ಕೊಪ್ಪಳ: ದೆಹಲಿಯ ಪಾರ್ಲಿಮೆಂಟ್ ಒಳಗೆ ನುಗ್ಗಿ ಅಧಿವೇಶನದ ವೇಳೆ ನಡೆದ ಸ್ಮೋಕ್ ಬಾಂಬ್ ದಾಳಿಯ ಹಿಂದೆ ಬಿಜೆಪಿ ನಾಯಕರ ಕೈವಾಡ ಇದೆ ಎಂದು ಸಚಿವ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ (Shivaraj Tangadagi) ಆರೋಪಿಸಿದರು. ಕೊಪ್ಪಳ ನಗರದ ಅಶೋಕ ವೃತ್ತದಲ್ಲಿ, ಅಧಿವೇಶನದಿಂದ ಸಂಸದರನ್ನು ಅಮಾನತು ಮಾಡಿದ ನಡೆ ಖಂಡಿಸಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರದ ಭದ್ರತೆ ವೈಫಲ್ಯದಿಂದಲೇ ಸ್ಮೋಕ್ ಬಾಂಬ್ ದಾಳಿ ನಡೆದಿದೆ. ಘಟನೆ ಕುರಿತು ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿ, ಉತ್ತರಿಸುವಂತೆ ಪಟ್ಟು ಹಿಡಿದ ಒಟ್ಟು 145 ಸಂಸದರನ್ನು ಅಮಾನತು ಮಾಡಿ, ಹೊರಗೆ ಹಾಕಲಾಗಿದೆ. ಬಿಜೆಪಿಗರು ತಮ್ಮ ಲೋಪ ಮುಚ್ಚಿ ಹಾಕಲು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ಕಗ್ಗೊಲೆ, ಸರ್ವಾಧಿಕಾರಿ ಧೋರಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು. https://ainlivenews.com/is-eating-garlic-on-an-empty-stomach-good-for-health-here-is-the-answer/ ದಾಳಿ ಮಾಡಿದವರಿಗೆ ನಮ್ಮ ರಾಜ್ಯದ ಸಂಸದ ಪ್ರತಾಪ್ ಸಿಂಹ ಪಾಸ್ ನೀಡಿದ್ದಾರೆ. ಆದರೆ ಪೊಲೀಸರು ಪ್ರತಾಪ್ ಸಿಂಹ ಅವರ ವಿಚಾರಣೆ ನಡೆಸಿಲ್ಲ. ಅವರ ಮೇಲೆ ಕ್ರಮ…
Author: AIN Author
ಚಳಿಗಾಲದಲ್ಲಿ ಸಂಧಿವಾತ ಮತ್ತು ಚರ್ಮದ ಕಾಯಿಲೆಗಳಾದ ಶುಷ್ಕತೆ, ಸೋರಿಯಾಸಿಸ್ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ, ದೇಹದ ಆರೈಕೆಗೆ ಆದ್ಯತೆ ನೀಡುವುದು ಅವಶ್ಯವಾಗಿದೆ. ಚಳಿಗಾಲದಲ್ಲಿ ಬೆಟ್ಟದ ನೆಲ್ಲಿಕಾಯಿ, ತುಪ್ಪ, ಖರ್ಜೂರ, ರಾಗಿ, ಬಾದಾಮಿ, ಸಾಸಿವೆ, ಸೇಬು ಸೇರಿದಂತೆ ವಿವಿಧ ತರಕಾರಿಗಳಂತಹ ಆಹಾರ ಪದಾರ್ಥಗಳು ಆರೋಗ್ಯ ಸಮಸ್ಯೆಗಳನ್ನು ತಡೆಯುತ್ತದೆ. ಚಳಿಗಾಲದಲ್ಲಿ ಆರೋಗ್ಯ ದೃಷ್ಟಿಯಿಂದ ಸೇವನೆ ಮಾಡಬೇಕಾದ ಹತ್ತು ಪ್ರಮುಖ ಆಹಾರ ಪದಾರ್ಥಗಳ ವಿವರ ಇಲ್ಲಿದೆ. ದೇಹವನ್ನು ಬೆಚ್ಚಗಿಡಲು ಮತ್ತು ಶಕ್ತಿ ಹೆಚ್ಚಿಸಿಕೊಳ್ಳಲು ಸಹಕಾರಿ ಆಗಿದೆ. ಜೀರ್ಣವಾಗುವ ಕೊಬ್ಬಿನ ಅಂಶಗಳು ಇರುವುದರಲ್ಲಿ ದೇಸಿ ತುಪ್ಪವೂ ಒಂದಾಗಿದೆ. ತುಪ್ಪವನ್ನು ಮಿತವಾಗಿ ತಿನ್ನುವುದರಿಂದ ಚರ್ಮದ ಶುಷ್ಕತೆ ಮತ್ತು ಸುಕ್ಕುಗಟ್ಟುವಿಕೆಯನ್ನು ತಡೆಯಬಹುದು. ಚಳಿಗಾಲದಲ್ಲಿ, ಅಡುಗೆಗಾಗಿ ತುಪ್ಪವನ್ನು ಬಳಸಬಹುದು. ಬೆಲ್ಲ ಚಳಿಗಾಲದಲ್ಲಿ ಗುರ್ (ಬೆಲ್ಲ) ರೋಗನಿರೋಧಕ ಶಕ್ತಿ ಹೆಚ್ಚಿಸುವ ಸತು ಮತ್ತು ಸೆಲೆನಿಯಂನಂತಹ ಅಂಶಗಳು ಬೆಲ್ಲದಲ್ಲಿ ಹೇರಳವಾಗಿವೆ. ಇದನ್ನೂ ಸಹ ನಿಯಮಿತವಾಗಿ ಸೇವಿಸಬಹುದಾಗಿದೆ. ಖರ್ಜೂರ ಸಿಹಿ ತಿನಿಸುಗಳಲ್ಲಿ ಖರ್ಜೂರ ನೈಸರ್ಗಿಕ ಸಿಹಿಕಾರಕವಾದ ಅಂಶವನ್ನು ಹೊಂದಿದೆ. ಅಲ್ಲದೇ…
ಗದಗ: ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಪ್ರಧಾನಿ ಅಭ್ಯರ್ಥಿ ಅಂತ ಬಿಂಬಿಸುವ ಮೂಲಕ ದಲಿತರಿಗೆ ದ್ರೋಹ, ಮೋಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ (KS Eshwarappa) ಹೇಳಿದರು. ನಗರದ ಖಾಸಗಿ ಹೋಟೆಲ್‍ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಗೌರವ ಇದೆ. ಹಿರಿಯ ರಾಜಕಾರಣಿ ಅವರ ಬಗ್ಗೆ ಟೀಕೆ ಮಾಡಲ್ಲ. ಆದರೆ ಸೋಲಿಸಲು ಯಾಕೆ ನಿಲ್ಲಿಸ್ತಾರೆ. ದೇಶದಲ್ಲಿ ದಲಿತರಿಗೆ, ಹಿಂದುಳಿದವರಿಗೆ ಕಾಂಗ್ರೆಸ್ ನಿರಂತರವಾಗಿ ದುರುಪಯೋಗ ಮಾಡ್ತಾನೇ ಬಂದಿದ್ದಾರೆ. ದಲಿತರನ್ನು ನಂಬಿಸಿ ಮೋಸ ಮಾಡಿ ಕಾಂಗ್ರೆಸ್ (Congress) ಇಷ್ಟು ವರ್ಷ ಈ ದೇಶದಲ್ಲಿ ಆಡಳಿತ ನಡೆಸಿತು. ಈಗ ಮತ್ತೊಬ್ಬ ದಲಿತರಿಗೆ ಮೊಸ ಮಾಡ್ತಿದ್ದಾರೆ ಎಂದರು. https://ainlivenews.com/apple-watch-series-9-watch-ultra-2-sales-halt-in-us-why/ ಪ್ರಿಯಾಂಕಾ ಖರ್ಗೆ (Priyank Kharge) ಧರ್ಮ ದ್ರೋಹಿ, ಅವನ ಮಾತಿನ ಬಗ್ಗೆ ಬಹಳ ಬೇಸರ ಬರುತ್ತೆ. ಆದರೆ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಗೌರವ ಇದೆ. ಇನ್ನು ಮುಂದೆ ದಲಿತ ಅಸ್ತ್ರ ತೋರಿಸಿ, ದಲಿತ ಪ್ರಧಾನಿ ಮಾಡ್ತೀವಿ ಅಂತ ದಲಿತರಿಗೆ ಮೋಸ ಮಾಡಲು…
ನಟಿ ಸಾಯಿ ಪಲ್ಲವಿ ಉಡುಪಿ (Udupi) ಶ್ರೀ ಕೃಷ್ಣ ಮಠಕ್ಕೆ (Shrikrishna Math) ಭೇಟಿ ನೀಡಿದ್ದಾರೆ. ಖಾಸಗಿ ಕಾರ್ಯದ ನಿಮಿತ್ತ ಉಡುಪಿಗೆ ಬಂದಿರುವ ಅವರು, ಕನಕ ನವಗ್ರಹ ಕಿಂಡಿಯ ಮೂಲಕ ಕೃಷ್ಣ ದೇವರ ದರ್ಶನ ಕೈಗೊಂಡಿದ್ದಾರೆ. ರಥಬೀದಿಯಲ್ಲಿರುವ ಕಾಣಿಯೂರು ಮಠಕ್ಕೆ ತೆರಳಿ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದಿದ್ದಾರೆ. ಮಠಕ್ಕೆ ಭೇಟಿ ನೀಡಿದ ಸಾಯಿ ಪಲ್ಲವಿ ಅವರನ್ನು ಶ್ರೀ ಕೃಷ್ಣ ಮಠದ ವತಿಯಿಂದ ಗೌರವಿಸಲಾಯಿತು.
96ನೇ ಆಸ್ಕರ್ ಪ್ರಶಸ್ತಿಗಾಗಿ ಭಾರತದಿಂದ ಅಧಿಕೃತವಾಗಿ ಆಯ್ಕೆಯಾಗಿದ್ದ, ಮಲಯಾಳಂನ 2018ನೇ ಹೆಸರಿನ ಸಿನಿಮಾ ಅಂತಿಮ ಸುತ್ತಿನ ಸ್ಪರ್ಧೆಗೆ ಎಂಟ್ರಿ ಪಡೆಯುವಲ್ಲಿ ವಿಫಲವಾಗಿದೆ. ಇದರಿಂದಾಗಿ ಸಹಜವಾಗಿಯೇ ಭಾರತೀಯ ಸಿನಿಮಾ ಪ್ರೇಕ್ಷಕರಿಗೆ ನಿರಾಸೆಯಾಗಿದೆ. ಅಂತಾರಾಷ್ಟ್ರೀಯ ಫೀಚರ್ ಫಿಲ್ಮ್ ವಿಭಾಗಕ್ಕೆ ಈ ಸಿನಿಮಾವನ್ನು ಭಾರತದಿಂದ ಆಯ್ಕೆ ಮಾಡಿ ಕಳುಹಿಸಲಾಗಿತ್ತು. ಆದರೆ, ಮುಂದಿನ ಸುತ್ತಿಗೆ ಹೋಗುವಲ್ಲಿ ಅದು ವಿಫಲವಾಗಿದೆ. ಕಳೆದ ಸಲ ರಾಜಮೌಳಿ ನಿರ್ದೇಶನದ ‘ಆರ್.ಆರ್.ಆರ್’ ಸಿನಿಮಾದ ‘ನಾಟು ನಾಟು’ ಹಾಡಿಗಾಗಿ ಆಸ್ಕರ್ (Oscar) ಪ್ರಶಸ್ತಿ ಬಂದಿತ್ತು. ಈ ಬಾರಿ ದಕ್ಷಿಣದ ಮತ್ತೊಂದು ಸಿನಿಮಾ ಈ ವರ್ಷದ ಆಸ್ಕರ್ ಪ್ರಶಸ್ತಿಗಾಗಿ ನಾಮಿನೇಟ್ (Nomination) ಆಗಿ ಸಂಭ್ರಮಕ್ಕೆ ಕಾರಣವಾಗಿತ್ತು. ಈ ವಿಷಯವನ್ನು ಈ ಹಿಂದೆ ಆಸ್ಕರ್ ಆಯ್ಕೆ ಸಮಿತಿ ಅಧ್ಯಕ್ಷ, ಕನ್ನಡದವರೇ ಆಗಿರುವ ಗಿರೀಶ್ ಕಾಸರವಳ್ಳಿ ತಿಳಿಸಿದ್ದರು ಟೊವಿನೋ ಥಾಮಸ್ ನಟನೆಯ 2018 ಹೆಸರಿನ ಮಲಯಾಳಂ (Malayalam) ಸಿನಿಮಾ ವಿಶೇಷ ಕಥಾವಸ್ತುವನ್ನು ಹೊಂದಿದೆ. ಕೇರಳದಲ್ಲಿ ನಾಲ್ಕು ವರ್ಷಗಳ ಹಿಂದೆ ನಡೆದ ಅತಿವೃಷ್ಠಿ ಸೃಷ್ಟಿಸಿದ ಆವಾಂತರವನ್ನು ಆಧರಿಸಿದ ಚಿತ್ರಿಸಲಾಗಿದೆ. ಈ…
ಕಿಯಾ ಸೋನೆಟ್ ಫೇಸ್‌ಲಿಫ್ಟ್ ಅನ್ನು ಪ್ರಾರಂಭಿಸಲಾಗಿದೆ: ವಿನ್ಯಾಸ, ವೈಶಿಷ್ಟ್ಯಗಳು, ಬುಕಿಂಗ್ ವಿವರಗಳು ಮತ್ತು ನೀವು ತಿಳಿದುಕೊಳ್ಳಬೇಕಾದ ಎಲ್ಲವೂ ಇಲ್ಲಿದೆ ನೋಡಿ! ಈ ಎಸ್‌ಯುವಿಗಾಗಿ ಪ್ರೀ ಬುಕ್ಕಿಂಗ್ ಇಂದಿನಿಂದ ಅಂದರೆ ಡಿಸೆಂಬರ್ 20ರಿಂದ ಶುರುವಾಗಿದೆ. ಹೊಸ ಸೊನೆಟ್ ಫೇಸ್‌ಲಿಫ್ಟ್ ಸಣ್ಣ ಕಾಸ್ಮೆಟಿಕ್ ಬದಲಾವಣೆಗಳು, ಸುಧಾರಿತ ಡೈನಾಮಿಕ್ಸ್, ಹೆಚ್ಚುವರಿ ವೈಶಿಷ್ಟ್ಯಗಳು, ಹೆಚ್ಚುವರಿ ಸುರಕ್ಷತೆ, ಹೊಸ ಗೇರ್‌ಬಾಕ್ಸ್ ಸೇರಿ ಸಾಕಷ್ಟು ವೈಶಿಷ್ಟ್ಯಗಳೊಂದಿಗೆ ಬಂದಿದೆ. ಹೊಸ ಕಿಯಾ ಸೊನೆಟ್ ಹ್ಯುಂಡೈ ವೆನ್ಯೂ, ಮಾರುತಿ ಸುಜುಕಿ ಬ್ರೆಝಾ, ರೆನಾಲ್ಟ್ ಕಿಗರ್, ನಿಸ್ಸಾನ್ ಮ್ಯಾಗ್ನೈಟ್, ಮಾರುತಿ ಸುಜುಕಿ ಫ್ರಾಂಕ್ಸ್, ಮಹೀಂದ್ರಾ ಎಕ್ಸ್‌ಯುವಿ 300 ಮತ್ತು ಟಾಟಾ ನೆಕ್ಸಾನ್‌ಗಳೊಂದಿಗೆ ಸ್ಪರ್ಧಿಸುತ್ತಿದೆ. ಅಂತೆಯೆ ಈ ಲೇಖನದಲ್ಲಿ ನಾವು ಹೊಸ ಕಿಯಾ ಸೊನೆಟ್ ಫೇಸ್‌ಲಿಫ್ಟ್ ಹಾಗೂ ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ನಡುವಣ ಹೋಲಿಕೆಯನ್ನು ನೋಡೋಣ ಕಿಯಾ ಸೊನೆಟ್ ಫೇಸ್‌ಲಿಫ್ಟ್ ಹಾಗೂ ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ಒಂದೇ ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಬರುತ್ತದೆ. ಹೊಸ ಸೊನೆಟ್ ಫೇಸ್‌ಲಿಫ್ಟ್ ಎಸ್‌ಯುವಿಯನ್ನು HTE, HTK, HTK+, HTX,…
