ಟೂತ್‌ಪೇಸ್ಟ್ ಬಹುಶಃ ವಿಶ್ವಾದ್ಯಂತ ಹೆಚ್ಚು ಬಳಸುವ ಉತ್ಪನ್ನಗಳಲ್ಲಿ ಒಂದಾಗಿದೆ. ಇದು ನಮ್ಮ ಬಾಯಿಯ ಆರೋಗ್ಯಕ್ಕೆ ಉತ್ತಮ ಎಂಬ ಭಾವನೆ ನಮ್ಮಲ್ಲಿದೆ ಆದರೆ ಟೂತ್‌ಪೇಸ್ಟ್‌ನಲ್ಲಿ ಆರೋಗ್ಯಕರ ಅಂಶಕ್ಕಿಂತ ಅನಾರೋಗ್ಯಕರ ಅಂಶವೇ ಹೆಚ್ಚಾಗಿರುತ್ತದೆ. ಇದರಿಂದ ಕ್ಯಾನ್ಸರ್‌ಗೆ ಕಾರಣವಾಗುವ ಅಂಶ ಸಹ ನಮ್ಮ ದೇಹ ಸೇರುತ್ತಿದೆ. ನಿತ್ಯ ಮಾರಾಟವಾಗುವ ಟೂತ್‌ಪೇಸ್ಟ್‌ನಲ್ಲಿ ನೇರವಾಗಿ ಕ್ಯಾನ್ಸರ್‌ಗೆ ಕಾರಣವಾಗುವ ರಾಸಾಯನಿಕಗಳು ಅಂಗೀಕರಿಸಲ್ಪಟ್ಟ ಅಥವಾ ಪರಿಶೀಲಿಸಿದ ವರದಿಗಳಿಲ್ಲ. ಆದಾಗ್ಯೂ, ಕೆಲವು ರಾಸಾಯನಿಕವು ಈ ಅಪಾಯ ಹೆಚ್ಚಿಸಬಹುದು ಮತ್ತು ದೀರ್ಘಾವಧಿಯಲ್ಲಿ ಕಾರ್ಸಿನೋಜೆನಿಕ್ ಆಗಿರಬಹುದು ಎಂದು ಸಂಶೋಧನೆ ತಿಳಿಸಿದೆ. ಟ್ರೈಕ್ಲೋಸನ್ ಟ್ರೈಕ್ಲೋಸನ್ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಬೆಳವಣಿಗೆ ಎರಡರ ವಿರುದ್ಧವೂ ಕಾರ್ಯನಿರ್ವಹಿಸುವ ಸ್ಪೆಕ್ಟ್ರಮ್ ಆಂಟಿಮೈಕ್ರೊಬಿಯಲ್ ಏಜೆಂಟ್ ಆಗಿದೆ. ಇದು FDA-ಅನುಮೋದಿತ ರಾಸಾಯನಿಕ ಸಂಯುಕ್ತವಾಗಿದ್ದು ಇದನ್ನು ಟೂತ್‌ಪೇಸ್ಟ್, ಸಾಬೂನುಗಳು ಮತ್ತು ಸೌಂದರ್ಯವರ್ಧಕಗಳಿಗೆ ವಾಡಿಕೆಯಂತೆ ಸೇರಿಸಲಾಗುತ್ತದೆ DEA, ಟೂತ್‌ಪೇಸ್ಟ್‌ನಲ್ಲಿ ನೊರೆ ಬರಲು ಈ ರಾಸಾಯನಿಕ ಬಳಸಲಾಗುತ್ತದೆ. 1998ರ ಅಧ್ಯಯನದಲ್ಲಿ, ಆಂಟಿಫ್ರೀಜ್ ಮತ್ತು ಬ್ರೇಕ್ ದ್ರವದಲ್ಲಿ ಕಂಡುಬರುವ ಡೈಥನೋಲಮೈನ್ (DEA), ಸ್ಥಳೀಯವಾಗಿ ಅನ್ವಯಿಸಿದಾಗ ಪ್ರಾಣಿಗಳಲ್ಲಿನ ಕ್ಯಾನ್ಸರ್‌ಗೆ ಸಂಬಂಧಿಸಿದೆ. ಅದೇ…
Author: AIN Author
ಇಂದಿನ ವೇಗದ ಜಗತ್ತಿನಲ್ಲಿ ಅನೇಕ ವ್ಯಕ್ತಿಗಳು ಹೆಚ್ಚಿನ ಒತ್ತಡದ ಜೀವನವನ್ನು ನಡೆಸುತ್ತಾರೆ. ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ದೀರ್ಘಕಾಲದ ಒತ್ತಡವು ನಿಮ್ಮ ಹೃದಯದ ಆರೋಗ್ಯಕ್ಕೆ ತೊಂದರೆ ಉಂಟುಮಾಡುತ್ತದೆ. ನಿಮ್ಮ ಜೀವನಶೈಲಿಯಿಂದ ಹೃದಯದ ಮೇಲೆ ಒತ್ತಡ ಉಂಟಾಗುತ್ತಿರುವ ಲಕ್ಷಣಗಳನ್ನು ನೀವು ಗಮನಿಸುವುದು ಅತ್ಯಗತ್ಯ. ದೀರ್ಘವಾದ ಉಸಿರಾಟ, ಧ್ಯಾನ, ನಿಯಮಿತ ವ್ಯಾಯಾಮ ಮತ್ತು ಸಾಕಷ್ಟು ನಿದ್ರೆಯಂತಹ ಒತ್ತಡವನ್ನು ನಿಯಂತ್ರಿಸುವ ತಂತ್ರಗಳನ್ನು ಅನುಸರಿಸುವುದು ಅಗತ್ಯ. ಕೆಟ್ಟ ಜೀವನಶೈಲಿಯಿಂದಾಗಿ ನಿಮ್ಮ ಹೃದಯದ ಮೇಲೆ ಅನಗತ್ಯ ಒತ್ತಡವನ್ನು ಉಂಟುಮಾಡುವ ಮುಖ್ಯ ಲಕ್ಷಣಗಳ ಕುರಿತು ಮಾಹಿತಿ ಇಲ್ಲಿದೆ. ನಿರಂತರ ಆಯಾಸ: ರಾತ್ರಿಯ ವೇಳೆ ಉತ್ತಮವಾಗಿ ನಿದ್ರೆ ಮಾಡಿದ ನಂತರವೂ ನಿರಂತರವಾಗಿ ದಣಿದ ಭಾವನೆ ಇದ್ದರೆ ಅದು ನಿಮ್ಮ ಹೃದಯದ ಮೇಲೆ ಒತ್ತಡ ಉಂಟಾಗುತ್ತಿರುವುದರ ಸೂಕ್ಷ್ಮ ಸೂಚನೆಯಾಗಿರಬಹುದು. ದೀರ್ಘಕಾಲದ ಒತ್ತಡವು ಒತ್ತಡದ ಹಾರ್ಮೋನ್ ಕಾರ್ಟಿಸೋಲ್ನ ಹೆಚ್ಚಳಕ್ಕೆ ಕಾರಣವಾಗಬಹುದು. ಇದು ನಿಮ್ಮ ನಿದ್ರೆಯ ಮಾದರಿಯನ್ನು ಅಡ್ಡಿಪಡಿಸಬಹುದು. ನಿದ್ರಿಸಲು ತೊಂದರೆ: ಒತ್ತಡವು ಆರಂಭದಲ್ಲಿ ನಿದ್ರಿಸಲು ತೊಂದರೆಗಳನ್ನು ಉಂಟುಮಾಡಬಹುದು. ಇದು ನಿದ್ರಾಹೀನತೆಗೆ ಕಾರಣವಾಗುತ್ತದೆ.…
ನವದೆಹಲಿ: ಭಾರತದ ವಸಾಹತುಶಾಹಿ ಯುಗದ ಕ್ರಿಮಿನಲ್ ಕಾನೂನುಗಳನ್ನು ಬದಲಿಸುವ ಮೂರು ನಿರ್ಣಾಯಕ ಮಸೂದೆಗಳನ್ನು (Criminal Code Bills) ಲೋಕಸಭೆಯಲ್ಲಿ ಅಂಗೀಕರಿಸಲಾಯಿತು.ವಿಪಕ್ಷಗಳ ಕೆಲವೇ ಸದಸ್ಯರ ಉಪಸ್ಥಿತಿಯಲ್ಲಿ ಅವರ ವಿರೋಧದ ಭಾರತೀಯ ನ್ಯಾಯ (ಎರಡನೇ) ಸಂಹಿತಾ- 2023, ಭಾರತೀಯ ನಾಗರಿಕ ಸುರಕ್ಷಾ (ಎರಡನೇ) ಸಂಹಿತಾ- 2023 ಮತ್ತು ಭಾರತೀಯ ಸಾಕ್ಷಿ (ಎರಡನೇ) ಮಸೂದೆ- 2023 ವಿಧೇಯಕಗಳಿಗೆ ಲೋಕಸಭೆ ಅನುಮೋದನೆ ನೀಡಿದೆ. https://ainlivenews.com/apple-watch-series-9-watch-ultra-2-sales-halt-in-us-why/ ಈ ಕುರಿತ ಚರ್ಚೆಗೆ ಉತ್ತರಿಸಿದ ಗೃಹಮಂತ್ರಿ ಅಮಿತ್ ಶಾ, ಈ ಮಸೂದೆಗಳನ್ನು ಜಾರಿಗೆ ತರುತ್ತಿರುವುದು ಶಿಕ್ಷಿಸಲು ಅಲ್ಲ. ನ್ಯಾಯ ನೀಡುವುದಕ್ಕೆ. ತ್ವರಿತ ನ್ಯಾಯದಾನವೇ ನಮ್ಮ ಗುರಿ. ಈ ಮಸೂದೆಗಳಲ್ಲಿ ಡಿಜಿಟಲ್, ಎಲೆಕ್ಟ್ರಾನಿಕ್ ಎವಿಡೆನ್ಸ್‌ಗಳನ್ನು ಸಾಕ್ಷ್ಯವಾಗಿ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಈ ಕಾಯ್ದೆಗಳು ಮುಂದಿನ ನೂರು ವರ್ಷ ದೇಶದ ನ್ಯಾಯ ಪ್ರಕ್ರಿಯೆಗೆ ಉಪಯೋಗವಾಗುತ್ತವೆ ಎಂದು ತಿಳಿಸಿದ್ದಾರೆ. ಲೋಕಸಭಾ ಭದ್ರತಾ ಉಲ್ಲಂಘನೆಯ ವಿರುದ್ಧ ಪ್ರತಿಭಟನೆಯ ನಂತರ 143 ವಿರೋಧ ಪಕ್ಷದ ಸದಸ್ಯರನ್ನು ಅಮಾನತುಗೊಳಿಸಿದ ಕಾರಣ ಯಾವುದೇ ಮಹತ್ವದ ಚರ್ಚೆಯಿಲ್ಲದೆ ಕಾನೂನುಗಳನ್ನು ಅಂಗೀಕರಿಸಲಾಯಿತು. ಹೊಸ ಕಾನೂನು ಸಂಹಿತೆಗಳಲ್ಲಿ ಏನಿದೆ?…
ಮೈಸೂರು: ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಯಾವ ಫ್ಲೈಟ್‍ನಲ್ಲಿ ಓಡಾಡುತ್ತಾರೆ..? ಅದು ಐಷಾರಾಮಿ ಫ್ಲೈಟ್ ಅಲ್ವಾ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಗರಂ ಆಗಿದ್ದಾರೆ. ಜಮೀರ್ ಜೊತೆ ಐಷಾರಾಮಿ ಜೆಟ್‍ನಲ್ಲಿ ಪ್ರಯಾಣ ಮಾಡಿದ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ದೇಶದಲ್ಲಿ ಯಾವುದೇ ಸ್ಥಿತಿ ಇದ್ದರೂ ಮೋದಿ ಓಡಾಡುವ ಫ್ಲೈಟ್ ಎಂತದ್ದು?. ಮೊದಲು ಅದನ್ನು ಬಿಜೆಪಿಯವರಿಗೆ ಕೇಳಿ ಎಂದು ಸಿಎಂ ಸಿಡಿಮಿಡಿಗೊಂಡರು. https://ainlivenews.com/apple-watch-series-9-watch-ultra-2-sales-halt-in-us-why/ ಏನಿದು ಘಟನೆ..?: ದೆಹಲಿಯಿಂದ ಬೆಂಗಳೂರಿಗೆ ನಮ್ಮ ಹೆಮ್ಮೆಯ ನಾಯಕರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ ಸಂತಸದ ಕ್ಷಣಗಳು ಎಂದು ವೀಡಿಯೋವೊಂದನ್ನು ಜಮೀರ್ ಅಹ್ಮದ್ (Zameer Ahmed Khan) ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋ ಇದೀಗ ಭಾರೀ ವೈರಲ್ ಆಗುತ್ತಿದ್ದು, ವೀಡಿಯೋ ಶೇರ್ ಮಾಡಿಕೊಂಡು ಬಿಜೆಪಿ ನಾಯಕರು ಭಾರೀ ಟೀಕೆ ವ್ಯಕ್ತಪಡಿಸುತ್ತಿದ್ದಾರೆ.
ನವದೆಹಲಿ: ಲೋಕಸಭೆಯಲ್ಲಿ (Loksabha) ಸಂಸದರಿಗೆ ರಕ್ಷಣೆ ಇಲ್ಲ. ಇನ್ನು ಬೇರೆಯವರಿಗೆ ರಕ್ಷಣೆ ಹೇಗೆ ಎಂದು ಪ್ರಶ್ನೆ ಮಾಡಿದೆವು. ನಿಯಮಗಳನ್ನು ಗಾಳಿಗೆ ತೂರಿ ಅಮಾನತು ಮಾಡಿದರು. ಇದೊಂದು ದುರ್ದೈವದ ಸಂಗತಿ ಎಂದು ಸಂಸದ ಡಿ.ಕೆ ಸುರೇಶ್ (DK Suresh) ವಾಗ್ದಾಳಿ ನಡೆಸಿದರು. ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದ ದೇವಸ್ಥಾನದೊಳಗೆ ಕೆಲವರು ಅಕ್ರಮವಾಗಿ ದಾಳಿ ಮಾಡಿದ್ದಾರೆ. ಭದ್ರತಾ ಲೋಪದ ಬಗ್ಗೆ ಕೇಂದ್ರ ಗೃಹ ಸಚಿವರು ಹಾಗೂ ಪ್ರಧಾನಮಂತ್ರಿಗಳು ಮಾತನಾಡಬೇಕು. ಮತ್ತು ತನಿಖೆಯಲ್ಲಿ ಪಾಸ್ ನೀಡಿದವರನ್ನು ಒಳಪಡಿಸಬೇಕು ಎಂದು ಆಗ್ರಹಿಸಿದ್ದೇವೆ ಎಂದರು. https://ainlivenews.com/apple-watch-series-9-watch-ultra-2-sales-halt-in-us-why/ ನಾವು ಮಾತನಾಡಲು ಸೂಕ್ತವಾದ ಅವಕಾಶ ಕೇಳಿದ್ದೆವು. ಮಾತನಾಡುವ ಹಕ್ಕನ್ನು ಕಸಿಯುವ ಪ್ರಯತ್ನ ಲೋಕಸಭೆಯಲ್ಲಿ ಮಾಡಲಾಗುತ್ತಿದೆ. ಇದನ್ನು ಖಂಡಿಸಿ ಬಾವಿಗಿಳಿದು ಪ್ರತಿಭಟನೆ ನಡೆಸಿದೆವು. ಇದಕ್ಕೆ ಸ್ಪೀಕರ್ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನಲೆ ಇಂದು ಮೂವರನ್ನು ಅಮಾನತು ಮಾಡಿದೆ. ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬ ಸದಸ್ಯನ ಹಕ್ಕು. ಅದನ್ನು ಕಿತ್ತುಕೊಳ್ಳಲಾಗುತ್ತಿದೆ ಎಂದು ಕಿಡಿಕಾರಿದರು. ಆಡಳಿತ ಪಕ್ಷದವರು ತಮ್ಮ ಅನುಕೂಲಕ್ಕೆ ತಕ್ಕಂತೆ ಹೇಳಿಕೆ ನೀಡುತ್ತಿದ್ದಾರೆ. ನಮ್ಮ ಧ್ವನಿಯನ್ನು…
ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷದ ನೇತೃತ್ವದಲ್ಲಿನ ಕೇಂದ್ರ ಸರಕಾರವು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಅತಿಕ್ರಮಣ ಮಾಡುತ್ತಿದೆ. ದೇಶದ ಸಂಸತ್ತಿನ ಭದ್ರತಾ ಲೋಪವನ್ನು ಪ್ರಶ್ನಿಸಿದ್ದಕ್ಕಾಗಿ 142 ಉಭಯ ಸದನಗಳ ಸಂಸದರನ್ನು ಅಮಾನತ್ತಿನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಅನುಕಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ಮಾಡಿದರು. ಸ್ವಾತಂತ್ರ ನಂತರ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಈ ರೀತಿಯ ಹಲ್ಲೆಯಾಗಿರುವುದು ಬಿಜೆಪಿಯ ಕರಾಳ ಇತಿಹಾಸವನ್ನು ಎತ್ತಿ ತೋರಿಸುತ್ತದೆ. ಈ ದುರಾಡಳಿತವನ್ನು ಖಂಡಿಸಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯು ದೇಶಾದ್ಯಂತ ಇಂದು ನೀಡಿದ ಪ್ರತಿಭಟನಾ ಅಂಗವಾಗಿ ನಗರದ ತಹಸ್ದೀಲಾರ ಕಚೇರಿ ಮುಂದೆ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಧಾರವಾಡ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯ ಉಳಿವಿಗಾಗಿ ಒಂದಾಗಬೇಕು. ಭಾರತೀಯ ಜನತಾ ಪಕ್ಷ ಸರ್ವಾಧಿಕಾರತ್ವ ಧೋರಣೆ ಅನುಸರಿಸುತಿದ್ದು ಇದೊಂದು ಪ್ರಜಾ ಪ್ರತಿನಿಧಿ ಅಧಿಕಾರಿ ಹಾಗೂ ಹಕ್ಕುಗಳನ್ನ ಪ್ರಶ್ನೆ ಮಾಡಿದಂತಾಗಿದೆ ಎಂದರು. ನಂತರ ಧಾರವಾಡ ಗ್ರಾಮೀಣ ಜಿಲ್ಲಾ…
ಬೆಂಗಳೂರು: ನಗರದ ಹಲವು ಸರ್ಕಾರಿ ಆಸ್ಪತ್ರೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು ಕೆ ಸಿ ಜನರಲ್ ರಾಜೀವ್ ಗಾಂಧಿ, ನಿಮಾನ್ಸ್ ಆಸ್ಪತ್ರೆಯ ಮೇಲೆ ಲೋಕಾಯುಕ್ತ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. https://ainlivenews.com/every-january-is-a-danger-for-the-state-corona-variant-jn-1-is-tension/ ಆಸ್ಪತ್ರೆ ಆವರಣ ಹಾಗೂ ಅಲ್ಲೇ ಇರೋ ಕೋವಿಡ್ ಶೀಲ್ಡ್ ಆಸ್ಪತ್ರೆ ಬಗ್ಗೆ ಪರಿಶೀಲನೆ ನಡೆಸಿದ ಅಧಿಕಾರಿಗಳು ಆಸ್ಪತ್ರೆಯಲ್ಲಿನ ವ್ಯವಸ್ಥೆ ಹಾಗೂ ಇತರೆ ಸೌಲಭ್ಯಗಳ ಬಗ್ಗೆ ಪರಿಶೀಲನೆ ಸಾರ್ವಜನಿಕರಿಂದ ಹಲವು ದೂರುಗಳ ಬಂದ ಹಿನ್ನೆಲೆ ಲೋಕಾ ಪರಿಶೀಲನೆ ರಾಜೀವ್ ಗಾಂಧಿ ಆಸ್ಪತ್ರೆ ಸಂಪೂರ್ಣ ಪರಿಶೀಲನೆ ನಡೆಸುತ್ತಿರುವ ಲೋಕಾಯುಕ್ತ ಅಧಿಕಾರಿಗಳು
ಹಿರಿಯ ನಟಿ ಲೀಲಾವತಿ (Leelavati) ಅವರ ನಿಧನ ಹಿನ್ನೆಲೆ ಇಂದು ಪುತ್ರ ವಿನೋದ್‌ರಾಜ್ (Vinod Raj) ಅವರು ಕಾವೇರಿ ನದಿಯಲ್ಲಿ ತಾಯಿಗೆ ಪಿಂಡಪ್ರದಾನ ಮಾಡಿದರು. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ (Srirangapatna) ಪಶ್ಚಿಮ ವಾಹಿನಿಯಲ್ಲಿ ವೈದಿಕ ಲಕ್ಷ್ಮೀಶ್ ಶರ್ಮ ಅವರ ನೇತೃತ್ವದಲ್ಲಿ ಲೀಲಾವತಿ ಅವರಿಗೆ ಪಿಂಡಪ್ರದಾನ (Pindapradana) ಮಾಡಲಾಯಿತು. ಮೊದಲಿಗೆ ವಿನೋದ್‌ರಾಜ್ ಅವರು ಕಾವೇರಿ ನದಿಯಲ್ಲಿ ಸ್ನಾನ ಮಾಡಿ ಬಳಿಕ ಪಿಂಡಪ್ರದಾನದ ಪೂಜಾ ವಿಧಿವಿಧಾನಗಳನ್ನು ನೇರವೇರಿಸಿದರು. ಈ ವೇಳೆ ಕುಟುಂಬಸ್ಥರು ಹಾಗೂ ಲೀಲಾವತಿ ಅವರು ಪ್ರೀತಿಯಿಯಿಂದ ಸಾಕಿದ್ದ ಎರಡು ನಾಯಿಗಳು ಸಹ ಇದ್ದವು. ಎರಡು ನಾಯಿಗಳನ್ನೂ ಈ ಸಂದರ್ಭದಲ್ಲಿ ಕರೆತಂದಿದ್ದರು ವಿನೋದ್ ರಾಜ್. ಪಿಂಡಪ್ರದಾನ ಬಳಿಕ ಮಾತನಾಡಿದ ವಿನೋದ್‌ರಾಜ್, ನಮ್ಮ ತಾಯಿ ಅವರಿಗೆ ಹಳ್ಳಿ ಜೀವನ ಅಂದ್ರೆ ಇಷ್ಟ. ಅದಕ್ಕಾಗಿ ನಾವು ತೋಟದ ಮನೆಯಲ್ಲಿ ವಾಸವಿದ್ದವು. ಪ್ರಾಣಿ-ಪಕ್ಷಿಗಳನ್ನು ಕಂಡರೆ ಬಹಳ ಪ್ರೀತಿ ಮಾಡ್ತಾ ಇದ್ದರು. ಮನೆಗೆ ಯಾರು ಬಂದರು ಹಸಿದು ಕಳಿಸುತ್ತಿರಲಿಲ್ಲ, ಎಲ್ಲರಿಗೂ ಊಟ ಹಾಕಿ ಕಳಿಸುತ್ತಾ ಇದ್ರು. ಇಂದು ನಮ್ಮ ತಾಯಿಗೆ…
ಡಂಕಿ & ಸಲಾರ್ ಕ್ಲ್ಯಾಶ್ ಬಗ್ಗೆ ಕಳೆದ ಹಲವು ತಿಂಗಳಿಂದಲೂ ಸುದ್ದಿಯಾಗ್ತಾನೇ ಇತ್ತು. ಫೈನಲಿ ಗುರುವಾರ ಡಂಕಿ ತೆರೆಗೆ ಬಂದ್ರೆ ಶುಕ್ರವಾರ ಸಲಾರ್ ವರ್ಲ್ಡ್ವೈಡ್ ರಿಲೀಸ್ ಆಗಿದೆ. ಡಂಕಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ್ರೆ ಸಲಾರ್ ಥಿಯೇಟರ್ ಅಂಗಳದಲ್ಲಿ ಉಗ್ರಾವತಾರ ಪ್ರದರ್ಶಿಸುತ್ತಿದೆ. ಸಲಾರ್ ಅಬ್ಬರ ಹೇಗಿದೆ ಅಂದ್ರೆ ಬಾಕ್ಸ್ಆಫೀಸ್ನಲ್ಲಿ ಹೊಸ ರೆಕಾರ್ಡ್ ಸೃಷ್ಟಿಯಾಗೋದು ಫಿಕ್ಸ್ ಅಂತಿದೆ ಮಾರ್ಕೆಟ್. ಯೆಸ್, ಶಾರೂಖ್ ಖಾನ್ ನಟನೆ ನಿರ್ಮಾಣದ ಡಂಕಿ ಎದುರು ಸಲಾರ್ ಬರುತ್ತೆ ಅಂದಾಗ ಇದು ಇಂಡಿಯನ್ ಸಿನಿ ಇಂಡಸ್ಟ್ರಿಯ ಬಿಗ್ಗೆಸ್ಟ್ ಕ್ಲ್ಯಾಶ್ ಆಗುತ್ತೆ ಅಂತ ಎಲ್ಲರೂ ಊಹೆ ಮಾಡಿದ್ರು. ಎರಡೂ ಬಿಗ್ ಸ್ಟಾರ್ ಗಳ ಬಿಗ್ ಸಿನಿಮಾಗಳೇ. ಡಂಕಿ ಗುರುವಾರದ ದಿನವೇ ತೆರೆಗೆ ಬಂದಿದೆ. ಪ್ರೇಕ್ಷಕರಿಂದ ಮೀಶ್ರ ಪ್ರತಿಕ್ರಿಯೆ ಗಳಿಸಿರೋ ಡಂಕಿ ಮೊದಲ ದಿನದ ಅಂತ್ಯಕ್ಕೆ ಡೊಮೆಸ್ಟಿಕ್ ಮಾರ್ಕೆಟ್ನಲ್ಲಿ 30 ಕೋಟಿ ಗಳಿಸಿದೆ. ಇನ್ನೂ ಡಂಕಿಗೆ ಕಂಪೇರ್ ಮಾಡಿದ್ರೆ ಸಲಾರ್ಗೆ ಬಿಗ್ಗೆಸ್ಟ್ ಓಪನಿಂಗ್ ಸಿಕ್ಕಿದೆ. ತೆಲುಗು ರಾಜ್ಯಗಳಲ್ಲಿ ಮತ್ತು ಉತ್ತರ ಭಾರತದಲ್ಲಂತೂ ಸಲಾರ್ ನ…
ಬೆಂಗಳೂರು: ದಿನೇ ದಿನೇ ರಾಜ್ಯದಲ್ಲಿ ಕೊರೊನಾ ರೂಪಾಂತರಿ ಜೆಎನ್-1 ಆತಂಕ ಹೆಚ್ಚಾಗ್ತಿದೆ. ಈಗಾಗಲೇ ಕೋವಿಡ್ ನಿಂದ ಬೆದರಿರೋ ಜನತೆಗೆ ರೂಪಾಂತರಿ ನಡೆ ಮತ್ತಷ್ಟು ಭಯ ಹೆಚ್ಚಸಿದೆ. ದಿನ ದಿನಕ್ಕೂ ಸೋಂಕು ಸುನಾಮಿಯಂತೆ ಅಪ್ಪಳಿಸುತ್ತಿರೋದು ಜನರ ನಿದ್ದೆಗೆಡಿಸಿದೆ.ಇದೀಗ ಮುಂದಿನ ತಿಂಗಳು ರೂಪಾಂತರಿ ಉತ್ತುಂಗಕ್ಕೆ ಹೋಗಲಿದೆ ಅಂತ ತಜ್ಞರು ಎಚ್ಚರಿಕೆ ನೀಡಿದ್ದಾರೆ.ಹೀಗಾಗಿ ಜನವರಿ ತಿಂಗಳು ಬಾರಿ ಡೇಂಜರ್ ಆಗಲಿದ್ದು,ಜನ ಹೆಚ್ಚು ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕಿದೆ ಅಂತ ಎಚ್ಚರಿಕೆ ನೀಡಲಾಗಿದೆ. ಇಡೀ ವಿಶ್ವವನ್ನೇ ಕೊರೊನಾ ಅನ್ನೋ ವೈರಸ್ ಗಢ ಗಢ ಅಂತ ನಡಗ್ಬಿಟ್ಟಿದೆ. ಕೊರೊನಾ ಎಂಬ ಮಹಾಮಾರಿಯ ಹೆಸರನ್ನು ಕೇಳಿದರೆ ಸಾಕು ಈಗಲೂ ಜನ ಭಯ ಪಡುತ್ತಾರೆ. ಮೊದಲೆರಡು ಅಲೆಯಲ್ಲಿ ಕೊರೊನಾ ಕೊಟ್ಟ ಕಾಟ ಅಷ್ಟಿಷ್ಟು ಅಲ್ಲವೇ ಅಲ್ಲ.ಇದೀಗ ಮೂರನೇ ಮುಗಿದ ಬಳಿಕ ಕೊರೊನಾ ರೂಪಾಂತರಿ ಜೆಎನ್-1 ಅನ್ನೋ ಕ್ರಿಮಿ ದಿನೇ ದಿನೇ ಆತಂಕ ಹುಟ್ಟಿಸುತ್ತಿದೆ.ಇಷ್ಟು ದಿನ ಸೈಲೆಂಟ್ ಆಗಿ ಇದ್ದ ಕೊರೊನಾ ಬೇರೆ ಸ್ವರೂಪದಲ್ಲಿ ಎಂಟ್ರಿ ಕೊಟ್ಟು ಜನರ ದೇಹ ಸೇರುತ್ತಿದೆ. ಇದೇ ಜೆಎನ್-1 ವೈರಸ್…