Author: AIN Author

ಮಧುಮೇಹಿಗಳಿಗೆ ನೆರವಾಗುವ ಹಾಗೂ ಇತರ ಅಂಗಗಳು ಮಧುಮೇಹದಿಂದ ಹಾನಿಗೆ ಒಳಗಾಗುವುದನ್ನು ತಡೆಯುವ ಕೆಲವು ಆಹಾರಗಳಿವೆ ಹಾಗೂ ಬೆಂಡೆಕಾಯಿ ಈ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುತ್ತದೆ. ಬೆಂಡೆಕಾಯಿಯನ್ನು ಎಳತಾಗಿದ್ದಾಗ ಖಾದ್ಯಗಳ ರೂಪದಲ್ಲಿ ಸೇವಿಸಬಹುದು. ಇವನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿಯೂ ಸೇವಿಸಬಹುದು. ಈ ಎರಡೂ ವಿಧಾನಗಳ ಬಗ್ಗೆ ಹಲವಾರು ಅಧ್ಯಯನಗಳನ್ನು ನಡೆಸಲಾಗಿದೆ ಹಾಗೂ ಫಲಿತಾಂಶಗಳು ಮಧುಮೇಹಿಗಳ ಪಾಲಿಗೆ ಸಂತೋಷಕರವಾಗಿಯೇ ಇವೆ. ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿದೆ: ಬೆಂಡೆಕಾಯಿ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿದೆ, ಅಂದರೆ ಇದು ತ್ವರಿತ ಸ್ಪೈಕ್ಗಳನ್ನು ತಡೆಯುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ವಿವರಿಸುತ್ತಾರೆ. ಹೆಚ್ಚಿನ ಫೈಬರ್ ಅಂಶವನ್ನು ಹೊಂದಿದೆ: ಬೆಂಡೆಕಾಯಿಯಲ್ಲಿರುವ ಫೈಬರ್ ಜೀರ್ಣಕ್ರಿಯೆ ಮತ್ತು ಕಾರ್ಬೋಹೈಡ್ರೇಟ್ ಗಳ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ. ಅಲ್ಲದೆ ಇದು ಊಟದ ನಂತರ ರಕ್ತದಲ್ಲಿನ ಸಕ್ಕರೆಯ ಸ್ಪೈಕ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ: ಬೆಂಡೆಕಾಯಿಯಲ್ಲಿ ಕ್ವೆರ್ಸೆಟಿನ್ ಮತ್ತು ಕ್ಯಾಟೆಚಿನ್ ಗಳಂತಹ ಉತ್ಕರ್ಷಣ ನಿರೋಧಕಗಳಿವೆ, ಇದು ಅಧಿಕ…

