Redmi Note 13 Pro ಅನ್ನು ಈ ವರ್ಷದ ಸೆಪ್ಟೆಂಬರ್‌ನಲ್ಲಿ ಚೀನಾದಲ್ಲಿ Redmi Note 13 ಮತ್ತು Redmi Note 13 Pro+ ಜೊತೆಗೆ ಬಿಡುಗಡೆ ಮಾಡಲಾಯಿತು. Redmi Note 13 ಸರಣಿಯ ಸ್ಮಾರ್ಟ್‌ಫೋನ್‌ಗಳು ಜನವರಿ 4 ರಂದು ಭಾರತದಲ್ಲಿ ಬಿಡುಗಡೆಯಾಗಲಿವೆ. ಫೋನ್‌ಗಳ ಭಾರತೀಯ ರೂಪಾಂತರಗಳು ಅವುಗಳ ಚೀನೀ ಕೌಂಟರ್‌ಪಾರ್ಟ್‌ಗಳಂತೆ ಒಂದೇ ರೀತಿಯ ವಿಶೇಷಣಗಳನ್ನು ನೀಡುವ ನಿರೀಕ್ಷೆಯಿದೆ. ಈ ತಿಂಗಳ ಆರಂಭದಲ್ಲಿ, ಯುರೋಪಿಯನ್ ಮಾರುಕಟ್ಟೆಗಳಲ್ಲಿ ಹ್ಯಾಂಡ್‌ಸೆಟ್‌ಗಳ ನಿರೀಕ್ಷಿತ ಬೆಲೆ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿತು. ಈಗ ಟಿಪ್‌ಸ್ಟರ್ ಭಾರತದಲ್ಲಿ Redmi Note 13 Pro ಬೆಲೆಯನ್ನು ಸೂಚಿಸಿದ್ದಾರೆ. Tipster ಅಭಿಷೇಕ್ ಯಾದವ್ (@yabhishekhd) X ನಲ್ಲಿನ ಪೋಸ್ಟ್‌ನಲ್ಲಿ Redmi Note 13 Pro ಭಾರತದಲ್ಲಿ ರೂ. ಅದರ 12GB + 256GB ರೂಪಾಂತರಕ್ಕೆ 32,999. ದೇಶದ ಇತರ ಕಾನ್ಫಿಗರೇಶನ್‌ಗಳಲ್ಲಿ ಫೋನ್ ಲಭ್ಯವಿರುತ್ತದೆಯೇ ಎಂಬುದನ್ನು ಅವರು ಸೇರಿಸಲಿಲ್ಲ. ಮೂಲ Redmi Note 13 ಮತ್ತು Redmi Note 13 Pro+ ನ ಬೆಲೆಗಳು, ಪ್ರೋ ಮಾದರಿಯ…
Author: AIN Author
ಮೊಬೈಲ್ ಅಥವಾ ಲ್ಯಾಪ್ಟಾಪ್ನಲ್ಲಿ ವೆಬ್ ಬ್ರೌಸರ್ನಲ್ಲಿ ಸರ್ಚ್ ಮಾಡಿದ್ದು, ನೋಡಿದ್ದು ಯಾವುದು ಸಹ ಹಿಸ್ಟರಿಯಲ್ಲಿ ಉಳಿಯಬಾರದು, ವೆಬ್ ಬ್ರೌಸರ್ ಸೇವೆ ನೀಡುವವರು ಸಹ ಈ ಡಾಟಾವನ್ನು ಬಳಕೆ ಮಾಡಬಾರದು, ಬಳಕೆದಾರರ ಈ ರೀತಿಯ ಯಾವುದೇ ಡಾಟಾವು ಆನ್ಲೈನ್ನಲ್ಲಿ ಯಾರಿಗೂ ಸಿಗಬಾರದು, ಭೇಟಿ ನೀಡಿದ ವೆಬ್ಪೇಜ್ಗಳ ರೆಕಾರ್ಡ್ ಸಂಪೂರ್ಣ ಖಾಸಗಿ ಆಗಿರಬೇಕು, ಯಾರಿಗೂ ಗೊತ್ತಾಗಬಾರದು ಎಂದರೆ ವೆಬ್ ಬ್ರೌಸರ್ನಲ್ಲಿ ಇನ್ಕಾಗ್ನಿಟೊ ಮೋಡ್ ಎಂಬ ಸೆಟ್ಟಿಂಗ್ ಅನ್ನು ಬಳಕೆ ಮಾಡಬೇಕು ಎನ್ನುತ್ತಾರೆ ಹಲವರು. ಹಾಗಿದ್ರೆ ಇದು