಿಂದ ನಿಮ್ಮ ಹಲ್ಲುಗಳಿಗೆ ಫಳ ಫಳ ಎನ್ನುವ ಹೊಳಪು ದೊರೆಯುತ್ತದೆ. ಮೊಡವೆಯ ಸಮಸ್ಯೆ ಪರಿಹಾರ:ಸಾಮಾನ್ಯವಾಗಿ ಯುವತಿ ಮತ್ತು ಯುವಕರಿಗೆ ಮೊಡವೆಗಳ ಸಮಸ್ಯೆ…
ಗಾಂಧೀನಗರ: ಅಯೋಧ್ಯೆ ರಾಮಮಂದಿರ ಉದ್ಘಾಟನೆ ದಿನ ಹತ್ತಿರ ಬರುತ್ತಿದೆ. ರಾಮಮಂದಿರ ಉದ್ಘಾಟನೆಗೆ ಗಣ್ಯರು, ಸೆಲೆಬ್ರಿಟಿಗಳು, ಸುಂದರ ಕೆತ್ತನೆಯ ವಿಗ್ರಹಗಳು ಸುದ್ದಿಯಾಗುತ್ತಿವೆ. ಈ ಹೊತ್ತಿನಲ್ಲೇ ರಾಮಮಂದಿರ ಮಾದರಿಯಲ್ಲೇ ನೆಕ್ಲೆಸ್ ತಯಾರಿಸಿರುವುದು ಗಮನ ಸೆಳೆದಿದೆ. ಗುಜರಾತ್‌ನ ಸೂರತ್‌ನ ವಜ್ರದ ವ್ಯಾಪಾರಿಯೊಬ್ಬರು 5000 ಅಮೆರಿಕನ್ ವಜ್ರಗಳು ಮತ್ತು 2 ಕೆಜಿ ಬೆಳ್ಳಿಯನ್ನು ಬಳಸಿ ರಾಮಮಂದಿರ ಮಾದರಿಯ ನೆಕ್ಲೇಸ್ ಮಾಡಿದ್ದಾರೆ. ಜೊತೆಗೆ ಶ್ರೀರಾಮ, ಸೀತೆ, ಲಕ್ಷ್ಮಣ, ಹನುಮಂತ ಮತ್ತು ಮಾಯಾ ಜಿಂಕೆ ಮೂರ್ತಿಗಳನ್ನೂ ಕೆತ್ತನೆ ಮಾಡಿಸಿದ್ದಾರೆ. 40 ಕುಶಲಕರ್ಮಿಗಳು 35 ದಿನಗಳಲ್ಲಿ ಇದನ್ನು ವಿನ್ಯಾಸಗೊಳಿಸಿದ್ದಾರೆ. https://ainlivenews.com/sore-throat-cough-problem-in-winter-make-these-things-and-drink-tea/ ಈ ಬಗ್ಗೆ ಮಾತನಾಡಿರುವ ರಸೇಶ್ ಜ್ಯುವೆಲ್ಸ್‌ನ ನಿರ್ದೇಶಕ ಕೌಶಿಕ್ ಕಾಕಡಿಯಾ, 2 ಕೆಜಿ ಬೆಳ್ಳಿ ಬಳಸಿ ನೆಕ್ಲೆಸ್ ಮತ್ತು ಮೂರ್ತಿಗಳನ್ನು ಮಾಡಲಾಗಿದೆ. ಜೊತೆಗೆ 5000 ಕ್ಕೂ ಹೆಚ್ಚು ಅಮೆರಿಕನ್ ವಜ್ರಗಳನ್ನು ಬಳಸಲಾಗಿದೆ ಎಂದು ತಿಳಿಸಿದ್ದಾರೆ. ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮಮಂದಿರದಿಂದ ಸ್ಫೂರ್ತಿ ಪಡೆದು ನೆಕ್ಲೆಸ್ ವಿನ್ಯಾಸಗೊಳಿಸಿದ್ದೇವೆ. ಇದು ಯಾವುದೇ ವಾಣಿಜ್ಯ ಉದ್ದೇಶಕ್ಕಾಗಿ ರೂಪಿಸಿಲ್ಲ. ರಾಮಮಂದಿರಕ್ಕೆ ಏನಾದರೂ ಉಡುಗೊರೆ ಕೊಡಬೇಕು ಎಂಬ ಉದ್ದೇಶದಿಂದ…
ಗದಗ:- ಹಿಂದು ರಾಷ್ಟ್ರ ಮಾಡುವುದು ಬಿಜೆಪಿ ಅಜೆಂಡಾ ಅಲ್ಲ, ಜನರ ತೀರ್ಮಾನ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಹಿಂದು ರಾಷ್ಟ್ರ ಮಾಡುವುದು ಬಿಜೆಪಿ ಅಜೆಂಡಾ ಅಲ್ಲ, ಅದು ಹಿಂದುಗಳದ್ದು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು. ದೇಶದ ಹಿಂದುಗಳು ಹಿಂದು ರಾಷ್ಟ್ರ ಆಗಬೇಕು ಎಂದು ನಿರ್ಧಾರ ಮಾಡಿದ್ದಾರೆ. ಆಯೋಧ್ಯೆಯಲ್ಲಿ ರಾಮಮಂದಿರ ಕಟ್ಟಬೇಕು ಎನ್ನುವುದು ಇವತ್ತಿನ ತೀರ್ಮಾನ ಅಲ್ಲ, ಸ್ವಾತಂತ್ರ್ಯ ಪೂರ್ವದಿಂದ ಇದರ ಬಗ್ಗೆ ಹೋರಾಟ ಮಾಡಲಾಗುತ್ತಿದೆ. ಜ. 22ರಂದು ಅಯೋಧ್ಯೆಯಲ್ಲಿ ಇಡೀ ಪ್ರಪಂಚವೇ ನೋಡುವ ವಿಶೇಷ ಕಾರ್ಯಕ್ರಮವಾಗುತ್ತದೆ ಎಂದರು. ಕಾಶಿ ಕುರಿತು ಕೋರ್ಟ ಆರ್ಡರ್ ಆಗಿದೆ, ಮಧುರಾ ಬಗ್ಗೆ ಸರ್ವೇ ಕೊಟ್ಟಿದ್ದಾರೆ. ದೇಶದಲ್ಲಿ ಹೊಸ ಮಸೀದಿಗಳ ಬಗ್ಗೆ ನಾನು ವಿರೋಧ ಮಾಡೋದಿಲ್ಲ. ದೇವಸ್ಥಾನ ಕೆಡವಿ ಕಟ್ಟಿದ ಒಂದೇ ಒಂದು ಮಸೀದಿ ಉಳಿಸೋದಿಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದರು
ಹುಬ್ಬಳ್ಳಿ: ಗುತ್ತಿಗೆ ಕಾರ್ಮಿಕರಿಗೆ ಸೇವಾ ಭದ್ರತೆ ನೀಡಬೇಕು, ಬಂಡವಾಳಶಾಹಿಗಳ ಪರ ಹಾಗೂ ಕಾರ್ಮಿಕ ವಿರೋಧಿ ಲೇಬರ್ ಕೋಡ್ ರದ್ದು ಮಾಡುವುದು ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ನಡೆಯುತ್ತಿರುವ ಅಖಿಲ ಭಾರತ ಪ್ರತಿಭಟನಾ ಸಪ್ತಾಹದ ಅಂಗವಾಗಿ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಎಐಯುಟಿಯುಸಿ ಕೇಂದ್ರ ಕಾರ್ಮಿಕ ಸಂಘಟನೆ ಧಾರವಾಡ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗಂಗಾಧರ ಬಡಿಗೇರ ಮಾತನಾಡಿ, ಕೇಂದ್ರ, ರಾಜ್ಯ ಸರ್ಕಾರಗಳು ಕಾರ್ಪೋರೇಟ್ ಕಂಪನಿಗಳ ಪರ ನೀತಿಗಳನ್ನು ರೂಪಿಸುತ್ತಿರುವುದರಿಂದ ದುಡಿಯುವ ಜನರ ಶೋಷಣೆಯಾಗುತ್ತಿದೆ. ಕೆಲಸದ ಅವಧಿಯನ್ನು 12 ಗಂಟೆಗಳಿಗೆ ಹೆಚ್ಚಳ ಮಾಡಲಾಗಿದೆ. ಹಳೇ ಪಿಂಚಣಿ ಯೋಜನೆಯನ್ನೇ ಪುನರ್ ಜಾರಿಗೊಳಿಸಬೇಕೆಂಬ ಬೇಡಿಕೆಯನ್ನು ಕಡೆಗಣಿಸಲಾಗುತ್ತಿದೆ ಎಂದು ದೂರಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಎಐಯುಟಿಯುಸಿ ಜಿಲ್ಲಾ ಘಟಕದ ಉಪಾಧ್ಯಕ್ಷೆ ಭುವನಾ ಬಳ್ಳಾರಿ, ಲಕ್ಷಾಂತರ ಮಹಿಳೆಯರೇ ಇರುವ ವಿವಿಧ ಯೋಜನೆಗಳಲ್ಲಿ ತೊಡಗಿರುವ ಆಶಾ, ಅಂಗನವಾಡಿ, ಬಿಸಿಯೂಟ ಮುಂತಾದ ಸ್ಕೀಂ ಕಾರ್ಯಕರ್ತೆಯರನ್ನು ಸರ್ಕಾರಗಳು ನಿರ್ಲಕ್ಷ ಮಾಡುತ್ತಿವೆ ಎಂದು ಆರೋಪಿಸಿದರು. ಕೇಂದ್ರ…
ಹುಬ್ಬಳ್ಳಿ: ಎರಡು ಕೋವಿಡ್- 19 ಅಲೆಗಳಲ್ಲಿ ಕಿರಿಯ ವಯಸ್ಸಿನ ಶಿಕ್ಷಕರು ಅಧಿಕಾರಿಗಳು ಜೀವ ತೆತ್ತಿದ್ದಾರೆ ಗಂಭೀರವಾಗಿ ಪರಿಗಣಿಸಲು ಅಶೋಕ ಸಜ್ಜನ ಒತ್ತಾಯ ಮಾಡಿದರು. ಈಗಾಗಲೇ ಕೋವಿಡ್ ಸೋಂಕಿತ ರೋಗಿಗಳ ಸಂಖ್ಯೆ ವಿಶ್ವ ದೇಶ ರಾಜ್ಯಗಳಾದ್ಯಂತ ವೇಗವಾಗಿ ಹೊಸ ರೂಪಾಂತರಿ ಜೆ-1 ತಳಿ ಪ್ರಸರಣ ತಡೆಯುವಲ್ಲಿ ಮುಖ್ಯ ಮಂತ್ರಿಗಳು ಆರೋಗ್ಯ ಸಚಿವರು ಸಾರಿಗೆ ಸಚಿವರು ತೀವ್ರ ನಿಗಾ ಪರ ಮಾರ್ಗಸೂಚಿ ಹೊರಡಿಸುತ್ತಿದ್ದಾರೆ. ಆದರೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ ಐದು ಲಕ್ಷದಷ್ಟು ಅಧ್ಯಾಪಕರು ಒಂದು ಕೋಟಿಗೂ ಹೆಚ್ಚು ವಿದ್ಯಾರ್ಥಿಗಳಿದ್ದು ಮಾನವ ಸಂಪನ್ಮೂಲ ಸಂಪತ್ತು ಉಳಿಸಿ ಬೆಳೆಸುವಲ್ಲಿ ಶಾಲಾ ಶಿಕ್ಷಣ ಸಚಿವರು ಹಾಗೂ ಉನ್ನತ ಹಂತದ ಅಧಿಕಾರಿಗಳು ತುರ್ತಾತಿತುರ್ತಾಗಿ ಇತ್ತ ಕಡೆ ಗಮನಹರಿಸಿ ಕಟ್ಟು ನಿಟ್ಟಿನ ಮಾರ್ಗಸೂಚಿ ಹೊರಡಿಸಬೇಕೆಂದು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ.ರಾಜ್ಯ ಘಟಕ ಹುಬ್ಬಳ್ಳಿಯ ರಾಜ್ಯಾಧ್ಯಕ್ಷ ಅಶೋಕ.ಎಮ್.ಸಜ್ಜನ ಹಾಗೂ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಸಿ.ಉಪ್ಪಿನ ಸರ್ಕಾರಕ್ಕೆ ಸಚಿವರಿಗೆ ಆಗ್ರಹಿಸಿದ್ದಾರೆ.
ಕುಷ್ಠಗಿ:- ಸದನದಿಂದ ಸಂಸದರನ್ನು ಹೊರಗೆ ಹಾಕಿರುವುದುವುದು ಖಂಡನೀಯ ಎಂದು MB ಪಾಟೀಲ್ ಹೇಳಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸದನದಿಂದ ಸಂಸದರನ್ನು ಹೊರಗೆ ಹಾಕುವುದು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದಂತಾಗುತ್ತದೆ ಎಂದರು. ಸಂಸದರದ್ದು ತಪ್ಪು ಇದ್ದರೆ ಅವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಬಹುದಿತ್ತು. ಆದರೆ ಅವರನ್ನು ಸದನದಿಂದ ಹೊರಗೆ ಹಾಕಿರುವುದು ಇದೇ ಮೊದಲು. ಸಂಸದರನ್ನು ಅಮಾನತು ಮಾಡುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ ಎಂದರು. ತಾಲೂಕಿನ ಕ್ಯಾದಗುಂಪಿಯ ಕೈಗಾರಿಕೆ ಪ್ರದೇಶದಲ್ಲಿ ಅರ್ಹ ಉದ್ದಿಮೆದಾರರು ಕೈಗಾರಿಕೆ ಸ್ಥಾಪನೆಗೆ ಮುಂದಾದಲ್ಲಿ ಅಂಥವರಿಗೆ ಕೈಗಾರಿಕೆ ಸ್ಥಾಪಿಸಲು ಅನುಮತಿ ಕೊಡಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಖಾನೆಗಳು ನಡೆಯಬೇಕು. ಅದರಿಂದ ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ ಎಂದರು. ಸದ್ಯ ಹಳೆ ಸರ್ಕಾರ ಮಂಡಿಸಿದ ಬಜೆಟ್‌ನ್ನು ನಿರ್ವಹಣೆ ಮಾಡಿಕೊಂಡು ಹೋಗುತ್ತಿದ್ದೇವೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.