Read More

ನವದೆಹಲಿ: 60 ವರ್ಷದ ಮಹಿಳೆಯೊಂದಿಗೆ (Woman) ದೈಹಿಕ ಸಂಪರ್ಕ (ಲೈಂಗಿಕ ಕ್ರಿಯೆಯೂ ಸೇರಿದಂತೆ) ಬೆಳೆಸಿ, ಆಕೆಯನ್ನೇ ಕೊಂದು ಶವವನ್ನು ಬೆಡ್‌ರೂಮಿನಲ್ಲಿ ಬಚ್ಚಿಟ್ಟಿದ್ದ 31 ವರ್ಷದ ವ್ಯಕ್ತಿಯನ್ನ ಬಂಧಿಸಿರುವ ಘಟನೆ ದೆಹಲಿಯಲ್ಲಿ (Delhi) ನಡೆದಿದೆ. ಆಶಾದೇವಿ ಕೊಲೆಯಾದ ಮಹಿಳೆ, 31 ವರ್ಷದ ದೇವೇಂದ್ರ ಅಲಿಯಾಸ್‌ ದೇವ್‌ ಕೊಲೆ ಆರೋಪಿ ಎಂದು ಗುರುತಿಸಲಾಗಿದೆ. 31 ವರ್ಷದ ದೇವೇಂದ್ರ 60 ವರ್ಷದ ಮಹಿಳೆಯೊಂದಿಗೆ ದೈಹಿಕ ಸಂಬಂಧ ಹೊಂದಿದ್ದ ಎಂದು ದೆಹಲಿ ಪೊಲೀಸರು (Delhi Police) ತಿಳಿಸಿದ್ದಾರೆ. ಮೃತ ಮಹಿಳೆಯು ದೇವೇಂದ್ರ ಬೇರೋಬ್ಬಾಕೆ ವಿವಾಹವಾಗುವುದನ್ನು ತಡೆದಿದ್ದಕ್ಕೆ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ. https://ainlivenews.com/apple-watch-series-9-watch-ultra-2-sales-halt-in-us-why/ ಡಿಸಿಪಿ ಜಾಯ್ ಟಿರ್ಕಿ ಪ್ರಕಾರ, ಆರೋಪಿಯನ್ನು ಉತ್ತರ ಪ್ರದೇಶದ (Uttar Pradesh) ಅಲಿಗಢದಲ್ಲಿ ಬಂಧಿಸಲಾಗಿದೆ. ಹತ್ಯೆಯಾದ ಐದು ದಿನಗಳ ನಂತರ ಶುಕ್ರವಾರ ಈಶಾನ್ಯ ದೆಹಲಿಯ ನಂದ ನಗರ ಪ್ರದೇಶದ ಅವರ ಮನೆಯಿಂದ ಆಶಾದೇವಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.  ಆರೋಪಿ ದೇವೇಂದ್ರ 2015ರಲ್ಲಿ ಕೆಲಸ ಹುಡುಕಿಕೊಂಡು ಅಲಿಗಢಕ್ಕೆ ಬಂದು, ತಾಮ್ರದ ತಂತಿ ಪ್ಯಾಕಿಂಗ್‌ ಮಾಡುವ ಬಿಸಿನೆಸ್‌…

Read More

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್‌ (Corona Virus) ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ. ಶುಕ್ರವಾರ ಒಂದೇ ದಿನ 78 ಕೊರೊನಾ (Covid-19) ಸೋಂಕು ಪ್ರಕರಣಗಳು ವರದಿಯಾಗಿವೆ. ಕೊರೊನಾ ಸೋಂಕಿಗೆ ಒಬ್ಬರು ಬಲಿಯಾಗಿದ್ದಾರೆ. ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 175 ಕ್ಕೆ ಏರಿಕೆಯಾಗಿದೆ. ಕೋವಿಡ್‌-19 ರಿಂದ ಗುಣಮುಖರಾಗಿ ಇಂದು 7 ಮಂದಿ ಡಿಸ್ಚಾರ್ಜ್‌ ಆಗಿದ್ದಾರೆ. ರಾಜ್ಯದಲ್ಲಿ ಪಾಸಿಟಿವಿಟಿ ದರ 3.29 % ಗೆ ಏರಿಕೆಯಾಗಿದೆ. https://ainlivenews.com/saturday-rashi-prediction-december-232023/ ಬೆಂಗಳೂರಿನಲ್ಲಿ ಇಂದು 68 ಕೊರೊನಾ ಪಾಸಿಟಿವ್‌ ಪ್ರಕರಣ ದಾಖಲಾಗಿದ್ದು, ಸೋಂಕಿತರ ಸಂಖ್ಯೆ ಶತಕದ ಗಡಿ ದಾಟಿದೆ. ರಾಜಧಾನಿಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 156 ಕ್ಕೆ ತಲುಪಿದೆ. ಶುಕ್ರವಾರ ಬೆಂಗಳೂರು ಗ್ರಾಮಾಂತರದಲ್ಲಿ 1, ಚಿಕ್ಕಮಗಳೂರಿನಲ್ಲಿ 4, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2, ಮೈಸೂರಿನಲ್ಲಿ 1, ರಾಮನಗರದಲ್ಲಿ 2 ಪಾಸಿಟಿವ್‌ ಪ್ರಕರಣಗಳು ವರದಿಯಾಗಿವೆ. 

Read More

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಹಾಗೂ ಸಚಿವರಾದ ಜಮೀರ್ ಅಹ್ಮದ್‌‌ಖಾನ್ ಮತ್ತು ಕೃಷ್ಣಬೈರೇಗೌಡ ಖಾಸಗೀ ವಿಮಾನಯಾನದಲ್ಲಿ ದೆಹಲಿಗೆ ಹೋಗಿಬಂದ ವಿಚಾರ ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ. ರಾಜ್ಯದಲ್ಲಿ ಬರಗಾಲ ತಾಂಡವವಾಡ್ತಿರುವ ಸಂದರ್ಭದಲ್ಲಿ ಆಡಳಿತ ಪಕ್ಷದ ಪ್ರಮುಖರು ಐಶಾರಾಮಿ ಪ್ರಯಾಣದ ನೆಪದಲ್ಲಿ ಮೋಜು ಮಸ್ತಿ ಬೇಕಿತ್ತಾ ಎಂದು  ವಿಪಕ್ಷ ಬಿಜೆಪಿ ಆಕ್ರೋಶ ಹೊರಹಾಕ್ತಿದೆ. ಇದು ಆಡಳಿತ ಹಾಗೂ ವಿಪಕ್ಷದ ನಡುವೆ ರಾಜಕೀಯ ವಾಕ್ಸಮರಕ್ಕೆ ವೇದಿಕೆಯಾಗಿದೆ.. https://ainlivenews.com/saturday-rashi-prediction-december-232023/ ರಾಜ್ಯದಲ್ಲಿ ಬರ ತಾಂಡವವಾಡ್ತಿದೆ ಈ ಹಿನ್ನೆಲೆಯಲ್ಲಿ ಕೇಂದ್ರದಿಂದ ಬರಬೇಕಾದ ಪರಿಹಾರವನ್ನು ಕೇಳಲು ಸಿಎಂ‌ ಸಿದ್ದರಾಮಯ್ಯ, ಸಚಿವರಾದ ಜಮೀರ್ ಅಹ್ಮದ್ ಖಾನ್, ಕೃಷ್ಣಬೈರೇಗೌಡ ಸೇರಿದಂತೆ ಪ್ರಮುಖ ನಾಯಕರು ದೆಹಲಿಗೆ ಹೋಗಿ ಪ್ರಧಾನಿ ಮೋದಿಯವರನ್ನ ಭೇಟಿ ಮಾಡಿ ಬಂದಿದ್ದಾರೆ. ಇವರೆಲ್ಲಾ ದೆಹಲಿಗೆ ಹೋಗಿಬಂದ ಪ್ರೈವೇಟ್ ಜೆಟ್ ನ ಐಶಾರಾಮಿ ವಿಡಿಯೋವನ್ನ ಸಚಿವ ಜಮೀರ್ ಅಹ್ಮದ್ ಖಾನ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ, ಇದೇ ವಿಚಾರ ಇದೀಗ ರಾಜಕೀಯ ಚರ್ಚೆಗೆ ಗ್ರಾಸವಾಗಿದ್ದು ಇಂತಹ ಸಂಕಷ್ಟದ ಸಮಯದಲ್ಲಿ ಈ ಮೋಜು ಮಸ್ತಿ ಬೇಕಿತ್ತಾ…

Read More

ಪ್ರೇಗ್ ನಗರದ ವಿಶ್ವವಿದ್ಯಾಲಯವೊಂದರಲ್ಲಿ ಭೀಕರ ಶೂಟೌಟ್ ಘಟನೆ ಸಂಭವಿಸಿದೆ. ಚಾರ್ಲ್ಸ್ ಯೂನಿವರ್ಸಿಟಿಯಲ್ಲಿ ಡೇವಿಡ್ ಕೋಝಕ್ ಎಂಬ ವಿದ್ಯಾರ್ಥಿ ತನ್ನ ಸಹಪಾಠಿಗಳನ್ನೇ ಗುಂಡಿಟ್ಟು ಕೊಂದಿದ್ದಾನೆ. ಈ ಶೂಟೌಟ್​ನಲ್ಲಿ 14 ಮಂದಿ ಬಲಿ ಯಾಗಿದ್ದಾರೆ. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದು ತಿಳಿದುಬಂದಿದೆ. 24 ವರ್ಷದ ಆರೋಪಿ ಡೇವಿಡ್ ಕೋಝಕ್ ಕೂಡ ಸತ್ತಿದ್ದಾನೆ. ಈ ನರಮೇಧಕ್ಕೆ ಮುನ್ನ ಡೇವಿಡ್ ತನ್ನ ಮನೆಯಲ್ಲಿ ಅಪ್ಪನನ್ನೇ ಕೊಂದು ಹೋಗಿದ್ದ ಘಟನೆಯೂ ಬೆಳಕಿಗೆ ಬಂದಿದೆ. ಒಟ್ಟಾರೆ ಈ ಘಟನೆಯಲ್ಲಿ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. https://ainlivenews.com/can-diabetics-eat-dates-here-is-useful-information/ ಯೂನಿವರ್ಸಿಟಿಯಲ್ಲಿ ತನ್ನ ಸಹ-ವಿದ್ಯಾರ್ಥಿಗಳ ಮೇಲೆ ಡೇವಿಡ್ ಕೋಝಕ್ ಯಾಕೆ ಗುಂಡಿನ ದಾಳಿ ಎಸಗಿದ ಎಂದು ಕಾರಣ ಗೊತ್ತಾಗಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರಂಭಿಕ ತನಿಖೆಯಲ್ಲಿ, ಡೇವಿಡ್ ಯಾವುದಾದರೂ ಉಗ್ರ ಸಂಘಟನೆ ಜೊತೆ ಸಂಬಂಧ ಹೊಂದಿರುವ ಬಗ್ಗೆ ಯಾವ ಸುಳಿವೂ ಸಿಕ್ಕಿಲ್ಲ ಎನ್ನಲಾಗಿದೆ.

Read More

ಬೆಂಗಳೂರು: ಸಂಸತ್ತಿನಿಂದ ವಿರೋಧ ಪಕ್ಷಗಳ ಸಂಸದರನ್ನು ಅಮಾನತು ಮಾಡುವ ಮೂಲಕ ಬಿಜೆಪಿ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ‌ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಪ್ರಜಾಪ್ರಭುತ್ವದ ಮೇಲೆ ವಿಶ್ವಾಸ ಇಲ್ಲ ಎಂದು ಕಾಂಗ್ರೆಸ್ ಮೊದಲಿನಿಂದಲೂ ಹೇಳುತ್ತಾ‌ ಬಂದಿದೆ. ಈಗ ಸಂಸತ್ತಿನಲ್ಲಿ ಸಂಸದರನ್ನು ಅಮಾನತು ಮಾಡಿದ್ದಕ್ಕಿಂತ ಇದಕ್ಕೆ ಬೇರೆ ಸಾಕ್ಷಿ ಬೇಕಾ? ಎಂದು ಪ್ರಶ್ನಿಸಿದರು. https://ainlivenews.com/do-you-know-the-benefits-of-coconut-oil-massage-in-winter/ ನೂರಾರು ಜನ ಸಂಸದರನ್ನು ಹೊರಗಡೆ ಇಟ್ಟು ಪ್ರಮುಖವಾದ ಮಸೂದೆಗಳನ್ನು ಪಾಸ್ ಮಾಡಿದ್ದಾರೆ. ಇದಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ಎಂದು ಹೇಳಲು ಆಗುತ್ತದಾ? ಎಂದ ಅವರು, “ಯಾವ ಉದ್ದೇಶಕ್ಕಾಗಿ ನಾವು ಪ್ರಜಾಪ್ರಭುತ್ವ ವ್ಯವಸ್ಥೆ ಮಾಡಿಕೊಂಡಿದ್ದು? ಪ್ರಜಾಪ್ರಭುತ್ವ ಎಂದರೆ ಪ್ರತಿಯೊಬ್ಬರು ನ್ಯಾಯ ಸಿಗಬೇಕು, ಸಮಾನತೆ ಸಿಗಬೇಕು. ಈ ದೇಶದಲ್ಲಿ ನಾನು ಒಬ್ಬ ಭಾರತೀಯ ಎಂದು ಬದುಕಬೇಕು ಎಂಬುದೇ ಪ್ರಜಾಪ್ರಭುತ್ವದ ಆಶಯ.‌ ಇದಕ್ಕೆ ವಿರುದ್ಧವಾಗಿ ಬಿಜೆಪಿ ನಡೆದುಕೊಳ್ಳುತ್ತಿದೆ,” ಎಂದು ವಾಗ್ದಾಳಿ ನಡೆಸಿದರು.