ಸಂಪೂರ್ಣ ಖಾಸಗಿಯೇ, 100% ಯಾರಿಗೂ ಈ ಡಾಟಾ ಮಾಹಿತಿ ಸಿಗುವುದಿಲ್ಲವೇ ಎಂಬುದು ಹಲವರ ಪ್ರಶ್ನೆ. ಇದಕ್ಕೆ ಉತ್ತರವನ್ನು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ ಗೂಗಲ್ನ ಇನ್ಕಾಗ್ನಿಟೊ ಮೋಡ್ ಎಂದರೇನು? ಇದು ಖಂಡಿತ ಸಂಪೂರ್ಣ ಖಾಸಗಿಯೇ? ಗೂಗಲ್ ಪ್ರಕಾರ ಪ್ರಪಂಚದಾದ್ಯಂತ ಹೆಚ್ಚು ಬಳಕೆದಾರರನ್ನು ಹೊಂದಿರುವ ಕ್ರೋಮ್ ಬ್ರೌಸರ್ನಲ್ಲಿನ ‘ಇನ್ಕಾಗ್ನಿಟೊ ಮೋಡ್’ ಬಳಕೆದಾರರಿಗೆ ವೆಬ್ ಟ್ರ್ಯಾಕಿಂಗ್ ಕುಕೀಸ್ಗಳಿಂದ ಸ್ವತಂತ್ರವಾಗಿ ಹಾಗೂ ಇಂಟರ್ನೆಟ್ ಬಳಕೆಯ ಹಿಸ್ಟರಿಯು ಉಳಿಯದಂತೆ ಬಳಸುವ ಫೀಚರ್ ಅನ್ನು ಆಫರ್…
ಸ್ಮಾರ್ಟ್ಫೋನ್ ಬಳಕೆದಾರರಿಗೆ ಗೊತ್ತಿರಲೇಬೇಕಾದ ಸಂಗತಿಗಳಿವು! ಏನಂತೀರಾ? ನಮ್ಮ ದೈನಂದಿನ ಬಹುತೇಕ ಚಟುವಟಿಕೆಗಳಿಗೆ ಸ್ಮಾರ್ಟ್ ಫೋನ್ ನೆರವಾಗುತ್ತದೆ. ಹೀಗೆ ನಿರಂತರ ಸ್ಮಾರ್ಟ್ ಫೋನ್ ಬಳಕೆ ಸಹಜವಾಗಿಯೇ ಬ್ಯಾಟರಿಯನ್ನು ಖಾಲಿ ಮಾಡುತ್ತದೆ. ಹೀಗಾಗಿ, ಆಗಾಗ ಬ್ಯಾಟರಿ ಚಾರ್ಜ್ ಕೂಡಾ ಮಾಡುತ್ತಲೇ ಇರಬೇಕಾಗುತ್ತದೆ. ಆದರೆ, ನಮ್ಮ ಆಂಡ್ರಾಯ್ಡ್ ಫೋನ್ನ ಬ್ಯಾಟರಿ ಅವಧಿಯನ್ನು ವಿಸ್ತರಿಸಲು ಕೆಲವೊಂದು ಸರಳ ಹಾಗೂ ಪರಿಣಾಮಕಾರಿ ಮಾರ್ಗಗಳೂ ಇವೆ. ಅವುಗಳ ಬಗ್ಗೆ ಇಲ್ಲಿ ನೋಡೋಣ ಬ್ರೈಟ್ನೆಸ್ ಕಡಿಮೆ ಮಾಡಿ ಸ್ಕ್ರೀನ್ನ ಬ್ರೈಟ್ನೆಸ್ ಕಡಿಮೆ ಮಾಡುವುದು ಬಹಳ ಉತ್ತಮ ಕ್ರಮಗಳಲ್ಲಿ ಒಂದು. ಸಾಮಾನ್ಯವಾಗಿ ಎಲೆಕ್ಟ್ರಾನಿಕ್ ಡಿವೈಜ್ಗಳಲ್ಲಿ ಡಿಸ್ಪ್ಲೇ ಹೆಚ್ಚಿನ ಶಕ್ತಿಯನ್ನು ಬಳಸುತ್ತದೆ ಹಾಗೂ ಬೇಗ ಬ್ಯಾಟರಿ ಖಾಲಿಯಾಗುವಂತೆ ಮಾಡುತ್ತದೆ. ಹೀಗಾಗಿ ನಿಮ್ಮ ಆಂಡ್ರಾಯ್ಡ್ ಫೋನ್ನಲ್ಲಿ ಸಾಧ್ಯವಾದಷ್ಟು ಬ್ರೈಟ್ನೆಸ್ ಕಡಿಮೆ ಇಟ್ಟುಕೊಳ್ಳುವುದರಿಂದ ಶಕ್ತಿಯ ಬಳಕೆಯನ್ನು ಕಡಿಮೆ ಮಾಡುತ್ತದೆ ಟರ್ನ್ ಆಫ್ ಸಮಯ ಕಡಿಮೆ ಮಾಡಿ ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳ ಸ್ಕ್ರೀನ್ ಆಟೋಮ್ಯಾಟಿಕ್ ಆಗಿ ಟರ್ನ್ ಆಫ್ ಆಗುತ್ತದೆ. ಆದರೆ, ಹೀಗೆ ಟರ್ನ್ ಆಫ್ ಆಗುವ ಸಮಯವನ್ನು…