ಹಾವೇರಿ: ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು ಸಶಸ್ತ್ರ ಪೊಲೀಸ್ ಪೇದೆ (Police) ಹುದ್ದೆಗೆ ಆಯ್ಕೆಯಾಗಿದ್ದ ವ್ಯಕ್ತಿಯೊಬ್ಬನಿಗೆ ಇಲ್ಲಿನ (Haveri) ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (Court) 7 ವರ್ಷ ಜೈಲು ಹಾಗೂ 30 ಸಾವಿರ ರೂ. ದಂಡ ವಿಧಿಸಿದೆ. ಸೋಮಶೇಖರ್ ಭೀಮಪ್ಪ ಕುಂಕುಮಗಾರ ಎಂಬಾತ ಶಿಕ್ಷೆಗೆ ಗುರಿಯಾದ ಅಪರಾಧಿಯಾಗಿದ್ದಾನೆ. ಹಿರೇಕೆರೂರು ತಾಲೂಕಿನ ಭೋಗಾವಿ ಗ್ರಾಮದ ಈತ ಮೂಲತಃ ಕುಂಕುಮಗಾರ (ಬಲಿಜ ಜನಾಂಗ) ಜಾತಿಗೆ ಸೇರಿದ್ದರೂ ಸಹ, ಭೋಗಾವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸುತ್ತಿದ್ದ ಮೃತ ಹನುಮಂತಪ್ಪ ತಳವಾರನ ಸಹಕಾರ ಪಡೆದು ಚನ್ನದಾಸರ ಎಂದು ಜಾತಿ ಕಾಲಂನಲ್ಲಿ ನಮೂದಿಸಿದ್ದ. https://ainlivenews.com/apple-watch-series-9-watch-ultra-2-sales-halt-in-us-why/ ಬಳಿಕ ಸುಳ್ಳು ವ್ಯಾಸಂಗ ಪ್ರಮಾಣಪತ್ರ ಹಾಗೂ ಇತರೆ ದಾಖಲಾತಿಗಳನ್ನು ಸೃಷ್ಟಿಸಿ, ಹಿರೇಕೆರೂರು ತಹಸೀಲ್ದಾರರಿಗೆ ಸಲ್ಲಿಸಿ, ಪರಿಶಿಷ್ಟ ಜಾತಿಯ ಪ್ರಮಾಣಪತ್ರ ಪಡೆದಿದ್ದ. ಈ ನಕಲಿ ದಾಖಲಾತಿಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಸಶಸ್ತ್ರ ಪೊಲೀಸ್ ಪೇದೆ ಹುದ್ದೆಗೆ ಆಯ್ಕೆಯಾಗಿದ್ದಾನೆಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಜಾತಿ…
ಪಾಟ್ನಾ: ಅರ್ಚಕರೊಬ್ಬರನ್ನು ಕಣ್ಣುಗಳನ್ನು ಕಿತ್ತು, ಜನನಾಂಗ ಕತ್ತರಿಸಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬಿಹಾರದ (Bihar) ಗೋಪಾಲ್‌ಗಂಜ್ ಜಿಲ್ಲೆಯಲ್ಲಿ ನಡೆದಿದೆ. ಪರಿಣಾಮವಾಗಿ ರಾಜ್ಯದಲ್ಲಿ ಉದ್ವಿಗ್ನತೆ ಭುಗಿಲೆದ್ದಿದೆ. 