Read More

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಡಿಸೆಂಬರ್ 2023 ರ ಇಸ್ರೋ ಅಧಿಕೃತ ಅಧಿಸೂಚನೆಯ ಮೂಲಕ ಅಕೌಂಟ್ಸ್ ಆಫೀಸರ್ (ಹಣಕಾಸು) ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಬೆಂಗಳೂರು – ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 31-Dec-2023 ರಂದು ಅಥವಾ ಮೊದಲು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ. ISRO ಹುದ್ದೆಯ ಅಧಿಸೂಚನೆ ಸಂಸ್ಥೆಯ ಹೆಸರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಹುದ್ದೆಗಳ ಸಂಖ್ಯೆ: 1 ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ ಹುದ್ದೆಯ ಹೆಸರು: ಅಕೌಂಟ್ಸ್ ಆಫೀಸರ್ (ಹಣಕಾಸು) ಸಂಬಳ: ISRO ನಿಯಮಗಳ ಪ್ರಕಾರ ISRO ನೇಮಕಾತಿ 2023 ಅರ್ಹತಾ ವಿವರಗಳು ಶೈಕ್ಷಣಿಕ ಅರ್ಹತೆ: ISRO ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಪೂರ್ಣಗೊಳಿಸಿರಬೇಕು. ವಯಸ್ಸಿನ ಮಿತಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ…

Read More

ಬೆಳ್ಳುಳ್ಳಿಯು  ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಹಲವಾರು ಗುಣಗಳನ್ನು ಹೊಂದಿದೆ. ಆದರೆ ಈ ಗುಣಗಳ ಗರಿಷ್ಠ ಪ್ರಯೋಜನವನ್ನು ಪಡೆಯಲು ಬೆಳ್ಳುಳ್ಳಿಯನ್ನು ಸರಿಯಾದ ರೀತಿಯಲ್ಲಿ ಮತ್ತು ಸರಿಯಾದ ಸಮಯದಲ್ಲಿ ತಿನ್ನಬೇಕು. ತಜ್ಞರ ಪ್ರಕಾರ, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನುವುದು ಹೆಚ್ಚು ಪ್ರಯೋಜನಕಾರಿಯಾಗಿದೆ. ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನುವುದರಿಂದ ಅದರ ಅಂಶಗಳು ದೇಹದಲ್ಲಿ ಸುಲಭವಾಗಿ ಹೀರಲ್ಪಡುತ್ತವೆ. ಮತ್ತು ಗರಿಷ್ಠ ಪ್ರಯೋಜನವನ್ನು ನೀಡುತ್ತವೆ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದಲ್ಲದೆ, ಹಲವಾರು ಹೊಟ್ಟೆ ಸಂಬಂಧಿ ಸಮಸ್ಯೆಗಳನ್ನು ನಿವಾರಿಸುತ್ತದೆ ಮತ್ತು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಆದ್ದರಿಂದ ನೀವು ನಿಮ್ಮ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಲು ಬಯಸಿದರೆ, ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದರಿಂದ ಎರಡು ಎಸಳು ಬೆಳ್ಳುಳ್ಳಿಯನ್ನು ತಿನ್ನಿರಿ. ತೂಕ ನಿಯಂತ್ರಿಸಲು ಸಹಕಾರಿ: ಬದಲಾಗುತ್ತಿರುವ ಜೀವನಶೈಲಿಯ ಕಾರಣ ಅನೇಕ ಜನರು ಸ್ಥೂಲಕಾಯತೆ ಅಥವಾ ದೇಹ ತೂಕ ಹೆಚ್ಚಾಗುವಂತಹ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೆಚ್ಚುತ್ತಿರುವ ದೇಹ ತೂಕದಿಂದ ನೀವು ಸಹ ತೊಂದರೆಗೊಳಗಾಗಿದ್ದರೆ, ಬೆಳಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ಹಸಿ ಬೆಳ್ಳುಳ್ಳಿಯನ್ನು ಸೇವಿಸಿ.…

Read More

ಅನಂತರದ ಮೋಕ್ಷದ ಏಕಾದಶಿ ಸೂರ್ಯೋದಯ: 06.38 AM, ಸೂರ್ಯಾಸ್ತ : 06.00 PM ಮಾರ್ಗಶಿರ ಮಾಸ, ಶುಕ್ಲ ಪಕ್ಷ, ದಕ್ಷಿಣಾಯಣ, ಶರತ್ ಋತು, ತಿಥಿ: ಇವತ್ತು ಏಕಾದಶಿ 07:11 AM ತನಕ ನಂತರ ದ್ವಾದಶಿ ನಕ್ಷತ್ರ: ಇವತ್ತು ಭರಣಿ 09:19 PM ತನಕ ನಂತರ ಕೃತ್ತಿಕ ಯೋಗ: ಇವತ್ತು ಶಿವ 09:08 AM ತನಕ ನಂತರ ಸಿದ್ದಿ ಕರಣ: ಇವತ್ತು ವಿಷ್ಟಿ 07:11 AM ತನಕ ನಂತರ ಬವ 06:45 PM ತನಕ ನಂತರ ಬಾಲವ ರಾಹು ಕಾಲ: 09:00 ನಿಂದ10:30 ವರೆಗೂ ಯಮಗಂಡ: 01:30 ನಿಂದ 03:00 ವರೆಗೂ ಗುಳಿಕ ಕಾಲ: 06:00 ನಿಂದ 07:30 ವರೆಗೂ ಅಮೃತಕಾಲ: 04.34 PM to 06.09 PM ಅಭಿಜಿತ್ ಮುಹುರ್ತ: ಬೆಳಗ್ಗೆ.11:53 ನಿಂದ ಮ.12:36 ವರೆಗೂ ಮೇಷ: ಬಹುದಿನದಿಂದ ಪ್ರಯತ್ನಿಸಿದ ವರ್ಗಾವಣೆ ಮತ್ತು ಪ್ರಮೋಷನ್‌ಕ್ಕಾಗಿ ಇಂದು ಸಫಲತೆ ಕಾಣಲಿದೆ, ಮೇಲಾಧಿಕಾರಿಗಳು ನಿಮಗೆ ಹೆಚ್ಚಿನ ಒತ್ತಡ ಹಾಕಲಿದ್ದಾರೆ, ಒತ್ತಡದ ಕೆಲಸದಿಂದ ನಿಮ್ಮ ಹೃದಯಕ್ಕೆ…

Read More

ಬೆಂಗಳೂರು:- B.Ed ವ್ಯಾಸಂಗಕ್ಕಾಗಿ ಅರ್ಜಿ ಸಲ್ಲಿಸಿದ್ದವರಿಗೆ ಮಹತ್ವದ ಮಾಹಿತಿ ಹೊರ ಬಿದ್ದಿದೆ. 2023-24ನೇ ಸಾಲಿನ ಬಿ.ಇಡಿ ಕೋರ್ಸಿಗೆ ದಾಖಲಾತಿಗಾಗಿ ಕಾಲೇಜುಗಳ Option Entry ಬದಲಾವಣೆಗೆ ಅವಕಾಶ ನೀಡಲಾಗಿದೆ. ಅಭ್ಯರ್ಥಿಗಳು ಆನ್‌ಲೈನ್ ಅರ್ಜಿಯಲ್ಲಿ ಆಯ್ಕೆ ಮಾಡಿಕೊಂಡಿರುವ ಕಾಲೇಜುಗಳ ಆಧ್ಯತೆಯ ಬದಲಾವಣೆಗೆ ದಿನಾಂಕ:22/12/2023 ರಿಂದ 24/12/2023ರ ಸಂಜೆ 6.00 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿಗಳು ತಮ್ಮ ಆನ್‌ಲೈನ್ ಅರ್ಜಿಯಲ್ಲಿ ಲಾಗಿನ್ ಆಗುವುದರ ಮೂಲಕ ಕಾಲೇಜುಗಳ ಆದ್ಯತೆಯನ್ನು ಬದಲಾಯಿಸಿಕೊಳ್ಳಬಹುದಾಗಿದೆ

Read More