ವಿದೇಶಗಳಲ್ಲಿ ಬಹುತೇಕ ಕಡೆ ಚಿನ್ನದ ಬೆಲೆ ಶೇ. 5ಕ್ಕಿಂತಲೂ ಹೆಚ್ಚಾಗಿದೆ. ಭಾರತದಲ್ಲಿ ಇಂದು ಚಿನ್ನ ತೀರಾ ತುಟ್ಟಿಯಾಗುವ ನಿರೀಕ್ಷೆ ಇದೆ. 22 ಗ್ರಾಮ್ ಚಿನ್ನದ ಬೆಲೆ 60 ಸಾವಿರ ರೂ ಆಸುಪಾಸಿಗೆ ಹೋಗುವ ಸಾಧ್ಯತೆ ಇದೆ. ಬೆಳ್ಳೆಯೂ ತುಸು ದುಬಾರಿಯಾಗಿದೆ. ಅಮೆರಿಕದಲ್ಲಿ ಮುಂಬರುವ ಕೆಲ ತಿಂಗಳು ಬಡ್ಡಿದರ ಹೆಚ್ಚಳವಾಗುವ ಸುಳಿವು ಸಿಕ್ಕ ಬಳಿಕ ಚಿನ್ನದ ಮೇಲಿನ ಹೂಡಿಕೆ ಹೆಚ್ಚಾಗತೊಡಗಿದೆ. ಪರಿಣಾಮವಾಗಿ ಬೆಲೆ ಏರುತ್ತಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 57,750 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 63,000 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,920 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 57,750 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,620 ರುಪಾಯಿಯಲ್ಲಿ ಇದೆ. ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ: 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 57,750 ರೂ 24…
ಚಳಿಗಾಲದಲ್ಲಿ ನಾವು ಸ್ನಾನ ಮಾಡುವಾಗ ಈ ವಿಷ್ಯವನ್ನ ಗಮನದಲ್ಲಿ ಇಟ್ಟಿಕೊಂಡು ಸ್ನಾನ ಮಾಡಬೇಕು. ಈ ಕಾಲದಲ್ಲಿ ನಮ್ಮ ತ್ವಚೆ ತೇವವನ್ನು ಕಳೆದುಕೊಳ್ಳುವುದರಿಂದ ತುರಿಕೆ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ತಲೆಹೊಟ್ಟಿನ ಸಮಸ್ಯೆಗೆ ಕಾರಣವಾಗುತ್ತದೆ. ಆದ್ದರಿಂದ ಚಳಿಗಾಲದಲ್ಲಿ ನಿಮ್ಮ ಕೂದಲು ಹಾಗೂ ನೆತ್ತಿಯ ಆರೋಗ್ಯವನ್ನು ಕಾಪಾಡಲು ತಲೆಸ್ನಾನ ಮಾಡುವಾಗ ಈ ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಆಗಾಗ್ಗೆ ಕೂದಲು ತೊಳೆಯಬೇಡಿ: ಚಳಿಗಾಲದಲ್ಲಿ ಪ್ರತಿದಿನ ತಮ್ಮ ಕೂದಲನ್ನು ತೊಳೆಯಲು ಅನೇಕರು ಇಷ್ಟಪಡುತ್ತಾರೆ. ಆದರೆ ಹೀಗೆ ಮಾಡುವುದರಿಂದ ನೆತ್ತಿಯಲ್ಲಿರುವ ನೈಸರ್ಗಿಕ ಎಣ್ಣೆಯು ಕಡಿಮೆಯಾಗಲು ಪ್ರಾರಂಭಿಸುತ್ತದೆ ಮತ್ತು ನಿಮ್ಮ ನೆತ್ತಿ ಒಣಗುತ್ತದೆ. ಆದ್ದರಿಂದ, ಚಳಿಗಾಲದಲ್ಲಿ ಕೂದಲನ್ನು ವಾರಕ್ಕೆ 2 ರಿಂದ 3 ಬಾರಿ ಮಾತ್ರ ತೊಳೆಯಿರಿ. ಕೊದಲಿಗೆ ಎಣ್ಣೆ ಹಚ್ಚಿ: ನಿಮ್ಮ ಕೂದಲನ್ನು ತೊಳೆಯುವ ಮೊದಲು ನೀವು ಕೂದಲಿಗೆ ಎಣ್ಣೆ ಹಚ್ಚಬೇಕು. ಎಣ್ಣೆಹಚ್ಚಿ ಹೆಚ್ಚಿನ ಸಮಯ ಬಿಡಬೇಡಿ: ಕೂದಲಿಗೆ ಎಣ್ಣೆಹಚ್ಚಿ ಹೆಚ್ಚು ಸಮಯ ಇಡಬೇಡಿ ಇದರಿಂದ ತಲೆಹೊಟ್ಉ ಹೆಚ್ಚುತ್ತದೆ. ಅತಿ ಹೆಚ್ಚು ಬಿಸಿ ನೀರು ಬಳಸಬೇಡಿ: ನೀರಿನ ತಾಪಮಾನ ಕಡಿಮೆಯಿರಬೇಕು. ಉಗುರು ಬೆಚ್ಚನೆಯ ನೀರನ್ನು ಬಳಸಿ.…
ಬಾಲಿವುಡ್ ಮೆಗಾಸ್ಟಾರ್ ಶಾರುಖ್ ಖಾನ್ ವಿಶ್ವದಾದ್ಯಂತ ಜನಪ್ರಿಯ ತಾರೆಗಳಲ್ಲಿ ಒಬ್ಬರು. ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ ಮತ್ತು ವಿಶ್ವ ಚಿತ್ರರಂಗದಲ್ಲಿ ಗುರುತಿಸಲ್ಪಟ್ಟ ನಟರಾಗಿದ್ದಾರೆ. ದೊಡ್ಡ ಯಶಸ್ಸನ್ನು ಸಾಧಿಸಲು ನಟ ನಿಜವಾಗಿಯೂ ಶ್ರಮಿಸಿದ್ದಾರೆ ಎಂದು ಹೇಳಬೇಕಾಗಿಲ್ಲ. ಕಿಂಗ್ ಖಾನ್ ಯಾವ ಪಾತ್ರ ಮಾಡಿದರೂ ನೂರಕ್ಕೆ ನೂರು ಕೊಡುತ್ತಾರೆ. ಅವರ ದೇಹವನ್ನು ನೋಡಲು ಮತ್ತು ಅದಕ್ಕಾಗಿ ಕೆಲಸ ಮಾಡುವ ಅವರ ನಿಜವಾದ ಉತ್ಸಾಹವನ್ನು ಅವರ ಎರಡು ಚಲನಚಿತ್ರಗಳಾದ ಓಂ ಶಾಂತಿ ಓಂ (2007) ಮತ್ತು ಹ್ಯಾಪಿ ನ್ಯೂ ಇಯರ್ (2014) ನಲ್ಲಿ ಕಾಣಬಹುದು. ಮುಂಬರುವ ಚಿತ್ರ ಪಠಾಣ್‌ನಲ್ಲಿಯೂ ಅವರು ತಮ್ಮ ಸೀಳಿರುವ ಮೈಕಟ್ಟು ಪ್ರದರ್ಶಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ತೆಳ್ಳಗಿನ ಮೈಕಟ್ಟು ಹೊಂದಿರುವ ಶಾರುಖ್ ಖಾನ್, ಚೂರುಚೂರು ಎಂಟು ಪ್ಯಾಕ್ ಎಬಿಎಸ್ ಮತ್ತು ಸಾಮಾನ್ಯವಾಗಿ ಉತ್ತಮವಾಗಿ ವ್ಯಾಖ್ಯಾನಿಸಲಾದ ದೇಹವನ್ನು ಪಡೆಯಲು ತಮ್ಮ ದೇಹದ ಕೊಬ್ಬಿನ ಶೇಕಡಾವಾರು ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾದರು. ಅವನು ಅದನ್ನು ಹೇಗೆ ಮಾಡಿದನು? ಕಂಡುಹಿಡಿಯೋಣ. ಶಾರುಖ್ ಖಾನ್ ಅವರ ಡಯಟ್…
ಸತ್ಯ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಇತ್ತೀಚಿಗೆ ಮುಹೂರ್ತ ಕಂಡ ರಾಷ್ಟ್ರಪ್ರಶಸ್ತಿ ಹಾಗೂ ರಾಜ್ಯಪ್ರಶಸ್ತಿ ವಿಜೇತ ನಿರ್ದೇಶಕ ಡಿ.ಸತ್ಯಪ್ರಕಾಶ್ (Satya Prakash) ನಿರ್ದೇಶನದ ‘X&Y’ ಚಿತ್ರದ ಚಿತ್ರೀಕರಣಕ್ಕೆ (Shooting) ಚಾಲನೆ ಸಿಕ್ಕಿದೆ. ಡಿಸೆಂಬರ್ 21 ರಿಂದ ಬೆಂಗಳೂರಿನಲ್ಲಿ ಚಿತ್ರೀಕರಣ ಪ್ರಾರಂಭಿಸಿರುವ ಚಿತ್ರತಂಡ, ಫ್ಯಾಂಟಸಿ ಮತ್ತು ಭಾವನಾತ್ಮಕ ದೃಶ್ಯಗಳಿಂದ ಈ ಸಿನಿಮಾ ಪ್ರೇಕ್ಷಕರನ್ನು ತೇಲಿಸಲಿದೆ ಎನ್ನುತ್ತಾರೆ ನಿರ್ದೇಶಕ ಡಿ.ಸತ್ಯಪ್ರಕಾಶ್. ಒಂದು ತಿಂಗಳು ಶೂಟಿಂಗ್ ಮುಗಿಸಿ, ಹೊಸವರ್ಷದ ಫೆಬ್ರವರಿಯಲ್ಲಿ ಮಂಗಳೂರಿಗೆ ಪ್ರಯಾಣ ಬೆಳಸಲಿದೆ. ಹೊಸ ಚಿತ್ರದಲ್ಲಿ ಸತ್ಯಪ್ರಕಾಶ್ ಮತ್ತು ಅಥರ್ವ ಪ್ರಕಾಶ್ (Atharva) ನಾಯಕರಾಗಿ ಅಭಿನಯಿಸುತ್ತಿದ್ದು, ಲವಿತ್ ಛಾಯಾಗ್ರಹಣ, ವಾಸುಕಿ ವೈಭವ್ ಸಂಗೀತ ನಿರ್ದೇಶನ, ಬಿ.ಎಸ್ ಕೆಂಪರಾಜ್ ಸಂಕಲನವಿದ್ದು, ವರದರಾಜ್ ಕಾಮತ್ ಕಲಾ ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಲವು ನಿರ್ದೇಶಕರು ತಮ್ಮ ವಿಭಿನ್ನ ರೀತಿಯ ಕಥೆಯನ್ನು ತೆರೆ ಮೇಲೆ ತರಲು ತಾವೇ ನಟನೆಗಿಳಿಯುತ್ತಿದ್ದಾರೆ. ಈಗ ಆ ಸಾಲಿಗೆ ಹೊಸ ಸೇರ್ಪಡೆ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಡಿ ಸತ್ಯಪ್ರಕಾಶ್ (Satya Prakash). ರಾಮಾ…
ಬೆಂಗಳೂರು:- ಕಳೆದ ಕೆಲವು ದಿನಗಳಿಂದ ದಕ್ಷಿಣ ಒಳನಾಡಿನಲ್ಲಿ ಮೋಡ ಕವಿದ ವಾತಾವರಣ ಇದ್ದು, ಅಲ್ಲಲ್ಲಿ ಮಳೆಯಾಗಿತ್ತು. ಆದರೆ ಇದೀಗ ಮಳೆ ದೂರವಾಗಿತ್ತು. ಚಳಿ ಆರಂಭವಾಗಿದೆ. ಡಿಸೆಂಬರ್ 21ರ ಗುರುವಾರ ಬೆಳಗ್ಗೆ 8.30ರ ವರೆಗೆ ದಾಖಲಾಗಿರುವ ವರದಿಯ ಪ್ರಕಾರ ರಾಜ್ಯಾದ್ಯಂತ ಒಣ ಹವೆ ಮುಂದುವರಿಸಿದೆ. ನಾಳೆ ದಕ್ಷಿಣ ಒಳನಾಡು, ಉತ್ತರ ಒಳನಾಡು ಹಾಗೂ ಕರಾವಳಿಯಲ್ಲೂ ಒಣ ಹವೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ತನ್ನ ದೈನಂದಿನ ವರದಿಯಲ್ಲಿ ತಿಳಿಸಿದೆ. ಹವಾಮಾನ ವರದಿಯ ಪ್ರಕಾರ ಕರ್ನಾಟಕದಲ್ಲಿ ಚಂಡಮಾರುತ ಸೇರಿದಂತೆ ಯಾವುದೇ ರೀತಿಯ ಮಳೆಯ ಭೀತಿ ಇಲ್ಲ. ಪರಿಣಾಮವಾಗಿ ಭಾರಿ ಮಳೆ, ಗುಡುಗು ಸಹಿತ ಮಳೆ ಹಾಗೂ ಮೀನುಗಾರರಿಗೆ ಯಾವುದೇ ರೀತಿಯ ಮುನ್ನೆಚ್ಚರಿಕೆಯೂ ಇಲ್ಲ ಅಂತ ಹೇಳಿದೆ. ಇವತ್ತು ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವೆಡೆ ಬೆಳಗಿನ ಜಾನ ಮಂಜು ಮುಸುಕುವ ಬಹಳಷ್ಟು ಸಾಧ್ಯತೆ ಇರುತ್ತದೆ. ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 18…
ಯುರೋಪ್ ಖಂಡ ಮತ್ತು ಗ್ರೀನ್ ಲ್ಯಾಂಡ್ ಮಧ್ಯೆ ಇರುವ ಅಟ್ಲಾಂಟಿಕ್ ಮಹಾಸಾಗರದಲ್ಲಿ ಐಸ್‍ಲ್ಯಾಂಡ್ ದ್ವೀಪವಿದೆ. ಪ್ರಪಂಚದ 18ನೇ ದೊಡ್ಡ ದ್ವೀಪ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಐಸ್‍ಲ್ಯಾಂಡ್ ತನ್ನ ಪ್ರಕೃತಿ ಸೌಂದರ್ಯದಿಂದ ಪ್ರವಾಸಿಗರನ್ನು ಸೆಳೆಯುತ್ತಿದೆ. ಐಸ್‍ಲ್ಯಾಂಡ್‍ನ ಜಿಡಿಪಿಯಲ್ಲಿ ಶೇ.5ರಷ್ಟು ಪಾಲನ್ನು ಪಡೆದುಕೊಂಡಿರುವುದು ಪ್ರವಾಸೋದ್ಯಮದ ಹೆಗ್ಗಳಿಕೆ. ಕಳೆದ 15 ವರ್ಷದಲ್ಲಿ ಪ್ರವಾಸೋದ್ಯಮ ಉದ್ಯಮ ಭಾರೀ ಬೆಳವಣಿಗೆಯಾಗಿದ್ದು ಜುಲೈ- ಸೆಪ್ಟೆಂಬರ್ ನಡುವಿನ ಬೇಸಿಗೆಯ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಐಸ್‍ಲ್ಯಾಂಡಿಗೆ ಭೇಟಿ ನೀಡುತ್ತಿದ್ದಾರೆ. ಹೀಗಾಗಿ ಐಸ್‍ಲ್ಯಾಂಡ್ ನಲ್ಲಿ ಅಂಥ ವಿಶೇಷತೆ ಏನಿದೆ? ನೀವು ಯಾಕೆ ತೆರಳಬೇಕು ಎನ್ನುವುದಕ್ಕೆ ಟಾಪ್ 10 ಕಾರಣಗಳನ್ನು ಇಲ್ಲಿ ನೀಡಲಾಗಿದೆ. ನೀವು ಗಮನಿಸಿರಬಹುದು ಭಾರತದಲ್ಲಿ ಮಧ್ಯಾಹ್ನದ ವೇಳೆ ಸೂರ್ಯ ನಡು ನೆತ್ತಿಯಲ್ಲಿ ಇರುತ್ತಾನೆ. ಆದರೆ ಐಸ್‍ಲ್ಯಾಂಡ್‍ನಲ್ಲಿ ಸೂರ್ಯ ನಡು ನೆತ್ತಿಗೆ ಬರೋದಿಲ್ಲ. ಉತ್ತರಧ್ರುವದ ಹತ್ತಿರ ಐಸ್‍ಲ್ಯಾಂಡ್ ಇರುವ ಕಾರಣ ಅಲ್ಲಿ ಸೂರ್ಯನ ಬೆಳಕು ಅಷ್ಟಾಗಿ ಬೀಳುವುದಿಲ್ಲ. ಗರಿಷ್ಟ ಅಂದ್ರೆ ಬೆಳಗ್ಗೆ 9 ಗಂಟೆಗೆ ಭಾರತದಲ್ಲಿ ಸೂರ್ಯ ಹೇಗೆ ಕಾಣುತ್ತಾನೋ ಅದೇ…
ರಿಷಬ್ ಶೆಟ್ಟಿ (Rishabh Shetty) ನಿರ್ದೇಶಿಸಿ, ನಟಿಸಲಿರುವ ಕಾಂತಾರ ಚಾಪ್ಟರ್ 1 (Kantara 1) ಸಿನಿಮಾಗೆ ಕಲಾವಿದರು (Artists) ಬೇಕಾಗಿದ್ದಾರೆ ಎಂದು ಚಿತ್ರತಂಡ ಪೋಸ್ಟರ್ ರಿಲೀಸ್ ಮಾಡಿತ್ತು. ಹಲವಾರು ಪಾತ್ರಗಳು ಇರುವುದರಿಂದ ಕಲಾವಿದರ ವಯಸ್ಸನ್ನೂ ನಿಗದಿ ಪಡಿಸಿ, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಅದಕ್ಕೆ ಸಾಕಷ್ಟು ರೆಸ್ಪಾನ್ಸ್ ಬಂದಿದೆ. ಚಿತ್ರತಂಡವೇ ಹೇಳಿಕೊಂಡಂತೆ 25 ಸಾವಿರಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದಾರೆ. ರಿಕ್ ಪಾರ್ಟಿ ಮಾಡಿದಾಗಲೂ ಆಡಿಷನ್ ಗೆ ಚಿತ್ರತಂಡ ಕಾಲ್ ಮಾಡಿತ್ತು. ಆಗ ಎರಡು ಸಾವಿರಕ್ಕೂ ಹೆಚ್ಚು ಕಲಾವಿದರು ಅರ್ಜಿ ಸಲ್ಲಿಸಿದ್ದರು. ಕಾಂತಾರ 1 ಚಿತ್ರಕ್ಕೆ ನಿರೀಕ್ಷೆಗೂ ಮೀರಿ ಜನರು ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಚಿತ್ರತಂಡವು ಅದನ್ನು ಪರಿಶೀಲಿಸುವ ಕೆಲಸವನ್ನು ನಡೆಸಿದೆ. ಸಾಮಾನ್ಯ ಕಲಾವಿದರು ಮಾತ್ರವಲ್ಲ, ಈಗಾಗಲೇ ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ನಾಯಕಿಯರು ಅವಕಾಶ ಕೇಳಿದ್ದಾರೆ ಎನ್ನವುದು ವಿಶೇಷ. ಕಾಂತಾರ ಸಿನಿಮಾದಲ್ಲಿ ನಟಿಸೋಕೆ ಆಸೆ ಇರುವುದಾಗಿ ಪಾಯಲ್ ರಜಪೂತ್ (Payal Rajput) ಮತ್ತು ಕನ್ನಡದ ನಟಿ ಕಾರುಣ್ಯ ರಾಮ್ (Karunya Ram)…