32 ವಯಸ್ಸಿನ ಮನೋಜ್ ಕುಮಾರ್ ಸೋಮವಾರ ರಾತ್ರಿಯಿಂದ ನಾಪತ್ತೆಯಾಗಿದ್ದರು. ಕಳೆದ ಬಾರಿ ಮಧ್ಯರಾತ್ರಿ ದಾನಾಪುರ ಗ್ರಾಮದ ಶಿವನ ದೇವಸ್ಥಾನದಿಂದ ಹೊರಟಿದ್ದರು. ಶನಿವಾರ ಸಂಜೆ ಅರ್ಚಕರ ಮೃತದೇಹವನ್ನು ಪೊದೆಗಳಿಂದ ಹೊರತೆಗೆಯಲಾಯಿತು. ಅವರ ಖಾಸಗಿ ಭಾಗಗಳಲ್ಲಿ ಗಾಯಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮನೋಜ್ ಕುಮಾರ್ ಸಹೋದರ ಅಶೋಕ್ ಬಿಜೆಪಿ ಮಾಜಿ ಕಾರ್ಯಕರ್ತ. ಆತನ ಶವ ಪತ್ತೆಯಾದ ಕೂಡಲೇ ಗ್ರಾಮದಲ್ಲಿ ಘರ್ಷಣೆ ನಡೆದಿದ್ದು, ಪೊಲೀಸರ ನಿರ್ಲಕ್ಷ್ಯ ಎಂದು ಸ್ಥಳೀಯರು ಆರೋಪಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಪೊಲೀಸ್ ವಾಹನಕ್ಕೂ ಬೆಂಕಿ ಹಚ್ಚಲಾಗಿದೆ. https://ainlivenews.com/apple-watch-series-9-watch-ultra-2-sales-halt-in-us-why/ ಮನೋಜ್ ಕುಮಾರ್ ಅವರ ಕುಟುಂಬ ಮಂಗಳವಾರ ನಾಪತ್ತೆ ದೂರು ನೀಡಿದ್ದು, ಪೊಲೀಸರು ಅವರ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದರು. ಗೋಪಾಲಗಂಜ್…
ನಟಿ ತ್ರಿಷಾಗೆ ಅವಹೇಳನಕಾರಿ ಮಾತುಗಳನ್ನು ಆಡಿದ್ದಲ್ಲದೇ, ತಿಶ್ರಾ ವಿರುದ್ಧವೇ ಮಾನನಷ್ಟ ಮೊಕದ್ದಮೆ ಹೂಡಿದ್ದ ನಟ ಮನ್ಸೂರ್ ಅಲಿಖಾನ್ (Mansoor Alikhan) ಗೆ ಮದ್ರಾಸ್ ಹೈಕೋರ್ಟ್ (Madras High Court) ಒಂದು ಲಕ್ಷ ರೂಪಾಯಿ ದಂಡವಿಧಿಸಿದೆ. ಜೊತೆಗೆ ತ್ರಿಶಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಅನುಮತಿಯನ್ನೂ ನಿರಾಕರಿಸಿದೆ. ಈ ಹಿಂದೆ ತ್ರಿಷಾಗೆ ಅವಹೇಳನಕಾರಿ ಮಾತುಗಳನ್ನು ಆಡಿದ್ದ ಮನ್ಸೂರ್ ಅಲಿ ಖಾನ್ ಮೇಲೆ ಲೈಂಗಿಕ ಕಿರುಕುಳ ದೂರು ದಾಖಲಾಗಿತ್ತು. ಚೆನ್ನೈನ ಥೌಸಂಡ್ ಲೈಟ್ಸ್ ಆಲ್ ವುಮೆನ್ ಪೊಲೀಸ್ ಠಾಣೆಗೆ ಬಂದು ಹಾಜರಾಗುವಂತೆ ನಟನಿಗೆ ನೋಟಿಸ್ ನೀಡಲಾಗಿತ್ತು. ಅನಾರೋಗ್ಯದ ನೆಪವೊಡ್ಡಿ ಬರಲು ಆಗುವುದಿಲ್ಲ ಎಂದು ಮನ್ಸೂರ್ ಅಲಿ ಖಾನ್ ಹೇಳಿದ್ದ. ಜೊತೆಗೆ ಜಾಮೀನು ಅರ್ಜಿಯನ್ನೂ (Court) ಸಲ್ಲಿಸಿದ್ದ. ಆದರೆ, ಡಿಢೀರ್ ಅಂತ ಮನಸ್ಸು ಬದಲಾಯಿಸಿ ಪೊಲೀಸ್ ಠಾಣೆಗೆ ಹಾಜರಾಗಿದ್ದ. https://ainlivenews.com/is-eating-garlic-on-an-empty-stomach-good-for-health-here-is-the-answer/ ತ್ತ ಜಾಮೀನು ಅರ್ಜಿಯಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ನಿರೀಕ್ಷೆ ಜಾಮೀನು (Bail) ಸ್ವೀಕೃತವಾಗಿರಲಿಲ್ಲ. ಹಾಗಾಗಿ ನ್ಯಾಯಾಧೀಶರು ಛೀಮಾರಿ ಹಾಕಿದ್ದರು. ನ್ಯಾಯಾಲಯದ ಸಮಯ ವ್ಯರ್ಥ…
ಬೆಂಗಳೂರು: ಬಿಬಿಎಂಪಿ ಶಾಲೆಗಳು ಇನ್ಮುಂದೆ ಶಿಕ್ಷಣ ಇಲಾಖೆ ಅಧೀನಕ್ಕೆ ನೀಡಲು ಬಿಬಿಎಂಪಿ ನಿರ್ಧಾರ ಮಾಡಿದೆ. ಶುಕ್ರವಾರ ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಿಬಿಎಂಪಿ ಶಾಲೆಗಳನ್ನ ಶಿಕ್ಷಣ ಇಲಾಖೆಗೆ ನೀಡುವ ನಿರ್ಧಾರ ಮಾಡಲಾಯ್ತು. https://ainlivenews.com/is-eating-garlic-on-an-empty-stomach-good-for-health-here-is-the-answer/ ಸಭೆ ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಬಿಬಿಎಂಪಿ (BBMP) ಶಾಲೆಗಳನ್ನು ಇನ್ಮುಂದೆ ಶಿಕ್ಷಣ ಇಲಾಖೆ ಸುಪರ್ದಿಗೆ ನೀಡಲು ತೀರ್ಮಾನಿಸಲಾಗಿದೆ. ಪ್ರತಿ ವರ್ಷ ಫಲಿತಾಂಶದಲ್ಲಿ ಬಿಬಿಎಂಪಿ ಶಾಲೆಗಳಲ್ಲಿ ಕುಸಿತ ಕಂಡಿರುವುದನ್ನು ನಾವು ಗಮನಿಸಿದ್ದೇವೆ. ಇದಕ್ಕೆ ಅವಕಾಶ ನೀಡಬಾರದು. ಖಾಸಗಿ ಶಾಲೆಗಳಿಗೆ ಸರಿಸಮನಾಗಿ ಗುಣಮಟ್ಟದ ಶಿಕ್ಷಣ ನೀಡಲು ಈ ತೀರ್ಮಾನ ಮಾಡಲಾಗಿದೆ. ಶಾಲೆಗಳಲ್ಲಿ ಶಿಕ್ಷಣ ನೀಡುವಂತಹ ಜವಾಬ್ದಾರಿಯನ್ನು ಮಾತ್ರ ಶಿಕ್ಷಣ ಇಲಾಖೆಗೆ ನೀಡಲಾಗುತ್ತಿದ್ದು, ಈ ಶಾಲೆಗಳ ಮೂಲಸೌಕರ್ಯಗಳ ಉನ್ನತೀಕರಣ ಹಾಗೂ ನಿರ್ವಹಣೆಯನ್ನು ಬಿಬಿಎಂಪಿಯಿಂದಲೇ ಮಾಡಲಾಗುವುದು. ಶಾಲೆಯ ಜಾಗ, ಕಟ್ಟಡ ನಿರ್ವಹಣೆ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯವನ್ನು ಪಾಲಿಕೆಯಿಂದಲೇ ನಿರ್ವಹಿಸಲಾಗುವುದು. ಗುಣಮಟ್ಟದ ಶಿಕ್ಷಣ ನೀಡುವ ಜವಾಬ್ದಾರಿಯನ್ನು ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು…